ಲಹರಿ .....
ಮು೦ಗುರುಳ ಸುಳಿಯಲ್ಲಿ ಭಾವದಲೆಗಳ ಲಹರಿ
ಕಣ್ಣ ಕುಡಿನೋಟದಲಿ ಆಸೆಗಳ ಸುರುಳಿ
ನಡೆಯಲ್ಲಿ ನುಡಿಯಲ್ಲಿ ಸೌ೦ದರ್ಯವರಳಿ
ನೋಡಬೇಕೆನಿಸುತಿದೆ ಮರಳಿ ಮರಳಿ


ಆಗಸದ ಅ೦ಗಳದಿ ಮೋಡಗಳ ಮೆರವಣಿಗೆ
ನೆನಪುಗಳ ಸರಮಾಲೆ ನನ್ನ ಮನದೊಳಗೆ
ಚಿತ್ತಭಿತ್ತಿಯ ತು೦ಬ ಕಲರವವು ತು೦ಬಿ
ಮನವಿ೦ದು ಆಗಿಹುದು ಸ್ವಚ್ಛ೦ದ ದು೦ಬಿ


ನೂರು ಭಾವಗಳರಳಿ ಸ೦ತಸದ ಬಾಳಿನಲಿ
ಅನವರತ ಬಯಸುತಿದೆ ಬೆಳ್ಮುಗಿಲ ಬೆಳಕು
ನೀನಿರಲು ನನ್ನ ಬಳಿ ಚಿ೦ತೆಯದು ಏಕಿನ್ನು ?
ಬದುಕ ಬ೦ಡಿಯ ತು೦ಬ ಸುಖದ ಹೊನ್ನು


Photo courtesy : B.H.Chandrashekar

Comments

Unknown said…
ಸೂಪರ್ ಸಾಲುಗಳು, ಚೆನ್ನಾಗಿದೆ.
Unknown said…
This comment has been removed by the author.
ಮನಸ್ಸಿಗೆ ತು೦ಬಾ ಹಿಡಿಸಿತು. ಪದಗಳೊಡಣೆ ತಮ್ಮ ಸರಸ ಅದ್ಭುತ! ಧನ್ಯವಾದಗಳು.
ಸರ್‍, ಕವನದ ಕೊನೆಯಲ್ಲಿನ ಸಾಲುಗಳು ಮನಸ್ಸನ್ನು ಹಿಡಿದಿಡುತ್ತದೆ. ಚಂದದ ಕವನ. ಧನ್ಯವಾದಗಳು.
Subrahmanya said…
ಉತ್ತಮ ಕವನ, ಚಿತ್ರಕ್ಕೆ ತಕ್ಕಂತಹ ಭಾವ. ಇಷ್ಟವಾಯಿತು.
sunaath said…
"ನಡೆಯಲ್ಲಿ ನುಡಿಯಲ್ಲಿ ಸೌ೦ದರ್ಯವರಳಿ
ನೋಡಬೇಕೆನಿಸುತಿದೆ ಮರಳಿ ಮರಳಿ "
-ಇವು ತುಂಬ ಸುಂದರವಾದ ಸಾಲುಗಳು.
umesh desai said…
ಪರಾಂಜಪೆ ಅವರೆ ಸೂಪರ್ ಕವಿತೆ...ಅಭಿನಂದನೆಗಳು.....!
ತುಂಬಾ ಚೆನಾಗಿದೆ. ಸ್ವಚ್ಛಂದವಾಗಿ, ಸಂತೋಷದಿಂದ ಹಾರಾಡುತ್ತಿರುವ ಜೊತೆಗಾತಿಯ ಸೌಂದರ್ಯ ನೋಡುತ್ತಾ ಕುಳಿತಿದೆಯೇನೋ ಎನ್ನುವಂತಿದೆ... ಚಿತ್ರ ಮತ್ತು ಕವನ ಎರಡೂ ಸೂಪರ್...
ನಂಗಿಷ್ಟವಾದ ಸಾಲು - ಮನವಿ೦ದು ಆಗಿಹುದು ಸ್ವಚ್ಛ೦ದ ದು೦ಬಿ.
ಸರ್, ಕವನ ಸಖತ್ :)
ತುಂಬಾ ಸುಂದರ ಲಹರಿ..... :)
ತುಂಬಾ ಚಂದದ ಸಾಲುಗಳು ಸರ್
ರಾಗಕ್ಕೆ ಹೊಂದಿಕೊಂಡು ಹಾಡುವಂತಿದೆ
PARAANJAPE.K.N,

ತಂಪೆರಚುವಂತ ಪ್ರಶಾಂತ ಕವನ..
ಪರಾಂಜಪೆಯವರಿಗೆ ನಮಸ್ಕಾರ.'ಬದುಕ ಬಂಡಿಯ ತುಂಬಾ ಸುಖದ ಹೊನ್ನು'
ಅಧ್ಬುತ ಸಾಲುಗಳು!
ಬಾಲು said…
:) :) chennagide kavana.
shivu.k said…
ಪರಂಜಪೆ ಸರ್,

ಸಹಜವಾದ ಲಹರಿಯೊಂದಿಗೆ ಬರೆದಿರುವ ಕವನ ತುಂಬಾ ಚೆನ್ನಾಗಿದೆ...ಕೊನೆಯ ತುಂಬಾ ಇಷ್ಟವಾಯ್ತು..ಅದರಲ್ಲೂ
"ಬದುಕ ಬ೦ಡಿಯ ತು೦ಬ ಸುಖದ ಹೊನ್ನು " ಇನ್ನು ಚೆನ್ನಾಗಿದೆ..

ಧನ್ಯವಾದಗಳೂ.
"ಬದುಕ ಬಂಡಿಯ ತುಂಬ ಸುಖದ ಹೊನ್ನನು ಬಾಚುವ ಪ್ರಯತ್ನ."
ಸುಂದರ ಕವನ ಚೆನ್ನಾಗಿದೆ.
PARAANJAPE K.N. said…
ಪ್ರತಿಕ್ರಿಯಿಸಿದ ಎಲ್ಲರಿಗೂ ನಮಸ್ಕಾರ.

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ