ಗಾ೦ಧಿಯನ್ನು ಕೊ೦ದವರು

ನಾನಿದ್ದ ಊರಲ್ಲಿ ನಾನು ಒ೦ಥರಾ ಫೇಮಸ್, ಅಲ್ಲಿ ಪಕ್ಷಾತೀತವಾಗಿ ಎಲ್ಲರಿಗೂ ನಾನು Scribe. ಬರವಣಿಗೆ ವಿಷಯಕ್ಕೆ ಸ೦ಬ೦ಧಪಟ್ಟ೦ತೆ ಬಡವನಿ೦ದ ಬಲ್ಲಿದನ ತನಕ, ಪ೦ಚಾಯತ್ ಮೆ೦ಬರನಿ೦ದ ಲೋಕಸಭಾ ಸದಸ್ಯನ ತನಕ ತರಹೇವಾರಿ ಜನ ನನ್ನ ಬಳಿ ಬರುತ್ತಿದ್ದರು, ಅವರವರ ಕೆಲಸ ಮಾಡಿಸಿಕೊ೦ಡು ಅವರವರ ಭಾವಕ್ಕೆ ತಕ್ಕ೦ತೆ ಫೀಜು ಕೊಟ್ಟು ಮುನ್ನಡೆ ಯುತ್ತಿದ್ದರು. ನನ್ನ ಅದೃಷ್ಟವೋ ಅವರ ಕರ್ಮಫಲವೋ ಗೊತ್ತಿಲ್ಲ, ನಾನು ಟೈಪು ಮಾಡಿಕೊಟ್ಟದ್ದನ್ನು ಮಹಾಪ್ರಸಾದ ವೆ೦ಬ೦ತೆ ತಲೆ ಮೇಲೆ ಹೊತ್ತು ನಡೆಯುತ್ತಿದ್ದರು. ಬಹುಪರಾಕ್ ಅನ್ನುತ್ತಿದ್ದರು, ನನಗೆ ಸ್ವರ್ಗಕ್ಕೆ ಮೂರೇ ಗೇಣು. ನನ್ನ ಗ್ರಾಹಕರಿಗೂ ನನಗೂ ಒ೦ದು ಅವಿನಾಭಾವ ಸ೦ಬ೦ಧ. ಅವರ ಮನೆಯ ಕಷ್ಟಸುಖ ನನ್ನ ಬಳಿ ಹೇಳುತ್ತಿದ್ದರು, ಸಲಹೆ ಕೇಳುತ್ತಿದ್ದರು, ಅವರ ತೋಟದಲ್ಲಿ ಬೆಳೆದ ತರಕಾರಿ ಹಣ್ಣು ಹ೦ಪಲು ಬರುವಾಗ ತ೦ದು ಕೊಡುತ್ತಿದ್ದರು. ಹೀಗಾಗಿ ಬಹುಮ೦ದಿಗೆ ನಾನು ಅವರ ಮನೆಯ ಒಬ್ಬ ಸದಸ್ಯ ನ೦ತೆಯೇ ಆಗಿ ಹೋಗಿದ್ದೆ. ಅದ್ಯಾವ ಜನ್ಮದ ಬ೦ಧವೋ ಗೊತ್ತಿಲ್ಲ.


ಆದರೆ ಅವರೊಬ್ಬರಿದ್ದರು, ವೀರಪ್ಪ ಗೌಡರು. ಬಹಳ ಸಲ ನನ್ನ ಜೊತೆ ಅಕಾರಣ ಜಗಳವಾಡಿದ್ದರು. ಅವರ ಕೆಲಸ ಕೂಡಲೇ ಮಾಡಿಕೊಟ್ಟಿಲ್ಲವೆ೦ಬ ಕಾರಣಕ್ಕೆ ಸಿಟ್ಟಿಗೆದ್ದಿದ್ದರು. ಒಮ್ಮೆ ಅವರದೊ೦ದು ಅರ್ಜಿ ಟೈಪ್ ಆಗಬೇಕಿತ್ತು, ನನ್ನ ಬಳಿ ಅದಾಗಲೇ ಐದಾರು ಜನ ಕುಳಿತಿದ್ದರು, ಎ೦ದಿನ೦ತೆ ಬ೦ದು ಕ್ಯೂ ಮುರಿದು ನನ್ನದು ಮೊದಲು ಮಾಡಿಕೊಡಿ ಎ೦ದು ಆಗ್ರಹ ಮ೦ಡಿಸಿದರು ಗೌಡರು. ಸ್ವಲ್ಪ ಇರಿ, ಅರ್ಧಗ೦ಟೆಯೊಳಗೆ ಕೊಡುತ್ತೇನೆ ಅ೦ದೆ. ಆದರೆ ಅವರು ಬಹುಶಃ ಮನೆಯಲ್ಲಿ ಜಗಳ ಮಾಡಿ ಬ೦ದಿದ್ದರು ಎ೦ದು ಕಾಣುತ್ತದೆ. ನನ್ನ ಬಳಿಯೂ ಜಗಳಕ್ಕಿಳಿದರು . " ನೀವು ಯಾವಾಗಲೂ ಹೀಗೆ, ನನ್ನ ಕೆಲಸ ಅ೦ದರೆ ನಿಮಗೆ ಅಸಡ್ಡೆ " ಅ೦ತೆಲ್ಲ ಇಲ್ಲಸಲ್ಲದ ಆರೋಪ ಮಾಡತೊಡಗಿದರು. ನಾನು ಸುಮ್ಮನಾದೆ. ಅಲ್ಲಿ ಅವರ ಜೊತೆ ಬ೦ದಿದ್ದ ಒ೦ದಿಬ್ಬರು ಮರಿ ಪುಡ್ಹಾರಿಗಳ ಜೊತೆ ಹರಟುತ್ತ, "ಇವರು ಯಾರು ಗೊತ್ತೇನ್ರಿ ? ಗಾ೦ಧೀಜಿಯನ್ನು ಕೊ೦ದವರು" ಅ೦ತ ಮನಬ೦ದ೦ತೆ ಮಾತನಾಡ ತೊಡಗಿದರು. ಅವರು ಮಾತನಾಡುತ್ತಿರುವುದು ಏನೆ೦ಬುದು ನನಗೆ ಅರ್ಥವಾಗಿತ್ತು. ಅವರ ಕೆಲಸ ಆಗಿಲ್ಲವೆ೦ಬ ಹತಾಶೆಗೆ ನೇರವಾಗಿ ನನ್ನ ಜಾತಿ-ಕುಲ-ಗೋತ್ರ ಜಾಲಾಡುವ ಕೆಲಸಕ್ಕೆ ಇಳಿದಿದ್ದರು.
ಗಾ೦ಧೀಜಿನ ಕೊ೦ದಿದ್ದು ಯಾರು ಅ೦ತ ಗೊತ್ತಿಲ್ವೇನ್ರಿ ? "ಗೋಡ್ಸೆ" - "ಆ ಜಾತಿಯವರು ಇವರು" ಅ೦ತ ಮಾತನಾಡ ತೊಡಗಿದರು. ಅವರ ಮಾತಿಗೆ ಉಳಿದವರೂ ನಕ್ಕರು. ಅವರಿಗೂ ಗೊತ್ತಿತ್ತು ಇವರ ವ್ಯಕ್ತಿತ್ವ. ಕೆಲಸದ ತುರ್ತಿನಲ್ಲಿ ಇದ್ದ ನಾನು ಅವರ ಕಡೆ ಗಮನ ಕೊಡದೆ ನನ್ನಷ್ಟಕ್ಕೆ ನಾನು ಕೆಲಸ ಮಾಡಿಕೊಟ್ಟು ಕಳಿಸಿದೆ. ಆಮೇಲೆ ಆ ವಿಷಯವನ್ನೇ ಮರೆತೆ. ಈ ಜಾತಿ-ಮತ-ಪ೦ಥಗಳ ಬಗ್ಗೆ ನನಗೆ ಅಷ್ಟಾಗಿ ಆಸ್ಥೆಯೂ ಇಲ್ಲ, ಕೀಳರಿಮೆ-ಹೆಗ್ಗಳಿಕೆಯೂ ಇಲ್ಲ. ಹೌದು, ಗೋಡ್ಸೆ ಮತ್ತು ನನ್ನದು ಒ೦ದೇ ಜಾತಿ, ಆದರೆ ಗೋಡ್ಸೆ ಕೂಡ ಒಬ್ಬ ರಾಷ್ಟ್ರಭಕ್ತ ಅನ್ನುವುದು ಇವರಿಗೆ ಗೊತ್ತಿರಲಿಲ್ಲವೋ, ಅಥವಾ ಆ ಕ್ಷಣಕ್ಕೆ ನನ್ನನ್ನು ಕಿಚಾಯಿಸಲು ಹಾಗ೦ದರೋ ಗೊತ್ತಾಗಲಿಲ್ಲ. ಮತ್ತೆರಡು ದಿನ ಬಿಟ್ಟು ಬ೦ದಾಗಲೂ ಮತ್ತದೇ ಪ್ರಸ್ತಾಪ ಬ೦ದಾಗ ನನಗೂ ಸಿಟ್ಟು ಬ೦ತು. "ನೋಡಿ ಸ್ವಾಮಿ, ಸುಮ್ನೆ ಏನೇನೋ ಮಾತನಾಡಬೇಡಿ, ನೀವು ದೊಡ್ಡವರು, ಹೀಗೆಲ್ಲ ಮಾತನಾಡಬಾರದು" ಅ೦ದೆ. ಅವರಿಗೆ ಅದು ಅಪಥ್ಯ ಅನಿಸಿತು. ನನ್ನ ಮೇಲೆ ಮುನಿಸಿಕೊ೦ಡು ಹೋದರು.

ಆದರೆ ಆಮೇಲೆ ನನಗನಿಸಿತು, ನಾನು ಅವರೊಡನೆ ಸಿಟ್ಟು ಮಾಡಬಾರದಾಗಿತ್ತು, ಏನಿದೆ ಅದರಲ್ಲಿ? ಗಾ೦ಧಿಯನ್ನು ಕೊ೦ದ ವ್ಯಕ್ತಿಯ ಜಾತಿಗೆ (ಚಿತ್ಪಾವನ ಬ್ರಾಹ್ಮಣ) ನಾನು ಸೇರಿದವನು ಅನ್ನುವ ಕಾರಣಕ್ಕೆ ಅದರಲ್ಲಿ ಅವರು ಅಪಹಾಸ್ಯ ಮಾಡುವ೦ಥಾದ್ದು ಏನೂ ಇಲ್ಲ. ನಿಜ ಹೇಳಬೇಕೆ೦ದರೆ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಚಿತ್ಪಾವನರ ಕೊಡುಗೆ ಅಪಾರವಾದದ್ದು. ಮಹಾನ್ ದೇಶಪ್ರೇಮಿಗಳನ್ನು ಈ ದೇಶ ಕ೦ಡಿದೆ. ಬಾಲಗ೦ಗಾಧರ ತಿಲಕರು, ಸಾವರ್ಕರ್, ಗೋಖಲೆ, ವಿನೋಬಾ ಭಾವೆ, ಇಂತಹ ಅತಿರಥ ಮಹಾರಥ ರೆಲ್ಲ ಇರುವಾಗ ಗೋಡ್ಸೆ ಒಬ್ಬನನ್ನು ನೆಪ ಮಾಡಿಕೊ೦ಡು ಇವರು ನನಗೆ ಹಾಸ್ಯ ಮಾಡಿದ್ದಕ್ಕೆ ನಾನ್ಯಾಕೆ ಚಿ೦ತೆ ಮಾಡಬೇಕು ಎ೦ದುಕೊ೦ಡೆ. ಇನ್ನೊಮ್ಮೆ ಅವರು ಬರುವಾಗ, ಅವರಾಗಿಯೇ ಈ ಪ್ರಸ್ತಾಪ ಮಾಡಿದರೆ, ಈ ದೇಶಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಇ೦ತಹ ಮಹನೀಯರ ಪಟ್ಟಿ ಮಾಡಿ ಅವರ ಮು೦ದೆ ಇಡಬೇಕು ಅ೦ದುಕೊ೦ಡೆ.

ಮನೆಗೆ ಹೋದವನೇ ಒ೦ದು ಪಟ್ಟಿ ಮಾಡಬೇಕೆ೦ದು ಕೊ೦ಡೆ. ಆದರೆ ಮರೆತುಬಿಟ್ಟೆ. ಒಮ್ಮೆ ಮು೦ಬೈಗೆ ಕಾರ್ಯನಿಮಿತ್ತ ಹೋಗಿದ್ದಾಗ "ನವಭಾರತ್ ಟೈಮ್ಸ್" ಪತ್ರಿಕೆಯಲ್ಲಿ ಕ೦ಡ ತುಣುಕೊ೦ದು ನನ್ನ ಗಮನ ಸೆಳೆದಿತ್ತು. ಒಬ್ಬ ವ್ಯಕ್ತಿಯ ಹೆಸರಲ್ಲಿ ಅ೦ಚೆ ಚೀಟಿ ಪ್ರಕಟ ಆಗಿರಬೇಕಾದರೆ ಅವರು ಖ್ಯಾತನಾಮರೆ ಆಗಿರಬೇಕು. ಭಾರತೀಯ ಇತಿಹಾಸದಲ್ಲಿ ಒ೦ದೇ ಜನಾ೦ಗಕ್ಕೆ ಸೇರಿದ ಅತಿ ಹೆಚ್ಚು ಜನರ ಹೆಸರಲ್ಲಿ ಅ೦ಚೆಚೀಟಿ ಪ್ರಕಟ ಆಗಿರುವ ದಾಖಲೆ ಇದ್ದರೆ ಅದು ಚಿತ್ಪಾವನ ರದು ಅ೦ತ ಅಲ್ಲಿ ಉಲ್ಲೇಖವಿತ್ತು. ಅಷ್ಟೇ ಸಾಕಾಯ್ತು ನನಗೆ, ಅದನ್ನು ಅವರಿಗೆ ತೋರಿಸಲೆ೦ದು ಎತ್ತಿಟ್ಟುಕೊ೦ಡೆ. ನಿನ್ನೆ ಯಾಕೋ ಕೆಲವು ಹಳೆಯ ಪತ್ರಗಳ ಕಡತ ವಿಲೇವಾರಿ ಮಾಡುವಾಗ ಅಂಚೆ ಚೀಟಿ ಗಳನ್ನೂ ಅ೦ಟಿಸಿದ್ದ ಹಳೆಯ ಹಾಳೆ ಸಿಕ್ಕಿತು ಮತ್ತು ಅದರೊ೦ದಿಗೆ ಕೆಲ ನೆನಪುಗಳು ಕಣ್ಣ ಮು೦ದೆ ಹಾದು ಹೋದವು. ಅದನ್ನು ನಿಮ್ಮೊಡನೆ ಹ೦ಚಿ ಕೊಳ್ಳೋಣವೆ೦ದು ಮನಸ್ಸಾಯ್ತು.
ಚಿತ್ರದ ಮೇಲೆ ಕ್ಲಿಕ್ಕಿಸಿ ನೋಡಿ

ಈ ಮಹಾನ್ ವ್ಯಕ್ತಿಗಳ ಪೈಕಿ ಹಲವರ ಬಗ್ಗೆ ವಿವರ ಬೇಕಿಲ್ಲ ಅ೦ತ ನನ್ನ ಅನಿಸಿಕೆ. ಆದರೂ ಒ೦ದೆರಡು ಲೈನ್ ನಲ್ಲಿ ಅವರ ಬಗ್ಗೆ ಇಲ್ಲಿ ಉಲ್ಲೇಖಿಸುವೆ:-
1. ಗೋಪಾಲಕೃಷ್ಣ ಗೋಖಲೆ (1866 -1915 ) - ಅಪ್ರತಿಮ ರಾಷ್ಟ್ರಭಕ್ತ, ಸ್ವಾತ೦ತ್ರ್ಯ ಹೋರಾಟಗಾರ
2. ವಿನಾಯಕ ದಾಮೋದರ್ ಸಾವರ್ಕರ್(1883 -1966 ) - ಅಪ್ರತಿಮ ರಾಷ್ಟ್ರಭಕ್ತ, ಸ್ವಾತ೦ತ್ರ್ಯ ಹೋರಾಟಗಾರ
3. ದಾದಾ ಸಾಹೇಬ್ ಫಾಲ್ಕೆ(1870 -1944 ) - ಭಾರತೀಯ ಚಿತ್ರರ೦ಗದ ಪಿತಾಮಹ (ಇವರ ಹೆಸರಲ್ಲೇ ಪ್ರತಿಷ್ಟಿತ ಫಾಲ್ಕೆ
ಪುರಸ್ಕಾರ ನೀಡಲಾಗುತ್ತಿದೆ)
4.ರಮಾಬಾಯಿ ರಾನಡೆ (1862-1924 ) - ಲೇಖಕಿ, ಸ್ವಾತ೦ತ್ರ್ಯ ಹೋರಾಟಗಾರ್ತಿ.
5.ಸೇನಾಪತಿ ಬಾಪಟ್ (1880 -1967 ) ಸ್ವಾತ೦ತ್ರ್ಯ ಹೋರಾಟಗಾರ
6.ವಿಷ್ಣು ಭಕ್ತ೦ಡೆ (1860 -1936 ) - ಹಿ೦ದುಸ್ತಾನಿ ಸ೦ಗೀತ ಕ್ಷೇತ್ರದ ದಿಗ್ಗಜ
7.ದಿನಕರ್ ಬಲವ೦ತ್ ದೇವಧರ್ (1892 -1993 ) ಅಗ್ರಮಾನ್ಯ ಕ್ರಿಕೆಟಿಗ (ಇವರ ಹೆಸರಲ್ಲಿ ದೇವಧರ್ ಟ್ರೋಫಿ ಪ೦ದ್ಯಗಳು
ನಡೆಯುತ್ತವೆ)
8. ಮಹರ್ಷಿ ಕರ್ವೆ (1858 -1962 ) - ಮಹಾನ್ ಸಮಾಜ ಸುಧಾರಕ
9. ಪಾ೦ಡುರ೦ಗ ಸದಾಶಿವ ಸಾನೆ (ಗುರೂಜಿ)1899-1950 -ಬರಹಗಾರ,ಸಮಾಜ ಸುಧಾರಕ,ಸ್ವಾತ೦ತ್ರ್ಯಸೇನಾನಿ
10.ವಾಸುದೇವ ಬಲವ೦ತ ಫಡ್ಕೆ (1845 -1883 ) - ಸ್ವಾತ೦ತ್ರ್ಯಕ್ಕಾಗಿ ಉಗ್ರ ಹೋರಾಟದ ಕಿಚ್ಚು ಹಚ್ಚಿದ ಕ್ರಾ೦ತಿಕಾರಿ
11.ಆಚಾರ್ಯ ವಿನೋಬಾ ಭಾವೆ (1895 -1982 )-ಸ್ವಾತ೦ತ್ರ್ಯ ಹೋರಾಟಗಾರ, ಭೂದಾನ ಚಳುವಳಿಯ ನೇತಾರ
12 .ಲೋಕಮಾನ್ಯ ಬಾಲ ಗ೦ಗಾಧರ ತಿಲಕ್ (1856 -1920 ) -ಸ್ವಾತ೦ತ್ರ್ಯ ಹೋರಾಟದ ಮು೦ಚೂಣಿ ನಾಯಕ
13 . ವಿಷ್ಣು ದಿಗ೦ಬರ್ ಪಲುಸ್ಕರ್ (1872 -1931 ) - ಖ್ಯಾತ ಹಿ೦ದುಸ್ತಾನಿ ಗಾಯಕ ("ರಘುಪತಿ ರಾಘವ ರಾಜಾರಾಂ"
ಹಾಡನ್ನು ರಾಗ ಸ೦ಯೋಜಿಸಿ ಮೊದಲಿಗೆ ಹಾಡಿದವರು)
14 .ಪ೦ಡಿತಾ ರಮಾ ಬಾಯಿ (1858 -1922 ) - ಸಮಾಜ ಸುಧಾರಕಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ (ಕಾರ್ಕಳ
ತಾಲ್ಲುಕಿನಲ್ಲಿ ಹುಟ್ಟಿದವರು (ಇವರ ಬಗ್ಗೆ ಹಿ೦ದೆ ಒ೦ದು ಪರಿಚಯ ಲೇಖನ ನಾನೇ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ)
15 .ದತ್ತಾತ್ರೇಯ ರಾಮಚಂದ್ರ ಬೇಂದ್ರೆ(1896-1981 ) - ನಮ್ಮ ಹೆಮ್ಮೆಯ ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು.


ಮು೦ದಿನ ಸಲ ವೀರಪ್ಪ ಗೌಡರು ಬ೦ದಾಗ ಸುಮ್ಮನೆ ಅವರ ಮು೦ದೆ ಈ ಮಹನೀಯರ ಪಟ್ಟಿ ತೋರಿಸಿದೆ, "ಏನಿದು ಅ೦ದರು, "ಸುಮ್ಮನೆ ನೋಡಿ" ಅ೦ದೆ, ಅವರಿಗೆ ಅರ್ಥವಾಯ್ತು. ಆಮೇಲೆ ಅವರ ವರ್ತನೆಯೇ ಬದಲಾಯ್ತು, ಮು೦ದೆ೦ದೂ ಅವರು ನನ್ನ ಬಳಿ ಅನುಚಿತವಾಗಿ ವರ್ತಿಸಲಿಲ್ಲ.

courtesy: http://www.kokanastha.com/htm/stamps.htm

Comments

PARAANJAPE.K.N ,

ತುಂಬಾ ಸಂತಸ ನಮ್ಮ ಮುಂದೆ ಹಂಚಿಕೊಂಡಿದ್ದಕ್ಕೆ..
Sir
Quite informative write-up. I had no idea about most of the great personalities you have referred. Good one.
ಒಳ್ಳೆಯವರು-ಕೆಟ್ಟವರು ಎಲ್ಲಾ ಜನಾ೦ಗದಲ್ಲೂ ಎಲ್ಲಾ ಕಾಲದಿ೦ದಲೂ ಇದ್ದಾರೆ. ಕೆಟ್ಟದನ್ನು ಎತ್ತಿ ಆಡುವವರಿಗೆ ಒಳ್ಳೆಯದನ್ನು ತೋರಿಸಿ ಬಾಯ್ಮುಚ್ಚಿಸಬೇಕು. ತಮ್ಮ ಅನುಭವ ಹ೦ಚಿಕೊ೦ಡಿದ್ದಕ್ಕೆ ಮತ್ತು ಹಲವು ಮಹನೀಯರ ಚಿತ್ರದೊ೦ದಿಗಿನ ಮಾಹಿತಿ ಹ೦ಚಿಕೊ೦ಡಿದ್ದಕ್ಕೆ ವ೦ದನೆಗಳು.
Subrahmanya said…
ವೀರಪ್ಪಗೌಡರಂತಹ ಅವಿವೇಕಿಗಳು ಬಹಳಷ್ಟಿದ್ದಾರೆ. ವ್ಯಕ್ತಿತ್ವದಿಂದ ಮನುಷ್ಯನನ್ನು ಗುರುತಿಸಬೇಕೆ ವಿನಃ, ಜಾತಿಯಿಂದಲ್ಲ ಎನ್ನುವುದನ್ನು ಮನವರಿಕೆ ಮಾಡಬೇಕಿದೆ. ಅದಕ್ಕೆ ನೀವು ಅನುಸರಿಸಿದ ದಾರಿ ಶ್ಲಾಘನೀಯ. ಸ್ಟಾಂಪ್ ಜೊತೆಗಿನ ಮಾಹಿತಿಯೂ ಅತ್ಯುತ್ತಮ.
sunaath said…
ಉತ್ತಮ ಮಾಹಿತಿಯನ್ನು ನೀಡಿದ್ದೀರಿ. ಚಿತ್ಪಾವನ ಬ್ರಾಹ್ಮಣರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಪರಾಂಜಪೆ ಸರ್,
ದೀಮಂತ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುದಾರಕರು, ಸಾಹಿತಿಗಳ ಬಗ್ಗೆ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಾ.
ಉಪಯುಕ್ತ ಲೇಖನ. ಧನ್ಯವಾದಗಳು ಮಾಹಿತಿಗೆ.
ಪರಾಂಜಪೆ ಸರ್‍, ಉತ್ತಮ ಬರಹ..ಧನ್ಯವಾದಗಳು ಮಾಹಿತಿಗೆ.
Unknown said…
ವಿವರಣೆ, ಮಾಹಿತಿ ಚೆನ್ನಾಗಿದೆ. ಅ೦ಚೆ ಚೀಟಿಗಳು ಕೂಡ ಅಪೂರ್ವ.
ಸರ್‍, ಒಂದು ಉತ್ತಮ ಮಾಹಿತಿ ಮತ್ತು ಸಂಗ್ರಹದಾಯಕ ಬರಹ.

ಸ್ನೇಹದಿಂದ,
ESSKAY said…
ಪರಾಂಜಪೆಯವರೇ ,

ಉತ್ತಮ, ಉಪಯುಕ್ತ ಲೇಖನ. ಧನ್ಯವಾದಗಳು.

ಇನ್ನೂ ಕೆಲವು ಸಾಧಕರನ್ನ , ಕಲಾವಿದರನ್ನ, ರಾಜಕೀಯ ವ್ಯಕ್ತಿಗಳನ್ನ ಇಲ್ಲಿ ಸ್ಮರಿಸಬಹುದು ,

ವಸಂತ್ ಸಾಠೆ - ರಾಜಕೀಯ
ಸುಮಿತ್ರಾ ಮಹಾಜನ್ - ರಾಜಕೀಯ
ಡಾ|| ಮೋಹನ್ ಅಗಾಶೆ - ರಂಗಭೂಮಿ , ಚಲನಚಿತ್ರ, ದೂರದರ್ಶನ
ಆಸಾವರೀ ಜೋಶಿ - ರಂಗಭೂಮಿ , ಚಲನಚಿತ್ರ, ದೂರದರ್ಶನ
ಗೌತಮಿ ಗಾಡ್ಗೀಳ್ - ರಂಗಭೂಮಿ , ಚಲನಚಿತ್ರ, ದೂರದರ್ಶನ
ನಿಶಿಗಂಧಾ ವಾಡ್ - ರಂಗಭೂಮಿ , ಚಲನಚಿತ್ರ, ದೂರದರ್ಶನ
ಪ್ರಶಾಂತ್ ದಾಮ್ಲೆ - ರಂಗಭೂಮಿ , ಚಲನಚಿತ್ರ, ದೂರದರ್ಶನ
ಮೋಹನ್ ಜೋಶಿ - ರಂಗಭೂಮಿ , ಚಲನಚಿತ್ರ, ದೂರದರ್ಶನ
ಸುಧೀರ್ ಜೋಶಿ - ರಂಗಭೂಮಿ , ಚಲನಚಿತ್ರ, ದೂರದರ್ಶನ
ರೋಹಿಣಿ ಹಟ್ಟಂಗಡಿ [ಓಕ್] - ರಂಗಭೂಮಿ , ಚಲನಚಿತ್ರ, ದೂರದರ್ಶನ
ಮಿಲಿಂದ್ ಸೋಮಣ್ - ರಂಗಭೂಮಿ , ಚಲನಚಿತ್ರ, ದೂರದರ್ಶನ
ಅದಿತಿ ಗೋವಿತ್ರಿಕರ್ - ರಂಗಭೂಮಿ , ಚಲನಚಿತ್ರ, ದೂರದರ್ಶನ
ಅಜಿತ್ ಅಗರ್ಕರ್ - ಕ್ರಿಕೆಟ್
ಹೃಷಿಕೇಶ್ ಕಾನಿಟ್ಕರ್ - ಕ್ರಿಕೆಟ್
ಶ್ಯಾಮಲಾ.ಜಿ.ಭಾವೆ - ಸಂಗೀತ ಕ್ಷೇತ್ರ
ಗೋಡ್ಸೆ ಗಾಂಧಿಯವರನ್ನು ಕೊಲ್ಲುವಾಗ ಯಾವ ಒಂದು ಮನಸ್ಥಿತಿಯಲ್ಲಿದ್ದ ಹಾಗೂ ಅದರ ಹಿಂದಿನ ಬಲವಾದ ಕಾರಣದ ಬಗ್ಗೆ ಹಲವಾರು ಪುಸ್ತಕಗಳು ಆತ್ಮಕಥನಗಳು ದೊರಕುತ್ತವೆ. ಓದಿದರೆ ಅದೆಷ್ಟೋ ರಹಸ್ಯಗಳು ನಮ್ಮ ಮುಂದೆ ತೆರೆಯುತ್ತವೆ. ಏನೇ ಆದರೂ ಹತ್ಯೆ ಮಹಾ ಪಾಪ. ಖಂಡನೀಯವೇ ಸರಿ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಎಲ್ಲರನ್ನೂ ಸಮತಕ್ಕಡಿಯಲ್ಲಿಟ್ಟು ಲೇವಡಿಮಾಡುವುದೂ ಅಷ್ಟೇ ಆಕ್ಷೇಪಾರ್ಹ. ನೀವು ಪ್ರತಿಭಟಿಸಿದ್ದು ಒಳ್ಳೆಯದೇ ಆಯಿತು. ಅನ್ಯಾಯ, ಅಪವಾದಗಳನ್ನು ಸಹಿಸುವುದೂ ಸಲ್ಲ. ಮಾಹಿತಿಪೂರ್ಣ ಲೇಖನ.
ಸಾರ್....
ಸಲ್ಲದ ವಿಚಾರಗಳಿಗೆ ಕೊಂಡಿಯಾಗಿಸಿ, ಜಾತಿಯ ಬಗ್ಗೆ ಮಾತನಾಡುವವರನ್ನು ಶತಾಯ ಗತಾಯ ಖಂಡಿಸಲೇ ಬೇಕು... ಆ ಒಂದು ಘಟನೆಯ ಆಧಾರದ ಮೇಲೆ ನೀವು ನಮಗೆ ಅತ್ಯಂತ ಮಾಹಿತಿ ಪೂರ್ಣ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು...
PaLa said…
ಒಳ್ಳೇ ಕೆಲ್ಸ ಮಾಡಿದ್ರಿ, ಬಯ್ಯೋದಿಕ್ಕಿಂತ ಮನವರಿಕೆ ಮಾಡಿಕೊಡೋದು ತುಂಬಾ ಕಷ್ಟದ ಕೆಲ್ಸ.. ಅದನ್ನ ಸಮರ್ಪಕವಾಗಿ ನಿರ್ವಹಿಸಿದ್ದೀರಿ...
V.R.BHAT said…
ಚೆನ್ನಾಗಿದೆ ಪರಾಂಜಪೆಯವರೇ, ನಿಮ್ಮನ್ನು ಕಾಣದೇ ಬಹಳ ದಿನವಾಗಿತ್ತು, ಅಂತೂ ನನ್ನ ಬ್ಲಾಗಿಗೆ ಬಂದಿದ್ದೀರಲ್ಲ ಅಂತ ಸಂತಸವಾಯ್ತು,ಧನ್ಯವಾದಗಳು
ದಡ್ಡನಿಗೆ ಕೋಲಿನ ಪೆಟ್ಟು ..ಬುದ್ದಿವಂತನಿಗೆ ಮಾತಿನ ಪೆಟ್ಟು. ನಿಮ್ಮ experience ಇದಕ್ಕೆ ಉತ್ತಮ ಉದಾಹರಣೆ . ಉತ್ತಮ ಬರಹ
PARAANJAPE K.N. said…
ಪ್ರತಿಕ್ರಿಯಿಸಿದ ಎಲ್ಲರಿಗೆ ವ೦ದನೆ ಗಳು

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ