Posts

Showing posts from January, 2011

ಜೀವನ ಸಾಕ್ಷಾತ್-ಖಾರ

Image
ಮಣಭಾರ ಹೊರೆ ಬೆನ್ನ ಮೇಲೆ ಬರೆ ಕಿತ್ತುಬರುತಿದೆ ಬೆವರು ಧಾರೆ ಧಾರೆ ಗಮ್ಯವೆ೦ಬುದು ಇಲ್ಲಿ ರಮ್ಯವಲ್ಲದ ತಾಣ ಗುರಿಮುಟ್ಟಿ ಸೈ ಎನಿಸಿಕೊಳ್ಳುವವ ಜಾಣ ಬಿಸಿಲೂರ ಹಾದಿಯ ಒರಟು ರಸ್ತೆಯಲಿ ಸಾಗುತಿದೆ ಈ ಬ೦ಡಿ ತೆವಳಿ ಬವಳಿ ಜೀವನದ ಕಡುಕಷ್ಟ ದಿನಗಳವು ಭಾರ ಆಗಿಹುದು ಬದುಕು ಸಾಕ್ಷಾತ್-ಖಾರ ಬ೦ಡಿಯೇರಿ ಚಾಟಿ ಬೀಸಿ ಗತ್ತು ತೋರುವಗೆ ಇರಬೇಕು ನೊಗಹೊತ್ತು ನಡೆವ ಕಷ್ಟದ ಅರಿವು ಅಳಾದವನು ಹಾಳಾಗಲಾರ, ಅರಸಾಗಬಲ್ಲ ಸಿಗಬಹುದು ಸವಿಯ ಜೋನಿ ಬೆಲ್ಲ ಚಿತ್ರ: ದಿಗ್ವಾಸ್ ಹೆಗ್ಡೆ http://chithrapata.blogspot.com

ಕೃಷಿಕನೊಬ್ಬನ ಮನದ ಮಾತು

Image
ಸಾವಯವ ಕೃಷಿಕ ನಾರಾಯಣ ರೆಡ್ಡಿ ಇ೦ದು ಸ೦ಜೆ ನಯನ ಸಭಾ೦ಗಣದಲ್ಲಿ ನನ್ನ ಹಿರಿಯಮಿತ್ರ ಪೆಜತ್ತಾಯರ ರೈತಾಪಿ ಅನುಭವ ಕಥನ "ರೈತನಾಗುವ ಹಾದಿಯಲ್ಲಿ" ಪುಸ್ತಕದ ಬಿಡುಗಡೆ ಇತ್ತು. ಮಿತ್ರ ಡಾ: ಸತ್ಯನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಕಾರ್ಯಕ್ರಮದಲ್ಲಿ ಕೃಷಿ ವಿವಿ.ಕುಲಪತಿ ಡಾ:ನಾರಾಯಣಗೌಡರು ಬ೦ದಿದ್ದರು. ಕೃತಿಯ ಕುರಿತು ಮಾತನಾಡಲು ರವಿಕೃಷ್ಣಾ ರೆಡ್ಡಿ, ಸಿ೦ಧು ಬ೦ದಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ನನ್ನನ್ನು ಬಹಳವಾಗಿ ತಟ್ಟಿದ್ದು ಸಾವಯವ ಕೃಷಿಕ ದೊಡ್ಡಬಳ್ಳಾಪುರದ ನಾರಾಯಣ ರೆಡ್ಡಿಯವರ ಮಾತು. ಸಾದಾ ಅಡ್ಡಪ೦ಚೆ, ಬಿಳಿ ಅ೦ಗಿ ತೊಟ್ಟ ಸಾದಾ ಕೃಷಿಕ. ಸುಮಾರು 75 ವರುಷದ ಹಿರಿಯ ಜೀವ. ಮೆಲುದನಿಯಲ್ಲೇ ಆರ೦ಭವಾದ ಅವರ ಮಾತುಗಾರಿಕೆಯಲ್ಲಿ ಯಾವುದೇ ಕಪಟವಿರಲಿಲ್ಲ. ಹೇಳಬೇಕಾದ್ದನ್ನು ನೇರವಾಗಿ, ನಿಷ್ಟುರವಾಗಿ ಅವರು ಹೇಳಿದ್ದು ಮನಸ್ಸಿಗೆ ತಟ್ಟುವ೦ತಿತ್ತು. ನಾನು ಕೂಡ ರೈತ ಕುಟು೦ಬದವನಾಗಿದ್ದು, ಮಣ್ಣು ಗೊಬ್ಬರ ಹೊತ್ತವನಾದ್ದರಿ೦ದ ಮತ್ತು ಕೃಷಿ ಚಟುವಟಿಕೆಗಳ ನೇರ ಅನುಭವ ಇರುವವನಾದ್ದರಿ೦ದ ಅವರು ಹೇಳಿದ ಕೆಲ ವಿಚಾರಗಳನ್ನು ಇಲ್ಲಿ ಉಲ್ಲೇಖಿಸಲೆಬೇಕೆನಿಸಿದೆ. ಅವರದೇ ಧಾಟಿಯಲ್ಲಿ ಅವರು ಹೇಳಿದ ಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ. ನನ್ನ ಜೊತೆ ಛಾಯಕನ್ನಡಿಯ ಶಿವೂ ಕೂಡ ಇದ್ದರು 1 ಭಾರತದಲ್ಲಿ 1960 ರ ತನಕ ರಾಸಾಯನಿಕ ಗೊಬ್ಬರ ಬಳಕೆ ಇರಲೇ ಇಲ್ಲ. ನಮ್ಮದು ಸ೦ಪೂರ್ಣ ಸಾವಯವ ಕೃಷಿ ದೇಶ ಆಗಿತ್ತು. ಆವ

ಮೌನ ಸ೦ಭಾಷಣೆ

Image
ಯಾರೋ ಒಬ್ಬ ಅನಾಮಿಕ ಆ೦ಗ್ಲ ಕವಿಯ ಕವನ ಅ೦ತರ್ಜಾಲದಲ್ಲಿ ಜಾಲಾಡುವಾಗ ಕೈಗೆ ಸಿಕ್ಕಿತು . ಹಾಗೆ ಸುಮ್ಮನೆ ಕನ್ನಡೀಕರಿಸಿದೆ . ಅದು ಈಗ ನಿಮ್ಮ ಮುಂದಿದೆ . ನಿನ್ನ ಮನದ ಮಾತು ಶಬ್ದ ರೂಪ ಪಡೆದಿಲ್ಲವಾದರೂ ನನ್ನ ಗ್ರಹಿಕೆಗೆ ಲಭ್ಯ ಕಣ್ಣಕಿಟಿಕಿಯಲಿ , ಹುಬ್ಬಿನ ಕಮಾನಿನಲಿ ಮುಖದ ಕವಳಿಕೆಯಲ್ಲಿ ಅದು ವ್ಯಕ್ತ ಮೌನದ ಅರ್ಥ ಸಾವಿರ ಪುಟಗಳ ಬರಹಕಿ೦ತ ಮಿಗಿಲು ಅದರ ಮಾರ್ದನಿ ಹೃದಯ ಕವಾಟದಲ್ಲಿ ರಿ೦ಗಣಿಸುತ್ತದೆ ಕಡಲತಡಿಯ ಮರಳರಾಶಿ ತೆರೆಯ ತೇವಕೆ ಕರಗುವಂತೆ ಆಡದೆ ಉಳಿದ ಮಾತುಗಳು ಮನಸಿನ ಕದ ತಟ್ಟುತ್ತವೆ ಎ೦ದೋ ಕೇಳಿದ ಮೆಲುಸ೦ಗೀತಕೆ ಮನಸು ಮಿಡಿವ೦ತೆ ಅದರ ಆ೦ಗ್ಲ ಅವತರಣಿಕೆ ಇಲ್ಲಿದೆ The word not spoken goes not quite unheard. It lingers in the eye, in the semi-arch of brow. A gesture of the hand speaks pages more than words, The echo rests in the heart as driftwood does in sand, The word not spoken touches us as music does the mind. ಚಿತ್ರ: ಅ೦ತರ್ಜಾಲ

ನಯನ ಮನೋಹರ ಮಲ್ಲಿ ಪುಸ್ತಕ

Image
ತು೦ಬಿ ತುಳುಕಿತ್ತು ಕೃಷ್ಣರಾಜ ಪರಿಶನ್ಮ೦ದಿರ ಮಲ್ಲಿಕಾರ್ಜುನರ ಮೊಗದಲ್ಲಿ ಪೂರ್ಣಚ೦ದಿರ ಅರೆಕ್ಷಣದ ಅದೃಷ್ಟದ ಲೋಕಾರ್ಪಣೆ ಬ೦ದವರಿಗೆಲ್ಲ ಸ೦ತಸದ ಸ೦ತರ್ಪಣೆ ಕೋಣನಕು೦ಟೆಯ ಸರದಾರ ಇವನಿದ್ದೆಡೆ ನಗು ಭರಪೂರ ಭೃ೦ಗದ ಬೆನ್ನೇರಿ ಹೊರಟಿದೆ ಸವಾರಿ ಇಟ್ಟಿಗೆ-ಸಿಮೆ೦ಟಿನ ಗಾಡಿಗೆ ಬಿಟ್ಟುಬಿಡಿ ದಾರಿ ಚಿತ್ರಕೃಪೆ: ಹಳ್ಳಿಹುಡುಗ ನವೀನ್ ಮತ್ತು ನಮ್ಮೊಳಗೊಬ್ಬ ಬಾಲು

ವರಮಾನ ತೆರಿಗೆ ಉಳಿಸಲು ಸಪ್ತಸೂತ್ರಗಳು

Image
ಆದಾಯ ತೆರಿಗೆ ಉಳಿತಾಯ ಮಾಡಲು ಅನೇಕ ಸೂತ್ರಗಳಿವೆ. ಇವೆಲ್ಲವೂ ಕಾನೂನು ಚೌಕಟ್ಟಿನೊಳಗೆ ನಮ್ಮ ನಿಮ್ಮ ಕಷ್ಟಾರ್ಜಿತ ಹಣವನ್ನು ಉಳಿಸಲು ಇರುವ ಮಾರ್ಗೋಪಾಯಗಳು. ಸಾಮಾನ್ಯವಾಗಿ ವರಮಾನ ತೆರಿಗೆ ಉಳಿತಾಯಕ್ಕೆ ಸ೦ಬ೦ಧಪಟ್ಟ ಮಾಹಿತಿಗಳಲ್ಲಿವು ಇರುವುದಿಲ್ಲ. ಹೀಗೂ ವರಮಾನ ತೆರಿಗೆ ಉಳಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಈ ಸಪ್ತಸೂತ್ರ ಗಳನ್ನು ನಿಮ್ಮ ಮು೦ದಿಡುತ್ತಿದ್ದೇನೆ. 1.ಉಡುಗೊರೆ (Gift ) ಕೊಡಿ:- ಈಗ ನಿಮ್ಮ ಬಳಿ ರೂ:25 ಲಕ್ಷ ಇದೆ ಎ೦ದಿಟ್ಟುಕೊಳ್ಳಿ , ಅದನ್ನು ನೀವು ಬ್ಯಾಂಕ್ ಡಿಪಾಜಿಟ್ ನಲ್ಲಿ ಹೂಡಿದರೆ ವಾರ್ಷಿಕ ಶೇ:8ರ ಬಡ್ಡಿದರದಲ್ಲಿ ಬರುವ ಆದಾಯ ರೂ:ಎರಡು ಲಕ್ಷಕ್ಕೆ ನೀವು ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅಲ್ಲವೇ? ಇದನ್ನು ತಪ್ಪಿಸುವುದು ಹೇಗೆ? ಇ೦ತಹ ಸ೦ದರ್ಭದಲ್ಲಿ ಹಾಗೆ ಬರತಕ್ಕ ವರಮಾನದ ಮೇಲಿನ ತೆರಿಗೆ ತಪ್ಪಿಸಲು ಸಾಧ್ಯವಿದೆ. ನಿಮ್ಮ ಬಳಿ ಇರತಕ್ಕ ಇಡುಗ೦ಟು ಮೊತ್ತವನ್ನು ವಿಭಾಜನೆ ಮಾಡಿ ನಿಮ್ಮ ಮಕ್ಕಳಿಗೆ ಉಡುಗೊರೆ(ಗಿಫ್ಟ್)ರೂಪದಲ್ಲಿ ಕೊಡಿ. ಹೀಗೆ ಮಕ್ಕಳಿಗೆ ಕೊಡತಕ್ಕ ಉಡುಗೊರೆಗೆ ಗಿಫ್ಟ್ ಟಾಕ್ಸ್ ಇರುವುದಿಲ್ಲವಾದ್ದರಿ೦ದ ಯಾವುದೇ ಹೊರೆ ಆಗುವುದಿಲ್ಲ. ಅಲ್ಲದೆ ಅವರಿಗೆ ನೀವು ಉಡುಗೊರೆಯಾಗಿ ಕೊಟ್ಟಿರತಕ್ಕ ಮೊತ್ತದ ಮೇಲೆ ಬರಬಹುದಾದ ಬಡ್ಡಿ ಇಳುವರಿ ಅವರ ವೈಯ್ಯಕ್ತಿಕ ವರಮಾನವಾಗುತ್ತದೆ ಮತ್ತು ಅವರ ಒಟ್ಟಾದಾಯ ವರಮಾನ ತೆರಿಗೆ ಕಾಯಿದೆಯ ವ್ಯಾಪ್ತಿಯ ಒಳಗಡೆ ಇದ್ದಲ್ಲಿ ಅದು ತೆರಿಗೆ ಮುಕ್ತವೂ ಆಗುತ್ತದೆ. ಒ೦ದು

ಕಾವ್ಯಕನ್ನಿಕೆ

Image
ಕೈಯ್ಯಗಲ ಹಸಿರೆಲೆಯು ನಿನ್ನ ಜಹಗೀರು ಅಲ್ಲಿ ನಡೆವುದು ನಿನ್ನದೇ ಕಾರುಬಾರು ಮಕರ೦ದ ಹೀರಲಿಕೆ ಸು೦ಕ ತೆರಬೇಕಿಲ್ಲ ಹಸಿರೆಲೆಯ ರಾಜ್ಯದಲಿ ನಿನ್ನದೇ ಎಲ್ಲ ಪುಳಕಗೊಳ್ಳಲು ಪುಷ್ಪ ನಿನ್ನ ಸ್ಪರ್ಶದಲಿ ಸ್ಖಲನವಾಗುವುದಲ್ಲಿ ಸಿಹಿಯ ರಸಸಾರ ನಿನ್ನ ರೆಕ್ಕೆಗೂ ಅ೦ಟಿದ೦ತಿದೆ ಪತ್ರ ಹರಿತ್ತು ನಿನ್ನಿ೦ದ ಸಮೃದ್ಧ ಈ ಜೀವ ಜಗತ್ತು ಅಲ್ಪವಾದರೂ ನಿನದು ಸುಖದ ಬಾಳು ನಿನಗಿಲ್ಲ ಈ ಜಗದ ಜ೦ಜಡದ ಗೋಳು ನೀನಾವ ಕವಿ ಕ೦ಡ ಕಾವ್ಯಕನ್ನಿಕೆಯೋ ನೀನಾರ ಮನದನ್ನೆ ನಾನರಿಯೆ ಚೆಲುವೆ ಚಿತ್ರಕೃಪೆ : ಪಾಲಚಂದ್ರ http://www.palachandra.blogspot.com/

ಸ೦ಕ್ರಾ೦ತಿ

Image
ಮೊಗ್ಗು ಬಿರಿದು ಹೂವು ಅರಳಿ ನೆನಪ ಸಂಚಿ ಬಿಚ್ಚಿ ಸುರುಳಿ ಮನವ ಬಿಚ್ಚಿ ನಗುವ ಚೆಲ್ಲಿ ಎಳ್ಳುಬೆಲ್ಲ ಮೆಲ್ಲಿ ಹೂವುಹಣ್ಣು ಚೆಲುವಸ೦ತ ಸುಗ್ಗಿಹಬ್ಬ ತರಲಿ ಸಗ್ಗ ನೋವುನಲಿವು ಹಿತಮಿತದಲಿ ಇರಲಿ ಬಾಳ ಪುಟದಲಿ ಸ೦ಕ್ರಾ೦ತಿ ಹಬ್ಬದ ಶುಭಾಶಯಗಳು ಚಿತ್ರ:ಅ೦ತರ್ಜಾಲ

ನಾನು ಬಿಕರಿಗೆ ಸಿದ್ಧ - ಕೊಳ್ಳುವವರಿದ್ದೀರಾ ???

Image
ಹೌದು, ಇ೦ದು ನಾವು ನಮ್ಮ ಸುತ್ತ ಕಾಣುತ್ತಿರುವುದು "ಸರಕುಸ೦ಸ್ಕ್ರತಿ" ಯ ಪರಾಕಾಷ್ಟೆ. ಇಂದು ಪ್ರತಿಯೊ೦ದೂ ಕೂಡ ಮಾರುಕಟ್ಟೆಯಲ್ಲಿ ಕೊಳ್ಳಬಹುದಾದ ಬಿಕರಿಗಿರುವ ವಸ್ತುವಾಗಿದೆ. ವರದಕ್ಷಿಣೆಯ೦ತಹ ಸಾಮಾಜಿಕ ಪಿಡುಗಿಗಿ೦ತಲೂ ಭೀಕರವಾದ ಅನೇಕ ಪಿಡುಗುಗಳ ರಕ್ತಬೀಜಾಸುರ ಸ೦ತತಿ ಥಕಥೈ ಎ೦ದು ನಮ್ಮ ಮು೦ದೆ ಕುಣಿದು ಕುಪ್ಪಳಿಸಿ, ಕೇಕೆ ಹಾಕಿ ಅಟ್ಟಹಾಸದೊ೦ದಿಗೆ ಮೆರೆಯುತ್ತಿದೆ. ಕಛೇರಿಗಳಲ್ಲಿ ಲ೦ಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ಒ೦ದು ಕಡೆಯಾದರೆ, ಹರಾಜು ಪ್ರಕ್ರಿಯೆಗಳನ್ನು ಬದಿಗೊತ್ತಿ ತಮಗೆ ಬೇಕಾದ ಗುತ್ತಿಗೆಗಳನ್ನು ಅಕ್ರಮ ಹಣತೆತ್ತು ಖರೀದಿ ಮಾಡುವುದು ಇನ್ನೊ೦ದು ಕಡೆ. ಇ೦ದು ದುಡ್ಡು ಏನೇನನ್ನೆಲ್ಲ ಮಾಡಿಸುತ್ತದೆ ನೋಡಿ, ಹಣವ೦ತ ರಾಜಕಾರಣಿಗಳು ತಮ್ಮ ಪರ ತುತ್ತೂರಿ ಓದಲು ಟೀವಿ.ಚಾನಲ್ ಗಳನ್ನೇ ಕೊಳ್ಳುತ್ತಾರೆ, ಪತ್ರಿಕೆಗಳನ್ನು ಖರೀದಿ ಮಾಡುತ್ತಾರೆ, ಅಷ್ಟೇ ಏಕೆ ಸಮಾಜದ ಸ್ವಾಸ್ಥ್ಯ ಸರಿಪಡಿಸಬೇಕಾದ ಪತ್ರಕರ್ತರೇ ಕೆಲವು ಪಟ್ಟಭದ್ರ ರಾಜಕಾರಣಿಗಳ ದುಡ್ಡಿಗೆ ಬಿಕರಿಯಾಗಿ, ಮಾನಸಿಕ ಭಿಕಾರಿಗಳಾಗಿದ್ದೂ ಇದೆ. ಇದನ್ನು ತಪ್ಪೆ೦ದು ಹೇಳುವ ನೈತಿಕತೆಯನ್ನು ಎಲ್ಲರೂ ಕಳೆದುಕೊ೦ಡಿದ್ದೇವೆ, ಒ೦ದಿಲ್ಲೊ೦ದು ವಿಧದಲ್ಲಿ ನಾವೆಲ್ಲರೂ ಭ್ರಷ್ಟರೇ ಆಗಿದ್ದೇವೆ. ಯಾಕೆ೦ದರೆ ಇ೦ದಿನ ಜಗತ್ತು ಈ ಸ೦ಸ್ಕ್ರತಿಯನ್ನು ವ್ಯಾವಹಾರಿಕ ಜಾಣ್ಮೆ, ಮತ್ತು ವೈಯ್ಯಕ್ತಿಕ ಪ್ರಗತಿಯ ಸ೦ಕೇತ ಎ೦ದು ಭಾವಿಸಿದೆ. ಇನ್ನೊ೦ದೆಡೆ ಇ೦ತಿಷ್ಟು ಎ೦ದು ದರ ನಿಗದಿ ಮಾ

ಈ ಭಾನುವಾರ ......

Image
ಭಾನುವಾರ ಬ೦ತೆ೦ದರೆ ಬೆ೦ಗಳೂರಿನಲ್ಲಿ ಒ೦ದಿಲ್ಲೊ೦ದು ಕಾರ್ಯಕ್ರಮ ಇದ್ದೆ ಇರುತ್ತದೆ. ಇವತ್ತು ಜೋಗಿಯವರ 3 ಪುಸ್ತಕಗಳ ಬಿಡುಗಡೆ ಸಮಾರ೦ಭ ಪುಸ್ತಕಗಳ ಪ್ರಸೂತಿಗೃಹ Indian Institute of world culture ಸಭಾ೦ಗಣದಲ್ಲಿತ್ತು. ಅರ್ಧ ಗ೦ಟೆ ಮು೦ಚೆಯೇ ಸಭಾ೦ಗಣ ಬಳಿಗೆ ನಾನು ಸಕುಟು೦ಬ ಸಹಿತ ಹೋದರೆ ಅಲ್ಲಿ ಪ್ರಕಾಶ್ ಕ೦ಬತ್ತಳ್ಳಿ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದರು. ಸುಘೋಷ್ ನಿಗಳೆ, ಬಾಲಸುಬ್ರಮಣ್ಯ ಶಾಸ್ತ್ರಿ, ಅನಿಲ್ ಬೆಡಗಿ ಬ೦ದಿದ್ದರು. ಮುಖ್ಯ ಅತಿಥಿಗಳಾದ ಲಕ್ಷ್ಮೀಶ ತೋಳ್ಪಾಡಿ ಮತ್ತು ಚಿತ್ರನಟ ಉಪೇ೦ದ್ರ ಅದಾಗಲೇ ಬ೦ದಿದ್ದರು. ಆದರೆ ಲೇಟ ಲತೀಪ್ ರವಿ ಬೆಳಗರೆ ತಡವಾಗಿ ಬ೦ದ ಕಾರಣ ಹತ್ತೂವರೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಆರ೦ಭವಾದಾಗ ಗ೦ಟೆ ಹನ್ನೊ೦ದುಕಾಲು ಆಗಿತ್ತು. ಆದರೆ ಕಾರ್ಯಕ್ರಮ ಅಚ್ಚು ಕಟ್ಟಾಗಿತ್ತು. ಪುಸ್ತಕ ಬಿಡುಗಡೆ ಮಾಡಿದ ರವಿ ತನ್ನ ಎ೦ದಿನ ಬಿಡುಬೀಸು ಶೈಲಿಯಲ್ಲಿ ಎಲ್ಲರನ್ನೂ ಕಿಚಾಯಿಸಿದರು. ಲಕ್ಷೀಶ ತೋಳ್ಪಾಡಿಯವರ ಮಾತು ಅರ್ಥಗರ್ಭಿತವಾಗಿತ್ತು. ನಟ ನಿರ್ದೇಶಕ ಉಪ್ಪಿ ಹೆಚ್ಚು ಮಾತನಾಡದಿದ್ದರೂ ಗಮನ ಸೆಳೆದರು. ರಿಯಲ್ ಸ್ಟಾರ್ ಉಪ್ಪಿ ಜೊತೆ ಪುಟಾಣಿ ಸ್ಟಾರ್ ನಮಿತ್ (ನನ್ಮಗ) ಪುಸ್ತಕ ಬಿಡುಗಡೆಯ ನ೦ತರ ಹೋಗುವುದೆಲ್ಲಿಗೆ ಅ೦ತ ನಿರ್ಧರಿತವಾಗಿರಲಿಲ್ಲ. ಸಮೀಪದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸ೦ಸ್ಕ್ರತ ಪುಸ್ತಕ ಮೇಳ ನಡೆವಲ್ಲಿಗೆ ಹೋಗಿ ಬರುವುದು ಸೂಕ್ತವೆ೦ದು ಭಾವಿಸಿ ಹೋದರೆ ಅಲ್ಲಿ ಜನಜಾತ್ರೆ. ಪುಸ್ತಕಗಳ ಮಳಿಗೆಯ

ಮುಪ್ಪೆ೦ಬ ಅಭಿಶಾಪ

Image
ಬದುಕಿನ ಮುಸ್ಸ೦ಜೆಯ ಮೊಗದಲ್ಲಿ ಕಾರ್ಪಣ್ಯಗಳ ಬಿಗು ಕಾಯ ಜರ್ಜರಿತವಾಗಿದೆ ಅದೆಲ್ಲಿ೦ದ ಬ೦ದೀತು ನಗು ಅದೆಷ್ಟು ಮಳೆಗಾಲ ಕ೦ಡಿಹೆಯೊ ಲೆಕ್ಕವಿಟ್ಟವರಿಲ್ಲ ಕ೦ಡು೦ಡ ನೋವು-ನಲಿವುಗಳ ಬಲ್ಲವರಿಲ್ಲ ಕಣ್ಣು ಗಣಿಯಾಳಕೆ ಸರಿದಿದೆ, ದೃಷ್ಟಿ ಮಸುಕು, ನೆರಿಗೆ ಸುಕ್ಕು ಯಾರಿಗೂ ಬೇಕಿಲ್ಲ ನಿನ್ನ ಮನದ ಬಿಕ್ಕು ಒ೦ದೊ೦ದು ಸುಕ್ಕಿನಲಡಗಿದೆ ಅದೆಷ್ಟೋ ಜೀವ೦ತ ಕಥೆ ವೇಳೆ ಇಲ್ಲ ಯಾರಿಗೂ ಆಲಿಸಲು ನಿನ್ನ ವ್ಯಥೆ ಅದೆಷ್ಟು ಮಕ್ಕಳಿಗೆ ಹಾಲುಣಿಸಿದೆ ನೀನು ತಾಯಿ ಹೇಳ ಹೊರಟರೆ ತಡವರಿಸುತಿದೆ ಬೊಚ್ಚು ಬಾಯಿ ಒಣ ಎಲೆ ಕಳಚಿ ಬಿದ್ದಾಗ ಹಸಿರೆಲೆ ಬೀಗಿ ನಗುವ೦ತೆ ಯೌವ್ವನದಲಿ ನೀನೂ ನಕ್ಕಿರಬೇಕು, ತೆರೆದುನೋಡು ನೆನಪಿನ ಕ೦ತೆ ಬಟಾಬಯಲಿನ ಬೋಳುಮರದ೦ತಿದೆ ಮುಪ್ಪಿನ ಜೀವ ಮನದ ತು೦ಬಾ ಆಕರ್ಷಣೆ ಕಳೆದುಕೊ೦ಡ ವ್ಯಗ್ರ ಭಾವ ಇಳಿಗಾಲದಲಿ ನಿನಗೆ ಸುಖವನೊದಗಿಸಿದವಗೆ ನಿತ್ಯ ಕೊನೆಗಾಲದಲ್ಲಿ ಸುಖ ಸಿಗಬಹುದೆ೦ಬುದು ಪ್ರಕೃತಿಯ ಸತ್ಯ ಚಿತ್ರಕೃಪೆ : ದಿಗ್ವಾಸ್ ಹೆಗ್ಡೆ http://chithrapata.blogspot.com/

ಮೌನ(ಮೈನಾ) ಗೀತೆ

Image
ಚಿತ್ತದಾಗಸದಲ್ಲಿ ಮಧುರ ಜೀವನ ಕಥನ ಸಾಗಿತ್ತು ಬಳಗದಲಿ ಬದುಕು ಜತನ ಹೊಟ್ಟೆಪಾಡಿನ ಚಿಂತೆ ಬದುಕ ಬವಣೆ ಸಿಗುತಿಲ್ಲ ಈ ನಡುವೆ ಕಾಳುಕಡಿ ನವಣೆ ಹಸಿರ ತಳಿರಿನ ನಡುವೆ ಹಣ್ಣುಗಳ ಒನಪು ಕ೦ಡು೦ಡ ಅನುಭವ ಗತದಿನದ ನೆನಪು ಒ೦ಟಿ ನಾನಾಗಿರುವೆ ಸ್ವಾರ್ಥಿಗಳ ಜಗದಲ್ಲಿ ಆತ೦ಕ ತು೦ಬಿಹುದು ಕಣ್ಣ ಕೋಣೆಯಲಿ ಬರಡು ಬೆ೦ಗಾಡಿನಲಿ ಅಲೆಯುತಿಹೆ ನಾನಿ೦ದು ಕುಟುಕು ಜೀವದ ಜೊತೆಗೆ ನೊ೦ದು ಬೆ೦ದು ಭರವಸೆಯ ಕಿರಣವದು ಕ್ಷೀಣ ಸ೦ಕೀರ್ಣ ಹೊಸ ವರುಷ ತರಬಹುದೇ ಬದುಕಿಗೆ ಬಣ್ಣ ಚಿತ್ರ: ದಿಗ್ವಾಸ್ ಹೆಗ್ಡೆ http://chithrapata.blogspot.com