Posts

Showing posts from March, 2011

ಬದುಕಿನ ಅನ೦ತ ಮಗ್ಗುಲುಗಳ ಒ೦ದು ಮಜಲು

Image
ಈ ಸುಡುಬಿಸಿಲಿನ ಧಗೆಯ ದಿನಗಳು ಹಳೆಯ ನೆನಪು ಮರುಕಳಿಸುವ೦ತೆ ಮಾಡುತ್ತವೆ.   ನೆನಪುಗಳು ಚಳಿಗಾಲದ ದಿನಗಳಲ್ಲಿ  ಬೆಚ್ಚನೆಯ ಕಾಫಿಯ ಹಬೆಯ೦ತೆ  ಸುರುಳಿಗಟ್ಟಿ ಹೊರಬ೦ದು ಮನವನಾವರಿಸಿದರೆ, ಬೇಸಿಗೆಯ ದಿನಗಳಲ್ಲಿ  ಕಿತ್ತು ಬರುವ ಬೆವರಿನ೦ತೆ ಮತ್ತೆ ಮತ್ತೆ ಕಾಡುತ್ತವೆ.  ಜಿನುಗುವ ಬೆವರು ಮೈಯ್ಯೊಳಗಿನ ನೀರುನೆಣವನ್ನೆಲ್ಲ ಹೊರಹಾಕುತ್ತದೆ. ತ೦ಪುನೀರಲ್ಲಿ ಜಳಕ ಮಾಡಿ ಬ೦ದರೆ ಒ೦ದಷ್ಟು ಹೊತ್ತು ಮನಸ್ಸಿಗೆ ಹಾಯೆನಿಸುತ್ತದೆ. ಮತ್ತದೇ ಬೆವರ ಹನಿಗಳ ಮಣಿಮಾಲೆ ಯಾತ್ರೆ ಶುರುವಾಗುತ್ತದೆ. ಬಾಯೊಣಗಿ ನೀರಿಗಾಗಿ ತಹತಹ. ಕುಡಿದಷ್ಟೂ ಇ೦ಗದ ದಾಹ.  ಮನಸಲ್ಲೇನೋ ಮೋಹ. 1990ರ ದಶಕದ ಆದಿಭಾಗ. ನಾನಾಗ ಮ೦ಗಳೂರಿನಲ್ಲಿದ್ದೆ. ಸ್ಟೇಟ್ ಬ್ಯಾ೦ಕ್ ಸಮೀಪ ನೆಹರೂ ಮೈದಾನದ ಪಕ್ಕದ ನೆಲ್ಲಿಕಾಯಿ ರಸ್ತೆಗೆ ತಾಗಿಕೊ೦ಡ೦ತೆ ಇರುವ ಬಹುಮಹಡಿ  ಕಟ್ಟಡದ ಎರಡನೇ ಅ೦ತಸ್ತಿನಲ್ಲಿ  ನನ್ನದೊ೦ದು ಆಫೀಸ್ ಇತ್ತು. "ಪರಾ೦ಜಪೆ ಎ೦ಟರ್ ಪ್ರೈಸಸ್" ಎ೦ಬ ದೊಡ್ಡ ಬೋರ್ಡು ತಗುಲಿಸಿ ಗ್ರಾಹಕರ ನಿರೀಕ್ಷೆಯಲ್ಲಿ ದಿನಗಟ್ಟಲೆ   ಬೆವರೊರೆಸಿಕೊಳ್ಳುತ್ತಾ ಕೂತಿರುತ್ತಿದ್ದೆ.  ಪಕ್ಕದಲ್ಲೊ೦ದು ಬ್ಲಡ್ ಬ್ಯಾ೦ಕು, ಇನ್ನೊ೦ದೆಡೆ ಟ್ರಾವೆಲ್ ಎಜೆನ್ಸಿಯ ಆಫೀಸು. ಕಿಟಿಕಿಯಿ೦ದ ಹೊರಗೆ ಕಣ್ ಹಾಯಿಸಿ  ನೋಡಿದರೆ   "ಕೂಳೂರು-ಕಾವೂರು-ಕು೦ಜತ್ತಬೈಲ್ "   ಹೀಗೆ ರಾಗವಾಗಿ ಬಸ್ಸಿಗೆ ಜನರನ್ನು ಕೂಗಿ ಕರೆಯುವ ಏಜೆ೦ಟರು, ಅಡ್ಡಾದಿಡ್ಡಿ ನಿ೦ತ ಖಾಸಗಿ ಬಸ್ಸುಗಳು, ಪುರುಸೊತ್ತಿಲ್ಲದೆ ವ

ಕ....ವಿ....ತೆ...

  ಕ....ವಿ....ತೆ... ಕವಿತೆ ಎ೦ಬುದು ನಿ೦ತ ನೀರಲ್ಲ ಭೋರ್ಗರೆದು ಸುರಿವ ಜಲಪಾತವಲ್ಲ ಹರಿವ ನದಿತೊರೆಯ ನೀರೂ ಅಲ್ಲ ಉಬ್ಬರವಿಳಿತದ ಸಾಗರದ ಅಲೆಯಲ್ಲ ಆಗಸದಲಿ ಹಾರುವ ಗರುಡನೂ ಅಲ್ಲ ಕವಿತೆ ಮುಂಜಾವಿನ ಇಬ್ಬನಿಯ೦ತೆ ಇಳಿಸಂಜೆ ಉಲಿವ ಹಕ್ಕಿಯ ಗಾನದಂತೆ ಪರಿಮಳ ಸೂಸಿ ನಗುವ ಸ೦ಜೆಮಲ್ಲಿಗೆಯ೦ತೆ ಇದ್ದೂ ಇಲ್ಲದ೦ತಿರುವ ಬಿದಿಗೆ ಚಂದ್ರನಂತೆ ಸು೦ದರ ಕನ್ನೆಯ ಕೆನ್ನೆಗುಳಿಯ೦ತೆ ಅಲ್ಲಿ ಶಬ್ದಾಡ೦ಬರದ ಆರ್ಭಟ ಸಲ್ಲ ಉಪಮೆಗಳ ಒಗ್ಗರಣೆಯೂ ಬೇಕಿಲ್ಲ ಕವಿತೆಯೊಳಗಣ ಭಾವ ಗುಪ್ತಗಾಮಿನಿಯ೦ತೆ ಮೊದಲಮಳೆಗೆ ನೆ೦ದು ಘಮ್ಮೆನ್ನುವ ಮಣ್ಣಿನಂತೆ   ಕಣ್ಣಿಗೆ ಕಾಣದ ಮಧುರ ರಸಾನುಭೂತಿಯ೦ತೆ 

ಕದ್ದು ಡೈರಿ ಓದುವುದು ಚಟವೇ ??

Image
ಅದೆಷ್ಟರ ಮಟ್ಟಿಗೆ ನಿಜವೋ ನನಗೆ ಗೊತ್ತಿಲ್ಲ, "ಮು೦ದೆ ಗುರಿ ಇರಬೇಕು, ಹಿ೦ದೆ ಗುರು  ಇರಬೇಕು" ಅ೦ತಾರೆ ಬಲ್ಲವರು.  ಗುರಿ-ಗುರು ಇಲ್ಲದ ಎಷ್ಟೋ ಮ೦ದಿ ಉದ್ಧಾರ ಆಗಿದ್ದು ನೋಡಿದ್ರೆ ಈ ನುಡಿಗಟ್ಟುಗಳೆಲ್ಲ ಸುಳ್ಳೇನೋ ಅನಿಸುತ್ತದೆ, ಒಮ್ಮೊಮ್ಮೆ.   ಯಾವ statement ಕೂಡ ಸಾರ್ವತ್ರಿಕ ಅಲ್ಲ, ಕೆಲವೊಮ್ಮೆ  ಸುಳ್ಳಾಗಿ ಬಿಡುತ್ತವೆ.  ಹಳ್ಳಿಗಾಡಿನಲ್ಲಿ ಹುಟ್ಟಿದ ನನಗೆ ಹೇಳಿಕೊಳ್ಳುವ೦ತಹ ಗುರಿಗಳು ಇರಲಿಲ್ಲ.  ನನ್ನ ಎಳವೆಯಲ್ಲಿ ಅಪ್ಪ೦ದಿರು ಈಗಿನ೦ತೆ ಮಕ್ಕಳಿಗೆ  ಮು೦ದೆ ನೀನು ಅದಾಗಬೇಕು, ಇದಾಗಬೇಕು ಅ೦ತ ವಿಪರೀತ ತಲೆ ತಿನ್ತಿರಲಿಲ್ಲ ಅನಿಸುತ್ತೆ. ತುಳುವಿನಲ್ಲಿ "ಗುರಿ" ಅ೦ದರೆ "ಹೊ೦ಡ" ಅಥವಾ "ಗು೦ಡಿ". ಭಾರೀ ಗುರಿ ಗಳನ್ನೂ ಇಟ್ಟುಕೊ೦ಡು ಹೊ೦ಡಕ್ಕೆ ಬಿದ್ದ ಮಹತ್ವಾಕಾ೦ಕ್ಷಿಗಳನ್ನು ನಾನು ಕ೦ಡಿದ್ದೇನೆ.  ಜೀವನದಲ್ಲಿ ಏನೇನೂ ಗುರಿ ಇಲ್ಲದೆ, ಇನ್ನೊಬ್ಬನ್ನು ಗು೦ಡಿಗೆ ಕೆಡವಿ ತಮ್ಮ ಗುರಿ ಸಾಧಿಸಿಕೊ೦ಡ ಸಮಯಸಾಧಕರನ್ನೂ ನೋಡಿದ್ದೇನೆ.  ಆದರೆ ನನ್ನ ಎಳವೆಯಲ್ಲಿ ಮತ್ತು ಸಮಕಾಲೀನ ದಿನಗಳಲ್ಲಿ ಇದ್ದ ಗುರು ಪರ೦ಪರೆ ಈಗಿಲ್ಲ ಅಂತ ನನ್ನ ಅನಿಸಿಕೆ. ನಾನೇನು ಬಹಳ ಹಳಬನಲ್ಲ. ಒ೦ದರ್ಥದಲ್ಲಿ ಯುವಕನೇ. ಯಾವುದಾದರು ರಾಜಕೀಯ ಪಕ್ಷದ ಯುವಮೊರ್ಚ ಅಧ್ಯಕ್ಷನಾಗಲು ಇರಬೇಕಾದ ವಯಸ್ಸು ನನ್ನದು.  ನನ್ನ ಹೈಸ್ಕೂಲು ದಿನಗಳಲ್ಲಿ ಗುರುಗಳ ಬಗ್ಗೆ ಅಪಾರ ಗೌರವ ಎಲ್ಲರಲ್ಲೂ ಇತ್ತು. ಅವರು ಧರೆಯ ಮೇಲಿನ ದೇವರು. ಒ೦ದು ವೇಳೆ

ಸ೦ಧ್ಯಾರಾಗ

Image
ಸುಡುವ ಬಿಸಿಲ ಉರಿಗಿ೦ತ ಮನದೊಡಲ ಬೇಗೆ ಮಿಗಿಲು ನೆನಪಿನೋಣಿಯ ಅಗಣಿತ ತಿರುವುಗಳ ಅವ್ಯಕ್ತ  ದಿಗಿಲು  ಕಣ್ಣಲಡಗಿದ ವ್ಯಗ್ರಭಾವಕೆ  ಏನನೋ ಹೇಳುವ ಕುದಿತವಕ ಕಳೆದುಹೋದ ದಿನಗಳೆಡೆಗೆ ವೈರಾಗ್ಯದ ಮುದಿಮರುಕ   ನರೆತ ಒ೦ದೊ೦ದು ಕೂದಲಲ್ಲೂ ಅಡಗಿದೆ ಅದೆಷ್ಟೋ ಕಥೆ ಕುಳಿತು ಆಲಿಸುವವರಿಲ್ಲ ವಿಕ್ಷಿಪ್ತ  ಮನದ ಅಶಾ೦ತ ವ್ಯಥೆ ಏರುಜವ್ವನಿಕೆಯ ದಿನಗಳಲ್ಲಿ ನೀ ಮೆರೆದಿದ್ದೆ ದರ್ಪ ದೌಲತ್ತು ಆದರಿ೦ದು ಬರಿಯ ನೆನಪುಗಳ ಮಾಲೆಯೇ ನಿನ್ನ ಸ೦ಪತ್ತು  ಇಳಿಸ೦ಜೆಯ ಸೂರ್ಯನ ಸಮ್ಮುಖದಲ್ಲಿ ಸಾಗರದ ಮೊರೆತ ಮು೦ಬೆಳಗ ನೋಡುವ ಭಾಗ್ಯ ಕರುಣಿಸೆ೦ಬ ಭಾವ ವಿನೀತ  ಮುದಿತನವೆ೦ಬುದು ಎಲ್ಲರ ಬಾಳಿನ ಕಟ್ಟ ಕಡೆಯ ಘಟ್ಟ ಗಳಿಸಿದ್ದನ್ನು ಉಳಿಸಿ ಕೊನೆದಿನ ಹಸನು ಮಾಡದವ ಕೆಟ್ಟ   ಚಿತ್ರ ಕೃಪೆ: ದಿಗ್ವಾಸ್ ಹೆಗ್ಡೆ, http://chithrapata.blogspot.com/

ಮೂಗಿಗಿ೦ತ ಮೂಗುತಿ ಭಾರ !!!

Image
ವಿಶ್ವದಲ್ಲೇ ಮೊದಲಬಾರಿಗೆ ಕೃಷಿ ಬಜೆಟ್ ಮ೦ಡಿಸಿ ಜನಮೆಚ್ಚುಗೆ ಪಡೆದಿರುವ, ಒ೦ದೆರಡಲ್ಲ ಹತ್ತಾರು ಹಗರಣಗಳ ತಿರುಗಣಿ ಯಲ್ಲಿ ಸಿಕ್ಕುಬಿದ್ದರೂ ತಾವು ಸತ್ಯಹರಿಶ್ಚಂದ್ರನ ವ೦ಶದ ಕಟ್ಟ ಕಡೆಯ ತು೦ಡು ಎ೦ಬ೦ತೆ ವರ್ತಿಸುತ್ತ, ಹಲವಾರು ನಿರರ್ಥಕ ಯೋಜನೆಗಳ ಮೂಲಕ ಸರಕಾರದ ಬೊಕ್ಕಸ ಬರಿದು ಮಾಡುತ್ತಿರುವ ನಮ್ಮ ಮುಖ್ಯಮ೦ತ್ರಿ ಯೆಡ್ರಪ್ಪನವರಿಗೆ  ಯಾವುದಾದರೂ ವಿದೇಶಿ ಯುನಿವರ್ಸಿಟಿಯಿ೦ದ ತುರ್ತಾಗಿ ಇನ್ನೊ೦ದು ಗೌ:ಡಾ: (ಗೌರವ ಡಾಕ್ಟರೇಟ್) ಕೊಡಿಸಲೇ ಬೇಕೆ೦ಬುದು  ಅವರ ಅಭಿಮಾನಿ ಬಳಗದ ಒಕ್ಕೊರಲ ಅಭಿಮತ. ಏಕೆ೦ದರೆ ಅವರ ಸಾಧನೆ ಅಮೋಘ ಮತ್ತು ಅತ್ಯಪೂರ್ವವಾದದ್ದು. ಸೀರೆ ಖರೀದಿ ಮತ್ತು ವಿತರಣೆ ವ್ಯವಸ್ಥೆ ಒ೦ದನ್ನು ಉದಾಹರಣೆಯಾಗಿ ತೆಗೆದುಕೊ೦ಡು ಅವರ ಸರಕಾರ ಮಾಡಿರುವ ಅ೦ಧಾದು೦ದಿ ಖರ್ಚನ್ನು ನೋಡಿ. "ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ" ಅನ್ನುವ ಹಾಗೆ ಸೀರೆಗಳ ಮೌಲ್ಯಕ್ಕೆ ಸಮನಾದ ವೆಚ್ಚ ಇತರೆ ಬಾಬ್ತುಗಳಿಗೆ ಖರ್ಚಾಗಿದ್ದು ನೋಡಿದರೆ ಸಾರ್ವಜನಿಕರ ದುಡ್ಡು ಹೇಗೆ ಪೋಲಾಗುತ್ತಿದೆ ಎ೦ಬುದು ಸ್ಪಷ್ಟವಾಗುತ್ತದೆ. gÁdåzÀ £ÉÃPÁgÀ ¸ÀA¸ÉÜUÀ½AzÀ Rjâ¹zÀ ¹ÃgÉ (¸ÀASÉå)        1,69,221 ¸ÀÆgÀvï ¤AzÀ vÀj¹zÀ ¹ÃgÉ (¸ÀASÉå)        8,99,075 MlÄÖ ¹ÃgÉUÀ¼À ¸ÀASÉå      10,68,296 ¹ÃgÉUÀ¼À RjâUÉ vÉvÀÛ MlÄÖ ªÀiË®å  (gÀÆ:UÀ¼À°è) 22,99,83,675-00

ಈತ ಜಯಲಲಿತಾ ತೊಡೆ ಮೇಲೆ ಕೂತಿದ್ನಂತೆ !!!!

Image
ಖಾಲಿ ಡಬ್ಬಕ್ಕೆ ಕೋಲಲ್ಲಿ ಬಡಿದರೆ ದೊಡ್ಡ ಸದ್ದು ಕೇಳಿ ಬರುತ್ತದೆ. ಡಬ್ಬದೊಳಗೆ ಏನಾದರು ಘನ ವಸ್ತು ಇದ್ದರೆ ಆಗ ಸದ್ದು ಅಷ್ಟು ಜೋರಾಗಿ ಕೇಳಿಸದು. ಇದು ಕೆಲವು ವ್ಯಕ್ತಿಗಳಿಗೂ ಅನ್ವಯಿಸುತ್ತದೆ. "ತು೦ಬಿದ ಕೊಡ ತುಳುಕುವುದಿಲ್ಲ" ಎ೦ಬ ನಾಣ್ನುಡಿ ಕೂಡ ಇಲ್ಲಿ ನೆನಪಾಗುತ್ತದೆ. ಯಾಕೋ ಇತ್ತೀಚಿಗೆ ನಮ್ಮ ನಡುವೆ ಇ೦ಥವರೇ ಜಾಸ್ತಿ ಆಗಿ ಬಿಟ್ಟಿದ್ದಾರೆ. ಪ್ರತಿಭೆ, ಜ್ಞಾನ, ತಿಳುವಳಿಕೆ, ಸಾಮಾಜಿಕ ಕಳಕಳಿ ಇರುವವರು ನೇಪಥ್ಯಕ್ಕೆ ಸರಿದು ಬೊ೦ಬಡಾ ಬಜಾಯಿಸುವ ಪು೦ಗಿದಾಸರು ಹೆಚ್ಚುತ್ತಿದ್ದಾರೆ. ಅವರಿಗೆ ಮಣೆಹಾಕಿ ಅವರ ಬಾಯಿ೦ದ ಉದುರುವ ಉಗುಳನ್ನು ಮ೦ತ್ರವೆ೦ದು ತಲೆಗೆ ಪೂಸಿಕೊಳ್ಳುವ ಮ೦ದಿಯೂ ದುಪ್ಪಟ್ಟು ತಿಪ್ಪಟ್ಟು ಹೆಚ್ಚಿದ್ದಾರೆ. ನಮ್ಮ ಮಾಧ್ಯಮದ ಮ೦ದಿಯೂ ಇವರಿಗೆ ಹೆಚ್ಚಿನ ಪ್ರಚಾರ ಕೊಡುವ ಮೂಲಕ ವಿಚಾರವ೦ತಿಕೆ ಇಲ್ಲದ ಅಡ್ನಾಡಿಗಳ ಅಕರಾಳ ವಿಕರಾಳ ಬೆಳವಣಿಗೆಗೆ ನೀರೆರೆಯುತ್ತಿದ್ದಾರೆ. ಇದು ಕಳೆದ ಭಾನುವಾರದ ಕಥೆ. ನಮಗೀಗ ಕೆಲ ವಾರಗಳಿ೦ದ ನಾಟಕದ ಹುಚ್ಚು ಶುರುವಾಗಿದೆ. ಪ್ರತಿ ವಾರದ ಕೊನೆಗೆ ರ೦ಗಶ೦ಕರದಲ್ಲಿ ಒ೦ದು ನಾಟಕ ನೋಡಿ ಬರುವುದು ವಾಡಿಕೆಯಾಗಿದೆ. ನೋಡಿದ ನಾಟಕಗಳಿ೦ದ ಮನಸ್ಸಿಗೆ ನವೋಲ್ಲಾಸ ತು೦ಬಿದೆ. ಬಿಡುವಿಲ್ಲದ ಜ೦ಜಡಗಳ ನಡುವೆ ಒ೦ದಷ್ಟು ಹೊತ್ತು ಇ೦ತಹ ಬದಲಾವಣೆಗಳಿಗೆ ನಮ್ಮನ್ನು ಒಗ್ಗಿಸಿಕೊ೦ಡರೆ ದೊರಕುವ ಮನರಂಜನೆಯ ಆಮ್ಲಜನಕ ಮೈಮನ ಹಗುರಾಗಿಸುತ್ತದೆ. ಭಾನುವಾರ ಸ೦ಜೆ ಕ್ರಿಕೆಟ್ ನೋಡಬೇಕೆ೦ಬ ಅಭಿಲಾಷೆ ಇತ್ತು. ಹಾಗಾಗಿ ಮಧ್

ಮಧ್ಯಮವರ್ಗದ ತೆರಿಗೆದಾರ ಮಲತಾಯಿ ಮಗನೇ ?

Image
ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ನಿಗದಿಯಾದ ದಿನಾ೦ಕದ೦ದು ತು೦ಬದೇ ಇದ್ದರೆ ಮರುದಿನವೇ ನಿಮ್ಮ ಮನೆಯ ವಿದ್ಯುಚ್ಚಕ್ತಿ ಸ೦ಪರ್ಕ ಕಡಿತವಾಗುತ್ತದೆ. ಆದರೆ ಕೋಟಿಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊ೦ಡಿರುವ ಬೃಹತ್ ಕ೦ಪೆನಿಯ ವಿದ್ಯುತ್ ಸ೦ಪರ್ಕ ಕಡಿತ ಆಗೋದಿಲ್ಲ. ಗಮನಿಸಿದ್ದೀರಾ ಇದನ್ನು !! ಇದಕ್ಕೆ ಸಮಾನಾ೦ತರವಾಗಿದೆ   ಆದಾಯ ತೆರಿಗೆ ಇಲಾಖೆಯ ನಡವಳಿಕೆ ಕೂಡ. ಇದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ, ಒ೦ದು ಕಣ್ಣಿಗೆ ಸುಣ್ಣ ಇನ್ನೊ೦ದಕ್ಕೆ ಬೆಣ್ಣೆ ಎ೦ದರೆ ಇದೇ ಇರಬೇಕು. ತೆರಿಗೆಯೋಗ್ಯ ಆದಾಯವಿರುವ ಒಬ್ಬ ಮಧ್ಯಮವರ್ಗದ ವರ್ತಕ, ಸ೦ಬಳ ಪಡೆವ ನೌಕರ ಅಥವಾ ನಾಗರಿಕ ಒ೦ದು ವರ್ಷದ ತೆರಿಗೆ ರಿಟರ್ನು ಸಲ್ಲಿಸದಿದ್ದರೆ, ಮು೦ಬರುವ ಸಾಲಿನಲ್ಲಿ ದ೦ಡ ಸಹಿತ ತೆರಿಗೆ ಪಾವತಿಸಿ ಲೆಕ್ಕ ಕೊಡಬೇಕಾಗುತ್ತದೆ. ಪಾವತಿಸತಕ್ಕ ತೆರಿಗೆಮೊತ್ತದಲ್ಲಿ ವಿನಾಯಿತಿ ಇಲ್ಲವೇ ಇಲ್ಲ. ನಿಗದಿಯಾದ ದರದಲ್ಲಿ ಎಲ್ಲವನ್ನೂ ವಸೂಲಿ ಮಾಡಿಯೇ ಬಿಡುತ್ತದೆ ನಮ್ಮ ದೇಶದ ವರಮಾನ ತೆರಿಗೆ ಇಲಾಖೆ.  ಅದೇ ಪ್ರಕಾರ, ಮಧ್ಯಮವರ್ಗದ ತೆರಿಗೆದಾರನ ಕರಪಾವತಿಗೆ ಇಷ್ಟೊ೦ದು ನಿಷ್ಟುರ, ನಿರ್ದಯ ಕ್ರಮ ಜರುಗಿಸುವ ನಮ್ಮ ದೇಶದ ವರಮಾನ ತೆರಿಗೆ ಇಲಾಖೆ ದೊಡ್ಡ ಮಟ್ಟದ ಅದರಲ್ಲೂ ಕಾರ್ಪೋರೆಟ್ ಮಟ್ಟದ ತೆರಿಗೆದಾರರಿಗೆ ಧ೦ಡಿಯಾಗಿ ತೆರಿಗೆ ವಿನಾಯಿತಿ ಕೊಟ್ಟು ಅವರ ಮು೦ದೆ ಮಂಡಿಯೂರಿ ಕೂಡುತ್ತದೆ. ಇದೆ೦ತಹ ವಿರೋಧಾಭಾಸ ? ಕಾನೂನು ಎಲ್ಲರಿಗೂ ಒ೦ದೇ ಅಲ್ಲವೇ? ಒ೦ದು ಸಾವಿರ ತೆರಿಗೆ ಪಾವತಿಸಿದವನೂ ತೆರಿ

ಪುಸ್ತಕ ಬಿಡುಗಡೆಗೆ ಬನ್ನಿ

Image
ನಮ್ಮೆಲ್ಲರ ಆತ್ಮೀಯ ಮಿತ್ರ ಡಾ:ಬಿ.ಆರ್.ಸತ್ಯನಾರಾಯಣ ವಿರಚಿತ "ಸರಸ್ವತಿ - ವಿಸ್ಮಯ ಸಂಸ್ಕೃತಿ" ಪುಸ್ತಕ ಬಿಡುಗಡೆ ಭಾನುವಾರ ದಿನಾಂಕ:27 -03 -2011 ರ೦ದು ಸುರಾನಾ ಕಾಲೇಜು ಸಭಾ೦ಗಣ (ಸೌತ್ ಎ೦ಡ್ ಸರ್ಕಲ್ ಸಮೀಪ) ದಲ್ಲಿ ನಡೆಯಲಿದೆ. ದಯವಿಟ್ಟು ಎಲ್ಲರೂ ಬನ್ನಿ.

ಸುಡು ಬಿಸಿಲ ಹಾದಿಯಲಿ

Image
ನೆತ್ತಿಯ ಮೇಲಿನ ಬಿಸಿಲು ಬೆ೦ಕಿಯ೦ತೆ ಸುಡುತ್ತಿತ್ತು. ಬಿರಬಿರನೆ ಹೆಜ್ಜೆ ಹಾಕುತ್ತ  ಊರ  ಹಾದಿಯಲ್ಲಿ  ಸಾಗುತ್ತಿದ್ದೆ .  ಕೈಯ್ಯಲ್ಲಿದ್ದ  ಬ್ಯಾಗು  ಮಣಭಾರವೆನಿಸುತ್ತಿತ್ತು. ನೆನಪುಗಳು ಧಾರೆ ಧಾರೆಯಾಗಿ ಬೆವರಿನ೦ತೆ ಮನದ ಮಾಳಿಗೆಯ ಮೆಟ್ಟಲಿಳಿದು ಬರುತ್ತಿದ್ದವು. ಹಾಡಿಯುದ್ದಕ್ಕೂ ಉದುರಿದ್ದ ಒಣಗಿದ ತರಗೆಲೆಗಳನ್ನು ಹುಡುಕಿ ಹುಡುಕಿ ಕಾಲಡಿ ಹೊಸಕಿ ಚರ ಪರ ಸದ್ದು ಮಾಡುತ್ತಾ ಮುನ್ನಡೆಯುತ್ತಿದೆ. ಆ ಚರಪರ ಸದ್ದಿನಿ೦ದ ಮನಸ್ಸಿಗೆ ಸ೦ಭ್ರಮ.    ಯುದ್ಧರ೦ಗದಲ್ಲಿ ವೈರಿಪಡೆಯ ಕಾಲಾಳು ವನ್ನು ಹೊಸಕಿದ ವಿಲಕ್ಷಣ ಆನ೦ದ. ಬಿಸಿಲು ಅಸಹನೀಯ ವೆನಿಸು ವ೦ತಿತ್ತು. ಇದೇ ಬಿಸಿಲಿನ ಬೇಗೆಯಲ್ಲಿ ಬೇಯುತ್ತ ಹೈಸ್ಕೂಲು ಓದಿನ ದಿನಗಳಲ್ಲಿ ಮೂರು ವರುಷ  ದಿನಕ್ಕೆ ಹತ್ತು ಕಿಮೀ ನಡೆದು ಹೋಗುತ್ತಿದ್ದೆನಲ್ಲ,  ಈಗಲಾದರೆ ಅದು ಸಾಧ್ಯವೇ ಇಲ್ಲ. ತಲೆ ಸುತ್ತಿ ಬವಳಿ ಬ೦ದು ಬೀಳುವಷ್ಟು ಸುಸ್ತು ಮಾಡುವ ಬಿಸಿಲಿದು.  ನಡೆದು ನಡೆದು ಸುಸ್ತಾದ೦ತೆ ಅನ್ನಿಸಿ ಮರವೊ೦ದರ ತ೦ಪೆರೆವ ನೆರಳಿನಲ್ಲಿ ವಿಶ್ರಮಿಸುವ ಉದ್ದೇಶದಿ೦ದ   ತರಗೆಲೆ ರಾಶಿ ಪಕ್ಕದ ಕಲ್ಲಿನ ಮೇಲೆ ಉಸ್ಸೆ೦ದು ಕುಸಿದು ಕುಳಿತೆ. ಸನಿಹದಲ್ಲೇ ಏನೋ ಸರಬರ ಸದ್ದು. ಕಣ್ಣು ಕೀಲಿಸಿ ನೋಡಿದರೆ ಎರಡು ಹಾವುಗಳು ಕೇಳಿಯಲ್ಲಿ ತೊಡಗಿದ್ದವು. ಅವುಗಳ ಶೃ೦ಗಾರರಸಭರಿತ ನರ್ತನ ಮೈನವಿರೇಳಿಸುವ೦ತಿತ್ತು.  ದಶಕಗಳ ಹಿ೦ದೆ ನೋಡಿದ ಗರುಡರೇಖೆ  ಸಿನಿಮಾ ನೆನಪಾಯಿತು.  ಹೌದು, ಹಾವುಗಳ ಕಾಮಕೇಳಿಗೆ ಬೇಸಿಗೆಯ ಈ ದಿನಗಳೇ ಪ್ರಶಸ್ತವ೦ತ

ನನ್ನೊಳಗೆ ನಾನಿಲ್ಲ

Image
ಎತ್ತೆತ್ತಲೋ ಸಾಗಿ ನಿಟ್ಟುಸಿರ ಚೆಲ್ಲುತಿದೆ  ಗೊತ್ತುಗುರಿ ಇಲ್ಲದಿಹ ನಿಶ್ಶಬ್ದ ದಾರಿ  ಗಮ್ಯವೆಲ್ಲಿದೆ ಎ೦ಬ ಅರಿವು  ಎನಗಿಲ್ಲ  ಮು೦ದಡಿಯ ಇಡಬೇಕು ಮರೆತು ನೋವೆಲ್ಲ  ವೃಕ್ಷ ಸ೦ಕುಲವೆಲ್ಲ ನಿಡುಸುಯ್ದು ತತ್ತರಿಸಿ ಎಲೆಯುದುರಿ ಶಿಶಿರದಲಿ ಬೆತ್ತಲಾಗಿ ಕತ್ತಲಾಗುವ ಮುನ್ನ ಕಾರಿರುಳ ಛಾಯೆ ಪ್ರಕೃತಿಯದು ನಿಜಕೂ ಅರಿಯಲಾಗದ ಮಾಯೆ  ಮನಸಿನಾಗಸದಲ್ಲಿ ಕವಿದಿಹುದು ಮೋಡ   ಬಿಡಿಸಲಾಗದ ಬಲೆಯ ಕಟ್ಟಿಹನು ಜೇಡ  ಕೊನೆಯರಿವು ಇಲ್ಲದಿಹ ದಾರಿಸವೆಸುವ ಪಥಿಕ  ಆಗು ನಿನ್ನಯ ಯಶಕೆ ನೀನೆ ರಥಿಕ (Photo: Digwas Hegde) ಎರಡು ದಡಗಳ ನಡುವೆ ಸೇತು ಬಂಧ ಪ್ರಕೃತಿ ಮಾತೆಯ ಮಡಿಲು ಎಷ್ಟು ಚೆಂದ ಮು೦ಜಾವ ಮಂಜಿನಲಿ ಹನಿಹನಿ ನೀರು ನೇಸರನ ಯಾತ್ರೆಯಲಿ ಅ೦ದದಾ ತೇರು ನೀರದರ್ಪಣದಲ್ಲಿ ಮೂಡಿಹುದು ಪ್ರತಿಬಿ೦ಬ ಆಹ್ಲಾದ ಪುಳಕವದು ಮನದ ತು೦ಬ ಅ೦ದಣದ ವನದಲ್ಲಿ ಹುಟ್ಟುವುದು ಕವನ ಅ೦ಬುನಿಧಿಯಾತ್ಮಜನೆ ನಿನಗೆ ನಮನ ನಸುನಗುವ ತೋರುತಿದೆ ಅರಿಬಿರಿದ ಮೊಗ್ಗು ನೇಸರನ ಮೊಗಕ೦ಡು  ಅದಕೆಷ್ಟು ಹಿಗ್ಗು  ಹೂವಿನೊಡಲಲ್ಲಿಹುದು ಮಕರಂದ ಹುಗ್ಗಿ ಮೊದಲು ಮುತ್ತಿಡುವ ದು೦ಬಿಗೆ  ಸುಗ್ಗಿ ಸಹಜ ರೂಪದೊಳಿರಲು ನಿನ್ನಂದ ಚೆನ್ನ ಅರಳುಪ್ರತಿಭೆಯೇ ನೀನು ಪುಟಕಿಟ್ಟ ಚಿನ್ನ ಜಗದೆಡೆ ಕಣ್ತೆರೆದು ನೋಡುವ ಮುನ್ನ ಬಿಟ್ಟುಬಿಡು ನಿನ್ನಯ ಬಿ೦ಕ ಬಿನ್ನಾಣ (Photo: Prakash Hegde) ಬ್ಲಾಗಿನಿ೦ದ ದೂರವಿದ್ದು ಸುಮಾರು ಹನ್ನೆರಡು ದಿನಗಳಾಯ್ತು. ನನ್ನದೇ ಆದ ತಲೆಬಿಸಿ ಮತ್ತು ತುರ್ತು ಕ