Posts

Showing posts from October, 2009

ಬಪ್ಪುದು ತಪ್ಪದು

ಬರಲಿದೆಯ೦ತೆ ಪ್ರಳಯ, ಜೀವಜಾಲ ಅಳಿವ ಸಮಯ ಬೆ೦ಕಿಯ ಮಳೆಯೋ, ಜಲಸಮಾಧಿಯೋ, ಸುನಾಮಿಯೋ ಅ೦ತ್ಯವೋ, ವಿನಾಶವೋ ವಿಕೃತಿಯೋ ಬಲ್ಲವರಿಲ್ಲ, ದಿನಗಳೆಣಿಕೆಯಲ್ಲಿ ಬದುಕುವ೦ತಾಯ್ತಲ್ಲ ತ೦ದೇ ಹಣಗಳಿಸಲು ಹೆಚ್ಚು ದಿನಗಳಿಲ್ಲೆ೦ದು ಬಗೆದ ನಮ್ಮ ಜಾಣ ಜನನಾಯಕರು ಜಮಾಯಿಸುವಲ್ಲಿ ನಿರತರಾಗಿದ್ದರೆ ವಿಪರೀತ ಸಾಲಸೋಲದಲ್ಲಿರುವ ಮಂದಿ ಬೇಗ ಮುಳುಗಡೆ ಆಗಲಿ, ಸಾಲದೊ೦ದಿಗೆ ಬದುಕು ಸಮಾಪ್ತವಾಗಲೆ೦ದು ಕಾದಿದ್ದಾರೆ ಮಾಯಾನಗರಿಯಲ್ಲಿ ಸೈಟುಕೊಳ್ಳಲು ಹವಣಿಸುತ್ತಿದ್ದ ಮಿತ್ರ ಬದುಕುಳಿದರೆ 2013 ರಲ್ಲಿ ಕೊಳ್ಳೋಣ ಎ೦ದು ಹಾಯಾಗಿದ್ದಾನೆ ಮಗನಿಗೆ ಲಕ್ಷ ಸುರಿದು ಮೆಡಿಕಲ್ ಸೀಟು ಕೊಡಿಸಬೇಕಾದ ತ೦ದೆ ಹೊಸಮನೆ ಕಟ್ಟಬೇಕಾದ ಮಂದಿ ತೆಪ್ಪಗಾಗಿದ್ದಾರೆ ನಾಳೆಯ ಆತ೦ಕವ ನೆನೆದು ಇ೦ದಿನ ಸುಖವ ಬಲಿಗೊಡುವುದೇಕೆ ? ಕನ್ನಡಿಯೊಳಗಿನ ಗ೦ಟ ಕ೦ಡು ಸುಖಕೆ ಹಾತೊರೆವ೦ತೆ ಬಪ್ಪುದು ತಪ್ಪದು, ನಾಳಿನ ಚಿ೦ತೆಗೆ ಇ೦ದೇ ಚಿತೆಯೇರುವುದೇತಕೆ ? ಖೊಟ್ಟಿ ಜನರ ಮಾತ ಕೇಳಿ ಮರುಗುವುದನು ಬಿಡು ಮರುಳೇ

ನೆನಪಿನ ಪುಟಗಳತ್ತ ಒ೦ದು ಹಿನ್ನೋಟ

ನನ್ನ ಬದುಕು ನನ್ನದು, ಅದು ನಿಮ್ಮ ಹಾಗಲ್ಲ, ಭಿನ್ನ,ಅ೦ತ ನಾನು ಹೇಳೋಲ್ಲ, ನೀವೂ ಇ೦ತಹದನ್ನು ಅನುಭವಿಸಿರುತ್ತೀರಿ, ಅ೦ತ ನಾನು ಬಲ್ಲೆ. ಎಲ್ಲರ ಜೀವನದಲ್ಲೂ ಒ೦ದಿಲ್ಲೊ೦ದು ವಿಧದ ತಮಾಷೆಯ, ವಿನೋದದ, ಸುಖದ ಉತ್ತುಂಗದ, ದುಃಖದ, ವಿಷಾದದ ಗಳಿಗೆ ಮಿಂಚಿನಂತೆ,ಕಾಮನಬಿಲ್ಲಿನ೦ತೆ ಹೀಗೆ ಬಂದು ಹಾಗೆ ಸರಿದು ಹೋಗಿರುತ್ತದೆ ಮತ್ತು ಸ್ಮೃತಿಪಟಲದಲ್ಲಿ,ನೆನಪಿನ ಜ್ನಾಪಕಚಿತ್ರಶಾಲೆಯಲ್ಲಿ ದಾಖಲಾಗಿ ಧೂಳು ಹಿಡಿದು ಮಸುಕಾಗಿರುತ್ತದೆ.ಕಳೆದು ಹೋದುದು ಅದು ಕಹಿಯೇ ಆಗಿದ್ದರೂ ರಸಗಳಿಗೆ, ಮುಂದೆ ಬರಲಿರುವುದು ಅದು ಸಿಹಿಯೆ೦ಬ ಭ್ರಮೆ ಇದ್ದರೂ ಅದು ಒಂದು ವಿಧದಲ್ಲಿ ಕಹಿಗುಳಿಗೆ ಅ೦ತ ನ೦ಬಿರುವವನು ನಾನು. ಹಾಗಿರುವುದರಿಂದ ಮುಂದಿನ ದಿನಗಳ ಕಹಿಗುಳಿಗೆ ಗಳನ್ನೂ ನೆನೆಯುತ್ತ, ಕಳೆದು ಹೋದ ದಿನಗಳ ರಸಗಳಿಗೆಗಳನ್ನು ಹಾಗೆ ಮೆಲುಕುಹಾಕುತ್ತಾ ನಿಮ್ಮೊಂದಿಗೆ ನನ್ನ ಶಾಲಾದಿನಗಳ ಘಟನಾವಳಿಗಳ ಗಂಟು ಬಿಚ್ಚುತ್ತೇನೆ. ಅದು 1976 -77 ರ ದಿನಗಳು. ನಾನಾಗ ಹತ್ತನೇ ತರಗತಿಯಲ್ಲಿದ್ದೆ. ಸೋದರ ಮಾವನ ಮನೆಯಲ್ಲಿದ್ದೆ, ಅಲ್ಲಿಂದಲೇ ನಿತ್ಯ ಐದು ಕಿಮಿ ಕಾಲ್ನಡಿಗೆಯಲ್ಲಿ ನಡೆದು ಉಜಿರೆಯ ಎಸ್.ಡಿ.ಎ೦.ಹೈಸ್ಕೂಲಿಗೆ ಹೋಗಿ ಬರುತ್ತಿದ್ದೆ. ಕಾಲಿಗೆ ಚಪ್ಪಲಿ ಇದ್ದರೂ ಓಕೆ, ಇಲ್ಲದಿದ್ದರೂ ಓಕೆ, ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದ, ಅತೀ ಕಡಿಮೆ ಖರ್ಚಿನಲ್ಲಿ ಎಲ್ಲವೂ ನಡೆದುಹೋಗುತ್ತಿದ್ದ, ಚಿಮಣಿದೀಪದ ಅಡಿಯಲ್ಲಿ ಓದು-ಬರಹ ಸಾಗುತ್ತಿದ್ದ ದಿನಗಳವು.ಈಗಿನಂತೆ ಟಿವಿ ಮಾಧ್ಯಮಗಳ ಅಬ್ಬರವಿರಲಿ

ಚಿತ್ತ ಕಲಕಿದ ಹೂವೆ !!

Image
ಚಿತ್ತ ಕಲಕಿದ ಹೂವೆ ನೀನೇಕೆ ನಲುಗಿರುವೆ ಏಕೆ ಹೂಡಿಹೆ ನೀನು ಮೌನ ಸಮರ ಭರದಿ ದಾ೦ಗುಡಿಯಿಡುತ ಓಡೋಡಿ ನಾ ಬ೦ದೆ ನಿನ್ನ ಸಾ೦ಗತ್ಯವನು ಬಯಸಿ ಬಿಡದೇ - - - ನಿನಗೇಕೆ ಅರಿವಿಲ್ಲ ನನ್ನ ಮನದಿ೦ಗಿತವು ನೀನಲ್ಲವೆ ನನ್ನ ಭವದ ಭಾಗ್ಯ ಪ್ರತಿ ಹೆಜ್ಜೆಯಲು ನಿನ್ನ ನೂಪುರದ ಅನುರಣನ ನೋವ ಜೊತೆ ನಲಿವಿನದು ಸಮರಸದ ಭಾವ - - - ಕುಸುಮಿಸುತ ಘಮಘಮಿಸಿ ಮನಕೆ ಮುದವನು ಇತ್ತು ವಿರಮಿಸಿದೆ ಮಿರಮಿರನೆ ಮಿನುಗನಿತ್ತು ನಿನ್ನ ನೋಟದ ಮಿನುಗ ಗುನುಗುತ್ತ ನಾ ಮರೆತೆ ನನ್ನೆಲ್ಲ ಕಷ್ಟಗಳ ಬತ್ತದೊರತೆ - - - ಹುಣ್ಣಿಮೆಯ ಚ೦ದಿರನ ಮೊಗವು ತುಸು ಬಾಡಿರಲು ಕಾರಣವೂ ಏನೆ೦ದು ತಿಳಿಯದಾಗಿಹೆ ನಾನು ಲಗುಬಗೆಯ ಮಾತಿನಲಿ ನಗೆಯ ಹೊನಲನು ಹರಿಸಿ ನನ್ನೆಲ್ಲ ದುಗುಡಗಳ ಸರಿಸು ದೂರ - - - ಕಾದಿರುವೆ ನಿನಗಾಗಿ ಎಲ್ಲ ಹ೦ಗನು ತೊರೆದು ಲುಪ್ತವಾಗಿಹ ಮನವ ಸುಪ್ತಗೊಳಿಸಿ ತೆರೆದಿಹುದು ನೋಡಲ್ಲಿ ಭವ್ಯ ಭವಿತವ್ಯ ತೊರೆದು ಬಾ ನಿನ್ನೆಲ್ಲ ಚಿತ್ತ ಚಾ೦ಚಲ್ಯ ಚಿತ್ರಕೃಪೆ :www।flickr.com