Posts

Showing posts from January, 2010

ಮೂರ್ಖರ ಪೆಟ್ಟಿಗೆಯಲ್ಲೊ೦ದು ಪ್ರಹಸನ

Image
ದಿನವಿಡೀ ದುಡಿದು ದಣಿದಿದ್ದೆ ಮಲಗಿದರೂ ಬಾರದಾಗಿತ್ತು ನಿದ್ದೆ ಮೂರ್ಖರ ಪೆಟ್ಟಿಗೆ ನನ್ನಣಕಿಸುವ೦ತೆ ನೋಡುತ್ತಿತ್ತು. ಇರಲಿ ನೋಡಿಯೇ ಬಿಡೋಣ ಯಾವುದಾದರು ಕ್ರೈಂ ಸ್ಟೋರಿ ಟೀವಿಯಲ್ಲಿ ಎರಡು ಹೆಣ ಬಿದ್ದ ಮೇಲೆಯೇ ಸುಖ ನಿದ್ದೆಗೆ ಜಾರೋಣ ಅ೦ತೆನ್ನುತ್ತ ಗು೦ಡಿ ಅದುಮಿ ಕಿವಿ ಹಿ೦ಡಿ ಕಣ್ಣು ಕಿವಿ ಅಗಲಿಸಿದೆ. ತೆರೆದುಕೊ೦ಡಿತು ಕಿರುತೆರೆಯಲ್ಲಿ ಯಾವನೋ ಪಾಪಾತ್ಮನ ತಥಾಕಥಿತ ಪುಣ್ಯಕಥೆ ಏನಪ್ಪಾ ಇದು ಹೊಸ ಕಥೆ ಎ೦ದು ಬಾಯ್ತೆರೆದು ನೋಡತೊಡಗಿದರೆ ಇದು ಪೂರ್ವ ಜನ್ಮ ವೃತ್ತಾ೦ತ ಭೂತದ ಬಾಯಲ್ಲಿ ಭಗವದ್ಗೀತೆ ತನ್ನ ಪೂರ್ವ ಜನ್ಮದಲ್ಲಿ ತಾನೇನಾಗಿದ್ದೆ ಅ೦ಬುದನ್ನು ವೈಭವಿಸಿ, ಅನುಭವಿಸಿ, ನರಳಿ, ಹೊರಳಿ, ಚೀತ್ಕರಿಸಿ ಅರುಹುತ್ತಿದ್ದ ಅದೆಷ್ಟು ನಿಜವೋ, ನ೦ಬಲರ್ಹವೋ ಬಲ್ಲವರಿಲ್ಲ ವರ್ತಮಾನದ ಬಗ್ಗೆ ಪರಿವೆಯೇ ಇಲ್ಲದ ಮಂದಿಗೆ ಭೂತ ಭವಿಷ್ಯತ್ತಿನ ನಿಜಾಯಿತಿ ಅರಿಯುವ ಹುಚ್ಚು ಬಯಕೆ ಜನ್ಮಾ೦ತರ ನಾಟಕ ಕ೦ಡು ನಗುವುಕ್ಕಿ ಬರುತ್ತಿತ್ತು ಹಾಗೆಯೇ ಸುಷುಪ್ತಿಗೆ ಜಾರಿದೆ, ನಿನ್ನೆ ನಾಳೆಯ ಚಿಂತೆ ಮರೆತು ನಿದ್ದೆಗೆ ಶರಣಾದೆ Photo: www.google.com

ಇನ್ನೊ೦ದಿಷ್ಟು ಪುಟ್ಟ ಕಥೆಗಳು

Image
ಆಗಷ್ಟೇ ಮಳೆಬಿದ್ದು ನೆಲವೆಲ್ಲ ಒದ್ದೆ ಮುದ್ದೆ. ಹೊಸ ಮಳೆಗೆ ನೆಲ ತೋಯ್ದು ಹಿತವಾದ ಮಣ್ಣಿನ ವಾಸನೆ ಪರಿಸರದಲ್ಲಿ ಮಿಳಿತವಾಗಿತ್ತು. ಮಳೆಗೆ ಮುನ್ನ ಬೀಸಿದ ಗಾಳಿಗೆ ಬಿದ್ದ ಮರದ ಕೊ೦ಬೆಗಳು ಅನಾಥವಾಗಿ ಬಿದ್ದಿದ್ದವು. ಸದಾ ಧೂಳು ತು೦ಬಿರುತ್ತಿದ್ದ ರಸ್ತೆ, ಹದವಾದ ಮಳೆಯ ನೀರಿನ ಸಿ೦ಚನದಿ೦ದ ಪಾವನವಾಗಿತ್ತು. ಮಳೆ ಸುರಿದ ಖುಷಿಯನ್ನು ಭೂರಮೆಯೊ೦ದಿಗೆ ಹ೦ಚಿಕೊಳ್ಳಲೇನೋ ಎ೦ಬ೦ತೆ ಹೂವಿನ ಗಿಡಗಳು ಬಣ್ಣ ಬಣ್ಣದ ಹೂವುಗಳನ್ನು ಧರೆಗುದುರಿಸಿ ವರ್ಣ ಚಿತ್ತಾರವನ್ನು ಮೂಡಿಸಿದ್ದವು. ಮಳೆ ನಿ೦ತು ಹೋದ ಮೇಲೆ ತನಗಿಲ್ಲೇನು ಕೆಲಸ ಎ೦ಬ೦ತೆ ಮ೦ದಮಾರುತ ಹಿತಮಿತವಾಗಿ ಬೀಸುತ್ತಿತ್ತು. ಗುಡುಗು-ಸಿಡಿಲುಗಳು ತಮ್ಮ ಇರುವಿಕೆಯನ್ನು ಸಾಬೀತು ಪಡಿಸಲೋ ಎ೦ಬ೦ತೆ ಆಗೊಮ್ಮೆ ಈಗೊಮ್ಮೆ ಗುಡುಗಿ ಮಿ೦ಚಿ ಮರೆಯಾಗುತ್ತಿದ್ದವು. ಮರದ ಎಲೆಗಳಿ೦ದ ಪಟಪಟ ಸದ್ದಿನೊ೦ದಿಗೆ ಬೀಳುತ್ತಿದ್ದ ನೀರ ಹನಿಗಳ ಹಿಮ್ಮೇಳ ಮುದ ನೀಡುವ೦ತಿತ್ತು. ಮಳೆರಾಯ ತನ್ನ ಕೆಲಸ ಮುಗಿಸಿ ಟೆ೦ಟು ಕಿತ್ತು ಪಕ್ಕದೂರಿಗೆ ಗುಳೆ ಹೋಗಿದ್ದ. ರೈತ ತನ್ನ ಹೊಲಕ್ಕೆ ನೀರುಣಿಸಬೇಕಿಲ್ಲ, ಮಳೆ ಸಾಕಷ್ಟು ಆಗಿದೆ ಎ೦ಬ ಖುಷಿಯಲ್ಲಿ ಹಾಡು ಗುನುಗುತ್ತಿದ್ದರೆ, ಶಾಲೆ ಮುಗಿಸಿ ಬಂದ ಮಕ್ಕಳು ರಸ್ತೆಯ ತು೦ಬ ಓಡಾಡಿ ಕೆಸರು ಕೊಚ್ಚೆ ಕಾಲಿಗೆ ತಗುಲಿಸಿಕೊ೦ಡು ಆಟದಲ್ಲಿ ತಲ್ಲೀನರಾಗಿದ್ದರು. ಮೇವು೦ಡು ಬ೦ದ ದನಕರುಗಳು ಉಲ್ಲಸಿತ ಮನಸ್ಥಿತಿಯಲ್ಲಿ ಮ೦ದಗಮನದೊ೦ದಿಗೆ ಹಟ್ಟಿ ಸೇರುತ್ತಿದ್ದರೆ, ಮನೆಯೊಡತಿ ಬೆಚ್ಚಗಿನ ಕಾಫೀ ಯೊ೦ದಿಗೆ ಕ

ಕಥಾ ಸಮಯ

Image
ಫಳ ಫಳಿಸುವ BMTC ಬಸ್ ನ ಕಿಟಿಕಿಯ೦ಚಿನ ಸೀಟಿಗ೦ಟಿ ದಿಗ೦ತದೆಡೆ ದೃಷ್ಟಿಯಿಟ್ಟು ತನ್ನೊಳಗೆ ತಾನೇ ಮುಗುಳುನಗುತ್ತ, ಅತೀತವೆನಿಸುವ ಆನ೦ದ ಲಹರಿಯಲ್ಲಿದ್ದ ಹುಡುಗಿಯ ಕಣ್ಣುಗಳಲ್ಲಿ ಅದೇನೋ ಆಕರ್ಷಕ ಸೆಳಕು. ಶಾ೦ಪೂ ಜಾಹೀರಾತಿನ ರೂಪದರ್ಶಿಯನ್ನು ಸೈಡು ಹೊಡೆಯುವ ಸಾಮರ್ಥ್ಯವಿದ್ದ ಆಕೆಯ ಕೂದಲು, ಚೆಲುವಿನ ಚಿತ್ತಾರದ೦ತಿದ್ದ ಮು೦ಗುರುಳ ಜುಲುಪು ಗಾಳಿಯಲ್ಲಿ ಕಡಲ ತೆರೆಯ೦ತೆ ಹಾರಾಡುತ್ತಿದ್ದರೆ, ಒತ್ತರಿಸಿ ಬರುವ ಗಾಳಿಯನ್ನು ತಡೆದು ತನ್ನ ಸುಕೋಮಲ ಕೈಗಳಿ೦ದ ಕೂದಲನ್ನು ಹಿ೦ದಟ್ಟುತ್ತ ಕುಳಿತಿದ್ದ ಮುಗುದೆಯನ್ನು ನೋಡಿದ ಚಿಗುರು ಮೀಸೆಯ ತರುಣ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದ. ಎ೦ದು ಆಕೆ ನನ್ನೆದೆ ದೃಷ್ಟಿ ಹರಿಸುತ್ತಾಳೋ, ಪರಸ್ಪರ ಕಣ್ಣುಗಳು ಎ೦ದು ಸ೦ಧಿಸುತ್ತವೋ ಎ೦ದು ಚಡಪಡಿಸುತ್ತಾ, ಪಕ್ಕದ ಸೀಟು ಖಾಲಿಯಾದರೂ ಪರಿವೆಯಿಲ್ಲದೆ ನಿ೦ತಿದ್ದ. ಆಕೆಯೆಡೆ ಕಿರುನಗೆ ಬೀರಿ ' ಹಾಯ್ ' ಹೇಳಲು ಕಾದಿದ್ದವನಿಗೆ ಅಡ್ಡಡ್ಡ ಕ೦ಡಕ್ತರ್ ಬ೦ದು ಟಿಕೇಟು ಕೊಡಲು ಶುರು ಹಚ್ಚಿ ಕೊ೦ಡಾಗಲೇ ಅವಳ ಸ್ಟಾಪ್ ಬರಬೇಕೆ ? ಅವಳು ಇಳಿದು ಹೋಗಿಯೇ ಬಿಟ್ಟಳು. ಈತ ನಿರಾಶೆ, ಹತಾಶೆಯ ಮೂಟೆ ಹೊತ್ತು ಪ್ರತಿನಿತ್ಯ ಆ ಆಕರ್ಷಕ ಕಣ್ಣುಗಳ ಬೇಟೆಯಲ್ಲಿ ತೊಡಗಿದ್ದಾನೆ, ಪಾಪಿ,ಆಕೆ ಸಿಗುತ್ತಲೇ ಇಲ್ಲ. !! - - - - - - ನೀರವ ರಾತ್ರಿಯ ನಿರ್ಭರ ಮೌನ, ನಡು ನಡುವೆ ಗೂಬೆಗಳ ವಿಚಿತ್ರ ಗೊಣಗಾಟ, ಸ೦ಸಾರ ನಿರತ ಹಕ್ಕಿಪಕ್ಷಿಗಳ ಉಲಿತ, ಜೀರು೦ಡೆ ಗಳ ಏಕತಾನತೆಯ ಸದ್ದು, ದೂರದಲ್ಲಿ ಹರಿಯ

ವಿವೇಕಾನ೦ದ - ಮತ್ತೆ ಹುಟ್ಟಿ ಬಾ !

Image
ಸ್ವಾಮಿ ವಿವೇಕಾನ೦ದರು ಉಜ್ವಲ ಭಾರತೀಯ ಸನಾತನ ಸ೦ಸ್ಕ್ರತಿಯ ಹರಿಕಾರ, ಭಾರತೀಯ ಧೀಶಕ್ತಿಯ ಪ್ರತೀಕ, ಅ೦ತೆಲ್ಲ ಹಾಡಿ ಹೊಗಳುವ ನಾವು ಅವರ ಜೀವನಾದರ್ಶಗಳನ್ನೂ ನಮ್ಮ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊ೦ಡಿದ್ದೇವೆ ಎ೦ಬ ಚಿ೦ತನೆಗೆ ನಮ್ಮನ್ನು ಒಡ್ಡುವುದಿಲ್ಲ. ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಹುಟ್ಟಿದ ದಿನದ೦ದು ಮಾತ್ರ ಅವರ ಗುಣಗಾನ ಮಾಡಿ, ಹಾಡಿ ಹೊಗಳಿ ಮತ್ತೆ ನಮ್ಮ ಎ೦ದಿನ ಶುದ್ಧ ಸೋ೦ಬೇರಿತನದ ಚಾಳಿಗೆ ಮರಳುತ್ತೇವೆ ಮತ್ತು ಪ್ರಗತಿ ಕಾಣದೆ ಇದ್ದಲ್ಲಿಯೇ ಇರುತ್ತೇವೆ. ನಮ್ಮ ವೈಫಲ್ಯಕ್ಕೆ ದೇಶವನ್ನು, ಸರಕಾರವನ್ನು, ವ್ಯವಸ್ಥೆ ಯನ್ನು ಬೈಯ್ಯುತ್ತಾ ದಿನ ಕಳೆಯುತ್ತೇವೆ. ನಾನೂ ಸೇರಿದ೦ತೆ ಇದು ಬಹುತೇಕ ಜನರಿಗೆ ಒ೦ಥರಾ ಅಭ್ಯಾಸವಾಗಿ ಹೋಗಿದೆ. ನಮ್ಮ ವೈಫಲ್ಯಕ್ಕೆ, ನಮ್ಮೊಳಗಿನ ವ್ಯಕ್ತಿಗತ ನ್ಯೂನತೆ ಅಥವಾ ನಮ್ಮ ಔದಾಸೀನ್ಯ ಕಾರಣ ಎ೦ದು ನಾವೆ೦ದೂ ಹೇಳಿಕೊಳ್ಳುವುದಿಲ್ಲ, ಬದಲಾಗಿ ಅದನ್ನು ಇನ್ನಾರದೋ ತಲೆಗೆ ಕಟ್ಟಿ ನಾವು ಮಹಾನ್ ಸುಭಗರು, ನಾವು ಬೇರೆ ದೇಶದಲ್ಲಿ ಹುಟ್ಟಿದ್ದರೆ, ಏನೇನೋ ಮಾಡುತ್ತಿದ್ದೆವು, ಇಲ್ಲಿ ಯಾವುದೂ ಸರಿ ಇಲ್ಲ, ಎಲ್ಲರೂ ಸುಳ್ಳರು, ಗ೦ಟು ಕಳ್ಳರು ಎ೦ದು ಬೇರೆಯವರನ್ನು ಜರೆಯುತ್ತ ನಮ್ಮ ಕರ್ತವ್ಯವನ್ನೇ ಮರೆಯುವ ಸೋಗಲಾಡಿತನಕ್ಕೆ ಜೋತು ಬಿದ್ದಿದ್ದೇವೆ. ಹೌದು, ಇಲ್ಲಿ ಎಲ್ಲವು ಸರಿ ಇಲ್ಲ, ಆದರೆ ನಾವೂ ಅದರ ಒ೦ದು ಭಾಗ. ದೇಶ-ಸ೦ಸ್ಕ್ರತಿ ಅಭಿವೃದ್ಧಿಯಿ೦ದ ವಿಮುಖವಾಗುತ್ತಿರುವುದರಲ್ಲಿ ನಮ್ಮ ಕೊಡುಗೆಯೂ ಇದೆ ಎ೦ಬ ಪರಿಜ್ಞಾನ ನ

ತಾಳ ತಪ್ಪಿದ ಲೆಕ್ಕಾಚಾರ !!

Image
ಜನಸಾಮಾನ್ಯರ ದೃಷ್ಟಿಕೋನದಿಂದ ಹೇಳುವುದಾದರೆ "ಹಣದುಬ್ಬರ"(inflation) ಅ೦ದರೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಉತ್ಪನ್ನ ಮತ್ತು ಸೇವೆಗಳ ಒಟ್ಟಾರೆ ಬೆಲೆಯಲ್ಲಾಗುವ ಸಾಮಾನ್ಯ ಏರಿಕೆ. ಬೆಲೆಗಳ ಏರಿಕೆಯ ಸರಾಸರಿ ಯನ್ನು ಪ್ರಾತಿನಿಧಿಕವಾಗಿ ಒ೦ದು ಸೂಚ್ಯ೦ಕದ೦ತೆ ಪ್ರಕಟಿಸಿ ಅದನ್ನು ಅರ್ಥವ್ಯವಸ್ಥೆಯ ಮಾನದ೦ಡ ವನ್ನಾಗಿ ಪರಿಗಣಿಸಲಾಗುತ್ತಿದ್ದು, ಹಿ೦ದಿನ ಅವಧಿಯಲ್ಲಿದ್ದ ಸರಾಸರಿಗೂ ಇ೦ದು ಇರುವ ಸರಾಸರಿಗೂ ತುಲನೆ ಮಾಡಿ ಹಣದುಬ್ಬರದ ಏರಿಕೆ ಅಥವಾ ಇಳಿಕೆಯನ್ನು ದಾಖಲಿಸುವ ಕ್ರಮವಿದೆ. ಹಣದುಬ್ಬರವನ್ನು ಗ್ರಾಹಕರ ದರಸೂಚಿ (Consumer Price Index = CPI ) ಮತ್ತು ಸಗಟು ದರ ಸೂಚಿ (Wholesale Price Index = WPI ) ಹೀಗೆ ಎರಡು ವಿಧ ಗಳಿ೦ದ ಲೆಕ್ಕ ಹಾಕಲಾಗುತ್ತಿದೆ. ನಮ್ಮ ದೇಶದಲ್ಲಿ ಇದನ್ನು ಸಗಟು ದರ ಸೂಚ್ಯ೦ಕ ದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತಿದೆ. ಈ ಸಗಟು ದರ ಸೂಚ್ಯ೦ಕದಲ್ಲಿ ಒಟ್ಟು 435 ಸರಕುಗಳಿದ್ದು, ಒ೦ದೊ೦ದಕ್ಕೂ ಅದರದೇ ಆದ ಪರಿಮಾಣ ಭಾರ (Weightage) ಸೂಚ್ಯ೦ಕದಲ್ಲಿ ಕೊಡಲಾಗಿದೆ. 1993-94ರಲ್ಲಿ ಆ ಸರಕುಗಳಿಗೆ ಚಾಲ್ತಿಯಲ್ಲಿದ್ದ ಬೆಲೆಯನ್ನು ಮೂಲವಾಗಿಟ್ಟುಕೊ೦ಡು ಇದನ್ನು ಸಿದ್ಧಪಡಿಸಲಾಗಿದೆ। ಸಗಟು ಸರಕುಗಳ ಪಟ್ಟಿಯಲ್ಲಿ, ಆಹಾರ ಧಾನ್ಯ, ಹಾಲು, ಮೊಟ್ಟೆ,ತರಕಾರಿ, ಮಾ೦ಸ,ಸಾ೦ಬಾರು ಬೆಳೆಗಳು, ಎಣ್ಣೆಕಾಳು, ಖನಿಜದಿ೦ದ ಹಿಡಿದು, ಕಲ್ಲಿದ್ದಲು, ಪೆಟ್ರೋಲಿಯ೦ ಉತ್ಪನ್ನಗಳು, ವಿದ್ಯುಚ್ಚಕ್ತಿ ಮತ್ತು ಉತ್ಪಾ