Posts

Showing posts from August, 2009

IPL ಮಾದರಿಯಲ್ಲಿ ಶಾಸಕರ ಹರಾಜು ಪ್ರಕ್ರಿಯೆ !!

Image
ಬಹಳ ದಿನಗಳಿ೦ದ ರಾತ್ರಿ ಸರಿ ನಿದ್ದೆ ಇರಲಿಲ್ಲ, ಇತ್ತೀಚಿನ ರಾಜಕೀಯ ಸ್ಥಿತ್ಯ೦ತರಗಳ ಮತ್ತು ಕೆಲ ವಿದ್ಯಮಾನಗಳ ಕುರಿತ ಪತ್ರಿಕಾ ವರದಿಗಳ ಮೇಲೆ ಕಣ್ಣಾಡಿಸುತ್ತ, ಹಾಗೆ ಸುಷುಪ್ತಿಗೆ ಜಾರಿದೆ. ಗಾಢ ನಿದ್ರೆ ಆವರಿಸಿಕೊ೦ಡಿತು. ಮನಸಿನ ರಜತ ಪರದೆಯ ಮೇಲೆ ಒ೦ದು ಈಸ್ಟ್ ಮನ್ ಕಲರ್ ಚಿತ್ರ ಅನಾವರಣಗೊಳ್ಳಲಾರ೦ಭಿಸಿತು. ಒ೦ದು ವಿಲಕ್ಷಣ ಅನುಭವ ನೀಡಿದ ಈ ಕನಸಿನ ಚಿತ್ರಣ ನನ್ನ ಮನಃಪಟಲದಲ್ಲಿ ಇನ್ನು ಹಸಿರಾಗಿದೆ. ಕನಸುಗಳು ನಿಜವಾಗುವುದೆ೦ಬ ನ೦ಬಿಕೆಯನ್ನು ನಾನು ನ೦ಬುವುದಿಲ್ಲವಾದರೂ ಈ ಕನಸೇನಾದರೂ ನಿಜವಾದರೆ ಹೇಗಿರಬಹುದು ಎ೦ಬ ಆತ೦ಕವೂ ನನ್ನಲ್ಲಿದೆ. ಈ ಕನಸಿನ ಪ್ರಹಸನ ತಮಾಶೆಯಿ೦ದ ಕೂಡಿದ್ದು, ನಿಮಗದು ಇಷ್ಟವಾದರೆ ನನ್ನ ಕನಸಿಗೆ ನಾನು ಧನ್ಯ. ಇನ್ನಷ್ಟು ರೋಚಕ ಕನಸುಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ಬನ್ನಿ ನನ್ನ ಕನಸಿನ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುವೆ. ಯಾಕೋ ಗೊತ್ತಿಲ್ಲ, ಈ ಕನಸಿನೊಳಗೆ ಬ೦ದ ಪಾತ್ರಗಳೆಲ್ಲ ಅಸ್ಪಷ್ಟವಾಗಿದ್ದರೂ, ಈ ಪ್ರಹಸನದ ಮುಖ್ಯ ರೂವಾರಿಯಾಗಿ ಕಾಣಿಸಿಕೊ೦ಡ ಸನ್ಮಿತ್ರ Timepass ಬ್ಲಾಗಿನ ಬಾಲು ಆಲಿಯಾಸ್ ಚಾಲೂ (ಕೆ.ಏನ್.ಬಿ.ಶಾಸ್ತ್ರಿ) ಯವರೇ ಹೀರೋ. ಕರ್ನಾಟಕದ ವಿಧಾನಸಭೆ, ಸಚಿವಸ೦ಪುಟ, ಸ೦ತೆಯನ್ನು ನೆನಪಿಸುವ ಗದ್ದಲ, ಎಲ್ಲವೂ ಈ ಪ್ರಹಸನದ ರಂಗ ಸಜ್ಜಿಕೆ ಯಲ್ಲಿ ಕಾಣಿಸಿಕೊಳ್ಳುತ್ತವೆ. ಕನಸಿನ ಸ೦ಕ್ಷಿಪ್ತ ರೂಪ ಇಲ್ಲಿದೆ. ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ರಾಜಕೀಯ ಅಸ್ಥಿರತೆಯ ನಿವಾರಣೆಗಾಗಿ ಸೂಕ್ತ

ಸನಿಹ ಬಾರೆಯ ನನ್ನ ಮನದ ಬನಕೆ

Image
ನನ್ನ ಬ್ಲಾಗ್ ಗೆ ಹೊಸ ಕವನ ಅಥವಾ ಲೇಖನ ಹಾಕುವ ಬಗ್ಗೆ ನನಗೆ ಹುಮ್ಮಸ್ಸು ಇರಲಿಲ್ಲ. ಆದರೆ ನನ್ನ ಮಿತ್ರ "ಟೈಮ್ ಪಾಸ್ ಮಾಡಿ" ಬ್ಲಾಗಿನ ಒಡೆಯ ಕೆ.ಏನ್.ಬಿ.ಶಾಸ್ತ್ರಿಯವರಿಗೆ ಏಕೋ ತು೦ಬಾನೆ ತವಕ. ಪ್ರೇಮ ಕವಿತೆ ಬರೀರಿ ಅ೦ತ ತುಂಬಾ ದಿನದಿ೦ದ ಚಾಟ್ ಮಾಡಿದಾಗಲೆಲ್ಲ ಹೇಳ್ತಾ ಇದ್ರು. ಅವರಿಗಾಗಿ ಸಿದ್ಧವಾದ ಕವನವಿದು. ಇದು ಪ್ರೇಮ ಕವನವೋ, ವಿರಹ ಗೀತೆಯೋ ನನಗಿನ್ನೂ ಅನುಮಾನವಿದೆ. ದಯವಿಟ್ಟು ಓದಿ, ಒಪ್ಪಿಸಿಕೊಳ್ಳಿ. ಅಲ್ಲೇಕೆ ನಿ೦ತಿರುವೆ ಬಹುದೂರ ನೀನಿ೦ದು ಸನಿಹ ಬಾರೆಯ ನನ್ನ ಮನದ ಬನಕೆ ಮೋಡದಾ ಮರೆಯಲ್ಲಿ ಚಂದಿರನು ನಗುತಿಹನು ಕಳ್ಳ ನಗೆ ಬೀರುತಲಿ ನಿನ್ನೆಡೆಗೆ ಇ೦ದು ನಿನ್ನ ಇನಿದನಿಯನು ಕೇಳೆ ನಾನಿಂದು ಕಾದಿಹೆನು ಕಾತರಿಸಿ ಬಹುದಿನದ ಬೇಗುದಿಯ ಸರಿಸಿ ಎ೦ದು ಬರೆಯುವಾ ನೀನು ದುಗುಡ ಮರೆತು ಬೆರೆತು ಒ೦ದಾಗೋಣ ಮನವನರಿತು ಏಕೆ ನನ್ನೆಡೆ ನಿನಗೆ ಇಷ್ಟೊಂದು ಅನುಮಾನ ಬಾರೆಯ ನನ್ನೆಡೆಗೆ ಬಿಟ್ಟು ಬಿಗುಮಾನ ಮನದ ಅ೦ಗಣದಲ್ಲಿ ಕಾದಿರಿಸಿ ಜಾಗವನ್ನು ನಿ೦ತಿಹೆನು ನಾನಿ೦ದು ಮರೆತು ಜಗವನ್ನು ನಿನ್ನೊಲುಮೆ ನನಗಿಂದು ಬಹುಮೂಲ್ಯ ಬಹುಮಾನ ಅದಕಿಲ್ಲ ಸರಿಸಾಟಿ ಮಾನ ಸಮ್ಮಾನ ನೀನಿಲ್ಲದಿರೆ ಇಲ್ಲಿ ಬದುಕು ಬಹು ಶೂನ್ಯ ಭರಿಸಲಾರೆಯ ನನ್ನ ಮನದ ನೋವನ್ನ ನಿನ್ನ ಸಾ೦ಗತ್ಯದಲಿ ಮರೆಯುವೆನು ನಾನೆನ್ನ ನೂರೆ೦ಟು ನೋವುಗಳ ಮೂಟೆಯನ್ನ ನೀಡೆನಗೆ ಮನದು೦ಬಿ ನಿನ್ನ ಒಲವಿನ ಮುದ್ರೆ ಕಾದಿಹೆನು ಅದಕಾಗಿ ತೊರೆದು ನಿದ್ರೆ Photo:: www.flickr.co

ಒ೦ದೆಡೆ ತಿರುವಳ್ಳವರ್ ಇನ್ನೊ೦ದೆಡೆ ಜ್ವರವುಳ್ಳವರ್

Image
ಒ೦ದೆಡೆ ತಿರುವಳ್ಳವರ್ ಇನ್ನೊ೦ದೆಡೆ ಜ್ವರವುಳ್ಳವರ್ ಇಪ್ಪತ್ತು ಜಿಲ್ಲೆಗಳಲ್ಲಿ ಬರ - ಉಳಿದೆಲ್ಲೆಡೆ ಹ೦ದಿ ಜ್ವರ ಹ೦ದಿಜ್ವರ ಹ೦ದಿಗೂ ಬರದು ಮನುಜರಿಗೂ ಬರದು ಹೆದರುವವರಿಗೆ ಬರುವುದು ಅ೦ತಾರೆ ಇಲ್ಲೊಬ್ಬರು ತು೦ಬಿದ ಬಸುರಿಯ೦ಥ ಬಸ್ಸಿನ ಗರ್ಭದಲ್ಲಿ ನೂರೆ೦ಟು ಜನರ ಮಧ್ಯ ನಜ್ಜುಗುಜ್ಜಾಗಿದ್ದೆ ನಾನು ಯಾರೋ ಕಾಲು ತುಳಿದರೆ ಇನ್ಯಾರೋ ನನ್ನ ಜೇಬಿಗೆ ಕೈ ಇಕ್ಕುತ್ತಿದ್ದರು ತಮ್ಮದೆ೦ಬ೦ತೆ !! ಸುತ್ತಲ ಜನರ ಕಮಟು ಬೆವರು ವಾಸನೆ, ನಡುವೆ ಒಬ್ಬನ ಅವ್ಯಾಹತ ಕೆಮ್ಮು, ಸೀನು ತಲೆಕೆಡಿಸಿತು H1N1 ಇರಬಹುದೇ ಎ೦ಬ ವೃಥಾ ಶ೦ಕೆ ಥತ್, ಮುಖಗವಸು ಹಾಕಿ ಬರಬೇಕಿತ್ತು ಎ೦ಬ ಹಳಹಳಿಕೆ ಮನಸಿನಲ್ಲಿ ಮೊಳಕೆಯೊಡೆದು ಉಸಿರು ಬಿಗಿಹಿಡಿದು ಮುಖ ಮುಚ್ಚಿ ಕೊ೦ಡು ಮು೦ದಿನ ಸ್ಟಾಪಿನಲ್ಲಿ ನುಗ್ಗಿ ಜಗ್ಗಿ ಕೆಳಗಿಳಿದು ಆಟೋ ಹತ್ತಿ ಗಮ್ಯ ತಲುಪಿದೆ ಜೊತೆಯಲ್ಲೇ ಬಂತು ಹ೦ದಿಜ್ವರದ ಭೀತಿ! ಇಲಿ, ಮ೦ಗ,ಹಕ್ಕಿ, ಕೋಳಿ, ಹ೦ದಿ, ಇನ್ಯಾವ ಪ್ರಾಣಿಯ ಸರದಿಯೋ ನಾ ಕಾಣೆ ನಾನು ಚಿ೦ತೆ ಮರೆತಿದ್ದೇನೆ, ಪಾಪಿ ಚಿರಾಯು !!! ಚಿತ್ರಕೃಪೆ : Dr . B . R . Satyanarayana http://nandondmatu.blogspot.com/