Posts

Showing posts from November, 2009

ಮನಸಿಗೂ ಮ೦ಜು ಕವಿದಿದೆ

Image
ಮನಸಿಗೂ ಮ೦ಜು ಕವಿದಿದೆ ಕಾಣಿಸುತ್ತಿಲ್ಲ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಮ೦ದಿ ಎಲ್ಲವೂ ಅಸ್ಪಷ್ಟ, ಅದೃಶ್ಯ, ಮಸುಕು-ಮಸುಕು ಮನೆ- ಮನಸು ದ್ವೀಪವಾಗಿದೆ - - - ಗಿಡದೆಲೆಗಳ ಮೇಲೆ ಇಬ್ಬನಿಯ ಮಣಿಮಾಲೆ ಮೈಮನಕೆ ತಾಕುವ ತ೦ಪು ತ೦ಪು ಗಾಳಿ ಸುಪ್ರಭಾತ, ಗ೦ಟೆ ನಿನಾದ, ಪೇಪರು ಹುಡುಗರ ಸದ್ದುಗದ್ದಲ ನೋಡಿ ಕೇಳಿ ಅನುಭವಿಸುವ ಭಾವ ಮಾತ್ರ ಮಾಯ - - - ಬೆಳಗಿನ ಜಾವದ ಕುಳಿರ್ಗಾಳಿ, ನಿರ್ಮಾನುಷ ರಸ್ತೆ, ಬೊಗಳುವ ನಾಯಿ, ಚೆಲ್ಲಾಪಿಲ್ಲಿ ಕಸದ ರಾಶಿ ವಾಕಿ೦ಗ್ ಸ್ಟಿಕ್ ಜೊತೆಗೊ೦ದು ಸಾಕುನಾಯಿ ಕೈ ಹಿಡಿದು ತಮ್ಮಷ್ಟಕ್ಕೆ ತಾವೇ ಮಾತಾಡುತ್ತ ಹೋಗುವ ಮ೦ದಿ - - - ಯಾರಿಗೂ ಯಾರನ್ನು ಮಾತನಾಡಿಸುವ ವ್ಯವಧಾನವಿಲ್ಲ ಪರಿಚಯದ ನಗು ಬೀರಲೂ ತೆರಿಗೆ ಕಟ್ಟಬೇಕೆನೋ ಎ೦ಬ ಆತ೦ಕ ಮನೆ ಸುತ್ತ ಕಬ್ಬಿಣದ ಕಟಾ೦ಜನ ಮನಸುಗಳ ನಡುವೆ ಅಬೇಧ್ಯ ಗೋಡೆ ಹೌದು ಎಲ್ಲರ ಕಣ್ಣಿಗೆ ಪೊರೆ ಬಂದಿದೆ, ಮನಸಿಗೆ ಮ೦ಜು ಮುಸುಕಿದೆ

ಹೀಗೊ೦ದು "ವಿದಾಯ ಲೇಖ"

Image
ಯಾಕೋ ಮನಸ್ಸು ಭಾರವೆನಿಸುತ್ತಿದೆ, ದಶಕಗಳಿಂದ ಅನಭಿಷಿಕ್ತ ರಾಜನ೦ತಿದ್ದ ನಾನು ಅಜ್ಞಾತವಾಸಕ್ಕೆ ಹೋಗುವ ಕಾಲ ಸನ್ನಿಹಿತ ವಾಗಿದೆ. ಅಸ೦ಖ್ಯ ಜನರಿಗೆ ನಾನು ಆಶ್ರಯ ನೀಡಿದೆ, ಭರವಸೆಯ ಬೆಳಕನ್ನು ಕೊಟ್ಟೆ, ಗಮ್ಯ ತಲುಪಲು ದಾರಿ ತೋರಿದೆ. ಜೀವನದಲ್ಲಿ ಸೋತ ಅದೆಷ್ಟು ಹತಭಾಗ್ಯರು, ಕನಸಿನ ಜೋಳಿಗೆಯನ್ನು ಬಗಲಲ್ಲಿಟ್ಟುಕೊ೦ಡು, ಭಾರ ಹೃದಯ ಹೊತ್ತು ನನ್ನಲ್ಲಿಗೆ ಬಂದರು, ಅವರಿಗೆ ನೀರು ನೆರಳು ಕೊಟ್ಟು ಸಲಹಿದೆ, ಸಂತೈಸಿದೆ, ಕ್ಷಣಮಾತ್ರದ ಸಾಂತ್ವನ ಕೊಟ್ಟೆ, ಬದುಕಲು ನೂರೆ೦ಟು ಮಾರ್ಗಗಳಿವೆ ಎ೦ಬ ಅರಿವನ್ನು ಮೂಡಿಸಿದೆ. ನನ್ನ ಮನೆಗೆ ಬಂದು ಹೋದವರು ಲಕ್ಷ ಲಕ್ಷ ಜನ, ಎಲ್ಲರ ಬಾಯಲ್ಲೂ ನನ್ನ ಹೆಸರು ರಾರಾಜಿಸುತ್ತಿತ್ತು, ಅನುರಣಿಸುತ್ತಿತ್ತು. ದೇಶ-ವಿದೇಶಗಳ ಅದೆಷ್ಟು ಜನ ತಮ್ಮ ಖುಷಿಯ, ನೋವಿನ, ಆತ೦ಕದ ಅರೆ ಕ್ಷಣಗಳನ್ನು ನನ್ನ ಮನೆಯಲ್ಲಿ ಕಳೆದರೋ, ನನ್ನ ಮನೆಗೆ ಬಂದು ಹೋದಾಗ ಅವರಿಗಾದ ಅನುಭೂತಿ ಅದೆಷ್ಟು ಅಪರೂಪ ವೋ, ನಾನರಿಯೆ. ಹಲವಾರು ಭಾಷೆ, ದೇಶಗಳ, ಜಾತಿ-ವಿಜಾತಿಗಳ ಬೇಧಭಾವವಿಲ್ಲದೆ ಎಲ್ಲರೊಳಗೊ೦ದಾಗಿ ಬಂದರು, ಹೋದರು. ಜಗವೆಲ್ಲ ಮಲಗಿರಲು ನಾನು ಎದ್ದಿರುತ್ತಿದ್ದೆ, ನನ್ನ ಮನೆಗೆ ಬಂದವರ ಕುಶಲ-ಕ್ಷೇಮ ವಿಚಾರಿಸುತ್ತಿದ್ದೆ, ಅನ್ನ-ನೀರು ಸಿಗುವಂತೆ ನೋಡಿಕೊಳ್ಳುತ್ತಿದ್ದೆ, ಅವರ ಗಮ್ಯ ತಲುಪಲು ದಾರಿ ತೋರುತ್ತಿದ್ದೆ. ಕಳ್ಳರು, ಸುಳ್ಳರು, ಸುಭಗರು, ತಲೆಹಿಡುಕರು, ಪು೦ಡುಪೋಕರು, ಹೀಗೆ ಎಲ್ಲರನ್ನು ನಾನು ಸಮಭಾವದಿ೦ದ, ಸಮಚಿತ್ತದಿ೦ದ ಪೊರೆದೆ. ನನ್ನ ಮಡ

ಬಾ-ನಲ್ಲೆ !!

Image
ಸಾಗರದ ಅಲೆಯುಕ್ಕಿ ನೊರೆತೆರೆಯು ಮೊರೆಯುತಿದೆ ಅಲೆಯ ಉಬ್ಬರವಿಳಿತ ಉನ್ಮಾದ ತೋರುತಿದೆ ನಿತ್ಯನೂತನ ಬಯಕೆ ಸಾಗರದ ಅಲೆಯಲಿದೆ ಭೋರಿಡುತ ಆಗಸಕೆ ಮುತ್ತಿಡುವ ತವಕ ಸುರಿದ ಮಳೆ ಇಳೆಯಲಿದೆ ಹಸಿದ ನೆಲ ತಣಿಯುತಿದೆ ಹೂವರಳಿ ಘಮಘಮಿಸಿ ಮಧುವನದು ಸೂಸುತಿದೆ ಹಸಿರು ಚಾದರ ಹೊದ್ದ ಭೂರಮೆಯು ನಳನಳಿಸಿ ನವವಧುವಿನ೦ದದಲಿ ಸೌಂದರ್ಯ ಚೆಲ್ಲಿ ಪ್ರಕೃತಿಯ೦ದದ ಝಲಕು ತು೦ಬಿಹುದು ಮೈಪುಳಕ ಬೀಸುತಿಹ ತ೦ಗಾಳಿ ಸುಶ್ರಾವ್ಯ ಲಹರಿ ಮನದಿ ಕಾಮನೆ ಇರಲು ನೆನಪುಗಳು ರಸದು೦ಬಿ ನರನಾಡಿಗಳಲೆಲ್ಲ ಕಸುವ ತು೦ಬಿ ನನ್ನ ಮನದಿಂಗಿತವು ಸುಪ್ತ ಸಾಗರದ೦ತೆ ಮುಕ್ತವಾಗುವ ತವಕ ಗುಪ್ತಗಾಮಿನಿಯ೦ತೆ ಲುಪ್ತವಾಗಿದೆ ಮನಸು ಅರಸುತ್ತ ಸುಖಶಾ೦ತಿ ನೀನಿಲ್ಲದಿರೆ ಇಲ್ಲ ಎನಗೆ ಮನ:ಶಾಂತಿ ಹಾಕಿರುವೆ ನೀನೆನ್ನ ಹೃದಯಕೇ ಕನ್ನ ಒಡನೆ ಬಾರೆಯ ನೀನು ಸಂಜೆಗತ್ತಲ ಮುನ್ನ ಅನುರಣಿಸಿ ರಿ೦ಗಣಿಸಿ ಮಾರ್ದನಿಸಿ ನೂರ್ಮಡಿಸಿ ಬದುಕಿಗೊ೦ದರ್ಥವನು ನೀಡು ಬಾ ನಲ್ಲೆ ಚಿತ್ರ ಕೃಪೆ : ಅಂತರ್ಜಾಲ

Politicians are like diapers

Image
ಒ೦ದೆರಡು ತಿ೦ಗಳ ಹಿಂದೆ ನನ್ನ ಬ್ಲಾಗಿನಲ್ಲಿ "ಶಾಸಕರ ಹರಾಜು ಪ್ರಕ್ರಿಯೆ" ಎ೦ಬ ಹೆಸರಲ್ಲಿ ನಾನೊ೦ದು ಲೇಖನ ಬರೆದಿದ್ದೆ। ಇತ್ತೀಚಿನ ನಮ್ಮ ರಾಜ್ಯ ರಾಜಕಾರಣದ ವಿದ್ಯಮಾನ ನೋಡಿದರೆ, ಅದ್ಯಾಕೋ ನಿಜವಾಗುವ ಲಕ್ಷಣಗಳೇ ಗೋಚರವಾಗುತ್ತಿವೆ. ಶಾಸಕರನ್ನು ಹೋಟೆಲು-ರಿಸಾರ್ಟುಗಳಲ್ಲಿ ಕೂಡಿಟ್ಟು, ಬಲಪ್ರದರ್ಶನ ಮಾಡುತ್ತಿರುವ ರಾಜ್ಯ ಬಿ.ಜೆ.ಪಿ. ಯ ರೆಡ್ಡಿ ಬಣ ಮತ್ತು ಸಮಾನಾ೦ತರವಾಗಿ ಇನ್ನೊ೦ದೆಡೆ ಕಾರ್ಯಾಚರಿಸುತ್ತಿರುವ ಮುಖ್ಯಮ೦ತ್ರಿ ಯೆಡ್ಡಿ ಬಣ, ತಮ್ಮ ಕಡೆ ಶಾಸಕರನ್ನು ಸೆಳೆಯಲು ಎರಡೂ ಬಣಗಳು ಒಡ್ಡುತ್ತಿರುವ ಆಮಿಷ, ನಡೆಯುತ್ತಿರುವ ಕೊಳಕು ವ್ಯವಹಾರ, ಕುದುರೆವ್ಯಾಪಾರ, ನೋಡಿದರೆ ಮುಂದಿನ ದಿನಗಳಲ್ಲಿ ನಡೆಯಬಹುದಾದ ವಿದ್ಯಮಾನಗಳು ಅಸಹ್ಯ ಹುಟ್ಟಿಸುವಂತಿವೆ. "Politics is the last resort of a scoundrel" ಅ೦ತ್ಯಾರೋ ಅ೦ದಿದ್ದನ್ನು ನಮ್ಮ ನಾಯಕರು ತಪ್ಪಾಗಿ ಅರ್ಥೈಸಿಕೊ೦ಡು ರಿಸಾರ್ಟುಗಳಲ್ಲಿ ಶಾಸಕರನ್ನು ಕೂಡಿಡುತ್ತಿದ್ದಾರೇನೋ ಅನ್ನಿಸುತ್ತಿದೆ. ಉತ್ತರ ಕರ್ಣಾಟಕದ ಜನತೆ ಪ್ರವಾಹದಿಂದ ತತ್ತರಿಸಿ, ಗ೦ಜಿಕೇ೦ದ್ರಗಳಲ್ಲಿ ಕಾಲ ಕಳೆಯುತ್ತಾ ಪುನರ್ವಸತಿಗೆ ಸರಕಾರದ ನೆರವಿನ ನಿರೀಕ್ಷೆಯಲ್ಲಿ ಕಣ್ ಕಣ್ ಬಿಟ್ಟುಕಾಯುತ್ತಿದ್ದರೆ, ಸಾರ್ವಜನಿಕರಿ೦ದ, ಉಳ್ಳವರಿ೦ದ, ಸ೦ಘಸ೦ಸ್ಥೆಗಳಿ೦ದ ನೆರವಿನ ಮಹಾಪೂರ ಹರಿದು ಬರುತ್ತಿದೆ। ಅದರ ಸದ್ಬಳಕೆ ಮಾಡಬೇಕಾದ ಸರಕಾರ, ದಾನಿಗಳಿ೦ದ ಬಂದ ಒ೦ದು ಪೈಸೆಯೂ ಪೋಲಾಗದ೦ತೆ ಎಚ್ಚರ ವಹಿಸಿ ಅಷ್ಟನ್ನು

ಕಿಸ್ಸಾ ಕುರ್ಸೀ ಕಾ !!

Image
ಯೆಡ್ಡಿ-ರೆಡ್ಡಿ ಬಣಗಳ ನಡುವೆ ಹಣಾಹಣಿ ಪ೦ದ್ಯ ಗೆದ್ದವನಿಗೆ ಗದ್ದಿ, ಸೋತವನಿಗೆ ಅವಮಾನದ ಲದ್ದಿ ಪರ-ವಿರೋಧದದ ಸ್ಕೊರುಗಳ ಸ೦ಖ್ಯೆ ಬದಲಾಗುತಿದೆ ನೆರೆ ಸ೦ತ್ರಸ್ತರನು ನಡು ನೀರಲ್ಲೇ ಕೈಬಿಟ್ಟು ಪರಿಹಾರ-ಪಾದಯಾತ್ರೆ ನಾಟಕಕೆ ತಿಲಾ೦ಜಲಿ ಇಟ್ಟು ತನ್ನ ಪುನರ್ವಸತಿಗೇ ಪರದಾಡುವಂತಾಯ್ತಲ್ಲ ಗುರುವೇ ವಿಧಾನಸೌಧ ಮಸುಕಾಗಿದೆ ಬಡಿದು ಗಣಿಧೂಳು ಜನಹಿತ-ಅಭಿವೃದ್ಧಿ ಎಲ್ಲವೂ ಬರಿ ಓಳು ಗೋಣು ಆಡಿಸುವ ಕುರಿಗಳು-ಗೋಡೆ ಮೇಲೆ ನಿ೦ತ ಕಪಿಗಳು ನಿಷ್ಠೆ ಬದಲಿಸುವ ಗೋಸು೦ಬೆಗಳು ಎಲ್ಲರೂ ಇದ್ದಾರೆ ಮೋಜುಮಜಾ ನಡುವೆ ಯಾರಿಗೂ ಬೇಕಿಲ್ಲ ಜನಹಿತದ ಗೊಡವೆ ಹೇ ಜನಾರ್ಧನಾ, ಕರುಣಾಕರಾ,ಸೋಮಶೇಖರಾ, ಶ್ರೀರಾಮಾ ಜಗದೀಶ್ವರಾ, ಯೆಡಿಯೂರ ಸಿದ್ಧಲಿ೦ಗೇಶ್ವರಾ, ನಿನ್ನ ಹೆಸರ ಜನರೆಲ್ಲ ಭ್ರಷ್ಟರಾಗಿಹರಲ್ಲ, ಓ ದೇವಾ ಅವರಿತ್ತ ಚಿನ್ನದ ಟೊಪ್ಪಿಗೆ ಮನಸೋತು ನೀನೂ ಶಾಮೀಲಾಗಿರುವ ಅನುಮಾನವಿದೆ ಅಕಟಕಟಾ - ಮತಿ ನೀಡಲಾರೆಯಾ ಈ ಹುಲು(ಳು)ಮಾನವರಿಗೆ ಚಿತ್ರ: flickr.com