ಜನುಮದಿನದ ನೆಪದಲ್ಲಿ"ನೀವು ಹೂವಿನ ಚಿತ್ರ, ಹಕ್ಕಿಯ ಚಿತ್ರ ನೋಡಿ ಕವನ ಬರೀತೀರಿ, ನನ್ನ ಬಗ್ಗೆ ಒ೦ದೇ ಒ೦ದು ಕವನ ಬರೀತಿಲ್ಲ" - ಅನ್ನುವುದು ನನ್ನ ಹೆ೦ಡತಿಯ ಆರೋಪ. ಅವಳ ಜನ್ಮದಿನದ೦ದು ಆಕೆಗೊ೦ದು ಕವನ ಬರೆದು ಕೊಟ್ಟೆ. ಖುಷಿಯಲ್ಲಿ ಮುಖ ಅರಳಿತು. ಆ ಕವನ ನಿಮ್ಮ ಓದಿಗಾಗಿ :-

ನಕ್ಕಾಗ ಅರಳು ಮಲ್ಲಿಗೆ ಬಿರಿದ೦ತೆ
ಅತ್ತಾಗ ಸೋನೆ ಮಳೆ ಸುರಿದ೦ತೆ
ಎರಡೂ ಚೆನ್ನ ಆದರೆ ಕೊಂಚ ಭಿನ್ನ
ಆದರೂ ಮನದಾಳದಲ್ಲಿ ಪುಟಕಿಟ್ಟ ಚಿನ್ನ


ನೀನೆನ್ನ ಬಾಳ ಪುಟದಲಿ ಮುನ್ನುಡಿ ಬರೆದು
ಅದಾಗಲೇ ಹದಿನಾರು ವಸಂತ
ಆದರೂ ನನಗೆ ನೀನು ನಿನಗೆ ನಾನು
ಹದಿನಾರಾಣೆ ಸ್ವ೦ತ


ಜಗಳ ಕದನ ಮಾತು ಮಥನ
ಎಲ್ಲವೂ ನಡೆದಿದೆ ನಡೆಯುತ್ತಿದೆ
ಆದರೆ ಅರಿತುಕೊ ನನ್ನ ಪ್ರೀತಿ ಕು೦ದಿಲ್ಲ
ನಿನ್ನ ಪ್ರೀತಿಯ ಬಗ್ಗೆ ಎಳ್ಳಷ್ಟೂ ಅನುಮಾನವಿಲ್ಲ

ಹೊಸ ದಶಾಬ್ದಕ್ಕೆ ನಿನ್ನ ವಯಸು ಹೊರಳುತಿದೆ
ಹೊಸತೊ೦ದು ಆಶಯ ಅರಳುತಿದೆ
ಶುಭವ ಕೋರಲು ಮನಸು ಬಯಸುತಿದೆ
ಸುಖವಿರಲಿ ನಿನಗೆ ಬಾಳೆಲ್ಲ ಎ೦ದು ಹಾರೈಸುತಿದೆ

ಜನ್ಮದಿನದ ಹಾರ್ದಿಕ ಶುಭಾಶಯ ಗಳು

Comments

ಬಾಲು said…
wow wht grt way of wishing!!! its really mindblowing! :)

preethi, prema matte dampatya da bagge thumba soochya vagi barediruviri.

amele ondu vishya, janma dinada party yavattu kodthaa idiri?

(nanna hindina comment galu napatte aagive, disply aagtha illa. nimma blog ge bhoota da thondare ideye?)
ಭಾಶೇ said…
ನಿಮ್ಮ ಪತ್ನಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.
ತುಂಬಾ ಚೆಂದದ ಕವನ
ಮಡದಿಗೆ ಮುದ್ದಾದ ಕವನ ರಚಿಸಿದ್ದಿರಾ...
ಕವನ ರಚಿಸಲು ಬಾರದ ನಮ್ಮ೦ಥವರು ಇದರ ಪ್ರತಿ ಇಟ್ಟು ಓದಿದರಾಯಿತು! ದಾ೦ಪತ್ಯದ ವರ್ಷವನ್ನಷ್ಟೇ ಬದಲಾಯಿಸಿದರಾಯಿತು! ಮಡದಿಯ ಅಪಾರ ಪ್ರ್ರೆತಿಸುವ ಎಲ್ಲರ ಮನದ ಮಾತುಗಳು-ತಮ್ಮ ಈ ಗೀತೆ!
ತಮ್ಮ ಶ್ರೀಮತಿಯವರಿಗೆ ನಮ್ಮ ಕಡೆಯಿಂದ ಹರಿದ್ಕ ಹುಟ್ಟುಹಬ್ಬದ ಶುಭಾಶಯಗಳು.
ತುಂಬಾ ಸುಂದರವಾಗಿದೆ ಕವನ. ಇದಕ್ಕಿಂತ ದೊಡ್ಡ ಉಡುಗೊರೆ ನಿಮ್ಮಾಕೆಗೆ ಬೇಕೆ? :)
PARAANJAPE.K.N,

ಚೆನ್ನಾಗಿದೆ..ಚೆನ್ನಾಗಿದೆ..
ನಿಮ್ಮಾಕೆಗೆ ನಮ್ಮ ಕಡೆಯಿಂದಲೂ ಶುಭ ಆಶಯ...
ಶ್ರೀಮತಿ ಪರಾಂಜಪೆಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.......
ಸಾರ್ ಕವನ ತುಂಬಾ ಹೃದಯಸ್ಪರ್ಶೀಯವಾಗಿದೆ. ಅವರಿಗೆ ಇದಕ್ಕಿಂತ ಉತ್ತಮ ಉಡುಗೊರೆ ಬೇರೆ ಇಲ್ಲ..... ಅವರೂ ಖಂಡಿತಾ ತುಂಬಾ ಸಂತೋಷದಿಂದ ನಿಮ್ಮ ಭಾವನೆಗಳಿಗೆ ಸ್ಪಂದಿಸಿರುತ್ತಾರೆ. ಮಡದಿಯ ಮೇಲಿನ ಪ್ರೀತಿ, ಅಕ್ಕರೆ, ನಂಬಿಕೆಯನ್ನು ಇಷ್ಟು ಒಳ್ಳೆಯ ಕವನದ ಮೂಲಕ ವ್ಯಕ್ತಪಡಿಸಿದ ನಿಮಗೂ ಅಭಿನಂದನೆಗಳು...

ಶ್ಯಾಮಲ
Nisha said…
shreemathi paraanjape yavarige huttu habbada shubhashayagalu.
Subrahmanya said…
ಮುದನೀಡುವ ದಾಂಪತ್ಯಗೀತೆಯಿದು. ಶುಭಾಷಯಗಳು.
ಸರ್;ಕವನ ತುಂಬಾ ಚೆನ್ನಾಗಿದೆ.ಶುಭಾಶಯಗಳು.
shridhar said…
ಸುಂದರ ಕವಿತೆ .. ದಾಂಪತ್ಯದ ಸವಿನೆನಪನ್ನು ಸಂಕ್ಷೀಪ್ತವಾಗಿ , ಸುಂದರವಾಗಿ ತೆರೆದಿಟ್ಟಿದ್ದೀರಿ...
ಶುಭಾಶಯಗಳು,
ತಮ್ಮ ಶ್ರೀಮತಿಯವರಿಗೆ ಜನ್ಮದಿನದ ಶುಭಾಶಯಗಳು.
ಮನದನ್ನೆಗೆ ಮನದಾಳದ ಮಾತನ್ನು ಮನದಲ್ಲಿ ಮೂಡಿಸಿ ಮನತು೦ಬಿ ಮೈಮರೆಯುವ೦ತೆ ಮಾಡಿದ್ದೀರಿ..!
ಉತ್ತಮ ಕವನ..
ಚೆ೦ದವಿರಲಿ ನಿಮ್ಮ ದಾ೦ಪತ್ಯ ಜೀವನ..

ಅನ೦ತ್
sunaath said…
ಇಷ್ಟು ಸೊಗಸಾದ, ಪ್ರೀತಿ ತುಂಬಿದ ಕವನಕ್ಕಿಂತ ಹೆಚ್ಚಿನ ಉಡುಗೊರೆ ಯಾವದಿದ್ದೀತು! ನಿಮ್ಮ ಶ್ರೀಮತಿಯವರಿಗೆ ನನ್ನ ಶುಭಾಶಯಗಳನ್ನೂ ತಿಳಿಸಿರಿ.
chennaagide, nanna kadeyindalu shubhashaya tiLisi
ಈ ಕವನಕ್ಕಿಂತ ದೊಡ್ಡ ಹುಡುಗೊರೆ ಮತ್ತೊಂದಿಲ್ಲವೇನೊ ಎಂದು ಅನಿಸುತ್ತದೆ ಧನ್ಯವಾದಗಳು ಅವರ ಜನುಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.

ವಸಂತ್
ಸುಮ said…
sundara kavana...shubhaashayagalu.
ಸರ್ ಸುಂದರ ಕವನ
ನಿಮ್ಮ ಶ್ರೀಮತಿಗೆ ನಮ್ಮ ಕಡೆಯಿಂದಲೂ ಹುಟ್ಟಿದ ಹಬ್ಬದ ಶುಭಾಶಯಗಳು
ಬಹಳ ಸಂತಸಗೊಂಡಿರಬೇಕು ನಿಮ್ಮ ಮೇಲೆ ನಿಮ್ಮ ಮುದ್ದಾದ ಕವನ ಓದಿ :)
ನಿಮ್ಮ ಶ್ರೀಮತಿ ನಿಮ್ಮ ಪಡಿಯೋಕೆ ಪುಣ್ಯ ಮಾಡಿದರೆ ಬಿಡಿ ನಿಮ್ಮ ಶುಭಾಶಯ ಚನ್ನಾಗಿದೆ
V.R.BHAT said…
ನಿಮ್ಮೀಜೋಡಿ ಮಾಡಲಿ ಬಲು ಮೋಡಿ
ಒಮ್ಮೆ ಜಗಳ- ಮತ್ತೊಮ್ಮೆ ಕುಶಲ
ಇನ್ನೊಮ್ಮೆ ಸರಸ-ಅಲ್ಲೆಲ್ಲೋ ವಿರಸ
ಯಾವುದೇ ಇದ್ದರೂ ಅದೆಲ್ಲ ಹುಸಿಹುಸಿ
ಬದುಕು ನಿತ್ಯ ಹಸಿಹಸಿ
ನಿಮಗಾಗಲಿ ಖುಷಿ-ಪರಮ ಖುಷಿ
Convey our best wishes to your wife
Thanks for sharing.
shivu.k said…
ಪರಂಜಪೆ ಸರ್,

ಕವನ ಸೊಗಸಾಗಿದೆ. ಶುಭಾಶಯಗಳು.
Dileep Hegde said…
ಕವನ ತುಂಬಾ ಸುಂದರವಾಗಿದೆ...
Raghu said…
ಚೆನ್ನಾಗಿದೆ ಕವನ.
ಶುಭಾಶಯಗಳು.
ನಿಮ್ಮವ,
ರಾಘು.
Ranjana H said…
Januma dinada haardika shubhashayagalu.

Sundara kavana. Tanna janumadinadamdu patiyinda intaha preeti tumbida kavana doretare aa santoshakke paaravunte....
ಪರಾಂಜಪೆ,
ನಿಮ್ಮ ಅರ್ಧಾಂಗಿಗೆ ತುಂಬಾ ಸುಂದರವಾದ ಉಡುಗೊರೆ ಕೊಟ್ಟಿದ್ದೀರಾ !
ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸಿ. ( Better late than Never ! )
ಸರ್‍, ಕವನ ಚೆನ್ನಾಗಿದೆ. ನಿಮ್ಮ ಶ್ರೀಮತಿಯವರಿಗೆ ನನ್ನ ಕಡೆಯಿಂದ ಶುಭಾಶಯಗಳನ್ನು ತಿಳಿಸಿ..

ಸ್ನೇಹದಿಂದ,

Popular posts from this blog

ಈ ಬ೦ಧನಾ........

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ