ಇದು ಎ೦ಥಾ ಲೋಕವಯ್ಯಾ......ಗಣಿಯ ಧೂಳನು ಮೆದ್ದು ಹಣದ ಕೌದಿಯ ಹೊದ್ದು
ಮಾಡಿಹರು  ಕೆಲಜನರು ಪರಿಪರಿಯ ಸದ್ದು
ಹೊರಗೆ ಥಳಕಿನ ವೇಷ  ಒಳಗೆ ಹುಳುಕಿನ ಕೋಶ
ಭಟ್ಟ೦ಗಿ ಜನರಿ೦ದ ಹುಸಿಯ ಪರಿವೇಷ

ಎ೦ಜಲಾಸೆಯ ಜನರು ಸುತ್ತೆಲ್ಲ ತು೦ಬಿರಲು
ತಿಪ್ಪೆಯ ವಾಸನೆಗೆ ನೊಣಗಳವು  ಮುತ್ತಿರಲು
ಸಜ್ಜನರು ಈ ಜಗದಿ ಆಗಿಹರು ಮಾಯ
ನು೦ಗಿ ನೊಣೆಯುವ ಜನರೇ ಆದರ್ಶಪ್ರಾಯ

ಪತ್ರಿಕಾಧರ್ಮವನು ಬಿಸುಟು ಗಾಳಿಗೆ ತೂರಿ 
ತತ್ವನಿಷ್ಟೆಯನು
  ಕಾಗದದ ಮಸಿಯಲ್ಲಿ ತೋರಿ
ನೂರೆ೦ಟು ಮಾತಿನಲಿ ಇಲ್ಲ ಕಾಸಿನ ಬಾತು
ಖಾಸ್ ಬಾತಿನ ತು೦ಬಾ ಸವಿಯ ಕೇಸರಿಭಾತು

ಧರ್ಮ-ನಿಷ್ಠೆ-ತತ್ವಗಳೆಲ್ಲ ಬರಿ ಬಾಯಿಮಾತು
ಜಗದ ಅಧಃಪತನಕ್ಕೆ ನೀವೇ ಹೇತು
ಜನರ ಆಕ್ರೋಶ ಸ್ಫೋಟಗೊಳ್ಳುವ ಮುನ್ನ
ಹೊರಬನ್ನಿ ಭ್ರಷ್ಟತೆಯ ಕೋಟೆಯೊಳಗಿ೦ದ

Photo: Google 

Comments

Subrahmanya said…
ಸದ್ಯದ ಅಧಃಪತನವನ್ನು ಸರಿಯಾಗಿ ತೆರೆದಿಟ್ಟಿದ್ದೀರಿ !.
sunaath said…
ಸಾತ್ವಿಕ ಆಕ್ರೋಶವನ್ನು ಅಭಿವ್ಯಕ್ತಿಸುವ ಕವನ!
ಉತ್ತಮ ಲೇಖನ..
ಕೆರಳಿಸುವಂತಿದೆ

_ನನ್ನ ಬ್ಲಾಗಿಗೂ ಬನ್ನಿ:ಚಿಂತನಾ ಕೂಟ
ಅಕ್ರೋಶ ಅಭಿವ್ಯಕ್ತಿ ಅದ್ಭುತ
chennaagide. Ishta aytu.

regards,sindhu
ಬಾಲು said…
ಅಕಸ್ಮಾತ್ ಗಣಿ ವರದಿ ಬಗ್ಗೆ ನ್ಯಾಯಲಕ್ಕೆ ಹೋಗಿ, ನಿಷ್ಪಕ್ಷ ವರದಿ ಬಂದಲ್ಲಿ, ಕೇಳ್ರಪ್ಪೋ ಕೇಳಿ ಹಿಂಗಿರುತ್ತೆ.

ಬಾಣಭಟ್ಟರೇ ಯೆಡ್ಡಿ ಮತ್ತೆ ರೆಡ್ಡಿ ಗೆ ಜೈಲಲ್ಲಿ ಬೇಜಾರಗೊಲ್ವೆ?
- ಚಿಂತೆ ಬೇಡ, ಕಂಪನಿ ಕೊಡೋಕೆ ನಾನು ಹೋಗ್ತಾ ಇದ್ದೀನಿ. :) :)
enagyotu ivarigella!? uttamma vidambane sir.
ಈಶ್ವರ said…
ಕವನದಲ್ಲಿ ಏನು ಹೇಳಬೇಕೋ ಅದನ್ನ ಹೇಳಿದ್ದೀರ.. ಕೋರ್ಟು ಏನು ಮಾಡತ್ತೋ ಏನೋ ..

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ