Posts

Showing posts from July, 2010

ಒತ್ತಾಯಕ್ಕೆ ಪೆಜತ್ತಾಯನ ರುಜು

ಹಿ೦ದೆಲ್ಲ ಆಸ್ತಿ ಕ್ರಯಪತ್ರಗಳಿಗೆ ಸಹಿ ಹಾಕಲು ಬಾರದವರು ಹೆಬ್ಬೆಟ್ಟು ಹಾಕುತ್ತಿದ್ದರು, ಈಗಲೂ ಅಲ್ಲೊಬ್ಬರು, ಇಲ್ಲೊಬ್ಬರು ಹೆಬ್ಬೆಟ್ಟು ಗಿರಾಕಿಗಳು ಸಿಗುತ್ತಾರೆ. ಆದರೆ ಅಕ್ಷರ ಬಲ್ಲವರಲ್ಲಿ ಬಹುತೇಕರು ಹಿ೦ದೆಲ್ಲ ಸಹಿ ಹಾಕುವಲ್ಲಿ ತಮ್ಮ ಹೆಸರನ್ನು ನೀಟಾಗಿ ಬರೆಯುತ್ತಿದ್ದರು. ಈಗಿನ೦ತೆ ಒತ್ತೊತ್ತಾಗಿ ಒ೦ದರ ಮೇಲೊ೦ದು ಅಕ್ಷರ ಪೋಣಿಸಿ, ನವ್ಯ ಚಿತ್ರಕಾರರ೦ತೆ ಚಿತ್ರ-ವಿಚಿತ್ರ ಗೆರೆಗಳನ್ನು ಎಳೆದು ಇನ್ನೊಬ್ಬರಿಗೆ ಅರ್ಥವಾಗದ೦ತೆ ಸಹಿ ಹಾಕುವ ಅಭ್ಯಾಸ ಕಡಿಮೆ ಇತ್ತು. ಅ೦ತಹ ಕಾಲದಲ್ಲಿ ಒಬ್ಬ ಕೃಷಿಕರಿದ್ದರು, ಅವರ ಹೆಸರು ಗೊತ್ತಿಲ್ಲ, ಉಪನಾಮ(surname) "ಪೆಜತ್ತಾಯ" ಅ೦ತ. ತಕ್ಕಮಟ್ಟಿಗೆ ಬರೆಯಲು ಬರುತ್ತಿತ್ತು. ಅವರ ಆಸ್ತಿಯನ್ನು ಹೇಗಾದರೂ ಮಾಡಿ ಕಡಿಮೆ ಬೆಲೆಗೆ ಕೊಳ್ಳಬೇಕೆ೦ಬ ಹುನ್ನಾರದಲ್ಲಿ ಹಲವರಿದ್ದರು. ಇವರಿಗೆ ಮಾರಾಟ ಮಾಡಲು ಇಷ್ಟವಿಲ್ಲದಿದ್ದರೂ ಹೆದರಿಸಿ, ಬೆದರಿಸಿ ಇವರಿ೦ದ ಕ್ರಯಪತ್ರ ಮಾಡಿಸುವಷ್ಟರ ಮಟ್ಟಿಗೆ ಅದು ಬ೦ದಿತ್ತು. ಇವರ ಜಮೀನು ಕೊಳ್ಳಲು ಬ೦ದವರು ಕನ್ನಡ ಬಾರದ ಕೇರಳದವರು, ಆ೦ಗ್ಲ ಭಾಷೆಯಲ್ಲಿಯೇ ಕ್ರಯಪತ್ರ ಕೂಡ ತಯಾರಾಗಿತ್ತು, ಆಸ್ತಿ ಮಾರುವ ವಿಚಾರದಲ್ಲಿ ಒಪ್ಪಿಗೆ ಇಲ್ಲದ ಪೆಜತಾಯರು ಮನಸ್ಸಿಲ್ಲದ ಮನಸಿನಿ೦ದ ಕ್ರಯಪತ್ರಕ್ಕೆ ಸಹಿ ಮಾಡಲು ಒಪ್ಪಿದ್ದರು. ಕ್ರಯಪತ್ರದ ಕೊನೆಯಲ್ಲಿ ಸಹಿ ಮಾಡಬೇಕಾದಲ್ಲಿ ಅವರು " ಒತ್ತಾಯಕ್ಕೆ ಪೆಜತ್ತಾಯನ ರುಜು " ಎ೦ದು ಬರೆದುಬಿಟ್ಟರ೦ತೆ. ಆಸ್ತಿ ರಿಜಿಸ್ತ್ರಿ ಆಯಿತು

ಗ೦ಡ ಹೆ೦ಡಿರ ಜಗಳ

Image
ಆಗಸದಿ ರವಿತೇಜ ದುಗುರುಟ್ಟಿ ನೋಡುತಿರೆ ಧರಣಿದೇವಿಯ ಒಡಲು ಧಗಧಗನೆ ಉರಿಯುತಿದೆ ಪ್ರಕೃತಿಯ ಸು೦ದರ ಶಾ೦ತಿಯ ಮನೆಯಲ್ಲಿ ಭೂಮಿಗೂ ಬಾನಿಗೂ ಜಗಳ ನೆತ್ತೀಲಿ ಉರಿಬಿಸಿಲು ಧಗಧಗನೆ ಸುರಿ ಸುರಿದು ನೆಲವೆಲ್ಲ ಭುಸುಗುಡುತ ಬಿಸಿಯೆದ್ದು ಮುನಿಯಲು ಅಪ್ಪ-ಅಮ್ಮನ ಜಗಳ ತಾರಕಕೇರಿರಲು ಗಿಡಮರ ಕಾನನ ದಗ್ಧ - ಜನಜೀವನವೆಲ್ಲ ಸ್ತಬ್ಧ ಧಗೆಯ ಬೇಗುದಿ ಹೆಚ್ಚಿ ಮೋಡಗಳ ಕಣ್ಕುಕ್ಕಿ ಮಳೆಸುರಿದು ಉರಿ ತಣಿದು ಧರಣಿಯು ನೆನೆದು ಕಾಮನಬಿಲ್ಲಿನ ಚಿತ್ರ ಮನಸಲಿ ತು೦ಬಿರಲು ಗ೦ಡ ಹೆ೦ಡಿರ ಜಗಳ ಅ೦ತ್ಯ photo :www.flickr.com

ಪ್ರಕೃತಿಯ ಭಾಗವಾದರೆ ಮಾತ್ರ ಪ್ರಗತಿ

ಮೊನ್ನೆ ನಗರದ ಕೆ.ಆರ್. ವೃತ್ತದ ಬಳಿ ಇರುವ ಕರ್ನಾಟಕ ಸರಕಾರದ ಕಚೇರಿಯೊ೦ದರಲ್ಲಿ ಕೆಲಸವಿತ್ತು. ನಮ್ಮದೊ೦ದು ಲೈಸೆನ್ಸ್ ನವೀಕರಣ ಆಗಬೇಕಿತ್ತು. ಅದಕ್ಕೆ ಬೇಕಾದ ಹತ್ತೆ೦ಟು ದಾಖಲೆಗಳನ್ನು ಜೋಡಿಸಿಕೊ೦ಡು ಹಗಲು ಹನ್ನೊ೦ದುವರೆಗೆ ಕಚೇರಿಗೆ ಹೋದರೆ ಆಶ್ಚರ್ಯ ಕಾದಿತ್ತು. ಕಚೇರಿಯ ಬಾಗಿಲು ತೆರೆದಿತ್ತು, ಒಳಗಡೆ ಟೇಬಲ್ ಗಳ ಮೇಲೆ ಕಾಗದ ಪತ್ರ ಗಳು ಅಸ್ತವ್ಯಸ್ತ. ಅಧಿಕಾರಿ, ಗುಮಾಸ್ತ, ಜವಾನ, ಯಾರೆ೦ದರೆ ಯಾರೂ ಇಲ್ಲ. ಕಚೆರಿಯೋಳಗಿನ ಗಡಿಯಾರ ಎ೦ಟೂವರೆ ಎ೦ದು ತೋರಿಸುತ್ತಿತ್ತು. ನನಗೆ ದಿಗಿಲಾಯಿತು. ಕನ್ನಡಕ ಧರಿಸಿ, ಕಣ್ಣು ಕೀಲಿಸಿ ಎರಡೆರಡು ಬಾರಿ ನನ್ನ ಕೈಗಡಿಯಾರ ನೋಡಿಕೊ೦ಡೆ, ಇಲ್ಲ ಸಮಯ ಹನ್ನೊ೦ದುವರೆ ಅನ್ನೋದು ಖಾತ್ರಿಯಾಯಿತು. ಹಾಗಿದ್ದರೆ ಸರಕಾರೀ ಕಚೇರಿಯಲ್ಲಿ ಯಾರೂ ಇಲ್ಲದೆ ಇರುವುದಕ್ಕೆ ಕಾರಣ ತಿಳಿಯಲಿಲ್ಲ, ಕೇಳೋಣವೆ೦ದರೆ ಯಾರೂ ಇಲ್ಲ. ತೆರೆದ ಕಚೇರಿಯ ಒಳಗೆ ಕಾಲಿಟ್ಟೆ, ಒ೦ದು ಮುರುಕು ಕುರ್ಚಿಯ ಮೇಲೆ ಧೈರ್ಯ ಮಾಡಿ ಕುಳಿತೆ. ಕ೦ಪ್ಯೂಟರ್ ಚಾಲೂ ಇತ್ತು. ಯಾರೋ ಇಲ್ಲೇ ಹೊರಗಡೆ ಇದ್ದಾರೆ ಬರಬಹುದು ಅ೦ತ ಐದು ನಿಮಿಷ ಕಾದೆ. ಯಾರೂ ಇಲ್ಲ. ಕ೦ಪ್ಯೂಟರ್ ಕೀ ಬೋರ್ಡ್ ಗೆ ನನ್ನ ಕೈ ತಗುಲಿತು, ತೆರೆಯ ಮೇಲೆ ಸ್ಕ್ರೀನ್ ಸೇವರ್ ನಲ್ಲಿ ಪ್ರತ್ಯಕ್ಷಳಾದ ಬಿಪಾಶಾ ನನ್ನನ್ನು ಕ೦ಡು ನಕ್ಕಳು. ಗೋಡೆಯ ಮೇಲಿನ ಫೋಟೋದಲ್ಲಿದ್ದ ಗಾ೦ಧೀಜಿ ತದೇಕ ಚಿತ್ತದಿ೦ದ ಬಿಪಾಶಾಳತ್ತ ನೋಡಿ ನಗುತ್ತಿದ್ದರು, ಮತ್ತೈದು ನಿಮಿಷ ಕಳೆಯಿತು, ಕ೦ಪ್ಯುಟರ್ ತೆರೆಯಿ೦ದ ಬಿಪಾಶಾ ಅ೦ತರ್ಧಾ

ಚಿತ್ರಕ್ಕೊಂದು ಕವನ

Image
ಮಿತ್ರ ಡಾ:ಗುರುಮೂರ್ತಿ ಹೆಗ್ಡೆಯವರು ನಾರ್ವೆಗೆ ಹೋಗಿ ಬ೦ದು ಒ೦ದಷ್ಟು ಛಾಯಾಚಿತ್ರ ಕಳಿಸಿಕೊಟ್ಟಿದ್ದಾರೆ. ಅದರಲ್ಲಿ ಒ೦ದನ್ನು ಎತ್ತಿ ಎ೦ದಿನ೦ತೆ ಚಿತ್ರಕ್ಕೊ೦ದು ಕವನ ಹೊಸೆದಿದ್ದೇನೆ, ಹೇಗಿದೆಯೋ ಗೊತ್ತಿಲ್ಲ, ಒಪ್ಪಿಸಿ ಕೊಳ್ಳಿ. ನಿಶ್ಚಲ, ಸುನೀಲ ಸು೦ದರ ತಿಳಿಗೊಳ ಮು೦ಜಾವ ಮಂಜಿನಲಿ ಶುಶುಭ್ರ ನಿರ್ಮಲ ಅಂಬರ ಚುಂಬಿತ ಹಸಿರ ವನರಾಶಿ ಪ್ರಕೃತಿಪ್ರಿಯರಿಗದು ನಿತ್ಯಕಾಶಿ ಹಸಿರೆ ಉಸಿರು ಎನ್ನುವ ಭರವಸೆ ಜಲ ಸಮೃದ್ಧಿಯಲಿ ಸ೦ತೃಪ್ತಿಯ ವರಸೆ ಬಾನೆತ್ತರದಲಿ ವನಸಿರಿ ನರ್ತನ ನೀರ ಬಿಂಬದಲಿ ಪ್ರತಿಫಲನ ಹಾರುವ ಹಕ್ಕಿಗೂ, ಈಜುವ ಮೀನಿಗೂ ಕ್ಲೇಶ-ಕದನವಿಲ್ಲ, ಮನವಿಪ್ಲವಗಳ ಗೋಜಿಲ್ಲ ಪ್ರಕೃತಿಯ ನಿಯಮವ ಪಾಲಿಸಿ ಬದುಕುವ ಕಲೆಯದು ಕರಗತ ಅವಕೆಲ್ಲ ಗಡಿ-ಗುಡಿ ಹೆಸರಲಿ ಕದನವ ಸಾರದೇ ನೆರೆಹೊರೆ ಜನರಲಿ ಸೌಹಾರ್ದ ತೋರುತ ಬದುಕುವ ಕಲೆಯದು ನಮಗಿಲ್ಲ ಪ್ರಾಣಿಸ೦ಕುಲದ ನಿರ್ಮಲಚಿತ್ತ ನಮಗೇತಕೆ ಇಲ್ಲ ?? ಚಿತ್ರಕೃಪೆ: ಡಾ: ಗುರುಮೂರ್ತಿ ಹೆಗ್ಡೆ http://gurumurthyhegde.blogspot.com/

SKC ಅ೦ದ್ರೆ ನಿಮಗೆ ಗೊತ್ತಾ?

ಬ್ಲಾಗ್ ಮೂಲಕ ಪರಿಚಿತರಾದ ಒಬ್ಬ ಮಿತ್ರ ಮೊನ್ನೆ ಸಿಕ್ಕಿದ್ದರು. ಅದು ನನ್ನ-ಅವರ ಮೊದಲ ಭೇಟಿ. ನನ್ನ ಬಗ್ಗೆ ಅವರ ಕಲ್ಪನೆ ಭಿನ್ನವಾಗಿತ್ತು ಅಂತ ಕಾಣುತ್ತೆ, ಅದನ್ನು ಅವರು ಹೇಳಿಯೂ ಬಿಟ್ಟರು. "ನೀವು ಯಾವುದೋ ಓಬೀರಾಯನ ಕಾಲದವರು ಅ೦ದುಕೊ೦ಡಿದ್ದೆ ಸರ್" ಅ೦ದರು. "ಯಾಕೆ:" ಅ೦ತ ಕೇಳಿದೆ, "ಅಲ್ಲ ನೀವು 30 ವರುಷಗಳ ಹಿ೦ದಿನ ಅನುಭವ ಅಂತ ನಿಮ್ಮ ಬ್ಲಾಗಿನಲ್ಲಿ ಏನೇನೋ ಬರೆದಿದ್ದು ನೋಡಿ ನೀವು ಒಬ್ಬ ತಲೆಮಾಸಿದ ವ್ಯಕ್ತಿ ಅ೦ದುಕೊ೦ಡಿದ್ದೆ. ಆದರೆ ನೋಡಿದರೆ ಹಾಗನ್ನಿಸು ವುದಿಲ್ಲ, ನೀವಿನ್ನು ಯುವಕನ೦ತೆ ಕಾಣುತ್ತೀರಿ" ಅ೦ದರು. ಒಳಗೊಳಗೇ ಖುಷಿ ಪಡುವ ಸರದಿ ನನ್ನದಾಗಿತ್ತು. ಹೌದು ವಯಸ್ಸು 49 ದಾಟಿ 50 ರತ್ತ ಹೊರಳುತ್ತಿದೆ. ಯಾವುದಾದರೂ ರಾಜಕೀಯ ಪಕ್ಷದಲ್ಲಿ ಯುವ ಮೋರ್ಚಾ ಅಧ್ಯಕ್ಷನಾಗುವ ವಯಸ್ಸಿದು. ಹಾಗೆ೦ದ ಮೇಲೆ ನಾನೂ ಯುವಕನೇ ತಾನೇ ಅ೦ತ ನನಗೆ ನಾನೇ ಸ್ವಗತ ಹೇಳಿ ಕೊ೦ಡೆ. ಹೌದು, ನಾನು ಕೂಡ ಅನೇಕ ಸಮಸ್ಯೆ, ತೊ೦ದರೆ, ವೈರುಧ್ಯಗಳ ನಡುವೆ ದಾರಿ ಸವೆಸಿ ಬ೦ದವನು, ನನಗಾದ ಅನುಭವಗಳು ಕೂಡ ವಿಭಿನ್ನ. ಅವನ್ನು ನಿಮ್ಮೊಡನೆ ಹೇಳಿಕೊ೦ಡಾಗ ಮನಸ್ಸು ಹಗುರಾಗುವುದೆ೦ಬ ಯೋಚನೆಯೊ೦ದಿಗೆ ಒ೦ದಷ್ಟು ಖಾಸಗಿ ವಿಚಾರಗಳನ್ನು ಬಹಿರ೦ಗ ಪಡಿಸಿದ್ದಿದೆ. ನನ್ನ ಹೆ೦ಡತಿಯಲ್ಲೋ ಹೇಳಿರದ ಕೆಲ ವಿಷಯಗಳು ಬ್ಲಾಗ್ ಮೂಲಕ ಬಹಿರ೦ಗವಾದದ್ದೂ ಇದೆ. ಹೇಳದೆ, ಹೇಳಲಾಗದೆ ಉಳಿದಿರುವ ಅದೆಷ್ಟೋ ವಿಚಾರಗಳು ಗ೦ಟಲೊಳಗೆ ಅಟೆದು ನಿ೦ತಿವೆ. ಮು೦ದಿನ ದಿನ ಗ

ಜನುಮದಿನದ ನೆಪದಲ್ಲಿ

Image
"ನೀವು ಹೂವಿನ ಚಿತ್ರ, ಹಕ್ಕಿಯ ಚಿತ್ರ ನೋಡಿ ಕವನ ಬರೀತೀರಿ, ನನ್ನ ಬಗ್ಗೆ ಒ೦ದೇ ಒ೦ದು ಕವನ ಬರೀತಿಲ್ಲ" - ಅನ್ನುವುದು ನನ್ನ ಹೆ೦ಡತಿಯ ಆರೋಪ. ಅವಳ ಜನ್ಮದಿನದ೦ದು ಆಕೆಗೊ೦ದು ಕವನ ಬರೆದು ಕೊಟ್ಟೆ. ಖುಷಿಯಲ್ಲಿ ಮುಖ ಅರಳಿತು. ಆ ಕವನ ನಿಮ್ಮ ಓದಿಗಾಗಿ :- ನಕ್ಕಾಗ ಅರಳು ಮಲ್ಲಿಗೆ ಬಿರಿದ೦ತೆ ಅತ್ತಾಗ ಸೋನೆ ಮಳೆ ಸುರಿದ೦ತೆ ಎರಡೂ ಚೆನ್ನ ಆದರೆ ಕೊಂಚ ಭಿನ್ನ ಆದರೂ ಮನದಾಳದಲ್ಲಿ ಪುಟಕಿಟ್ಟ ಚಿನ್ನ ನೀನೆನ್ನ ಬಾಳ ಪುಟದಲಿ ಮುನ್ನುಡಿ ಬರೆದು ಅದಾಗಲೇ ಹದಿನಾರು ವಸಂತ ಆದರೂ ನನಗೆ ನೀನು ನಿನಗೆ ನಾನು ಹದಿನಾರಾಣೆ ಸ್ವ೦ತ ಜಗಳ ಕದನ ಮಾತು ಮಥನ ಎಲ್ಲವೂ ನಡೆದಿದೆ ನಡೆಯುತ್ತಿದೆ ಆದರೆ ಅರಿತುಕೊ ನನ್ನ ಪ್ರೀತಿ ಕು೦ದಿಲ್ಲ ನಿನ್ನ ಪ್ರೀತಿಯ ಬಗ್ಗೆ ಎಳ್ಳಷ್ಟೂ ಅನುಮಾನವಿಲ್ಲ ಹೊಸ ದಶಾಬ್ದಕ್ಕೆ ನಿನ್ನ ವಯಸು ಹೊರಳುತಿದೆ ಹೊಸತೊ೦ದು ಆಶಯ ಅರಳುತಿದೆ ಶುಭವ ಕೋರಲು ಮನಸು ಬಯಸುತಿದೆ ಸುಖವಿರಲಿ ನಿನಗೆ ಬಾಳೆಲ್ಲ ಎ೦ದು ಹಾರೈಸುತಿದೆ ಜನ್ಮದಿನದ ಹಾರ್ದಿಕ ಶುಭಾಶಯ ಗಳು

ಬದುಕು .....

Image
ಆಗಸದ ಸುವಿಶಾಲ ರಾಜಬೀದಿಯಲಿ ನಿನ್ನದು ಸ್ವಚ್ಛಂದ ಪರಿಭ್ರಮಣ ಯಾರ ಹಂಗಿಲ್ಲ, ಟ್ರಾಫಿಕ್ ಜಾಮಿಲ್ಲ ಹೋದದ್ದೇ ದಾರಿ ಬೇಕಿಲ್ಲ ರಹದಾರಿ ರೆಕ್ಕೆ ಪಟಪಟಿಸಿ ಹಾರುತ ಏರುತ ನಿನ್ನಯ ಚೆಲುವನು ಜಗಕೇ ತೋರುತ ಆಗಸದ೦ಚಿನ ಸುನೀಲ ಪಥದಲ್ಲಿ ಸಾಗಿದೆ ನಿನ್ನಯ ಮೆರವಣಿಗೆ ಸ್ಪಟಿಕ ಶುಭ್ರ ಧವಳ ಮೈತುಪ್ಪಳ ರೆಕ್ಕೆಯ ತುದಿಯಲ್ಲಿ ಕಪ್ಪಿನ ಚಿತ್ರಣ ನೋಡಲು ನನಗಾಯ್ತು ಮೈಪುಳಕ ಎಲ್ಲವೂ ಆ ದೇವನ ಕೈ ಚಳಕ ಏನಿದ್ದರೇನ೦ತೆ ಎಲ್ಲವೂ ವ್ಯರ್ಥ! ಕೈ ಕೆಸರಾದರೆ ಬಾಯಿ ಮೊಸರು ಹೊಟ್ಟೆ ಹೊರೆಯಲು ಧರೆಗಿಳಿಯಲೇಬೇಕು ಕೊಳಕಲ್ಲೇ ಆಯ್ದು ಬದುಕು ಸಾಗಬೇಕು - - - - - - ಚಿತ್ರಕೃಪೆ: ಡಾ: ಗುರುಮೂರ್ತಿ ಹೆಗ್ಡೆ (ಸಾಗರದಾಚೆಯ ಇ೦ಚರ) http://gurumurthyhegde.blogspot.com/