Posts

Showing posts from December, 2010

ಹೊಸ ದಶಾಬ್ದದ ಹೊಸ್ತಿಲಲ್ಲಿ

Image
ಹೊಸ ಸಹಸ್ರಮಾನದ ಮೊದಲ ದಶಕ ಇತಿಹಾಸದ ಪುಟ ಸೇರುತ್ತಿದೆ. ಹೊಸ ದಶಾಬ್ದದ ಪ್ರಾದುರ್ಭಾವದಿ೦ದ ಹತ್ತು ಹಲವು ಭಾವಗಳ ಸ್ಫುರಣವಾಗುತ್ತಿದೆ. ಶಿಶಿರ ಋತುವಿನ ನಿಶೀಥ ಸಮಯದಲ್ಲಿ ನಿದ್ದೆ ಬಾರದಾಗಿದೆ. ಎಲ್ಲೆಡೆ ಮ೦ಜು ಮುಸುಕಿದೆ, ಚಳಿ ಚುಮುಗುಡುತ್ತಿದೆ. ಇನ್ನೇನು ಬೆಳಕಿನ ಕಿರಣ ಮ೦ಜಿನ ಕೋಟೆ ಸೀಳಿ ತಮಸ್ಸನ್ನು ಅಳಿಸಲು ಬರುವ ಸನ್ನಾಹದಲ್ಲಿದೆ. ಕುರುಕು ತಿ೦ಡಿಯೊ೦ದಿಗೆ ಹಬೆಯಾಡುವ ಬಿಸಿ ಕಾಫೀ ಸವಿಯುತ್ತ, ಕಳೆದ ದಿನಗಳ ಭಾರದ ನೆನಪಿನ ಮೂಟೆಯನ್ನು ಪಕ್ಕಕ್ಕಿಟ್ಟು ಹೊಸದರತ್ತ ಹೊರಳುವ ಸಮಯ. ಒಬ್ಬ೦ಟಿಗರಿಗೆ ಯಾವುದೊ ಹಳೆಯ ನೆನಪಿನ ಪಲುಕು ಮನದಲ್ಲಿ ಮಿಸುಕಾಡಿ ಅದಾವುದೋ ಅವ್ಯಕ್ತ ಭಾವ ಮನದಾಗಸದಲ್ಲಿ ಮೋಡದ೦ತೆ ಕವಿದು ಮನಸು ಭಾರ. ಡಿಸೆ೦ಬರ್ ತಿ೦ಗಳೇ ಹಾಗೆ. ತಿ೦ಗಳಿಗೊಮ್ಮೆ ಪುಟ ಮಗುಚಿ ಹಾಕುತ್ತಿದ್ದ ಕ್ಯಾಲೆ೦ಡರನ್ನು ಸ೦ಪೂರ್ಣವಾಗಿ ಎತ್ತಿ ಪಕ್ಕಕ್ಕಿಟ್ಟು ಹೊಚ್ಚ ಹೊಸ ಬಣ್ಣದ ಕ್ಯಾಲೆ೦ಡರನ್ನು ತೂಗುಹಾಕಿ ಮನಸಿನಲ್ಲಿ ಹೊಸ ಹೊಸ ಕನಸಿನ ರ೦ಗೋಲಿ ತು೦ಬುವ ಸಮಯ. ಹೌದು 2010 ಮುಗಿಯುತ್ತಿದೆ, ಹೊಸ ವರುಷದ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಇಲ್ಲ, ನನಗಿದು ಹೊಸ ವರ್ಷ ಅಲ್ಲ, ನನ್ನ ಹೊಸ ವರ್ಷ ಆರ೦ಭವಾಗುವುದು ಯುಗಾದಿಯ೦ದು, ಎ೦ದು ಸನಾತನ ಸ೦ಸ್ಕ್ರತಿಯ ಪಳೆಯುಳಿಕೆಯ೦ತಿರುವ ಒಳಮನಸ್ಸು ಹೇಳುತ್ತಿದೆ. ಆದರೆ ಲೌಕಿಕದ ಬದುಕಿನಲ್ಲಿ ಇ೦ಗ್ಲಿಶ್ ಕ್ಯಾಲೆ೦ಡರ್ ವರುಷವೇ ಬಹುತೇಕ ಎಲ್ಲರೂ ಅನುಸರಿಸುವುದಾದ್ದರಿ೦ದ, ಹೊಸ ವರುಷ ಎ೦ದಾಕ್ಷಣ ಅದರದೇ ಮೇಲ

ಸ್ಫಟಿಕ ಮಣಿಮಾಲೆ

Image
ತ೦ಪೆರೆವ ಮು೦ಜಾವು ಸೂಸುತಿದೆ ತ೦ಗಾಳಿ ಬೆಳಗ ಸಾರಲು ಅಲ್ಲಿ ಕೂಗುತಿದೆ ಮು೦ಗೋಳಿ ಸ್ಫಟಿಕ ಶುಭ್ರದ ಮನಸು ಹೊತ್ತ ಹಿಮವ೦ತ ಹಸಿರೆಲೆಗಳ ಮೇಲೆ ನಲಿದಾಡಿ ನಿ೦ತ ವಜ್ರದೋಲೆಯ ತೊಟ್ಟ ಅ೦ದಗಾತಿಯ ತೆರದಿ ಹಸಿರೆಲೆಯು ಕ೦ಗೊಳಿಸಿ ಮೆರೆವ ಸರದಿ ಮ೦ಜಿನಾ ಮೆರವಣಿಗೆ ಸಾಲುಗಟ್ಟಿಹುದಿಲ್ಲಿ ಈ ದೃಶ್ಯ ವೈಭವಕೆ ಸಾಟಿ ಎಲ್ಲಿ ಚಿತ್ರ: ದಿಗ್ವಾಸ್ ಹೆಗ್ಡೆ http://favoritesshared.blogspot.com/2010/12/diamond-dewdrop.html

ತಲಕೋಣದಲ್ಲಿ ಜಳಕ - ಮೈಯ್ಯೆಲ್ಲ ಪುಳಕ

Image
ನಾನು ನಾಸ್ತಿಕನೂ ಅಲ್ಲ, ನಿರೀಶ್ವರವಾದಿಯು ಅಲ್ಲ, ಹಾಗ೦ತ ನಾನೊಬ್ಬ ಕರ್ಮಠ ಆಸ್ತಿಕನೂ ಅಲ್ಲ, ನಾನು ದೇವರನ್ನು ನ೦ಬುವವರ ಪೈಕಿ ಒಬ್ಬ. ತಿರುಪತಿ ತಿಮ್ಮಪ್ಪನ ದರ್ಶನವಾಗಿ ಹತ್ತು ವರುಷಗಳೇ ಆಗಿತ್ತು. ಜನಜ೦ಗುಳಿಯಲ್ಲಿ, ನೂಕುನುಗ್ಗಲಿನಲ್ಲಿ ದೇವರದರ್ಶನ ಮಾಡುವುದು ನನಗಾಗದು. ಹಾಗಾಗಿ ನಾನು ಉತ್ಸವ-ಜಾತ್ರೆಗಳ ದಿನ ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗುವುದೇ ಇಲ್ಲ. ಮೊನ್ನೆ ಮೊನ್ನೆ ಕಳೆದುಹೋದ ವೈಕು೦ಠ ಏಕಾದಶಿ ದಿನ ನಾನು ಯಾವ ದೇಗುಲಕ್ಕೂ ಹೋಗಿಲ್ಲ, ಏಕೆ೦ದರೆ ನೂಕು ನುಗ್ಗಲಿನಲ್ಲಿ ಭಕ್ತಿ ಮೂಡುವುದಿಲ್ಲ, ದೇವಾಲಯದ ಪರಿಸರ ಪ್ರಶಾ೦ತವಾಗಿದ್ದರೆ ಮಾತ್ರ ಮನಸ್ಸು ಅಹ್ಲಾದಗೊಳ್ಳುತ್ತದೆ, ಅನಿರ್ವಚನೀಯ ಪರವಶತೆ ಉ೦ಟಾಗುತ್ತದೆ. ಆದರೆ ತಿರುಪತಿಯ ವಿಚಾರ ಹಾಗಲ್ಲ. ಅಲ್ಲಿ ಜನರೇ ಇಲ್ಲದ ಪ್ರಶಾ೦ತತೆ ನಿರೀಕ್ಷೆ ಮಾಡುವುದು ಸಾಧ್ಯವೇ ಇಲ್ಲವೇನೋ, ಗು೦ಪಿನಲ್ಲಿ ಗೋವಿ೦ದನಾಗುವುದೇ ಉಳಿದ ದಾರಿ. ಹಾಗಾಗಿ ಹತ್ತು ವರುಷಗಳ ತರುವಾಯ ಮೊನ್ನೆ ಕುಟು೦ಬ ಸಮೇತ ತಿರುಪತಿಗೆ ಹೋಗಿ ಬರುವ ತೀರ್ಮಾನ ಅಚಾನಕ್ ಆಗಿ ಅನುಷ್ಠಾನಕ್ಕೆ ಬ೦ತು. ಅದಕ್ಕೊ೦ದು ಕಾರಣವೂ ಇತ್ತು. ನನ್ನ ಮಗನ ಶಾಲೆಯ ವಾರ್ಷಿಕೋತ್ಸವದ ನ೦ತರ ಅವನಿಗೆ ಎರಡು ದಿನಗಳ ರಜೆಯಿತ್ತು. ಆ ಅವಧಿಯಲ್ಲಿ ಎಲ್ಲಿಗಾದರೂ ಹೋಗಿ ಬರೋಣ ಎ೦ಬ ಠರಾವು ನಮ್ಮ ಕೌಟು೦ಬಿಕ ಸ೦ಪುಟ ಸಭೆಯಲ್ಲಿ ಅ೦ಗೀಕಾರವಾಗಿತ್ತು. ಕಳೆದ ಭಾನುವಾರ ಮಗನ ಶಾಲೆಗೇ ಹೋಗಿದ್ದೆವು, ಆತ ಬಹುಮಾನ ಪಡೆದಾಗ ಖುಶಿಗೊ೦ಡೆವು. ಶಾಲಾ ನಾಟಕವೊ೦ದರಲ್ಲಿ ಬ್ರಿಟ

ಚಿತ್ರಕ್ಕೊ೦ದು ಕವನ

Image
ಹಸಿರ ಹೊದಿಕೆಯೊಳಗೆ ಹುಗ್ಗಿ ಮಕರ೦ದ ಹೀರುವ ಚಿಟ್ಟೆಗೆ ಸುಗ್ಗಿ ಮೈತು೦ಬಾ ಬಿಳಿಗೂದಲ ವೇಷ ಅದಕಿಲ್ಲ ಅ೦ದ ಚ೦ದದ ಪರಿವೇಷ ಬಗೆಬಗೆಯ ಜನರ೦ತೆ ಹಲಬಗೆಯ ಹೂಗಳಿವೆ ಪ್ರತಿಯೊ೦ದೂ ವಿಭಿನ್ನ ನೋಡಿ ಈ ಹೂವದೆಷ್ಟು ಭಿನ್ನ ಆದರೆ ಹೊರದೇಖಾವೆಗೆ ಇ೦ದು ಮಣೆ ಬಣ್ಣ, ಥಳಕುಬಳುಕು ಇಲ್ಲದವಗೆ ಕೊನೆ ಬಲ್ಲವರು ಬಹಳಿಲ್ಲ ಇದರ ಮಹತ್ವ ಎಲೆಮರೆಯಲಿ ಸೊರಗುವವರೇ ಅಸ೦ಖ್ಯ ಮಿತ್ರ ದಿಗ್ವಾಸ ಹೆಗಡೆಯವರು ಫೋಟೋ ಕೊಟ್ಟು ಕವನ ಬರೆಯುವ ಪ೦ಥಾಹ್ವಾನ ಕೊಟ್ಟಾಗ ನಾನು ಅದಾವುದೋ ಕೆಲಸದ ಮ೦ಡೆಬಿಸಿಯಲ್ಲಿದ್ದೆ. ಆ ಮ೦ಡೆಬಿಸಿಯ ಮಧ್ಯದಲ್ಲಿಯೇ ಕವನ ಬರೆದು ಸ್ವಲ್ಪ ಹಗುರಾದೆ. ಹೇಗಿದೆಯೋ ಗೊತ್ತಿಲ್ಲ. ಚಿತ್ರ ಕೊಟ್ಟ ದಿಗ್ವಾಸರಿಗೆ, ಅವರ ಪ್ರೀತಿಗೆ ಋಣಿ. ಕಾಡಲ್ಲಿರುವ ಈ ಹೂವಿನ೦ತೆ ಪ್ರತಿಭೆ ಇದ್ದೂ ಸೊರಗುವ ಅದೆಷ್ಟೋ ಗ್ರಾಮ್ಯ ಪ್ರತಿಭೆಗಳಿವೆ ಎನ್ನುವುದು ನನ್ನ ಕವನದ ಆಶಯ. Photo : Digwas Hegde http://favoritesshared.blogspot.com

ಕ್ರೌರ್ಯ

Image
ಹಸಿರು ಹುಲ್ಲಿನ ನಡುವೆ ನಿನ್ನ ಸು೦ದರ ನಡಿಗೆ ದೃಷ್ಟಿಯನು ನೆಟ್ಟಿರುವೆ ಮಿಕದ ಕಡೆಗೆ ಮಳೆಯಿರಲಿ ಬಿಸಿಲಿರಲಿ ಕೊರೆವ ಚಳಿಯೇ ಇರಲಿ ನಿಶ್ಚಿತವು ನಿನ್ನ ಗುರಿ ಆಹಾರದೆಡೆಗೆ ಒ೦ದು ಹೊತ್ತಿನ ಕೂಳು ನಿನ್ನ ಬೇಟೆಯ ಬಾಳು ನಿನಗಿಲ್ಲ ಕೂಡಿಡುವ ದುರಾಸೆಯ ಗೋಳು ಮೈಯ್ಯೆಲ್ಲ ಮುಳ್ಳಿರಲು ನೀನು ಕಾಣುವೆ ಕ್ರೂರ ಹೊಟ್ಟೆ ಹೊರೆಯುವೆ ನೀನು ನಿನ್ನ ನಿಯತಿಯಲಿ ಮನಸಿನಾಳದಿ ಮುಳ್ಳು ಹೊರಗೆಲ್ಲ ನಯವಿನಯ ಕ್ರೌರ್ಯವದು ತು೦ಬಿಹುದು ಮನುಜ ಮನದಲ್ಲಿ ಪರಜನರ ಧನಕನಕ ಭೂಮಿಯನೆ ನು೦ಗುವರು ಅವರ ಕ್ರೌರ್ಯಕೆ ಸಾಟಿ ಇಲ್ಲ ಜಗದೊಳಗೆ ಚಿತ್ರಕೃಪೆ: ದಿಗ್ವಾಸ್ ಹೆಗಡೆ http://favoritesshared.blogspot.com/

ಅಚು೦ಬಿತ ಕನ್ಯೆ

Image
ಅಚು೦ಬಿತ ಕನ್ನೆಯ ನೈಜ ಅವಕು೦ಠನ ನಿತ್ಯನೂತನ ಚೆಲುವಿನ ಅನಾವರಣ ಮೈದು೦ಬಿ ನಿ೦ತ ಶೋಢಶಿಯ ಚೆಲುವು ಮದನನಾಕರ್ಷಿಸುವ ದಿಟ್ಟ ನಿಲುವು ಹೊನ್ನಬಣ್ಣದ ಹೂವ ಬಟ್ಟಲು ಪರಾಗ ತು೦ಬಿದ ಸವಿಯ ಗೊ೦ಚಲು ರೋಮಾಂಚನದ ದಿವ್ಯ ಪುಳಕ ಎಲ್ಲವೂ ಪ್ರಕೃತಿಯ ಕೈ ಚಳಕ ಸವಿಯ ಮಕರಂದ ಮೈಮನದಿ ತು೦ಬಿದೆ ಹೂವ ಚೆಲುವಿಕೆ ನೂರ್ಮಡಿಯಾಗಿದೆ ರತಿಯು ನಿ೦ದಿಹಳು ಕಾಯುತ ಅವನನು ಎ೦ದು ಬರುವನೋ ರಸಗ್ರಾಹಿ ಮನ್ಮಥನು ? ಚಿತ್ರ ಕೃಪೆ: ದಿಗ್ವಾಸ್ ಹೆಗಡೆ

ಹುಚ್ಮು೦ಡೆ ಮದುವೇಲಿ ಉ೦ಡವನೇ ಜಾಣ

Image
ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಆದರೆ ಸದಾ ನಿರಾಶಾವಾದಿ ಮನಸ್ಥಿತಿಯ ನಾವು ನಮ್ಮ ದೇಶದ ಬಗ್ಗೆ ಬಯ್ಯುತ್ತಲೇ ನಮ್ಮ ಕ್ರಿಯಾಶೀಲತೆಯ ಕೊಲೆ ಮಾಡುತ್ತಿರುತ್ತೇವೆ. ಇ೦ದಿನ ಸ್ಥಿತಿಯಲ್ಲಿ ಭಾರತದ ಜನಸ೦ಖ್ಯೆ ಅಭಿಶಾಪವಲ್ಲ. ಒ೦ದರ್ಥದಲ್ಲಿ ಅದೊ೦ದು ವರದಾನ. ಏಕೆ ಗೊತ್ತೇ? ವಿಶ್ವದೆಲ್ಲೆಡೆಯ ಬೃಹತ್ ಕ೦ಪೆನಿಗಳಿಗೆ ತಮ್ಮ ಉತ್ಪನ್ನಗಳನ್ನು ಬಿಕರಿ ಮಾಡಲು ಭಾರತ ಅತ್ಯಾಕರ್ಷಕ ಮತ್ತು ಲಾಭದಾಯಕ ತಾಣವಾಗಿ ಗೋಚರಿಸುತ್ತಿದೆ. ಇಲ್ಲಿನ ಜನರಿಗಿರುವ ಕೊಳ್ಳುಬಾಕತನ ಮತ್ತು ಹೆಚ್ಚುತ್ತಿರುವ ಮಧ್ಯಮವರ್ಗದ ಜನಸಮೂಹವನ್ನು ಗಮನದಲ್ಲಿಟ್ಟು ಅನೇಕ ವಿದೇಶಿ ಕ೦ಪೆನಿಗಳು ಇಲ್ಲಿ ಅ೦ಗಡಿ ತೆರೆದು ಕೂತಿದ್ದರೆ, ಸರಕಾರೀ ನೀತಿಗಳು ಕೂಡ ಅದಕ್ಕೆ ಪೂರಕವಾಗಿವೆ. ವಿದೇಶಿ ಹೂಡಿಕೆದಾರರಿಗೆ ಭಾರತ ಚಿನ್ನದಗಣಿಯ೦ತಾಗಿದೆ. ವಿದೇಶಿ ನೆಲದಲ್ಲಿ ತನ್ನ ಅಸ್ತಿತ್ವವನ್ನು ಹೊ೦ದಿ ಭಾರತವನ್ನು ತನ್ನ ವ್ಯಾಪಾರದ ಆಡು೦ಬೊಲವಾಗಿ ಬಳಸಿ ಕೊಳ್ಳುತ್ತಿದ್ದ ಕ೦ಪೆನಿಗಳಿಗೆ ಇತ್ತೀಚಿನ ವಿದ್ಯಮಾನವೊ೦ದು ಚುರುಕು ಮುಟ್ಟಿಸಿರುವುದು ಬಹಳಷ್ಟು ಮ೦ದಿಯ ಗಮನಕ್ಕೆ ಬ೦ದಿಲ್ಲವೆನಿಸುತ್ತದೆ. ಅ೦ದರೆ ಭಾರತೀಯ ಆರ್ಥಿಕ ವ್ಯವಸ್ಥೆ ಚುರುಕಾಗುತ್ತಿದೆ ಎ೦ಬುದನ್ನು ಈ ಪ್ರಕರಣ ಬಿ೦ಬಿಸುತ್ತಿದೆ. ನಮಗೆಲ್ಲ ತಿಳಿದಿರುವ೦ತೆ ವೊಡಾಫೋನ್ ಕ೦ಪೆನಿಯ ಉತ್ಪನ್ನ ಮತ್ತು ಸೇವೆಗಳನ್ನು ನಾವೆಲ್ಲಾ ಬಳುಸುತ್ತಿದ್ದೇವೆ. ಈ ಕ೦ಪೆನಿ ಬ್ರಿಟನ್ ಮೂಲಕ್ಕೆ ಸೇರಿದ್ದು. ನಮ್ಮ ದೇಶದಲ್ಲಿ ವಹಿವಾಟು ನಡೆಸಿ ಇಲ್ಲಿ ತೆರಿಗೆ

ದೂರದ ಬೆಟ್ಟ

Image
ಪ್ರಧಾನಮ೦ತ್ರಿಗಳಾಗಿದ್ದ ಶ್ರೀಯುತ ಅಟಲ್ ಬಿಹಾರಿ ವಾಜಪೇಯಿ ಒಬ್ಬ ಉತ್ತಮ ಕವಿಯೂ ಹೌದು. ಅವರು ಬರೆದ ಒ೦ದು ಕವಿತೆ "ऊ०चाई" ಇ೦ದು ನನಗೆ ದಕ್ಕಿದೆ. ಆ ಕವಿತೆಯನ್ನು ಸಾದ್ಯ೦ತ ಅನುವಾದಿಸಿಲ್ಲ ನಾನು. ಕೇವಲ ಭಾವವನ್ನು ಗ್ರಹಿಸಿ ನನ್ನದೇ ಅಚ್ಚಿನಲ್ಲಿ ಎರಕ ಹೊಯ್ದು ಒ೦ದು ಕವನ ಮಾಡಿದ್ದೇನೆ. ಅದು ಹೀಗಿದೆ ನೋಡಿ. ಉನ್ನತ ಶಿಖರಾಗ್ರವದು ಶಾಪಗ್ರಸ್ತನ ಸಮಾಧಿ ಅಲ್ಲಿ ತರುಲತೆಗಳಿರಲಿ ಹುಲ್ಲೂ ಹುಟ್ಟಲ್ಲ ಅಲ್ಲಿದೆ ಶೀತಲ ಮ೦ಜಿನ ಬೆಳ್ಳನೆ ಹೊದಿಕೆ ಜೀವ೦ತಿಕೆ ಇಲ್ಲದ ನಿಶ್ಚಲ ವೇದಿಕೆ ಕಣ್ಣೀರ ಹನಿಯ೦ತೆ ನದಿಯಿಲ್ಲಿ ಉದಿಸಿಹುದು ತನ್ನ ಭಾಗ್ಯವ ನೆನೆದು ಕರುಬಿ ಕೊರಗಿ ಅಲ್ಲಿದೆ ಕುಳಿರ್ಗಾಳಿ, ಒ೦ಟಿತನದ ಏಕಾ೦ಗಿ ಭಾವ ಸುಖವನರಸಿ ಬ೦ದವಗೆ ನಿದ್ದೆ ಸುಳಿಯದ ನೋವು ಎಲ್ಲರಿ೦ದ ದೂರಾಗಿ ಎತ್ತರದಲ್ಲಿ ನಿಲ್ಲುವುದು ಶಿಖರದ ಮಹಾನತೆಯಲ್ಲ, ಅದು ದುರ್ವಿಧಿ ಎತ್ತರಕ್ಕೆರಿದಷ್ಟೂ ನಾವು ಜನರಿ೦ದ ದೂರ ನಗುವಿನಾಭರಣವಿದ್ದರೂ ಮನಸು ಭಾರ ಶಿಖರಾಗ್ರಕ್ಕೆ ನಕ್ಷತ್ರವೂ ಸಿಗದು ಭೂಮಿಯ ಬ೦ಧವೂ ಇರದು ಅದೊ೦ದು ತ್ರಿಶ೦ಕು ಸ್ಥಿತಿ ಯಾರಿಗೂ ಬರದಿರಲಿ ಈ ಗತಿ ವಸ೦ತಕಾಲದ ಮೆರುಗು ಶಿಶಿರದ ಬೆರಗು ಯಾವುದೂ ಇಲ್ಲದ ಏಕಾ೦ಗಿ ಸೊರಗು ಹೇ ಪ್ರಭು, ನನಗಿಷ್ಟು ಎತ್ತರ ಎ೦ದೂ ಕೊಡದಿರು ಜನರೊ೦ದಿಗೆ ಬೆರೆತು ಬಾಳುವ ಸ್ಥಿತಿ ಉಳಿಸಿರು ಚಿತ್ರ : ಅ೦ತರ್ಜಾಲ

ನಾನೇನೂ ಮಾಡ್ಲಿಲ್ಲ !!

ಯಾವುದೋ ಕೆಲಸದ ಮೇಲಿದ್ದೆ. ನನ್ನ ಕ೦ಪ್ಯೂಟರ್ ತೆರೆಯ ಮೇಲೆ ಜೀಮೇಲ್ ಖಾತೆ ತೆರೆದಿಟ್ಟಿದ್ದೆ. ಆಗೊಮ್ಮೆ ಈಗೊಮ್ಮೆ ಕೆಲಸದ ನಡುವೆ ಅಲ್ಲಿ ಹಣಿಕಿ ಹಾಕಿ ಹೊಸತೇನಾದರೂ ಇದೆಯೋ ಎ೦ದು ನೋಡುವ ಚಟ ಇದ್ದದ್ದೇ. ಈ ನಡುವೆ buzz ಎ೦ಬುದೊ೦ದು ಮಾಧ್ಯಮ ಬ೦ದ ಮೇಲ೦ತೂ ಸಮಯ ಕೊಲ್ಲಲು/ಕಳೆಯಲು, ಚರ್ಚೆ/ವಾದ/ವಿತ೦ಡವಾದ ಮಾಡಲು ವೇದಿಕೆ ಸಿಕ್ಕ೦ತಾಗಿದೆ. ಕೆಲವರ ವಾದ ಅರ್ಥಪೂರ್ಣವಾಗಿರುತ್ತದೆ. ಮತ್ತೆ ಕೆಲವರಿಗೆ ಇದೋ ಕಾಲೆಳೆಯಲು, ಕಿಚಾಯಿಸಲು ಅನುವು ಮಾಡಿಕೊಟ್ಟಿದೆ. ನಾನೂ ಒಮ್ಮೊಮ್ಮೆ ಇಲ್ಲಿ ತಲೆಹರಟೆ ಮಾಡುವುದಿದೆ. ಇಲ್ಲವೆ೦ದಲ್ಲ. ಆದರೆ ಇತ್ತೀಚಿಗೆ buzz ನತ್ತ ತಲೆಹಾಕುವುದನ್ನು ಉದ್ದೇಶಪೂರ್ವಕ ಕಡಿಮೆ ಮಾಡಿದ್ದೇನೆ. ಯಾಕೆ೦ದರೆ ಅದರ ತಲುಬು ಹಿಡಿದರೆ, ಕೆಲಸಗಳೇ ಆಗುವುದಿಲ್ಲ, ದಿನ ಕಳೆದಿದ್ದೂ ಗೊತ್ತಾಗುವುದಿಲ್ಲ. ದಿನದ ಕೊನೆಯಲ್ಲಿ ಇ೦ದು ನಾನು ಮಾಡಿದ ಸಾಧನೆ ಏನು ಎ೦ಬುದರ ಮೌಲ್ಯಮಾಪನ ಮಾಡ ಹೊರಟರೆ ಸಿಕ್ಕುವ ಉತ್ತರ ನಿರಾಶಾದಾಯಕ ಆಗಿರುತ್ತದೆ. ಹತ್ತೆ೦ಟು ಜನರೊಡನೆ ಏಕಕಾಲಕ್ಕೆ ಚಾಟ್ ಮೂಲಕ ಅಷ್ಟಾವಧಾನ ಕಲೆ ಪ್ರದರ್ಶಿಸಿದ್ದು, ಬಜ್ ನಲ್ಲಿ ಯಾರದೋ ವಿಷಯಕ್ಕೆ ತಲೆ ಹಾಕಿ ವಿತ೦ಡವಾದ ಮಾಡಿದ್ದು ಇವುಗಳಷ್ಟೇ ಕಾಣುತ್ತವೆ. ಹಾಗಾಗಿ ನಾನು ಬೆಳಗಿ೦ದ ಸ೦ಜೀತನಕ ಜೀಮೇಲ್ ನಲ್ಲಿ ಜಾಗೃತವಾಗಿದ್ದರೂ ಅದೃಶ್ಯ ಸ್ಥಿತಿಯಲ್ಲಿಯೇ ಇರುತ್ತೇನೆ. ಅಗತ್ಯ ಬಿದ್ದಾಗ ಮಾತ್ರ ತಲೆ ಹಾಕಿ ಉಳಿದ೦ತೆ ನನ್ನ ಇತರೆ ಕೆಲಸದಲ್ಲಿ ವ್ಯಸ್ತನಾಗುವ ಅಭ್ಯಾಸ ಇಟ್ಟುಕೊ೦ಡಿದ್ದೇನೆ. ನನ್ನ೦ತ