ದಾ೦ಪತ್ಯ ಗೀತೆಸೊ೦ಪಿನ ತರುಲತೆ ತ೦ಪಿನ ತಿಳಿಗೊಳ
ಇ೦ಪಿನ ಪೆ೦ಪಿನ ಹಸಿರಿನ ಸಿರಿ ಸ್ಥಳ
ಬಾಗಿದ ಬಳ್ಳಿಯ ಸಾ೦ಗತ್ಯದಲಿ
ಜೋಡಿ ಮರಗಳ ಸುಖ ದಾ೦ಪತ್ಯ


ಸಹಜೀವನದ ಸಮರಸ ಸಹಮತ
ಮನಸಿನ ಭಾವಕೆ ದೃಢತೆಯ ಅಭಿಮತ
ಕನಸಿನ ಅರಮನೆ ಕಟ್ಟುವ ಮುನ್ನ
ಸ೦ತೃಪ್ತಿಯ ನಾವ್ ಕಲಿಯೋಣ


ಒಬ್ಬರನೊಬ್ಬರು ಅರಿಯುತ ತಿಳಿಯುತ
ರಾಗದ್ವೇಷದ ಭಾವನೆ ತೊರೆಯುತ
ಬದುಕನು ಸು೦ದರಗೊಳಿಸುವ ಕಲೆಯದು
ಬೇಕಿದೆ ಇ೦ದಿನ ಮನುಕುಲಕೆ

Comments

sunaath said…
ಪರಾಂಜಪೆಯವರೆ,
ನಿಸರ್ಗದ ಸಹಜ ಪರಿಯನ್ನು ನೋಡಿ,ಮಾನವ ದಾಂಪತ್ಯಕ್ಕೂ ಅಳವಡಿಸಿಕೊಳ್ಳುವ ಈ ಬಯಕೆ, ಅದನ್ನು ಕವನಿಸುವ ವಿಧಾನ ಅಪೂರ್ವವಾಗಿವೆ.
ಸರ್‍, ಕವನ ಜೊತೆಗೆ ಚಿತ್ರ ಎರಡೂ ಚೆನ್ನಾಗಿವೆ. ಧನ್ಯವಾದಗಳು.
Subrahmanya said…
ಚಿತ್ರಕ್ಕೊಂದು ಸುಂದರ ಕವನ ಬರೆಯುವ ನಿಮ್ಮ ಶೈಲಿ ಮತ್ತಷ್ಟು ಇಷ್ಟವಾಯಿತು. ಪ್ರಕೃತಿಯಲ್ಲೂ ದಾಂಪತ್ಯವನ್ನು ಕಾಣುವುದು, ಸೊಗಸಾಗಿದೆ.
ಬಾಗಿದ ಬಳ್ಳಿಯ ಸಾಂಗತ್ಯದಲ್ಲಿ ಜೋಡಿ ಮರಗಳ ದಾಂಪತ್ಯ! ತುಂಬಾ ಚೆನ್ನಾಗಿದೆ ಕವನ .ಅಭಿನಂದನೆಗಳು.
ಕವನದ ಶೈಲಿ, ಅದರೊಳಗಿನ ಆಶಯ ಚೆನ್ನಾಗಿದೆ.
ಪರಾಂಜಪೆ ಸರ್,
ಪ್ರಕೃತಿಯ ಸತ್ಯವನ್ನು ನಾವು ಅರ್ಥೈಸಿಕೊಂಡರೆ ನಿಜವಾಗಿಯೂ ಜೀವನ ಎಷ್ಟು ಸುಮದುರ ಅಲ್ವಾ?
ಸುಂದರ ಚಿತ್ರದೊಂದಿಗೆ ಚಂದದ ಕವನ.
V.R.BHAT said…
Nice poem for the scene
Ittigecement said…
ಪರಾಂಜಪೆಯವರೆ...

ದಾಂಪತ್ಯ ಗೀತ ಬಹಳ ಸುಂದರವಾಗಿ ಮೂಡಿ ಬಂದಿದೆ...

ರಾಗವಾಗಿ ಹಾಡಿಕೊಳ್ಳುವಷ್ಟು...
ಪ್ರಾಸ ಬದ್ಧವಾಗಿದೆ..

ಅಭಿನಂದನೆಗಳು...
shivu.k said…
ಪರಂಜಪೆ ಸರ್,

ಸುಂದರ ಚಿತ್ರಕ್ಕೆ ಸುಂದರ ಕವನವನ್ನು ಬರೆದಿದ್ದೀರಿ..ಮಾನವನ ದಾಂಪತ್ಯ ಗೀತೆ ನಿಜಕ್ಕೂ ಚೆನ್ನಾಗಿದೆ.
umesh desai said…
ಮರಗಳ ದಾಂಪತ್ಯದ ಸಾರ ನಿಮ್ಮ ಕವಿತೆಯಲ್ಲಿ ಸೊಗಸಾಗಿ ಅರಳಿದೆ..
ಬಾಲು said…
kavana odi urgent aagi maduve aagabeku antha annistaa ideyalla? :)
VENU VINOD said…
ಪರಾಂಜಪೆಯವರೇ, ಪದ್ಯದ ಸಾರ ಚೆನ್ನಾಗಿದೆ, ಅಷ್ಟೇ ಅಲ್ಲ, ಪ್ರಾಸಯುಕ್ತ ಮತ್ತು ಛಂದೋಬದ್ಧವಾಗಿದೆ.
Unknown said…
Tumbaa chennaagittu.. Anda haage ee chitra yelliyadu?
ಚಿತ್ರಕ್ಕೊ೦ದು ಅರ್ಥಪೂರ್ಣ ಕವನ ಬರೆದು ಆದರ್ಶ ದಾ೦ಪತ್ಯದ ರೂಪುರೇಷೆ ಚೆನ್ನಾಗಿ ನೀಡಿದ್ದಿರಾ!!
ತುಂಬಾ ಇಷ್ಟವಾಯಿತು.. ಚಿತ್ರಕ್ಕೆ ತಕ್ಕ ಕವನ.

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ