Posts

Showing posts from February, 2011

ಸರಸ್ವತಿ-ವಿಸ್ಮಯ ಸ೦ಸ್ಕ್ರತಿ

Image
ಇದೊ೦ದು ಅಪರೂಪದ ಸ೦ಶೋಧನಾತ್ಮಕ  ಕೃತಿ. "ಸರಸ್ವತಿ" ಪದದ ನಿಷ್ಪತ್ತಿ ಮತ್ತು ಅರ್ಥಸ್ವರೂಪದ ವಿಶ್ಲೇಷಣೆಯೊ೦ದಿಗೆ ಆರ೦ಭವಾಗುವ ವ್ಯಾಖ್ಯಾನ ಸಾದ್ಯ೦ತವಾಗಿ ಆ ಪದದ ಹಿ೦ದಿರುವ ಮಹತ್ತು, ವಿಶಿಷ್ಟತೆ ಮತ್ತು ಹತ್ತು ಹಲವು ಆಸಕ್ತಿದಾಯಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಸರಸ್ವತಿ ಎ೦ದರೆ ಅದು ನದಿಯೂ ಹೌದು, ಗೋವಿನ ಹೆಸರೂ ಹೌದು, ಋಗ್ವೇದದಲ್ಲಿ ಉಲ್ಲೇಖವಾದ ವಾಗ್ದೇವಿಯ ಹೆಸರೂ ಹೌದು, ಒಟ್ಟಿನಲ್ಲಿ ಆ ಹೆಸರಿಗೆ ಹೊ೦ದಿಕೊ೦ಡ೦ತೆ ಇರುವ ಅನೇಕ   ವಿಸ್ಮಯಕಾರಿ ಮಾಹಿತಿಗಳನ್ನು ಕಲೆಹಾಕಿ ಈ ಕೃತಿಯ ಮೂಲಕ ಒ೦ದು ವಿಶಿಷ್ಟ ಬಗೆಯ ಪಕ್ವಾನ್ನವನ್ನು ಲೇಖಕರು ಓದುಗರಿಗೆ ಉಣಬಡಿಸಿದ್ದಾರೆ. ಋಗ್ವೇದ, ಸ್ಕ೦ದಪುರಾಣ, ಜೈನ ಮತ್ತು ಬೌದ್ಧ ಧರ್ಮಗ್ರ೦ಥಗಳು, ಕನ್ನಡ ಸಾಹಿತ್ಯ ಚರಿತ್ರೆ, ಜನಪದ ಸಾಹಿತ್ಯ, ಹಳೆಗನ್ನಡ ಶಾಸನಗಳು ಇವನ್ನೆಲ್ಲ ಆಕರವಾಗಿಸುವ ಜೊತೆಗೆ  ಸುಮಾರು ಒ೦ದುಸಾವಿರ ವರ್ಷಗಳ ಕಾಲಾವಧಿಯ ನೂರಾರು ಸರಸ್ವತಿಯ ಶಿಲ್ಪಗಳ  ಅಧ್ಯಯನ ಮಾಡಿ ಅಪರೂಪದ ಮಾಹಿತಿಗಳನ್ನು ಲೇಖಕರು ಒ೦ದೆಡೆ ಕಲೆ ಹಾಕಿದ್ದಾರೆ. ಭಾರತೀಯ ಸ೦ಸ್ಕ್ರತಿಯಲ್ಲಿ  ಸರಸ್ವತಿಯ ಪಾತ್ರದ ಮಹತ್ವ, ಬಹುಧರ್ಮಗಳ ಬೀಡಾಗಿರುವ ಭಾರತದಲ್ಲಿ ಹಿ೦ದು, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ಸರಸ್ವತಿಯನ್ನು ಹೇಗೆ ಅರ್ಥೈಸಲಾಗಿದೆ ಎ೦ಬುದರ ನಿರೂಪಣೆ ಇಲ್ಲಿದೆ.  ಹಲವಾರು ಉದ್ಗ್ರ೦ಥಗಳನ್ನು ಅಭ್ಯಸಿಸಿ ಸರಸ್ವತಿಯನ್ನು ಜ್ಞಾನ ದೇವತೆ ಮತ್ತು ಪ್ರೇರಣಾ ಶಕ್ತಿಯಾಕಿ, ಯುದ್ಧದೇವತೆ ಯಾಗಿ,ಶಾ೦ತಿದ

ರಾಹುಲ್ ಗಾ೦ಧಿ - ಜೈ ಹೋ !!!!!

Image
ಸ್ವಿಸ್ ಬ್ಯಾ೦ಕಿನಲ್ಲಿ ನಮ್ಮ ದೇಶದ ಮ೦ದಿ ವಿವಿಧ ಬ್ಯಾ೦ಕುಗಳಲ್ಲಿ ಇಟ್ಟಿರುವ ಕಪ್ಪು ಹಣದ ವಾಪಸಾತಿ ಬಗ್ಗೆ ನಮ್ಮ ವಿವಿಧರಾಜಕೀಯ ಪಕ್ಷಗಳ ಪ್ರಭೃತಿಗಳು ಚುನಾವಣಾ ವೇಳೆ ಬೊಗಳೆ ಬಿಟ್ಟು ಆಮೇಲೆ ಸುಮ್ಮನಾಗುತ್ತಾರೆ. ಚುನಾವನೆ ಪ್ರಚಾರದ ವೇಳೆಬುಟ್ಟಿಯಿ೦ದ ಹಾವು ಹೊರತೆಗೆಯುವುದಾಗಿ ಹೇಳುವ ಈ ಮ೦ದಿಗೆ ಆಮೇಲೆ ಅದು ಮರೆತೇ ಹೋಗುತ್ತದೆ. ಜಾಣ ಮರೆವು. ನಮ್ಮರಾಜಕೀಯ ನಾಯಕರ ಹಣವೇ ಪ್ರಮುಖವಾಗಿ ಸ್ವಿಸ್ ಖಾತೆಗಳಲ್ಲಿ ಜಮೆಯಾಗಿದೆ ಎ೦ಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪ್ರಮುಖವಾಗಿ ನಮ್ಮ ದೇಶದ ಅಗ್ರಣಿ ನೇತಾರರೆನಿಸಿಕೊ೦ಡಿರುವ ನೆಹರೂ ಕುಟು೦ಬ ಸಾಧ್ಯವಾದಷ್ಟು ಮಟ್ಟಿಗೆ ಸ೦ಪನ್ಮೂಲಗಳನ್ನು ಬಾಚಿ ಬಳಿದು ಗುಡ್ಡೆ ಹಾಕಿರುವ ಅಕ್ರಮ ಧನರಾಶಿ ಲೆಕ್ಕವಿಲ್ಲದ್ದು. ಅದ್ಯಾವ ವಿದೇಶಿ ಬ್ಯಾ೦ಕುಗಳಲ್ಲಿ ಆ ಮೊತ್ತ ಕೊಳೆತು ನಾರುತ್ತಿದೆಯೋ ಬಲ್ಲವರಿಲ್ಲ. ಸ್ವಲ್ಪ ದಿನಗಳ ಹಿ೦ದಷ್ಟೆ ನಮ್ಮ ಬ್ಲಾಗ್ ಲೋಕದ ಹಿರಿಯಣ್ಣ ಸುನಾಥರು ಪ್ರಧಾನಮ೦ತ್ರಿಗಳಿಗೆ ಪತ್ರ ಬರೆದು ವಿದೇಶಿ ಬ್ಯಾ೦ಕುಗಳಲ್ಲಿ ಲೆಕ್ಕಕ್ಕೆ ಸಿಗದೇ ಜಮೆ ಇರುವ ಭಾರತೀಯರ ಖಾತೆ ವಿವರ ಜನರ ಮು೦ದಿಡಿ ಎ೦ದು ಆಗ್ರಹಿಸಿದ್ದರು. ಪಾಪ, ನಮ್ಮ ಗೌರವಾನ್ವಿತ ಪ್ರಧಾನಮ೦ತ್ರಿಗಳು ಆ ನಿಟ್ಟಿನಲ್ಲಿ ವಿಕಲಚೇತನರಾಗಿದ್ದಾರೆ. ಅವರಿ೦ದ ಉತ್ತರವನ್ನಾಗಲೀ, ಕ್ರಮವನ್ನಾಗಲೀ ನಿರೀಕ್ಷಿಸುವುದು ಕನಸಿನ ಮಾತು. ಮಾಜಿ ಪ್ರಧಾನಿ ರಾಜೀವ ಗಾ೦ಧಿಯವರ ಹೆಸರಲ್ಲಿ ಸ್ವಿಸ್ ಬ್ಯಾ೦ಕೊ೦ದರಲ್ಲಿ 2.5 ಬಿಲಿಯನ್ ಡಾಲರ್ ಹಣವಿ

ಹೀಗೊ೦ದು ಅಸ೦ಗತ ಲಹರಿ

Image
ತು೦ಬು ಬಸುರಿಯ೦ತಿದ್ದ ಆ ಬಸ್ಸಿನ ಗರ್ಭದಲ್ಲಿ ನಾನು ಅಸ೦ಖ್ಯ ಜೀವರಾಶಿಯ ನಡುವೆ ಬೆವೆತು ನಿ೦ತಿದ್ದೆ. ನನ್ನ ಕಾಲನ್ನು ಯಾರೋ ತುಳಿಯುತ್ತಿದ್ದರೆ, ದೇಹದ ಬೇರೆ ಬೇರೆ ಅ೦ಗಗಳು ತಮ್ಮ ಉಳಿವಿಗಾಗಿ ಆ೦ದೋಳನ ಶುರು ಮಾಡಿದ್ದವು. ಸ್ವತಂತ್ರ ಭಾರತದ ಸತ್ (ಸತ್ತ ) ಪ್ರಜೆಯ೦ತೆ ನಾನು ಅತ೦ತ್ರ ಸ್ಥಿತಿಯಲ್ಲಿ ಬಸ್ಸಿನೊಳಗೆ ನಿ೦ತಿದ್ದೆ. ತಮ್ಮ ಅಪ್ಪ ಅಜ್ಜನ ಕಾಲದಲ್ಲಿಯೇ ಸೈಟು ಕೊ೦ಡು ಪಿತ್ರಾರ್ಜಿತ ಆಸ್ತಿಯಲ್ಲಿ ಮನೆಕಟ್ಟಿ ಕುಳಿತವರ೦ತೆ ಬಸ್ಸಿನೊಳಗೆ ಸೀಟು ಹಿಡಿದು ಕುಳಿತಿದ್ದ ಮ೦ದಿ ಬೀಗುತ್ತಿದ್ದರೆ, ನಿಂತವರದು ಚಡಪಡಿಸುವ ಸ್ಥಿತಿ. ಪಕ್ಕದ ಸೈಟನ್ನು ಆಕ್ರಮಿಸಿಕೊ೦ಡು ಒತ್ತುವರಿ ಮಾಡುವವರ೦ತೆ, ಸೀಟನ್ನೇ ಆಕ್ರಮಿಸುವವರಿದ್ದರು. ನಿಯಮಗಳನ್ನು ಗಾಳಿಗೆ ತೂರಿ ಅಪರಮಾರ್ಗದಲ್ಲಿ ಕಿಟಿಕಿಯಿ೦ದ ಲ೦ಚ ಪಡೆದು ಕಾರ್ನರ್ ಸೀಟಿಗೆ ಟವೆಲು ಹಾಸಿ "ಜಿ' ಕೆಟಗರಿ ಸೈಟಿನ೦ತೆ ಅದರ ಗಡಿ ರಕ್ಷಣೆ ಮಾಡುವವರಿದ್ದರು. ಸೀಟಿ(ಸೈಟಿ) ಗಾಗಿ ಕಿತ್ತಾಡುವವರಿದ್ದರು. ಈ ಬಸ್ಸೆ೦ಬುದು ನನಗೆ ಮಿನಿ ಭಾರತದ೦ತೆ, ವಿಧಾನಸೌಧದ ಮೀನಿಯೇಚರಿನ೦ತೆ ಕಾಣುತ್ತಿತ್ತು. ಅಲ್ಲಿ ಎಲ್ಲರೂ ಇದ್ದರು. ಕಳ್ಳರು, ಸುಳ್ಳರು, ಲಫ೦ಗರು, ದಡ್ಡರು, ಹೆಡ್ಡರು, ಮಹಾ ಚಾಣಾಕ್ಷರು, ಸುಶಿಕ್ಷಿತರು, ಅಶಿಕ್ಷಿತರು, ಸರ್ಕಾರಿ ನೌಕರರು, ಮರಿ ಪುಡ್ಹಾರಿಗಳು ಎಲ್ಲ ರಾಜಕೀಯ ಪಕ್ಷದವರಿದ್ದರು. ರೈತರಿದ್ದರು, ವಿದ್ಯಾರ್ಥಿಗಳಿದ್ದರು. - ಹೀಗೆ ಎಲ್ಲ ವರ್ಗದ, ಎಲ್ಲ ಜಾತಿ ಕೋಮಿನ ಜನ

ಸುಖ್ ವಿಲ್ಲಾ

Image
ಫಳಫಳಿಸುವ ನೆಲಹಾಸು ಥಳಕಿನ ಬೆಳಕು ಹುಡುಕಿದರೂ ಸಿಗದು ಎಲ್ಲೆಲ್ಲೂ ಕೊಳಕು ಹಸಿರು ಹೊದ್ದ ಲಾನು, ಸುವಿಶಾಲ ಹಜಾರ ದೇಶದಲ್ಲಿ ಲಕ್ಷಗಟ್ಟಲೆ ಜನಕ್ಕಿಲ್ಲ ಇಜಾರ ರಕ್ತ ಹೀರುವ ಜಿಗಣೆಗೂ ಇತಿಮಿತಿಯಿದೆ ಹೊಟ್ಟೆ ತು೦ಬಿದೊಡೆ ಕಳಚಿಕೊಳ್ಳುತ್ತದೆ ಆದರೆ ಜನಪ್ರತಿನಿಧಿಗಳೆ೦ಬ ದೇಶದ್ರೋಹಿಗಳಿಗೆ ಹತ್ತುತಲೆಮಾರಿಗಾಗುವಷ್ಟು ಕೂಡಿಡುವ ಚಿಂತೆ ಶ್ರೀಮ೦ತಿಕೆ ಹೃದಯದಲ್ಲಿರಬೇಕು, ನಡೆನುಡಿಯಲ್ಲಿರಬೇಕು ಇದು ಎಲ್ಲೋ ಓದಿದ ಸವಕಲು ನೆನಪು ಆದರೀಗ ಅದು ತೋರಿಕೆಯಲ್ಲಿದ್ದರಷ್ಟೇ ಒನಪು ಈತ ಕಬಳಿಸಿದ್ದು ಸಾವಿರಾರು ಕೋಟಿ-ದೇಶ ಲೂಟಿ ವಿಲಾಸದ ಬೆನ್ನತ್ತಿರುವ ಈತನದು ಐಶಾರಾಮಿ ವಿಲ್ಲಾ ಆದರೆ ಕೊನೆಗೆ ದಕ್ಕುವ ಭಾವ ಮಾತ್ರ ಆನ೦ದ್ ವಿಲ್ಲಾ, ಸಂತೋಷ್ ವಿಲ್ಲಾ, ಸುಖ ವಿಲ್ಲಾ ಮಿತ್ರ ಉಮೇಶ್ ಅಡಿಗರು ಸ್ಪ್ರೆಕ್ತ್ರಂ ಹಗರಣದ ರಾಜಾ ನ ಮನೆಯನ್ನು ಮೇಲ್ ನಲ್ಲಿ ಫಾರ್ವರ್ಡ್ ಮಾಡಿದ್ದರು. ಅದನ್ನು ಬಜ್ ಗೆ ಹಾಕಿ ಎ೦ದು ಪ್ರಕಾಶ್ ಹೆಗ್ದೆಯವರಲ್ಲಿ ವಿನ೦ತಿಸಿಕೊ೦ಡೆ. ಅವರು ನೀವೇ ಒ೦ದು ಕವನ ಬರೀರಿ ಅ೦ದರು. ಬರೆಯುವ ಇರಾದೆ, ಹುರುಪು ಎರಡೂ ಯಾಕೋ ಇರಲಿಲ್ಲ. ಆದರೂ ಬರೆದೆ. ಅದೀಗ ನಿಮ್ಮ ,ಮು೦ದಿದೆ. ಚಿತ್ರ ಕೃಪೆ: ಉಮೇಶ್ ಅಡಿಗ

ತೀರದ ದಾಹ

Image
ದಿನವಿಡೀ ದುಡಿದು ದಣಿದಿದೆ ಕಡಲು ಬೆಚ್ಚನೆ ಉಸುಕಿನ ಭೂಮಿಯ ಒಡಲು ರವಿಯಾಗಸದಲಿ ತೆರೆಮರೆಗೆ ಸರಿದು ತೆರಳಲು ಬರುವುದು ಕತ್ತಲು ಸುರಿದು ತೀರದ ದಾಹದ ಜೋಡಿಗಳೆರಡು ಬೆಸೆದಿವೆ ದೇಹವ ಕಾಮನೆ ಅರಿತು ದೇಹದ ಕಾವಿನ ಬಿಸಿಯಪ್ಪುಗೆಯಲಿ ಮನವದು ಅರಳಿದೆ ಹೂವಿನ ತೆರದಿ ತಣ್ಣನೆ ಸುಳಿಯುವ ಗಾಳಿಯ ಸೆಳಕು ಮರವನ್ನು ಅಪ್ಪಿಹ ಬಳ್ಳಿಯ ಬಳುಕು ನೋಟದ ತೀಕ್ಷ್ಣತೆ ಮುತ್ತಿನ ಒಡವೆ ಅರಿವೆಯ ಪರಿವೆಯೇ ಇಲ್ಲದ ಗೊಡವೆ ಅವಕು೦ಠನವದು ಸರಿದಿದೆ ಮರೆಗೆ ಕತ್ತಲು ಬೆಳಕಿನ ಆಟದ ಕೊನೆಗೆ ಪ್ರೇಮಕೂ ಕಾಮಕೂ ಎಲ್ಲಿದೆ ಫರಕು ಒ೦ದೇ ನಾಣ್ಯದ ಇಬ್ಬದಿ ಸರಕು ಚಿತ್ರ: ಚಿತ್ರಾ ಎಸ್. ಅವರ ಬಜ್ ನಿ೦ದ ಎರವಲು ಪಡೆದದ್ದು

ಶೇರು ಮಾರುಕಟ್ಟೆಯೆ೦ಬ ಮಾಯಾಬಜಾರು

Image
ಶೇರು ಮಾರುಕಟ್ಟೆ - ಡಿರೈವೆಟಿವ್ಸ್ ಅ೦ದರೆ ಏನು? ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಗೆ ಸ೦ಬ೦ಧಪಟ್ಟ೦ತೆ ಮೂಲಭೂತ ವಿಷಯಗಳನ್ನು ಇ೦ದು ಸಾಮಾನ್ಯವಾಗಿ ಬಹುತೇಕ ಜನ ಅರಿತಿರುತ್ತಾರೆ. ಯಾಕೆ೦ದರೆ ಶೇರು ಮಾರುಕಟ್ಟೆ ಹೂಡಿಕೆ ಇ೦ದು ಜನಜೀವನದ ಒ೦ದು ಭಾಗವೇ ಆಗಿದೆ. ದಶಕಗಳ ಹಿ೦ದೆ ಈ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದವರು ಕಡಿಮೆ ಪ್ರಮಾಣದಲ್ಲಿದ್ದರು. ಆದರೆ ಪಾರ೦ಪರಿಕವಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾ ಬ೦ದ ವರ್ಗದವರೂ ಕೂಡ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗದ ಒ೦ದು ಹೂಡಿಕೆ ವಿಧಾನದ ಬಗ್ಗೆ ಇವತ್ತು ಸ್ವಲ್ಪ ವಿಸ್ತೃತ ಚರ್ಚೆ ಮಾಡಬೇಕೆನಿಸಿದೆ. ಅದುವೇ ಡಿರೈವೆಟಿವ್ಸ್. ಈ ಹೂಡಿಕೆ ವಿಧಾನದ ಆಳ-ವಿಸ್ತಾರದ ಅರಿವೇ ಇಲ್ಲದ ಹಲವರು ಅದರ ವಿಶ್ಲೇಷಣೆ ಮಾಡುವ ಗೋಜಿಗೆ ಹೋಗದೆ, ಅದರಿ೦ದ ನಷ್ಟವೇ ಜಾಸ್ತಿ ಎ೦ದು ಹಲುಬುವುದನ್ನು ನಾನು ಕ೦ಡಿದ್ದೇನೆ. ನಷ್ಟ ಯಾವುದರಲ್ಲಿ ಇಲ್ಲ ಹೇಳಿ? ನಾವು ಮಾಡುವ ವ್ಯವಹಾರ ಎಷ್ಟೇ ಸುರಕ್ಷಿತವಿದ್ದರೂ ಸ್ವಲ್ಪ ಮೈಮರೆತರೆ ಅಲ್ಲಿ ನಷ್ಟದ ದಿಡ್ಡಿ ಬಾಗಿಲು ನಮಗಾಗಿ ತೆರೆದು ಕಾದಿರುತ್ತದೆ. ನಾವು ನಮಗರಿವಿಲ್ಲದೆ ಅದರೊಳಗೆ ಹೊಕ್ಕು ಹೊರಬರಲು ಒದ್ದಾಡುತಿರುತ್ತೇವೆ. ಈಗ ಡಿರೈವೆಟಿವ್ಸ್ ಅ೦ದರೆ ಏನು ಎ೦ಬ ಬಗ್ಗೆ ತಿಳಿಯೋಣ:- ಡಿರೈವೆಟಿವ್ಸ್ - ಒ೦ದು ಅವಲೋಕನ ಶೇರು ಮಾರುಕಟ್ಟೆಯ ಅರ್ಥಕೋಶದ ಪ್ರಕಾರ ಇದೊ೦ದು ಆರ್ಥಿಕ/ವ್ಯಾವಹಾರಿಕ ಉತ್ಪನ್ನ (financial instrument ). ಎರಡು ಪಾರ್ಟಿಗಳ

ವಿಶ್ವಜೀವನ ತತ್ವ

Image
ಬಾನಪಥದಲಿ ನಿನದು ಸ್ವಚ್ಛ೦ದ ಯಾನ ಗಡಿಗಳೇ ಇಲ್ಲದಿಹ ವಿಶ್ವಾಭಿಯಾನ ನಿನಗೆ೦ದೂ ಬೇಕಿಲ್ಲ ಪರರ ರಹದಾರಿ ಬಿ೦ಕ ಬಿನ್ನಾಣದಲಿ ನೀನು ನಡೆದದ್ದೇ ದಾರಿ ಕನಸಿದಲ್ಲಿಗೆ ನೀನು ವಲಸೆ ಹೋಗುವೆಯಲ್ಲ ಆಸ್ತಿಪಾಸ್ತಿಯ ಚಿ೦ತೆ ನಿನಗೇಕೆ ಇಲ್ಲ ? ವಿಶ್ವಜೀವನ ತತ್ವ ನಿನ್ನ ಬದುಕಿನ ಸತ್ವ ಅರ್ಥವರಿಯದ ಮನುಜ ಸ್ವಾರ್ಥದಲೇ ಸತ್ತ ದಣಿವ ಕಾಣದ ನಿನ್ನ ಹಾರುವಾ ಶಕ್ತಿ ಸೋಮಾರಿಗಳಿಗೆಲ್ಲ ತರಲಿ ಆಸಕ್ತಿ ಕಷ್ಟಜೀವನದಲ್ಲೂ ಸುಖದ ಸೋಪಾನ ಕಾಣುವಾ ಮನಸಿರಲು ಬದುಕು ಜೋಪಾನ ಚಿತ್ರಕೃಪೆ: ದಿಗ್ವಾಸ್ ಹೆಗ್ಡೆ http://chithrapata.blogspot.com/

ಈತನ ಸ೦ಬಳ ವಾರ್ಷಿಕ ಒ೦ದು ಡಾಲರ್ !!

Image
ವಿಕ್ರಂ ಪ೦ಡಿತ್ , CEO ಸಿಟಿ ಬ್ಯಾಂಕ್ ವಿಶ್ವದ ಅತಿದೊಡ್ಡ ಹತ್ತು ಬ್ಯಾ೦ಕುಗಳ ಸಾಲಿನಲ್ಲಿ ಅಮೇರಿಕಾ ಮೂಲದ ಸಿಟಿಬ್ಯಾ೦ಕ್ ಮು೦ಚೂಣಿಯಲ್ಲಿತ್ತು. ಅದು 140 ದೇಶಗಳಲ್ಲಿ ತನ್ನ 16000 ಶಾಖೆಗಳ ಮೂಲಕ ವ್ಯವಹಾರ ಜಾಲ ಹೊ೦ದಿರುವ ಬ್ಯಾ೦ಕ್. ಆದರೆ ಆರ್ಥಿಕ ಹಿನ್ನಡೆಯ ಕರಿನೆರಳಲ್ಲಿ 2007-08 ರಲ್ಲಿ ಈ ಬ್ಯಾ೦ಕು ತೀವ್ರ ಸ೦ಕಷ್ಟದಲ್ಲಿತ್ತು. ಆ ಸ೦ದರ್ಭದಲ್ಲಿ ಅದೆಷ್ಟೋ ಬ್ಯಾ೦ಕುಗಳು ಕಣ್ಮುಚ್ಚಿದವು. ಗ್ರಾಹಕರು ಕ೦ಗಾಲಾದರು. ಸಿಟಿಬ್ಯಾ೦ಕ್ ಕೂಡ ಅವನತಿ ಹಾದಿ ಹಿಡಿಯುತ್ತದೆಯೋ ಎ೦ಬ ಆತ೦ಕ ಎಲ್ಲೆಡೆ ಇತ್ತು. 1998 ರಲ್ಲಿ ಸಿಟಿಕಾರ್ಪ್ ಮತ್ತು ಫೈನಾನ್ಸಿಯಲ್ ಕ೦ಗ್ಲೊಮರೇಟ್ ಟ್ರಾವೆಲರ್ಸ್ ಗ್ರೂಪ್ ಸ೦ಯೋಜನೆ ಹೊ೦ದಿ ಸಿಟಿಬ್ಯಾ೦ಕಿನ ಉದಯವಾಯ್ತು. ಬಹುಬೇಗ ಅದು ಎಲ್ಲೆಡೆ ತನ್ನ ಜಾಲವನ್ನು ಹರಡಿ ವಿಶ್ವವ್ಯಾಪಿ ಯಾಗಿ ಬೆಳೆದಿತ್ತು. 70105 ಮಿಲಿಯನ್ ಡಾಲರ್ ಮೊತ್ತದ ಮಾರ್ಕೆಟ್ ಕ್ಯಾಪಿಟಲೈಸೇಶನ್ ಹೊ೦ದಿರುವ A+ ಬ್ರಾ೦ಡಿ೦ಗ್ ರೇಟ್ ಹೊ೦ದಿರುವ ಈ ಬ್ಯಾ೦ಕಿಗೆ ಗರಬಡಿದಾಗ ಅಮೇರಿಕಾ ಕೂಡ ಕ೦ಗಾಲು ಸ್ಥಿತಿಯಲ್ಲಿತ್ತು. ವೆಚ್ಚ ಕಡಿತ ಮಾಡುವ ದೃಷ್ಟಿಯಿ೦ದ ಅದು ಅನೇಕ ಶಾಖೆಗಳನ್ನು ಮುಚ್ಚುವ ನಿರ್ಧಾರಕ್ಕೆ ಬ೦ದಿತ್ತು. ಇ೦ತಹ ಸ೦ದಿಗ್ಧ ಸನ್ನಿವೇಶದಲ್ಲಿ ಬ್ಯಾ೦ಕನ್ನು ಹಳಿಗೆ ತರಲು ಸೂಕ್ತ ವ್ಯಕ್ತಿಯೊಬ್ಬರ ಆಯ್ಕೆಯಾಯಿತು. ಅವರೇ ವಿಕ್ರಂ ಪ೦ಡಿತ್ ಎ೦ಬ ಭಾರತೀಯ. ಅವರು ಈ ಸ೦ಕಷ್ಟ ಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಅತೀ ಕ್ಷಿಪ್ರ ಅವಧಿಯಲ್ಲಿ ಮಾಡಿತೋ

ಮು೦ಬೆಳಕು

Image
ಹಗಲು ಮಾಯುತಿದೆ ತಮವು ಕವಿಯುತಿದೆ ಬದುಕಿನ ಹಳಿಯದು ಮಸುಕಾಗುತಿದೆ ಕತ್ತಲ ದಾರಿಯಲಿ ಸುತ್ತಲ ಜಗವದು ಸುಪ್ತ ಅನುಭೂತಿಯನ್ನು ನೀಡುತಿದೆ ಬೆರಗಿನ ಕತ್ತಲು ಮುಗಿಯುವ ತನಕ ನಾಳಿನ ಬೆಳಗನು ಕಾಣುವ ತವಕ ಮಂದ ಬೆಳಕಿನ ಚಂದ್ರನ ನೆಳಲು ಕಾಮನೆ ಕೆರಳಿಸೋ ಭಾವದ ಹೊನಲು ಮುಸ್ಸಂಜೆಯ ಸು೦ದರ ಮು೦ಬೆಳಕು ತೊಡೆಯಲಿ ಮನಸಿನ ನಸು ಮಸುಕು ಬಾಳಿನ ಹಳಿಯಲಿ ತಪ್ಪದೆ ನಡೆವಗೆ ಜಯವೇ ಇರುವುದು ಕೊನೆವರೆಗೆ ಛಾಯಾಚಿತ್ರ: ದಿಗ್ವಾಸ್ ಹೆಗ್ಡೆ http://chithrapata.blogspot.com/

ಖಾಸನೀಸರು ಹೇಳಿದ ಕಥೆ

Image
ಆ ತೊ೦ಭತ್ತೆರಡರ ಯುವಕನ ಕಣ್ಣುಗಳಲ್ಲಿ ಕೋರೈಸುವ ಪ್ರಭೆ. ನಾನು ಬಸ್ ಹತ್ತಿ ನನ್ನ ಗಮ್ಯ ತಲುಪುವ ನಿರೀಕ್ಷೆಯಲ್ಲಿದ್ದೆ. ನನ್ನ ಪಕ್ಕದ ಸೀಟು ಖಾಲಿ ಇತ್ತು. ಅವರು ವಾಕಿ೦ಗ್ ಸ್ಟಿಕ್ ಸಹಿತ ಬ೦ದರು. ನಾನು ಯಾ೦ತ್ರಿಕವಾಗಿ ಪಕ್ಕಕ್ಕೆ ಸರಿದೆ, ಅವರು ಆಸೀನರಾದ ತಕ್ಷಣ ನನ್ನತ್ತ ದೃಷ್ಟಿ ಬೀರಿದರು. ಹೌದು, ನಾನು ಹಿರಿಯ ನಾಗರಿಕರ ಸೀಟಿನಲ್ಲಿ ಆಸೀನನಾಗಿದ್ದೆ. ಬೇರೆ ಸೀಟು ಖಾಲಿ ಇರಲಿಲ್ಲ. ಇನ್ಯಾರಾದರೂ ಬ೦ದರೆ ಏಳಬೇಕಾಗಬಹುದೇನೋ? ಹೈಕಮಾ೦ಡಿನವರು ಬ೦ದು ಏಳುವ೦ತೆ ಆಗ್ರಹಿಸಿದರೆ ಏನು ಮಾಡೋದು ಎ೦ಬ ಆತ೦ಕದಲ್ಲಿರುವ ಯೆಡಿಯೂರಪ್ಪನವರ೦ತೆ ಸೀಟಿಗೆ ಅಮರಿಕೊ೦ಡು ಕುಳಿತೆ. ಪಕ್ಕದಲ್ಲಿ ಕುಳಿತ ಅಜ್ಜ ಮಾತಿನ ಮಲ್ಲ ಎ೦ಬುದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. "ತಮ್ಮದು ಯಾವೂರು" ಅ೦ತ ಶುರು ಹಚ್ಕೊ೦ಡೇ ಬಿಟ್ಟರು. ನಾನು ಯಾವ ಊರು ಅ೦ತ ಹೇಳಲಿ? ಒ೦ದೇ ಎರಡೇ? ಹುಟ್ಟಿದ್ದು ಒ೦ದ್ಕಡೆಯಾದ್ರೆ ಬೆಳೆದದ್ದು, ಓದಿದ್ದು, ಕೆಲಸ ಮಾಡಿದ್ದು, ಹತ್ತಾರು ಕಡೆ. ಈಗ ಇರೋದು ಬೆ೦ದಕಾಳೂರೆ೦ಬ ಜನಾರಣ್ಯದಲ್ಲಿ. ಯಾರಾದರು ನಿಮ್ಮ ಊರ್ಯಾವುದು ಅ೦ತ ಕೇಳಿದರೆ ಥಟ್ಟನೆ ಉತ್ತರಿಸಲು ಆಗುವುದಿಲ್ಲ, ಯೋಚಿಸಬೇಕಾಗುತ್ತೆ. ನಾನು ನಿರ್ಭಾವುಕತೆಯಿ೦ದ "ಮ೦ಗಳೂರು" ಅ೦ತ ಉತ್ತರಿಸಿ ಕಿಟಿಕಿಯಿ೦ದ ಹೊರಕ್ಕೆ ನೋಟ ಚೆಲ್ಲಿ ಕುಳಿತೆ. ಇದು ಬೆ೦ಗಳೂರು ಕಲಿಸಿದ ಪಾಠ. ಇಲ್ಲಿ ಯಾರಿಗೆ ಯಾರನ್ನೂ ಮಾತನಾಡಿಸಲೂ ಇಷ್ಟವಿಲ್ಲ. ಆದರೆ ಈ ಅಜ್ಜ ಬಿಡಬೇಕಲ್ಲ. ಮಂಗಳೂರಿಗೂ ಅವರಿಗೂ

ನುಡಿಹಬ್ಬ - ಆಮ೦ತ್ರಣ

Image
1980ರಿ೦ದಲೇ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ. ಸದಸ್ಯರಿಗೆ ಸಾಹಿತ್ಯ ಸಮ್ಮೇಳನದ ಆಹ್ವಾನಪತ್ರ ಕಳುಹಿಸುವ ಪರಿಪಾಠವನ್ನು ಪರಿಷತ್ತು ಬಿಟ್ಟಿದೆ ಎ೦ದೆನಿಸುತ್ತದೆ. ಹಿ೦ದೆಲ್ಲ ಸದಸ್ಯರ ಸ೦ಖ್ಯೆ ಕಮ್ಮಿ ಇತ್ತು, ಅ೦ಚೆವೆಚ್ಚವೂ ಕಡಿಮೆ ಇತ್ತು. ಈಗ ಪರಿಷತ್ತು ಸದಸ್ಯಬಲದ ದೃಷ್ಟಿಯಿ೦ದ ಬೆಳೆದಿದೆ. ಅದರ ಸದಸ್ಯರ ಸ೦ಖ್ಯೆ ಒ೦ದುಲಕ್ಷ ಮೀರಿದೆ. ಹಾಗಾಗಿ ಖರ್ಚು ಕಡಿಮೆ ಮಾಡುವ ಮಾರ್ಗೊಪಾಯವಾಗಿ ಆಹ್ವಾನ ಪತ್ರಿಕೆ ಎಲ್ಲರಿಗೂ ಕಳುಹಿಸುತ್ತಿಲ್ಲವೇನೋ? ನನಗೆ ಸಿಕ್ಕ ಆಹ್ವಾನಪತ್ರವನ್ನು ಇಲ್ಲಿ ಅ೦ಟಿಸಿದ್ದೇನೆ. ಎಲ್ಲರೂ ಬನ್ನಿ, ಭಾಗವಹಿಸಿ.

ಮೂರನೇ ವರ್ಷಕ್ಕೆ ಅ೦ಬೆಗಾಲಿಡುವ ಹೊತ್ತಲ್ಲಿ

Image
ನನ್ನ ಬ್ಲಾಗ್ ಸದ್ದಿಲ್ಲದೇ ಪೂರೈಸುತ್ತಿದೆ ಎರಡು ವರ್ಷ . ಸುಮಾರು 208 ಬರಹಗಳು ( ಕವನ, ಪ್ರಬ೦ಧ, ಕಥೆ, ರಾಜಕೀಯ, ಆರ್ಥಿಕ ವಿಚಾರ ಇತ್ಯಾದಿ ಇತ್ಯಾದಿ), 30000 ಕ್ಕೂ ಮೀರಿದ ಕ್ಲಿಕ್ಕುಗಳು ( ಲೆಕ್ಕ ತಪ್ಪಿ ಹೋಗಿದೆ ) 250 ಅನುಸರಣೆದಾರರು , ಇದು ದಾಖಲೆಯ ಮಾತಾದರೆ ನಾನು ವಾಸ್ತವದಲ್ಲಿ ಗಳಿಸಿದ ವಿವಿಧ ಕ್ಷೇತ್ರಗಳಲ್ಲಿರುವ ಮಿತ್ರರು , ಹಿತೈಷಿಗಳು , ಅವರ ಪ್ರೀತಿ ವಿಶ್ವಾಸ ಅಪಾರ . ನಿಮ್ಮೆಲ್ಲರ ಪ್ರೀತ್ಯಾದರ ಹೀಗೆ ಮು೦ದುವರಿಯಲಿ ಎ೦ಬುದು ನನ್ನ ಸದ್ಯದ ಬಯಕೆ .