ಕಿಸ್ಸಾ ಕುರ್ಸೀ ಕಾ !!


ಯೆಡ್ಡಿ-ರೆಡ್ಡಿ ಬಣಗಳ ನಡುವೆ ಹಣಾಹಣಿ ಪ೦ದ್ಯ
ಗೆದ್ದವನಿಗೆ ಗದ್ದಿ, ಸೋತವನಿಗೆ ಅವಮಾನದ ಲದ್ದಿ
ಪರ-ವಿರೋಧದದ ಸ್ಕೊರುಗಳ ಸ೦ಖ್ಯೆ ಬದಲಾಗುತಿದೆ

ನೆರೆ ಸ೦ತ್ರಸ್ತರನು ನಡು ನೀರಲ್ಲೇ ಕೈಬಿಟ್ಟು
ಪರಿಹಾರ-ಪಾದಯಾತ್ರೆ ನಾಟಕಕೆ ತಿಲಾ೦ಜಲಿ ಇಟ್ಟು
ತನ್ನ ಪುನರ್ವಸತಿಗೇ ಪರದಾಡುವಂತಾಯ್ತಲ್ಲ ಗುರುವೇ

ವಿಧಾನಸೌಧ ಮಸುಕಾಗಿದೆ ಬಡಿದು ಗಣಿಧೂಳು
ಜನಹಿತ-ಅಭಿವೃದ್ಧಿ ಎಲ್ಲವೂ ಬರಿ ಓಳು
ಗೋಣು ಆಡಿಸುವ ಕುರಿಗಳು-ಗೋಡೆ ಮೇಲೆ ನಿ೦ತ ಕಪಿಗಳು
ನಿಷ್ಠೆ ಬದಲಿಸುವ ಗೋಸು೦ಬೆಗಳು
ಎಲ್ಲರೂ ಇದ್ದಾರೆ ಮೋಜುಮಜಾ ನಡುವೆ
ಯಾರಿಗೂ ಬೇಕಿಲ್ಲ ಜನಹಿತದ ಗೊಡವೆ

ಹೇ ಜನಾರ್ಧನಾ, ಕರುಣಾಕರಾ,ಸೋಮಶೇಖರಾ, ಶ್ರೀರಾಮಾ
ಜಗದೀಶ್ವರಾ, ಯೆಡಿಯೂರ ಸಿದ್ಧಲಿ೦ಗೇಶ್ವರಾ,
ನಿನ್ನ ಹೆಸರ ಜನರೆಲ್ಲ ಭ್ರಷ್ಟರಾಗಿಹರಲ್ಲ, ಓ ದೇವಾ
ಅವರಿತ್ತ ಚಿನ್ನದ ಟೊಪ್ಪಿಗೆ ಮನಸೋತು
ನೀನೂ ಶಾಮೀಲಾಗಿರುವ ಅನುಮಾನವಿದೆ
ಅಕಟಕಟಾ - ಮತಿ ನೀಡಲಾರೆಯಾ ಈ ಹುಲು(ಳು)ಮಾನವರಿಗೆ
ಚಿತ್ರ: flickr.com

Comments

ಮನಸು said…
ಸರ್,
ಚೆನ್ನಾಗಿ ಬರೆದಿದ್ದೀರಿ... ತಕ್ಷಣದ ಪರಿಸ್ಥಿತಿ ಹಾಗೇ ಇದೆ ಹಹಹ.. ಗದ್ದಿ ಮತ್ತು ಲದ್ದಿ ಯಾರಿಗೆಂದು ಕಾದುನೋಡಬೇಕಿದೆ. ಹಹ

ಮನಸು
ಸರ್,
ನಿಜಕ್ಕೂ ಸತ್ಯ, ಬಿ ಜೆ ಪಿ ಕಾಂಗ್ರೆಸ್ಸ್ ಗಿಂತಲೂ ಕೆಟ್ಟದಾಗುತ್ತಿದೆ,
ಎಲ್ಲರಿಗೂ ಅಧಿಕಾರ ಬೇಕು ಅಷ್ಟೇ
ಸುಂದರ ಕವನ
Guruprasad said…
ವಾಸ್ತವತೆಯ ಪ್ರತಿಬಿಂಬದ ಕವನ ,, ಚೆನ್ನಾಗಿ ಇದೆ...
BJP ಬಂದು ಏನೋ ಉದ್ದಾರ ಮಾಡ್ತಾರೆ ಅಂತ ಅನ್ಕೊಂದ್ವಿ... ಏನಕ್ಕೂ ಲಯಕ್ಕ್ ಇಲ್ಲ... ಬರಿ ಒಳಜಗಳ... ಅಂತರಿಕ ಕಲಹದಿಂದ ಅಭಿವೃದ್ದಿಯನ್ನೇ ಕಾಣುತ್ತ ಇಲ್ಲ....
sunaath said…
ಪರಾಂಜಪೆಯವರೆ,
ಅತ್ಯುತ್ತಮ ವಿಡಂಬನೆಗೆ ಈ ಕವನ ಉತ್ತಮ ಉದಾಹರಣೆ.
Ittigecement said…
ಪರಾಂಜಪೆಯವರೆ....

ಎಂಥಹ ಜನರು ಇವರು ಸರ್...!

ಮನುಷತ್ವ ಇದೆಯಾ ಇವರಿಗೆಲ್ಲ...?

ನನ್ನ ಗೆಳೆಯ ಹೇಳುತ್ತಿದ್ದ...

"ನೆರೆ ಪರಿಹಾದ ಹಣ ಯಾರು, ಎಷ್ಟು ಅಂತ ಹಂಚಿಕೊಳ್ಳುವಲ್ಲಿ ತಕರಾರು ಆಗಿರಬೇಕು...
ಬೇರೆ ಏನೂ ಇಲ್ಲ..!!"

ನಿಜ ಇರಬಹುದಾ...?

ಎಲ್ಲ ತಮ್ಮ ಉದ್ಧಾರಕ್ಕೆ ಹೊರಟವರು...
ಜನರ ಕಷ್ಟ ಯಾರಿಗೂ ಬೇಕಿಲ್ಲ...

ದೇವರಿಗೂ ಚಿನ್ನ ಕಿರೀಟ ಇಡುತ್ತಾರೆ..
ಅವನಿಗೂ ಟೋಪಿ ಹಾಕಿಬಿಡುತ್ತಾರೆ...

ಬರಲಿ ಮುಂದಿನ ಚುನಾವಣೆಗೆ..
ವೋಟ್ ಕೇಳಲಿಕ್ಕೆ.. ಆಗ ಮಾತನಾಡಿಸೋಣ..!
ಸರ್,
ವಾಸ್ತವತೆಯ ಪ್ರತಿಬಿಂಬವನ್ನು ಚೆನ್ನಾಗಿ ಬರೆದಿದ್ದೀರ........
ಎಂಥಹ ಜನರು ಇದ್ದಾರೆ ಅಲ್ವ......
ಚೆನ್ನಾಗಿದೆ ಕವನ...
Raghu said…
ಹಣ ಇರುವತನಕ, ಕುರ್ಚಿ ಬಿಳೋತನಕ...(ಹಿಂಬಾಲಕರು)
chennagide.
ರಾಘು.
umesh desai said…
ಪರಾಂಜಪೆ ಸರ್ ನಿಮ್ಮ ಕವಿತಾದ ಆಶಯ ಚೆನ್ನಾಗಿದೆ ಆದರೆ ಸ್ವಲ್ಪ ವಾಚ್ಯ ಅತೇನೋ....ನಮ್ಮ ರಾಜ್ಯದ ಸ್ಥಿತಿ ನಗಾಡುವಂತಾಗಿದೆ . "ಹೆಬ್ಬಾಗಿಲು ತೆರೆದ ಪಕ್ಷ" ಒಳಗಿನವರೇ ಹಾಕಿದ ಪಟ್ಟಿಗೆ ತತ್ತರಿಸಿದೆ. ಮರಾಠಿ ಹಾಡು ನೆನಪಿಗೆ ಬರುತ್ತದೆ
" क्श्या साठि जगायव तंबु ठॊकून कॊण मेले कुणा साठि रक्त ओकुन..."
Unknown said…
ಅಂದು ಚಾಟ್ ಬಾಕ್ಸಿನಲ್ಲಿ ಕವಿತೆಗಳ ಸಾಲುಗಳು ಅಸ್ತವ್ಯಸ್ತವಾಗಿದ್ದು ಸುಲಭ ೋದಿಗೆ ಗ್ರಾಹ್ಯವಾಗಿರಲಿಲ್ಲ. ಈಗ ಸ್ಪಷ್ಟವಾಗಿದೆ. ಕವಿತೆ ಅರ್ಥಪೂರ್ಣವೂ ಸಕಾಲಿಕವೂ ಆಗಿದೆ.
paranjape sir, tumbaa chennagide. samyochitavaagi kavanisiddeeri.

dhanyavaadagalu.
ಬಾಲು said…
ನೀವು ನರ್ಸ್ ರೇಣುಕಾಚಾರ್ಯ ಹೆಸರು ಬರೆದಿಲ್ಲ, ನೀವು ಕೂಡ ರೆಡ್ಡಿ ಗುಂಪು ಸೇರಿದಿರ ಅಂತ ಗುಮಾನಿ. !!! :) :)

ಪದ್ಯ ಸಕ್ಕತ್ತಾಗಿ ಇದೆ, ಅಧ್ಬುತ ವಿಡಂಬನೆ.
ವಿನುತ said…
--ತನ್ನ ಪುನರ್ವಸತಿಗೇ ಪರದಾಡುವಂತಾಯ್ತಲ್ಲ ಗುರುವೇ--
ಸಖತ್ ಪಂಚ್!!
shivu.k said…
ಪರಂಜಪೆ ಸರ್,

ನಿಜಕ್ಕೂ ತುಂಬಾ ಉತ್ತಮವಾದ ವಿಡಂಬನೆ.
ಈ ಸರ್ಕಾರ ಮೊದಲು ಏನೋ ಮಾಡಿಬಿಡುತ್ತದೆ ಅನ್ನುವ ನಿರೀಕ್ಷೆಯಿತ್ತು. ಆದ್ರೆ ಇದು ಉಳಿದೆಲ್ಲಾ ಸರ್ಕಾರಗಳಿಗಿಂತ ಎಷ್ಟು ಕೆಟ್ಟದಾಗಿದೆ!ಪ್ರತಿನಿಧಿಗಳ ಹೆಸರನ್ನು ಚೆನ್ನಾಗಿ ಬಳಸಿಕೊಂಡಿದ್ದೀರಿ.
PARAANJAPE K.N. said…
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು
ಪರಾಂಜಪೆ,
ವಾಸ್ತವ ಚಿತ್ರಣವನ್ನು ಶಬ್ದಗಳಲ್ಲಿ ತೆರೆದಿಟ್ಟಿದ್ದೀರಿ . ಪ್ರತಿ ನಿತ್ಯ ಟಿವಿಯಲ್ಲಿ ಇವರ ಜಗಳಾಟ ನೋಡಿ ತಲೆಕೆಡುವಂತಾಗಿದೆ! ಆರಿಸಿದ ಜನರ ಬಗ್ಗೆ ಯೋಚಿಸುವವನು ಒಬ್ಬನಾದರೂ ಇದ್ದಾನೆಯೇ?
" ಜನಾಭಿವೃದ್ಧಿ " ಎಂಬ ಶಬ್ದವನ್ನು ಇವರುಗಳು " ಸ್ವಜನಾಭಿವೃದ್ಧಿ " ಎಂದು ಕಲ್ಪಿಸಿಕೊಂಡಂತಿದೆ .

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ