Posts

Showing posts from September, 2009

ರಂಗನತಿಟ್ಟಿನಲ್ಲಿ ಹುಟ್ಟಿದ ಲಹರಿ ಕವನವಾದ ಪರಿ

Image
ಇದೊ೦ಥರ ಹುಚ್ಚುಕುದುರೆಯ ಮೇಲೆ ಲಗಾಮಿಲ್ಲದೆ ಸಾಗುವ ನಾಗಾಲೋಟದ ಬದುಕು. ಏನೋ ಮಾಡಲು ಹೋಗಿ ಇನ್ನೇನೋ ಆಗುವ ಅಪಾಯವಿರುವ, ಆದರೆ ಅದರಲ್ಲೇ ಹೊಸತನದ ಎಳೆ ಹುಡುಕಬಹುದಾದ ಸಾಧ್ಯತೆಗಳಿರುವ ದಿನಗಳಿವು.ಹಲವರಿಗೆ ಕೆಲವು ಹುಚ್ಚಿರುತ್ತವಂತೆ. ಕೆಲವರಿಗೆ ದಿನಸಿ ಸಾಮಾನು ತಂದ ರದ್ದಿ ಕಾಗದ ಓದಿ ಜ್ಞಾನೋದಯ ಹೊಂದುವ ಭಾವವಾದರೆ, ಇನ್ನು ಕೆಲವರದು ಮತ್ತಿನ್ನೇನೋ ತರಹದ್ದು. ನಾನು ಇದು ತನಕ ಅವರಿವರ ಬ್ಲಾಗಿನಲ್ಲಿದ್ದ ಫೋಟೋಗಳನ್ನು ನೋಡಿ ಅವರ ಅನುಮತಿ ಕೇಳಿ ಅಥವಾ ಕೇಳದೆ ಎತ್ತಿಕೊ೦ಡು ಅವನ್ನು ನನ್ನ ಬ್ಲಾಗಲ್ಲಿ ಬಳಸಿ ಕವನ ಬರೆದಿದ್ದಿದೆ. ಈಗ ಹೊಸತೊಂದು ಬಗೆಯ ಯತ್ನ ಮಾಡಿದ್ದೇನೆ. ಮಿತ್ರ ಶಿವೂ ಅವರ ಛಾಯಾ ಕನ್ನಡಿ ಬ್ಲಾಗು ಕನ್ನಡ ಬ್ಲಾಗಿಗರ ಮಟ್ಟಿಗೆ ರಂಗನತಿಟ್ಟು ಇದ್ದಂತೆ. ಅವರ ಬ್ಲಾಗಿಗೆ ಹೋದರೆ ಎಲ್ಲರೂ ಸಿಗುತ್ತಾರೆ. ನನ್ನ ಬ್ಲಾಗ್ ಓಪನ್ ಮಾಡಿದ್ದಕ್ಕಿಂತ ಹೆಚ್ಚಿಗೆ ಅವರ ಬ್ಲಾಗನ್ನು ನಾನು ಓಪನ್ ಮಾಡಿ ಬೇರೆ ಬೇರೆ ತಾಣಗಳಿಗೆ ಅಲ್ಲಿಂದ ಜಾಲಾಡಿ ಹಣಿಕಿ ಹಾಕಿದ್ದೇನೆ/ ಓದಿದ್ದೇನೆ. ಹಾಗೆ ಸುಮ್ಮನೆ ಅವರ ಬ್ಲಾಗು ಮೇಲೆ ಕಣ್ಣಾಡಿಸುತ್ತಿರುವಾಗ ಬೇರೆ ಬೇರೆ ಬ್ಲಾಗುಗಳ ತಲೆಬರಹ ನೋಡಿ ತಲೆಯಲ್ಲೊ೦ದು ಹುಚ್ಚು ಲಹರಿ ಹರಿದು ಬಂತು. ಅದರ ಫಲವಾಗಿ ಹೊಸತೊಂದು ಕಜ್ಜಾಯ ಸಿದ್ಧವಾಗಿವೆ. ಅದನ್ನು ಕವನವೆಂದು ಆರೋಪಿಸಿ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ. ಓದಿ ಅಭಿಪ್ರಾಯಿಸಿ. - - - - - - - - ನೆನಪುಕನಸುಗಳ ನಡುವೆ ಭಾವಮಂಥನದ ಕೂಗು ಮಂಜುಮುಸುಕಿದ ದಾರಿಯ

ಮನಸಿನ ಕುಸುಕುಸು

Image
Refrain from hatred, retain harmony to sustain friendship and amity create a sense of belongingness among the fellows whom you rely Anger is the tool that shatters your way uphill towards success Have patience to save yourselves from the turbulent trauma of distress Control your desires and distractions, enlighten your mind to concentrate on the just path and right direction to reach the point of contentment - - - - - ನಿನ್ನ ಇರವನು ಇಲ್ಲಿ ಬಲ್ಲವರು ಯಾರಿಲ್ಲ ಎಲ್ಲಿ ನೀ ಅಡಗಿರುವೆ ಅ೦ತ ತಿಳಿದಿಲ್ಲ ಹಸಿದ ಹೊಟ್ಟೆಗೆ ಕೊಡದೆ ಲಕ್ಷ ಕೋಟಿಯ ಸುರಿದು ಕಟ್ಟುವರು ನಿನಗಿಲ್ಲಿ ಅಬ್ಬರದ ಗುಡಿಯ ನು೦ಗಿ ನೊಣೆಯುವ ಮಂದಿ ಕೆಡವಿ ಮನಶಾ೦ತಿಯನು ಮೆರೆಯುವರು ಜಗದಲ್ಲಿ ಹರಡಿ ವಿಭ್ರಾ೦ತಿ ನೀನಿರದ ಗುಡಿಯಲ್ಲಿ ನನಗೇನು ಕೆಲಸ ತೊಳೆಯಲಾರೆಯ ನೀನು ಜನಮನದ ಹೊಲಸ - - - - - - जिस जगह पे स्नेह और विशवास के प्रतिकोई मान - सम्मान नहीं मिलता उस जगह मैं नहीं रहना चाहता चाहे कोई भी हो इसका नतीजा मन करता हे एकांत में रहने का इरादा छोड़ कर सब सं०बन्ध और बंधन क्यों नहीं मिलता मन चाहा सुकून आज कल के दिनों में स्नेह का मान कहाँ ? ಇದೊಂಥರ ಮನಸಿನ ಒಳತೋಟಿಯ ಹೊರಗೆಡಹುವ ಯತ್ನವೋ, ಕವನ ಬರೆಯಲೇ

ಪಟಪಟಿಸಿ ಹಾರು ನೀ ಬಾನಿನುದ್ದಗಲ

Image
ಪುಟ್ಟಹಕ್ಕಿಯೆ ನೀನು ದಿಟ್ಟಿಸುತ ನೋಡುತಿಹೆ ನೇಸರನ ಲೋಕದ ರಮ್ಯಜಾಲ ಬಣ್ಣಗಳ ಮೇಲಾಟ ರಸಿಕರಿಗೆ ರಸದೂಟ ಕಾಮನಾಬಿಲ್ಲಿನದು ಮನ ಸೆಳೆವ ನೋಟ ಮದನ ಹೂಡಿದ ಬಾಣ ತಾಕಿಹುದು ನಲ್ಲೆಯೆದೆ, ಝಲ್ಲೆನಿಸಿ ಕಾಮನೆಯ ಸ್ಫುರಿಸಿ ಹರಿಸಿ ಮನದನ್ನೆ ಮುದಗೊಳಲು ನಲ್ಲನ ಮನದಲ್ಲಿ ಹೊಸ ತಳಿರು ಕೊನರೊಡೆದು ಹಸಿರ ಚೆಲ್ಲಿ ಬಗೆಬಗೆಯ ಬಣ್ಣಗಳ ಚಿತ್ತಾರ ಮೂಡಿರಲು ಚಿತ್ತಭಿತ್ತಿಯ ಕಲಕಿ ವರ್ಣ ವಿನ್ಯಾಸ ಹಲಬಗೆಯ ನೆನಪುಗಳ ಸುರಸ ಸರಮಾಲೆ ಸುಶ್ರಾವ್ಯ ಕಲರವವು ಮನದ ತು೦ಬ ನಿನ್ನ ಮೈಬಣ್ಣದಲಿ ತು೦ಬಿಹುದು ಹೊಸರ೦ಗು ಮಳೆಬಿಲ್ಲ ಹೋಲಿಕೆಯ ಬೆರಗಿನ೦ದ ಪಟಪಟಿಸಿ ಹಾರು ನೀ ಬಾನಿನುದ್ದಗಲ ತೋರು ನಿನ್ನಯ ಚೆಲುವ ಜಗದ ಜನಕೆಲ್ಲ ಚಿತ್ರಕೃಪೆ : ಅ೦ತರ್ಜಾಲ ಮಿ೦ಚ೦ಚೆ ಮೂಲಕ photo ಕಳಿಸಿ ಕವನ ಬರೆಯಲು ಪ್ರೇರಣೆಯಾದವರು - ಡಾ ಸತ್ಯನಾರಾಯಣ

ಮಿತಭಾಷಿಯ ವೃತಭ೦ಗ

Image
ಇತ್ತೀಚಿಗೆ ಕೆಲವು ಆತ್ಮೀಯ ಬ್ಲಾಗ್ ಮಿತ್ರರೊ೦ದಿಗೆ ಇಳಿಸ೦ಜೆಹೊತ್ತಲ್ಲಿ ಕೋಣನಕು೦ಟೆಯ ಹೋಟೆಲೊ೦ದರ ತ೦ಪುಕೋಣೆಯೊಳಗೆ ಕೆಲಕಾಲ ಕಳೆಯುವ ಅವಕಾಶ ನನಗೆ ಒದಗಿತ್ತು. ಅದು ಲಿಬಿಯಾ ದಿ೦ದ ಬ೦ದಿದ್ದ ಬಿಸಿಲಹನಿ ಬ್ಲಾಗಿನ ಉದಯ್ ಇಟಗಿ ಯವರು ಕರೆದಿದ್ದ ಪುಟ್ಟ ಪಾರ್ಟಿ. ನನ್ನ ಮಗನಿಗೆ ಮೈ ಹುಷಾರಿಲ್ಲದ ಕಾರಣ ನಾನು ಬೇಗ ಹೊರಟೆ. ಮಿತ್ರರಾದ ಮಲ್ಲಿ ಮತ್ತು ಶಿವೂ ಕ್ಯಾಮೆರಾಗಳು ಪುರುಸೊತ್ತಿಲ್ಲದೆ ಕಣ್ಣು ಮಿಟುಕಿಸುತ್ತಿದ್ದರೆ, ಮಿತ್ರ ಪ್ರಕಾಶರು ಮಾತಿನಲ್ಲೇ ಇಟ್ಟಿಗೆಸಿಮೆ೦ಟಿನ ಗೋಡೆ ಕಟ್ಟುತ್ತಿದ್ದರು. ಜೊತೆಗೆ ಊಟದಲ್ಲಿ ಹಪ್ಪಳ ಸ೦ಡಿಗೆ-ಉಪ್ಪಿನಕಾಯಿ ಕಾ೦ಬಿನೇಶನ್ ನ೦ತೆ ಮಲ್ಲಿ-ಶಿವು ಪ್ರಕಾಶ ರಿಗೆ ಮಾತಿನ ಸಾಥ್ ಕೊಡುತ್ತಿದ್ದರು. ಆದರೆ ನಾನು ಕ೦ಡ೦ತೆ ಪ್ರಕಾಶರು ಮಾತಿನ ಮಲ್ಲ. ಅವರ ಹಾಸ್ಯ ಚಟಾಕಿಗಳು, ತಮಾಷೆಯ ಮಾತುಗಳು, ಉತ್ತರಕನ್ನಡದ ಸೊಗಡಿನ "ಇಲ್ಲಾಗಿತ್ತು, ಗೊತ್ತಿಲ್ಲಾಗಿತ್ತು" ಎ೦ಬ ಪದಬಳಕೆಯ ಕ್ರಮ, ಎಲ್ಲವೂ ಉದಯರು ಕೊಡಿಸಿದ ಊಟದಷ್ಟೇ ರುಚಿಕಟ್ಟಾಗಿತ್ತು. ಉದಯರು ಸಪತ್ನೀಕರಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೆ ಅಲ್ಲಿದ್ದ ಡಾ: ಸತ್ಯ, ಚಾಮರಾಜ ಸವಡಿ, ಸ೦ಪದದ ನಾಡಿಗ್, ಮತ್ತಿಬ್ಬರು ಹೊಸ ಮಿತ್ರರೊ೦ದಿಗೆ ನಾನೂ ಇದ್ದೆ. ನಾನೂ ಸ್ವಲ್ಪ ಸುಸ್ತಾಗಿದ್ದರಿ೦ದ ಮತ್ತು ಬೇಗ ಮನೆ ತಲುಪುವ ಆತುರದಲ್ಲಿ ಇದ್ದ ಕಾರಣ ಐದು ಪೈಸೆ ಕಳಕೊ೦ಡವನ೦ತೆ ಅವರ ನಡುವೆ ಕೂತಿದ್ದೆ. ಮಲ್ಲಿ ಯವರು ನನ್ನ ಕಡೆ ನೋಡಿ " ಸಾರ್ ಏನೋ ತಲೆಬಿ

Just ಮಾತ್ ಮಾತಲ್ಲಿ !!!

ಈ ಹೆಸರಿನ ಸುದೀಪ್ ನಾಯಕತ್ವದ ಕನ್ನಡ ಚಿತ್ರವೊ೦ದು ಚಿತ್ರೀಕರಣ ಆಗುತ್ತಿರುವ ವಿಚಾರ ಗೊತ್ತಿದೆ. ಆದರೆ ನಾನು ಬರೆಯುತ್ತಿರುವ ಬರಹಕ್ಕೂ ಆ ಚಿತ್ರಕ್ಕೂ ಯಾವುದೇ ಸ೦ಬ೦ಧವಿಲ್ಲ. ಅವರದ್ದು remake ಇರಬಹುದೇನೋ ಗೊತ್ತಿಲ್ಲ, ಆದರೆ ನನ್ನದು ಸ೦ಪೂರ್ಣ ಸ್ವಮೇಕ್. ಇತ್ತೀಚಿಗೆ ಬ್ಲಾಗ್ ಮಿತ್ರ ಶಿವೂ ಅವರ ಚಿತ್ರ-ಲೇಖನ ಕನ್ನಡಪ್ರಭ ದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿತ್ತು. ಓದಿದ ಮೇಲೆ ಅವರಿಗೆ ಅಭಿನ೦ದನೆ ತಿಳಿಸೋಣವೆ೦ದು ಫೋನಾಯಿಸಿದರೆ, ಅವರು , " ಸರ್ ನಾನು ಡ್ರೈವ್ ಮಾಡುತ್ತಿದ್ದೇನೆ" ಅ೦ದರು. ಖುಷಿಯಾಯ್ತು. ಶಿವೂ ಯಾವಾಗ ಕಾರು ಕೊ೦ಡ್ರು ಅ೦ತ ಪ್ರಶ್ನೆ ಮನದಲ್ಲಿ ಎದ್ದಿತಾದರೂ, ಅವರು ದ್ವಿಚಕ್ರ ವಾಹನ ಚಾಲಿಸುತ್ತಿದ್ದರು ಎ೦ಬುದು ನನ್ನ ಅರಿವಿಗೆ ಬ೦ತು. ಹಾಗಿದ್ದರೆ ನಮ್ಮಲ್ಲಿ ಬಹುತೇಕ ಜನ ದ್ವಿಚಕ್ರ ವಾಹನ ಓಡಿಸುವಿಕೆಗೂ ಡ್ರೈವಿ೦ಗ್ ಅನ್ನುವುದು ಸರಿಯೇ,? ಅದು ರೈಡಿ೦ಗ್ ಅಲ್ಲವೇ ? ಎ೦ಬ ಪ್ರಶ್ನೆ ನನ್ನ ಮನದಲ್ಲಿ ರಿಜಿಸ್ಟರ್ ಆಯಿತು. ಆದರೆ ಇದೆ ವಿಷಯ ಈ ಬ್ಲಾಗ್ ಬರಹಕ್ಕೆ ಕಾರಣವಾಗುತ್ತೆ ಅನ್ನೋ ವಿಚಾರ ನನಗೆ ಗೊತ್ತಿರಲಿಲ್ಲ. ಶಿವೂ ಬಗೆಗಿನ ಕಾಮೆ೦ಟು ಕೇವಲ ಸಾ೦ಕೇತಿಕ, (ಅವರು ಬೇಗ ಕಾರು ಕೊಳ್ಳುವ೦ತಾಗಲಿ ಎ೦ಬುದು ನನ್ನ ಆತ್ಮೀಯ ಹಾರೈಕೆ) ಆದರೆ ಇಲ್ಲಿರುವ ವಿಚಾರ ಬೇರೇನೆ ಇದೆ. ಅದೇ ನೆನಪಿನ ಗುನುಗಿನಲ್ಲಿ ಇನ್ನೊ೦ದಷ್ಟು ವಿಚಾರಗಳು ಸೇರಿ ಈ ಬರಹ ಅಕ್ಷರರೂಪಕ್ಕೆ ಇಳೀತು.ಆದರೆ ಕನ್ನಡಭಾಷೆ ಹೇಗೆ ಪರಭಾಷೆಗಳ ಪ್ರಭಾವಕ್ಕೆ

ಕನಸುಗಳ ಕೋಟೆಯಲಿ ಮನಸು ಭಾರ

Image
ಬ್ಲಾಗಿನತ್ತ ತಲೆಹಾಕದೇ ಬಹಳ ದಿನಗಳೇ ಆಯ್ತು. ಬರೆಯಲು ಹೊರಟರೆ ಏನು ಹೊಳೆಯಲಿಲ್ಲ. ಹಾಗೆ ಸುಮ್ಮನೆ ಹೊಳೆದ ಕೆಲ ಸಾಲುಗಳನ್ನು ಕವಿತೆಯೆ೦ದು ಪರಿಭಾವಿಸಿ ನಿಮ್ಮ ಮು೦ದೆ ಇಟ್ಟಿದ್ದೇನೆ. ಕಣ್ಣ ಕುಡಿನೋಟದಲಿ ಭಾವದಲೆಗಳ ಮಿನುಗು ಮನದ ಅರಮನೆಯಲ್ಲಿ ಅನುರಾಗ ಗುನುಗು ಮು೦ಗುರುಳ ಜುಲುಪಿನಲಿ ನೂರೆ೦ಟು ಝಲಕು ನೆನಪಿನ೦ಗಳಕಿಳಿದು ಹಾಕುವೆನು ಮೆಲುಕು - - - - - ವೆಚ್ಚಕ್ಕೆ ಧನವಿರಲು ಬಾಳು ಸು೦ದರ ನಗರ ಖರ್ಚಿಗಿಲ್ಲದಿರೆ ಮನ ಕಲ್ಪನೆಯ ಭ್ರಮರ ಭ್ರಮೆಯ ಭೃ೦ಗವನೇರಿ ಬಾಳಿನುದ್ದಕು ಸಮರ ಕನಸುಗಳ ಕೋಟೆಯಲಿ ಮನಸು ಭಾರ - - - - - ನಾನು ನನ್ನದು ಎನುವ ಭಾವ ಅನವರತ ಕಾಡುವುದು ಮನವನ್ನು ಕೀರ್ತಿಶನಿ ನಿರತ ನಿದ್ರೆಯಲು ಕಾಡುವುದು ಇಲ್ಲಗಳ ಕನವರಿಕೆ ಆಗಲೊಲ್ಲದು ನಿನಗೆ ನಿಜದ ಮನವರಿಕೆ - - - - - - Photo: .flickr.Com