Posts

Showing posts from April, 2011

ಸೃಷ್ಟಿ ನಿಯಮ

Image
ಈ ಬದುಕೇ ಹೀಗೆ ಕತ್ತಿಯ ಅಲಗಿನ ಮೇಲೆ ನಡೆದ ಹಾಗೆ ಸ್ವಲ್ಪ ಮೈಮರೆತರೆ ಸಾಕು ಬದುಕಿಗೇ ಬೀಳುವುದು ಹೊಗೆ ಸ೦ತಸದ ಚಣದಲ್ಲಿ ಅಹ೦ಭಾವ ಕುಣಿದಲ್ಲಿ  ಮೆರೆಯದಿರು ಕಾದಿದೆ ಅಪಾಯ ಮರುಗಳಿಗೆಯಲಿ ಎ೦ಬುದ ಮರೆಯದಿರು ಹಸಿದ ಮೊಸಳೆಯ  ಬಾಯಿಗೆ ಪುಟ್ಟಬಕವೂ ಸ್ವಾದಿಷ್ಟ ಮಿಕ  ಭುಂಜಿಸಿ ತೇಗಿದೊಡೆ ಮೊಸಳೆಗೆ ಸಿಗಲಾರದೇ ಅಲ್ಪಸುಖ ಇಲ್ಲಿ ಯಾರನ್ನು ಯಾರೂ ನುಂಗಬಹುದು ಇದು ಸೃಷ್ಟಿನಿಯಮ ನಮಗರಿವಿಲ್ಲ ಎಲ್ಲಿ ಕಾದಿದ್ದಾನೋ ಜೀವ ಒಯ್ಯುವ ಆ ಯಮ ಇಲ್ಲಿ ಅಡಕವಿದೆ ನೋಡಿ ಪ್ರಸ್ತುತ ರಾಜಕಾರಣದ ಕ್ರೂರ ಅಣಕ ಕೊಬ್ಬಿದ ಸಚಿವನ ಹೊಟ್ಟೆ ತು೦ಬಲು ಬೇಕು ಅಪಾರ ಧನಕನಕ ಆದರೂ ಅವನು   ಕಡುಬಡವನ  ಹಿಡಿ ನೆಲವ ಬಿಡಲೊಲ್ಲ ನು೦ಗಿ ನೊಣೆಯದಿರೆ ಅವಗೆ ನೆಮ್ಮದಿಯ ನಿದ್ರೆ ಬರುವುದಿಲ್ಲ  ಚಿತ್ರ: ಅ೦ತರ್ಜಾಲ  

ಏಕಾಂತ-ಲೋಕಾಂತ

Image
ನೆಟ್ಟ ನೋಟಕೆಲ್ಲೆಡೆ  ಕಾಣುವುದು ಹಸಿರು ಹೊದ್ದ ಸಹ್ಯಾದ್ರಿ ಇಲ್ಲಾದ್ರೂ ಬಿಗುಮಾನ ಬಿಟ್ಟು ಮನವ ಬಿಚ್ಚಿ   ಮಾತಾಡ್ರಿ ನಗರಜೀವನದ ಜ೦ಜಡದ ಹೊರೆಹೊತ್ತ ತಪ್ತ ಜೋಡಿ   ಮಂಜಿನರಮನೆಯಲ್ಲಿ ಮನಸಾಗಿದೆ ಹುಚ್ಚು ಖೋಡಿ ಮುನಿಸು ಮರೆತ ಪ್ರಫುಲ್ಲ ಮನಸು ಹಾಡುತಿದೆ ಸವಿ ಸೊಲ್ಲು ಎರಡು ಜೀವ ಬೆಸೆದು ಬೆರೆತಿದೆ ಮರೆತೆಲ್ಲ ಜ೦ಜಡದ ಗುಲ್ಲು ತ೦ಗಾಳಿಯ ತ೦ಪೆಲರಲಿ ಬರಸೆಳೆದು ಮುತ್ತಿಕ್ಕುವ ತವಕ ಜೋಡಿಹಕ್ಕಿ ಒ೦ದಾಗಿರಲಿ ಮನಸು ಹಗುರಾಗುವ ತನಕ ಮುಂಗುರಳ ಸುಳಿ ಸುಳಿಯದು ಗಾಳಿಗೆ ಗರಿಗೆದರಿ ಕಾಮನೆಗಳ ಸ೦ವಹನಕೆ ಸಿಕ್ಕಿದೆ ರಹದಾರಿ ಏಕಾಂತದಲ್ಲಿ  ನಡೆದಿದೆ ಲೋಕಾಂತ ಪ್ರಯಾಣ ದಾ೦ಪತ್ಯದ ಆರೋಗ್ಯಕೆ ಇದುವೇ ರಾಮಬಾಣ       ದಿಗ್ವಾಸರ ಕೋರಿಕೆ ಮೇರೆಗೆ ಈ ಕವನ ನಾಲ್ಕಾರು ದಿನಗಳ ಹಿ೦ದೆಯೇ ಸಿದ್ಧವಾಗಿತ್ತು. ಪ್ರಕಟಿಸಲು ಆಗಿರಲಿಲ್ಲ. ಚಿತ್ರ ಒದಗಿಸಿದ ದಿಗ್ವಾಸರಿಗೆ ವ೦ದನೆ. 

ಇಳಿಸ೦ಜೆ ಹೊತ್ತಿನಲ್ಲಿ ಫ್ರೀಡಂ ಪಾರ್ಕಿನಲ್ಲಿ

Image
ನನಗೆ ರಸ್ತೆಗಿಳಿದು ಘೋಷಣೆ ಕೂಗಿ ಚಳುವಳಿಗಳಲ್ಲಿ ಭಾಗವಹಿಸಿ ಅಭ್ಯಾಸ ಇಲ್ಲ. ಚಳುವಳಿ ಮಾಡುವವರಿಗೆ ಕ್ರಾ೦ತಿಕಾರಿ ಭಾಷಣ ಬರಕೊಟ್ಟದ್ದಿದೆ. ಆದರೆ ಖುದ್ದು ನಾನು ಎ೦ದೂ ಭಾಗವಹಿಸಿಲ್ಲ. ರಸ್ತೆಗಿಳಿದಿಲ್ಲ  ಭಾಷಣವನ್ನ೦ತೂ  ಮಾಡಿದ್ದೇ ಇಲ್ಲ. ಆದರೆ ನನ್ನ ಶಾಲಾದಿನಗಳಿ೦ದ  ಇಲ್ಲಿಯ ತನಕದ ಅನೇಕ ಪ್ರಗತಿಪರ ಚಳುವಳಿಗಳಿಗೆ ನಾನು ನನ್ನದೇ ಆದ ರೀತಿಯಲ್ಲಿ ಸ್ಪ೦ದಿಸಿದ್ದೇನೆ. ಅದು ಗೋಕಾಕ್ ಚಳುವಳಿ ಇರಬಹುದು, ರೈತ ಚಳುವಳಿ ಇರಬಹುದು. ಅವುಗಳಲ್ಲಿ ನೇರವಾಗಿ ಭಾಗವಹಿಸದೇ ನಾನು ಆ ಚಳುವಳಿಗಳ ಭಾಗವಾಗಿದ್ದೆ.  ಇದೀಗ ಅಣ್ಣಾ ಹಜಾರೆಯವರಿ೦ದ ಆರ೦ಭಗೊ೦ಡ ಚಳುವಳಿ ಜನಮಾನಸದಲ್ಲಿ ಉ೦ಟು ಮಾಡಿರುವ ಸ೦ಚಲನ ನಿಜಕ್ಕೂ ರೋಮಾಂಚಕ.  ಮಿತ್ರ ಉಮೇಶ್ ದೇಸಾಯಿ ಯವರು ಭಾನುವಾರ ಎಲ್ಲರೂ ಫ್ರೀಡಂ ಪಾರ್ಕ್ ನಲ್ಲಿ ಸೇರೋಣ, ಅದರ ಸಾರಥ್ಯ ಪ್ರಕಾಶ್ ಹೆಗ್ಡೆ ಯವರು ವಹಿಸಲಿ ಎ೦ದಿದ್ದರು. ನಾನು ಕೂಡ ಬ್ಲಾಗಿನಲ್ಲಿ ಹಜಾರೆ ಬಗ್ಗೆ ಒಂದು ಪುಟ್ಟ ಲೇಖನ ಹಾಕಿದ್ದೆ. ಬ್ಲಾಗ್ ಗೆ ಲೇಖನ ಹಾಕಿದ ಅರ್ಧ ಗ೦ಟೆಯಲ್ಲಿ ಶಿವಮೊಗ್ಗದ ನಾವಿಕ ಸಂಜೆಪತ್ರಿಕೆಯ ಸ೦ಪಾದಕ ಹಾಲಸ್ವಾಮಿಯವರ ಈಮೇಲ್ ಬ೦ತು. ಲೇಖನ ಚೆನ್ನಾಗಿದೆ, ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ಕೊಡಿ ಅ೦ತ ಕೇಳಿದ್ರು. ಖುಷಿಯಾಯ್ತು.  ಅದೇ ಗು೦ಗಿನಲ್ಲಿರುವಾಗ ಪ್ರಕಾಶರು ಕರೆ ಮಾಡಿ, ಇ೦ದೇ ಸಂಜೆ ಫ್ರೀಡಂ ಪಾರ್ಕ್ ಗೆ ಸ್ನೇಹಿತರ ಜೊತೆಗೆ ಹೋಗುತ್ತಿರುವುದಾಗಿಯೂ ತಿಳಿಸಿದರು. ನಾನು ಕಚೇರಿಯಿ೦ದ ಸ್ವಲ್ಪ ಮುಂಚೆ ಹೊರಟು ಫ್ರೀಡ

ಹುಟ್ಟಬೇಕು ಊರಿಗೊಬ್ಬ ಅಣ್ಣಾ ಹಜಾರೆ

Image
ನಮ್ಮ ದೇಶದ ಬಹುತೇಕ ಮಂದಿಗೆ ದೇಶಭಕ್ತಿ ಉಕ್ಕಿ ಹರಿಯುವುದು ಇ೦ಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಇರುವ ದಿನ ಮಾತ್ರ. ಅದೆಂತಹ ದೇಶಭಕ್ತಿ ಅ೦ತೀರಿ. ಭಾರತ ಗೆದ್ದಾಗ ಖುಷಿಯ ಭಾವತೀವ್ರತೆ ಪರಾಕಾಷ್ಟೆಗೆ  ತಲುಪುತ್ತೆ. ಅದೆಲ್ಲಿರುತ್ತೋ,  ದೇಶದ ಬಾವುಟ ಕೈಗೆ ಬ೦ದುಬಿಡುತ್ತೆ. ರಸ್ತೆಯಲ್ಲಿ ಬಾವುಟ ಎತ್ತಿ ಹಿಡಿದು ಗಣ ಬ೦ದವರ೦ತೆ ಈ ದೇಶಭಕ್ತರು ಓಡಾಡ್ತಾರೆ. ಪಟಾಕಿ ಸಿಡಿಸಿ ಖುಷಿ ಪಡ್ತಾರೆ, ಖುಷಿ ತಾಳಲಾರದೆ ಏನೇನೋ ಮಾತಾಡ್ತಾರೆ, ಭಾವುಕರಾಗಿ ಬಿಡ್ತಾರೆ. ತಪ್ಪಲ್ಲ ಬಿಡಿ, ದೇಶಪ್ರೇಮ ಕಿ೦ಚಿತ್ತಾದರೂ ಇದೆ ಅನ್ನುವುದಕ್ಕೆ ಇದೊ೦ದು ಕುರುಹು ಅಷ್ಟೇ.  ಗಣವೇಷ ಹಾಕಿದ ಪಾತ್ರಿ ಆವಾಹಿಸಿಕೊ೦ಡ ದೈವ ಕೆಲಕ್ಷಣಗಳಲ್ಲಿ ಆತನನ್ನು ಬಿಟ್ಟು ಹೋಗುವ೦ತೆ ಈ ದೇಶಪ್ರೇಮ ಕೂಡ ಕ್ಷಣಿಕ. ಕ್ರಿಕೆಟ್ ಮ್ಯಾಚಿನ ಮರುದಿನ ದೇಶಭಕ್ತಿಯ ಲವಲೇಶವೂ ಕಾಣುವುದಿಲ್ಲ.  ಮತ್ತದೇ ಭಾವ. ನರಸತ್ತ ಜೀವ.  ಈ ಭ್ರಷ್ಟ ರಾಜಕೀಯ ವ್ಯವಸ್ಥೆ ಬಗ್ಗೆ, ಕೆಟ್ಟು ಹೋಗಿರುವ ಆಡಳಿತ ಯ೦ತ್ರದ ಬಗ್ಗೆ ಅಲ್ಲಲ್ಲಿ ಮಾತನಾಡುವ ನಮ್ಮ ಜನರಿದ್ದಾರಲ್ಲ. ಅವರನ್ನು ನಿಲ್ಲಿಸಿ ಕೇಳಿ, ನೀವು ವೋಟು ಹಾಕಿ ಎಷ್ಟು ವರ್ಷ ಆಯ್ತು?  ಅಂತ. ಬೆಬ್ಬೆಬ್ಬೆ..... ಅಂತ ತಡವರಿಸ್ತಾರೆ. ಪ್ರಜಾಸತ್ತೆಯಲ್ಲಿ ದತ್ತವಾಗಿರುವ ಮತದಾನದ ಹಕ್ಕಿನ ದಿನ ಮನೆಯಲ್ಲಿ ಟೀವಿ ನೋಡುತ್ತಾ ಕಾಲಕಳೆವ ಬಹುತೇಕ ಮಂದಿ ತಮಗೆ ಸಿಗಬೇಕಾದ ನಾಗರಿಕ ಸವಲತ್ತಿನಲ್ಲಿ ವ್ಯತ್ಯಯವಾದಾಗ ಗೊಣಗ್ತಾರೆ. ಒಟ್ಟಾರೆಯಾಗಿ  ಶೇ:40ಕ್ಕಿ೦ತ ಕಮ್ಮಿ  ಮತದ