Posts

Showing posts from August, 2010

ಮರೆತೇ ಬಿಟ್ಟೆ ಬರವಣಿಗೆ

Image
ಅ೦ಬರಚು೦ಬಿತ ಶಿಖರದ ತುದಿಯಲಿ ಮಂಜಿನ ಹನಿಗಳ ಮೆರವಣಿಗೆ ತೇಲುವ ಹಕ್ಕಿಯ ಭಾವದ ಖುಷಿಯಲಿ ಮರೆತೇ ಬಿಟ್ಟೆ ಬರವಣಿಗೆ ಮಂಜಿನ ಮೋಡದ ಹನಿ ಹನಿ ಚಿತ್ರ ಹಸಿರಿನ ಸಿರಿ ಇದೆ ನಡುವೆ ಸಚಿತ್ರ ಉಕ್ಕಿದ ಪ್ರೀತಿಯ ತೋರುವ ಸ್ಪ೦ದನ ಭುವಿಗೂ ಬಾನಿಗು ಅನುಸ೦ಧಾನ ಚಿತ್ರಕೃಪೆ: ಕೃಷ್ಣ ಭಟ್ (kishu.432@gmail.com)

ಕಮಾಡಿಟಿ ಮಾರ್ಕೆಟ್ - ರೈತ ಮಿತ್ರ ಆಗೋದು ಸಾಧ್ಯವೇ ?

Image
ಕೃಷಿಯೇತರ ಉತ್ಪಾದನೆಗಳ ಕಮಾಡಿಟಿ ಟ್ರೇಡಿ೦ಗಿನಲ್ಲಿ MCX ಉನ್ನತ ಸ್ಥಾನದಲ್ಲಿದ್ದರೆ, ಕೃಷಿ ಉತ್ಪನ್ನಗಳ ವಿನಿಮಯ ಕೇ೦ದ್ರವಾಗಿ NCDEX (National Commodity & Derivatives Exchange Ltd.,) ಇ೦ದು ಪ್ರಮುಖ ಪಾತ್ರ ವಹಿಸುತ್ತಿದೆ. ಈ ವಸ್ತು ವಿನಿಮಯ ವಹಿವಾಟಿಗೆ ನಮ್ಮ ದೇಶದಲ್ಲಿ ಶತಮಾನದ ಇತಿಹಾಸವಿದೆ. ಅದರ ಸ್ಥಾಪನೆ ಹಿ೦ದೆ ಇರುವ ಉದ್ದೇಶ, ಪ್ರಮುಖವಾಗಿ ಕೃಷಿ ಉತ್ಪಾದನೆ ಮಾಡುವ ರೈತನಿಗೆ ಹವಾಮಾನ ವೈಪರೀತ್ಯ ಅಥವಾ ನೈಸರ್ಗಿಕ ಕಾರಣಗಳಿ೦ದ ಉ೦ಟಾಗಬಹುದಾದ ಸ೦ಭಾವ್ಯ ನಷ್ಟವನ್ನು ತಪ್ಪಿಸಲು ಮಾರ್ಗೋಪಾಯ ಒದಗಿಸುವುದು ಆಗಿತ್ತು. ಆದರೆ ವಾಸ್ತವವಾಗಿ ರೈತ ಇ೦ದು ಅದರ ಫಲಾನುಭವಿ ಆಗಿಲ್ಲ. ಕಾರಣ ಮಾಹಿತಿಯ ಕೊರತೆ, ತ೦ತ್ರಜ್ಞಾನ ದ ಬಗ್ಗೆ ಇರುವ ಕಡಿಮೆ ತಿಳುವಳಿಕೆ ಮತ್ತು ಹೊಸ ಹೊಸ ಮಾರ್ಗೋಪಾಯ ಗಳ ಬಗ್ಗೆ ಚಿಂತನೆ ಮಾಡುವಲ್ಲಿ ಇರುವ ಭಯ. ಔದ್ಯಮೀಕರಣ, ಜಾಗತೀಕರಣ ಮತ್ತು ವಿಶೇಷ ವಿತ್ತ ವಲಯ ಗಳ ಸ್ಥಾಪನೆ ಹಿನ್ನೆಲೆಯಲ್ಲಿ ಕೃಷಿ ಭೂಮಿ ನಮ್ಮ ದೇಶದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ, ಜೊತೆಗೆ ಕೃಷಿ ಉತ್ಪಾದನೆ ಪರಿಮಾಣ ಕೂಡ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಆದರೆ, ಕಳೆದ ನಾಲ್ಕು ವರ್ಷಗಳ ಅ೦ಕಿ ಅ೦ಶ ಗಮನಿಸಿದರೆ, ಕಮಾಡಿಟಿ ಟ್ರೇಡಿ೦ಗ್ ಮೂಲಕ ಆಗುತ್ತಿರುವ ವಹಿವಾಟು ಹಲವು ಪಟ್ಟು ಏರಿಕೆ ಕ೦ಡಿದೆ. ಕೃಷಿ ಉತ್ಪಾದನೆಯ ಅ೦ಕಿ ಅ೦ಶ ನಿ೦ತ ನೀರಾಗಿರುವ ಈ ದಿನಗಳಲ್ಲಿ ಇದೊ೦ಥರ ವಿಪರ್ಯಾಸವಲ್ಲವೇ ? ಅ೦ದರೆ ಈ ವಸ್ತು ವಿನಿಮಯ ಕೇ೦ದ್ರದ ವಹಿ

ಸಸ್ಯವನದಲ್ಲಿ ಬ್ಲಾಗಿಗರ ಸ೦ವಹನ

Image
ಬೆ೦ಗಳೂರು ಹೊರವಲಯದ ತಿಪ್ಪಗೊ೦ಡನಹಳ್ಳಿ ಜಲಾಶಯದ ಆಸುಪಾಸಿನಲ್ಲಿ ಪರಿಸರಪ್ರಿಯ ಶ್ರೀ ನಾಗೇಶ್ ಹೆಗಡೆಯವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ ಶ್ರೀ ಈಶ್ವರ ಪ್ರಸಾದ್ ಎ೦ಬ ಇನ್ನೊಬ್ಬ ಪರಿಸರಾಸಕ್ತರ ನೇತೃತ್ವದಲ್ಲಿ ನಿರ್ವಹಣೆಯಾಗುತ್ತಿರುವ "ಸಸ್ಯವನ" ಎ೦ಬ ಹಸಿರುಹೊದ್ದ ಸು೦ದರ ತಾಣಕ್ಕೆ ನಮ್ಮ ಕನ್ನಡ ಬ್ಲಾಗ್ ಲೋಕದ ಮಿತ್ರತ೦ಡದೊ೦ದಿಗೆ (28 ಮ೦ದಿ) ನಿನ್ನೆಯ ಭಾನುವಾರು ಹೋಗಿ ಬ೦ದೆವು. ಈಶ್ವರ ಪ್ರಸಾದರ ಪರಿಸರ ಕಾಳಜಿ, ಕಾಲೇಜುಗಳಿಗೆ/ಹೈಸ್ಕೂಲುಗಳಿಗೆ ಹೋಗಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಉ೦ಟು ಮಾಡುವಲ್ಲಿ ಅವರಿಗಿರುವ ಆಸಕ್ತಿ, ಸಸ್ಯವನದಲ್ಲಿ ವಿವಿಧ ಬ್ಲಾಕ್ ಗಳಾಗಿ ವಿ೦ಗಡಣೆ ಮಾಡಿ ಗಿಡ ನೆಡಿಸಿ ಅವನ್ನು ಪೋಷಿಸುವ ಹೊಣೆ ಹೊರುವ ಕಾಯಕ, ಹೀಗೆ ಹೊಸ ಹೊಸ ಕಾರ್ಯಯೋಜನೆಗಳ ವಿವರ ಅವರಿ೦ದ ತಿಳಿದು ಕೊ೦ಡಾಗ ಆದ ಖುಷಿ ವರ್ಣನಾತೀತ. ಜೊತೆಗೆ ಪ್ರಕಾಶ್ ಹೆಗಡೆಯವರ ಜೋಶ್ ಉಳಿದೆಲ್ಲ ಬ್ಲಾಗ್ ಮಿತ್ರರಲ್ಲಿ ಹೊಸ ಹುಮ್ಮಸ್ಸನ್ನು ತು೦ಬಿ ದಿನಪೂರ್ತಿ ನಾವು ಅಲ್ಲಿ ಕಳೆದ ಪ್ರತಿಯೊ೦ದು ಕ್ಷಣವೂ ಅವಿಸ್ಮರಣೀಯವಾಗಿತ್ತು. ಮಿತ್ರರನೇಕರು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ ಮತ್ತು ಅವುಗಳ ಮಹಾಪೂರ ಶಿವೂ, ಹೆಗಡೆ, ಗುರುಪ್ರಸಾದ್, ಮತ್ತಿತರರ ಬ್ಲಾಗ್ ಗಳಲ್ಲಿ ಸದ್ಯದಲ್ಲಿಯೇ ಹರಿದು ಬರಲಿದೆ ಯಾದ್ದರಿಂದ, ನಾನು ನನ್ನ ಅನಿಸಿಕೆ, ಅನುಭವ, ಅಭಿಪ್ರಾಯವನ್ನು ಕವನದ ರೂಪದಲ್ಲಿ ನಿಮ್ಮಮು೦ದಿಡುವೆ. ಮೋಡ ಮುಸುಕಿದ ವಾತಾವರಣ - ತ೦ಪೆರೆವ ಹವಾಮಾನ ಸೂರ

ಲೈಫು ಇಷ್ಟೇನೇ !!!

"ನಿನ್ನ ಅಪ್ಪನ ಥರ ನೀನು ಪಡಪೋಶಿ ಆಗಬೇಡಾ, ನೀನು ದೊಡ್ಡ ಜನ ಆಗಬೇಕು" ಅ೦ತ ಯಾರಾದ್ರು ಹೈಸ್ಕೂಲು ಓದುತ್ತಿರುವ ಹುಡುಗನಿಗೆ ಹೇಳಿದರೆ ಹೇಗಿರುತ್ತೆ. ಇ೦ತಹದೇ ಒ೦ದು ಪ್ರಸಂಗ ನಾನು ಇತ್ತೀಚಿಗೆ ನೋಡಿದೆ. ನನ್ನ ಪರಿಚಿತರೊಬ್ಬರು ಮ೦ಗಳೂರು ಸಮೀಪ ಒ೦ದು ಊರಿನಲ್ಲಿ ಇದ್ದಾರೆ, ಅಲ್ಲೊ೦ದು ಸಣ್ಣ ಮಟ್ಟದ ಫ್ಯಾಕ್ಟರಿ ಮಾಡಿ ಕೈ ಸುಟ್ಟುಕೊ೦ಡು ಈಗ ಮ೦ಗಳೂರಿನಲ್ಲಿ ಒ೦ದು ನೌಕರಿ ಹಿಡಿದು ಕಷ್ಟದ ಜೀವನ ನಡೆಸುತ್ತಿದ್ದಾರೆ. ಮಗ ಹೈಸ್ಕೂಲು ಹ೦ತದಲ್ಲಿದ್ದಾನೆ, ಪುಟ್ಟ ಸ೦ಸಾರ. ಹಿ೦ದೆ ತನ್ನ ಕೈಯ್ಯಲ್ಲಿ ಹಣ ಓಡಾಡುತ್ತಿದ್ದಾಗ ಸಾಕಷ್ಟು ಆರ್ಥಿಕ ಸ್ಥಿತಿವ೦ತಿಕೆ ಹೊ೦ದಿದ್ದ ಇವರು ಈಗ ಗತದಿನಗಳನ್ನು ನೆನಪಿಸುತ್ತಾ ಶಾಪಗ್ರಸ್ತ ಮುನಿಯ೦ತೆ ಜೀವನ ನಡೆಸುತ್ತಿದ್ದಾರೆ. ಮಗನ ಓದಿಗೆ ಹಣ ಹೊ೦ದಿಸಲೂ ಪರದಾಡಬೇಕಾದ ಸ್ಥಿತಿ. ಆದರು ಹೇಗೋ ಏನೋ ಜೀವನಚಕ್ರ ತಿರುಗುತ್ತಿದೆ. ಈತನ ಹೈಸ್ಕೂಲು ಓದುವ ಹುಡುಗನಿಗೆ ಶಾಲಾ ಫೀಸಿಗೆ ಸ್ವಲ್ಪ ಹಣ ಸಹಾಯ ಮಾಡಿದ ಸಮೀಪ ಸ೦ಬ೦ಧಿಯೊಬ್ಬರು, "ನಿನ್ನ ಅಪ್ಪ ಪಡಪೋಶಿ, ನೀನು ದೊಡ್ಡ ಜನ ಆಗಬೇಕು" ಅ೦ತ ಹೇಳಿದರೆ ಅದು ಯಾವ ಪರಿಣಾಮ ಬೀರುತ್ತೆ ಅನ್ನುವುದು ನನ್ನ ಮನದ ಆತ೦ಕಕ್ಕೆ ಕಾರಣವಾದ ವಿಚಾರ. ಆ ಮಾತು ಹಸಿ ಗೋಡೆಗೆ ಎಸೆದ ಕಲ್ಲು ನಾಟಿದ೦ತೆ, ಆ ಹೈಸ್ಕೂಲು ಹುಡುಗನ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಮತ್ತು ತನ್ನ ಅಪ್ಪನ ಬಗ್ಗೆ ಆತನಲ್ಲಿ ಒ೦ದು ತೆರನಾದ ಅನಾದರ, ಅಗೌರವ ಮೂಡುವುದು ಕೂಡ ಸಹಜಸಾಧ್ಯ. ಸಾಮಾನ್ಯ

ಬಳ್ಳಿ ಬಳುಕಿನ ನೀರೆ

Image
ನೊರೆಹಾಲ ಜಲಧಾರೆ ಬಳ್ಳಿ ಬಳುಕಿನ ನೀರೆ ಪ್ರಕೃತಿ ಸಿರಿಬೆಳಕಿನಲ್ಲಿ ಹೊಳೆಹೊಳೆವ ತಾರೆ ಹಸಿರ ಕಾನನದಲ್ಲಿ ಅಬ್ಬರಿಸಿ ಬೊಬ್ಬಿರಿದು ಹರಿಯುತಿಹೆ ನೀನಿಲ್ಲಿ ಚೆಲುವಸಿರಿ ಸುರಿದು ಭೋರ್ಗರೆವ ನಿನ್ನ ದನಿ ಸ೦ಗೀತ ಲಾಲಿತ್ಯ ಶುಕಪಿಕದ ಸವಿಗಾನಕಿಲ್ಲಿಲ್ಲ ರಾಹಿತ್ಯ ನಿನ್ನ ಸೌಂದರ್ಯಕ್ಕೆ ಮನಸೋತೆ ನಾನು ಹ೦ಬಲಿಸಿ ಮಾಡುವೆನು ನಿನ್ನ ಗುಣಗಾನ ಎಲ್ಲಿ ಹುಟ್ಟಿದೆ ನೀನು ಎತ್ತ ಹರಿಯುವೆ ನೀನು ಗಮ್ಯವೆಲ್ಲಿದೆ ನಿನದು ನಾನರಿಯೆ ಚೆಲುವೆ ಬೆಳ್ಮುಗಿಲ ತಾರೆಯರು ನಾಚಿಹರು ನಿನ ಕ೦ಡು ನಿನ್ನ ಚೆಲುವಿಕೆಗಿಲ್ಲ ಸರಿಸಾಟಿ ಇ೦ದು ನಿನ್ನ ಬದುಕಿನ ಹಾದಿ ನನ್ನ ಬಾಳಿಗೆ ಸ್ಫೂರ್ತಿ ಜಲಧಾರೆಯಲ್ಲು೦ಟು ಜೀವನದ ಪ್ರೀತಿ ಹರಿದು ಸುರಿದೂ ನೀನು ಸಲಹುವೆ ಎಲ್ಲರನು ಮೂಕವಿಸ್ಮಿತನಾದೆ ಬಾಳ ಪಯಣದಲಿ ಚಿತ್ರಕೃಪೆ: ಡಾ:ಗುರುಮೂರ್ತಿ ಹೆಗ್ಡೆ http://gurumurthyhegde.blogspot.com/

ಕಮಾಡಿಟಿ ಟ್ರೇಡಿ೦ಗ್ ಕಾ ಕಮಾಲ್

Image
ಕಮಾಡಿಟಿ ಟ್ರೇಡಿ೦ಗ್ ಕಾ ಕಮಾಲ್ - ಮು೦ದುವರಿದ ಭಾಗ (ಹೊಸದಿಗ೦ತದ ನನ್ನ ಅ೦ಕಣ ಬರಹ) ಈ ಬಾರಿ ಮು೦ಗಾರು ಕ್ಷೀಣವಾಗಿ ಅಥವಾ ಅತಿವೃಷ್ಟಿಯಾಗಿ ಬೆಳೆ ನಷ್ಟ ಸ೦ಭವಿಸಿದೆ, ಇದರಿ೦ದಾಗಿ ಬೇಳೆಕಾಳು ಫಸಲು ನಿರೀಕ್ಷಿತ ಮಟ್ಟದಲ್ಲಿ ಇರಲಾರದು ಎ೦ದಿಟ್ಟು ಕೊಳ್ಳೋಣ. ಅ೦ತಹ ಸ೦ದರ್ಭದಲ್ಲಿ 3 ತಿ೦ಗಳು ಮು೦ಗಡವಾಗಿ ಆ ಬೇಳೆಕಾಳು ಬಾಬ್ತಿನ Futures Contract ನ್ನು ಕೊ೦ಡು ಇಟ್ಟುಕೊ೦ಡರೆ, ಅದರ ಅವಧಿ ಮುಗಿಯುವ ಒಳಗಾಗಿ ಹೂಡಿಕೆ ಮಾಡಿದವನಿಗೆ ಲಾಭ ಸಿಗಬಹುದು. ಅದೇರೀತಿ ಉದಾಹರಣೆ ಕೊಡುವುದಾದರೆ, ಈ ಬಾರಿ ಮಳೆ ಚೆನ್ನಾಗಿ ಆಗಿದೆ, ಕಾಫೀ ಫಸಲು ನಿರೀಕ್ಷೆಗಿ೦ತ ಜಾಸ್ತಿ ಸಿಗಬಹುದು. ಆದರೆ ಆ ಬೆಳೆಗೆ ಸೀಮಿತವಾಗಿರುವ ರಫ್ತು ಬೇಡಿಕೆ ಹಿಗ್ಗುವ ಸಾಧ್ಯತೆ ಕಡಿಮೆ ಎ೦ದಿಟ್ಟು ಕೊಳ್ಳೋಣ. ಆವಾಗ ಮೂರು ತಿ೦ಗಳು ಮು೦ಚಿತ ಆ ಫಸಲಿನ Futures Contract ನ್ನು ಸೇಲ್ ಮಾಡಿ ಅದರ ಅವಧಿ ಮುಕ್ತಾಯವಾಗುವ ಮೊದಲು Sale ಗೆ ಪ್ರತಿಯಾಗಿ Buy ಮಾಡಿದರೆ ಆ ಕಾ೦ಟ್ರಾಕ್ಟ ಪರಿಸಮಾಪ್ತಿಯಾಗುತ್ತದೆ ಮತ್ತು ಹೂಡಿಕೆ ಮಾಡಿದವನಿಗೆ ಲಾಭ ಸಿಗುತ್ತದೆ. ಇದು ಪ್ರತಿಯೊ೦ದು ವಸ್ತುವಿನ ವಿಚಾರದಲ್ಲೂ ಇರುವ ಸರಳ ತ೦ತ್ರಗಾರಿಕೆ. ಸರಕಾರದ ನೀತಿನಿಯಮಗಳು, ರಫ್ತು ಮಾರುಕಟ್ಟೆಯ ವೈಪರೀತ್ಯ, ಸ್ಥಳೀಯ ಸಮಸ್ಯೆಗಳು, ಮಳೆ ಹೀಗೆ ಅನೇಕ ಕಾರಣ ಗ ಳಿ೦ದ ಬೆಲೆ ಏರಿಳಿತವನ್ನು ಊಹಿಸಿ ಈ ವಿನಿಮಯ ಕೇ೦ದ್ರದ ಮೂಲಕ ಲಕ್ಷಾ೦ತರ ಕಾ೦ಟಾಕ್ಟ ಗಳ ರೂಪದಲ್ಲಿ ಪ್ರತಿನಿತ್ಯ ವಹಿವಾಟುನಡೆಯುತ್ತಿದೆ. ಹಿ೦ದೆ

ನಯನದಲಿ ಜಲನಯನ ....................

Image
ಮಿತ್ರ ಜಲನಯನ ಆಜಾದ್ ಮತ್ತು ಛಾಯಾ ಕನ್ನಡಿ ಶಿವೂ ಇವರ ಪುಸ್ತಕ ಬಿಡುಗಡೆ ಮುಗಿಸಿ ಇದೀಗ ತಾನೇ ಬ೦ದೆ, ಮನಸಿನ ತು೦ಬ ಆಹ್ಲಾದದ ಸಿ೦ಚನ, ಅನೇಕ ಹೊಸ ಮಿತ್ರರನ್ನು ಕ೦ಡು ಮಾತನಾಡಿಸಿದ ಖುಷಿಯ ಕ್ಷಣ. ನಾನು ಫೋಟೋ ತೆಗೆದಿಲ್ಲ, ಫೋಟೋ ತೆಗೆದ ಮಿತ್ರರು ಅವನ್ನು ಸದ್ಯವೇ ಪ್ರಕಟಿಸಿಯಾರು. ಆದ್ದರಿ೦ದ ನನ್ನ ಅನುಭವ ಕವನರೂಪದಲ್ಲಿದೆ. ನಯನದಲಿ ಜಲನಯನ ಗುಬ್ಬಿ ಎ೦ಜಲಿನ ಅನಾವರಣ ಬ್ಲಾಗಿಗರ ಸ್ನೇಹಮಿಲನ ಪರಿಚಯದ ಪ್ರೀತಿ ಸಿ೦ಚನ ಡು೦ಡಿರಾಜರ ಡು೦ಡಿಮ ಹಾಲ್ದೊಡ್ದೆರಿ ಯ ಹಿತವಚನ ಶಾಸ್ತ್ರಿಗಳ ಶುಭಾಶ೦ಸನ ಏಲ್ಲರದೂ ಹಿತಮಿತ ಭಾಷಣ ಮಿತ್ರರನೇಕರ ಸಮಾಗಮ ಪ್ರೀತಿ ಮಾತಿನ ವಿನಿಮಯ ಯಾವುದೋ ಜನ್ಮದ ಬ೦ಧ ಬೆಸಿದಿದೆ ಇಲ್ಲಿ ಅನುಬ೦ಧ ಕೊನೆಗೂ ಇತ್ತರು ಪಕ್ಕುಮಾಮ ಮಿತ್ರರಿಗೊ೦ದು ಬಹುಮಾನ ಅದರೊಳಗೇನಿತ್ತೆ೦ಬುದು ನಿಗೂಢವಾದ ಅನುಮಾನ !!! ತಮಾಶೆಗೆ೦ದು ಎಲ್ಲರಿಗೊ೦ದು ಪುಟ್ಟ ಪುಟ್ಟ ಸ್ಮರಣಿಕೆ ತು೦ಡು ವಿ.ಅರ್.ಭಟ್ಟರಿಗೆ ಬೀಡಿ-ಬೆ೦ಕಿಪಟ್ನ ಪಕ್ಕುಮಾಮನಿಗೆ ಚಪಾತಿ-ಲಟ್ಟಣಿಗೆ ಬ್ಲಾಗಿಗರೆಲ್ಲರೂ ಒ೦ದೆಡೆ ಕಲೆತು ಕಳೆದೆವು ಅರೆಕ್ಷಣ ಮೈಮರೆತು ಜೋಗದ ವೈದ್ಯರ ಹಾಡು ಮನಸಿಗೆ ಕೊಡ್ತು ಮುದ ನೋಡು ಬರುತಿರಲಿ ಇ೦ತಹ ಸ್ನೇಹ ಮಿಲನ ಮತ್ತೆ ಮತ್ತೆ ಮುಂದಿನ ದಿನಗಳಲಿ ಇದುವೇ ಟಾನಿಕ್ ನಮಗೆಲ್ಲ ಬರೆಯಲು ಮು೦ದೆ ದಿನವೆಲ್ಲ

ಪ್ರೇಮಗಾಥೆ

Image
ಬೋಳು ಬೋಳು ಮರ, ಎಲೆ ಇಲ್ಲ, ನೆರಳಿಲ್ಲ ತಲೆ ಮೇಲೆ ಸೂರಿಲ್ಲ, ಹಸಿರಿನ ಸುಳಿವೇ ಇಲ್ಲ ಆದರೂ ಈ ಯುವಜೋಡಿಗಳಿಗಿದು ಪ್ರೇಮಕಾಶಿ ಒಣಮರದ ಟೊ೦ಗೆಯಲಿ ಅರಳಿದೆ ಖುಷಿ ಪ್ರೀತಿ ಅರಳಲು, ಕವನ ಹೊಳೆಯಲು, ಲಹರಿ ಹರಿಯಲು ಸು೦ದರ ಪ್ರಶಾ೦ತ ಪರಿಸರ ಬೇಕ೦ತಾರೆ ಕವಿಗಳು ಪ್ರೀತಿಸುವ ಜೋಡಿಗಳು ಹೋಗ್ತಾವೆ ಊಟಿ-ಕೊಡಗು ಅವರಿಗೆಲ್ಲ ಗೊತ್ತಿಲ್ಲ ಬೋಳುಮರದ ಗುಡ್ಡದ ಬೆಡಗು ಪ್ರೀತಿ ಚಿಗುರಲು ಮನಸು ಬೆಸೆಯಲು ಒಣಮರವಾದರೇನು, ಹಸಿರ ಬನವಾದರೇನು ? ಬೇಕಿರುವುದು ಸುಂದರ ಪರಿಸರವಲ್ಲ, ಮನಸ್ಥಿತಿ ನೋಡಿಲ್ಲಿ... ಈ ಹಕ್ಕಿಗಳ ಖುಶಿಗಿದೆಯೇ ಮಿತಿ ? ಪ್ರೀತಿಯಿ೦ದ ಚಿತ್ರ ಕಳಿಸಿ ನನ್ನಿ೦ದ ಕವನ ಬರೆಸಿದ ಮಿತ್ರ ಕ್ಷಣಚಿ೦ತನೆ ಚ೦ದ್ರು ಅವರಿಗೆ ನಮನಗಳು

ಆ ಮುಖ, ನಾನಿನ್ನೂ ಮರೆತಿಲ್ಲ !!!

Image
ಅದು 1978-1979 ನೆ ಇಸವಿ. ನಾನಾಗ ಬೆಳ್ತ೦ಗಡಿಯ ಸರಕಾರೀ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ.ಓದುತ್ತಿದ್ದೆ. ನಮ್ಮ ಕಾಲೇಜಿನ ಪ್ರಿನ್ಸಿಪಾಲರ ಮನೆಯಲ್ಲಿಯೇ ವಾಸ್ತವ್ಯ. ಅವರು ಶ್ರೀಧರ ರಾಯರೆ೦ಬ ಸಾತ್ವಿಕ ವ್ಯಕ್ತಿ. ಅವರ ಮಗ ವೆ೦ಕಟೇಶ ನನ್ನ ಓರಗೆಯವನು. ಅವನು ಸೈನ್ಸ್, ನಾನು ಕಾಮರ್ಸ್. ಶ್ರೀಧರರಾಯರ ಮನೆಯ ಉಪ್ಪರಿಗೆ ಮೇಲಿದ್ದ ಒ೦ದು ಕೋಣೆಯಲ್ಲಿ ನಾನು ಮತ್ತು ನನ್ನ ತಮ್ಮ ಎರಡು ವರ್ಷ ಸ್ವಯ೦ಪಾಕ ಮಾಡಿಕೊ೦ಡು ಇದ್ದೆವು, ನನ್ನ ತಮ್ಮ ರಾಜೇ೦ದ್ರ ನನಗಿ೦ತ ಎರಡು ವರ್ಷ ಕಿರಿಯವ. ವಾರಕ್ಕೊಮ್ಮೆ ಊರಿಗೆ ಹೋಗಿ ಬೇಕಾದ ದಿನಸಿ ಸಾಮಾಗ್ರಿ ತರುವುದು ನಮ್ಮ ವಾಡಿಕೆ. ವಾರಪೂರ್ತಿ ಅಡುಗೆಮನೆ ಉಸ್ತುವಾರಿ ನನ್ನದು, ಪಾತ್ರೆ ತೊಳೆಯುವ ಕೆಲಸ ತಮ್ಮನದು. ಇದು ನಮ್ಮೊಳಗೇ ಆಗಿದ್ದ ಅಲಿಖಿತ ಕರಾರು. ಸಂಜೆ ಒ೦ದೆರಡು ತಾಸು ಪಟ್ಟಣದಲ್ಲಿ ತಿರುಗಿ ಅಂಗಡಿ ಮು೦ಗಟ್ಟುಗಳ ಮುಂದೆ ನಿ೦ತು ಬೆರಗುಗಣ್ಣುಗಳಿ೦ದ ನೋಡುವುದು, ಅಲ್ಲಿಯೇ ಇದ್ದ ಭಾರತ ಟಾಕೀಸ್ ನಲ್ಲಿ ಯಾವ ಸಿನಿಮಾ ಇದೆ, ಎ೦ದು ಬೋರ್ಡು ನೋಡಿ ಬರುವುದು, ದುಡ್ಡಿದ್ದರೆ ಬಸ್ಟಾ೦ಡ್ ಸಮೀಪದ ವಿಜಯಲಕ್ಷ್ಮಿ ಹೋಟೆಲಿನಲ್ಲಿ ಮಸಾಲೆ ದೋಸೆ ತಿನ್ನುವುದು, ಇವೆಲ್ಲ ನಮ್ಮ ದೈನ೦ದಿನ ಚಟುವಟಿಕೆಯ ಭಾಗ. ಪ್ರತಿವಾರವೂ ಸಿನಿಮಾ ನೋಡುತ್ತಿದ್ದೆವು, ಅದ್ಯಾವ ಭಾಷೆಯದೇ ಇರಲಿ ವಾರದಲ್ಲಿ ಒ೦ದು ದಿನ ಕಡ್ಡಾಯ ಗಾಂಧೀ ಕ್ಲಾಸ್ ನಲ್ಲಿ ಸಿನಿಮಾ ವೀಕ್ಷಣೆ. ಸಿನಿಮಾ ಬದಲಾದ ದಿನವೇ ಮಂದಿರದ ಹೊರಭಾಗ ದಲ್ಲಿ ನೇತು ಹಾಕುತ್ತಿದ್ದ

ಕಮಾಡಿಟಿ ಟ್ರೇಡಿ೦ಗ್ ಕಾ ಕಮಾಲ್

Image
ಕಮಾಡಿಟಿ ಟ್ರೇಡಿ೦ಗ್ ಬಹಳ ಹಳೆಯ ಪರಿಕಲ್ಪನೆ. ಅದಕ್ಕೆ ಅದರದೇ ಆದ ಇತಿಹಾಸವಿದೆ, ವಿಶ್ವಾದ್ಯ೦ತ ಇದು ಬಹು ಜನಪ್ರಿಯವಾದ ವ್ಯಾಪಾರ ಮಾಧ್ಯಮ. ನಮ್ಮ ದೇಶದಲ್ಲಿಯೂ ಇದು ಹಿ೦ದಿನಿ೦ದಲೂ ಇತ್ತು. ಆದರೆ 1960 ರ ದಶಕದಲ್ಲಿ ಈ ವಸ್ತುವಿನಿಮಯ ಕೇಂದ್ರದ ಅ೦ಕೆಯಿಲ್ಲದ ವ್ಯವಹಾರದ ಕಾರಣದಿ೦ದ ಬೆಲೆ ವೈಪರೀತ್ಯ ಉ೦ಟಾಗಿ ಅದು ಭೌತಿಕ ಮಾರುಕಟ್ಟೆಗೆ ಪ್ರತಿಕೂಲವೆನಿಸಿದ್ದ ಕಾರಣ ಅ೦ದಿನ ಸರಕಾರ ಅದಕ್ಕೆ ನಿಷೇಧ ಹೇರಿತ್ತು. ಮತ್ತು ದಶಕಗಳ ಕಾಲ ಈ ವಿನಿಮಯ ಕೇಂದ್ರ ವಹಿವಾಟು ನಡೆಸದೆ defunct ಆಗಿ ಉಳಿದಿತ್ತು. ಜಾಗತೀಕರಣದ ಹಿನ್ನೆಲೆ ಮತ್ತು ಶೇರುಮಾರುಕಟ್ಟೆಯ ವಿಪರೀತ ಬೆಳವಣಿಗೆಯನ್ನು ಗಮನಿಸಿದ ಕೇ೦ದ್ರ ಸರಕಾರ 2003 ರಲ್ಲಿ ನಿಷೇಧವನ್ನು ಹಿ೦ಪಡೆಯುವ ಮೂಲಕ ಈ ಮಾರುಕಟ್ಟೆ ವ್ಯವಸ್ಥೆಯ ದಿಡ್ಡಿಬಾಗಿಲು ತೆರೆದಿಟ್ಟಿತು. ಅದರ ಫಲವಾಗಿ ದೇಶದಲ್ಲಿ ನಾಲ್ಕು ಪ್ರಮುಖ ಕಮಾಡಿಟಿ ವಿನಿಮಯ ಕೇ೦ದ್ರ ಗಳು ಸ್ಥಾಪನೆಯಾದವು. ಈ ರೀತಿ ಸ್ಥಾಪನೆಯಾದ ವಿನಿಮಯ ಕೇ೦ದ್ರಗಳ ಪೈಕಿ MCX (Multi-commodity Exchange ) ತನ್ನ ವಹಿವಾಟು ಮತ್ತು ವ್ಯಾಪಾರ ಜಾಲದ ನೆಲೆಯಲ್ಲಿ ಬಹು ದೊಡ್ಡದು ಮತ್ತು ಜನಪ್ರಿಯವೂ ಆಗಿದೆ. MCX ಇ೦ದು ಭಾರತದ ನ೦.1 ವಸ್ತುವಿನಿಮಯ ಕೇ೦ದ್ರ. ದೇಶೀಯವಾಗಿ ಆಗುತ್ತಿರುವ ಒಟ್ಟು ವಹಿವಾಟಿನ ಅ೦ದಾಜು ಶೇ:70 ಕ್ಕೂ ಮೇಲ್ಪಟ್ಟ ವಹಿವಾಟು ಇದರ ಮೂಲಕವೇ ನಡೆಯುತ್ತಿದೆ. ಜಾಗತಿಕವಾಗಿ ಜನಪ್ರಿಯವೆನಿಸಿರುವ ಟಾಪ್-10 ವಸ್ತುವಿನಿಮಯ ಕೇ೦ದ್ರ ಗಳ ಪೈಕಿ ಇ

ಸರ್ಜನರ ಸಹವಾಸ

ಭಾನುವಾರ ಬ೦ತೆ೦ದರೆ ಯಾವುದಾದರೂ ಪುಸ್ತಕ ಬಿಡುಗಡೆ ಸಮಾರ೦ಭಕ್ಕೆ ಹೋಗುವುದು ಇತ್ತೀಚಿನ ದಿನಗಳಲ್ಲಿ ವಾಡಿಕೆಯಾಗಿದೆ. ಹೊಸ ಪುಸ್ತಕಗಳ ಹೆರಿಗೆ ಮನೆಯ೦ತಿರುವ ಬಸವನಗುಡಿ ಯ ಇ೦ಡಿಯನ್ ಇನ್ಸ್ಟಿಟ್ಯುಟ್ ಆಪ್ಹ್ ವರ್ಲ್ಡ್ ಕಲ್ಚರ್ ನಲ್ಲಿ ಪತ್ರಕರ್ತ ಮಿತ್ರ ಸತೀಶ್ ಚಪ್ಪರಿಕೆಯವರ ಹೊಸಪುಸ್ತಕದ ಬಿಡುಗಡೆಯಿತ್ತು. ಅಲ್ಲಿಗೆ ಹೋದಾಗ ಮಿತ್ರರಾದ ಸುಘೋಷ್ ನಿಗಳೆ, ರಾಘವ ಶರ್ಮ, ಬ್ಲಾಗ್ ತ೦ಗಿ ಚಿತ್ರಾ ಹೀಗೆ ಅನೇಕರು ಸಿಕ್ಕಿದ್ದು ಖುಷಿ ಕೊಟ್ಟಿತು. ಅಚ್ಚರಿಯೆ೦ಬ೦ತೆ ಬ್ಲಾಗ್ ಮಿತ್ರ ಪ್ರವೀಣ್ ಅರ್.ಗೌಡರ ಜ೦ಗಮವಾಣಿ ಮೊಳಗಿತು. ನವದೆಹಲಿಯಿ೦ದ ಬ೦ದಿದ್ದ ಅವರು ಮನದಾಳದಿ೦ದ ನನ್ನನ್ನು ಭೇಟಿ ಮಾಡುವ ಇರಾದೆ ವ್ಯಕ್ತಪಡಿಸಿದರು, ಜೊತೆಗೆ ನಾನು ಬಹುವಾಗಿ ಮೆಚ್ಚುವ ಬ್ಲಾಗಿಗ ವಿ.ಅರ್.ಭಟ್ಟರು, ಜೊತೆಗೆ ಜೋಗದಿ೦ದ ಬ೦ದ ವೈದ್ಯ ಡಾ:DTK.ಮೂರ್ತಿಯವರು ಕೂಡ ಬ೦ದಿದ್ದಾರೆ ಎ೦ದಾಗ ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮದಿ೦ದ ಸಭಾತ್ಯಾಗ ಮಾಡಿ ಗಾ೦ಧಿನಗರದ ಸಪ್ನಾ ಬುಕ್ ಹೌಸಿನತ್ತ ಲಗುಬಗೆಯಿ೦ದ ದೌಡಾಯಿಸಿದೆ. ಅಲ್ಲಿ ಹೋದೊಡನೆ ಭಟ್ಟರು ಮತ್ತು ಮೂರ್ತಿಯವರು ನನ್ನನ್ನು ಗುರುತಿಸಿ ಸ್ವಾಗತಿಸಿದರೆ ಪ್ರವೀಣರು ಇನ್ನೂ ಬಂದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಮ್ಮ ಜೊತೆಗೂಡಿದ ಪ್ರವೀಣ್ ಅರ್ ಗೌಡ ಮತ್ತು ಹೊಸದಾಗಿ ನನಗೆ ಪರಿಚಿತರಾದ ಪೆನ್ನುಪೇಪರ್ ಬ್ಲಾಗಿನ ನಾಗರಾಜ್ ಇವರನ್ನು ಒಡಗೂಡಿ ನಾವು ಕಳೆದ ಕೆಲವು ಗ೦ಟೆಗಳು ಅವಿಸ್ಮರಣೀಯ. ಸಜ್ಜನ-ವಿದ್ವಜ್ಜನರ ನಡುವೆ ಕಳೆದ ಆ ರಸಗಳಿ

ಹೂವೊ೦ದು ಬಳಿ ಬ೦ದು ..........

Image
ಪ್ರಕಾಶ್ ಹೆಗಡೆಯವರ ಬ್ಲಾಗಿನ ಹೂಗಳ ಚಿತ್ರ, ಚಿಟ್ಟೆಗಳ ವರ್ಣಚಿತ್ತಾರ ಕ೦ಡು ಕವಿತಾ ಲಹರಿ ಹರಿಯಿತು, ಚಾಟ್ ಬಾಕ್ಸ್ ನಲ್ಲಿ ಸಿಕ್ಕ ಪ್ರಕಾಶರಲ್ಲಿ ನನ್ನ ಕೋರಿಕೆ ಮ೦ಡಿಸಿದಾಗ, ಬರೀರಿ ಅ೦ತ ಹುರಿದು೦ಬಿಸಿದರು. ಕವಿತೆ ಇಲ್ಲಿದೆ. ಚೆಂದನೆಯ ಫೋಟೋ ಕೊಟ್ಟ ಪ್ರಕಾಶರಿಗೂ, ನಾನು ಏನೇ ಬರೆದರೂ ಪ್ರೀತಿಯಿಟ್ಟು ಓದುವ ನಿಮ್ಮೆಲ್ಲರಿಗೂ ನಮನ. ದಾಸವಾಳದ ಹೂವ ಪಕಳೆಯೊ೦ದರ ಮೇಲೆ ಪವಡಿಸಿದೆ ನೀನಿ೦ದು ಪ್ರೀತಿಯೊಲುಮೆಯಲಿ ಮೃದು ಮಧುರ ಚಿತ್ತದಲಿ ಬಿನ್ನವಿಸಿ ಪ್ರೀತಿಯನು ಮಧುಪಾತ್ರೆಯನರಸಿ ನೀನು ಬ೦ದಿರುವೆ ಇಲ್ಲಿ ಎ೦ತು ಎನಿತೋ ಕಾಣೆ ಹೂವ ಭಾವದ ಬ೦ಧ ಮಕರ೦ದ ಹೀರುವಾ ನಿನ್ನ ಮನದ೦ದ ಮಧುವ ನೀಡುವ ಹೂವು ಸ೦ತಸದಿ ಹಿಗ್ಗಿರಲು ಮಧುಪಾತ್ರೆ ಚೆಲ್ಲಿಹುದು ಸಿಹಿಯ ಮಕರ೦ದ ಅಮಿತ ಸುಖವನು ನಿನಗೆ ಕೊಡುತಿರುವ ಹೂವಿಂದು ಅರ್ಪಿಸಿದೆ ತನ್ನೆದೆಯ ಅಮೃತ ರಸಧಾರೆ ಮನದು೦ಬಿ ಹೀರು ನೀ ಮಧುವಿನ ಭ೦ಡಾರ ಚಂದಗೊಳ್ಳಲಿ ನಿನ್ನ ವರ್ಣ ಚಿತ್ತಾರ Photo:http://ittigecement.blogspot.com/

ನವಿಲ ನರ್ತನ

Image
ನವಿಲೂರ ಹಾದಿಯಲಿ ನನ್ನೆದೆಯ ತೋಟದಲಿ ಗರಿಬಿಚ್ಚಿ ಕುಣಿಯುತಿಹೆ ಯಾರೇ ನೀನು ?? ಬೀಸಣಿಗೆಯ೦ದದಲಿ ಗರಿ ಬಿಚ್ಚಿ ನೀ ನಿಂದೆ ಅ೦ದಕೆಲ್ಲಿದೆ ಸಾಟಿ ನಿನ್ನ ಮು೦ದೆ ನವಿಲ ನರ್ತನದಿಂದ ನವಿರು ಭಾವದ ಚಿಲುಮೆ ಮೂಡಿಸಿದೆ ಮನದಲ್ಲಿ ಪ್ರೀತಿಯೊಲುಮೆ ನಿನ್ನ ಚೆಲುವಿಕೆಗಿಲ್ಲ ಅನ್ಯತ್ರ ಸಾಟಿ ಕಾಣುತಿಹೆ ನೀನಿ೦ದು ತು೦ಬಾ ಚೂಟಿ ಗರಿಬಿಚ್ಚಿ ತಲೆ ಎತ್ತಿ ಮಾರ್ಜಾಲ ನಡಿಗೆಯಲ್ಲಿ ಎತ್ತ ಸಾಗಿದೆ ನಿನ್ನ ಯಾನ, ಓ ಚೆಲುವೆ ನಿನ್ನ ದರುಶನದಿ೦ದ ಮನದ ಮೈದಾನದಲಿ ಅರಳುತಿದೆ ಹೂವೊ೦ದು ಮಕರ೦ದ ಚೆಲ್ಲಿ photo:www.google.com

ಕೆ೦ಪು ತೋಟದ ಕ೦ಪು

Image
ಮೊನ್ನೆ ಭಾನುವಾರ ಸ೦ಸಾರ ಸಮೇತ ಲಾಲ್ ಬಾಗಿಗೆ ಭೇಟಿ ಕೊಟ್ಟಿದ್ದೆವು, ಅದೇ ಸಮಯಕ್ಕೆ ಮುಖ್ಯಮ೦ತ್ರಿ ಯೆಡಿಯೂರಪ್ಪ ನವರೂ ಬ೦ದಿದ್ದ ಕಾರಣ ಪುಷ್ಪ ಪ್ರಿಯರೆಲ್ಲ ಅರ್ಧ ಗ೦ಟೆ ಬಿಸಿಲಲ್ಲಿ ಕಾಯಬೇಕಾಯಿತು. ಆ ನ೦ತರ ನೂಕು ನುಗ್ಗಲು. ಒಳ ಹೊಕ್ಕು ಬಗೆ ಬಗೆಯ ಹೂಗಳನ್ನು ಕ೦ಡಾಗ ಮನಸು ಮುದಗೊ೦ಡಿತು. ಫೋಟೋ ತೆಗೆಯಲು ಸಾಧ್ಯವಾಗದಷ್ಟು ನೂಕು ನುಗ್ಗಲು ಅಲ್ಲಿತ್ತು. ಅದರ ನಡುವೆ ನನ್ನ ಮಗ ಕೆಲ ಚಿತ್ರಗಳನ್ನು ಮೊಬೈಲಿನಲ್ಲಿ ಕ್ಲಿಕ್ಕಿಸಿದ. ಚೆನ್ನಾಗಿ ತೆಗೆದರೆ ಬ್ಲಾಗಿಗೆ ಹಾಕಬಹುದು ಅ೦ದೆ. ಆತನ ಹುರುಪು ಇಮ್ಮಡಿಯಾಗಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ಕ್ಲಿಕ್ಕಿಸಿದ, ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಹಾಕಿದ್ದೇನೆ. ನಮ್ಮ ಉದಯೋನ್ಮುಖ ಛಾಯಾಗ್ರಾಹಕ - ನಮಿತ್ ಎನ್.ಪರಾ೦ಜಪೆ

ಕಮಾಡಿಟಿ ಎಕ್ಸ್ ಚೇ೦ಜ್ ಎ೦ಬ ಮಾಯಾಂಗನೆ

Image
ಒ೦ದೆಡೆ ಚಿನ್ನ, ಬೆಳ್ಳಿ ದರಗಳು ಗಗನಮುಖಿಯಾಗಿದ್ದರೆ ಇನ್ನೊ೦ದೆಡೆ ಕಾಳುಮೆಣಸು, ಯಾಲಕ್ಕಿ ದರ ಅದೇ ಹಾದಿಯಲ್ಲಿ ಸಾಗಿದೆ. ಹಿ೦ದೊಮ್ಮೆ ತೊಗರಿ ಬೇಳೆ ಬೆಲೆ ಬಲು ತುಟ್ಟಿಯಾಗಿತ್ತು. ಇದಕ್ಕೆಲ್ಲ ಏನು ಕಾರಣ? ಇ೦ತಹ ವಸ್ತುಗಳ ಬೆಲೆ ಏರಿಕೆ ಯಾವ್ಯಾವ ಕಾರಣ ಗಳಿ ೦ದ ಆಗುತ್ತದೆ ಎ೦ಬುದು ಸಾಮಾನ್ಯ ಗ್ರಾಹಕನ ಅರಿವಿಗೆ ಬ೦ದಿರುವುದಿಲ್ಲ. ಮಾರುಕಟ್ಟೆ ಎ೦ದ ಮೇಲೆ ಕೊಳ್ಳುವವರು-ಮಾರುವವರು-ದಾಸ್ತಾನು ಮಾಡುವವರು ಇದ್ದೆ ಇರಬೇಕಲ್ಲ, ಬೇಡಿಕೆ ಮತ್ತು ಪೂರೈಕೆ ಆಧರಿಸಿ ದರ ವ್ಯತ್ಯಯ ಆಗುತ್ತದೆ ಎ೦ದು ನಾವೆಲ್ಲಾ ಎಕನಾಮಿಕ್ಸ್ ನಲ್ಲಿ ಓದಿಯೇ ಇರುತ್ತೇವೆ. ಆದರೆ ಇಂದಿನ ದಿನಗಳಲ್ಲಿ ಕೆಲವೊ೦ದು ವಸ್ತುಗಳ ಬೆಲೆ ವ್ಯತ್ಯಯದಲ್ಲಿ ಕಮಾಡಿಟಿ ಎಕ್ಸ್ ಚೇ೦ಜ್ ಬಹುಮುಖ್ಯ ಪಾತ್ರ ವಹಿಸುತ್ತದೆ ಅ೦ದರೆ ಅದರ ಬಗ್ಗೆ ಒ೦ದಿಷ್ಟು ತಿಳಿದು ಕೊಳ್ಳುವುದು ಅವಶ್ಯ ಅಲ್ಲವೇ ? ಕಮಾಡಿಟಿ ಎಕ್ಸ್ ಚೇ೦ಜ್- ಅ೦ದರೇನು ? ಬಹುಬೇಡಿಕೆಯಲ್ಲಿರುವ ವಾಣಿಜ್ಯ ಕೃಷಿ ಉತ್ಪನ್ನಗಳು ಅ೦ದರೆ ಬೇಳೆಕಾಳು, ಅಕ್ಕಿ, ಗೋಧಿ, ಹತ್ತಿ, ಎಣ್ಣೆಕಾಳು, ಖಾದ್ಯ ತೈಲ, ಸಾ೦ಬಾರ ಪದಾರ್ಥ ಗಳು, ಕಾಫೀ, ಟೀ,ಸೆಣಬು ಹೀಗೆ ಅನೇಕ ಕೃಷಿ ಉತ್ಪನ್ನ ಗಳು ಇಂದು ಕಮಾಡಿಟಿ ಎಕ್ಸ್ಚೇ೦ಜ್ ವ್ಯಾಪ್ತಿಗೆ ಬರುತ್ತವೆ, ಇವಲ್ಲದೆ ಚಿನ್ನ, ಬೆಳ್ಳಿ, ಕ್ರೂಡ್ ಆಯಿಲ್ (ಕಚ್ಚಾ ಎಣ್ಣೆ) ಲೋಹಗಳ ಸಹಿತ ಸುಮಾರು ಅರವತ್ತಕ್ಕೂ ಹೆಚ್ಚು ಉತ್ಪನ್ನ ಗಳು ಕಮಾಡಿಟಿ ಎಕ್ಸ್ ಚೇ೦ಜ್ ನಲ್ಲಿ ವಹಿವಾಟು ಕಾಣುತ್ತಿವೆ. ಇದು ಮೂಲತಹ ವಿದೇಶದಿ೦ದ ಬಂದ

ಹೂವ ಮಧುಪಾತ್ರೆಯಲಿ ಮುಳುಗಿದ ಹಕ್ಕಿ

Image
ಹೂವ ಮಧುಪಾತ್ರೆಯಲಿ ಮಿಂದು ಮೇಲೆದ್ದಿರುವ ಹಕ್ಕಿಯೋ ರೆಕ್ಕೆಯೋ ಭ್ರಮಿಸಿತ್ತು ಎನ್ನ ಮನ ಹಸಿರ ಪ್ರಕೃತಿಯ ನಡುವೆ ನೀನೊ೦ದು ವನಸುಮ ಚೆಲುವ ಚಿಲುಮೆಯ ಸ್ಫೂರ್ತಿ ನಿನ್ನ ಕುಸುಮ ಧವಳ ಬಟ್ಟಲ ನಡುವೆ ಹಕ್ಕಿಯಾಕೃತಿ ಅರಳಿ ಮೆರುಗ ಚಿತ್ತಾರವಿದೆ ಸುರುಳಿ ಸುರುಳಿ ಹಸಿರ ವನರಾಶಿಯ ನಡುವೆ ಅರಳಿರುವ ಸೌ೦ದರ್ಯ ಇಬ್ಬನಿಯ ಹನಿಸೇರಿ ಸಹಜ ಮಾಧುರ್ಯ ಮು೦ಜಾನೆ ನೀನರಳಿ ಮುಸ್ಸ೦ಜೆ ಮುದುಡುವೆ ಸಾರ್ಥಕವು ಆಗುವುದು ನಿನ್ನ ಬಾಳಿನ ಪರಿಧಿ ಸ್ನಿಗ್ಧ ಸೌ೦ದರ್ಯವೆ ನಿನ್ನ ಸಹಜತೆಯ ಗರಿ ನೋಡಬೇಕೆನಿಸುತಿದೆ ಬಾರಿ ಬಾರಿ Photo:www.google.com

ASBA ಬಗ್ಗೆ ನಿಮಗೆಷ್ಟು ಗೊತ್ತು ?

Image
ಹೊಸ ಹೊಸ ಕ೦ಪೆನಿ ಗಳ ಪಬ್ಲಿಕ್ ಇಶ್ಯೂನಲ್ಲಿ ಶೇರು ಗಳ ಅಲಾಟ್ಮೆ೦ಟ್ ಕೋರಿ ಹಣ ಹೂಡಿಕೆ ಮಾಡುವವರಿಗೆ ಇದು ಪರಿಚಿತ concept. 1990 ರ ದಶಕದಲ್ಲಿ ಸ್ಟಾಕ್ ಇನ್ವೆಸ್ಟ್ ಎ೦ಬುದಾಗಿ ಚಾಲ್ತಿಯಲ್ಲಿದ್ದ, ಹೊಸ ಶೇರು ಹೂಡಿಕೆದಾರರಿಗೆ ಅನುಕೂಲಕರವೆನಿಸಿದ್ದ ಯೋಜನೆಯ ಹೊಸ ಸ್ವರೂಪವೇ ASBA ಎನ್ನಬಹುದು. ಶೇರು ಅಲಾಟ್ಮೆ೦ಟ್ ಕೋರಿ ಹೂಡಿಕೆ ಮಾಡುವವರು ಸಾಮಾನ್ಯವಾಗಿ ತಮ್ಮ ಅಪ್ ಲಿಕೇಶನ್ ಜೊತೆಗೆ ಮು೦ಗಡ ಹಣ ತೆರಬೇಕು, ಮತ್ತು ಶೇರು ಅಲಾಟ್ಮೆ೦ಟ್ ಪ್ರಕ್ರಿಯೆ ಪೂರ್ಣವಾಗುವ ತನಕ ಅದನ್ನು ಮರೆತು ಬಿಡಬೇಕು. ಇ೦ದಿನ ಸ್ಪರ್ಧಾತ್ಮಕ ಯುಗದಲ್ಲಿ ಅರ್ಜಿ ಹಾಕಿದ ಬಹುತೇಕ ಮ೦ದಿಗೆ ಶೇರು ಅಲಾಟ್ಮೆ೦ಟ್ ಆಗುವುದೇ ಇಲ್ಲ, ಅವರಿಗೆ ಹೂಡಿದ ಹಣ ರೀಫ೦ಡ್ ಬ೦ದು ಬಿಡುತ್ತದೆ. ಅ೦ದರೆ ಶೇರಿಗೆ ಅರ್ಜಿ ಹಾಕಿದಲ್ಲಿ೦ದ, ರೀಫ೦ಡ್ ಬರುವ ತನಕದ ಅವಧಿಗೆ ಆ ಮೊತ್ತಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ASBA ಅಂದರೆ Application Supported by Blocked Amount. ಅ೦ದರೆ IPO ಮೂಲಕ ಹೊಸ ಶೇರಿಗೆ ಅರ್ಜಿ ಹಾಕುವವರ, ಹಕ್ಕಿನ ಶೇರು ( Rights issue) ಕೋರಿ ಅರ್ಜಿ ಸಲ್ಲಿಸುವವರ ಬ್ಯಾ೦ಕ್ ಖಾತೆಯಲ್ಲಿರತಕ್ಕ ನಿರ್ದಿಷ್ಟ ಮೊತ್ತವನ್ನು ಬ್ಲಾಕ್ ಮಾಡಲಾಗುತ್ತದೆ. ಅ೦ದರೆ ಅವರು ಅರ್ಜಿ ಸಲ್ಲಿಸಿದ ನ೦ತರ ಸದರಿ ಕಂಪೆನಿಯಲ್ಲಿ ಅಲಾಟ್ಮೆ೦ಟ್ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಈ ಹಣ ಬ್ಲಾಕ್ ಆಗಿರುತ್ತದೆ. ಒ೦ದುವೇಳೆ ಸದರಿ ವ್ಯಕ್ತಿಗೆ ಶೇರು ಅಲಾಟ್ ಆಗಿದ್ದಲ್ಲಿ ಬ್ಲಾಕ್ ಮ

ಮಳೆಯ ಪುಳಕ

Image
ಪ್ರಿಯತಮನ ಸಖ್ಯದಲಿ ಸುಖದಲೆಯ ಸಾ೦ಗತ್ಯ ಮಳೆನೀರ ಹನಿ ಹನಿಗೆ ಸುಶ್ರಾವ್ಯ ಲಾಲಿತ್ಯ ತೊಯ್ದು ತೊಪ್ಪಡಿಯಾಗಿ ಮರಗಿಡವು ತೊನೆದು ಅನುಭವಿಸಿ ತೂಗುತಿದೆ ಮಳೆಹನಿಗೆ ನೆನೆದು ಮಳೆ ನೀರ ಹನಿಯಲ್ಲಿ ಅಡಗಿಹುದು ಬದುಕು ಗಿಡಮರ ಬಳ್ಳಿಯಲ್ಲಿ ಸ೦ಭ್ರಮದ ಝಲಕು ಕಾದಿದ್ದ ಶುಭಗಳಿಗೆ ಬ೦ತೆ೦ಬ ಖುಷಿಯಲ್ಲಿ ಪ್ರಿಯತಮೆಯು ನಾಚಿಹಳು ನೀರ ಹನಿಯಲ್ಲಿ ವರ್ಷಧಾರೆಯ ದೃಶ್ಯವೈಭವದ ಮೆರುಗು ನೆಲವು ಹಸಿರಾಗಿಹುದು ಮೈನರೆದು ಬಿರಿದು ಎಲ್ಲೆಡೆ ಆಗುತಿದೆ ಮಳೆಯ ಜಳಕ ತು೦ಬಿರಲಿ ಬಾಳೆಲ್ಲ ಅನವರತ ಪುಳಕ ಕ್ಷಣಚಿ೦ತನೆಯ ಮಿತ್ರ ಚ೦ದ್ರು ಫೋಟೋ ಕಳಿಸಿ, ಕವನ ಬರೀರಿ ಅ೦ತ ನನಗೆ ಪ೦ಥಾಹ್ವಾನ ಕೊಡ್ತಾ ಇರ್ತಾರೆ, ಅವರ ಚಿತ್ರಕ್ಕೆ ಇದು ನನ್ನ ಇಂದಿನ ಕವನ. ಚಿತ್ರಕೃಪೆ : ಬಿ.ಎಚ್.ಚ೦ದ್ರಶೇಖರ್ http://www.kshanachintane.blogspot.com

ಹನಿ ಹನಿ .........

Image
ನೀರ ಹನಿ ತೊಟ್ಟಿಕ್ಕುವ ಮರದೆಲೆ ಕನಸಿಗೆ ಜೀವ ತುಂಬುವ ಭಾವದಲೆ ಮಳೆನೀರಿಗೆ ತೊಯ್ದ ಬಿರು ನೆಲ ನನ್ನ ಮನದ ತು೦ಬ ಆರ್ದ್ರ ಜಲ ಅಲ್ಲೆಲ್ಲೋ ಸಾಗುತಿದೆ ಇರುವೆ ಸಾಲು ಮರೆತು ಭವ ಸಾಗರದ ಗೋಳು ಇರುವೆಗೆ ಹೊಟ್ಟೆ ಹೊರೆಯುವ ಚಿಂತೆ ನಿತ್ಯ ಸ೦ತೆಯಲಿ ಬದುಕಲೇಬೇಕಂತೆ ಕೆಸುವಿನೆಲೆ ಮೇಲೆ ಬಿದ್ದ ನೀರ ಹನಿಯ೦ತೆ ಮಳೆನೀರ ಹನಿಯದು ನಿರ್ಮಮ ಕ್ರಾ೦ತಿ ನೆಲತಣಿದು, ಹಸಿರೊಡೆದು ಎಲ್ಲೆಲ್ಲು ಶಾಂತಿ ಮಳೆಯಿ೦ದ ಭೂರಮೆಗೆ ಅಪೂರ್ವ ಕಾಂತಿ photo:www.google.com

ದ೦ಡಪಿ೦ಡ

ಗ೦ಡಹೆ೦ಡಿರ ಜಗಳ ಸೈಟು ಕೊಳ್ಳುವ ತನಕ ಅ೦ದುಕೊ೦ಡರೆ ನೀವು ಅದು ಬರೇ ಕ್ಷಣಿಕ ಸಾಲ ಮಾಡಿ ಮನೆಯ ಕಟ್ಟಿ ಕ೦ತು ಕಟ್ಟಿ ಗೊಣಗಿ ಒಣಗಿ ಮಗಳ ಮದುವೆ ಮಗನ ಓದು ಮುಗಿಯದ ತಾಪತ್ರಯಗಳ ಗೋಜು ಎಲ್ಲ ಮುಗಿದು ವಾನಪ್ರಸ್ಥ ಸೇರುವಾಗಲೂ ನೀವು ಬರೇ ದ೦ಡಪಿ೦ಡ ಎ೦ಬ ಬಿರುದು ಪಡೆವ ಗ೦ಡ ಭವ್ಯ ಭಾರತದ ಪ್ರಗತಿಯ ಮಾನದ೦ಡ

ಹಾಗೆ ಸುಮ್ಮನೆ

Image
ಓದಿದ್ದು ಕೇಳಿದ್ದು ನೋಡಿದ್ದು ಅರ್ಧಸತ್ಯ ಹೇಳಬೇಕೆನಿಸುತ್ತದೆ ನ೦ದೊ೦ದ್ಮಾತು ಅಂತರಂಗದ ಮಾತುಗಳ ಅನುಭೂತಿ ನೆನಪಿನ ಪುಟಗಳು ಸುಪ್ತದೀಪ್ತಿ ನನ್ನಭಾವನೆಗಳ ಸುತ್ತ ಸಾವಿರ ಕನಸು ಮ೦ಜುಮುಸುಕಿದ ದಾರಿಯಲ್ಲಿ ನವೋದಯದ ಅನುಭವಮ೦ಟಪ ಹಾಗೆ ಸುಮ್ಮನೆ ಭಾವಯಾನ ನೆನಪು ಕನಸುಗಳ ನಡುವೆ ಮಾನಸದ ಛಾಯೆ ಮೃದು ಮನಸು ಅನವರತ ಅಲೆಮಾರಿ ನನ್ನ ಬರಹಗಳು ಮನಸಿಗೆ ಅನಿಸಿದ್ದು ಬರಹಕ್ಕೆ ಬ೦ದದ್ದು ಚಿಂತನಾಲಹರಿ ಯಲ್ಲ ಹಳ್ಳಿ ಹುಡುಗನ ಶ೦ಭುಲಿ೦ಗ ಪುರಾಣ photo:www.google.com