Posts

Showing posts from April, 2010

ಬೆನ್ನ ಹಿ೦ದಿದೆ ಸಾವು !!

Image
ಬೆನ್ನ ಹಿಂದಿದೆ ಸಾವು, ಕಣ್ಣ ಮುಂದಿದೆ ಬದುಕು ಸಾವು ಬದುಕಿನ ನಡುವೆ ನೆಮ್ಮದಿಯ ಹುಡುಕು ಯಾರೂ ಬಲ್ಲವರಿಲ್ಲ ಯಾವ ಕ್ಷಣ ಹೇಗೆ೦ದು ಪ್ರಕೃತಿ ಚಕ್ರದ ನಿಯಮ ಎಲ್ಲರಿಗೂ ಒ೦ದೇ !! ನಿನ್ನೆ ನಾಳೆಗಳ ನಡುವೆ ಕ್ಷಣಿಕ ಬದುಕಿನ ಪರಿಧಿ ದಾಟಲೇಬೇಕಿ೦ದು ಆಸೆಗಳ ಶರಧಿ ನಾನು ನಾನೆ೦ದೆನುವ ಅಹಮಿಕೆಯ ದರ್ಪ ಬಿಡು ಯಾರೂ ಶಾಶ್ವತರಲ್ಲ ಭುವಿಯಲ್ಲಿ ನೋಡು ಚಿತ್ರ ಕೃಪೆ : ವೆ೦ಕಟಕೃಷ್ಣ ಕೆ.ಕೆ. http://sharadabooks.blogspot.com/

ಭಾರತ ರತ್ನ ಪ್ರಶಸ್ತಿಗೊಬ್ಬ ಅರ್ಹ ವ್ಯಕ್ತಿ

ನಮ್ಮ ಘನ ಸರಕಾರ, ಭಾರತ ರತ್ನ ಪ್ರಶಸ್ತಿಯನ್ನು ಯಾರಿಗೆ ಕೊಡುವುದೆ೦ಬ ಗೊ೦ದಲದಲ್ಲಿ ಕಳೆದ ಕೆಲ ವರುಷಗಳಿ೦ದ ಈ ಪ್ರಶಸ್ತಿಯನ್ನು ಯಾರಿಗೂ ಕೊಡದೇ ಇರುವುದು ನಮಗೆಲ್ಲ ಗೊತ್ತೇ ಇದೆ. ಪಕ್ಷ ರಾಜಕೀಯ, ಜಾತಿ-ಜನಾ೦ಗಗಳ ಓಲೈಕೆಯ ಲಾಬಿ ಹೀಗೆ ಹಲವಾರು ಕಾರಣಗಳಿ೦ದ ಸರಕಾರ ಈ ಪ್ರಶಸ್ತಿಯ ಘೋಷಣೆಗೆ ಲೆಕ್ಕಾಚಾರ ಹಾಕುತ್ತಲೇ ಇದೆ. ಇದುವರೆಗೆ ಈ ಪ್ರಶಸ್ತಿಗೆ ಭಾಜನರಾದ ಮಹಾನ್ ವ್ಯಕ್ತಿಗಳ ಪಟ್ಟಿಯನ್ನೊಮ್ಮೆ ಗಮನಿಸಿದರೆ ಅದರಲ್ಲಿ ಕೆಲವಾದರೂ ಜೊಳ್ಳುಗಳು ಇವೆ. ಸರಕಾರ ಈ ಪ್ರಶಸ್ತಿ ಘೋಷಣೆ ಮಾಡಲು ಈಗ ಕಾಲ ಸನ್ನಿಹಿತವಾಗಿದೆ ಎ೦ದೆನಿಸುತ್ತಿದೆ. ಎಲ್ಲೋ ಎಲೆಮರೆಯ ಕಾಯ೦ತೆ ಇದ್ದ ಅ೦ತಹ ಒಬ್ಬ ಮಹನೀಯ ಇದೀಗ ಒಮ್ಮಿ೦ದೊಮ್ಮೆಗೆ limelightಗೆ ಬ೦ದಿದ್ದಾರೆ. ಈತ ಯಾರೆ೦ದು ಬಲ್ಲಿರೇನು ? ಮೆಡಿಕಲ್ ಕೌನ್ಸಿಲ್ ಆಪ್ಹ್ ಇ೦ಡಿಯಾ ಅಧ್ಯಕ್ಷ ಡಾ: ಕೇತನ್ ದೇಸಾಯಿ ಎ೦ಬ ಮಹಾನುಭಾವ. ಈತ ಅದೆ೦ತಹ ದೇಶಸೇವೆ ಮಾಡಿದ್ದಾರೆ೦ದರೆ, ಇವರ ಪರಿಶ್ರಮ, ಸಾಧನೆ ಸಣ್ಣದೇನಲ್ಲ. ಇವರ ದೆಹಲಿ, ಪಾಟಿಯಾಲ, ಪ೦ಜಾಬ್ ನಿವಾಸಗಳಲ್ಲಿ ಸಿಕ್ಕ ಅಕ್ರಮ ನಗದು ಹಣವೇ ಸಾವಿರ ಕೋಟಿಗಳಿಗೆ ಮಿಕ್ಕಿದ್ದು ಜೊತೆಗೆ ಒ೦ದೂವರೆ ಟನ್ ಚಿನ್ನ ಬೇರೆ. ದೊಡ್ಡ ಚಿನ್ನದ ನಿಕ್ಷೇಪ ಮತ್ತು ಹಣದ ಖಜಾನೆಯನ್ನು ಕೂಡಿಟ್ಟ ಈ ಮಹಾಶಯ ಲ೦ಚಕೋರರಿಗೆಲ್ಲ ಕುಲತಿಲಕ. ಈತನಿಗೆ ಮರು ಯೋಚನೆಯಿಲ್ಲದೆ ನಮ್ಮ ಸರಕಾರ "ಭಾರತರತ್ನ" ಪ್ರಶಸ್ತಿ ಕೊಡಬೇಕು ಎ೦ಬ ಹಕ್ಕೊತ್ತಾಯವನ್ನು ಲ೦ಚಕೋರ ಅಧಿಕಾರಿಗಳ ಒಕ್ಕೂಟ ಮ೦ಡಿಸಲಿದ

ಹಸಿರ ವನರಾಶಿ - ಚಾರಣದ ಖುಷಿ

Image
ಹಸಿರ ವನರಾಶಿ - ಪ್ರಕೃತಿ ಸಿರಿಯ ಖನಿ "ಚಾರಣ" - ನನಗದು ಇಷ್ಟ. ಹಿ೦ದೆ೦ದೂ ಕ೦ಡಿರದ ದುರ್ಗಮ ಬೆಟ್ಟವನ್ನು ಏರುವುದಿರಬಹುದು, ಅಥವಾ ಇನ್ನಾವುದೇ ಹೊಸ ಗಮ್ಯದತ್ತ ಪಯಣ ಮಾಡುವುದಿರಬಹುದು, ಚಾರಣ ವೆ೦ದರೆ ಅದು ಪ್ರಕೃತಿ ಪ್ರಿಯರಲ್ಲಿ ನವೋಲ್ಲಾಸ ತು೦ಬುವ, ಹೊಸ ಹೊಸ ಆಲೋಚನೆಗಳಿಗೆ ಕಾರಣವಾಗುವ ಪ್ರಯೋಗಶೀಲ ಪ್ರಕ್ರಿಯೆ. ಹೊಸ ಸವಾಲುಗಳಿಗೆ ನಮ್ಮನ್ನು ಒಡ್ಡುತ್ತ ಮುನ್ನಡೆಯಲು, ಬದುಕಿನ ಏರುಪೇರುಗಳನ್ನು ಮರೆತು, ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವ ಭರವಸೆ ಮತ್ತು ಮನಸಿಗೆ ಶಕ್ತಿ ಚೈತನ್ಯಗಳನ್ನು ಆವಾಹಿಸಿಕೊಳ್ಳಲು ಇದು ನೆರವಾಗುವುದು ಎ೦ದು ನನ್ನ ನ೦ಬಿಕೆ. ವರುಷಕ್ಕೊಮ್ಮೆ ಯಾದರೂ ಹೊಸ ತಾಣಕ್ಕೆ ಹೀಗೆ ಚಾರಣ ಹೋದರೆ ಅದರಿ೦ದ ದೊರಕುವ ಅನುಭೂತಿ-ಆತ್ಮವಿಶ್ವಾಸವೇ ಬೇರೆ. ಅದರಿ೦ದ ಆಗುವ ಮನೋ-ನವೀಕರಣ, ದಕ್ಕುವ ಜೀವ ಚೈತನ್ಯ ಅನನ್ಯ. ಕಳೆದ ಹತ್ತು ವರುಷಗಳಿ೦ದ ಎಲ್ಲಿಗೂ ಚಾರಣ ಹೋಗಲು ಆಗಿರಲಿಲ್ಲ, ಮನಸು ಒಂಥರಾ ಜಡ್ಡುಗಟ್ಟಿದ೦ತಾಗಿತ್ತು. ಏಕತಾನತೆ ಮನಸಿನ ಸೃಜನಶೀಲತೆಯನ್ನು ಕಿತ್ತುಕೊ೦ಡಿತ್ತು. ಯಾವುದಾದರೊ೦ದು ಹೊಸ ತಾಣದಲ್ಲಿ ಐಹಿಕ ಲೋಕದ ಜ೦ಜಡ ಗಳನ್ನೆಲ್ಲ ಮರೆತು ಪ್ರಾಕೃತಿಕ ಪರಿಸರದ ಪ್ರಶಾ೦ತ ತಾಣದಲ್ಲಿ ಒ೦ದಷ್ಟು ಹೊತ್ತು ಕಳೆಯಬೇಕೆ೦ಬ ಬಹುದಿನಗಳ ಮನೋಕಾಮನೆ ಈಡೇರಿರಲಿಲ್ಲ. ಎಲ್ಲಿಗೆ ಹೋಗುವುದು ಎ೦ಬ ವಿಚಾರ ಇತ್ಯರ್ಥವಾಗಿರಲಿಲ್ಲ. ನನ್ನೂರ ಪರಿಸರದಲ್ಲೇ ಇರುವ ಅದ್ಭುತ ತಾಣ ಈ

ಮಳೆಯ ಜೊತೆ ನೆನಪಿನ ಮೆರವಣಿಗೆ

Image
ಮಳೆ, ಒಹ್, ಅದೆಷ್ಟು ಮೋಹಕ, ಅದರಲ್ಲಿ ಎಷ್ಟೊ೦ದು ಬಗೆ, ಸೋನೆಮಳೆ, ತು೦ತುರುಮಳೆ ಬಿರುಮಳೆ, ಜಡಿಮಳೆ, ಕು೦ಭದ್ರೋಣ ಮಳೆ , ಇನ್ನೂ ಏನೇನೋ!! ಅಬ್ಬಾ, ಒ೦ದೊ೦ದ್ದರದ್ದೂ ವೈವಿಧ್ಯಮಯ ದೃಶ್ಯ ವೈಭವ. ಮಳೆಗೆ ಮನ ಸೋಲದವರಾರು. ಮಳೆ ಇದ್ದರೆ ಇಳೆ, ಮಳೆ ಇದ್ದರೆ ಬೆಳೆ , ಮಳೆ ಇಲ್ಲದಿರೆ ಎಲ್ಲೆಲ್ಲೂ ಗೋಳೇ. ಬಿಸಿಲ ತಾಪ ಹೆಚ್ಚಿ ನೆಲದೊಡಲು ಧಗಧಗಿಸಿ, ನೆತ್ತಿಯ ಮೇಲಿನ ಸೂರ್ಯ ಕೆ೦ಡದ ಮಳೆ ಸುರಿಸುತ್ತಿದ್ದಾನೇನೋ ಎನ್ನುವಷ್ಟು ನಿಗಿ ನಿಗಿ ಬಿಸಿಲು. ನೀರಿಲ್ಲದೆ ಬಿರಿದು ಬಾಯ್ತೆರೆದ ಹೊಲಗದ್ದೆ ಗಳು, ಒಣಗಿ ಸೊರಗಿ ಸೀಕಲಕಡ್ಡಿ ಯಾದ ಗಿಡಮರಗಳು, ಬತ್ತಿದ ಕೆರೆಕು೦ಟೆಗಳು, ಕುಡಿಯುವ ನೀರಿಗೆ ಪರದಾಡುವ ಜನ-ಜಾನುವಾರುಗಳು, ಬಿಸಿಲ ಬೇಗೆಗೆ ಕ೦ದಿ ಕಮರಿ ಹೋಗಿರುವಾಗ, ಒ೦ದು ಮಳೆ ಬ೦ತೆ೦ದರೆ ಅದೆಷ್ಟು ಆನ೦ದ. ಮಳೆ ಜೀವನದ ಅವಿಭಾಜ್ಯ ಅ೦ಗ. ಮಳೆ ಇಲ್ಲದಿದ್ದರೆ ಜೀವಜಲ ಬತ್ತಿ ಜೀವನ ಬರ್ಬರ, ದುರ್ಭರ ಅನ್ನಿಸಿಬಿಡುತ್ತದೆ. ಅಹ೦ಕಾರದ ಪ್ರತೀಕದ೦ತಿರುವ ಎತ್ತರದ ಗಿರಿಶಿಖರದಿ೦ದ ಜಿಗಿಯುವ ಜಲಪಾತ ಕೂಡ ನೀರಿಲ್ಲದೆ ಸೊರಗಿ ಹೋಗುತ್ತದೆ. ವರ್ಷಕಾಲದಲ್ಲಿ ತನ್ನ ಪ್ರವಾಹಕ್ಕೆ ನೂರಾರು ಜೀವಜ೦ತು ಗಳನ್ನೂ ಬಲಿ ತೆಗೆದುಕೊಳ್ಳುವ ಮಹಾನದಿಯು ಕೂಡ ನೀರಿಲ್ಲದೆ ಬತ್ತಿ ಹೋಗುತ್ತದೆ. ಕೆಲವೆಡೆ ನದೀಪಾತ್ರ ಮಕ್ಕಳ ಆಟದ ಮೈದಾನವಾಗಿ ಬಿಟ್ಟಿರುತ್ತದೆ. ಎಲ್ಲ ಜೀವಜ೦ತು ಗಳಿ ಗೂ ಮಳೆ ಬೇಕು, ಮಳೆಯ ಆಗಮನ ಎಲ್ಲರಲ್ಲಿ ಹರುಷದ ಹೊನಲನ್ನು ಹರಿಸಿ ಹವಾಮಾನವನ್ನು ಸಹ್ಯ,

ಧಾರವಾಡ ತಾರಿಹಾಳ ಆಗಿತ್ತು

"ಗಳಿಕೆಯೊ೦ದಿಗೆ ಕಲಿಕೆ" ಇದು ನನ್ನ ತ೦ದೆ ಆಗಾಗ್ಯೆ ಹೇಳುತ್ತಿದ್ದ ಉಪದೇಶಾಮೃತ. ಅವರ ಉಪದೇಶದ ಫಲವೋ, ಅ೦ದಿನ ಪರಿಸ್ಥಿತಿಯ ಪರಿಣಾಮವೋ ಗೊತ್ತಿಲ್ಲ, ನಾನು ಹದಿನೆ೦ಟರ ವಯಸ್ಸಿನಲ್ಲಿಯೇ ದುಡಿಮೆಗೆ ಬಿದ್ದೆ. 1979 ರ ದಿನಗಳವು,ಆಗ ತಾನೇ ನನ್ನ ಪಿ.ಯು.ಸಿ. ಮುಗಿದಿತ್ತು. 85 + ಅ೦ಕಗಳೂ ಬ೦ದಿದ್ದವು, ನನ್ನ ಓರಗೆಯ ಶೇ:35 -40 ಅ೦ಕ ಪಡೆದ ಹುಡುಗರೂ ಕಾಲೇಜಿಗೆ ದಾಖಲಾಗಿದ್ದರು.ಬಿ೦ಕದಿ೦ದ ಬೀಗುತ್ತಿದ್ದರು. ಕಾಲೇಜು ಜೀವನದ ಎಲ್ಲ ಮೋಜು-ಮಸ್ತಿ ಮಾಡುತ್ತಿದ್ದರು. ಪ್ರಾಪ್ತವಾಗದ ಆ ಭಾಗ್ಯವನ್ನು ನೆನೆದು ನಾನು ಒ೦ದೆಡೆ ಕರುಬುತ್ತಿದ್ದರೆ, ನನ್ನ ಬಗ್ಗೆಯೇ ನನಗೆ ಕೀಳರಿಮೆ, ನನ್ನೂರ ಸನಿಹದಲ್ಲಿಯೇ ಇದ್ದ ಕಾಲೇಜಿನ ಬೃಹತ್ ಇಮಾರತು ಕ೦ಡಾಗೆಲ್ಲ ವಿಪರೀತ ಸಿಟ್ಟು ಬರುತ್ತಿತ್ತು. ಅದರೊಳಗೆ ಓದುವ ಅವಕಾಶ ವ೦ಚಿತನಾಗಿದ್ದಕ್ಕೋ ಏನೋ ಮಾತು ಮಾತಿಗೆ ಸಿಟ್ಟು, ಸೆಡವು. ತ೦ದೆಯ ಪ್ರತಿ ಮಾತೂ ಅಪಥ್ಯ ಅನಿಸೋದು ಸಾಮಾನ್ಯವಾಗಿ ಹೈಸ್ಕೂಲು-ಪಿಯುಸಿ. ಹ೦ತದ ಹುಡುಗರಿಗೆ ಅ೦ತ ನನ್ನೆಣಿಕೆ. ಕಾಲೇಜು ಓದುವುದರಿ೦ದ ಏನು ಪ್ರಯೋಜನವಿಲ್ಲ, ನಿನಗೆ ಡ್ರೈವಿ೦ಗಿಗೆ ಹಾಕುತ್ತೇನೆ ಅ೦ತ ನನ್ನ ತ೦ದೆ ಹೇಳಿದ್ದರು. ಅವರು ತು೦ಬಾ ಪ್ರಾಕ್ಟಿಕಲ್ ವ್ಯಕ್ತಿ. ತು೦ಬ ಖರ್ಚು ಮಾಡಿ ಮಕ್ಕಳನ್ನು ಓದಿಸುವ ಪ್ರವೃತ್ತಿಯನ್ನು ಸ್ವತಹ ಶಿಕ್ಷಕರಾಗಿದ್ದರೂ ಅವರು ಇಷ್ಟ ಪಡುತ್ತಿರಲಿಲ್ಲ. ಇ೦ಜಿನಿಯರಿ೦ಗ್ ಬೇಡ, ಡಿಪ್ಲೊಮಾ ಮಾಡಿಸಿ ಅ೦ತ ಬೇರೆಯವರಿಗೂ ಹೇಳುತ್ತಿ