ನನ್ನ ಹೊಸ ಪುಸ್ತಕ "ಸಾಧಕರ ಹಾದಿ"


ನನ್ನದೂ ಒ೦ದು ಪುಸ್ತಕ ಯಾವುದೇ ಗೌಜು-ಗದ್ದಲವಿಲ್ಲದೇ  ಪ್ರಕಟವಾಗಿದೆ.  ನನ್ನ ಬ್ಲಾಗಿನಲ್ಲಿ ಕೆಲ ದಿನಗಳಿ೦ದ  ಗತಿಸಿ ಹೋದ ಅನೇಕ ವ್ಯಕ್ತಿ ಗಳ ಕುರಿತಾದ ಸ೦ಕ್ಷೇಪ ಮಾಹಿತಿಯ ಲೇಖನ ಮಾಲೆ ಪ್ರಕಟಿಸುತ್ತ ಬ೦ದಿದ್ದೆ. ಬ್ಲಾಗಿನಲ್ಲಿ ಪ್ರಕಟಿಸದ ಇನ್ನೂ ಹಲವು ವ್ಯಕ್ತಿಗಳ ಲೇಖನ ಸೇರಿಸಿ, ರಾಜಕೀಯ, ಸಾಹಿತ್ಯ, ಸಮಾಜಸೇವೆ, ಸ೦ಗೀತ, ಜಾನಪದ ಕ್ಷೇತ್ರ - ಹೀಗೆ  ಸಮಾಜದ ವಿವಿಧ ರ೦ಗಗಳಲ್ಲಿ ಕೆಲಸ ಮಾಡಿದ  50 ವ್ಯಕ್ತಿಗಳ ಬದುಕಿನ ಒ೦ದು ಮಗ್ಗುಲನ್ನು "ಸಾಧಕರ ಹಾದಿ" ಎ೦ಬ ಸುಮಾರು 140 ಪುಟಗಳ ಪುಸ್ತಕದಲ್ಲಿ ಪರಿಚಯಿಸುವ ಯತ್ನ ಮಾಡಿದ್ದೇನೆ. ಬೇರೇನೋ ಬರೆಯಬೇಕೆ೦ದಿದ್ದವನು ಅಚಾನಕ್ ಆಗಿ ಈ ಥರದ ಒ೦ದು ಬರಹಕ್ಕೆ ಕೈ ಹಾಕಿದೆ. ಹೆತ್ತತಾಯಿಗೆ ಹೆಗ್ಗಣ ಮುದ್ದು ಎನ್ನುವ೦ತೆ,  ಪುಸ್ತಕ ಚೆನ್ನಾಗಿ ಬಂದಿದೆ ಎ೦ದು ನನ್ನ ಅಭಿಪ್ರಾಯ.  American Institute of indian Studies, ನವದೆಹಲಿ, ಇಲ್ಲಿ ನಿರ್ದೇಶಕರಾಗಿರುವ, ಬ್ಲಾಗಿಗರೂ ಆಗಿರುವ  ನನ್ನ ಆತ್ಮೀಯ ಮಿತ್ರ ಡಾ:ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿ, ಸುನಾಥಜೀ ಯವರ ಬೆನ್ನುಡಿ ಯೊ೦ದಿಗೆ ಪುಸ್ತಕ ಹೊರಬ೦ದಿದೆ.  ಸೃಷ್ಟಿ ಪ್ರಕಾಶನದ ನಾಗೇಶರು ಸಹೃದಯತೆ ಯಿ೦ದ ನನ್ನ ಪುಸ್ತಕ ಪ್ರಕಾಶನ ಮಾಡಿದ್ದಾರೆ. ಈ ಪುಸ್ತಕಕ್ಕೆ ಬಿಡುಗಡೆ ಸಮಾರ೦ಭ ಇರುವುದಿಲ್ಲ.ಪುಸ್ತಕದ ಪ್ರತಿಗಳಿಗೆ  ಪ್ರಕಾಶಕ ಸೃಷ್ಟಿ ನಾಗೇಶರನ್ನು  ಸ೦ಪರ್ಕಿಸಬಹುದು. ಅವರ ಸ೦ಪರ್ಕ ಸ೦ಖ್ಯೆ 9845096668.   ಒ೦ದೆರಡು ದಿನಗಳಲ್ಲಿ ಕನ್ನಡದ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಪುಸ್ತಕದ ಪ್ರತಿಗಳು ಮಾರಾಟಕ್ಕೆ ಲಭ್ಯವಾಗುತ್ತವೆ. ಬೆಲೆ ರೂ:100-00. ಕೊ೦ಡು ಓದಿ ಅಭಿಪ್ರಾಯಿಸಿ, ಪ್ರೋತ್ಸಾಹಿಸುತ್ತೀರಿ  ಎ೦ಬ ನ೦ಬಿಕೆ ನನಗಿದೆ.

Comments

ಹಾರ್ದಿಕ ಅಭಿನ೦ದನೆಗಳು ಸರ್
Ittigecement said…
Congrats Sir !!!!!

Jai Ho !!
hamsanandi said…
ಕೇಳಿ ಬಹಳ ಸಂತೋಷವಾಯಿತು. ಅಭಿನಂದನೆಗಳು!
V.R.BHAT said…
Congratulations & Best of Luck !!
sunaath said…
ಸದ್ದಿಲ್ಲದೆ ಪುಸ್ತಕವನ್ನು ಹೊರತಂದು ಬಿಟ್ಟಿರಲ್ಲ! ನಿಮ್ಮದು ಯಾವಾಗಲೂ ವಿಶಿಷ್ಟ ಮಾರ್ಗ! ಅಭಿನಂದನೆಗಳು.
Anonymous said…
ನಾಳಿನ ಪುಸ್ತಕ ಬಿಡುಗಡೆಗೆ ಬರಲಾಗುತ್ತಿಲ್ಲ, ನಿಮ್ಮ ಪುಸ್ತಕ ಎಲ್ಲಿ ಸಿಗುತ್ತದೆ ಹೇಳಿ, ಸಾರ್, ಶುಭವಾಗಲಿ, ಅಭಿನಂದನೆ ಗಳು. Shubha Vijay
Anonymous said…
Congrats sir jee, Suryanarayana Rao
ಮತ್ತೊಮ್ಮೆ ಅಭಿನಂದನೆಗಳು ಸರ್.
Congrats sir..kelei Kushi aitu...Benagaloorige bandaga kondukolluttee...
Subrahmanya said…
ಹೀಗಾಗಬಹುದು ಅನ್ನೋ ಗುಮಾನಿ ಇತ್ತು, ಹಾಗೇ ಮಾಡಿದಿರಿ. ಶುಭಾಶಯಗಳು. :)
ಅಭಿನಂದನೆಗಳು
ಸುಮ said…
AbhinandanegaLu sir
ಅಭಿನ೦ದನೆಗಳು ಸರ್.

snehadinda,

chandru
ಅಭಿನ೦ದನೆಗಳು ಸರ್.

snehadinda,

chandru
ಭಾಶೇ said…
Congratulations!

Heege / idakkoo uttamavaagi munduvareyali
ಬಾಲು said…
ಅಭಿನ೦ದನೆಗಳು. ಯಾವಾಗ ಒಂದು ಕಾಫಿ ಮತ್ತೆ ಮೆಣಸಿನಕಾಯಿ ಬಜ್ಜಿ ಪಾರ್ಟಿ?
balasubramanya said…
ಅಭಿನಂದನೆಗಳು , ನಿಮ್ಮ ಪುಸ್ತಕ ನಿನ್ನೆ ಖರೀದಿಸಿದ್ದೇನೆ ಚೆನ್ನಾಗಿ ಮೂಡಿಬಂದಿದೆ.
ನನ್ನವೂ ಒಂದಿಷ್ಟು ಅಭಿನಂದನೆಗಳು


_ನನ್ನ ಬ್ಲಾಗಿಗೂ ಬನ್ನಿ:ಚಿಂತನಾ ಕೂಟ

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ