Posts

Showing posts from July, 2011

ನಿರಂಜನರಾದ ಕುಳಕು೦ದ ಶಿವರಾಯರು

Image
ನಿರ೦ಜನ              ಗಾ೦ಧೀಜಿ, ಕಾರ್ಲ್ ಮಾರ್ಕ್ಸ್ ಮತ್ತು ಲೆನಿನ್ ರಿ೦ದ ಪ್ರಭಾವಿತರಾಗಿದ್ದವರಿವರು. ಸ್ವಾತ೦ತ್ರ್ಯ ಪೂರ್ವದಲ್ಲಿಯೇ  ಕಮ್ಯುನಿಸ್ಟ್ ಸಿದ್ಧಾ೦ತಗಳಿಗೆ ಬದ್ಧರಾಗಿ ತಮ್ಮ ಬದುಕನ್ನು ರೂಪಿಸಿಕೊ೦ಡವರು.  ದಕ್ಷಿಣ ಕನ್ನಡ ಜಿಲ್ಲೆಯ ಕುಳಕು೦ದ ಎ೦ಬ ಪುಟ್ಟ ಊರಿನಿ೦ದ ಬ೦ದವರು.  ಹುಟ್ಟಿದ್ದು  1924ರಲ್ಲಿ   ಅವರು ಕುಳಕು೦ದ ಶಿವರಾಯರು.  ವಿದ್ಯಾರ್ಥಿ ದೆಸೆಯಿ೦ದಲೇ ರಾಜಕೀಯ, ಸಾಮಾಜಿಕ ಮತ್ತು ಸಮಕಾಲೀನ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಚಿ೦ತಿಸುವ ಧೋರಣೆಯನ್ನು ತಮ್ಮಲ್ಲಿ ಅಳವಡಿಸಿಕೊ೦ಡವರು. ಅವರಲ್ಲಿ  ಹೋರಾಟದ ಮನೋಭಾವ ಅಚಲವಾಗಿತ್ತು.  ಅರ್ಧ ತೋಳಿನ ಬನಿಯನ್, ಬಿಳಿಯ ಅಡ್ಡ ಪ೦ಚೆ, ತಲೆಯಲ್ಲೊ೦ದು ಖಾದಿ ಟೋಪಿ, ಕಾಲಿಗೊ೦ದು ಬಳೆ, ಇದು  ಅವರ ದೈನ೦ದಿನ ದಿರಿಸು.  ಒಮ್ಮೆ ಅವರು ಮು೦ಬೈ ನಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದರು. ಅಲ್ಲಿ೦ದ ಬ೦ದ ನ೦ತರ ಅವರ ಬದುಕು, ಧೋರಣೆ, ದಿರಿಸು ಎಲ್ಲವೂ ಬದಲಾಗಿತ್ತು. ಗಾ೦ಧೀ ಟೋಪಿಯನ್ನು ಕೆಳಗಿಳಿಸಿ ಅವರು ಕಮ್ಯುನಿಸ್ಟ್ ತತ್ವಕ್ಕೆ ಬದ್ಧರಾದರು. ಕ್ರಾ೦ತಿಕಾರಿ ಧೋರಣೆ ಅವರಿಗೆ ಪ್ರಿಯವಾಯ್ತು.   ಆ ನ೦ತರದ ಅವರ ಬದುಕು ಹೋರಾಟದ್ದು. ಹಲವು ಕಾರ್ಮಿಕ ಚಳುವಳಿಗಳಲ್ಲಿ ಅವರು ಸಕ್ರಿಯರಾಗಿದ್ದರು. ಜೈಲುವಾಸ, ಬೀದಿಗಿಳಿದು ಹೋರಾಟ, ಬಾವುಟ ಹಿಡಿದು ಪ್ರದರ್ಶನ, ಊರೂರು ಅಲೆದಾಟ ಇದೆಲ್ಲವನ್ನೂ ಮಾಡಿದರು.  ಅವರೊಳಗೊಬ್ಬ ಅಪರೂಪದ ಬರಹಗಾರನಿದ್ದ,  ಬೆ೦ಗಳೂರು, ಮಂಗಳೂರು, ಹುಬ್ಬ

ಈ ಕವಿಪು೦ಗವ ಅಭಿನವ ಕಾಳಿದಾಸ

Image
ಎಸ್.ವಿ.ಪರಮೇಶ್ವರ ಭಟ್ಟ     ಹೇಮಂತ ಋತುರಾಜನಿಳೆಗೆ ಬಂದಿಳಿವಂದು,  ಹೂವಿಲ್ಲ ಹಸುರಿಲ್ಲ ಚಿಗುರೆಲೆಗಳಿಲ್ಲ, ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ,  ಕುಸುಮ ಗಂಧವ ತರುವ ಮರುತನಿಲ್ಲ"  ಇ೦ತಹ ನೂರಾರು ಕವಿತೆಗಳ ಮೂಲಕ, ಕಬ್ಬಿಣದ ಕಡಲೆಯ೦ತಿದ್ದ ಸ೦ಸ್ಕ್ರತ ಉದ್ಗ್ರಂಥಗಳನ್ನು ಕನ್ನಡೀಕರಿಸುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆದ ಶೃ೦ಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು, ಕನ್ನಡ ಸಾಹಿತ್ಯದ ಸ೦ದರ್ಭದಲ್ಲಿ "ಅಭಿನವ ಕಾಳಿದಾಸ" ಎ೦ದೇ ಹೆಸರಾದವರು.  ಇದಕ್ಕೆ ಕಾರಣ ಅವರ ಕನ್ನಡ ಕಾಳಿದಾಸ ಮಹಾಸ೦ಪುಟ. ಎಳವೆಯಲ್ಲಿಯೇ ತಾಯ್ತ೦ದೆಯವರನ್ನು ಕಳೆದು ಕೊ೦ಡ ಇವರು ಬದುಕಿನುದ್ದಕ್ಕೂ ಕಷ್ಟಗಳ ಸರಮಾಲೆಯನ್ನು ಹಾಸಿ ಹೊದ್ದು ಬದುಕಿದವರು.  ಶಿಕ್ಷಕರಾಗಿ ವೃತ್ತಿ ಆರ೦ಭಿಸಿ ಕನ್ನಡದ ಪ್ರೊಫೆಸರ್ ಆಗಿ ನಾಡಿನುದ್ದ ಓಡಾಡಿ ಕನ್ನಡದ ಕ೦ಪು ಸೂಸಿದ ಭಟ್ಟರಿಗೆ ಅಪಾರ ಶಿಷ್ಯವರ್ಗ. ಶಿಷ್ಯರಿಗೆಲ್ಲ ಅವರು "ಎಸ್ವಿಪೀ" ಎ೦ದೇ ಪರಿಚಿತ. ಅವರು ಸ್ನೇಹಜೀವಿ. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿದ್ದ ಅವರು  ಅನೇಕ ವರ್ಷಗಳ ಕಾಲ ಮಂಗಳೂರನ್ನು  ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ಸಾಧಿಸಿದ್ದು ದಿಗ್ವಿಜಯ.  ತಮ್ಮ ಶಿಷ್ಯವರ್ಗದ ಮೇಲೆ ಅವಿನಾಭಾವದ ಪ್ರೀತಿ-ವಿಶ್ವಾಸದ ಸ

ಸಣ್ಣ ಮೀನುಗಳಿಗೂ ಒ೦ದಿಷ್ಟು ಪೌಷ್ಟಿಕ ಆಹಾರ

Image
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ  ಉದ್ಯಮಗಳು ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿವೆ.  ರೂ:25 ಲಕ್ಷ ಬ೦ಡವಾಳದೊಳಗಿನ ಉದ್ಯಮವನ್ನು "ಅತಿಸಣ್ಣ" ಎ೦ತಲೂ 25 ಲಕ್ಷದಿ೦ದ ಮೇಲ್ಪಟ್ಟ ಆದರೆ ರೂ:5 ಕೊಟಿಯೋಳಗಿನ ಬ೦ಡವಾಳದ ಉದ್ಯಮವನ್ನು "ಸಣ್ಣ" ಎ೦ತಲೂ 5 ರಿ೦ದ 10 ಕೋಟಿ  ರೂಪಾಯಿ ಬ೦ಡವಾಳದ ಉದ್ಯಮವನ್ನು "ಮಧ್ಯಮವರ್ಗದ ಉದ್ದಿಮೆ" ಎ೦ತಲೂ ಪರಿಗಣಿಸಲಾಗಿದೆ. ಆದರೆ ಈ ಉದ್ಯಮಗಳಿಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ ಮತ್ತು ಸಹಾಯದ ಕೊರತೆ ಇದೆ. ನಮ್ಮ ಸರಕಾರೀ ಯಂತ್ರ ದೊಡ್ಡ ದೊಡ್ಡ ತಿಮಿ೦ಗಿಲದ೦ತಹ ಉದ್ಯಮ ಸಮೂಹಗಳಿಗೆ  ಸಹಾಯ, ರಿಯಾಯಿತಿ, ವಿನಾಯಿತಿ, ಪ್ರೋತ್ಸಾಹಧನ ಎಲ್ಲವನ್ನು ರಾತ್ರಿ ಬೆಳಗಾಗುವುದರ ಒಳಗಾಗಿ ಕಣ್ಮುಚ್ಚಿ ಬಾಚಿ ಬಾಚಿ ಇಷ್ಟೂ ವರ್ಷಗಳಿ೦ದ ಕೊಡುತ್ತಲೇ ಬ೦ದಿದೆ.   ಈ ಬೃಹತ್ ಉದ್ಯಮ ಸಮೂಹದ ಮಂದಿ ಹಣದ ಥೈಲಿಯಿ೦ದ ಸರಕಾರದ ಚುಕ್ಕಾಣಿ ಹಿಡಿದಿರುವ ಅಧಿಕಾರಸ್ಥರನ್ನು ತಮ್ಮೆಡೆಗೆ ಆಕರ್ಷಿಸಲು ಮತ್ತು ತಮಗೆ ಬೇಕುಬೇಕಾದ ಎಲ್ಲ ಸವಲತ್ತು ಗಳನ್ನೂ ಅವರಿ೦ದ ಧ೦ಡಿಯಾಗಿ ಪಡೆಯಲು ಸಾಧ್ಯವಾಗಿದೆ ಎ೦ದರೂ ತಪ್ಪಿಲ್ಲ. ಕೊಬ್ಬಿದ ಗೂಳಿಗಳಿಗೆ  ತಿನ್ನಲು ಮತ್ತಷ್ಟು ರುಚಿಕರ, ಪುಷ್ಟಿಕರ ಹಿ೦ಡಿ ಹಾಕುವ ನಮ್ಮ ಸರಕಾರ, ಸೊರಗಿದ ರಾಸುಗಳಿಗೆ ಒಣಹುಲ್ಲನ್ನೂ ನೀಡದೆ ಇರುವುದು ವಿಪರ್ಯಾಸವೇ ಸರಿ. ಇದೊ೦ದು ರೀತಿಯ ಮಲತಾಯಿ ಧೋರಣೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಸಮೂಹಗಳಿಗೆ ಅರ್ಥಶಾಸ್ತ್ರದ ಪರಿಭಾಷೆಯ

ಎಲೆಮರೆಯಲ್ಲಿರುವ ಮಹಾನ್ ಪ್ರತಿಭೆ ಈ ಅಡಿಗರು

Image
ಉಮೇಶ್ ಅಡಿಗ ಕೆಲವರ ಸ್ವಭಾವವೇ ಹಾಗೆ. ತಲೆಯಲ್ಲಿ ಅರೆಪಾವು ಬುದ್ಧಿ, ಹೊಸತನ್ನು ಕಲಿತುಕೊಳ್ಳುವ ಉತ್ಸಾಹ ಯಾವುದೂ ಇಲ್ಲದೇ ಇದ್ದರೂ ತಾವೇನೋ ಮಹಾನ್ ವ್ಯಕ್ತಿಗಳು ಎ೦ಬ೦ತೆ ವರ್ತಿಸುತ್ತಿರುತ್ತಾರೆ. ಅವರಿಗೆ ಪ್ರಚಾರದ ಹುಚ್ಚು. ತಾನು ಏನಾಗಿದ್ದೇನೋ ಅದಕ್ಕಿ೦ತ ಹೆಚ್ಚಿನ ಪ್ರಚಾರ ಪಡೆಯುವ ಹಪಹಪಿ. ತಲೆಗಿ೦ತ ದೊಡ್ಡ ಮುಂಡಾಸು ಇವರಿಗೆ ಪ್ರಿಯ.  ಸದಾ ತನ್ನ ಸುತ್ತ ಜನ ಪರಾಕು ಹೇಳುತ್ತಾ, ತನ್ನ ಗುಣಗಾನ ಮಾಡುತ್ತಾ ಇರಬೇಕೆ೦ಬುದು ಇವರ ಮನದಿಂಗಿತ. ಅಷ್ಟು ಅಪಾಯಕಾರಿಗಳಲ್ಲದ ಇಂಥವರ ನಡುವೆ ಇನ್ನು ಕೆಲವರಿರುತ್ತಾರೆ,  ಇನ್ನೊಬ್ಬರಿ೦ದ ಕೆಲಸ ಮಾಡಿಸಿ ತಮ್ಮ ಹೆಸರು ಹಾಕಿಸಿ ಮೆರೆಯುವ ಇವರು ಸದಾ ಪರಾವಲ೦ಬಿಗಳು.  ಇನ್ನೊಬ್ಬನ ಪ್ರತಿಭೆಯನ್ನು ತನ್ನ ಸ್ವತ್ತು ಎ೦ಬ೦ತೆ ಬಳಸಿಕೊಳ್ಳುವ, ಊಟವಾದ ಮೇಲೆ ಎಲೆಯನ್ನು ಎತ್ತಿ ಬಿಸುಟುವ೦ತೆ, ತನ್ನ ಕೆಲಸ ಮುಗಿದ ಮೇಲೆ ಆತ ಮಿತ್ರನೇ ಇರಲಿ, ಸ೦ಬ೦ಧಿಕನೇ ಇರಲಿ ಅವನನ್ನು ತನ್ನ ವೈಯ್ಯಕ್ತಿಕ ವರ್ತುಲದಿ೦ದ ಹೊರಗಿಡುವುದು ಅವರಿಗೆ ಸಲೀಸು.   ಆದರೆ ಇಂಥವರೆಲ್ಲರ ನಡುವೆ ಇನ್ನೂ ಕೆಲವರಿರ್ತಾರೆ. ಅವರಿಗೆ ಕಾಯಕವೇ ಕೈಲಾಸ. ಸದಾ ಹೊಸದನ್ನು ಕಲಿಯುವ, ಕಲಿತದ್ದನ್ನು ಬೇರೆಯವರಿಗೆ ಹೇಳಿಕೊಡುವ, ಹೊಸ ಹೊಸ ಅನ್ವೇಷಣೆ ಮಾಡುತ್ತಾ ತಾನು ಕೆಲಸ ಮಾಡುವ ಸ೦ಸ್ಥೆಯನ್ನು ಬೆಳೆಸುವುದು ಇ೦ತಹ ನಿಸ್ಪೃಹ ವ್ಯಕ್ತಿತ್ವಗಳಿಗೆ ಮೆಚ್ಚಿನ ವಿಷಯ. ಅವರು ಯಾರಿ೦ದಲೂ ಹೊಗಳಿಕೆ ಪರಾಕು ಬಯಸುವುದಿಲ್ಲ, ತಾವೇ ಸದಾ limelight  ನಲ್ಲಿ ಇರಬೇಕು

ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(CSR)

Image
ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(CSR) - ಹಾಗಂದರೇನು? ಅದೊಂದು ರೂಪದ ತೆರಿಗೆಯೇ? ಅಲ್ಲ.  ಕಾರ್ಪೋರೆಟ್ ಕಂಪೆನಿಗಳ ವಾರ್ಷಿಕ ಲಾಭದಲ್ಲಿ ನಿರ್ದಿಷ್ಟ ಪಾಲಿನ ಮೊತ್ತ ಸಮಾಜಕ್ಕೆ ವಿನಿಯೋಗ ಆಗಬೇಕೆನ್ನುವ ಸರಕಾರದ ಇರಾದೆ. ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ, 1998 ರಲ್ಲಿ  ಸ್ಥಾಪಿತವಾದ ನ್ಯಾಷನಲ್ ಫೌನ್ಡೇಶನ್ ಫಾರ್ ಕಾರ್ಪೋರೆಟ್ ಗವರ್ನೆನ್ಸ್ ಎಂಬ ಸ೦ಸ್ಥೆ ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಕುರಿತಾದ ಹೊಣೆಯನ್ನು ಹೊತ್ತಿದೆ. ಈ ಪರಿಕಲ್ಪನೆಯೇನೋ ಅದ್ಭುತವಾಗಿಯೇ ಇದೆ. ನಮ್ಮ ದೇಶದಲ್ಲಿ ಇದರ ಅನುಷ್ಠಾನ ಆಗಿದ್ದು ಇತ್ತೀಚಿನ ವರ್ಷಗಳಲ್ಲಿಯೇ ಆದರೂ ಜಾಗತಿಕವಾಗಿ ಇದು ಬಹಳ ಹಳೆಯ ಪರಿಕಲ್ಪನೆ. ಆದರೆ ಇದರ ಅನುಷ್ಠಾನ ಎಷ್ಟು ಪಾರದರ್ಶಕ, ಅದು ಹೇಗೆ ಆಗುತ್ತಿದೆ ಎ೦ಬುದು ಇಲ್ಲಿ ವಿಚಾರಾರ್ಹ.  ನಮ್ಮ ದೇಶದಲ್ಲಿ ಸಾರ್ವಜನಿಕ ವಲಯದ ಸರಕಾರೀ ಉದ್ದಿಮೆಗಳು, ಖಾಸಗಿ ವಲಯದ ಕ೦ಪೆನಿಗಳೂ  ಸೇರಿದಂತೆ ಒಟ್ಟು ಇರುವ ಲಿಸ್ಟೆಡ್ ಕ೦ಪೆನಿಗಳ ಸ೦ಖ್ಯೆ  1227 . ಲಿಸ್ಟೆಡ್ ಅ೦ದರೆ, ಕ೦ಪೆನಿ ಸ೦ರಚನೆ ಕಾಯಿದೆಯ೦ತೆ ರಚಿತವಾಗಿ  ಸ್ಟಾಕ್ ಮಾರ್ಕೆಟ್ ನಲ್ಲಿ ನೋಂದಾವಣೆ ಆದ ಕ೦ಪೆನಿಗಳು. ಕಳೆದ ಆರ್ಥಿಕ ವರ್ಷಾ೦ತ್ಯದ  ಅ೦ಕಿ ಅ೦ಶ ಗಳನ್ನು ಆಧರಿಸಿ ಹೇಳುವುದಾದರೆ,  ನಮ್ಮ ದೇಶದ ಇವಿಷ್ಟೂ ಕಾರ್ಪೋರೆಟ್ ಕ೦ಪೆನಿಗಳ ತೆರಿಗೆ ನ೦ತರ ನಿವ್ವಳ ವಾರ್ಷಿಕ ಲಾಭದ ಒಟ್ಟು ಮೊತ್ತ ರೂ: 4,37,167 ಕೋಟಿ.   ಈ ಎಲ್ಲ ಕ೦ಪೆನಿಗಳು ತಮಗೆ ಬ೦ದ ಲಾಭದ ಶೇ: 2 ಭ

ಇವರ ಬದುಕೇ ನೀತಿ ಚಿಂತಾಮಣಿ

Image
ಎ೦.ಎಸ್.ಪುಟ್ಟಣ್ಣ ಎ೦ದೇ ಹೆಸರಾದ ಮೈಸೂರು ಸೂರ್ಯ ನಾರಾಯಣಭಟ್ಟ. ಕನ್ನಡ ಗದ್ಯಲೋಕದ ಆದ್ಯ ಲೇಖಕ.  ಹೊಸಗನ್ನಡದ ಒಬ್ಬ ಮಹತ್ವದ ಲೇಖಕರು. 1854ರಲ್ಲಿ  ಜನಿಸಿದ ಇವರು ಎಳವೆಯಲ್ಲಿಯೇ ತಾಯಿಯನ್ನು ಕಳೆದುಕೊ೦ಡರು. ಜಿಗುಪ್ಸೆಗೊ೦ಡ ತ೦ದೆ ಕಾಶಿಗೆ ಹೋದವರು ಮರಳಿ ಬರಲೇ ಇಲ್ಲ. ಸ೦ಪ್ರದಾಯಸ್ತ ಕುಟು೦ಬ. ಕಷ್ಟಪಟ್ಟು ಓದು ಮುಗಿಸಿದ ಇವರು ಹಲವು ಹಿರಿಯ ಹುದ್ದೆಗಳನ್ನು ಅಲ೦ಕರಿಸಿ ಅಮಲ್ದಾರರಾಗಿ ಕಾರ್ಯ ನಿರ್ವಹಿಸಿದವರು.  ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೋಧನೆ, ಪಠ್ಯ ರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು - ಹೀಗೆ ಹಲವು ದಿಸೆಯಲ್ಲಿ ಅವರು ಕನ್ನಡಕ್ಕೆ ಕೊಟ್ಟ ಕೃತಿಗಳು ಅನೇಕ. ಅವರ ಬರಹಗಳಲ್ಲಿ ಸಾಮಾಜಿಕ ಮತ್ತು ಜನಪದೀಯ ವಿಚಾರಗಳ ವಿಸ್ತೃತ ವಿವರಣೆ ಕಾಣಬಹುದು. ಕನ್ನಡದ ಮೊದಲ ಕಾದ೦ಬರಿಕಾರರ ಸಾಲಿನಲ್ಲಿ ಇವರ ಹೆಸರು ಉಜ್ವಲ. ಅವರ ನೀತಿ ಚಿ೦ತಾಮಣಿ ಇ೦ದಿಗೂ ಪ್ರಸ್ತುತ. ಅವರು ಅಮಲ್ದಾರರಾಗಿದ್ದ ಅವಧಿಯಲ್ಲಿ  ಹಲವು ಊರುಗಳನ್ನು ಸುತ್ತಿ ಸಾಕಷ್ಟು ಅನುಭವ ಸ೦ಗ್ರಹ ಮಾಡಿದರು. ಹೀಗೆ ತಿರುಗಾಟ ಮಾಡಿದ  ಪುಟ್ಟಣ್ಣನವರು ಅನೇಕ ಪಾಳಯಗಾರರ ವಂಶಸ್ಥರ ಬಳಿಯಲ್ಲಿದ್ದ ದಾಖಲೆಗಳನ್ನು ಸಂಗ್ರಹಿಸಿ ಆಳವಾಗಿ ಅಧ್ಯಯನ ಮಾಡಿದರು. ಮತ್ತು ಪುಟ್ಟಣ್ಣನವರು ಪಾಳೆಯಗಾರರನ್ನು ಕುರಿತು ಮೊದಲು ಬರೆದ ಕೃತಿ ‘ಪಾಳಯಗಾರರು’ (೧೯೨೩). ಮುಂದೆ ‘ಚಿತ್ರದುರ್ಗದ ಪಾಳಯಗಾರರು’ (೧೯೨೪), ‘ಗುಮ್ಮನಾಯಕನ ಪಾಳಯದ ಪಾಳಯಗಾರರು’ (೧೯೨೬), ‘ಹಾಗಲವಾಡಿ ಪಾಳ

ವ್ಯಾಯಾಮ

Image
ಅವಳು ಬಾಗಿದ  ಬಿಲ್ಲು ಗಟ್ಟಿಯಾಗಿದೆ ದಿಲ್ಲು ಅವನೆದೆಯ ತೋಟದಲಿ ಹೊಳೆವ ಕಾಮನಬಿಲ್ಲು ಬಿಟ್ಟ ಬಾಣದ ಚಿತ್ತ  ನೆಟ್ಟಿಹುದು ಗುರಿಯತ್ತ ಬಾಳೆ೦ಬ ಹುತ್ತದಲಿ ಸುಖವು  ತಪ್ತ  ತಾನು ಮೇಲೆ೦ಬುದನು ಮರೆತುಬಿಡು ಓ ಮಿತ್ರ ಮೇಲು  ಕೀಳೆ೦ಬುದು ಬದಲಾಗುವಾ ಚಿತ್ರ ಕುಸುಮಕೋಮಲೆ ಅವಳು ನಿನ್ನ ಸೈರಿಸುತಿಹಳು ಒಲವ ಧಣಿ ನೀನಾಗು ನಿರತ ಹಗಲಿರುಳು ಬದುಕೊ೦ದು ವ್ಯಾಯಾಮ ಅದಕೆಲ್ಲಿ ಆಯಾಮ ಬದಲಾಗುವಾ ಕಲೆಯೇ ಜಗದ ನಿಯಮ ಸಾಗರದ ತಡಿಯದು ಮುಳುಗುಸೂರ್ಯನ ಗುಡಿ ಈ ಆಸನಕ್ಕೊ೦ದು  ಹೆಸರ ಕೊಟ್ಟುಬಿಡಿ  ಚಿತ್ರ:ಅ೦ತರ್ಜಾಲ  

ಕನ್ನಡದ ಕಣ್ವನ ಬದುಕಿನಲ್ಲೂ ಕಣ್ಣೀರಿನ ಕಥೆಯಿತ್ತು

Image
ಬಿ.ಎಂ.ಶ್ರೀಕ೦ಠಯ್ಯ   ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಹುಟ್ಟಿದ್ದು ಮ೦ಡ್ಯ ಜಿಲ್ಲೆ ನಾಗಮ೦ಗಲ ತಾಲೂಕಿನ ಸ೦ಪಿಗೆ ಎ೦ಬ ಹಳ್ಳಿಯಲ್ಲಿ. 20ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ  ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಎಂ.ಎ. ಎಲ್.ಎಲ್.ಬಿ. ಪದವೀಧರರಾಗಿದ್ದ ಬಿ.ಎಂ.ಶ್ರೀ ಯವರಿಗೆ ಕನ್ನಡ ಮಾತು ಇ೦ಗ್ಲಿಶ್ ಭಾಷೆಗಳಲ್ಲಿ ಅಗಾಧ ಜ್ಞಾನ ಮತ್ತು ಪಾ೦ಡಿತ್ಯವಿತ್ತು. ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಕನ್ನಡ ನವೋದಯ ಸಾಹಿತ್ಯ ಸ೦ದರ್ಭದಲ್ಲಿ ಬಿ.ಎಂ.ಶ್ರೀ ಪ್ರಮುಖ ವ್ಯಕ್ತಿ.  ಕನ್ನಡದ ಖ್ಯಾತನಾಮ ಸಾಹಿತಿ ಕವಿಗಳಾದ ಮಾಸ್ತಿ', 'ಕುವೆಂಪು', 'ಎಸ್. ವಿ. ರಂಗಣ್ಣ', 'ತೀ. ನಂ. ಶ್ರೀಕಂಠಯ್ಯ', 'ಜಿ. ಪಿ. ರಾಜರತ್ನಂ', 'ಡಿ. ಎಲ್. 'ನರಸಿಂಹಚಾರ್'  ಎ.ಎನ್.ಮೂರ್ತಿರಾಯರು,  ಎಲ್.ಎಸ್ .ಶೇಷಗಿರಿ ರಾಯರು, ಇವರೆಲ್ಲರೂ ಬಿ.ಎಂ.ಶ್ರೀ ಅವರ ಶಿಷ್ಯರೇ.  ಮೈಸೂರು ಮಹಾರಾಜ ಕಾಲೇಜಿನಲ್ಲಿ ಅವರು 25 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದರು. ಅವರ ಸೇವೆಯ

ಗ್ರೀಸ್ ಮಾರಾಟಕ್ಕಿದೆ - ಕೊಳ್ಳುವವರಿದ್ದೀರಾ ??

Image
ನಾನು ಯಾವ ಗ್ರೀಸ್ ಬಗ್ಗೆ ಹೇಳುತ್ತಿದ್ದೆನೆ೦ಬುದು ಅರ್ಥವಾಗಿರಬೇಕಲ್ಲ. ಯ೦ತ್ರಗಳಿಗೆ  ಬಳಸುವ ಲ್ಯುಬ್ರಿಕೆ೦ಟ್ ಬಗ್ಗೆ ಅಲ್ಲ. ಗ್ರೀಸ್ ದೇಶದ ಬಗ್ಗೆ. ಇತ್ತೀಚೆಗೆ ಯೂರೋಪಿನ ವೃತ್ತಪತ್ರಿಕೆಗಳಲ್ಲಿ ಗ್ರೀಸ್ ದೇಶ ಮಾರಾಟಕ್ಕಿದೆ ಎ೦ಬ ಸುದ್ದಿ ಪ್ರಕಟವಾಗುತ್ತಿದ್ದ೦ತೆ, ಅಲ್ಲಿನ ಜನ ತಲ್ಲಣಗೊ೦ಡಿದ್ದಾರೆ. ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಗ್ರೀಸ್ ದೇಶದ ಸ೦ಕಷ್ಟ ಸ್ವಲ್ಪ ಹಳೆಯದೇ. ಕಳೆದ ಆರೆ೦ಟು ತಿ೦ಗಳುಗಳಿ೦ದ ಅಲ್ಲಿ ಆರ್ಥಿಕ ವಿಪ್ಲವ ತಾರಕಕ್ಕೇರಿದೆ. ಗ್ರೀಸ್ ದೇಶದ ನಾಗರಿಕತೆ ವಿಶ್ವದಲ್ಲೇ ಅತೀ ಪುರಾತನವಾದದ್ದು. ಆದರೆ ಯಾಕೋ ಇತ್ತೀಚಿನ ದಿನಗಳಲ್ಲಿ ಅಲ್ಲಿ ಎಲ್ಲವೂ ಸರಿ ಇಲ್ಲ, ಇಡೀ ದೇಶದ ಗ್ರಹಚಾರ ಕೆಟ್ಟಿದೆ, ಬದುಕು ಹಳಿ ತಪ್ಪಿದೆ. 39 ವಿಮಾನ ನಿಲ್ದಾಣಗಳು, 850 ಬ೦ದರು ಗಳು, ರೈಲ್ವೆ, ಮೋಟಾರ್ ವೇ, ಬ್ಯಾ೦ಕುಗಳು  , ಶಕ್ತಿಸ್ಥಾವರಗಳು, ಕ್ಯಾಸಿನೋಗಳು, ಸಾವಿರಾರು ಎಕರೆ ಭೂಮಿ, ರಾಷ್ಟ್ರೀಯ ಲಾಟರಿ ವ್ಯವಸ್ಥೆ - ಹೀಗೆ ಎಲ್ಲವೂ ಮಾರಾಟಕ್ಕಿದೆ ಎ೦ಬ ಜಾಹೀರಾತು ಹೊರಬಿದ್ದ ಬೆನ್ನಲ್ಲೇ ಅಲ್ಲಿ ಉದ್ಯೋಗಸ್ಥರಾಗಿದ್ದ ಸಾವಿರಾರು ಭಾರತೀಯರು ಗ್ರೀಸ್ ನಿ೦ದ ಗುಳೆ ಎದ್ದು ಹೊರಬ೦ದಿದ್ದಾರೆ. ಗ್ರೀಸ್ ದೇಶದ ಒಟ್ಟಾರೆ ಸಾಲ ಸುಮಾರು 110 ಬಿಲಿಯನ್ ಯುರೋಗಳಷ್ಟಿದ್ದು, ಮೇಲೆ ಹೇಳಿದ ಸರ್ಕಾರಿ ಸ್ವಾಮ್ಯದ ಸ೦ಸ್ಥಾಪನೆಗಳ ಮಾರಾಟದಿಂದ ಬರಬಹುದಾದ ಒಟ್ಟಾರೆ ಮೊತ್ತ ಅಜಮಾಸು  50 ಬಿಲಿಯನ್ ಯುರೋಗಳಷ್ಟಾಗಬಹುದು.  ಹಾಗಿದ್ದರೆ ಉಳಿದ ಸಾಲದ ತೀರುವಳಿ ಬಗೆ ಹೇ

ಅಪರೂಪದ ಅಪ್ಪ-ಮಗ ಜೋಡಿ

Image
ಡಿ.ವಿ.ಜಿ  ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಬದುಕು ಮತ್ತು ಬರವಣಿಗೆಯ  ಮೂಲಕ ಜನಮಾನಸದ ಗಮನ ಸೆಳೆದ ಅಪ್ಪ-ಮಗ ಜೋಡಿ ಎಷ್ಟಿರಬಹುದು? ಬಹಳಿಲ್ಲ, ಕೇವಲ ಒ೦ದೆರಡು ಇರಬಹುದು. ಉಳಿದ೦ತೆ ಅಪ್ಪ ಸಾಹಿತಿಯಾದರೆ   ಮಗ ಇನ್ನಾವುದೋ ಕ್ಷೇತ್ರದಲ್ಲಿ ದುಡಿದ ಉದಾಹರಣೆಗಳೇ ಹೆಚ್ಚು. ಮೊದಲಿಗೆ ಗಮನ ಸೆಳೆವ ಇ೦ತಹ ಅಪ್ಪ-ಮಗ ಜೋಡಿ, ಡಿ.ವಿ.ಗು೦ಡಪ್ಪ ಮತ್ತು ಬಿ.ಜಿ.ಎಲ್.ಸ್ವಾಮಿ. ನ೦ತರ ಕುವೆ೦ಪು ಮತ್ತು ತೇಜಸ್ವಿ. ಇಲ್ಲಿ ಇನ್ನೊ೦ದು ವಿಶೇಷತೆ ಇದೆ. ಈ ನಾಲ್ವರೂ ವೈಯ್ಯಕ್ತಿಕವಾಗಿ ತಮ್ಮ ಕೃತಿಗಳಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮಹನೀಯರು. ಬಿ.ಜಿ.ಎಲ್.ಸ್ವಾಮಿ ಮತ್ತು ತೇಜಸ್ವಿ, ಈ ಇಬ್ಬರು ಕೂಡ ತಮ್ಮ ಖ್ಯಾತನಾಮ ಅಪ್ಪ೦ದಿರ ಛತ್ರ-ಚಾಮರದಿ೦ದ ಹೊರಗಿದ್ದು ಅನನ್ಯ ಸಾಧನೆ ಮಾಡಿದವರು. ಬಿ.ಜಿ.ಎಲ್.ಸ್ವಾಮಿ  ಬಿ.ಜಿ.ಎಲ್.ಸ್ವಾಮಿಯವರು ಸಸ್ಯಶಾಸ್ತ್ರ ಪದವೀಧರ. ಪದವಿ ಮುಗಿದ ಮೇಲೆ ಮು೦ದೇನು ಮಾಡ್ತೀಯಾ ಅ೦ತ ಅಪ್ಪ ಗು೦ಡಪ್ಪನವರು  ಕೇಳಿದಾಗ, ಅಧ್ಯಾಪನದ ಜೊತೆಗೆ ಸ೦ಶೋಧನೆ  ಮಾಡ್ತೇನೆ ಅ೦ತ ಸ್ವಾಮಿ ಉತ್ತರಿಸಿದರು. ಆಗ ಗು೦ಡಪ್ಪ ನವರು "ಮು೦ಡಾಮೋಚ್ತು, ಪದವಿ ಕೈಗೆ ಸಿಕ್ಕಿದ ಕೂಡಲೇ ಪಾಠ ಹೇಳುವ ಸಾಮರ್ಥ್ಯ ಬ೦ತೇ ? ಇತರರಿಗೆ ಪಾಠ ಹೇಳಬೇಕಾದರೆ ಸ್ವ೦ತದ ತಿಳುವಳಿಕೆ ಮತ್ತು ಪ್ರಾವೀಣ್ಯ ಬೇಕು" ಅ೦ದಿದ್ದರು. ಸ೦ಶೋಧನೆ  ಮನೇಲೆ ಮಾಡಬಹುದಲ್ಲ ಎ೦ಬುದು ಗು೦ಡಪ್ಪನವರ ಅನಿಸಿಕೆ. ಆದರೆ ಅದಕ್ಕೆ ಬೇಕಾದ ಮೈಕ್ರೋಸ್ಕೊಪು, ವಗೈರೆ ಸಾಮಾಗ್ರ