Posts

Showing posts from March, 2010

ಚಾರಣ ಹೊರಟಿರುವೆ

Image
ಬಹುದಿನದಿ ಕಾದಿರುವೆ ನಿನ್ನೆಡೆಗೆ ನಾ ಬರಲು ಹಸಿರ ಸಿರಿ ನಡುವಿನಲಿ ನಲಿದು ತಾ ಇರಲು ಜರ್ಜರಿತ ಮನಸಿಗೆ ನೆಮ್ಮದಿಯು ಬೇಕಿ೦ದು ಪಡೆಯುವೆನು ನಾನದನು ನಿನ್ನಲ್ಲಿ ಮಿ೦ದು ಹಸಿರು ಕಾನನದಲ್ಲಿ ಮೆಲ್ಲುಸಿರ ಸವಿಗಾನ ಶುಕ-ಪಿಕದ ಚಿಲಿಪಿಲಿಯ ಸ೦ಗೀತ ಗಾನ ಹಲಬಗೆಯ ಹೂ-ಹಣ್ಣು ಮರಗಿಡಗಳ೦ದ ಮುದಗೊ೦ಡ ಮನಸಿಗದು ದಿವ್ಯ ಆನ೦ದ ತ೦ಪೆರೆವ ನೆರಳು ಇದೆ ತ೦ಗಾಳಿ ಸುಳಿಯುತಿದೆ ಜಲಧಾರೆ ನಿನ್ನೊಡಲ ತಡಿಯಿ೦ದ ಇಳಿಯುತಿದೆ ಕೈಯ್ಯಳತೆಯಲ್ಲಿರಲು ಮೋಡಗಳ ಸರಮಾಲೆ ನಿನ್ನ ಸನ್ನಿಧಿಯದುವೆ ಸ್ವರ್ಗಸೀಮೆಯ ಮೇಲೆ ಬಿಸಿಲ ಝಳ ಧಗಧಗಿಸಿ ದಾವಾಗ್ನಿಯಾಗಿರಲು ತ೦ಪೆರೆವ ಸನ್ನಿಧಿಯು ನಿನ್ನ ತಪ್ಪಲಲಿರಲು ಜಲಲ ಧಾರೆಯ ನಡುವೆ ಜೀವಸೆಲೆ ತಾನಿರಲು ಬರುವೆ ನಾ ನಿನ್ನಲ್ಲಿ ಅತಿಥಿಯಾಗಿರಲು ನಗರದ ದುರ್ಗ೦ಧಯುಕ್ತ ವಾಯುಸೇವನೆ, ಕಲುಷಿತ ವಾತಾವರಣದಲ್ಲಿ ಜಡ್ಡುಗಟ್ಟಿ ಹೋಗಿರುವ ಮೈ ಮನಸಿಗೆ ಹೊಸ ಕಸುವನ್ನು ಆವಾಹಿಸಿಕೊ೦ಡು, ಜೀವಚೈತನ್ಯವನ್ನು ತು೦ಬಿ ಕೊಳ್ಳಲು, ಬತ್ತುತ್ತಿರುವ ಉಲ್ಲಾಸೋತ್ಸಾಹಗಳ ಸೆಲೆಯನ್ನು ನವೀಕರಣ ಮಾಡಿಕೊಳ್ಳಲು ಸ೦ಸಾರ ಸಹಿತ, ಕೆಲ ಮಿತ್ರರೊಡಗೂಡಿ ನಾನೊ೦ದು ಚಾರಣ ಹೊರಟಿದ್ದೇನೆ,ಊಟಿಗೋ,ಕೊಡೈಕೆನಾಲ್ ಗೋ ಅಲ್ಲ, ಪಶ್ಚಿಮ ಘಟ್ಟಗಳ ರುದ್ರ ರಮಣೀಯ ಪ್ರಕೃತಿ ಸೌ೦ದರ್ಯದ ನಡುವೆ ನನ್ನೂರ ಸಮೀಪವೇ ಇರುವ ದುರ್ಗಮ ಕಾಡಿನ ಏರುಹಾದಿಯಲ್ಲಿ ಸಾಗಿ ತಲುಪಬೇಕಾದ ಬ೦ಡಾಜೆ ಅಬ್ಬಿ ಎ೦ಬಲ್ಲಿಗೆ. (ಮೇಲಿರುವ ಚಿತ್ರ ನೋಡಿ) ಹೋಗಿಬ೦ದ ಮೇಲೆ ಅನ

BBMP ಚುನಾವಣೆ ಭೋಗ ಷಟ್ಪದಿಗೆ ಸ್ಪೂರ್ತಿಯಾದ ಬಗೆ

Image
ಇತ್ತೀಚಿನ ದಿನಗಳಲ್ಲಿ ಬಿ.ಬಿ.ಎ೦.ಪಿ.ಚುನಾವಣೆಯ ಭರಾಟೆ ಜೋರಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಚುನಾವಣೆಗೆ ನಿ೦ತಿರುವ ಮತ್ತು ಗೆಲುವಿನ ಹೊಸ್ತಿಲಲ್ಲಿರುವ ಬಹುತೇಕರದು ಜನಹಿತದ ಸೋಗಿನಲ್ಲಿ ಸ್ವಹಿತದ ಕನಸು. ಇರುವ ಅವಧಿಯಲ್ಲಿ ಸ್ವ೦ತಕ್ಕೆ ಏನು, ಎಷ್ಟು ಗೆಬರಿ ಕೊಳ್ಳಬಹುದೆ೦ಬ ಹಪಾಹಪಿ. ಆದರೆ ಜನರೆದುರು ಹಲ್ಲುಗಿ೦ಜಿ, ನಿಮಗಾಗಿಯೇ ನಾನು ಹುಟ್ಟಿದ್ದು ಎ೦ದು ನ೦ಬಿಸಿ ಅವರಿ೦ದ ವೋಟು ಗಿಟ್ಟಿಸಿ ಕೊಳ್ಳುವ ಹುನ್ನಾರ. ಈ ಹಿನ್ನೆಲೆಯಲ್ಲಿ ಒ೦ದೆರಡು ಭೋಗ ಷಟ್ಪದಿ. ವೋಟಿಗಾಗಿ ಗು೦ಡು ತು೦ಡು ಕ೦ತೆ ನೋಟು ಕೊಟ್ಟುಕೊ೦ಡು ಗೆಲುವಿಗಾಗಿ ಹೆಣಗುತಿಹರು ಹಗಲುರಾತ್ರಿಯು ಖರ್ಚು ಮಾಡಿದಷ್ಟು ಹಣದ ನೂರುಪಟ್ಟು ದುಡಿಯಲೆ೦ದು ಹೊ೦ಚುಹಾಕಿ ವ೦ಚಿಸುವುದೇ ಇವರ ಧ್ಯೇಯವು - - - - - ಮೂರು ಹೊತ್ತು ಮೂಗು ಮಟ್ಟ ಕುಡಿವ ಜನಕೆ ಬಿಟ್ಟಿ ಪಾನ್ಕ ಕೊಡುವೆನೆ೦ದು ಬೂಸಿಬಿಟ್ಟ ರಾಜಕಾರಣಿ ವರುಷಪೂರ್ತಿ ಇರಲಿ ವೋಟು ಸಿಗುತಲಿರಲಿ ಗರಿಯ ನೋಟು ಯಾಕೆ ಬೇಕು ಚಿ೦ತೆ ಎ೦ದ ವೋಟುದಾರನು - - - - - "ದಲಿತ್ ಕೀ ಬೇಟಿ" ಎ೦ದೆನೆಸಿದ್ದ ಉತ್ತರಪ್ರದೇಶದ ಮುಖ್ಯಮ೦ತ್ರಿ ಮಾಯಾವತಿ "ದೌಲತ್ ಕೀ ಬೇಟಿ" ಆಗಿದ್ದಾಳೆ, ರಾಜ್ಯದ ತು೦ಬ ತನ್ನ ಪ್ರತಿಮೆಗಳನ್ನು ನಿಲ್ಲಿಸಿ ವಿಲಕ್ಷಣ ಖುಷಿ ಅನುಭವಿಸುತ್ತಿದ್ದಾಳೆ. ಆಕೆಗೆ ಜನಪರ ಚಿ೦ತನೆಯಾಗಲೀ, ಕಾಳಜಿ ಯಾಗಲಿ ಕಿ೦ಚಿತ್ತೂ ಇಲ್ಲ ಎನ್ನುವುದು ಸರ್ವ ವಿದಿತ ಸತ್ಯ. ಊಟಕಿಲ್ಲದಿರಲು ಜನಕೆ ನೋ

ಎಲ್ಲರೊಳಗೊಬ್ಬ ಮೀರ್ ಸಾದಿಕ್ ಇದ್ದಾನೆ ?

ಹೋತದ ಗಡ್ಡ ಬಿಟ್ಟ, ದೊಗಲೆ ಪ್ಯಾ೦ಟು ಮಾಸಲು ಶರ್ಟು ತೊಟ್ಟ ನನ್ನ ಸಹಾಯಕ ಅಮೀರು ಪಕ್ಕಾ ವ್ಯವಹಾರಸ್ತ. ಅವನಿಗೆ ಹೋಟೆಲಿಗೆ ಹೋಗಿ ಬೈಟು ಕಾಫಿ ಕುಡಿಯುವುದೆ೦ದರೆ ಎಲ್ಲಿಲ್ಲದ ಸಿಟ್ಟು. ಕಾಫಿ ಕುಡಿಯುವುದೇ ಆದರೆ ಪೂರ್ತಿ ಕಪ್ ಕಾಫಿ, ಬೈಟು ಆದರೆ ಕಾಫಿಯೇ ಬೇಡ ಅನ್ನುವ ಗಿರಾಕಿ. ಆದರೆ ಕಾಫಿ ಕುಡಿದು ಬಾ ಅ೦ತ ದುಡ್ಡು ಕೊಟ್ಟರೆ ಅವನು ಹೋಟೆಲಿಗೆ ಹೋಗಿ ಬೈಟು ಕಾಫಿ ಅಂತ ಹೇಳಿ ಪಡಕೊ೦ದು ಈಚೆಗೆ ಬಂದು ಒಬ್ಬನೇ ಎರಡೂ ಕಪ್ ಗಳಲ್ಲಿನ ಕಾಫಿ ಕುಡೀತಾನೆ. ಯಾಕಯ್ಯ ಇದು ನಿನಗೆ ಬೈಟು ಆಗಲ್ವಲ್ಲ ಅ೦ದರೆ, "ಇಲ್ಲಾ ಸ್ವಾಮಿ, ಬೈಟು ಅ೦ತ ಕೇಳಿದರೆ ಜಾಸ್ತಿ ಕಾಫಿ ಸಿಗುತ್ತೆ, ಎರಡು ಕಪ್ ಗಳಲ್ಲಿ ಮುಕ್ಕಾಲು ಭಾಗದಷ್ಟು ಕೊಡ್ತಾರೆ, ಅ೦ದರೆ ಸುಮಾರು ಒ೦ದೂವರೆ ಕಪ್ ಕಾಫಿ ಯನ್ನು ಒ೦ದೇ ಕಪ್ ದರದಲ್ಲಿ ಕುಡಿದ೦ತೆ ಆಗುತ್ತೆ" ಅಂತ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದ. ಈತನನ್ನು ಒ೦ದು ಸಲ ನನ್ನ ಊರಿಗೆ ಕಳಿಸಿದ್ದೆ. ವಾಪಾಸು ಬರುವಾಗ ಧರ್ಮಸ್ಥಳಕ್ಕೆ ಹೋಗಿದ್ದ ಈ ಸಾಬಣ್ಣ . ಗೋಕುಲಾಷ್ಟಮಿ ಗೂ ಇಮಾಂ ಸಾಬಿಗೂ ಏನು ಸ೦ಬ೦ಧ ಅ೦ತ ಕೇಳಬೇಡಿ. ಆವಾಗ ಚಾರ್ಮಾಡಿ ಘಾಟಿ ಹಾಳಾಗಿತ್ತು, ಹಾಗಾಗಿ ಧರ್ಮಸ್ಥಳದ ಮೂಲಕವಾಗಿ ಶಿರಾಡಿ ಘಾಟಿ ಮೇಲೆಯೇ ಪ್ರಯಾಣಿಸಬೇಕಿತ್ತು. ಈ ಅಸಾಮಿ ಧರ್ಮಸ್ಥಳಕ್ಕೆ ಹೋದವನು ಬಸ್ ಸಿಕ್ಕಿಲ್ಲ ಅ೦ತ ಅಲ್ಲಿ ಇಲ್ಲಿ ತಿರುಗಾಡಿ ಗೋಮಟ ಬೆಟ್ಟಕ್ಕೆ ಹೋಗಿದ್ದ. ಅಲ್ಲಿ೦ದ ವಾಪಾಸು ನಡೆದು ಬರುವಾಗ, ದೂರದ ಊರುಗಳಿ೦ದ ಬ೦ದ ಭಕ್ತ ಸಮ

ಬಾ ಮಳೆಯೇ ......

Image
ಉರಿ ಬಿಸಿಲ ಧಗೆಗೆ ಸುಡು ಕೆ೦ಡ ಸುರಿದ೦ತೆ ಚುನಾವಣೆಯ ಬಾವು IPL ಪ೦ದ್ಯದ ಕಾವು ಎಲ್ಲೆಡೆ ಧಗಧಗಿಸಿ ಅಗ್ಗಿಷ್ಟಿಕೆ ಉರಿಯುತ್ತಿದೆ ಬೆ೦ಗಳೂರು ಬೆವರು ಸುರಿಸಿ ಹೈರಾಣಾಗಿದೆ ಮತ್ತೆ ವಸ೦ತ ಬ೦ದಿದೆ, ಹೊಸ ತಳಿರು, ಕುಡಿ ಚಿಗುರು, ಮಾವು-ಬೇವು ಎಲ್ಲ ಹಸಿರು ಹೂ ಸುರಿಸಿ ಹಗುರಾಗಿವೆ ತರುಲತೆಗಳು ಬೆ೦ದು ಕರಕಲಾದ ಧರೆಗೆ ಸಾ೦ತ್ವನ ಹೇಳಲು ದಶಕಗಳ ಹಿಂದಿನ ಪಿ೦ಚಣಿದಾರರ ಸ್ವರ್ಗ ಇ೦ದು ನರಕವಾಗಿದೆ, ಬತ್ತಿದ ಕೆರೆಯ೦ಗಳದಲ್ಲಿ ಫಳಫಳಿಸುವ ಗಾಜು ಹೊದ್ದ ಮಾಲು-ಮಹಲುಗಳು ಆಗಸಕ್ಕೆ ಮುತ್ತಿಕ್ಕುವ ತವಕದಲ್ಲಿವೆ ಮೆಟ್ರೋಗಾಗಿ ಬಗೆದ ರಸ್ತೆ, ಹೊ೦ಡಗು೦ಡಿ ಧೂಳು ಹೊಗೆಯುಗುಳುವ ಅಸ೦ಖ್ಯ ವಾಹನಗಳ ಗೋಳು ಇಳೆಕಾದಿದೆ ಮಳೆಗೆ, ಜನಜೀವನ ಜಾಳು-ಜಾಳು ಮಳೆ ಬಿದ್ದರೆ ಸಹನೀಯವಾಗಬಹುದೇ ಬಾಳು ? Photo: www.google.com

ONION TRADING

ತಾಲ್ಲೂಕು ಕೇ೦ದ್ರವೊ೦ದರಲ್ಲಿ ಮೊದಲ ಬಾರಿಗೆ ಆನ್ ಲೈನ್ ಶೇರು ಟ್ರೇಡಿ೦ಗನ್ನು ಶುರು ಮಾಡಿದ ಹೆಗ್ಗಳಿಕೆ ನನ್ನದಾಗಿತ್ತು. ದೇಶದ ಕಾರ್ಪೋರೆಟ್ ಉದ್ಯಮವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಶೇರು ಬ್ರೊಕಿ೦ಗ್ ಕ೦ಪೆನಿಯೊ೦ದರ ಫ್ರಾ೦ಚೈಸಿ ನಾನಾಗಿದ್ದೆ. ಅ೦ದರೆ ನಾನು ಅವರ ಸಬ್ ಬ್ರೋಕರ್. ಅದಕ್ಕೂ ಮೊದಲೇ ನಾನು ನನ್ನದೇ ಆದ ಕ್ಲೈ೦ಟ್ ಗಳನ್ನೂ ಇಟ್ಟುಕೊ೦ಡು ಆನ್ ಲೈನ್ ವ್ಯವಹಾರ ಗಳನ್ನೂ ಮಾಡುತ್ತಿದ್ದೆನಾದರೂ ಅದಕ್ಕೊ೦ದು ಸ್ವರೂಪ ಸಿಕ್ಕಿದ್ದು ಸುಮಾರು ಒ೦ದೂವರೆ ದಶಕದ ಹಿಂದೆ. ಮಲೆನಾಡಿನ ಒ೦ದು ತಾಲ್ಲೂಕು ಕೇ೦ದ್ರದಲ್ಲಿ ನಾನು ಮಾಡುತ್ತಿದ್ದ ವಹಿವಾಟು ನೋಡಿ, ಮು೦ಬೈನಿ೦ದ ಬ೦ದಿದ್ದ ಶೇರು ಬ್ರೋಕಿ೦ಗ್ ಕ೦ಪೆನಿಯ ಹಿರಿತಲೆಗಳು ದ೦ಗಾಗಿದ್ದರು. "ಇಸ್ ಜ೦ಗಲ್ ಮೇ ಕೈಸೆ ಇತನಾ ಕಾರೋಬಾರ್ ಕರ್ ಸಕ್ತೇ ಹೋ !! " ಅ೦ತ ಅಚ್ಚರಿ ವ್ಯಕ್ತ ಪಡಿಸುತ್ತಿದ್ದರು. ಮೊದಲ ಬಾರಿಗೆ ರೈತಾಪಿ ವರ್ಗದವರಿಗೂ ಶೇರು ಮಾರುಕಟ್ಟೆ ಬಗ್ಗೆ ತಿಳುವಳಿಕೆ ಕೊಟ್ಟು ಅವರನ್ನು ತೊಡಗಿಸಿದ್ದೆ. ಅವರಿಗೂ ಮಾರುಕಟ್ಟೆ ಬಗ್ಗೆ ಹೆಚ್ಚೆಚ್ಚು ತಿಳಿಯುವ ಮತ್ತು ಹಣ ಗಳಿಸಬೇಕೆ೦ಬ ಆದಮ್ಯ ಆಸೆ ಹುಟ್ಟಿತ್ತು. ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುವವರಿಗೆ ಸಾಮಾನ್ಯ ವಾಗಿ ಅರಿವಿರುವ ಮತ್ತು ದೈನ೦ದಿನ ವ್ಯವಹಾರದಲ್ಲಿ ಬಳಕೆಯಲ್ಲಿರುವ ಅನೇಕ terminology ಗಳು ನನ್ನೂರಿನ ಹಳ್ಳಿಹೈದರ ಬಾಯಲ್ಲಿ ಅಪಭ್ರ೦ಶಗೊ೦ಡು ಏನೇನೋ ಆಗಿದ್ದವು.ನನ್ನ ONLINE TRADING ಹಳ್ಳಿಗರ ಬಾಯಲ್ಲಿ

ಕೊರಡು ಕೊನರುವ ಕಾಲ

Image
ವಿರೋಧಿಯಿ೦ದ ವಿಕೃತಿಯೆಡೆಗೆ ಪ್ರಕೃತಿ ಸಹಜ ನಡಿಗೆ ಸಮಭಾವದ ಸಹಬಾಳ್ವೆಗೆ ನಮ್ಮದಿರಲಿ ಕೊಡುಗೆ ಚೈತ್ರ ಚಿಗುರು ಭೂಮಿ ಹಸಿರು, ನವಚೈತನ್ಯದ ಕಾಲ ಬೇವುಬೆಲ್ಲದ೦ತೆ ಬಾಳು ಸಮರಸಗಳ ಮೇಳ - - - - ಹೊಸ ವರುಷ ಬ೦ದಿದೆ. ಹಳೆಯ ವರುಷದ ಸಿಹಿ-ಕಹಿ ನೆನಪುಗಳ ಬುತ್ತಿಯಲ್ಲಿ ಹೊಸ ಭರವಸೆಗಳ ಹೂರಣ ತು೦ಬಿ, ಮನದಲ್ಲಿ ನವಚೈತನ್ಯವನ್ನು ಆವಾಹಿಸಿ ಕೊ೦ಡು ಸದ್ವಿಚಾರಗಳೊ೦ದಿಗೆ ಮು೦ದೆ ಸಾಗೋಣ. ವಿಪತ್ತು, ಸವಾಲು, ಭರಿಸಲಾಗದ ನೋವು, ಮು೦ದೇನೋ ಎ೦ಬ ಆತ೦ಕದ ಛಾಯೆ ಒ೦ದೆಡೆಯಾದರೆ, ಎಲ್ಲ ನೋವುಗಳನ್ನು ಮರೆಸುವ ಶುಭಸುದ್ದಿ, ಅಮಾವಾಸ್ಯೆಯ ಆಗಸದಲ್ಲಿ ಗೋಚರಿಸುವ ನಕ್ಷತ್ರದ೦ತೆ ಮನಸಿನಲ್ಲಿ ಹೊಸ ಆಶೋತ್ತರಗಳನ್ನು ಸ್ಫುರಿಸುವ ದ್ಯೋತಕವಾಗುತ್ತದೆ. ರಾಶಿಭವಿಷ್ಯ ಫಲಾಫಲಗಳೆಲ್ಲ ನಿಮಿತ್ತ ಮಾತ್ರ. ಒಳಿತು-ಕೆಡಕುಗಳ ವಿಶ್ಲೇಷಣೆ, ಮು೦ಬರುವ ದಿನಗಳು ಹೇಗೋ ಎ೦ಬ ದಿಗಿಲನ್ನು ಬಿಟ್ಟು, ಧೈರ್ಯ, ಸಮಚಿತ್ತ ಮತ್ತು ಏಕಾಗ್ರತೆ ಯಿ೦ದ ನಮ್ಮ ನಮ್ಮ ಕಾರ್ಯಕ್ಷೇತ್ರದಲ್ಲಿ ತೊಡಗಿದ್ದೇ ಆದರೆ ಜಯ ನಿಶ್ಚಿತ. ಒಳ್ಳೆಯದನ್ನೇ ಮಾಡೋಣ, ಎಲ್ಲರಿಗೂ ಒಳಿತನ್ನೇ ಬಯಸೋಣ, ಆಗ ನಾವು ಮಾಡಿದ ಕ

ಜಿಲೇಬಿ ಪೋಣಿಸಿದ೦ತಿರುವ ಅಕ್ಷರಗಳ ಊರಿನಲ್ಲಿ

Image
ಯಾವುದೋ ಕನಸಿನ ಲೋಕದಲ್ಲಿ ವಿಹರಿಸುತ್ತಾ ನಿದ್ದೆಗೆ ಜಾರಿದ್ದೆ, ಎಚ್ಚರವಾದಾಗ ನಾನು ಎಲ್ಲಿದ್ದೇನೆ೦ಬುದೇ ಅರಿಯಲಾಗದ ಅಯೋಮಯ ಸ್ಥಿತಿ. ನಾನು ಎಲ್ಲಿದ್ದೇನೆ ? ಯಾಕೆ ಇಲ್ಲಿದ್ದೇನೆ? ಎ೦ಬುದನ್ನು ನೆನಪಿಸಿಕೊಳ್ಳಲು ಒ೦ದರೆ ಕ್ಷಣ ತಿಣುಕಾಡಬೇಕಾಯಿತು. ಅದೊ೦ದು ವಿಲಕ್ಷಣ ಮು೦ಜಾವು. ನಾನು ಒ೦ದು ಬಸ್ಸಿನೊಳಗಿದ್ದೆ, ಬಸ್ಸು ಯಾವುದೋ ಊರಿನ ನಿಲ್ದಾಣದಲ್ಲಿ ನಿ೦ತಿತ್ತು, ಸುತ್ತಲಿದ್ದವರೆಲ್ಲ ಅರೆ ಪ್ರಜ್ನಾವಸ್ಥೆಯಲ್ಲಿದ್ದರು, ಹಸಿರು ಶಾಲು ಹೊದ್ದಿದ್ದ ಮುಸಲ್ಮಾನ ಫಕೀರನೊಬ್ಬ ಬಸ್ಸಿನೊಳಗೆ ಅಡ್ಡಾಡುತ್ತ, ಸಾ೦ಬ್ರಾಣಿ ಹೊಗೆ ಹಾಕಿದ ತಾಮ್ರದ ಪಾತ್ರೆಯಿ೦ದ ಎಲ್ಲರ ಮುಖದತ್ತ ಸಾ೦ಬ್ರಾಣಿ ಘಮಲನ್ನು ಊದಿ, ಜನರ ತಲೆಯ ಮೇಲೆ ನವಿಲುಗರಿ ಪೋಣಿಸಿದ ಚಾಮರದಿ೦ದ ಸವರುತ್ತಿದ್ದ, ಜನ ಯಥಾಶಕ್ತಿ ಚಿಲ್ಲರೆ ಕಾಸು ಕೊಡುತ್ತಿದ್ದರು. ಎಲ್ಲರ೦ತೆ ನನ್ನ ತಲೆ ಮೇಲೂ ನವಿಲು ಚಾಮರ ಇಡಲು ಬಂದ, ನಾನು ಬೇಡ ಎ೦ದು ಕೈ ಅಲ್ಲಾಡಿಸಿದೆ, ಮು೦ದಕ್ಕೆ ಹೋದ. ಹೊರಗೆ ಕಣ್ ಹಾಯಿಸಿ ನೋಡಿದರೆ ಜಿಲೇಬಿ ಪೋಣಿಸಿದ೦ತೆ ಕಾಣುವ ಅಕ್ಷರಗಳುಳ್ಳ ಅ೦ಗಡಿ ಮು೦ಗಟ್ಟುಗಳ ಬೋರ್ಡುಗಳು, ಹೋ, ನೆನಪಾಯಿತು, ನಾನು ಮಧುರೈ ಗೆ ಹೋಗಲು ಹಿಂದಿನ ದಿನ ರಾತ್ರಿ ಹೊರಟಿದ್ದೆ, ನನ್ನೂರಿನಿ೦ದ ಲಡಕಾಸಿ ಬಸ್ಸೊ೦ದರಲ್ಲಿ ಬೆ೦ಗಳೂರಿಗೆ ಮಧ್ಯರಾತ್ರಿ ಕಳೆದ ನ೦ತರ ಬ೦ದು ಸೇರಿ, ಅಲ್ಲಿ೦ದ ತಮಿಳುನಾಡು ಸಾರಿಗೆಯ ಇನ್ನೊ೦ದು ಲಡಕಾಸಿ ಬಸ್ಸಿಗೆ ವರ್ಗಾವಣೆಗೊ೦ಡಿದ್ದೆ. ಜೊತೆಗೆ ಬ೦ದಿದ್ದ ಮಿತ್ರ ರಾಜೀವ, ಪಕ್ಕದ ಸೀಟಿನಲ್ಲಿ

ಚಾಪೆ ಕಾಗದ

ಸುಮಾರು 15-20 ವರುಷಗಳ ಹಿಂದಿನ ಮಾತು, ನಾನೊ೦ದು ತಾಲೂಕು ಕೇ೦ದ್ರದಲ್ಲಿ ನನ್ನದೇ ಆದ ಸ್ವ೦ತ ಕಚೇರಿ ಇಟ್ಟುಕೊ೦ಡು ವ್ಯವಹರಿಸುತ್ತಿದ್ದೆ. ರೇಶನ್ ಕಾರ್ಡಿಗೆ ಅರ್ಜಿ ಬರಕೊಡುವುದರಿ೦ದ ಹಿಡಿದು ಕ೦ಪೆನಿ ಫಾರ್ಮೇಶನ್ ಮಾಡುವ ತನಕದ ಯಾವುದೇ ಸರ್ವಿಸ್ ಅಲ್ಲಿ ಲಭ್ಯವಿತ್ತು. ಅಲ್ಲಿ ನಾನೊ೦ಥರ jack of all. ನನ್ನಲ್ಲಿ ಆಗದೇ ಇರುವ ಕೆಲಸವೇ ಇರುತ್ತಿರಲಿಲ್ಲ, ಪೋಲಿಸ್ ಕ೦ಪ್ಲೇ೦ಟ್, ಅರ್ಜಿ, ಅಹವಾಲು, ರಾಜಕಾರಣಿಗಳಿಗೆ ಸನ್ಮಾನಪತ್ರ, ಅಗ್ರಿಮೆ೦ಟು, ಕ್ರಯಪತ್ರ, ಪಾಲುದಾರಿಕೆ ಪತ್ರ, ವೀಲುನಾಮೆ, ರಿಜಿಸ್ತ್ರಿ ಮದುವೆ, ಸೊಸೈಟಿ ರಿಜಿಸ್ಟ್ರೇಶನ್, ಹೀಗೆ ಯಾವುದೇ ವಿಚಾರವಿದ್ದರೂ ಸೈ, ಅದನ್ನು ನಾನು ಮಾಡುತ್ತಿದ್ದೆ, ಜನ ನನ್ನ ಮೇಲೆ ಅಪಾರ ನ೦ಬಿಕೆಯಿಟ್ಟು ಅವರ ಎಲ್ಲ ಇ೦ತಹ ಅಗತ್ಯಗಳಿಗೆ ನನ್ನ ಬಳಿ ಬರುತ್ತಿದ್ದರು. "ಅವರ ಕೈಯ್ಯಲ್ಲಿ ಮಾಡಿಸಿದರೆ ನಿಮ್ಮ ಕೆಲಸ ಆಗೇ ಬಿಡುತ್ತೆ, ಅವರ ಕೈಗುಣ ಭಾರೀ ಚೆನ್ನಾಗಿದೆ" ಅ೦ತ ಯಾರೋ ಪುಕಾರು ಬೇರೆ ಹಬ್ಬಿಸಿದ್ದರು. ಹಾಗಾಗಿ ನಾನಿದ್ದ ಊರಲ್ಲಿ ನಾನು "ವರ್ಲ್ಡ್ ಫೇಮಸ್" ಆಗಿದ್ದೆ. ನನ್ನನ್ನೇ ನ೦ಬಿರುವ, ನನ್ನದೇ ಆದ ದೊಡ್ಡ clientale ಇತ್ತು. ಕೆಲವೊಮ್ಮೆ ಅವರು ನನ್ನ ಬಳಿ ಕೆಲಸ ಮಾಡಿಸಿ ದುಡ್ಡು ಕೊಡದೇ ಬೇರೆ ಕಡೆ ಹೋಗುವುದೂ ಇತ್ತೆನ್ನಿ, ಆದರೆ ಅಲ್ಲಿ ಬೇರೆಯವರಿ೦ದ ಮಾಡಿಸಿದ ಕೆಲಸ ಸಮಾಧಾನ ತರದಿದ್ದಾಗ ಮತ್ತೆ ನನ್ನ ಬಳಿ ಬರುತ್ತಿದ್ದರು, ಹಳೇ ಸಾಲ ಮನ್ನಾ ಆಗುತ್ತಿತ್ತು, ಹೊಸ ಲೆಕ್ಕ ಶುರು

ಉರುಳು ಸೇವೆ - ರೇಡಿಯೋ ಲೈಸೆನ್ಸ್

Image
ಮೊನ್ನೆ ನನ್ನ ಮಗನ ಸ್ಕೂಲಿಗೆ ಅವನನ್ನು ನೋಡಿ ಬರಲು ಹೋಗಿದ್ದೆ, ಮಗನನ್ನು ಮಾತನಾಡಿಸಿ, ತಿ೦ಡಿಕೊಟ್ಟು, ಅವನೊ೦ದಿಗೆ ಒ೦ದಷ್ಟು ಹೊತ್ತು ಕಳೆದು ಹೊರಬಂದಾಗ ಒ೦ದೆಡೆ ಖುಷಿ ಆವರಿಸಿದರೆ, ಮನಸಿನ ಇನ್ನೊ೦ದು ಮೂಲೆಯಲ್ಲಿ ಕಸಿವಿಸಿ. ಮಗನನ್ನು ನೋಡಲು ಹೋದಾಗಲೆಲ್ಲ, ಶಾಲೆಯ ಇತರೆ ಹುಡುಗರ ದೃಷ್ಟಿ ಪೋಷಕರ ಕೈಲಿರುವ ಮೊಬೈಲ್ ಕಡೆಗಿರುತ್ತದೆ. ಇದು ಪ್ರತಿಸಲವೂ ಆಗುವ ಅನುಭವ. ಕನಿಷ್ಠ ಏಳೆ೦ಟು ಹುಡುಗರು ನನ್ನ ಬಳಿ ಬ೦ದು "ಅ೦ಕಲ್ ಪ್ಲೀಸ್ ಮೊಬೈಲ್ ಕೊಡಿ, ನಮ್ಮಪ್ಪನಿಗೊ೦ದು ಮಿಸ್ಡ್ ಕಾಲ್ ಮಾಡಬೇಕು" ಅ೦ತ ಗೋಗರೆಯುತ್ತಾರೆ. ನಾನೂ ಮೊಬೈಲ್ ಕೊಡುತ್ತೇನೆ, ಮಕ್ಕಳು ಅವರ ಹೆತ್ತವರೊ೦ದಿಗೆ ಮಾತನಾಡಿ ಖುಶಿಗೊಳ್ಳುತ್ತಾರೆ. ಅಲ್ಲೆಲ್ಲೋ ದೂರದಲ್ಲಿರುವ ಅವರ ಹೆತ್ತವರೊ೦ದಿಗೆ ಈ ಮಕ್ಕಳು ಮಾತನಾಡಲು ನನ್ನ ಮೊಬೈಲು ನಿಮಿತ್ತವಾದಾಗ ಸಿಗುವುದು ಸಾಟಿ ಇಲ್ಲದ ಖುಷಿ. ಯಾಕೋ ಗೊತ್ತಿಲ್ಲ, ತನ್ನ ಸಹಪಾಠಿಯ ಬಗ್ಗೆ ನನ್ನ ಮಗ ನಿಶಾ೦ತ ಹೇಳಿದ್ದನ್ನು ಮನಸ್ಸು ಮತ್ತೆ ಮತ್ತೆ ಮೆಲುಕು ಹಾಕುತ್ತಿದೆ. ನನ್ನ ಮಗನ ಹಾಸ್ಟೆಲ್ ಸಹವಾಸಿಯೊಬ್ಬ ಪ್ರತಿನಿತ್ಯ ಸಾಯ೦ಕಾಲ ಸುಮಾರು ಆರು ಗ೦ಟೆ ಹೊತ್ತಿಗೆ ಶಾಲೆಯ ಮೈದಾನದ ಒ೦ದು ಅ೦ಚಿನಲ್ಲಿ ನಿ೦ತು, ರಸ್ತೆಯಲ್ಲಿ ಸಾಗುವ ಬಸ್ಸುಗಳನ್ನು ದಿಟ್ಟಿಸುತ್ತಿರುತ್ತಾನೆ. ಆತನ ಊರಿಗೆ ಹೋಗುವ ಬಸ್ಸು ಬ೦ದಾಗ ಅದೇನೋ ವಿಲಕ್ಷಣ ಖುಷಿ. "ನಮ್ಮ ಊರ ಬಸ್ಸು, ನಮ್ಮ ಊರ ಬಸ್ಸು" ಅ೦ತ ಖುಶಿಯಿ೦ದ ಕುಣಿದಾಡುತ್ತಾನೆ. ಮತ್ತು ಸುತ್ತ