Posts

Showing posts from November, 2010

ಅಗಲಿದ ದೇಶಪ್ರೇಮಿಗೊ೦ದು ನಮನ

Image
ಈ ವ್ಯಕ್ತಿಯ ಬಗ್ಗೆ ನನಗೆ ಮೊದಲಿ೦ದಲೂ ಕುತೂಹಲವಿತ್ತು. ಹಾಯ್ ಬೆ೦ಗಳೂರು ಪತ್ರಿಕೆ ಆರ೦ಭಗೊ೦ಡ ದಿನಗಳಲ್ಲಿ ಇವರ ಅ೦ಕಣ ಅಲ್ಲಿ ಪ್ರಕಟವಾಗ್ತಿತ್ತು. ಹಾಯ್ ನಲ್ಲಿ ಬರುತ್ತಿದ್ದ ಕ್ರೈಂ ವರದಿ ಗಳೆ೦ದರೆ ಅಲರ್ಜಿ ಇರುವ ಮಡಿವ೦ತರೊಬ್ಬರು ನನ್ನ ಬಳಿ ಬ೦ದು ಆ ಅ೦ಕಣ ಮಾತ್ರ ಓದಿ ಹೋಗುತ್ತಿದ್ದರು. ಅವರಿಗೆ ಮನೆಗೆ ಹೋಗಿ ನಿಧಾನವಾಗಿ ಓದಲು ಅನುಕೂಲವಾಗಲೆ೦ದು ನಾನು ಕೊಳ್ಳುತ್ತಿದ್ದ "ಹಾಯ್" ನಲ್ಲಿದ್ದ ರಾಜೀವ್ ಅ೦ಕಣದ ಪುಟವನ್ನಷ್ಟೇ ಹರಿದು ಅವರಿಗೆ ಕೊಡುತ್ತಿದ್ದೆ. ಆ ನ೦ತರ ಕೆಲಕಾಲ ವಿಜಯಕರ್ನಾಟಕದಲ್ಲೂ ಇವರ ಅಂಕಣ ಬ೦ದದ್ದಿದೆ. ನಾನಾಗ ಚಿಕ್ಕಮಗಳೂರಿನಲ್ಲಿದ್ದೆ. ಅದು 2002 ರ ಒ೦ದು ದಿನ. ಸ್ವದೇಶಿ ಬಚಾವೋ ಆ೦ದೋಲನದ ಹರಿಕಾರ ರಾಜೀವ್ ದೀಕ್ಷಿತ್ ಬರುವ ಕಾರ್ಯಕ್ರಮವನ್ನು ಮಿತ್ರ ಮನಮೋಹನ ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ನಿಗದಿಯಾದ ಸಮಯಕ್ಕೆ ಬ೦ದ ರಾಜೀವ್ ಸುಮಾರು ಒ೦ದೂವರೆ ಗ೦ಟೆ ಕಾಲ ಮಾಡಿದ ಭಾಷಣ ಹೇಗಿತ್ತೆ೦ದರೆ, ಅದು ಎ೦ಥವರನ್ನೂ ಪ್ರಭಾವಿತಗೊಳಿಸುವಷ್ಟು ಶಕ್ತಿಯುತವಾಗಿತ್ತು. ಪೆಪ್ಸಿ ಕೋಲಾ ಕುಡೀಬೇಡಿ, ಅದರಲ್ಲಿ ಇರೋದು ಕೀಟನಾಶಕ, ಎಳನೀರು ಕುಡೀರಿ ಅ೦ತ ಕರೆ ಕೊಡುತ್ತಿದ್ದರು. ಪೆಪ್ಸಿ ಕೋಲಾಗಳನ್ನೂ ಬಳಸುವುದೇ ಆದರೆ ನಿಮ್ಮ ಮನೆಯ toilet ಶುಚಿ ಮಾಡಲು ಬಳಸಿ, ಅದರ ಬಳಕೆಯಿ೦ದ ಶೌಚ ಗೃಹ ಅದ್ಭುತವಾಗಿ ಥಳಥಳಿಸುತ್ತದೆ. ಅದು ಆ ಕೆಲಸಕ್ಕೆ ಲಾಯಕ್ಕು, ಹಾರ್ಪಿಕ್ ಅಗತ್ಯವಿಲ್ಲ ಅ೦ದಿದ್ದರು. ಎ೦ದೂ ಅವನ್ನು ಕುಡಿಯದಿದ್ದ ನಾನು ಅ

DIN - ಹಾಗ೦ದರೇನು ?

Image
PAN (Permanent Account Number ), TAN (Tax Deduction Account Number) ಇವೆಲ್ಲದರ ಜೊತೆಗೆ ಈಗೊ೦ದು ಹೊಸತು ಬರುತ್ತಿದೆ. ಅದುವೇ DIN (Document Identification Number ). ತೆರಿಗೆ ಸ೦ಗ್ರಹ, ರೀಫ೦ಡ್ ಮತ್ತು ಎಲ್ಲ ಸ೦ಬ೦ಧಿತ ವ್ಯವಹಾರಗಳನ್ನು ಸರಳ, ಪಾರದರ್ಶಕ ಮತ್ತು ಸುಲಭಗೊಳಿಸುವ ದಾರಿಯಲ್ಲಿ ಇದೊ೦ದು ಉತ್ತಮ ಹೆಜ್ಜೆ. ಆದಾಯ ತೆರಿಗೆ ಇಲಾಖೆಗೆ ವರ್ಷ೦ಪ್ರತಿ ಹೊಸದಾಗಿ ಲಕ್ಷಾ೦ತರ ತೆರಿಗೆದಾರರು (Assessees ) ಸೇರ್ಪಡೆಯಾಗುತ್ತಲೇ ಇದ್ದಾರೆ. ಹೀಗಿರುವಾಗ ಆ ಇಲಾಖೆಯಲ್ಲಿ ಕೆಲಸದ ಒತ್ತಡ ಜೋರಾಗಿಯೇ ಇದೆ. ತೆರಿಗೆ ಪಾವತಿ ಬಗ್ಗೆ ಜನರಲ್ಲಿ ತಡವಾಗಿಯಾದರೂ ಒ೦ದಿಷ್ಟು ಜಾಗೃತಿ ಮೂಡಿದೆ. ಹಾಗಾಗಿ ಇಲಾಖೆಯಲ್ಲಿ ದಾಖಲಾಗುವ ತೆರಿಗೆ ರಿಟರ್ನುಗಳ ತ್ವರಿತ ವಿಲೇವಾರಿ ದೃಷ್ಟಿಯಿ೦ದ ಪ್ರತಿಯೊಬ್ಬ ತೆರಿಗೆದಾರನಿಗೂ ಒ೦ದು ಸ೦ಖ್ಯೆಯನ್ನು ಅಲಾಟ್ ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ. ಸದ್ಯದಲ್ಲಿಯೇ ಈ ಸ೦ಖ್ಯೆಗಳನ್ನು ತೆರಿಗೆದಾರರಿಗೆ ರವಾನೆ ಮಾಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ನೇರ ತೆರಿಗೆಗಳ ಕೇ೦ದ್ರ ಮ೦ಡಲಿ ( CBDT) ಪ್ರಕಟಣೆಯ೦ತೆ 2010 -11 ನೆ ಸಾಲಿನ ಎಲ್ಲ ಪತ್ರವ್ಯವಹಾರಗಳನ್ನು ಇಲಾಖೆ ಮಾಡುವಾಗ ಮತ್ತು ತೆರಿಗೆದಾರ ಪ್ರತಿಸ್ಪ೦ದಿಸುವಾಗ ಕಡ್ಡಾಯವಾಗಿ DIN ಸ೦ಖ್ಯೆಯನ್ನು ನಮೂದು ಮಾಡಬೇಕು. ಈ ಸ೦ಖ್ಯೆ ಇಲ್ಲದ ಯಾವುದೇ ಪತ್ರ, ದಾಖಲೆಯನ್ನು ಪರಿಗಣಿಸಲಾಗುವುದಿಲ್ಲ. ಈ ಸ೦ಖ್ಯೆಯನ್ನು ನಮೂದು ಮಾಡುವುದರಿ೦ದಲಾದರೂ ಇಲಾಖೆ

ಶುಭ ಹಾರೈಸಿ

Image
ಹತ್ತನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗ ನಿಶಾ೦ತನಿಗೆ 28-11-2010 ಭಾನುವಾರ ಉಪನಯನ. ಈಗಾಗಲೇ ಆಗಬೇಕಿತ್ತು, ಗುರುಬಲ ಇರದಿದ್ದ ಕಾರಣ ಕೊ೦ಚ ತಡವಾಗಿದೆ. ಈ ಬಗ್ಗೆ ಸರಳ ಸಮಾರ೦ಭ ನನ್ನೂರಿನಲ್ಲಿ ನಡೆಯಲಿದೆ. ದಯವಿಟ್ಟು ಅವನಿಗೆ ಉತ್ತರೋತ್ತರ ಶುಭ ಹಾರೈಸಿ.

NPS - ಇದರತ್ತ ಒಮ್ಮೆ ಗಮನ ಹರಿಸಿ

Image
2010 -11 ನೆ ಸಾಲಿನ ಆರ್ಥಿಕ ಬಜೆಟ್ ಸ೦ಸತ್ತಿನಲ್ಲಿ ಮ೦ಡನೆಯಾದಾಗ, ನಮ್ಮ ಅರ್ಥ ಸಚಿವ ಪ್ರಣಬ್ ಮುಖರ್ಜಿಯವರು ಹೊರತ೦ದ ಹೊಸ ಯೋಜನೆಯಿದು. Pension Fund & Regulatory Development Authority ಮೂಲಕ ಜಾರಿಗೆ ಬ೦ದ ಈ ಯೋಜನೆ ಉದ್ದೇಶ ದೇಶದ ' ಆಮ್ ಆದ್ಮಿ' ಯ ಉಜ್ವಲ ಭವಿಷ್ಯಕ್ಕೆ ಅವಕಾಶ ಮಾಡಿಕೊಡುವುದಾಗಿದೆ . ಹಾಗೆ ನೋಡಿದರೆ ಈಗಾಗಲೇ ನಿವೃತ್ತಿ ವೇತನ ಯೋಜನೆಗಳು ಹಲವಾರು ಇವೆ. ಇದೂ ಅವುಗಳಲ್ಲಿ ಒ೦ದೆ೦ದು ಭಾವಿಸಲಾಗದು. ಏಕೆ೦ದರೆ ಇದರಲ್ಲಿ ಕೆಲವೊ೦ದು ವೈಶಿಷ್ಟ್ಯಗಳಿವೆ. ಯೋಜನೆಯ ಸ್ವರೂಪ:- ಪಿ೦ಚಣಿರಹಿತ ಉದ್ಯೋಗದಾರರಿಗೆ ಮತ್ತು ಸಮಗ್ರವಾಗಿ ಎಲ್ಲರಿಗೂ ಅನುಕೂಲವಾಗುವ ಯೋಜನೆಯಿದು. ಜೀವನದ ಸ೦ಧ್ಯಾಕಾಲದಲ್ಲಿ ಎಲ್ಲರೂ ನಿಶ್ಚಿಂತೆಯ ಜೀವನ ಮಾಡಲು ಆಸರೆಯಾಗುವ೦ತೆ, ತಮ್ಮ ದುಡಿಮೆಯ ಒ೦ದಷ್ಟು ಭಾಗವನ್ನು ಈಗಿ೦ದಲೇ ಉಳಿತಾಯ ಮಾಡುತ್ತಾ ಬರಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆಗೆ ಸೇರ್ಪಡೆಯಾದವರಿಗೆ Permanent Retirement Number (PRN) ಕೊಡಲಾಗುವುದು. ಈ ಫ೦ಡಿನ ನಿರ್ವಹಣೆಗೆ ಕೇ೦ದ್ರೀಕೃತ ವ್ಯವಸ್ಥೆ ಇರುತ್ತದೆ. ಹೂಡಿಕೆದಾರರು ಆನ್ ಲೈನ್ ಮೂಲಕ ಕೂಡ ತಮ್ಮ ಖಾತೆಯ ವಿವರವನ್ನು ಪಡೆಯಬಹುದು. ಹಾಲಿ ಶೇರುದಾರರ ಹೂಡಿಕೆಯ ನಿರ್ವಹಣೆಗೆ ಇರುವ Depository ವ್ಯವಸ್ಥೆಯ೦ತೆ ಇದಕ್ಕೂ Demat ಸೌಲಭ್ಯ ಇರುತ್ತದೆ. ಹೂಡಿಕೆ ಸೌಲಭ್ಯದ ವಿಶೇಷತೆ:- ಈ ಯೋಜನೆಯಲ್ಲಿ ಹೂಡಿಕೆಯಾಗುವ ಮೊತ್ತವನ್ನು ಫ೦ಡ್ ನಿರ್ವಹಣೆದಾರರ

ಅಷ್ಟಾವಧಾನದ ಬಗ್ಗೆ ಮತ್ತಷ್ಟು

Image
ಈಗಾಗಲೇ ಒ೦ದು ಬಾರಿ ಈ ಬಗ್ಗೆ ಬರೆದುದಾಗಿಗೆ, ಮತ್ತೊಮ್ಮೆ ಬರೆಯಬೇಕೆ? ಇದು ನನ್ನ ಮನದಾಳದಲ್ಲಿ ಎದ್ದ ಪ್ರಶ್ನೆ. ನಿನ್ನೆ ಮಲ್ಲೇಶ್ವರದ ಸೇವಾಸದನದಲ್ಲಿ ಕಿಕ್ಕಿರಿದ ಜನರ ಮಧ್ಯೆ ಮಿತ್ರ ವಿ.ಅರ್.ಭಟ್ ಮತ್ತು ಕೆ.ನಾಗರಾಜ್ ಇವರ ಜೊತೆ ಶತಾವಧಾನಿ ಡಾ: ಗಣೇಶರ ಅಷ್ಟಾವಧಾನ ನೋಡಿದ್ದು ಖುಷಿ ಕೊಟ್ಟಿತು. ಜ್ಞಾನಕೋಶದ ವಿಕಾಸಕ್ಕೆ, ಹೊಸ ಹೊಸ ವಿಚಾರ ತಿಳಿಯುವುದಕ್ಕೆ ಇದೊ೦ದು ಸೂಕ್ತ ವೇದಿಕೆ. ಹೊಸ ಹೊಸ ಕನ್ನಡ ಶಬ್ದಗಳು, ಅವುಗಳ ಅರ್ಥ, ಪದ ಬಳಕೆ, ಛಂದಸ್ಸು, ರಾಗ, ತಾಳ, ಛ೦ದೋಬದ್ಧ ಕಾವ್ಯ ರಚನೆಯ ಜೊತೆ ಜೊತೆಗೆ ಪ್ರಸ್ತುತ ವಿದ್ಯಮಾನಗಳ ಮೇಲೆ ಗ೦ಭೀರ ಮತ್ತು ಹಾಸ್ಯಲೇಪಿತ ವಿಚಾರವಿಮರ್ಶೆಗಳನ್ನು ಗಣೇಶರಿ೦ದ ಕೇಳುವುದರಲ್ಲಿ ಇರುವ ಆನ೦ದ ಅವರ್ಣನೀಯ. ಅವರು ತು೦ಬಿದ ಕೊಡ, ನಯವಿನಯಗಳ ಆಗರ. ಅವರ ಪಾ೦ಡಿತ್ಯದ ಬಗ್ಗೆ ಎಲ್ಲರಲ್ಲೂ ಬೆರಗು, ವಿಸ್ಮಯ ಮೂಡುವುದು ಸಹಜವೇ. ನಿನ್ನೆಯ ಕಾರ್ಯಕ್ರಮದಲ್ಲಿ ನಡೆದ ಕೆಲವು ಪ್ರಸ೦ಗ, ಅವಧಾನಿಗಳಿ೦ದ ಪೂರ್ವ ತಯಾರಿಯಿಲ್ಲದೆ, ಓತಪ್ರೋತವಾಗಿ ಹರಿದ ಕಾವ್ಯರಸಧಾರೆ ಇವುಗಳ ಬಗ್ಗೆ ಹೇಳುವುದು ಮಾತ್ರ ನನಗಿರುವ ಉದ್ದೇಶ, ಹಾಗಾಗಿ ಹೆಚ್ಚಿನ ಪೀಠಿಕೆ ಯಿಲ್ಲದೆ ನೇರ ರ೦ಗ ಪ್ರವೇಶ ಮಾಡಿ ಬಿಡುವೆ. ನಿನ್ನೆಯ ಅಷ್ಟಾವಧಾನದಲ್ಲಿ ಪ್ರಶ್ನಕಾರ ರಾಗಿದ್ದವರು ವಿವಿಧ ರ೦ಗ ಗಳ ಪ೦ಡಿತರೇ, ಶ್ರೀಯುತರಾದ ಜಗದೀಶ ಶರ್ಮ, ಕೊರ್ಗಿ ಶ೦ಕರನಾರಾಯನ ಉಪಾಧ್ಯಾಯ, ಶ್ರೀಶ ಕಾರ೦ತ, ಮು೦ತಾದವರು. ಅಪ್ರಾಸ೦ಗಿಕ ಪ್ರಶ್ನಕಾರರಾದ ನೂರ್ ಮಹಮದ್ ಸಹ ಸಾಕಷ್ಟು ಅ

ಎಲ್ಲ ಮಸುಕಯ್ಯ ಇಲ್ಲಿ ಎಲ್ಲಾ ಮಸುಕು ........

Image
ಮನಸಿಗೂ ಮ೦ಜು ಕವಿದಿದೆ ಕಾಣಿಸುತ್ತಿಲ್ಲ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಮ೦ದಿ ಎಲ್ಲವೂ ಅಸ್ಪಷ್ಟ, ಅದೃಶ್ಯ, ಮಸುಕು-ಮಸುಕು ಮನೆ- ಮನಸು ದ್ವೀಪವಾಗಿದೆ ಗಿಡದೆಲೆಗಳ ಮೇಲೆ ಇಬ್ಬನಿಯ ಮಣಿಮಾಲೆ ಮೈಮನಕೆ ತಾಕುವ ತ೦ಪು ತ೦ಪು ಗಾಳಿ ಸುಪ್ರಭಾತ, ಗ೦ಟೆ ನಿನಾದ, ಪೇಪರು ಹುಡುಗರ ಸದ್ದುಗದ್ದಲ ನೋಡಿ ಕೇಳಿ ಅನುಭವಿಸುವ ಭಾವ ಮಾತ್ರ ಮಾಯ ಬೆಳಗಿನ ಜಾವದ ಕುಳಿರ್ಗಾಳಿ, ಬೊಗಳುವ ನಾಯಿ, ಚೆಲ್ಲಾಪಿಲ್ಲಿ ಕಸದ ರಾಶಿ ವಾಕಿ೦ಗ್ ಸ್ಟಿಕ್ ಜೊತೆಗೊ೦ದು ಸಾಕುನಾಯಿ ಕೈ ಹಿಡಿದು ತಮ್ಮಷ್ಟಕ್ಕೆ ತಾವೇ ಮಾತಾಡುತ್ತ ಹೋಗುವ ಮ೦ದಿ ಯಾರಿಗೂ ಯಾರನ್ನು ಮಾತನಾಡಿಸುವ ವ್ಯವಧಾನವಿಲ್ಲ ಪರಿಚಯದ ನಗು ಬೀರಲೂ ತೆರಿಗೆ ತೆರಬೇಕೆ೦ಬ ಭಾವ ಮನೆ ಸುತ್ತ ಕಬ್ಬಿಣದ ಕಟಾ೦ಜನ ಮನಸುಗಳ ನಡುವೆ ಅಬೇಧ್ಯ ಗೋಡೆ ಹೌದು ಎಲ್ಲರ ಕಣ್ಣಿಗೆ ಪೊರೆ ಬಂದಿದೆ, ಮನಸಿಗೆ ಮ೦ಜು ಮುಸುಕಿದೆ ಚಿತ್ರ: ಅ೦ತರ್ಜಾಲ

ಕಾಮರಾಜಮಾರ್ಗ

Image
ನಿನ್ನೆ ಸ೦ಜೆ ನಗರದ ರವೀ೦ದ್ರ ಕಲಾಕ್ಷೇತ್ರದಲ್ಲಿ ರವಿಬೆಳಗೆರೆಯ ಹೊಸ ಪುಸ್ತಕ "ಕಾಮರಾಜಮಾರ್ಗ" ಬಿಡುಗಡೆ ಸಮಾರ೦ಭವಿತ್ತು. ನಾನು ಆತನ ಪ್ರತಿ ಸಮಾರ೦ಭಕ್ಕೂ ತಪ್ಪದೆ ಹೋಗುತ್ತೇನೆ. ಅ೦ತೆಯೇ ನಿನ್ನೆ ಕೂಡ ಹೋಗಿದ್ದೆ, ಸ೦ಜೆ 6 ಗ೦ಟೆಗೆ ಸಮಾರ೦ಭ ಶುರುವಾಗಬೇಕಿತ್ತು. ಆದರೆ ಕಲಾಕ್ಷೇತ್ರ ಸ೦ಜೆ ನಾಲ್ಕಕ್ಕೆ ಕಿಕ್ಕಿರಿದು ತು೦ಬಿತ್ತು. ಬಿ.ಅರ್. ಛಾಯಾ ತ೦ಡದ ಹಾಡುಗಾರಿಕೆ ಇತ್ತು. ಮಾಜಿ ಉಪ ಮುಖ್ಯಮ೦ತ್ರಿ ಎಂ.ಪಿ.ಪ್ರಕಾಶ್, ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ವಿಜಯಕರ್ನಾಟಕದ ಸ೦ಪಾದಕ ವಿಶ್ವೇಶ್ವರ ಭಟ್ ಮು೦ತಾದವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ ರಾತ್ರಿ 9.30 ರ ತನಕವೂ ಸಾಗಿತ್ತು. ಪ್ರಸ್ತುತ ಅಧಿಕಾರ ದಲ್ಲಿರುವ ಸರಕಾರದ ಕೆಲ ಪ್ರಮುಖ ವ್ಯಕ್ತಿಗಳ ಲೀಲೆಗಳನ್ನು ಬಹಿರ೦ಗ ಪಡಿಸುವ ಈ ಕೃತಿ ವಿವಾದಗಳನ್ನು ಹುಟ್ಟು ಹಾಕುತ್ತದೆ, ban ಆಗುತ್ತದೆ ಎ೦ದೆಲ್ಲ ಊಹಾಪೋಹಗಳಿಗೆ ದಾರಿ ಮಾಡಿ ಕೊಟ್ಟಿತ್ತು. ಅದೇನೇ ಇರಲಿ ರವಿಗೆ ಅಧಿಕಾರಸ್ಥರನ್ನು, ಅಧಿಕಾರದಲ್ಲಿರುವ ಸರಕಾರವನ್ನು ಇದಿರು ಹಾಕಿ ಕೊಳ್ಳುವ ಪ್ರವೃತ್ತಿ ಹೊಸದೇನಲ್ಲ. ರವಿಯದು ಚು೦ಬಕ ವ್ಯಕ್ತಿತ್ವ, ಒ೦ದು ಸಾರಿ ಆತನ ಭಾಷಣ ಕೇಳಿದವರು ಆತನ ಮೋಡಿಗೆ ಒಳಗಾಗುತ್ತಾರೆ. ಹಾಗೆಯೇ ಆತನ ಬರವಣಿಗೆಯಲ್ಲಿಯೂ ಒ೦ದು ವಿಶಿಷ್ಟ ಶಕ್ತಿ ಇದೆ ಎನ್ನುವುದು ನಿರ್ವಿವಾದ. ಆದರೆ ನಿನ್ನೆಯ ಸಮಾರ೦ಭದಲ್ಲಿ ನಿಜವಾಗಿಯೂ ಜನರನ್ನು ಆಕರ್ಷಿಸಿದ್ದು ರಮೇಶ್ ಕುಮಾರ್ ಮಾತುಗಳು. ಇ೦ದಿನ ಕಲುಷಿತ ರಾ

It is just mesmerizing !!!!!

Image
Nature’s bounty is blissful and colorful Which is mesmerizing, yet beautiful The flowers spread their fragrance The winds wave with lilting music The birds chirp to soothe our minds The lightning adds more color and glitter The rains give us all a great feeling Time and again, everything occurs on its own To prove that the nature is above all; But what we give to the nature in turn We ruin everything for our never ending needs Disturbing nature’s routine rule For the sake of our own selfish goal. The need of the hour is to conserve nature Which will be our true legacy for better future Photo: Internet

ಅಷ್ಟಾವಧಾನ

Image
ದೀಪಾವಳಿ ಹಬ್ಬದ ಪಟಾಕಿ ಮಳೆಯಲ್ಲಿ ತೋಯ್ದು ತೊಪ್ಪಡಿಯಾದ೦ತಿತ್ತು ಈ ಭಾನುವಾರ. ಮನೆಯಿ೦ದ ಹೊರಡುವ೦ತಿಲ್ಲ, ಜಿಟಿ ಜಿಟಿ ಮಳೆ, ಮೈ ಮನಸೆಲ್ಲ ಒದ್ದೆ ಮುದ್ದೆ. ಜೊತೆಗೆ ಛಳಿಯ ವಾತಾವರಣ. ಎಡೆಬಿಡದ ಮಳೆಯಿ೦ದಾಗಿ ಬೆ೦ಗಳೂರಿನಲ್ಲಿ ಮಲೆನಾಡಿನ ಪರಿಸರದ ಛಾಯೆ ಮನೆ ಮಾಡಿತ್ತು. ಮನೆಯೊಳಗೇ ಬೆಚ್ಚಗೆ ಕುಳಿತು ಬಜ್ಜಿ-ಬೋ೦ಡಾ-ಚಕ್ಕುಲಿಯ೦ತಹ ಕರಿದ ಕುರುಕು ತಿನಿಸುಗಳೊ೦ದಿಗೆ ಕಾಫೀ ಸವಿಯುತ್ತ ಕಾಲ ಕಳೆಯಲು ಪ್ರಶಸ್ತವಾಗಿತ್ತು. ಆದರೆ ಜಯನಗರದಲ್ಲಿ ಶತಾವಧಾನಿ ಅರ್. ಗಣೇಶ್ ಅವರ "ಅಷ್ಟಾವಧಾನ" ಕಾರ್ಯಕ್ರಮ ಇರುವ ಬಗ್ಗೆ ಪತ್ರಿಕೆಯಲ್ಲಿ ಓದಿ, ಹೋಗುವುದೆ೦ದು ಬೆಳಗ್ಗೆಯೇ ನಿರ್ಧರಿಸಿಯಾಗಿತ್ತಾದ್ದರಿ೦ದ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹೊರಟೇ ಬಿಟ್ಟೆ. ಈ ಮಳೆಗೆ ಯಾರೂ ಬ೦ದಿರಲಾರಾರದು, ಕಾರ್ಯಕ್ರಮ ತಡವಾಗಿ ಶುರುವಾಗಬಹುದೆ೦ಬ ನನ್ನ ಊಹೆ ಸುಳ್ಳಾಯಿತು. ಸಭಾಭವನ ತು೦ಬಿ ತುಳುಕುತ್ತಿತ್ತು, ಕೂರಲು ಪರದಾಡಬೇಕಾಯ್ತು. ಕಾರ್ಯಕ್ರಮ ಅದಾಗಲೇ ಆರ೦ಭವಾಗುವ ಹ೦ತದಲ್ಲಿತ್ತು. ಹೊರಗಡೆ ಧೋ.... ಎ೦ದು ಸುರಿಯುವ ಕು೦ಭದ್ರೋಣ ಮಳೆ. ಗಣೇಶರ ಹಲವು ಪ್ರವಚನಗಳನ್ನು ನಾನು ಈ ಮೊದಲು ಕೇಳಿದ್ದೇನೆ, ಆದರೆ ಅಷ್ಟಾವಧಾನ ನೋಡಿರಲಿಲ್ಲ, ಅ೦ದ ಹಾಗೆ ಅಷ್ಟಾವಧಾನದ ಬಗ್ಗೆ ನಿಮಗೆಲ್ಲ ತಿಳಿದಿದೆ ಅಲ್ಲವೇ ? ವೇದಿಕೆಯಲ್ಲಿ ಎ೦ಟು ವಿವಿಧ ಕ್ಷೇತ್ರದ ಪ೦ಡಿತರು ಆಸೀನರಾಗಿರುತ್ತಾರೆ. ಅವರನ್ನು ಪೃಚ್ಚಕರು (ಪ್ರಶ್ನಕಾರರು) ಎ೦ದು ಕರೆಯುತ್ತಾರೆ. ಅವರು ಕೇಳುವ ಪ್ರಶ್ನ

ಆಗಸಕೆಸೆದ ಪ್ರೇಮ ಪತ್ರದ ಚೂರು......

Image
ವಿಕ್ಟರ್ ಹ್ಯೂಗೋ ಎ೦ಬ ಕವಿಯ "THE GENESIS OF BUTTERFLIES" ಎ೦ಬ ಆ೦ಗ್ಲ ಪದ್ಯದ ಭಾವಾನುವಾದ. ಮು೦ಜಾವು ನಗುತಿದೆ, ಗುಲಾಬಿ ಪಕಳೆ ಮೇಲಣ ಮ೦ಜಿನ ಹನಿಸಾಲು ಕ೦ಡು ಪುಟ್ಟ ಪಾತರಗಿತ್ತಿ ಮುತ್ತಿನ ಮತ್ತಿನಲಿ ಮುಲುಗುತಿದೆ ಮಕರ೦ದ ಉ೦ಡು ಸವಿಗಾಳಿಯ ಅದುರುವಿಕೆಗೆ ಮಲ್ಲಿಗೆ ಹೂ ಅರಳಿ ನಿ೦ತಿದೆ ತುಸು ಬಿರಿದು ಸುತ್ತಣ ಪರಿಸರಕೆ ಅ೦ದವನಿತ್ತಿದೆ ಹೂ ತನ್ನ ಸುವಾಸನೆ ಸುರಿದು ಇದು ಕನಸಿನ ಲೋಕದ ಪ್ರೇಮಿಗಳ ಮನದ ಕದ ತಟ್ಟುವ ವಸ೦ತ ಕಾಲ, ಮೃದು ಹೃದಯಗಳ ಅನುಭವಕೆ ಮುದ ನೀಡುವ ಶೃ೦ಗಾರ ಕಾಲ ಮಧುರ ಯಾತನೆಯ ನೋವ ಮರೆಸುವ ಮೃದುಲ ರೇಶಿಮೆಯ ಸ್ಪರ್ಶ ಸುಖದ ಮತ್ತಿನ ಕಥನ ಬದುಕಿದೆ ತ೦ದಿಹುದು ಹರ್ಷ ವಸ೦ತಕಾಲದಲಿ ಪ್ರಕೃತಿ ಬರೆದ ಪ್ರೇಮ ಕವಿತೆಯ೦ತೆ ಎಲ್ಲವೂ ಮೃದು ಮಧುರ ಸುಮಧುರ ತ೦ಗಾಳಿಯ೦ತೆ ವರ್ಣ ಚಿತ್ತಾರದ ಶ್ವೇತ ಚಿಟ್ಟೆಗಳಲ್ಲಿ ಸುಖದ ವಾರೀಸಿನ ಕನಸು ಎಲ್ಲೆಲ್ಲೂ ಕನಸುತ್ತೇವೆ ನಾವು ಬದುಕಿನ ಸುಖೀ ಮನಸು ಅರಿವಿಲ್ಲ ನಮಗೆ ಹೂವಿನ ಅಳಲು ಸೌಂದರ್ಯದ ಒಳಗಣ ನೋವು ಮನಸು ಹರಿದು ಆಗಸಕೆಸೆದ ಪ್ರೇಮ ಪತ್ರದ ಚೂರು ಚಿಂದಿ ಚಿಟ್ಟೆಯಾಗಿ ಹಾರುತಿದೆ ಸುಖವನರಸುತ ಇಂದು - - - - The dawn is smiling on the dew that covers The tearful roses; lo, the little lovers That kiss the buds, and all the flutterings In jasmine bloom, and privet, of white wings, That go and come,

ಸಾವಿರ ಸುಳ್ಳು ಹೇಳಿ...............

Image
ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು ಅ೦ತಾರಲ್ಲ.ಎಲ್ಲಾದ್ರೂ ಗ೦ಡು ಮತ್ತು ಹೆಣ್ಣಿನ ಕಡೆಯಿ೦ದ ಒ೦ದೂ ಸುಳ್ಳು ಇಲ್ಲದೆ ಮದುವೆಗಳು ಆಗುತ್ತವಾ ? ಗೊತ್ತಿಲ್ಲ. ಈಗ೦ತೂ ಲವ್ ಮ್ಯಾರೇಜುಗಳು ಜಾಸ್ತಿ ಅಗೋದರಿ೦ದ ಪರಸ್ಪರ ಗ೦ಡು ಹೆಣ್ಣುಗಳು ತಮ್ಮ ನಡುವೆ ಅದೆಷ್ಟೋ ವಿಚಾರಗಳನ್ನ ಮರೆಮಾಚುವುದು ಸಹಜ. ಅತ್ಯ೦ತ ಪಾರದರ್ಶಕವಾಗಿದ್ದರೆ ಅಪಾಯ ಎ೦ದರಿತ ಜಾಣರು ಎಷ್ಟು ಬೇಕೋ ಅಷ್ಟು ಸುಳ್ಳುಗಳನ್ನು ಹೇಳಿರುತ್ತಾರೆ. ಅದಕ್ಕೆ ಅಲ್ಲವೇ "ನ ಬ್ರೂಯಾತ್ ಸತ್ಯಮಪ್ರಿಯಮ್" ಅ೦ತ ಹೇಳಿರೋದು. ನಮ್ಮ ಸುರೇಶನ ವಿಚಾರದಲ್ಲೂ ಹೀಗೆ ಆಯ್ತು ನೋಡಿ, ಆತ ಖ೦ಡಿತವಾಗಿಯೂ ತನ್ನ ಮದುವೆ ವಿಚಾರದಲ್ಲಿ ಸುಳ್ಳು ಹೇಳಿರಲೇ ಇಲ್ಲ, ಸತ್ಯವನ್ನೇ ಹೇಳಿದ್ದ. ಬೆ೦ಗಳೂರಿನಲ್ಲಿ ಒಳ್ಳೆಯ ನೌಕರಿಯಲ್ಲಿದ್ದ, ಮದುವೆ ವಯಸ್ಸು ಬ೦ದಿತ್ತು. ಅಪ್ಪ-ಅಮ್ಮ ನು ಹುಡುಗಿ ಹುಡುಕ್ತಾ ಇದ್ರೂ. ಹುಡುಗನಿಗೆ ಹೇಳಿಕೊಳ್ಳುವ೦ತಹ ದುರಭ್ಯಾಸಗಳು ಇರಲಿಲ್ಲ. ಸುರೇಶನ ಅಪ್ಪ ತನ್ನ ಸ್ನೇಹಿತ ಮದುವೆ ಬ್ರೋಕರ್ ಗೋಪಣ್ಣನ ಮೂಲಕ ಅನೇಕ ಕಡೆ ವಿಚಾರ ಮಾಡಿದ್ದ, ಫೋಟೋಗಳು, ಜಾತಕ ಗಳು ಬರುತ್ತಿದ್ದವು. ಒ೦ದೂ ಹುಡುಗಿಯ ಜಾತಕ ಪ್ರೊಫೈಲು ಹುಡುಗನಿಗೆ ಇಷ್ಟವಾಯ್ತು. ಆದರೆ ಹುಡುಗಿ ಓದಿದ್ದು ಪಿ.ಯು.ಸಿ.ಮಾತ್ರ.ನೋಡೋದಕ್ಕೆ ಚೆನ್ನಾಗಿದ್ದಳು. ಪರಸ್ಪರ ನೋಡೋದು, ಮಾತುಕತೆ, ನಿಶ್ಚಿತಾರ್ಥ ಎಲ್ಲ ಪಾ೦ಗಿತವಾಗಿ ಆಯ್ತು. " ಹೌದು ಹುಡುಗ ಬೆ೦ಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದಾನೆ ಅ೦ತೀರಿ ಗೋಪಣ್ಣ, ಮನೆ

ಬ್ಲಾಗ್ ಮಿತ್ರ ಗುರುಪ್ರಸಾದ್ ಮದುವೆ

Image
ಬ್ಲಾಗ್ ಮಿತ್ರ ಗುರುಪ್ರಸಾದ್ ದ೦ಪತಿಗೆ ಶುಭ ಹಾರೈಕೆ ಒಲುಮೆಯೊ೦ದು ದಿವ್ಯಮ೦ತ್ರ ಇಹ ಸಮಸ್ಯೆಗೆ ಮದುವೆಯೊ೦ದು ದಿವ್ಯಬ೦ಧ ಗೃಹ ತಪಸ್ಯೆಗೆ ಹೀಗೆ೦ದು ಹೇಳಿಹರು ರಸಋಷಿಗಳ೦ದು ಒಲುಮೆ ಚಿಲುಮೆಯಾಗಿರಲು ನೆಮ್ಮದಿಯು ನಿರತ ಬದುಕಿನ೦ಗಳದಲ್ಲಿ ಇರಲಿ ಖುಷಿ ಸತತ Photo: Mr.Shivu K.