Posts

Showing posts from May, 2011

ಮರೆಯಾದ ಮಹನೀಯರು

Image
ನಮ್ಮ ನಾಡು ಅದೆಷ್ಟೋ  ಮಹಾಮಹಿಮರ ತವರು ಎ೦ಬುದು ನಮಗೇ ಗೊತ್ತಿಲ್ಲ. ತಮ್ಮ ಬಗ್ಗೆ ತಾವೇ ತುತ್ತೂರಿ ಊದಿಕೊಳ್ಳುವ ಮ೦ದಿ ಕೆಲಕಾಲ ಮಾತ್ರ ಪ್ರಚಾರದಲ್ಲಿ ಉಳಿಯುತ್ತಾರೆ. ಅದು ಅಶಾಶ್ವತ.  ಆದರೆ ಇನ್ನು ಕೆಲವು ಮಂದಿ ಯಾವುದೇ ಪ್ರಚಾರ ಇಲ್ಲದೆಯೂ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಗಳಿಸಿಕೊಳ್ಳುತ್ತಾರೆ, ಅದು ಅವರ ಮಹಾನತೆ.  ನಮ್ಮ ನಾಡು-ನುಡಿಯನ್ನು ಕಟ್ಟುವಲ್ಲಿ ನಿಸ್ಪ್ರಹತೆಯಿ೦ದ ಕೆಲಸ ಮಾಡಿದ ಅದೆಷ್ಟೋ ಮಂದಿಯನ್ನು ನಾವು ಮರೆತಿದ್ದೇವೆ. ಅವರ ನೆನಪು ನಮಗೆ ಸ್ಪೂರ್ತಿಯಾಗಬೇಕು, ಅವರ ಕೃತಿ ನಮಗೆ ಮಾರ್ಗದರ್ಶಿಯಾಗಬೇಕು. ಆದರೆ ಅದಾಗುತ್ತಿಲ್ಲ, ಏಕೆ೦ದರೆ ನಮ್ಮ ಧಾವಂತದ ಬದುಕಿಗೆ ಅದು ಬೇಕಿಲ್ಲ. ಮಹಾ ಮೇಧಾವಿಗಳು, ಪ್ರಖರ ಪಾ೦ಡಿತ್ಯ ಹೊ೦ದಿದ್ದ ಮಹನೀಯರು ಬಾಳಿ ಬದುಕಿದ ನೆಲವಿದು. ಅಂಥವರಲ್ಲಿ ಒಬ್ಬರು ಈ ಶಾಮಾ ಶಾಸ್ತ್ರಿಗಳು. ಮೈಸೂರಿನ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಒಮ್ಮೆ ಜರ್ಮನಿ ಪ್ರವಾಸದಲ್ಲಿದ್ದರು. ತಮ್ಮ ಪ್ರವಾಸದ ಭಾಗವಾಗಿ ಜರ್ಮನ್ ವಿಶ್ವವಿದ್ಯಾಲಯದ ಉಪಕುಲಪತಿಯವರನ್ನು ಮಹಾರಾಜರು ಭೇಟಿಯಾಗುವುದಿತ್ತು. ಉಪಕುಲಪತಿಯನ್ನು ಭೇಟಿ ಮಾಡಿ ತಮ್ಮ  ಪರಿಚಯ ಅರುಹಿದ ಮಹಾರಾಜರಿಗೆ ಅಚ್ಚರಿ ಕಾದಿತ್ತು.  Are you from Shama shastry 's Mysore ? ಎ೦ದು  ಆ ಜರ್ಮನ್ ಮಹಾಶಯ ಮಹಾರಾಜರನ್ನು ಪ್ರಶ್ನಿಸಿದರ೦ತೆ.  ಮಹಾರಾಜರು ಒಮ್ಮೆ ಅವಾಕ್ಕಾದರು. ಹೌದು ಎನ್ನದೆ ಗತ್ಯ೦ತರವಿರಲಿಲ್ಲ.   ಆದರೆ ಯಾರು ಈ ಶಾಮಾ ಶಾಸ್ತ್ರ

ಕಳಚಿದ ಕೊ೦ಡಿ

ಕನ್ನಡದ ಉದ್ದಾಮ ಕವಿ-ಸಾಹಿತಿಗಳಲ್ಲಿ ಬಹುತೇಕ ಮ೦ದಿ ಕೊನೆಯುಸಿರಿನ ತನಕವೂ ಆರ್ಥಿಕಬಡತನವೆ೦ಬ ಪೆಡ೦ಭೂತವನ್ನು ತಮ್ಮ  ಬಗಲಲ್ಲಿ ಕಟ್ಟಿಕೊ೦ಡೇ ಏಗಿದವರು.  ಆದರೆ ತಮ್ಮ ಪ್ರತಿಭೆಯಿ೦ದ, ಹೃದಯವ೦ತಿಕೆಯಿ೦ದ ಮತ್ತು ಸೇವಾ ಮನೋಭಾವನೆಯಿ೦ದ ಜನಮಾನಸದಲ್ಲಿ ಬಹುಕಾಲ ಉಳಿದವರು. ಅ೦ಥವರು ದುರ್ಬೀನು ಹಾಕಿ ಹುಡುಕಿದರೂ ಇ೦ದು ಸಿಗುವುದು ದುರ್ಲಭ.  ಅದರಲ್ಲೂ ಕನ್ನಡ ಸಾರಸ್ವತ ಲೋಕದ ಗುರು-ಶಿಷ್ಯ ಪರ೦ಪರೆ ಅದ್ವಿತೀಯ. ತೀನ೦ಶ್ರೀಯವರ ಶಿಷ್ಯ ಪುತಿನರಸಿ೦ಹಾಚಾರ್ ಆಗಿದ್ರು. ಅವರಿಬ್ಬರ ನಡುವಣ ಗುರು-ಶಿಷ್ಯ ಸ೦ಬ೦ಧ ಹೇಗಿತ್ತೆ೦ದರೆ ಶಿಷ್ಯನನ್ನು ಪೊರೆದು ಪೋಷಿಸಿ ಬೆಳೆಸಲು ಗುರು ಸದಾ ಸಿದ್ಧರಿರುತ್ತಿದ್ದರು. ಇವರಿಬ್ಬರೂ ಆ೦ಗ್ಲಭಾಷೆಯಲ್ಲಿ ಪ್ರಕಾ೦ಡ ಪಾ೦ಡಿತ್ಯ ಹೊ೦ದಿದ್ದ ವಿದ್ವಾ೦ಸರು,ಆದರೆ ಇಬ್ಬರೂ ಬರೆದದ್ದು ಕನ್ನಡದಲ್ಲೇ !!  ಪುತಿನ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಇ೦ಗ್ಲಿಶ್ ಪ್ರೊಫೆಸರ್ ಆಗಿದ್ದಾಗ ಅದೇ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದ  ಎಸ್.ರಾಧಾಕೃಷ್ಣನ್ ಅವರ ಸಹೋದ್ಯೋಗಿ. ಇಬ್ಬರಿಗೂ ಅತ್ಯುತ್ತಮ ಸ್ನೇಹವಿತ್ತು. ಮು೦ದೆ  ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಯಾಗಿ  ನ೦ತರ ರಾಷ್ಟ್ರಪತಿಯಾದರೂ ಕೂಡ ಅವರಿ೦ದ ಯಾವುದೇ ಸಹಾಯ, ನೆರವಿನ ನಿರೀಕ್ಷೆಯನ್ನು ಪುತಿನ ಮಾಡಲಿಲ್ಲ. ಪುತಿನ ಅವರು ನಿವೃತ್ತಿಯ ನ೦ತರ ಬಹಳ ಬಡತನದ ದಿನಗಳನ್ನು ಅನುಭವಿಸಿದ್ದರು. ಅವರನ್ನು ಸಮೀಪದಿ೦ದ ಬಲ್ಲವರಿಗೆ ಮಾತ್ರ ಅದು ಗೊತ್ತಿತ್ತು.   ಇನ್ನು ಡಿ

ಬೆ೦ಡೆಕಾಯಿ ಪಲ್ಯ -vs - ಚಿಕನ್ ಪಲಾವ್

ಓದುವ ಹವ್ಯಾಸ ಮನಸಿನ ಆರೋಗ್ಯವನ್ನು  ತಹಬ೦ದಿಯಲ್ಲಿಡುವುದರ ಜೊತೆಗೆ ವ್ಯಕ್ತಿಗತವಾಗಿ ಇರುವ ಅನ್ಯಮನಸ್ಕತೆಯನ್ನು ತೊಡೆಯುವಲ್ಲಿ ಹೆಚ್ಚು ಸಹಕಾರಿ.  ಅ೦ತೆಯೇ ಒ೦ದು ಆರೋಗ್ಯವ೦ತ ಪತ್ರಿಕೆ ಒಬ್ಬನ ವ್ಯಕ್ತಿತ್ವವನ್ನು ರೂಪಿಸಬಲ್ಲುದು, ಅವನಲ್ಲಿ ವೈಚಾರಿಕತೆಯನ್ನು ತು೦ಬಬಲ್ಲುದು ಎ೦ಬುದು ನನ್ನ ನ೦ಬಿಕೆ.  ನನಗೆ ಮೀಸೆ ಮೂಡುವ ಹೊತ್ತಿಗೆ ಪತ್ರಿಕೆಗಳ ಗೀಳು ತು೦ಬ ಹಚ್ಚಿಕೊ೦ಡಿದ್ದೆ.  ಪಿಯುಸಿ ಮುಗಿಸಿದ ನ೦ತರ ಬೇರೆಯವರ೦ತೆ ಕಾಲೇಜಿಗೆ ಹೋಗುವುದು ನನ್ನ ಹಣೆಯಲ್ಲಿ ಬರೆದಿರಲಿಲ್ಲ. ಹಾಗಾಗಿ ಹದಿನೆ೦ಟರ ವಯಸ್ಸಿನಲ್ಲಿಯೇ ಜಾಬ್ ಟೈಪಿ೦ಗ್ ಎ೦ಬ ಸ್ವ-ಉದ್ಯೋಗದೊ೦ದಿಗೆ ದುಡಿಮೆಗೆ ಬಿದ್ದೆ. ನಮ್ಮಪ್ಪ ಏನಾದರೂ ಕಾಲೇಜಿಗೆ ಕಳುಹಿಸಿದ್ದರೆ ಕೆಟ್ಟ ಅಭ್ಯಾಸಗಳನ್ನು ಮೈಗೂಡಿಸಿಕೊ೦ಡು ಕೆಟ್ಟು ಹೋಗುತ್ತಿದ್ದೆನೋ ಅಥವಾ ಸುಸೂತ್ರವಾಗಿ ಓದು ಮುಗಿಸಿ ಇನ್ಯಾವುದಾದರೂ ಉದ್ಯೋಗ ಹಿಡಿದು ಇನ್ನೆಲ್ಲೋ ಇರುತ್ತಿದ್ದೇನೋ? ಇದು ಉತ್ತರ ಸಿಗಲಾರದ  ಪ್ರಶ್ನೆ. ಅವರು ಹಾಗೆ ಮಾಡಿದ್ದು ಬಹುಶಃ ಒಳ್ಳೆಯದೇ ಆಯಿತೆನಿಸುತ್ತದೆ. ನನಗೆ ಜೀವನದ ಪಾಠ ಬಯಲು ವಿಶ್ವವಿದ್ಯಾಲಯದಲ್ಲಿ ಸಿಗತೊಡಗಿತು. ಬಗೆಬಗೆಯ ಜನರೊ೦ದಿಗೆ ಒಡನಾಡುವ ಅವಕಾಶ ದಕ್ಕಿತು. ಕಾಲೇಜಿಗೆ ಹೋಗಿದ್ದರೆ ನಾಲ್ಕು ಗೋಡೆಗಳ ನಡುವೆ, ಅದೇ ರಾಗ ಅದೇ ಹಾಡು ಎ೦ಬ೦ತೆ ಜೀವನದ ಹಾದಿಗೆ ಬೆಳಕು ತೋರದ ಪಠ್ಯ ವಿಷಯಗಳಲ್ಲಿ ಕಳೆದು ಹೋಗುತ್ತಿದ್ದೆ ಎ೦ದೆನಿಸುತ್ತದೆ.   ಹಾಗೆ ಜೀವನರ೦ಗ ಪ್ರವೇಶ ಪಡೆದ ನನ್ನನ್ನು ಹಲವು ಪತ್ರಿಕೆಗಳು ಆಕರ್ಷಿ

ಇರುಳ ಚೆಲುವು

Image
ವಿಲಿಯಂ ವರ್ಡ್ಸ್ ವರ್ತ್ ನ ಒ೦ದು ಆ೦ಗ್ಲ ಕವನ(A Night-Piece)ವನ್ನು  ಕನ್ನಡೀಕರಿಸಿದ್ದೇನೆ.(ಇದು ಭಾವಾನುವಾದ)  ಹೇಗಿದೆಯೋ ಗೊತ್ತಿಲ್ಲ, ನೋಡಿ ಹೇಳಿ. ಆಗಸದಲಿ  ಮೋಡವದು ಮಾಡಿದೆ ಮೋಡಿ ಕೈಗೆಟಕುವ ಸನಿಹದಲ್ಲಿ ಅದರ೦ದವ ನೋಡಿ  ಚಂದ್ರನ೦ತೆ ಬಿಳುಪಾಗಿದೆ  ದಟ್ಟ ಗಾಢ  ಮೋಡ ಭೂಮಿ ಬಾನಿನ  ನಡುವೆ ಮುಸುಕಿನ ಗುದ್ದಾಟ ಮೋಡ ಸೀಳಿ ವೃತ್ತದಲ್ಲಿ  ಮಂದ ಬೆಳಕು ಚೆಲ್ಲಿದೆ ಧರಣಿ ನೆರಳ  ಮರೆಯಲ್ಲಿ  ಲುಪ್ತವಾಗಿ  ಅಡಗಿದೆ   ಗಿಡಮರ ಗಿರಿ ಕಲ್ಲುಗಳವು ಎಲ್ಲೆಡೆಯೂ ಗೋಚರ ಹೊಸ ಹೊಳಪಲಿ ನಲಿಯುತಿದೆ ಸಕಲ  ಚರಾಚರ ನಡೆದಾಡುವ ಪಥಿಕನಲ್ಲಿ ತು೦ಬಿದೆ ಹೊಸ ಬೆರಗು   ಭೋರ್ಗರೆಯುವ ಮಳೆಯು  ತ೦ತು ಸ೦ತಸದ ಗುನುಗು  ಭೂಮಿಗೆ ಬಾನು ಈ ಜಗದಲಿ ಎ೦ದಿಗೂ ಸನ್ಮಿತ್ರ ನೀರ ಬಿ೦ಬದಲ್ಲಿ  ಇಹುದು ಚಂದ್ರತಾರೆ ಚಿತ್ರ ಕಲ್ಪನೆಯ ದೋಣಿಯಲ್ಲಿ ನೀರ ಮೇಲೆ ತೇಲಿ ನೀರ ಕನ್ನಡಿಯ ಅಸ೦ಖ್ಯ ತಾರೆಗಳನು ಮೀರಿ ಹುಟ್ಟುಹಾಕಿ ನಗುತ ನಗುತ ಸಾಗುತಿಹಳು ಬಾಲೆ ಅವಳ ಮನದ ಖುಷಿಯಲ್ಲಿ ಮಿನುಗಿದೆ ಭಾವದಲೆ ಗಿರಿಕ೦ದರ ಕೊರಕುಗಳಲಿ ಬೀಸಿದೆ ಸುಳಿಗಾಳಿ ಸೊಯ್ಯೆ೦ದು ತು೦ಬಿಹುದು ತಣ್ಣನೆ ಚಳಿಗಾಳಿ ಮೋಡದೊಡಲು ಬಗೆದು ನೀರಕೋಡಿ ಹರಿದು ಭೂಮಿಬಾನು ಹಗುರವಾಯ್ತು ತಾಪವನ್ನು ಕಳೆದು ಇಳೆಗೆ ಸುರಿದ ನೀರು ಹರಿದು ಹಳ್ಳಕೊಳ್ಳ ತುಂಬಿ ಜೀವಚರದ ಬಿಳಲುಗಳಲಿ ಜೀವಜಲದ ಬಿ೦ದಿ ಚಂದ್ರತಾರೆ ಮಿಂದು ಶುಭ್ರವಾಯಿತಲ್ಲಿ ಬಾನು ತ೦ಪು ತ೦ಪು ಇರುಳಲ್ಲಿದೆ ಸ೦ತಸದ ಜೇನು        ಚಿ