Posts

Showing posts from October, 2010

ಹೂವೇ ನನ್ನ ಸಾರಥಿ

Image
ವಿಲಿಯ೦ ವರ್ಡ್ಸ್ ವರ್ತ್ ಬರೆದ "I wandered lonely as a cloud" ಎ೦ಬ ಆ೦ಗ್ಲ ಪದ್ಯವೊ೦ದರ ಭಾವಾನುವಾದಕ್ಕೆ ಯತ್ನಿಸಿದೆ. ಅದು ಹೀಗಿದೆ:- ಒಬ್ಬ೦ಟಿ ಸ೦ಚರಿಸಿದೆ ಮೋಡಗಳ ತೆರದಿ ಬೆಟ್ಟ ಗುಡ್ಡ ಕಣಿವೆಗಳನು ಹಾದು ಹಾದು ಭರದಿ ಚಕಿತನಾದೆ ಗು೦ಪನೊ೦ದು ಕ೦ಡು ಎನ್ನ ಪಥದಿ ಮರಗಿಡಗಳ ನಡುವಿನಲ್ಲಿ ಸರೋವರವು ಶರಧಿ ಸವಿಗಾಳಿಗೆ ಕುಣಿ ಕುಣಿಯುವ ಹೂವೇ ನನ್ನ ಸಾರಥಿ ಹೊ೦ಬಣ್ಣದ ಹೂವರಾಶಿ ಮನಕೆ ತ೦ತು ಸ್ಫೂರ್ತಿ ತಾರೆಯ೦ತೆ ಮಿನುಗುತಿರುವ ಹೂವದೆಷ್ಟು ಚೆಂದ ಆಗಸದ ಹಾಲ್ಗ ಡ ಲಲಿ ಹೊಳೆಯುತಿಹುದು ಅಂದ ಭೂಭಾಗದ ಉದ್ದಕೆಲ್ಲ ಹರಡಿ ನಿ೦ತ ಬ೦ಧ ಅರೆಕ್ಷಣದ ನೋಟದಲ್ಲಿ ವರ್ಣಮಯ ಚಾದರ ನೋಡಿದಷ್ಟು ಹೂವ ಸಾಲು ಮುಗಿಯದದು ಅನಂತ ಶಿರವನೆತ್ತಿ ಆಗಸದೆಡೆ ನಲಿ ನಲಿಯುತಿವೆ ಶಾ೦ತ ಅಲೆ-ತೆರೆಗಳು ಕುಣಿಯುತಿವೆ ಕ೦ಡು ಹೂವ ಚೆಲುವು ಸಾಟಿಯಿಲ್ಲದ೦ತೆ ಇಲ್ಲಿ ಕುಣಿಯುತಿಹುದು ಮನವು ಕವಿಯ ಮನದ ಭಾವಕಿಲ್ಲಿ ಪುಟಿ ಪುಟಿಯುವ ಹುರುಪು ಅರಸಿಕ ನಲೂ ಉಕ್ಕಿ ಹರಿವ ರಸಭಾವದ ಕುರುಹು ಎವೆಯಿಕ್ಕದೆ ಮನದಣಿಯೆ ಅನುಭವಿಸಿದೆ ಒಲವ ಸ೦ಪದವು ಈ ಪ್ರಕೃತಿ ತು೦ಬಲೆನಗೆ ಬಲವ ಆಗಲೊಮ್ಮೆ ಈಗಲೊಮ್ಮೆ ವಿರಮಿಸುವ ಕ್ಷಣದಲಿ ಏಕಾ೦ತದ ಧ್ಯಾನಸ್ಥ ಸ್ಥಿತಿಯಲಿರಲು ಇಳೆಯಲಿ ಒಳಗಣ್ಣಿಗೆ ಗೋಚರಿಪುದು ಮುದವನೀವ ಹೂವು ಒ೦ಟಿತನದ ಗಳಿಗೆಯಲ್ಲೂ ಸ್ವರ

MONEY.. MONEY........

Image
Money has many dimensions In this realistic World. Some go behind it Some go beyond it Some crave for it even in graveyard Many –a- time it keeps you confident, Cool and vibrant with a zeal You feel like an uncrowned king You forget the ladder stepped And behave like a super man When you run out of money in life You feel totally aloof and alone With no friends in your turn Like a lone fighter left in Battle With no sword in his hood Life is a lesson for one and all For those who always fall In love with money and Money In search of pride and fame Leaving behind humanity Money seldom gives honey Do Keep in harmony Photo: www.google.com

ಅಧರಾಮೃತ ಪಾನ

Image
ನಿನ್ನೆ ಹಿರಿಯ ಕವಿ ಎಚ್ಚೆಸ್ವಿ ಯವರ "ಅನಾತ್ಮ ಕಥನ" ದ ಬಿಡುಗಡೆ ಸಮಾರ೦ಭಕ್ಕೆ ಹೋಗಿದ್ದೆ, ಅನೇಕ ಪರಿಚಿತರು, ಬ್ಲಾಗ್ ಮಿತ್ರರು ಮಾತಿಗೆ ಸಿಕ್ಕು ಮನಸಲ್ಲಿ ಆಹ್ಲಾದ ಮನೆ ಮಾಡಿತ್ತು. ಅದಾಗಲೇ ಮಧ್ಯಾಹ್ನ ವಾಗಿತ್ತು. ಮಿತ್ರ ವಿ.ಆರ್.ಭಟ್ಟರು ಮನೆತನಕ ತಮ್ಮ ವಾಹನದಲ್ಲಿ ಬಿಟ್ಟು ಉಪಕರಿಸಿದರು. ಇವತ್ತು ರಜನೀಕಾ೦ತನ "ರೋಬೋಟ್ " ಸಿನಿಮಾ ನೋಡಲೇಬೇಕು ಎ೦ದು ಮಗ ಮುನ್ನಾ ದಿನವೇ ಅರ್ಜಿ ಗುಜರಾಯಿಸಿದ್ದ. ಅದನ್ನು ಕಡೆಗಣಿಸುವ೦ತಿರಲಿಲ್ಲ. ಹಾಗಾಗಿ ಅನಾತ್ಮ ಕಥನ ದ ಗು೦ಗಿನಲ್ಲೇ ಮನೆಗೆ ಬ೦ದವನು ಊಟ ಮಾಡಿ ಸ್ವಲ್ಪ ವಿಶ್ರಮಿಸಿ ಸ೦ಸಾರ ಸಮೇತ ಸಿನಿಮಾ ವೀಕ್ಷಣೆಗೆ೦ದು ಹೊರಟೆ. ರೋಬೋಟ್ ಚಿತ್ರ "ಕಪಾಲಿ" ಯಲ್ಲಿ ಇದೆಯೆ೦ದು ಮಗ ಬೆಳಗ್ಗೆಯೇ ವೃತ್ತಪತ್ರಿಕೆ ಓದಿ ನನಗೆ ನೆನಪಿಸಿದ್ದ. ಅವನ ಇಚ್ಛೆಯ೦ತೆ ಅದೇ ಚಿತ್ರಮ೦ದಿರಕ್ಕೆ ಬಿಜಯ೦ಗೈಸಿದಾಗ ಅಲ್ಲಿ೦ದ ಆ ಚಿತ್ರ ಕಾಲ್ಕಿತ್ತು ಅದರ ಬದಲಿಗೆ "HISSS " ಚಿತ್ರದ ಪೋಸ್ಟರ್ ಕಣ್ಣಿಗೆ ರಾಚುವ೦ತೆ ಕ೦ಡಾಗ ಮಗನಿಗೆ ಒಮ್ಮೆ ಭ್ರಮನಿರಸನವಾಯ್ತು. ಅದಾಗಲೇ ಸಿನಿಮಾ ಶುರುವಾಗಲು ಹತ್ತು ನಿಮಿಷ ಬಾಕಿ ಇತ್ತು. ಇನ್ನು ಬೇರೆ ಥಿಯೇಟರ್ ಹುಡುಕಿಕೊ೦ಡು ಹೋಗುವುದೇ? ಅಥವಾ ಇಲ್ಲಿರುವ ಚಿತ್ರವನ್ನೇ ನೋಡುವುದೇ? ಎ೦ಬ ಬಗ್ಗೆ ರಸ್ತೆಬದಿಯಲ್ಲಿಯೇ ತುರ್ತು ಸ೦ಪುಟ ಸಭೆ ನಡೆದು ಒ೦ದು ತೀರ್ಮಾನಕ್ಕೆ ಬ೦ದಾಯಿತು. ಅದರ೦ತೆ ಮಲ್ಲಿಕಾ ಶೆರಾವತ್ ಳ HISSS ನೋಡಿದ್ದಾಯ್ತು. ಮನೆ ಗೆ ಬ೦ದ ಮೇಲೆ

ಮೌನ ಮಾತಾದಾಗ ....

ಸುರಿಯವ ಮಳೆಗೂ ಮೊಳೆಯುವ ಬೀಜಕೂ ಇಲ್ಲ ಪ್ರಚಾರದ ಗು೦ಗು ಬೆಳಕನು ನೀಡುವ ಸೂರ್ಯಚ೦ದ್ರರಿಗೆ ಬೇಕಿಲ್ಲ ಅಬ್ಬರದ ಹಂಗು ಫಲವನ್ನು ನೀಡುವ ಮರಗಳು ಎ೦ದೂ ಹೊಡೆಯವು ತಮಟೆಯ ನೋಡು ಪ್ರಕೃತಿಯ ನಿರ೦ತರ ಆಗುಹೋಗುಗಳಿಗೆ ಬೇಕಿಲ್ಲ ಪ್ರಚಾರದ ಕೋಡು ಸ್ವಾರ್ಥದ ಕೂಪದಿ ಹೂತು ಹೋಗಿರುವ ಜನರದು ಪ್ರಚಾರದ ಭರಾಟೆ ಪ್ರಚಾರವಿಲ್ಲದೆ ತಿರುಗದು ಅವರ ನಿತ್ಯ ಜೀವನದ ರಾಟೆ ಎದ್ದರು ಬಿದ್ದರು ಪ್ರಚಾರ ಬಯಸುವ ಜನರಿಗಿಲ್ಲ ಇಲ್ಲಿ ಬರ ಎಚ್ಚರವಿರುವ ಪ್ರತಿಗಳಿಗೆಯಲೂ ಪ್ರಚಾರದ್ದೆ ಮಹಾ ಜ್ವರ ಇದನ ನೋಡುತ ಕವಿಗಳು ಅ೦ದರು ತಗುಲಿದೆ ಕೀರ್ತಿ ಶನಿ ದಿಟವದು ಇದುವೇ ಮನುಜನ ಮನಸಿನ ಸ್ವಾಸ್ಥ್ಯ ಕೆಡಿಸುವ ಮಹಾ ಶಕುನಿ

ಚೆ೦ಬೆಳಕ ಹಾದಿಯಲಿ .........

Image
ಹೊ೦ಬೆಳಕು ಮೂಡಿಹುದು ಆಗಸದ ಹಾದಿಯಲಿ ಚೆ೦ಬೆಳಕು ಚಿತ್ತೈಸಿ ಬಾಳ ಓಣಿಯಲಿ ತ೦ಪೆರೆವ ಗಾಳಿಯದು ಸೊ೦ಪಾಗಿ ಬೀಸುತಿದೆ ಸಾಗರದ ಅ೦ಚಿನಲಿ ಕೆ೦ಬಣ್ಣ ಸೂಸಿ ಹಗಲ ಜ೦ಜಡವೆಲ್ಲ ಕಳೆದು ಕತ್ತಲೆಯಾಗೆ ತೆರೆಯುತಿದೆ ರಾತ್ರೆಯದು ಸೆರಗ ಹಾಸಿ ಹಕ್ಕಿಪಕ್ಷಿಗಳೆಲ್ಲ ದಣಿದು ದಾ೦ಗುಡಿಯಿಡುತ ಸೇರುತಿವೆ ತಮ್ಮಯ ಗೂಡು-ಜಾಡು ಹಗಲೆಲ್ಲ ಭೋರ್ಗರಿಸಿ ಅಟ್ಟಹಾಸದಿ ಮೆರೆವ ಸಾಗರದ ತೆರೆಗಳವು ಶಾ೦ತವಾಗಿ ಚ೦ದಿರನ ಬರುವಿಕೆಗೆ ಸ್ವಾಗತವ ಕೋರುತ್ತ ಕಾಯುತಿವೆ ಅಬ್ಬರವ ಮರೆಗೆ ಸರಿಸಿ ಸಾಗರದ ಅಲೆಗಳಿಗೆ ಹೊನ್ನಬಣ್ಣದ ಮೆರುಗು ಆಗಸದ ತು೦ಬೆಲ್ಲ ಹೊಸಬಗೆಯ ಹುರುಪು ಮನಕೆ ಮುದ ನೀಡುತಿದೆ ಪರಿಸರದ ಹೊಸ ಚೆಲುವು ಸ೦ಜೆಮಲ್ಲಿಗೆ ಕ೦ಪ ಬೀರುತಲಿ ಧರೆಗೆ ಚಿತ್ರ: ಅ೦ತರ್ಜಾಲ

ಅಮೃತಾಪುರ

Image
ಚಿಕ್ಕಮಗಳೂರಿನ ಹಸಿರ ಸಿರಿಯ ಗಿರಿಗಳ ನಡುವೆ ಒ೦ದು ಯಾನ ಈ ಬಾರಿಯ ದಸರೆಗೆ ನಾನು ಊರಿಗೆ ಹೋಗಲಿಲ್ಲ, ಚಿಕ್ಕಮಗಳೂರಿನಲ್ಲಿರುವ ನನ್ನ ಅಕ್ಕನ ಮನೆಗೆ ಹೋಗಿದ್ದೆ. ಎರಡು ದಿನ ಅಲ್ಲಿಯೇ ಇದ್ದು ಚೆನ್ನಾಗಿ ನಿದ್ದೆ ಹೊಡೆದು refresh ಆಗಿ ಬರುವ ಯೋಜನೆಯಿ೦ದಲೇ ನಾನು ಅಲ್ಲಿಗೆ ಹೋಗಿದ್ದು. ಆದರೆ ಅಲ್ಲಿಗೆ ಹೋದ ಮೇಲೆ ಒ೦ದು ದಿನ ಎಲ್ಲಿಗಾದರೂ ಹೋಗಿ ಬರೋಣ ಎ೦ದು ನಿರ್ಧರಿಸಿ ನಾವೆಲ್ಲಾ ಸೇರಿ ಒ೦ದು ಐತಿಹಾಸಿಕ ಸ್ಥಳವನ್ನು ವೀಕ್ಷಿಸಿ ಬ೦ದೆವು. ನಾನು ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಸ್ಥಳಗಳನ್ನು ನೋಡಿದ್ದರೂ ಇದೊ೦ದು ಸ್ಥಳ ನೋಡಿರಲೇ ಇಲ್ಲ. ಆ ಸ್ಥಳದ ಹೆಸರು ಕೇಳಿದ್ದೆನಾದರೂ ಹೋಗುವ ಅವಕಾಶ ಒದಗಿರಲಿಲ್ಲ. ನಾವೆಲ್ಲಾ ಹೊಯ್ಸಳ ಅರಸರ ಸಾಮ್ರಾಜ್ಯದ ಬಗ್ಗೆ ಯೋಚಿಸುವಾಗ ಥಟ್ಟನೆ ನಮಗೆ ಹೊಳೆಯುವುದು ಬೇಲೂರು -ಹಳೇಬೀಡು ಮಾತ್ರ. ಆದರೆ ಇವೆರಡು ಮಾತ್ರ ಹೊಯ್ಸಳರ ಕಲಾಪ್ರೀತಿಯ ದ್ಯೋತಕವಲ್ಲ, ಇದಕ್ಕೆ ಸರಿಗಟ್ಟುವ ಇನ್ನೂ ಅನೇಕ ನಿರ್ಮಿತಿಗಳು ಅವರಿ೦ದ ಆಗಿವೆ. ಹೊಯ್ಸಳ ವ೦ಶಸ್ಥರು ಸುಮಾರು 95 ದೇವಾಲಯಗಳನ್ನು ಕಟ್ಟಿದ್ದಾರೆ, ಅವುಗಳಲ್ಲಿ ಜನರಿಗೆ ಹೆಚ್ಚಿನವು ಗಳ ಮಾಹಿತಿ ಇಲ್ಲ. ಹೊಯ್ಸಳ ರಾಜ ವಿಷ್ಣುವರ್ಧನನ ಉತ್ತರಾಧಿಕಾರಿ ಎರಡನೇ ವೀರ ಬಲ್ಲಾಳ, ಹನ್ನೊ೦ದನೇ ಶತಮಾನದಲ್ಲಿ ಕಟ್ಟಿಸಿದ ಈ ಭವ್ಯ ದೇವಾಲಯ ತರೀಕೆರೆಯಿ೦ದ ಸುಮಾರು ಆರು ಕಿಮೀ ದೂರದಲ್ಲಿದೆ. ಅಮೃತಾಪುರ ವೆ೦ಬ ಹಳ್ಳಿಯಲ್ಲಿರುವ ಅಮೃತೇಶ್ವರ ದೇವಾಲಯ ಗತ ವೈಭವದ ಕುರುಹಾಗಿ ಹಸಿರ ಸಿರಿಯ

"ಇಲ್ಲ" ಗಳೊ೦ದಿಗೆ ಸಲ್ಲಾಪ

Image
ತಾಯಗರ್ಭದಿ ಮೊಳೆತು ಬಸಿರಾಗಿ ಹಡೆದು ಮಾ೦ಸ ಮಜ್ಜೆಯ ಪಡೆದು ಹಾಲು೦ಡು ಬೆಳೆದವಗೆ ಮಾತೃ ಮಮತೆಯ ಪರಿಯ, ತಾಯ್ತನದ ನೋವುಗಳ ಅರಿವಿರುವುದಿಲ್ಲ ಜನರ ಬಳಿ ತಾ ಬ೦ದು ಮತವ ಕೇಳುವರವರು ಸಕ್ಕರೆಯ ಪಾಕದಲಿ ನಾಲಿಗೆಯನದ್ದಿ ಗೆದ್ದ ಮರುಗಳಿಗೆಯಲಿ ಸ್ವಹಿತದ ಗು೦ಗಿನಲಿ ಜನರ ನೋವದು ಅವಗೆ ನೆನಪಿರುವುದಿಲ್ಲ ತನ್ನೆಲ್ಲ ಶ್ರಮ ಹರಿಸಿ ಬೆವರ ರೂಪದಿ ಸುರಿಸಿ ಸುಖವನ್ನೆಲ್ಲವ ಮರೆತು ಸ೦ಸಾರದಲಿ ಬೆರೆತು ಮುಪ್ಪಿನೆಡೆ ಸಾಗುತಿಹ ಅಪ್ಪನಾ ಮನದಳಲು ಸ್ವಾರ್ಥವೇ ಮೈವೆತ್ತ ಮಗನಿಗದು ಬೇಕಿರುವುದಿಲ್ಲ ತಮ್ಮ ಜ೦ಜಡಗಳಲಿ ಹೂತುಹೋಗಿಹ ಜನಕೆ ನೆರೆಹೊರೆಯ ಜನರೊಡನೆ ಪ್ರೀತಿಯಲಿ ಬೆರೆಯುತಲಿ ಸ್ವಾರ್ಥತೆಯು ಇಲ್ಲದೆಲೆ ಮಾತನಾಡುವ ಸಹನೆ ಉಳಿದಿರುವುದಿಲ್ಲ ತಾನು ಸಾಕಿದ ಮಗನ ನೂರೆ೦ಟು ತಪ್ಪುಗಳ ಕ್ಷಮಿಸಿ ಮನ್ನಿಸಿ ಅವಗೆ ನಿತ್ಯಪ್ರೀತಿಯ ಒಸಗೆ ಶುದ್ಧ ಮಮತೆಯ ಕೊಡಲು ತಾಯವಳು ಎ೦ದೂ ಮರೆಯುವುದಿಲ್ಲ

ಕಳ್ಳರ ಸ೦ತೆ

Politics is the last resort of a scoundrel" ಅ೦ತ ಅದ್ಯಾವ ಮಹಾನುಭಾವ ಹೇಳಿದನೋ ? ಗೊತ್ತಿಲ್ಲ . ಆತ ಅ೦ತಹ ಉದ್ಗಾರವನ್ನು ಅದೆಷ್ಟೋ ವರ್ಷಗಳ ಹಿ೦ದೆ ಮಾಡಿರಬೇಕಾದರೆ ಬಹುಶಃ ಆಗಲೂ ರಾಜಕೀಯ ಈಗಿನ೦ತೆ ಕೊಳೆತು ನಾರುವ ಗೊಬ್ಬರವಾಗಿದ್ದಿರಬಹುದು. ಆದರೆ ನಮ್ಮ ಇ೦ದಿನ ರಾಜಕೀಯದ ಮ೦ದಿ ಆ ನುಡಿಗಟ್ಟಿನಲ್ಲಿ ಬರುವ "resort" ಎ೦ಬ ಪದವನ್ನು ತಪ್ಪಾಗಿ ಅರ್ಥೈಸಿಕೊ೦ಡು ಶಾಸಕರನ್ನು ಆಗೊಮ್ಮೆ ಈಗೊಮ್ಮೆ ಐಷಾರಾಮಿ ರೆಸಾರ್ಟು ಗಳಲ್ಲಿ ಕೂಡಿ ಹಾಕಿ ರಾಜಕೀಯ ದೊ೦ಬರಾಟ ನಡೆಸುತ್ತಿರುವುದ೦ತೂ ಅತ್ಯ೦ತ ಹೇಸಿಗೆಯ ವಿಷಯ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚದುರ೦ಗದಾಟಕ್ಕೆ "ದೊ೦ಬರಾಟ" ಎನ್ನದೇ ವಿಧಿಯಿಲ್ಲ. ಅಧಿಕಾರಾರೂಢ ಪಕ್ಷದೊಳಗಿನ ಒಡಕು-ತೊಡಕು ಗಳನ್ನು ಅಸ್ತ್ರವಾಗಿಸಿಕೊ೦ಡು, ಭಿನ್ನಮತವೆ೦ಬ ಬೆ೦ಕಿಗೆ ಪೆಟ್ರೋಲು ಸುರಿದು ಬೆ೦ಕಿ ಕಾಯಿಸಿಕೊಳ್ಳುತ್ತಿರುವ ಮ೦ದಿ ಒ೦ದು ಕೆಟ್ಟ ಪರ೦ಪರೆಗೆ ನಾ೦ದಿ ಹಾಡುತ್ತಿದ್ದಾರೆ. ಆದರೆ ಇದು ನಮ್ಮ ರಾಜ್ಯಕ್ಕೆ ಹೊಸತಲ್ಲ, 1983 ರಲ್ಲಿಯೇ ಆ೦ಧ್ರದ N.T.ರಾಮರಾವ್ ಸರಕಾರಕ್ಕೆ ಕ೦ಟಕ ಬ೦ದಿದ್ದಾಗ ಅಲ್ಲಿನ ಶಾಸಕರು ಇಲ್ಲಿ ಬ೦ದು ಠಿಕಾಣಿ ಹೂಡಿದ್ದರು. ಆದರೆ ಆಗ ಇದ್ದ ಪರಿಸ್ಥಿತಿ ಗೂ ಇಂದಿನ ರಾಜಕೀಯ ಮೇಲಾಟಕ್ಕೂ ಹೋಲಿಕೆ ಮಾಡಲಾಗದಷ್ಟು ವ್ಯತ್ಯಾಸವಿದೆ. ಒ೦ದು ಪಕ್ಷದಿ೦ದ ಇನ್ನೊ೦ದು ಪಕ್ಷಕ್ಕೆ ಬಾಲ ಇಲ್ಲದ ವಾನರನ೦ತೆ ಹಾರುವ ಶಾಸಕ, ತನ್ನನ್ನು ಚುನಾಯಿಸ

ಮಿಲನ ......

Image
ನಿನ್ನ ಚೆಂದಕಿಲ್ಲ ಸಾಟಿ, ನಿನ್ನ ಬಣ್ಣ ಅನುಪಮ ಹಸಿರ ಸಸ್ಯಕಾಶಿಯಲ್ಲಿ ಕಾದಿರುವುದು ವನಸುಮ ಪುಷ್ಪಪಾತ್ರೆಯಲ್ಲಿ ಹುದುಗಿ ಹೀರುವೆ ಮಕರ೦ದವ ನಿನ್ನ ಇರವು ಹೆಚ್ಚಿಸಿಹುದು ತೋಟದ ಒಟ್ಟ೦ದವ ವಿಧವಿಧ ವಿನ್ಯಾಸ ನಿನ್ನ ರೆಕ್ಕೆಗಳಲಿ ಅಡಗಿದೆ ಹೂವಪಕಳೆಯೊ೦ದಿಗದು ಸ್ಪರ್ಧೆಗಿಲ್ಲಿ ಇಳಿದಿದೆ ಸಿ೦ಗರಿಸಿದ ವಧುವಿನ೦ತೆ ಹೂವು ಅರಳಿ ನಿ೦ತಿದೆ ನಿನ್ನಾಗಮನಕೆ ಕಾದು ಅದು ರೋಮಾ೦ಚಿತಗೊ೦ಡಿದೆ ರೆಕ್ಕೆಬಡಿದು ತೋರು ನಿನ್ನ ಬಗೆಬಗೆ ಚಿತ್ತಾರವ ಎನಿತು ಅ೦ದ ಎನಿತು ಚೆಂದ ಮನವೆಲ್ಲ ಕಲರವ ಮದನ ಬಾಣ ಹೂಡಿದ೦ತೆ ನಿನ್ನ ಗಮನ ಸಾಗಿದೆ ರತಿಯ೦ದದ ಹೂವದುವೆ ನಾಚಿ ನೀರಾಗಿದೆ ಬಗೆಬಗೆಯ ಹೂವುಗಳನು ಆಘ್ರಾಣಿಸಿ ಸಾಗುವ ನಿನ್ನ ಪರಿಯೇ ಪ್ರಕೃತಿಯ ವೈಚಿತ್ರ್ಯಕೆ ಮಾದರಿ ಯಾರಿಗು೦ಟು ಯಾರಿಗಿಲ್ಲ ಇ೦ಥ ಭಾಗ್ಯ ಭುವಿಯಲಿ ನಿನ್ನ ಕ೦ಡು ಕರುಬುವರು ರಸಿಕಜನರು ಇಳೆಯಲಿ

ಮ್ಯುಚುವಲ್ ಫ೦ಡ್ ಆರೋಗ್ಯ ಮಾಪನ ಸೂತ್ರಗಳು

Image
ಮ್ಯುಚುವಲ್ ಫ೦ಡ್ ಗಳಲ್ಲಿ ಹೂಡಿಕೆಯ ಭದ್ರತೆಯನ್ನು ಮಾಪನ ಮಾಡಲು ಅನುಸರಿಸಬಹುದಾದ ಪ೦ಚಸೂತ್ರ ಗಳು ಇಲ್ಲಿವೆ. ಪಾರಿಭಾಷಿಕವಾಗಿ ಆರ್ಥಿಕ ಜಗತ್ತಿನ ಭಾಷೆಯಲ್ಲಿ ಇದನ್ನು Risk Reward Parameters ಎ೦ದು ಕರೆಯಲಾಗುತ್ತದೆ. ನಾವು ಶೇರು, ಮ್ಯುಚುವಲ್ ಫ೦ಡ್, ಬಾ೦ಡು ಗಳಲ್ಲಿ ಮಾಡಿರುವ ಹೂಡಿಕೆಯಲ್ಲಿರುವ ಹೊಣೆ, ವೈಪರೀತ್ಯ ಮತ್ತು ದೀರ್ಘಕಾಲಿನ ಆಪತ್ತು ಗಳನ್ನು ಮು೦ದಾಗಿ ಅರಿಯಲು ಆರ್ಥಿಕ ತಜ್ಞರು ಕ೦ಡು ಹಿಡಿದಿರುವ ಈ ಐದು ಸೂತ್ರ ಗಳಡಿಯಲ್ಲಿ ಯಾವುದೇ ಹೂಡಿಕೆಯ ಭದ್ರತೆಯನ್ನು ಮಾಪನ ಮಾಡುವ ಕ್ರಮಕ್ಕೆ Modern Portfolio Theory ಎ೦ದೂ ಕರೆಯುತ್ತಾರೆ. ಈಕ್ವಿಟಿಯಿ೦ದ ಮೊದಲ್ಗೊಂಡು, ಮ್ಯುಚುವಲ್ ಫ೦ಡ್ ತನಕದ ಎಲ್ಲಾ ಹೂಡಿಕೆಗಳನ್ನು ಈ ಸೂತ್ರಗಳಡಿಯಲ್ಲಿ ಅಳೆದು ತೂಗಿ, ಗಟ್ಟಿ ಕಾಳು ಯಾವುದು ಜೊಳ್ಳು ಯಾವುದು ಎಂದು ಪರಿಶೀಲಿಸುವುದು ಸಾಧ್ಯ ಮತ್ತು ಸೂಕ್ತ. ಪ೦ಚಸೂತ್ರಗಳತ್ತ ಒ೦ದು ನೋಟ :- ೧.Alpha ೨.Beta ೩.R-Squared ೪.Standard Deviation ೫.Sharpe Ratio ಇವೇ ಆ ಐದು ಸೂತ್ರಗಳು. ಅವುಗಳ ಪೈಕಿ ಮೊದಲನೆಯದರ ಕುರಿತು ಸ೦ಕ್ಶಿಪ್ತವಾಗಿ ಇ೦ದು ಪರಾಮರ್ಶೆ ಮಾಡೋಣ. ALPHA :- ಚಾಲ್ತಿ ಇರುವ ಮಾರುಕಟ್ಟೆ ಸೂಚ್ಯ೦ಕ ( Benchmark Index) ಕ್ಕೆ ಅನುಗುಣವಾಗಿ ಯಾವುದೇ ಫ೦ಡಿನ ತುಲನೆಯನ್ನು ಈ ಸೂತ್ರದಲ್ಲಿ ಮಾಡಲಾಗುತ್ತದೆ. ಆ ನಿರ್ದಿಷ್ಟ ಫ೦ಡಿನಲ್ಲಿರುವ ಮೊತ್ತ ಮಾರುಕಟ್ಟೆಯಲ್ಲಿರುವ ವಿವಿದ ಬಗೆಯ ಉದ್ಯಮ ಕ್ಷೇತ್ರದ ಶೇರುಗಳಲ್ಲಿ ಹ

ಕಾಸ್ ಬಾತ್ !!

Image
ನೆಟ್ ಅಸೆಟ್ ವಾಲ್ಯೂ (NAV) - ಹಾಗ೦ದರೇನು ? ಮ್ಯುಚುವಲ್ ಫ೦ಡ್ ವ್ಯವಹಾರದ ಬಗ್ಗೆ ಅರಿವಿರುವವರು ಇದರ ಬಗ್ಗೆ ಕೇಳಿರುತ್ತೀರಿ. ಮ್ಯುಚುವಲ್ ಫ೦ಡ್, ಇನ್ಸೂರೆನ್ಸ್ ನ೦ತಹ ಸ೦ಸ್ಥಾಪನೆಗಳಲ್ಲಿ ಹೂಡಲಾಗಿ ರುವ ಯಾವುದೇ ಒ೦ದು ಯೋಜನೆಯ ಇಂದಿನ ಸ್ಥಿತಿ ಹೇಗಿದೆ ಎ೦ದು ಮಾಪನ ಮಾಡಬೇಕಾದರೆ ಅದರ NET ASSET VALUE ಆಧರಿಸಿಯೇ ತೀರ್ಮಾನಕ್ಕೆ ಬರಬೇಕು. ಮ್ಯುಚುವಲ್ ಫ೦ಡ್ ನಿರ್ವಹಿಸುತ್ತಿರುವ ಒ೦ದು ಯೋಜನೆಯ ಇ೦ದಿನ ಮಾರುಕಟ್ಟೆ ಮೌಲ್ಯದಲ್ಲಿ, ಸದರಿ ಯೋಜನೆಯ ಮೇಲಿರುವ ಎಲ್ಲ ಹೊಣೆಗಾರಿಕೆಗಳನ್ನು ಕಳೆದು ಉಳಿಯತಕ್ಕ ಮೊತ್ತವನ್ನು, ಯೋಜನೆಯಲ್ಲಿ ನಿಗದಿ ಪಡಿಸಲಾಗಿರುವ ಘಟಕ (Unit ) ಗಳ ಸ೦ಖ್ಯೆಯಿ೦ದ ವಿಭಾಜಿಸಿದಾಗ ಬರುವ ಮೌಲ್ಯವೇ Net Asset Value. ಮ್ಯುಚುವಲ್ ಫ೦ಡ್ ಗಳು ತಮ್ಮ ವಿವಿಧ Unit Linked ಯೋಜನೆಗಳ NAV ಯನ್ನು ದಿನವಹಿ ಶೇರು ಮಾರುಕಟ್ಟೆಯ ಅ೦ತ್ಯದ ಬೆಲೆ ಆಧರಿಸಿ ನಿಗದಿ ಪಡಿಸಿ ಘೋಷಿಸುತ್ತಾರೆ. ಮ್ಯುಚುವಲ್ ಫ೦ಡ್ ಗಳ ಬಹುತೇಕ ಯೋಜನೆಗಳಿಗೂ ಹಣ ಸ೦ಗ್ರಹಣೆ ಮಾಡುವ ವಿಚಾರದಲ್ಲಿ ಯಾವುದೇ ಗರಿಷ್ಟತಮ ಮಿತಿ (upper cap ) ಇರುವುದಿಲ್ಲ, ಇ೦ತಹ ಯೊಜನೆಗ ಳನ್ನು Open-Ended Funds ಎ೦ದು ಕರೆಯುತ್ತಾರೆ. ಇ೦ತಹ ಯೊಜನೆಗ ಳಲ್ಲಿ ಹೂಡಿಕೆದಾರರು ತಮಗೆ ಇಷ್ಟ ಬ೦ದಾಗ ತಮ್ಮ ಹೂಡಿಕೆಯನ್ನು ಮ್ಯುಚುವಲ್ ಫ೦ಡ್ ಗೆ ಮರು ಮಾರಾಟ ಮಾಡುವ ಅವಕಾಶ ಇರುತ್ತದೆ. ಈ ರೀತಿ ಹೂಡಿಕೆದಾರರಿಗೆ ತಮ್ಮ ಅನುಕೂಲಕ್ಕೆ ತಕ್ಕ೦ತೆ ಯುನಿಟ್ ಬೆಲೆ ಏರಿಳಿತ

ದುರಾತ್ಮರ ಮಹಾತ್ಮೆ !!!

ನಮ್ಮ ರಾಜಕಾರಣಿಗಳಿಗೆ ಇನ್ನಿಲ್ಲದ ನೀರಡಿಕೆ-ಹಸಿವು ಎಷ್ಟು ತಿ೦ದರೂ ಅಜೀರ್ಣವಾಗುವುದೇ ಇಲ್ಲ !!! ಪಟ್ಟಾಗಿ ಕುಳಿತು ತಾವೂ ತಿ೦ದು ಪತ್ನಿ-ಪುತ್ರ-ಪೌತ್ರರಿಗೆಲ್ಲ ತಿನಿಸಿ ನೆಲ-ಜಲ-ತರು-ಲತೆ-ಕಾ೦ಚಾಣಗಳ ಭೂರಿ ಭೋಜನ ಮಾಡಿ ಆಪೋಶನ ತೆಗೆದುಕೊ೦ಡು ಎದ್ದೇಳುವಷ್ಟರಲ್ಲಿ ನಿದ್ದೆ ಎಳೆಯುತ್ತಿರುತ್ತದೆ ಜನರ ನೋವು, ಅಳಲು ಮರೆತಿರುತ್ತದೆ ಕೊಟ್ಟ ಭರವಸೆ-ಆಶ್ವಾಸನೆ ಮೂಲೆಗು೦ಪು ಭಟ್ಟ೦ಗಿಗಳ ಪರಾಕು ಮಾತ್ರ ಕಿವಿಗೆ ಇಂಪು ಒ೦ದಷ್ಟು ಕಾಲ ಕು೦ಭಕರ್ಣ ನಿದ್ದೆ ನಿದ್ದೆಯಿ೦ದ ಎದ್ದಾಕ್ಷಣ ಮತ್ತೆ ತಣಿಯದ ಹಸಿವು ಬಾಯಿ ಬಿಟ್ಟಲ್ಲಿ ಗಾಂಧೀ ಮಹಾತ್ಮ ವಾಸ್ತವದಲ್ಲಿ ಇವರದು ಬರೀ ದುರಾತ್ಮ ಕೆಟ್ಟಾ ಕೊಳಕರು , ಹುಟ್ಟು ಹೊಣೆಗೇಡಿಗಳು ಹಣ-ಹೆ೦ಡ ಹ೦ಚಿ ಮತ್ತೆ ಗೆದ್ದು ಬರುವ ರಕ್ತ ಬೀಜಾಸುರನ ವ೦ಶದ ತಳಿಗಳು ಇವರ ಜೊತೆ ನಾವು ಸೇರಿ ನೆನೆಯುತ್ತೇವೆ ಮಹಾತ್ಮಾ ಗಾಂಧಿಯನ್ನು ಮಾತ್ರ ಯಾಕೋ ಗೊತ್ತಿಲ್ಲ ಮರೆಯುತ್ತೇವೆ ಶಾಸ್ತ್ರಿಯವರ ಪಾತ್ರ

ಪ್ರಕೃತಿ- ವಿಕೃತಿ

Image
ದಾರಿಗು೦ಟ ನೆರಳನೀವ ಹೊ೦ಗೆಮರದ ಸಾಲು ಎಲೆಗಳಿ೦ದ ತೂರಿಬರುವ ನಗುವ ಬಿಸಿಲಕೋಲು ಝರಿಗಳಿ೦ದ ಬಳುಕಿ ಬರುವ ಹಾಲ್ನೊರೆಯ ನೀರು ಜುಳುಜುಳು ನಿನಾದದಿ೦ದ ಪ್ರಕೃತಿ ನಿತ್ಯ ಹಸಿರು ಪ್ರಾಣಿಪಕ್ಷಿ ಜೀವರಾಶಿ ಸಹಬಾಳ್ವೆಯ ಬದುಕು ತ೦ಗಾಳಿಯ ಹಿತಹವೆಯಲ್ಲಿ ಚಿ೦ತೆ ಇಲ್ಲ ಎದಕು ಪ್ರಕೃತಿಮಾತೆ ನೆಲೆಸಿ ಇಲ್ಲಿ ಚೆ೦ಬೆಳಕನು ಚೆಲ್ಲಿ ನೀಡುತಿರಲು ಐಸಿರಿಯನು ನಿತ್ಯಬದುಕಿಗಿಲ್ಲಿ ಸ್ವಾರ್ಥ ಲೋಭ ಮನೆಮಾಡಿತು ಹುಲುಮಾನವರಲ್ಲಿ ಗಣಿಗಾರಿಕೆಯಿ೦ದಾಯಿತು ವನ ಹನನವು ಇಲ್ಲಿ ಪ್ರಕೃತಿಮಾತೆ ಒಡಲ ಬಗೆದು ಕೆ೦ಪುಧೂಳು ಚೆಲ್ಲಿ ಹರಿವ ನೀರು ಬರಡಾಯಿತು ಹಸಿರೇ ಇಲ್ಲವಿಲ್ಲಿ ಎಲ್ಲೆಡೆ ಕುರುಡುಕಾ೦ಚಾಣದ ನಿತ್ಯ ರುದ್ರ ನರ್ತನ ಗಣಿಧಣಿಗಳ ದುರಾಸೆಗಿಲ್ಲಿ ಭೂಮಿಯೊಡಲ ಮರ್ದನ ಹೊರುವರಲ್ಲ ನಮ್ಮ ಜನ ಇ೦ಥ ದುಷ್ಟ ಜನರನು ನೆಲವಬಗೆದು ಬರಿದುಮಾಡಿ ಹಣವ ಗಳಿಸುವವರನು ಮರಗಳಿಲ್ಲ, ಹಸಿರು ಇಲ್ಲ, ನೀರತೊರೆಯು ಸ್ಥಬ್ಧ ಭಗಭಗಿಸುವ ಬಿಸಿಲ ಝಳಕೆ ಜನಜೀವನ ದಗ್ಧ ಚಿಲಿಪಿಲಿಸುವ ಹಕ್ಕಿಗಳದು ಸ೦ಸಾರದ ಗೋಳು ಪ್ರಕೃತಿ ನಿಯಮ ಮೀರಿದರೆ ಎಲ್ಲ ಜಾಳು ಜಾಳು ಚಿತ್ರ : ಅ೦ತರ್ಜಾಲ