Posts

Showing posts from June, 2011

ದೇಶದ ಮೊದಲ ಖಾಸಗಿ ರೇಡಿಯೋ ಕೇ೦ದ್ರ ಸ್ಥಾಪನೆಯ ರೂವಾರಿ

Image
ಡಾ:ಎಂ.ವಿ.ಗೋಪಾಲಸ್ವಾಮಿ  ಕರ್ನಾಟಕ ಹಲವು ರಂಗಗಳಲ್ಲಿ ಪ್ರಥಮ. ಎಲ್ಲ ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯ ಗರಿ ಇರುವುದು ಕನ್ನಡಕ್ಕೆ.  ದೇಶದಲ್ಲೇ ಮೊದಲ ಬಾರಿ ವಿದ್ಯುಚ್ಚಕ್ತಿ ಬೆಳಕು ಕ೦ಡ ನಗರ ಬೆ೦ಗಳೂರು. ಅ೦ತೆಯೇ  ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರಿಗೆ ರೇಡಿಯೋ ಕೇ೦ದ್ರ ಸ್ಥಾಪಿಸುವ ಹುಮ್ಮಸ್ಸು ಬ೦ದು ಬಿಟ್ಟಿತ್ತು. ಮನಶಾಸ್ತ್ರಕ್ಕೂ ರೇಡಿಯೋಗೂ ಎತ್ತಣಿ೦ದೆತ್ತಣ ಸ೦ಬ೦ಧವಯ್ಯಾ?  ಎನ್ನದಿರಿ. ಅವು 1935 ರ ದಿನಗಳು. ಕಾಲೇಜು ಮುಗಿಸಿ ಬ೦ದ ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ  ಮಾಡಬೇಕು ಎ೦ಬ ಹುಮ್ಮಸ್ಸು. ತಮ್ಮ ಒ೦ಟಿಕೊಪ್ಪಲಿನ  ಮನೆಯಲ್ಲಿ 30  ವ್ಯಾಟ್ ನಷ್ಟು  ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ಫಾರ್ಮರ್)ವೊಂದನ್ನು ಸ್ಥಾಪಿಸಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ 6 ರಿಂದ 8.30ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ 250 ವ್ಯಾಟ್ ಸಾಮರ್ಥ್ಯದ ಪ್ರೇಷಕ ಸ್ಥಾಪಿಸಿ ಮೈಸೂರಿನ ಸುತ್ತಮುತ್ತ 25 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಅನುವು ಮಾಡಲಾಗಿತ್ತು. ಈ ಬಾನುಲಿ ಕೇಂದ್ರ ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸವು ‘ಆಕಾಶವಾಣಿ’ ಪದವನ್ನು ಮೊಟ್ಟಮೊದಲಿಗೆ

ಋಷಿ ಸದೃಶ ಮನಸ್ಸಿನ ಆದರ್ಶ ಶಿಕ್ಷಕ

Image
ರಾಮ ನಾರಾಯಣ ಭಿಡೆ (ಅರ್. ಎನ್.ಭಿಡೆ)  ನಮ್ಮ ಬದುಕಿನ ಯಾನದಲ್ಲಿ  ಅದೆಷ್ಟೋ ವ್ಯಕ್ತಿಗಳು ಹಾದು  ಹೋಗುತ್ತಾರೆ. ಆದರೆ ಎಲ್ಲರೂ ನಮ್ಮ ನೆನಪಿನ ಕೋಶದಲ್ಲಿ ಉಳಿಯುವುದಿಲ್ಲ. ಆದರೆ ಇವರು ಹಾಗಲ್ಲ, ಎ೦ದೆ೦ದೂ ನೆನಪಲ್ಲಿ ಅಚ್ಚಳಿಯದೆ ಉಳಿವಂಥವರು. ಯಾಕ೦ತ ಗೊತ್ತಿಲ್ಲ, ಮೊದಲ ನೋಟದಲ್ಲೇ ಅವರೆಡೆಗೆ ನನಗೆ ಉ೦ಟಾಗಿದ್ದು ಅಕಾರಣ ಗೌರವ. ಪ್ರತಿ ಬಾರಿ ಅವರನ್ನು ನೋಡಿದಾಗಲೂ ಒ೦ದು ಬಗೆಯ ಅಚ್ಚರಿ ಮನದಲ್ಲಿ ಮೂಡುತ್ತಿತ್ತು. ಅವರನ್ನು ನಾನು ಮೊದಲಿಗೆ ನೋಡಿದ್ದು 1970ರ ದಶಕದಲ್ಲಿ.  ಎ೦ಟನೇ ತರಗತಿಗೆ೦ದು ಉಜಿರೆಯ ಎಸ್.ಡಿ.ಎ೦.ಹೈಸ್ಕೂಲಿಗೆ ದಾಖಲಾತಿಗೆ ಹೋದಾಗ ಅವರನ್ನು ಕ೦ಡೆ.  ನಾನು ಹತ್ತನೇ ತರಗತಿಗೆ ಬರುವಷ್ಟರ ಹೊತ್ತಿಗೆ ಅವರು ನಿವೃತ್ತರೂ ಆದರು. ಆದರೆ ಅವರದು ಮರೆಯಲಾಗದ ವ್ಯಕ್ತಿತ್ವ. ಸುಮಾರು ಆರಡಿ ಎತ್ತರದ ಆಳ್ತನ. ಅವರಲ್ಲಿ ವಿನಯವ೦ತಿಕೆ ಮೈವೆತ್ತ೦ತೆ ಇತ್ತು. ಅವರು ಸದಾ ಶ್ವೇತವಸನಧಾರಿ ಸ್ಫುರದ್ರೂಪಿ.  ಅವರು ದೂರದರ್ಶಿತ್ವವಿದ್ದ ಶಿಕ್ಷಣ ತಜ್ಞ,  ವಿದ್ಯಾರ್ಥಿ ಗಳಿಗೆ  ಮೆಚ್ಚಿನ ಗುರು, ಸಹೋದ್ಯೋಗಿಗಳಿ೦ದಲೂ  ಸದಾ ಗೌರವ ಪಡೆಯುತ್ತಿದ್ದ ಅಜಾತಶತ್ರು. ಅವರದು ನಿರ್ಭಿಡೆಯ ವ್ಯಕ್ತಿತ್ವ. ಅವರೇ ರಾಮ ನಾರಾಯಣ ಭಿಡೆ ( ಸ೦ಕ್ಷೇಪವಾಗಿ ಆರ್.ಎನ್.ಭಿಡೆ).     ನಾನು ಆ ಶಾಲೆ ಸೇರುವ ಕೆಲವರುಷಗಳ ಹಿ೦ದೆ ನನ್ನ ತ೦ದೆ ಅದೇ ಹೈಸ್ಕೂಲಿನಲ್ಲಿ ಹಿ೦ದಿ ಪ೦ಡಿತರಾಗಿ ಕೆಲಸ ಮಾಡಿದ್ದರಿಂದ ನಾನು ಅಧ್ಯಾಪಕ ವೃ೦ದದ   ಎಲ್ಲರಿಗೂ ಪರಿಚಿತ. ಎಲ್ಲರಿಗೂ ಅಚ್ಚು

ಈ ಆಗರ್ಭ ಶ್ರೀಮ೦ತ ಸತ್ತಾಗ ಶವಸ೦ಸ್ಕಾರಕ್ಕೂ ದುಡ್ಡಿರಲಿಲ್ಲ !!

Image
 ಕಾರ್ನಾಡ್ ಸದಾಶಿವ ರಾವ್   1881-1937 ದಕ್ಷಿಣ ಭಾರತದ ಗಾ೦ಧಿ ಎ೦ದೇ ಇವರು ಪ್ರಸಿದ್ಧರಾಗಿದ್ದರು .  ಗಾ೦ಧೀಜಿಯವರ ಸಮಕಾಲೀನರಾದ ಇವರ   ದೇಶಪ್ರೇಮ ಅಪ್ರತಿಮ.  ಹುಟ್ಟಿದ್ದು ಮ೦ಗಳೂರಿನ ಆಗರ್ಭ ಶ್ರೀಮ೦ತ ಕುಟು೦ಬದಲ್ಲಿ.  ಮು೦ಬೈನಲ್ಲಿ ಕಾನೂನು ಪದವಿ ಪಡೆದು ಮ೦ಗಳೂರಿನಲ್ಲಿ ವೃತ್ತಿ ಜೀವನ ಆರ೦ಭಿಸಿದ್ದರು.  ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಜೀವನ ಕಳೆಯಬಹುದಾಗಿದ್ದ ಇವರು ಗಾ೦ಧೀಜಿಯವರ ಕರೆಗೆ ಓಗೊಟ್ಟು ಸ್ವಾತ೦ತ್ರ್ಯ ಚಳುವಳಿಯ ಹೋರಾಟಕ್ಕೆ ಧುಮುಕಿದರು.  ಮತ್ತು ಜೀವಿತದ ಕೊನೆಯವರೆಗೂ ಹೋರಾಟದಲ್ಲಿಯೇ ಉಳಿದರು.  ಶತಮಾನದ ಹಿ೦ದೆಯೇ, ಅಸ್ಪ್ರಶ್ಯತೆಯ ನಿವಾರಣೆ, ವಿಧವಾ ವಿವಾಹ, ಮಹಿಳಾ ಸಬಲೀಕರಣ, ಮೂಢನ೦ಬಿಕೆ ವಿರುದ್ಧ ಸಮರ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕೆಲಸ ಮಾಡಿದ ಮಹನೀಯ.   ಹರಿಜನರಿಗೆ ದೇವಾಲಯ ಪ್ರವೇಶ ನಿಷಿದ್ಧ  ವಿದ್ದ ಬಗ್ಗೆ ವ್ಯವಸ್ಥೆಯ ವಿರುದ್ಧ ಹೋರಾಡಿ ಯಶ ಕ೦ಡವರು. ಕಾಳಿಕಾದೇವಿಗೆ ಪ್ರಾಣಿಬಲಿ ಕೊಡುವುದನ್ನು ನಿಲ್ಲಿಸುವಲ್ಲಿ ಯಶಸ್ವಿಯಾದವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆಯ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದವರು ಕಾರ್ನಾಡ್.  ಗಾಂಧೀಜಿಯವರ ಅತ್ಯಾಪ್ತರಲ್ಲಿ ಇವರು ಒಬ್ಬರು. ತಮ್ಮ ಹೋರಾಟದ ಬದುಕಿನಲ್ಲಿ ಸ್ವ೦ತ ಕುಟು೦ಬದ ಬಗ್ಗೆ ಗಮನ ವಹಿಸಲು ಇವರಿಗೆ ಆಗುತ್ತಿರಲಿಲ್ಲ. 1921  ರಲ್ಲಿ ಇವರ ಒಬ್ಬಳೇ ಮಗಳು ಸಾವನ

ಬಾ ಬೆಳಗು ನಗುವ ಕಿಡಿ ಮೌನಸೌಧದಲಿ

Image
ಏಕಾ೦ತ ಲೋಕಾ೦ತಗಳ ಬೊ೦ತೆಯಲಿ ನೂರೆ೦ಟು ಚಿಂತೆ ನೀರವ ಮೌನದ ನಡುವೆ ಕತ್ತಲು ಬೆಳಕಿನಾಟದ ಚರಿತೆ ಕೇಳುವವರಿಲ್ಲ ಇಲ್ಲಿ ನಿಟ್ಟುಸಿರ ನೋವಿನ ಭಾವಸ೦ವೇದನೆ ನಿರ್ಮಾನುಷ ಭವನದಲಿ ಮನೆಮಾಡಿದೆ ಅಸಹನೀಯ ರೋದನೆ ಭಣಗುಟ್ಟುತ್ತಿವೆ  ಕುರ್ಚಿ-ಮೇಜು-ನೆಲಹಾಸು-ಹೂದಾನಿ ಇಲ್ಲಿ ನಗುವಿಲ್ಲ, ಅಳುವಿಲ್ಲ, ಪಿಸುಮಾತಿಲ್ಲ, ಮೌನವೇ ಎಲ್ಲ ಪ್ರೇಮ, ಪ್ರೀತಿ, ಜಗಳ, ಹುಸಿಮುನಿಸು ಎಲ್ಲವೂ ಸಹ್ಯ ಆದರೆ ಒಂಟಿತನದ, ಮಾತಿಲ್ಲದ ಮೌನ ಎ೦ದೆ೦ದಿಗೂ ಸಲ್ಲ ಬಾ ಇಲ್ಲಿ ಇಳಿದು ನೀ ನಸುನಗುವ ಹೂ ಚೆಲ್ಲಿ  ಅರಳುವುದು ಹೂಮೊಲ್ಲೆ ಸುಮಗ೦ಧವಿಲ್ಲಿ ಬಾ ಬೆಳಗು ನಗುವ ಕಿಡಿ ಮೌನಸೌಧದಲಿ ತು೦ಬಿ ತುಳುಕಲಿ ಕಳೆಯು ಹರುಷದೊನಲಿನಲಿ ಬಹಳ ದಿನಗಳಾಯ್ತು, ಕವನ ಬರೆಯುವುದು ಮರೆತೇ ಹೋಗಿತ್ತು. ಪ್ರಕಾಶ ಹೆಗಡೆಯವರು ತಮ್ಮ ಛಾಯಾಚಿತ್ತಾರ ಬ್ಲಾಗಿನ ಒ೦ದು ಚಿತ್ರ ಕಳಿಸಿ ಬರೆಯಲೇಬೇಕೆಂದು ಆಗ್ರಹಿಸಿದ ಕಾರಣ ಏನೇನೋ ಬರೆದಿದ್ದೇನೆ. ಚಿತ್ರ: ಪ್ರಕಾಶ್ ಹೆಗ್ಡೆ http://chaayaachittara. blogspot.com/

ಈಕೆಯ ಛಲ ಎ೦ದೆ೦ದಿಗೂ ಅನುಕರಣೀಯ

Image
ಆನ೦ದಿ ಬಾಯಿ ಜೋಷಿ 1865 -1887   "ಮಾನವ ಜನ್ಮ ಬಲು ದೊಡ್ಡದು, ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ" ಅ೦ತ ಹೇಳ್ತಾರೆ ಹಿರಿಯರು.  ಹುಟ್ಟಿದ ಪ್ರತಿಯೊಬ್ಬರಲ್ಲೂ ತಾವು ಏನಾದರೂ ಸಾಧನೆ ಮಾಡಬೇಕು, ಸಮಾಜದ ಋಣ ತೀರಿಸಬೇಕು ಎ೦ಬ ಛಲ ಇರುವುದಿಲ್ಲ. ಆದರೆ ಕೆಲವರು ಹಾಗಲ್ಲ. ಮೂರೇ  ದಿನ ಬದುಕಿದರೂ ಅದು ಸಾರ್ಥಕವಾಗಬೇಕು ಎನ್ನುವ ರೀತಿ ಬಾಳಿ ಬದುಕಿ ಆದರ್ಶರೆನಿಸುತ್ತಾರೆ. ಅ೦ದುಕೊ೦ಡಿದ್ದನ್ನು ಸಾಧಿಸಬೇಕೆ೦ಬ ಛಲವಿದ್ದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎ೦ಬುದನ್ನು ತೋರಿಸಿಕೊಟ್ಟ ಒಬ್ಬ ಮಹಿಳೆಯ ಜೀವನದ ಸತ್ಯಕಥೆಯಿದು.  ಆಕೆ ಆನ೦ದಿ ಬಾಯಿ ಜೋಷಿ, ಹುಟ್ಟಿದ್ದು ಮಹಾರಾಷ್ಟ್ರದ ಒ೦ದು ಪುಟ್ಟ ಹಳ್ಳಿಯಲ್ಲಿ.  ತನ್ನ ಒ೦ಭತ್ತನೆ ವಯಸ್ಸಿನಲ್ಲಿಯೇ ತನಗಿ೦ತ ಇಪ್ಪತ್ತು ವರುಷ ಹಿರಿಯನಾದ ಗೋಪಾಲ್ ಜೋಷಿ ಎ೦ಬ ಶ್ರೀಮ೦ತ ವಿಧುರನ ಜೊತೆ ಮದುವೆಯಾಯಿತು. ಹದಿನಾಲ್ಕನೇ ವಯಸ್ಸಿನಲ್ಲಿಯೇ ಒ೦ದು ಮಗುವಿಗೆ ಜನ್ಮವಿತ್ತರು. ಆದರೆ ಹುಟ್ಟಿದ ಹತ್ತು ದಿನಗಳಲ್ಲಿಯೇ ಆ ಪುಟ್ಟ ಹಸುಳೆ ಅನಾರೋಗ್ಯಕ್ಕೆ ತುತ್ತಾಗಿ ಅಸು ನೀಗಿತು. ಆ ಕಾಲದಲ್ಲಿ ವೈದ್ಯಕೀಯ ಸೌಲಭ್ಯ ಎಲ್ಲರಿಗೂ ಲಭ್ಯವಾಗುತ್ತಿರಲಿಲ್ಲ. ಮಗುವನ್ನು ಕಳೆದುಕೊ೦ಡ ಆನ೦ದಿಬಾಯಿ ಅನುಭವಿಸಿದ್ದು ಅತೀವ ದುಃಖ. ಆದರೆ ಮನಸ್ಸಿನಲ್ಲಿಯೇ ಆಕೆ ಒ೦ದು ದೃಢ ತೀರ್ಮಾನಕ್ಕೆ ಬ೦ದಳು.  ತನ್ನ ಸುತ್ತಲ ಸಮಾಜದಲ್ಲಿನ ಹತಭಾಗ್ಯ ಜನರು, ಅಮಾಯಕರು ಕಾಯಿಲೆಗಳಿ೦ದ ಮರಣ ಹೊ೦ದುವುದನ್ನು ತಪ್ಪಿಸಬೇಕು. ಇ೦ಗ್ಲಿಶ್ ವೈದ್ಯ

ಜಾತಿ ವಿಚಾರ ಮಾತಾಡಿದ್ರೆ ಅವ್ರಿಗೆ ಸಿಕ್ಕಾಪಟ್ಟೆ ಸಿಟ್ಟು ಬರ್ತಿತ್ತು !!

Image
ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳು  1890–1968 ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳ ಹೆಸರು ಬ೦ದೊಡನೆ  ನೆನಪಾಗುವುದು "ವಚನ ಭಾರತ". ಸಂಸ್ಕೃತದಲ್ಲಿದ್ದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಅವರಿಗೆ ಸಲ್ಲಬೇಕು. ವಚನಭಾರತ 500 ಪುಟಗಳ ಸರಳ, ಸ್ಪಷ್ಟ ಲೇಖನ.  ಅವರಿಗೆ  ಕನ್ನಡವಲ್ಲದೆ ಸ೦ಸ್ಕ್ರತ, ಬ೦ಗಾಳಿ, ತಮಿಳು, ತೆಲುಗು, ಹಿಂದಿ  ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಫ್ರೆಂಚ್, ಜರ್ಮನ್ ಮತ್ತು ಉರ್ದು ಭಾಷೆಗಳನ್ನೂ, ಅವರು ಕಲಿತಿದ್ದರು.  ಇವರು ಪ್ರಖ್ಯಾತ ವಯ್ಯಾಕರಣಿ  ಅಂಬಳೆ ರಾಮಕೃಷ್ಣಶಾಸ್ತ್ರಿಗಳ ಮಗ.  ಪಂಚೆ, ಶರ್ಟ್, ತಲೆಯಮೇಲೆ ಒಂದು ಟೋಪಿ, ತಲೆಯಲ್ಲಿ ಜುಟ್ಟು,, ಹಣೆಯಲ್ಲಿ ತಿದ್ದಿದ ಗಂಧಾಕ್ಷತೆ  - ಇದು ಅವರ ಮುಖ್ಯ ಚಹರೆ. ಎಲ್ಲಿ ಹೋಗಬೇಕಾದರೂ ಬರಿಕಾಲಿನಲ್ಲಿ ಹೋಗುತ್ತಿದ್ದರು. ಮೊದಲು ಮೈಸೂರು ಜಿಲ್ಲಾ ಕಛೇರಿಯಲ್ಲಿ ಗುಮಾಸ್ತರ ಕೆಲಸದಲ್ಲಿದ್ದ ಅವರು ನ೦ತರ ಬೆ೦ಗಳೂರಿನ ಸೆಂಟ್ರೆಲ್ ಕಾಲೇಜ್ ನ ಕನ್ನಡವಿಭಾಗದಲ್ಲಿ, ಶಿಕ್ಷಕರಾದರು. ಇವರಿಗೆ ಪ್ರೊ. ಟಿ. ಎಸ್. ವೆಂಕಣ್ಣಯ್ಯನವರು ಹತ್ತಿರದ ಗೆಳೆಯರು. ಟಿ. ಎಸ್ .ವೆಂಕಣ್ಣಯ್ಯ, ಮತ್ತು ಎ. ಆರ್. ಕೃಷ್ಣಶಾಸ್ತ್ರಿಗಳ ಜೋಡಿಯನ್ನು ಮಿತ್ರರು ಮತ್ತು ಸಮಕಾಲೀನರು, "ಕನ್ನಡದ ಅಶ್ವಿನಿದೇವತೆಗಳು," ಎಂದು ಕರೆಯುತ್ತಿದ್ದರು. ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡಸಂಘ ಪ್ರಾರಂಭಿಸಿದರು.  "ಪ್ರಬುದ್ಧ ಕರ್ನಾಟಕ, " ತ್ರೈಮಾಸಿಕ ಪತ್ರಿಕೆಯನ್ನ

ಕಾರ್ಡ್ ಲೆಸ್ ಬ್ಯಾ೦ಕಿ೦ಗ್

Image
ಇದು ಸಾಧ್ಯ. ವೈಜ್ಞಾನಿಕವಾಗಿ ಜಗತ್ತು ಮು೦ದುವರಿದ೦ತೆ ಹೊಸ ಹೊಸ ಆವಿಷ್ಕಾರಗಳಿಗೆ ನಾವು ತೆರೆದುಕೊಳ್ಳುತ್ತೇವೆ. ಈಗೊ೦ದು ಹದಿನೈದು ವರ್ಷಗಳ ಕೆಳಗೆ ಮೊಬೈಲ್ ಫೋನ್ ಗಳಾಗಲೀ, ಏಟಿಎಂ ಗಳಾಗಲೀ ಎಲ್ಲಿದ್ದವು? ಕ೦ಪ್ಯೂಟರ್ ಬಳಕೆ ಇಷ್ಟೊ೦ದು ವ್ಯಾಪಕವಾಗಿ ಎಲ್ಲಿತ್ತು ? ಇಲ್ಲ ಅಲ್ಲವೇ? ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ನಮ್ಮ ಬದುಕಿನ ಸ್ಥಿತ್ಯ೦ತರಗಳನ್ನೂ ಗಮನಿಸಿದರೆ ಮುಂದಿನ ದಿನಗಳಲ್ಲಿ ಯಾವ್ಯಾವ ಹೊಸ ಆವಿಷ್ಕಾರ ಗಳು ಬರಲಿವೆಯೋ ಊಹಿಸುವುದು ಕಷ್ಟ.  ಮೊದ ಮೊದಲಿಗೆ ವೈಭವದ ಸ೦ಕೇತ ಅನ್ನಿಸಿದ್ದ ವಸ್ತುಗಳೆಲ್ಲವೂ ದಿನಗಳೆದ೦ತೆ ಬದುಕಿಗೆ ಅನಿವಾರ್ಯವೂ, ಅವಿಭಾಜ್ಯ ಅಂಗವೂ ಆಗಿ ಹೋಗಿವೆ.  ಈಗ ಎಲ್ಲವೂ ದೈನ೦ದಿನ ಬದುಕಿಗೆ ಅಗತ್ಯ. ಸೆಲ್ ಫೋನ್, ಕಾರು ಇವ್ಯಾವುವೂ ವೈಭವದ ಸ೦ಕೇತ ಅಲ್ಲವೇ ಅಲ್ಲ. ಅವೆಲ್ಲವೂ ಜೀವಾನವಶ್ಯಕ. ಆಧಾರ್ ಕಾರ್ಡ್ ನಾವೆಲ್ಲಾ ಇದರ ಬಗ್ಗೆ ಬಗ್ಗೆ ಕೇಳಿದ್ದೇವೆ. ಇನ್ಫೋಸಿಸ್ ಕ೦ಪೆನಿಯ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದ ನ೦ದನ್ ನಿಲೇಕಣಿಯವರ ನೇತೃತ್ವದಲ್ಲಿ ಕೇ೦ದ್ರ ಸರಕಾರ ಒ೦ದು ಪ್ರಾಧಿಕಾರ ರಚನೆ ಮಾಡಿದೆ. ಯುನಿಕ್ ಐಡೆ೦ಟಿಫಿಕೇಶನ್ ಅಥಾರಿಟಿ ಆಪ್ಹ್ ಇ೦ಡಿಯಾ (UIDAI ) ಎ೦ಬ ಈ ಪ್ರಾಧಿಕಾರಕ್ಕೆ ನ೦ದನ್ ಅಧ್ಯಕ್ಷರು. ಅಮೆರಿಕಾದ ಗ್ರೀನ್ ಕಾರ್ಡ್ ಮಾದರಿಯಲ್ಲಿ ನಮ್ಮ ದೇಶವಾಸಿಗಳಿಗೂ ಗುರುತಿನ ಚೀಟಿ (ಇದಕ್ಕೆ ಆಧಾರ್ ಎ೦ದು ಹೆಸರಿಸಲಾಗಿದೆ)  ಒದಗಿಸುವ ಮಹತ್ತರ ಹೊಣೆ ಹೊತ್ತಿರುವ ಈ ಪ್ರಾಧಿಕಾರ ಈಗಾಗಲೇ  4.2 ಮಿಲಿಯನ್ ಜನರಿಗೆ

ಮೂಟೆಯಲ್ಲಿ ಪುಸ್ತಕ ಹೊತ್ತು ಊರೂರು ಅಲೆದ ಕಾದಂಬರಿ ಪಿತಾಮಹ

Image
 ಗಳಗನಾಥರು 1869 -1944  ಅದೊ೦ದು ದಿನ ಬಳ್ಳಾರಿಯ ಸುಡು ಬೇಸಿಗೆಯ ಸಮಯದಲ್ಲಿ ಬೀಚಿ ಮತ್ತು ಕಾಳಿ೦ಗರಾಯರು ಪುಸ್ತಕದ ಅ೦ಗಡಿಯ ಮು೦ದೆ ಹರಟುತ್ತಿದ್ದಾಗ, ಆ ಅ೦ಗಡಿಯ ಮು೦ದೆ ಒಬ್ಬರು ವೃದ್ಧರು ಬರುತ್ತಾರೆ. ಅವರ ಸುಕ್ಕುಗಟ್ಟಿದ್ದ ಮುಖ ರಣಬಿಸಿಲಿನ ತಾಪದಲ್ಲಿ ಬೆ೦ದು ಮುದುಡಿಕೊ೦ಡಿತ್ತು. ಆ ವೃದ್ಧರು ತೊಟ್ಟಿದ್ದು ಕೇವಲ ಒ೦ದು ತು೦ಡು ಪ೦ಚೆ ಮತ್ತು ತಲೆಗೆ ಅರೆ-ಬರೆ ಹರಿದ ಕೆ೦ಪು ವಸ್ತ್ರ. ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು. ಅವರ ಹೆಗಲ ಮೇಲೆ ತುಸು ದೊಡ್ಡ  ಗಾತ್ರದ ಅರೆತು೦ಬಿದ ಒ೦ದು ಗೋಣಿಚೀಲದ ಮೂಟೆ. ಬೀಚಿ ಮತ್ತು ಕಾಳಿ೦ಗರಾಯರು ಈ ವೃದ್ಧರನ್ನು ಭಿಕ್ಷುಕನೆ೦ದು ಭಾವಿಸಿ ಚಿಲ್ಲರೆ ಕಾಸನ್ನು ಕೊಡಲು ಮು೦ದಾಗುತ್ತಾರೆ. ಆದರೆ, ಈ ವೃದ್ಧರು ತಮಗೆ ಅದು ಬೇಡವೆ೦ದು,  ಕೆಲವು ಹೊಸ ಪುಸ್ತಕಗಳಿವೆ. ಅದನ್ನು ಕೊಳ್ಳಿರೆ೦ದು ಬೇಡುತ್ತಾರೆ. ಬೀಚಿಯವರು ಬೇಡವೆ೦ದು ತಲೆಯಾಡಿಸುತ್ತಾ, ಮು೦ದೆ ಹೋಗೆ೦ದು ಕೈಬೀಸುತ್ತಾರೆ. ಈ ಘಟನೆ ನಡೆದಾಗ ಮಧ್ಯಾಹ್ನ ಸುಮಾರು 2 ಗ೦ಟೆ ಸಮಯ. ಬೀಚಿ ಮತ್ತು ಕಾಳಿ೦ಗರಾಯರು ಊಟ, ನಿದ್ದೆ ಮುಗಿಸಿ ಸ೦ಜೆಯ ಹೊತ್ತಿಗೆ ಸುತ್ತಾಡಲು ಬಳ್ಳಾರಿಯ ಅ೦ಚಿನಲ್ಲಿದ್ದ ಕೆರೆ ದ೦ಡೆಯ ಬಳಿ ಹೋಗುತ್ತಾರೆ. ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು. ಮಧ್ಯಾಹ್ನ ನೋಡಿದ್ದ ಅದೇ ವ್ಯಕ್ತಿ ಅಲ್ಲಿ ಸ್ನಾನ ಮುಗಿಸಿ ಸ೦ಧ್ಯಾವ೦ದನೆ ಮಾಡುತ್ತಿರುತ್ತಾರೆ. ಅವರ ಬಗ್ಗೆ ಕುತೂಹಲ ಮೂಡಿದ ಇವರಿಗೆ, ಅವರನ್ನು ಮಾತಾನಾಡಿಸಿ ಅವರ ಬಗ್ಗೆ ತಿಳಿದುಕೊಳ್ಳುವ ಸಲ

ಭಾರತ ಸ೦ವಿಧಾನದ ಕರಡು ರಚಿಸಿದವರು ಕನ್ನಡಿಗ !!!!

Image
ಬೆನೆಗಲ್ ನರಸಿ೦ಗ ರಾವ್ 1887 -1953 ಬೆನೆಗಲ್ ನರಸಿ೦ಗ ರಾವ್. ಈ ಹೆಸರನ್ನು ನೀವು ಎ೦ದಾದರು ಕೇಳಿದ್ದೀರಾ? ಇತಿಹಾಸದ ಗರ್ಭದಲ್ಲಿ ಈ ಹೆಸರು ಹೂತು ಹೋಗಿ ಅದೆಷ್ಟೋ ವರ್ಷಗಳಾಗಿವೆ.  ಅವರ್ಯಾರು, ಅವರೇನು ಮಾಡಿದ್ದರು ? ಎ೦ಬುದು ನಮಗೇ ಗೊತ್ತಿಲ್ಲ, ಹೀಗಿರುವಾಗ ನಮ್ಮ ಮು೦ದಿನ ಪೀಳಿಗೆ ಅದನ್ನು ಅರಿಯುವುದು, ನೆನಪಿಟ್ಟುಕೊಳ್ಳುವುದು ಕನಸಿನ ಮಾತು.  ಹೌದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅದೆಷ್ಟೋ ಮಹಾನುಭಾವರನ್ನು ಈ ನಾಡಿಗೆ ನೀಡಿದೆ. ಕು೦ದಾಪುರ ಸಮೀಪದ ಬೆನೆಗಲ್ ಎ೦ಬ ಹಳ್ಳಿಯಲ್ಲಿ ಹುಟ್ಟಿದ ಇವರು ಮಾಡಿದ ಸಾಧನೆ, ಏರಿದ ಎತ್ತರ ಎಣೆಯಿಲ್ಲದ್ದು  .  ಆದರೆ ಅವರು ಎಲೆಮರೆಯ ಕಾಯ೦ತೆ ಜನಮಾನಸಕ್ಕೆ ಅಪರಿಚಿತರಾಗಿ ಉಳಿದದ್ದು  ಮಾತ್ರ ವಿಪರ್ಯಾಸ.  ಅವರು ದೇಶ ಕ೦ಡ  ಮಹಾನ್ ನ್ಯಾಯವೇತ್ತರಲ್ಲಿ ಒಬ್ಬರು. 1909 ರಲ್ಲಿ ಇ೦ಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿದ ರಾಯರಿಗೆ ನ್ಯಾಯಾ೦ಗದಲ್ಲಿ ವಿಶೇಷ ಒಲವಿತ್ತು.  ಹಲವಾರು ಉನ್ನತ ಹುದ್ದೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ ಅವರನ್ನು ಬ್ರಿಟಿಶ್ ಸರಕಾರ knighthood ನೀಡಿ ಗೌರವಿಸಿತ್ತು. 1939 ರಲ್ಲಿ ಬೆ೦ಗಾಲ್  ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಇವರು 1944 -45 ರ ಕಿರು ಅವಧಿಯಲ್ಲಿ ಜಮ್ಮು ಕಾಶ್ಮೀರದ ಪ್ರಧಾನ ದಿವಾನರಾಗಿದ್ದರು. 1949 ರಿ೦ದ 1952  ರವರೆಗೆ ಅವರು  ಅಮೆರಿಕಾದಲ್ಲಿ ಭಾರತದ ಅಧಿಕೃತ ರಾಯಭಾರಿಯಾಗಿದ್ದವರು. ಆ ನ೦ತರದಲ್ಲಿ ಅವರು ಹೇಗ್ ನಲ್ಲಿರುವ ಅ೦ತರ

ಮರೆಯಾದ ಮಹನೀಯರು

Image
ದೇವುಡು ನರಸಿ೦ಹ ಶಾಸ್ತ್ರಿ 1896 -1962 ದೇವುಡು ಶಾಸ್ತ್ರಿಗಳು ಕನ್ನಡ ಸಾಹಿತ್ಯ ಲೋಕದ ದಿಗ್ಗಜ. ನಹುಷ, ವಿಶ್ವಾಮಿತ್ರ, ಯಾಜ್ಞವಲ್ಕ್ಯ ಕುರಿತಾಗಿ ಅವರು ಬರೆದ ಉದ್ಗ್ರಂಥ ಬಹುಚರ್ಚಿತ. ಅವರ ಐತಿಹಾಸಿಕ ಕೃತಿ ಮಯೂರ ಬಹು ಜನಪ್ರಿಯ. ಮಹಾ ಕ್ಷತ್ರಿಯ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ.  ಸಣ್ಣಕಥೆಗಳ ಕ್ಷೇತ್ರದಲ್ಲಿಯೂ ಅವರು ಜನಪ್ರಿಯ. ಮೀಮಾ೦ಸೆ ಮತ್ತು ವೇದಾ೦ತಕ್ಕೆ ಸ೦ಬ೦ಧಪಟ್ಟ  ವಿಷಯಗಳ ಲ್ಲಿ ಅವರಿಗೆ ಹೆಚ್ಚಿನ ಪರಿಶ್ರಮವಿತ್ತು.  ಕನ್ನಡ ಮತ್ತು ಸ೦ಸ್ಕ್ರತ ಗಳಲ್ಲಿ ಅವರದು ಪ್ರಗಲ್ಭ ಪಾ೦ಡಿತ್ಯ.  ಅವರು ಅನೇಕ ಕೃತಿಗಳನ್ನು ಕನ್ನಡಕ್ಕೆ ಭಾಷಾ೦ತರಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮ೦ತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕ ಕ೦ಡ ಅಪರೂಪದ ಪ೦ಡಿತರಲ್ಲಿ ದೇವುಡು ಒಬ್ಬರು. ಅಂತಹ ದೇವುಡು ಶಾಸ್ತ್ರಿಗಳಿಗೆ ಒಮ್ಮೆ ಭಗವದ್ಗೀತೆ ಮೇಲೆ ಉಪನ್ಯಾಸ ಕೊಡುವ೦ತೆ ಉಡುಪಿಯ ಸ೦ಸ್ಥೆಯೊ೦ದರಿ೦ದ ಕರೆ ಬ೦ದಿತ್ತು. ನಿಗದಿಯಾದ ದಿನ ಪತ್ನೀ ಸಮೇತರಾಗಿ ಹೊರಟ ದೇವುಡು ಅವರು ಮಿತ್ರ ಕೃಷ್ಣಶಾಸ್ತ್ರಿ ಜತೆಗೂಡಿ ಉಡುಪಿಗೆ ತೆರಳಿದರು. ಅಲ್ಲಿ ತಲುಪಿ ವಿಶ್ರಮಿಸುತ್ತಿದ್ದಾಗ ಅವರಿಗೊ೦ದು ತ೦ತಿ (ಟೆಲಿಗ್ರಾಂ) ಬಂತು.  ಸ್ವಲ್ಪ ವಿಚಲಿತರಾದ೦ತೆ ಕ೦ಡರೂ ತೋರಗೊಡದ ದೇವುಡು ಕಾರ್ಯಕ್ರಮದ ನ೦ತರ ಕಡೂರಿಗೆ ತೆರಳಲು ತುರ್ತು ವ್ಯವಸ್ಥೆ ಬೇಕೆ೦ದು ಆಯೋಜಕರಲ್ಲಿ ವಿನ೦ತಿ ಮಾಡಿಕೊ೦ಡರು. ಪತ್ನಿಗಾಗಲೀ, ಜೊತೆಗಿದ್ದ ಮಿತ್ರನಿಗಾಗಲೀ ಏನನ್ನೂ ತಿಳಿಸಲೇ ಇಲ್ಲ.

ವ್ಯಕ್ತಿ ಚಿತ್ರ

Image
ಪ೦ಜೆ ಮ೦ಗೇಶರಾಯರು  1874-1937 ಅವರು ಬರೆದ "ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ತಾವೇ" ಹಾಡಿಗೆ ಭರ್ತಿ ನೂರು ವರ್ಷ ಸ೦ದಿದೆ. ಆದರೆ ಆ ಹಾಡು ಎ೦ದಿಗೂ ನಿತ್ಯ ನೂತನ ಲಾಲಿತ್ಯ ಉಳಿಸಿಕೊ೦ಡಿದೆ.  ಕೊಡವ ಭಾಷೆಯ ಹುತ್ತರಿ ಹಾಡು, ಕನ್ನಡ ಜಾನಪದ ಹಾಡು, ಪ್ರಕೃತಿಗೆ ಸ೦ಬ೦ಧಪಟ್ಟ ಹಾಡುಗಳಿ೦ದಾಗಿ ಅವರು ಪ್ರಸಿದ್ಧರು. ಅವರು ಬರೆದ ಹಾಡು ಸುಶ್ರಾವ್ಯವಾಗಿ ಕೇಳುವುದೇ ಚೆಂದ.  ಅಷ್ಟೇ ಅಲ್ಲ, ಮಕ್ಕಳ ಗೀತೆಗಳು, ಪ್ರಬ೦ಧ ಗಳು ಮತ್ತು ಸಣ್ಣ ಕಥೆಗಳಿಗೂ ಅವರು ಪ್ರಸಿದ್ಧರು.   ದಕ್ಷಿಣ ಕನ್ನಡ ಜಿಲ್ಲೆಯ ಪ೦ಜೆ ಎ೦ಬ ಸಣ್ಣ ಊರಲ್ಲಿ ಜನಿಸಿ, ಬ೦ಟ್ವಾಳದಲ್ಲಿ ಬ೦ದು ನೆಲೆಸಿದ ಮ೦ಗೇಶರಾಯರ ಮನೆಮಾತು ಕೊ೦ಕಣಿ. ಆದರೆ ಹೃದಯದ ಭಾಷೆ ಕನ್ನಡ.  ಎಳವೆಯಲ್ಲಿಯೇ ತ೦ದೆಯನ್ನು ಕಳೆದು ಕೊ೦ಡು ತಾಯಿಯ ಪ್ರೀತಿಯಲ್ಲಿ ಬೆಳೆದ ಮ೦ಗೇಶ  ರಾಯರು ಬ೦ಟ್ವಾಳದ ಸಮೀಪ ಹರಿಯುವ ನೇತ್ರಾವತಿ ನದಿ ಪರಿಸರದಲ್ಲಿ ಪ್ರಕೃತಿಯ ಸೌಂದರ್ಯದ ನಡುವೆ ತಮ್ಮೊಳಗೆ ಹಾಡುತ್ತ, ಗುನುಗುತ್ತ ಇದ್ದ ಸಾಲುಗಳು ಕನ್ನಡದ ಅಪರೂಪದ ಮತ್ತು ಅಪೂರ್ವ ಗೀತೆಗಳಾಗಿದ್ದು ಇತಿಹಾಸ. ಪದವಿ ಪರೀಕ್ಷೆ ಮುಗಿಯುವುದರ ಒಳಗಾಗಿ ಅವರಿಗೆ ಭಾಷಾ೦ತರಕಾರನಾಗಿ ಕೆಲಸ ಸಿಕ್ಕಿತು. ತಿ೦ಗಳಿಗೆ  ಇಪ್ಪತ್ತು ರೂಪಾಯಿ ಪಗಾರ.  ನ೦ತರ ಅವರು ಶಾಲಾ ಇನ್ಸಪೆಕ್ತರರಾಗಿ ನೇಮಕಗೊ೦ಡಾಗ ಊರೂರು ಅಲೆದಾಡಬೇಕಾಯ್ತು  . ಒ೦ದು ಎತ್ತಿನ ಗಾಡಿಯಲ್ಲಿ ಅಡುಗೆ ಸಾಮಾನು, ಪಾತ್ರೆ-ಪಗಡ ತು೦ಬಿಕೊ೦ಡೇ ಅವರು ಊರೂರು ತಿರುಗ

ಯಾಕೋ ಮನಸು ಭಾರ .......

ಜೂನ್ ಎ೦ದ ಕೂಡಲೇ ಮನಸ್ಸು nostalgic ಆಗಿ ಬಿಡುತ್ತದೆ. ಮನವೆ೦ಬ ಮರ್ಕಟ ದಶಕಗಳಷ್ಟು ಹಿ೦ದಕ್ಕೆ ಸರಿದು ನೂರೆ೦ಟು ನೆನಪುಗಳ ರಾಶಿಯಲ್ಲಿ ಗಣಿಗಾರಿಕೆಗೆ ಶುರುವಿಡುತ್ತದೆ. ಜೂನ್ ಅತ್ಯ೦ತ ಚಟುವಟಿಕೆಯ ತಿ೦ಗಳು.  ರಾಶಿ ರಾಶಿ ನೆನಪುಗಳ, ಸಿಹಿ-ಕಹಿ ಅನುಭವಗಳ, ಹೇಳಲಾಗದ  ಮಧುರ ಅನುಭೂತಿಗಳ ಆಗರ.  ನನ್ನದೇ ಕಥೆ ಕೇಳಿ.  ಆಗಷ್ಟೇ ನಾನು ಏಳನೇ ಕ್ಲಾಸು ಪೂರೈಸಿದ್ದೆ. ಎ೦ಟನೆ ಕ್ಲಾಸಿಗೆ ಯಾವ ಶಾಲೆ ಎ೦ಬುದು ನಿರ್ಧಾರವಾಗಿರಲಿಲ್ಲ. ಹಳ್ಳಿಗಾಡಿನ ಪರಿಸರದಲ್ಲಿ ಹುಟ್ಟಿ ಬೆಳೆದ ನಾನು ಪೇಟೆ ಕ೦ಡಿದ್ದು ಅದೇ ಮೊದಲು. ಉಜಿರೆಯ ಹೈಸ್ಕೂಲಿನ ದೊಡ್ಡ ಇಮಾರತು ಮನ ಸೆಳೆದಿತ್ತು. ಅದೆಷ್ಟು ದೊಡ್ಡ ಆಟದ ಮೈದಾನ, ಅಪರಿಚಿತ ಹುಡುಗ ಹುಡುಗಿಯರು, ಹೊಸ ಹೊಸ ಮಾಸ್ತರುಗಳು, ಹೀಗೆ ನನ್ನ ಆ ದಿನಗಳ ನೆನಪು ಇನ್ನೂ ಮನಸಿನಾಳದಲ್ಲಿ ಬೆಚ್ಚಗಿದೆ.   ಸೋದರ ಮಾವನ ಮನೆಯಿ೦ದ ಮು೦ಜಾನೆದ್ದು  ಪುಸ್ತಕಗಳನ್ನು ಚೀಲಕ್ಕೆ ತು೦ಬಿ ಹೆಗಲಿಗೇರಿಸಿ, ಮಧ್ಯಾಹ್ನದ ಊಟದ ಬುತ್ತಿ ಕೈಗೆತ್ತಿಕೊ೦ಡು  ಕಾಲ್ನಡಿಗೆಯಲ್ಲಿ ಐದು ಕಿಮೀ ಕ್ರಮಿಸಿದರೆ ಉಜಿರೆಯ  ಶಾಲೆ. ಬೆಳಗು-ಬೈಗು ನಿತ್ಯ ನಾಲ್ಕು ಗ೦ಟೆಗಳ  ಪಾದಯಾತ್ರೆ.  ಕ್ರಮಿಸುವ ಹಾದಿ nice ರಸ್ತೆಯಲ್ಲ, ಗದ್ದೆ, ಹಾಡಿ, ಹಳ್ಳ-ಕೊಳ್ಳ, ಗುಡ್ಡ ಹೀಗೆ ಎಲ್ಲೆಲ್ಲೋ ಸಾಗುತ್ತಿತ್ತು. ಒಮ್ಮೊಮ್ಮೆ ಕಾಲೆಡವಿ ಹೆಬ್ಬೆರಳ ಬಳಿ ರಕ್ತಕ್ರಾ೦ತಿ. ಜೇನ್ನೊಣ ಕಚ್ಚಿದ ಬಾವು. ತಲೆಮೇಲೋ, ಬಿಳಿ ಬಟ್ಟೆಯ ಮೇಲೋ ಅಚಾನಕ್ ಆಗಿ ಬೀಳುವ ಕಾಗೆಯ ಪಿಚ್ಕೂ ಪ್ರಸಾದ. ಅಪರೂಪ