Posts

Showing posts from February, 2010

ಕಾಣದ ಮಿತ್ರನಿಗೊ೦ದು ನುಡಿಕಾಣಿಕೆ

Image
ನಾನು ಎಲ್ಲರ೦ತಲ್ಲ, ಸ್ವಲ್ಪ ಭಿನ್ನ. ಜೀವನದಲ್ಲಿ ಜಾಸ್ತಿ ಕಹಿ ಉ೦ಡಿದ್ದೇನೆ ಎ೦ಬ ಕಾರಣಕ್ಕೋ ಏನೋ, ಹಾಗಲಕಾಯಿ ನನಗೆ ಅಚ್ಚು ಮೆಚ್ಚಿನ ತರಕಾರಿ. ನನಗೆ ನನ್ನ ಸಮವಯಸ್ಸಿನ ಮಿತ್ರರು ಕಡಿಮೆ. ನನಗಿ೦ತ ಹತ್ತಿಪ್ಪತ್ತು ವರ್ಷ ಕಿರಿಯರು ಇಲ್ಲವೇ ನನಗಿಂತ ಹತ್ತಿಪ್ಪತ್ತು ವರ್ಷ ಹಿರಿಯರು ನನ್ನ ಮಿತ್ರವಲಯದಲ್ಲಿ ಜಾಸ್ತಿ ಇದ್ದಾರೆ. ಕಾರಣ ಏನೆ೦ದು ನನಗೆ ಗೊತ್ತಿಲ್ಲ. ನಾನು ಕೆಲಸ ಮಾಡುವ ಸ್ಥಳದಲ್ಲಿ ನನಗಿಂತ ವಯಸ್ಸಿನಲ್ಲಿ ಕಿರಿಯರು ಅನೇಕ ಮಂದಿ ಇದ್ದಾರೆ ಎ೦ಬ ಕಾರಣಕ್ಕೋ ಗೊತ್ತಿಲ್ಲ, ನನಗಿಂತ ಸುಮಾರು 10 -15 ವರ್ಷ ಕಿರಿಯರು ನನಗೆ ಬೇಗ ಗೆಳೆಯರಾಗಿ ಬಿಡುತ್ತಾರೆ. ಮನೆಯ ಆಸುಪಾಸಿನಲ್ಲಿರುವ ನಿವೃತ್ತ ರಾದ ಬಹುತೇಕ ಜನ ಗೊತ್ತು, ಆದರೆ ಅವರೊ೦ದಿಗೆ ಸ್ನೇಹ ಬೆಳೆಸಲಾಗುವುದಿಲ್ಲ, ಯಾಕೆ೦ದರೆ ಅವರನ್ನು ಸ್ವಂತ ಮನೆಯಲ್ಲಿ ಯಾರೂ ಮಾತನಾಡಿಸುವುದಿಲ್ಲವಾದ್ದರಿ೦ದ ಮನೆಯಿ೦ದ ಹೊರಬಿದ್ದ ಕೂಡಲೇ ಅತೀ ವಾಚಾಳಿಗಳಾಗಿರುತ್ತಾರೆ ಮತ್ತು ಬಹುತೇಕ ಇ೦ಥವರ ಮಾತು ಚರ್ವಿತ ಚರ್ವಣ, ಅದರಲ್ಲಿ ಹುರುಳಿರುವುದಿಲ್ಲ. ಆದರೆ ನನಗೊಬ್ಬ ಹಿರಿಯ ಮಿತ್ರರಿದ್ದಾರೆ, ಶಂಕರನಾರಾಯಣ ಜೋಯಿಸ್ ಅ೦ತ, ನಿವೃತ್ತರು ಸುಮಾರು 66 ವರ್ಷದವರು. ಪ್ರಸ್ತುತ ವಿಚಾರ ಗಳ ಬಗ್ಗೆ ಅಪ್ ಡೇಟ್ ಆಗಿರುವ ತು೦ಬು ವ್ಯಕ್ತಿತ್ವ. ನಮ್ಮದು ನಿರ್ವ್ಯಾಜ ಸ್ನೇಹ, ನನ್ನಿ೦ದ ಅವರಿಗೇನು ಆಗಬೇಕಾಗಿಲ್ಲ, ಹಾಗೆ ಅವರಿ೦ದ ನನಗೆ. ವಾರಕ್ಕೊಂಡೆರದಾವರ್ತಿ ನಾವು ಭೆಟ್ಟಿಯಾಗುತ್ತೇವೆ, ನಾವು ಭೆಟ್ಟಿಯಾಗುವ

ಇದು ಬಜೆಟ್ ಕಾಲ

ಇದು ಬಜೆಟ್ ಕಾಲ, ರೈಲು ಬಜೆಟ್ ಮತ್ತು ಆರ್ಥಿಕ ಬಜೆಟ್ ಮ೦ಡನೆಗೆ ದಿನಗಣನೆಯಾಗುತ್ತಿದೆ. ಫೆಬ್ರವರಿ-24 ರ೦ದು ರೈಲ್ವೆ ಬಜೆಟ್ ಮತ್ತು ಫೆಬ್ರವರಿ-26 ರ೦ದು ಆರ್ಥಿಕ ಬಜೆಟ್ ಮ೦ಡನೆಯಾಗಲಿದೆ. ಈ ಬಾರಿಯ ಒ೦ದು ವಿಶೇಷವೆ೦ದರೆ, ರೈಲು ಮಂತ್ರಿ ಮಮತಾ ಬ್ಯಾನರ್ಜಿ, ಹಣಕಾಸು ಮಂತ್ರಿ- ಪ್ರಣಬ್ ಮುಖರ್ಜಿ ಇವರಿಬ್ಬರೂ ಪಶ್ಚಿಮ ಬಂಗಾಳಕ್ಕೆ ಸೇರಿದವರು. ಈ ಬ್ಯಾನರ್ಜಿ-ಮುಖರ್ಜಿ ಗಳಿ೦ದ ಮಂಡನೆಯಾಗುವ ಬಜೆಟ್ ಅದೆಷ್ಟು ಜನಪರವಾಗಿರುತ್ತೋ ಗೊತ್ತಿಲ್ಲ. 2010 -11 ನೆ ಸಾಲಿಗೆ ಕೇ೦ದ್ರ ಅರ್ಥ ಸಚಿವರು ಸದನದ ಮು೦ದೆ ಮ೦ಡಿಸಲಿರುವ ಆರ್ಥಿಕ ಬಜೆಟ್ ನಲ್ಲಿ ಈ ಬಾರಿ ಹಣದುಬ್ಬರ ನಿಯ೦ತ್ರಣಕ್ಕೆ ಮತ್ತು ಏರುತ್ತಿರುವ ಆಹಾರ ಪದಾರ್ಥ ಗಳ ಬೆಲೆ ತಡೆಗೆ ಪೂರಕವಾದ ಕ್ರಮ ನಿರೀಕ್ಷಿಸ ಲಾಗಿದೆ. ವಿದ್ಯಾ ಕ್ಷೇತ್ರ, ಮುದ್ರಣ ಕ್ಷೇತ್ರ,ಆರ್ಥಿಕ ಸೇವಾ ಕ್ಷೇತ್ರ ದಲ್ಲಿ ವಿದೇಶಿ ಬ೦ಡವಾಳ ಹೂಡಿಕೆಗೆ ದಿಡ್ಡಿಬಾಗಿಲು ತೆರೆದಿಡುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ, ಸೀಮಾಸು೦ಕ ಹೆಚ್ಚಳ, ಗಾರ್ಮೆ೦ಟ್ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ, ವೈಯ್ಯಕ್ತಿಕ ಆದಾಯ ತೆರಿಗೆ ಮಿತಿಯ ಹೆಚ್ಚಳ, ಹೊಸ ಜನಪರ ಯೋಜನೆಗಳ ಘೋಷಣೆ, ಹೀಗೆ ಹತ್ತು ಹಲವು ಕಸರತ್ತು-ಸರ್ಕಸ್ಸು ಗಳ ನಡುವೆ ಆರ್ಥಿಕ ಪ್ರಗತಿಯನ್ನು ಶೇ: 7.5 ರಿ೦ದ 8 ರ ನಡುವೆ ಇರಿಸುವ ಇರಾದೆ ಇದೆ ಎ೦ಬುದು ಪೂರ್ವಭಾವಿಯಾಗಿ ತಿಳಿದು ಬ೦ದಿರುವ ಅ೦ಶ. ಒಟ್ಟಾರೆಯಾಗಿ ಈ ಬಜೆಟ್ ಜನಸಾಮಾನ್ಯರ ಪಾಕೆಟ್ ಫ್ರೆ೦ಡ್ಲಿ ಆಗಲಿದೆ

ಶಾಪ ವಿಮುಕ್ತಿಗೆ ನಾ ಬರಲೇ ?

Image
ಹಸಿರ ಹಾಸಿನಲಿ ಚೆಲುವ ಸೂಸುತಲಿ ಮರಗಿಡಗಳಡಿಯಲಿ ಎಳೆಬಿಸಿಲಿನಲಿ ಬಚ್ಚಿಡಲಾಗದೆ ಬಿಚ್ಚಿ ತೋರುತಲಿ ಲೀನವಾಗಿರುವೆ ನೀನು ಪ್ರಕೃತಿಯ ಮಡಿಲಲಿ ಮುಚ್ಚಿದ ಕಣ್ಣೊಳು ಸುಪ್ತ ಭಾವದಲೆ ಮೌನಮುದ್ರೆಯಲಿ ಶಾಂತ ಕಳೆ ಬಿರುಗೂದಲ ಮೆಳೆ ಹಾರುತ ಅಲೆಯಲೆ ನೀಡಿದೆ ಪ್ರಕೃತಿಗೆ ಜೀವಸೆಲೆ ಸಸ್ಯಶ್ಯಾಮಲೆಯ ನಡುವಲಿ ಪವಡಿಸಿ ಐಹಿಕ ಸುಖಗಳ ತೊರೆದು ಭ್ರಮಿಸಿ ಯಾರಿಗೆ ಕಾದಿಹೆ ಓ ತರಳೆ ? ಶಾಪ ವಿಮುಕ್ತಿಗೆ ನಾ ಬರಲೇ ? ಮಿತ್ರ ಗುರುಪ್ರಸಾದ್ ಅವರ ಬ್ಲಾಗ್ ನಲ್ಲಿದ ಹುಲ್ಲಿನ ಕಲಾಕೃತಿಯೊ೦ದರಿ೦ದ ಪ್ರಭಾವಿತ ನಾಗಿ ಬರೆದ ಕವನ ಇಲ್ಲಿ ಅನಾವರಣಗೊ೦ಡಿದೆ. ಗುರು ಅವರಿಗೊ೦ದು ಸಲಾಮು. Photo: http://guruprsad.blogspot.com/

ಸಿನಿಮಾ ನೋಡು-ಪಾದಯಾತ್ರೆ ಮಾಡು

Image
ಸುಮಾರು 30 ವರ್ಷಗಳ ಹಿ೦ದಿನ ನೆನಪು. ನಾನಾವಾಗ ಪಿ.ಯು.ಸಿ. ಮುಗಿಸಿದ್ದೆ. ನನ್ನನ್ನು ಕಾಲೇಜಿಗೆ ಕಳುಹಿಸುವ ಬಗ್ಗೆ ಮನೆಯೆ೦ಬ ಕೋರ್ಟಿನಲ್ಲಿ ತೀರ್ಪು ನನ್ನ ಪರ ಆಗಿರಲಿಲ್ಲ. ಹಾಗಾಗಿ ಒ೦ದು ವರುಷ ಮನೆಯಲ್ಲೇ ಕೃಷಿ ಕೆಲಸಗಳನ್ನು ಮಾಡುತ್ತಾ, ಗದ್ದೆ ಉಳುಮೆ, ಮಣ್ಣು, ಗೊಬ್ಬರ ಹೊರುತ್ತಾ , ತೋಟದ ಕೆಲಸ ಮಾಡುತ್ತಿದ್ದೆ. ಕೆಲಸದಾಳುಗಳೊ೦ದಿಗೆ ಸೇರಿ ದಿನಪೂರ್ತಿ ಬಿಸಿಲಿಗೆ ಬಿದ್ದು ಕೆಲಸ ಮಾಡುತ್ತಿದ್ದೆ. ನನ್ನ ಜೊತೆಗೆ ಅಣ್ಣನೂ ಇರುತ್ತಿದ್ದ. ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದುದರಿ೦ದ ಚೆನ್ನಾಗಿ ಹಸಿವಾಗುತ್ತಿತ್ತು. ಸಾಗುವಳಿ ಕೆಲಸಗಳು ಮುಗಿದ ನ೦ತರ ಒ೦ದುವಾರ ಬಿಡುವು ಮಾಡಿಕೊ೦ಡು ನಾನು ಮತ್ತು ಅಣ್ಣ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿದ್ದ ಅಕ್ಕನ ಮನೆಗೆ ಹೋಗಿದ್ದೆವು. ಆಗ ಸಿನಿಮಾ ನೋಡುವ ಹುಚ್ಚು ಜೋರಿತ್ತು. ಹಿರಿಯಡ್ಕ ದಿ೦ದ ಉಡುಪಿಗೆ ಸುಮಾರು ಹದಿಮೂರು ಕಿಮೀ ದೂರವಿದೆ. ಸಿನಿಮಾ ನೋಡಿ ಕೃಷ್ಣ ನ ದೇವಸ್ಥಾನಕ್ಕೆ ಹೋಗಿ ಸುತ್ತಾಡಿಕೊ೦ಡು ಬರುತ್ತೇವೆ೦ದು ಹೇಳಿ ನಾವಿಬ್ಬರು ಬೆಳಗ್ಗೆನೇ ಮನೆ ಬಿಟ್ಟಿದ್ದೆವು. ಉಡುಪಿಯ ರಸ್ತೆಗಳಲ್ಲೆಲ್ಲ ಅಡ್ಡಾಡಿ, ಕಬ್ಬಿನರಸ ಕುಡಿದು, ಕೃಷ್ಣ ಮಠಕ್ಕೂ ಹೋಗಿದ್ದಾಯ್ತು. ಇನ್ನೇನು ಸಿನಿಮಾ ನೋಡೋಣ ಅ೦ತ೦ದುಕೊ೦ಡು ಕಲ್ಪನಾ ಥಿಯೇಟರ್ ಕಡೆ ಹೋದರೆ ಜನವೋ ಜನ. ಆಗ ದ್ವಾರಕೀಶರ "ಪ್ರೀತಿ ಮಾಡು ತಮಾಷೆ ನೋಡು" ಚಿತ್ರ ಬಿಡುಗಡೆಯಾಗಿತ್ತು. ನೋಡದೆ ಬ೦ದರೆ ಹೇಗಾಗುತ್ತೆ? ಸರದಿ ಸ

ಸೊಳ್ಳೆಗಳ ಸಾ೦ಗತ್ಯದಲ್ಲೊ೦ದು ಸ೦ಜೆ

Image
ಇದೊ೦ದು ಅಸ೦ಗತ ಅನಿಸಿಕೆ ಅನಿಸಬಹುದೇನೋ ? ನಿನ್ನೆ ರಾತ್ರಿ ಮಲಗಿದ್ದೆ, ನಿದ್ರಾಲೋಕದ ಹಾದಿಯಲ್ಲಿ ಮೆತ್ತಗೆ ಸಾಗುತ್ತಿದ್ದೆ. ಅದೆಲ್ಲಿ೦ದಲೋ ಒ೦ದು ಸೊಳ್ಳೆ ನನ್ನ ಕಿವಿಯ ಬಳಿಸಾರಿ ಸ೦ಗೀತ-ನೃತ್ಯ ಕಾರ್ಯಕ್ರಮವನ್ನು ಉಚಿತವಾಗಿ ನೀಡಿ ನನ್ನ ನಿದ್ರಾಭಂಗ ಮಾಡಿತು. ಮತ್ತೆ ಎದ್ದು ಫ್ಯಾನ್ ಹಾಕಿಕೊ೦ಡು ಮಲಗಿದೆ. ಆದರೆ ನಿದ್ದೆ ಹತ್ತಲೊಲ್ಲದು, ಕಿವಿತುಂಬಾ ಸೊಳ್ಳೆಯ ಗುಯ್ಗುಡುವ ಸ೦ಗೀತ ನಿನಾದ ಅನುರಣಿಸುತ್ತಿತ್ತು. ಸೊಳ್ಳೆ ಸ೦ಗೀತ ಯಾವ ಪ್ರಕಾರಕ್ಕೆ ಸೇರಿದ್ದು, ಹಿ೦ದುಸ್ತಾನಿಯೇ, ಕರ್ನಾಟಕ ಸ೦ಗೀತವೇ, ಅಥವಾ ಎರಡು ಅಲ್ಲದ ಹೊಸ ಪ್ರಕಾರವೇ, ಗೊತ್ತಾಗಲಿಲ್ಲ. ಸೊಳ್ಳೆ ಅದ್ಯಾಕೆ ಕಚ್ಚುವ ಮುನ್ನ ನಮ್ಮ ಕಿವಿಯ ಬಳಿ ಬಂದೆ ಸ೦ಗೀತ ಗಾಯನ ಮಾಡುತ್ತದೆ ಎ೦ಬ ಪ್ರಶ್ನೆ ಮನಸ್ಸನ್ನು ಆವರಿಸಿಬಿಟ್ಟಿತು. ಬಹುಶಃ ಅದು ಹೋದ ಜನ್ಮದಲ್ಲಿ ಸ೦ಗೀತಗಾರನಾಗಿತ್ತೋ ? ಜನ್ಮಾ೦ತರ ಪ್ರವೀಣರೇ ಬಲ್ಲರು. ಸೊಳ್ಳೆಯ ಸ೦ಗೀತಕ್ಕೂ ಒ೦ದು ರಾಗ ಇರಬೇಕಲ್ಲ, ಖ೦ಡಿತ ಇರುತ್ತೆ, ಒ೦ದೊ೦ದು ಊರಿನ ಸೊಳ್ಳೆಗಳದು ಒ೦ದೊ೦ದು ತೆರನಾದ ಸ೦ಗೀತ ಆಲಾಪ. ಆಲಿಸುವವರಿಗೆ ಸ೦ಗೀತದ ಗ೦ಧಗಾಳಿ ಇದ್ದರೆ ಮಾತ್ರ ಅದನ್ನು ಗ್ರಹಿಸಲು ಸಾಧ್ಯ. ಸದ್ಯಕ್ಕೆ ಸೊಳ್ಳೆ ರಾಗಕ್ಕೆ ಹೊಸ ಹೆಸರು ಕೊಡುವ ಯೋಚನೆ ಬಿಟ್ಟು ಬೇರೆಡೆ ಗಮನ ಹರಿಸೋಣ. . ಏಳೆ೦ಟು ವರುಷಗಳ ಹಿ೦ದೆ ನನ್ನ ಮಿತ್ರನೊಡನೆ ಯಾವುದೋ ಕೆಲಸದ ನಿಮಿತ್ತ ಮಧುರೈ ಗೆ ಹೋಗಿದ್ದೆ. ಹೋಟೆಲ್ ಮಹಾರಾಜ ಎ೦ಬ ಒ೦ದು ವಸತಿಗೃಹದಲ್ಲಿ ಒ೦ದು ರಾತ್ರಿ ಉಳಿಯಬೇಕ

ಮಿತ್ರ ಚ೦ದ್ರು ಚಿತ್ರಕ್ಕೊ೦ದು ಕವನ

Image
ಹಸಿರು ಎಲೆಗಳ ನಡುವೆ ನವಿರು ಬಲೆಯನು ಬೀಸಿ ಮಿಕಗಳಿಗೆ ಕಾದಿರುವ ಬೇಟೆಗಾರನು ನೀನು ನಿನ್ನ ತ೦ತ್ರಕೆ ಒಲಿದು ಬಡಪಾಯಿ ತಾ ಬರಲು ಬೀಗಿ ಜ೦ಬವ ಪಡೆವೆ ನಿನ್ನ ನೀ ಮರೆತು ನಿನ್ನ ಬಲೆ ನಿನ್ನ ಮಿಕ ಪ್ರಕೃತಿ ಸೃಷ್ಟಿಯ ಚಳಕ ಬಲೆಗೆ ಬಿದ್ದವರ ಕ೦ಡು ನಿನಗೆ ಮೈ ಪುಳಕ ಶ್ರಮವಿಲ್ಲದೇ ನೀನು ಉಣ್ಣುವೆಯಾ ನಿನ್ನೂಟ ಶ್ರಮದ ನಿಜ ಅರ್ಥವನು ಅರಿತಿಹೆಯಾ ನೀನು ?? ಜೀವನದ ಹಾದಿಯಲಿ ವಿಷವ ಕಕ್ಕುತ ನಡೆವ ಜೀವಿಗಳು ಇಹರಿಲ್ಲಿ ಭುವಿಯಲ್ಲಿ ನೋಡು ಅವರ ನಡೆ-ನಡವಳಿಕೆ ನಿನಗಿ೦ತ ಕ್ರೂರವಿದೆ ಜನರ ರಕ್ತವ ಹೀರಿ ಖುಷಿ ಪಡುವರಲ್ಲ ತನ್ನ ಹಾದಿಗೆ ಬರುವ ಎಲ್ಲರನು ತಳ್ಳುತಲಿ ಮು೦ದರಿವ ಪರಿಯನ್ನು ಅನುಸರಿಪರಿಲ್ಲಿ ಇವರಿಗಿಲ್ಲವು ಯಾರ ನೋವುನಲಿವಿನ ಪರಿವೆ ಅವರ ಜೀವಿತವೊ೦ದೆ ಅವರ ಗುರಿಯು ಬಲೆಯ ಹೆಣೆಯುವ ಜಾಣ್ಮೆ ನಿನ್ನಿ೦ದ ಕಲಿತಿಹರು ಇವರ ತ೦ತ್ರದ ಮುಂದೆ ನಿನದು ಬರಿ ಶೂನ್ಯ ನಿನಗಿ೦ತ ಕ್ರೂರ ಜನ ನಮ್ಮ ನಡುವಲಿ ಇಹರು ನಿನ್ನ ಪರಿಯನು ಮೀರಿ ನು೦ಗಿ ನೊಣೆಯುವರು ಸುಮ್ಮನೆ ಇರಲಾರಾದವನು ಏನೋ ಮೈಮೇಲೆ ಬಿಟ್ಕೊ೦ಡನ೦ತೆ , ಅ೦ದ ಹಾಗಾಯಿತು ನನ್ನ ಪರಿ, ಮಿತ್ರ ಕ್ಷಣ ಚಿ೦ತನೆ ಚ೦ದ್ರು ಅವರು ಬ್ಲಾಗ್ ಅಪ್ ಡೇಟ್ ಮಾಡಿ ಅ೦ತ ಕೇಳಿದಾಕ್ಷಣ ಯಾವುದಾದರು ಚಿತ್ರ ಕಳಿಸಿ ಅ೦ತ ಅವರಿಗೆ ಹೇಳಿದ್ದು ಕೇವಲ ಔಪಚಾರಿಕ. ಆದರೆ ಅವರೋ ಮರುನಿಮಿಶದಲ್ಲೇ ಚಿತ್ರ ಕಳಿಸಿ ಕರೆ ಮಾಡಬೇಕೆ ?ಈ ಹ೦ತದಲ್ಲಿ ತಯಾರಾದ ಕವನವಿದು. ಹೇಗಿದೆಯೆ೦ದು ಗೊತ್ತಿಲ್ಲ. ಚಿತ್ರ ಕಳಿಸಿ ಸ್ಫೂರ್ತಿ ಕೊಟ್ಟ ಚ೦ದ್

ಪದ್ಮಶ್ರೀ ಪಡಪೋಶಿ

ಪ್ರಚಾರ, ವಶೀಲಿಬಾಜಿ, ಜಾತಿರಾಜಕೀಯ, ಇ೦ತಹ ಅಸ್ತ್ರ-ಪ್ರತ್ಯಸ್ತ್ರ ಗಳನ್ನೂ ಕರತಲಾಮಲಕ ಮಾಡಿಕೊ೦ಡವರಿಗೆ ಮಾತ್ರ ಇ೦ದು ಸಾರ್ವಜನಿಕವಾಗಿ ಮಣೆ ಹಾಕುವ ಪರಿಪಾಠ ಎಲ್ಲೆಡೆ ವ್ಯಾಪಕವಾಗಿದೆ. ಯಾವ್ಯಾವುದೋ ಮೂಲಗಳಿ೦ದ ದುಡ್ಡು, ಹೆಸರು ಮಾಡಿರುವ ಜನ ಪ್ರಶಸ್ತಿಗಳಿಗೆ ಲಾಬಿ ಮಾಡಿ ಯಶಸ್ವಿಯಾಗುತ್ತಿರುವಾಗ, ಪುರಸ್ಕಾರಗಳಿಗೆ ಅರ್ಹರಾದ ವ್ಯಕ್ತಿ ಗಳು ಎಲೆಮರೆಯಲ್ಲಿ ಬಾಡಿ ಹೋಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸರಕಾರೀ ಕೃಪಾ ಪೋಷಿತ ಆಯ್ಕೆ ಮ೦ಡಲಿಯಿ೦ದ ಪ್ರಕಟವಾಗುತ್ತಿರುವ ಪದ್ಮಪ್ರಶಸ್ತಿ ಗಳು ಇದಕ್ಕೆ ಹೊರತಲ್ಲ. ಪದ್ಮ ಪ್ರಶಸ್ತಿಗೆ ಶಿಫಾರಿತ ಗೊಳ್ಳುತ್ತಿರುವವರು ಮತ್ತು ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಿರುವ ಜನರ ರಾಶಿಯಲ್ಲಿ ಗಟ್ಟಿಕಾಳಿಗಿ೦ತ ಜೊಳ್ಳು ಕಾಳುಗಳೇ ಜಾಸ್ತಿ ಇದ್ದ೦ತಿದೆ. ಈ ರೀತಿಯ ಪ್ರಶಸ್ತಿಗಳ ಖರೀದಿ ಮಾಡಿ ತಮ್ಮ ಮನೆಯ ಶೋಕೇಸ್ ತು೦ಬಿಸಿಕೊಳ್ಳುವುದೆ೦ದರೆ ಕೆಲವರಿಗೆ ಎಲ್ಲಿಲ್ಲದ ಉತ್ಸಾಹ. ಸರಕಾರ ಕೂಡ ಹೆಚ್ಚೆಚ್ಚು ಮ೦ದಿ ಅಪಾತ್ರರನ್ನೇ ಆಯ್ಕೆ ಮಾಡುತ್ತಾ ಪದ್ಮ ಪ್ರಶಸ್ತಿಗಳನ್ನು ಕಳ್ಳೆಪುರಿಯ೦ತೆ ಹ೦ಚುತ್ತಾ, ಆ ಪ್ರಶಸ್ತಿಗಳಿಗಿದ್ದ ಮಾನ-ಮರ್ಯಾದೆ ಹರಾಜು ಹಾಕುವ ಕೆಲಸವನ್ನು ಮಾಡುತ್ತಾ ಬ೦ದಿದೆ. ನಮ್ಮ ನಾಡಿನ ಹಿರಿಮೆ ಗರಿಮೆಗಳ ಪ್ರತೀಕದ೦ತಿದ್ದ ಮೇರು ವ್ಯಕ್ತಿಗಳು ಪಡೆದ ಪದ್ಮ ಪ್ರಶಸ್ತಿಗಳನ್ನು ಇ೦ದು ಪಡಪೋಷಿಗಳು ಕೂಡ ಪಡೆಯುತ್ತಿದ್ದಾರೆ. ಪದ್ಮ ಪ್ರಶಸ್ತಿ ಎ೦ಬುದು ಸ೦ತೆಯಲ್ಲಿ ಖರೀದಿ ಮಾಡಿ ತರುವ ವಸ್ತುವಿನ೦ತೆ