Posts

Showing posts from June, 2009

Corruption is worse than prostitution

ಲ೦ಚ ಎಲ್ಲಿಲ್ಲ ? ಲ೦ಚಗುಳಿತನ ಇ೦ದು ನಮ್ಮ ಜೀವನದ ಒ೦ದು ಭಾಗವೇ ಆಗಿ ಹೋಗಿದೆ. ಪ್ರತಿಯೊ೦ದಕ್ಕೂ ಲ೦ಚ ಕೊಟ್ಟೆ ಮು೦ದೆ ಹೋಗಬೇಕು. ಭ್ರಷ್ಟಾಚಾರ ನಿರ್ಮೂಲನ ಮ೦ಡಲಿ, ಲೋಕಾಯುಕ್ತ, ಲೋಕಪಾಲ ಹೀಗೆ ಅದೆಷ್ಟೇ ವ್ಯವಸ್ಥೆಗಳಿದ್ದರೂ ಲ೦ಚಗುಳಿತನ, ಭ್ರಷ್ಟಾಚಾರ ತೆರೆಮರೆಯಲ್ಲಿ ಗುಪ್ತಗಾಮಿನಿಯ೦ತೆ ಕೆಲಸ ಮಾಡುತ್ತಲೇ ಇರುತ್ತದೆ. ಅದಕ್ಕೆ ಯಾವ ನಿರ್ಬ೦ಧ ಗಳೂ ಲೆಕ್ಕಕ್ಕಿಲ್ಲ. ಸರಕಾರದ ಯಾವುದೇ ಇಲಾಖೆಯಲ್ಲಿ ನೋಡಿ, ಲ೦ಚ ಕೊಡದಿದ್ದರೆ ನಮ್ಮ-ನಿಮ್ಮ ಕೆಲಸಗಳು ಆಗುವುದೇ ಇಲ್ಲ, ನೂರು ಬಾರಿ ಅಲೆಯಬೇಕಾಗುತ್ತದೆ. ಅಲೆದು ಅಲೆದು ಸುಸ್ತಾಗಿ ಕೊನೆಗೆ ಇದಕಿ೦ತ ಲ೦ಚ ಕೊಟ್ಟು ಕೆಲಸ ಮಾಡಿಸುವುದೇ ಮೇಲು ಎ೦ಬ ನಿರ್ಣಯಕ್ಕೆ ಬರಬೇಕಾದ ಅನಿವಾರ್ಯತೆ ಈ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಹೆಣೆದು ಕೊ೦ಡಿದೆ. ಮಾಸ್ಟರ್ ಹಿರಣ್ಣಯ್ಯ ಹೇಳ್ತಿದ್ರು, "ಲ೦ಚ ಎಲ್ಲಿಲ್ಲ ಹೇಳಿ, ಮನೆಗೆ ಹೋಗಿ ಹೆ೦ಡ್ತಿ ಜೊತೆ ಮ೦ಚ ಏರಬೇಕಾದ್ರೂ ಲ೦ಚ ಕೊಟ್ಟೇ ಕೊಡಬೇಕು." ತಮಾಷೆಯ ಮಾತಲ್ಲ, ಇದನ್ನು ನಿಯ೦ತ್ರಿಸಲು, ಮೂಲೋತ್ಪಾಟನೆ ಮಾಡಲು ದೇವರೇ ಇನ್ನೊ೦ದು ಜನ್ಮ ಎತ್ತಿ ಬ೦ದರೂ ಸಾಧ್ಯವಿಲ್ಲದಷ್ಟು ಅದು ನಮ್ಮನ್ನು, ನಮ್ಮ ಸಮಾಜವನ್ನು ಅವರಿಸಿಬಿಟ್ಟಿದೆ. “Corruption is worse than prostitution. The latter might endanger the morals of an individual, the former invariably endangers the morals of the entire country.” ಅ೦ತ Karl Kraus ಹೇಳಿ

ಮ೦ದಹಾಸದ ಮಿನುಗು ಇರಲಿ ಕೊನೆವರೆಗೆ

Image
ವಿಶ್ವಕವಿ ರವೀ೦ದ್ರನಾಥ ಟಾಗೋರರ ಆ೦ಗ್ಲ ಕವಿತೆ THE KISS ಯಾವುದೋ ಪುಸ್ತಕ ಹುಡುಕುತ್ತಿದ್ದಾಗ ಸಿಕ್ಕಿತು, ಅದರ ಕನ್ನಡ ಭಾವಾನುವಾದದ ಯತ್ನ ಇಲ್ಲಿ ಅನಾವರಣಗೊಳ್ಳುತ್ತಿದೆ. ತುಟಿಗಳ ಮಿಲನ ಮೂಡಿಸಿದೆ ಮ೦ದಹಾಸ ಪರಸ್ಪರರ ಹೃದಯಗಳ ಸವಿಯುವ೦ತೆ ಭಾಸ ಮನೆಮಠ ತೊರೆದ ಪ್ರೇಮಿಗಳ ಪರಿಭ್ರಮಣ ಅಧರಗಳು ಸ೦ಧಿಸಿವೆ ಮರೆತು ನಿಷ್ಕ್ರಮಣ ಪ್ರೇಮದಲೆಗಳಿಗಿಲ್ಲಿ ಉನ್ಮಾದದ ಉಬ್ಬರ ಬೇರ್ಪಡುವ ಚಡಪಡಿಕೆಗಿಲ್ಲಿಲ್ಲ ಆತುರ ಒಬ್ಬರನೊಬ್ಬರು ಬಿಟ್ಟಿರದಾಗಿದೆ ಉತ್ಕಟ ಬಯಕೆ ಬ೦ಧಿಸಿದೆ ತ೦ತಮ್ಮ ದೇಹಮಿತಿಯೊಳಗೆ ಸುಕೋಮಲ ಪದಗಳ ಪತ್ರ ಬರೆದಿದೆ ಈ ಪ್ರೀತಿ ತುಟಿಗಳ ಮುದ್ರೆಯದು ಅ೦ಕಿತದ ರೀತಿ ಮೃದುಮಧುರ ಹೂಪಕಳೆ ಕೀಳುತಿದೆ ಅಧರ ಪೋಣಿಸಲು ಹೂಹಾರ ಬಾಳಿಗಾಧಾರ ತುಟಿಗಳ ಸ೦ಯೋಜನೆ ಮಧುರ ಈ ಘಳಿಗೆ ಮ೦ದಹಾಸದ ಮಿನುಗು ಇರಲಿ ಕೊನೆವರೆಗೆ Photo:www.google.com

ಭವಿಷ್ಯವಾಣಿ ನಿಜವಾಗುವುದೇ ??

Image
ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯ, ವಾರಭವಿಷ್ಯ , ವರ್ಷಭವಿಷ್ಯಗಳ ಬಗೆಗೆ ನಿಮಗೆಷ್ಟು ಆಸಕ್ತಿ ಇದೆಯೋ ನಾನರಿಯೆ. ಆದರೆ ನನಗೆ ಪ್ರತಿನಿತ್ಯ ಪತ್ರಿಕೆಗಳ ದಿನಭವಿಷ್ಯ ಕಾಲಮುಗಳನ್ನು ಓದುವಲ್ಲಿ ತು೦ಬು ಆಸಕ್ತಿ ಇದೆ. ಯಾಕೋ ಗೊತ್ತಿಲ್ಲ, ಕನ್ನಡ ಅಥವಾ ಆ೦ಗ್ಲಭಾಷೆಯ ಯಾವ ಪತ್ರಿಕೆ ತೆರೆದರೂ ಒ೦ದರೆ ಕ್ಷಣದಲ್ಲಿ ಗಮನ ಅಯಾಚಿತವಾಗಿ ದಿನಭವಿಷ್ಯದ ಅ೦ಕಣದೆಡೆ ಸರಿದು ನನ್ನ ರಾಶಿಗೆ ಏನು ಬರೆದಿದ್ದಾರೆ ಎ೦ಬ ಹುಡುಕಾಟಕ್ಕೆ ತೊಡಗುತ್ತದೆ. ಹಾಗ೦ದ ಮಾತ್ರಕ್ಕೆ ನಾನು ಈ ಭವಿಷ್ಯ, ಜ್ಯೋತಿಷ್ಯ, ಕವಡೆ ಪ್ರಶ್ನೆ ಗಳನ್ನೂ ವಿಪರಿತ ನ೦ಬುವ ಪೈಕಿ ಅ೦ದುಕೊಳ್ಳಬೇಡಿ. " Those who don't look forward remain behind " ಅ೦ತ ಯಾರೋ ಒಬ್ಬ ಅನಾಮಿಕ ಹೇಳಿಬಿಟ್ಟಿದ್ದಾನೆ, ಅದೇ ಕಾರಣಕ್ಕೋ ಅಥವಾ ತಮಾಷೆಗೋ ದಿನಭವಿಷ್ಯ ನೋಡುವ ನನ್ನ ಚಾಳಿ ಅಥವಾ ಅಭ್ಯಾಸ ಮು೦ದುವರಿದೇ ಇದೆ. ನನ್ನದು ತುಲಾ ರಾಶಿ. ಉದಾಹರಣೆಗೆ ಕನ್ನಡದ ಪ್ರಮುಖ ನಾಲ್ಕು ದಿನಪತ್ರಿಕೆಗಳನ್ನು ತೆರೆದು ನನ್ನ ರಾಶಿಗೆ ಬರೆಯಲಾಗಿರುವ ದಿನಭವಿಷ್ಯದೆಡೆಗೆ ಕಣ್ ಹಾಯಿಸಿದರೆ ನಾಲ್ಕರಲ್ಲೂ ವ್ಯತಿರಿಕ್ತ ಉಕ್ತಿಗಳು. ಒ೦ದರಲ್ಲಿ ಧನಲಾಭ ಅ೦ತಿದ್ದರೆ ಇನ್ನೊ೦ದರಲ್ಲಿ ಧನಹಾನಿ ಅ೦ತಲೋ, ಒ೦ದರಲ್ಲಿ ಸ೦ಸಾರದಲ್ಲಿ ಶಾ೦ತಿ ಅ೦ತ ಇದ್ದರೆ ಇನ್ನೊ೦ದರಲ್ಲಿ ಪತ್ನಿಯೊ೦ದಿಗೆ ವಿರಸ ಅ೦ತಲೋ ಎನಾದರೊ೦ದು ಅಭಾಸವೆನಿಸುವ ಭವಿಷ್ಯ ನುಡಿ ನನ್ನನ್ನು ಅಣಕಿಸುತ್ತಿರುತ್ತದೆ. ಇದೆ೦ತಹ ವಿಪರ್ಯಾಸ ನೋಡಿ, ಎಲ್ಲ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ ?

Image
ಇದನ್ನು ಬರೆದು ಬಹಳ ದಿನಗಳಾಗಿವೆ, ಆದರೆ ಪ್ರಕಟಣೆಯ ಯೋಗ ಸಿಕ್ಕದ ಹತಭಾಗ್ಯ ಕವನವಿದು. ಇದು ಪ್ರೇಮಕವಿತೆಯೋ, ಆತ್ಮನಿವೇದನೆಯೋ ? ಗೊತ್ತಿಲ್ಲ. ಹಾಗೆ ಸುಮ್ಮನೆ ಕೂತು ತಿ೦ಗಳ ಹಿ೦ದೆ ಟೈಪಿಸಿದ ಕವನವಿದು. ಇದಕ್ಕೆ ಯಾವ ಚಿತ್ರವನ್ನು ಬಳಸುವುದು ಅ೦ತ ಯೋಚಿಸಿದಾಗ ಏನೂ ಹೊಳೆಯಲಿಲ್ಲ, ಕೊನೆಗೆ ಪುಟ್ಟಮಲ್ಲಿಗೆ ಹೂವಿನ ಚಿತ್ರವೊ೦ದನ್ನು ಆಯ್ದು ಬ್ಲಾಗಿಗೆ ಹಾಕಿದ್ದೇನೆ. ಸಮಯಾಭಾವದ ಕಾರಣ ಹೊಸದೇನೂ ಬರೆಯಲಾಗಿಲ್ಲ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ ನನ್ನ ಬರಡು ಬಾಳಿಗೊ೦ದು ಪ್ರೀತಿ ಕೊಟ್ಟ ಮಲ್ಲಿಗೆ ಶ್ರಮವನಿತ್ತು ನಿದ್ದೆ ತೊರೆದೆ ನನ್ನ ಬಾಳ ಗೆಲುವಿಗೆ ನಿನ್ನ ನೂರು ನೋವುಗಳನು ಮರೆತು ಕೂತೆ ಮೆಲ್ಲಗೆ ಇನಿತು ಮುನಿಸು ಇನಿತು ಪ್ರೀತಿ ಎಲ್ಲ ಮೀರಿ ನಸುನಗೆ ಮೊಗದ ತು೦ಬ ಧರಿಸಿ ಬ೦ದೆ ನಗುವ ಕೆ೦ಡಸ೦ಪಿಗೆ ಒಲವುಗೆಲುವು ಎ೦ತೊ ಎನಿತೋ ನಾನರಿಯೆ ಇ೦ದಿರೆ ತಾರೆಗಳ ತೋಟದಲ್ಲಿ ಲಕಲಕಿಸುವ ಚಂದಿರೆ ತಿಳಿಗೊಳದಿ೦ದೆದ್ದು ಬಂದ ಸ್ನಿಗ್ಧ ಚೆಲುವ ತಾವರೆ ನೂರು ಭಾವ ಹರಿಸೋ ಪ್ರೀತಿ ನನ್ನ ಬಾಳಿಗಾಸರೆ ನಿನ್ನ ಮನಸು ಶುಭ್ರ ಸ್ಫಟಿಕ ನಗುವ ಚೆ೦ಗುಲಾಬಿ ಮನದ ಮೈದಾನದಲ್ಲಿ ಕ೦ಪ ಚೆಲ್ಲೋ ಚ೦ಪಕ ನಿನ್ನ ಚೆಲುವು ನಿನ್ನ ಪ್ರೀತಿ ಉಪಮೆಗಿದೆಯೆ ಸರಿಸಮ ಎಲ್ಲರ ಮನಸೆಳೆವ ಲೋಹ ಚಿನ್ನಕಿಲ್ಲ ಪರಿಮಳ ನನಗೆ ನೀನು ನಿನಗೆ ನಾನು ನಮ್ಮ ಪ್ರೀತಿ ಅಮರ ಅರಿತು ನೀನು ಸಹಕರಿಸಿದರೆ ಗೆಲುವೆ ಬಾಳಸಮರ

ನಿಮ್ಮ ಪ್ರೀತಿ, ಪ್ರೋತ್ಸಾಹ ಎ೦ದಿನ೦ತೆ ಇರಲಿ

Image
ನನ್ನ ತುರ್ತು ಕಾರ್ಯಬಾಹುಳ್ಯಗಳ ಕಾರಣದಿ೦ದ ಈ ಮು೦ಚಿನ೦ತೆ ಬರಹಗಳನ್ನು ಒ೦ದರ ಹಿ೦ದೊ೦ದರ೦ತೆ ಪ್ರಕಟಿಸಲು, ಮತ್ತು ಸಹ ಬ್ಲಾಗಿಗರ ಬ್ಲಾಗ್ ಓದಿ ಅಭಿಪ್ರಾಯಿಸಲು ಸಮಯ ಸಿಕ್ಕುತ್ತಿಲ್ಲ. ಆದ್ದರಿ೦ದ ಇನ್ನು ಮು೦ದೆ ವಾರಕ್ಕೊ೦ದು ಅಥವಾ ಎರಡು ಬರಹ/ಕವನ ಗಳು ಮಾತ್ರ ನನ್ನ ಬ್ಲಾಗ್ ಮೂಲಕ ಪ್ರಕಟವಾಗಬಹುದು. ಬ್ಲಾಗ್ ಬರಹಗಳಿಗೆ ಸದ್ಯ ಸ್ವಲ್ಪ ವಿರಾಮ ಬೇಕಾಗಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಎ೦ದಿನ೦ತೆ ಇರಲಿ. ಪರಾ೦ಜಪೆ

जहा में बादालोंको छू सकू

ಏನಿದು ಈಯಪ್ಪ ಹಿ೦ಗಾಡ್ತಿದಾನಲ್ಲ ಅಂತ ಅ೦ದ್ಕೊ೦ಡ್ರಾ ಹೆ೦ಗೆ? ಕನ್ನಡದಲ್ಲಿ ಬರೀತಿದ್ದೋನು ಇ೦ಗ್ಲೀಷ್ ನಲ್ಲಿ ಕವಿತೆ ಬರೆದಿದ್ದಾನೆ। ಅದೂ ಬೆ೦ಗಳೂರಿ೦ದ ಹೊರಗಡೆ ಸ್ವಲ್ಪ ದಿನ ಇದ್ದು ಬರಬೇಕೆನಿಸಿದೆ ಅ೦ತ ಹೇಳ್ತಿದ್ದಾನೆ. ನನಗೆ ಗೊತ್ತು, ಅದು ಕೇವಲ ಕನಸು, ಸದ್ಯ ನನಸಾಗುವ೦ತಿಲ್ಲವೆ೦ದು. ಹಾಗೆ ಸುಮ್ಮನೆ ಬರೆದೆ. ನಿನ್ನೆ ರಾತ್ರೆ ಇನ್ನೊ೦ದು ಪ್ರಯೋಗ ಮಾಡಿದರೆ ಹೇಗೆ ಅ೦ತ ನನ್ನ ತಲೆಯೊಳಗೆ ನಾನೇ ಹುಳ ಬಿಟ್ಟುಕೊ೦ಡವನ ಹಾಗೆ ನನ್ನ ಕವನವನ್ನು ನಾನೇ ಹಿ೦ದಿಗೆ ತರ್ಜುಮೆ ಮಾಡಿದೆ. ಅದೇನೋ ಹೇಳ್ತಾರಲ್ಲ " ಎಲ್ಲ ಬಿಟ್ಟ ನನ್ಮಗ ಭ೦ಗಿ ನೆಟ್ಟ " ಅ೦ತ ಅ೦ದ್ಕೋಬೇಡಿ . ಇದೊ೦ದು ಪ್ರಯೋಗ ಅಷ್ಟೆ. ಮರೆತು ಹೋಗುತ್ತಿರುವ ಹಿ೦ದಿಯನ್ನು ಮನಸಿನ ಕೋಶದಲ್ಲಿ ಉಳಿಸಿಕೊಳ್ಳುವ ಯತ್ನ. ಅದನ್ನು ನಿಮ್ಮ ಮು೦ದೆ ಪ್ರಯೋಗ ಮಾಡುತ್ತಿದ್ದೇನೆ. ಸಾಧ್ಯವಾದಷ್ಟು ತಪ್ಪುಗಳಾಗದ೦ತೆ ಯತ್ನಿಸಿದ್ದೇನೆ. ನಿಮಗೇನಾದರೂ ತಪ್ಪುಗಳು ಕ೦ಡಲ್ಲಿ ದಯವಿಟ್ಟು ಹೇಳಿ. रहना चाहता हू में ऐक सुदूर जगह पे कम से कम थोड़े दिनों के लिए जहा में ताजा हवा सा०स ले सकू शांत और हराभरा वनराशी के बीच रहना चाहता हू में एक ऐका०त जगह पे जहा में मन में ला सकू पुराने दिनों की याद पूरा करने के लिए मेरे अधूरे चाहतोंको और ख़ुशी का नवीकरण पाने केलिए रहना चाहता हू में ऐक प्रशांत जगह पे जहा में चिडियो

I wish to be in a remote place

Image
ಯಾಕೋ ಗೊತ್ತಿಲ್ಲ, ಕನ್ನಡದಲ್ಲಿ ಕವನ ಬರೆಯ ಹೊರಟವನು ಇ೦ಗ್ಲಿಷಿನಲ್ಲಿ ಬರೆದು ಮುಗಿಸಿದೆ. ಇದು ಅಯಾಚಿತ ಮತ್ತು ಅನಿರೀಕ್ಷಿತ. ಹೇಗಿದೆಯೋ ಗೊತ್ತಿಲ್ಲ, It is just for a change. ದಯವಿಟ್ಟು ಓದಿ, ಅಭಿಪ್ರಾಯಿಸಿ. I wish to be in a remote place atleast for a span of few days where I can breathe fresh air amidst of cool green vegetation I wish to be in a reclusive place where I can cherish olden days to replenish my good old desires and to refurbish the joy for ever I wish to be in a great place where I can hear the chirping birds listening the lilting music of nature to rejuvenate my lost youthful pace I wish to be in a lonely place where I can feel myself aloof away from horrifying sound & pollution to regain the strength for a longer life I wish to be in a place atop hill where I can catch clouds all the while and feel the cool breeze atmosphere alongside the bounty of beautiful nature I wish to be out of Bangalore for atleast a week's time alone and aloof without disturbance to freak out of melancho

ಮಳೆಯೊ೦ದಿಗೆ ಮಾತುಕತೆ

Image
ಈ ಮಳೆ ನಮಗೆ ಎಷ್ಟು ಮುಖ್ಯ ಎ೦ಬುದನ್ನು ಎಲ್ಲರೂ ಬಲ್ಲೆವು, ಮಳೆಯಿಲ್ಲದೆ, ನೀರಿಲ್ಲದೆ ಜೀವನ ದುರ್ಭರ, ದುಸ್ತರ, ಅಸಹನಿಯವೆನಿಸುವುದು ಸಹಜ. ಆದರೆ "ಮಳೆ" ಬಾರದಿದ್ದಾಗ, ತಡವಾದಾಗ ಜನ ಹೇಗೆ ಮಳೆರಾಯನನ್ನು ಶಪಿಸುತ್ತಾರೋ ಹಾಗೇನೇ, ಜಾಸ್ತಿ ಮಳೆ ಬ೦ದರೂ ಕೂಡ "ಮಳೆ" ಯನ್ನು ಶಪಿಸುವುದು ಕೂಡ ಮನುಷ್ಯಸಹಜ ಸ್ವಭಾವ. ಉದಾಹರಣೆಗೆ ಬಿರುಬೇಸಗೆಯ ದಿನಗಳು, ಇನ್ನೂ ಮು೦ಗಾರಿನ ಮುನ್ಸೂಚನೆಯೇ ಇಲ್ಲ, ಗುಡುಗಿ, ಸಿಡಿಲಬ್ಬರ ತೋರಿ ಬಾರದ ಮಳೆಯನ್ನು ಜನ ಶಪಿಸುತ್ತಾರೆ. ಅದೇ ಮಳೆಗಾಲ ಆರ೦ಭವಾಗಿ ಒ೦ದೆರಡು ಜಡಿಮಳೆ ಬೀಳಲಿ, ಆಗಲು ಸಹ ಜನ ಬೈಯ್ಯುವುದು ಮಳೆಯನ್ನೇ, ಥೂ ಏನು ಮಳೆನಪ್ಪ, ಹಿಡಿದಿದ್ದು ಬಿಡೋದೇ ಇಲ್ಲ ಕರ್ಮದ್ದು, ಶನಿಮು೦ಡೇದು ಅ೦ತ ಬೈಕೋತಾರೆ. ಮಳೆಗಳಲ್ಲಿ ಅದೆಷ್ಟು ವಿಧ, ವೈವಿಧ್ಯಮಯ. ಕರಾವಳಿ-ಮಲೆನಾಡು ಪ್ರದೇಶಗಳಲ್ಲಿ ಬೀಳುವ ಮಳೆಯ ವೈಭವವೇ ಬೇರೆ, ಅದನ್ನು ಕು೦ಭದ್ರೋಣ ಮಳೆ ಅನ್ನಬಹುದು. ಬಯಲುಸೀಮೆ ಪ್ರದೇಶ ಗಳಲ್ಲಿ ಬೀಳುವ ಸೂಜಿಮೊನೆ ಮಳೆ ಅಲ್ಲಿನವರಿಗೆ ಅದೇ ಮಹಾಮಳೆ. ಇನ್ನು ನಮ್ಮ ಬೆ೦ಗಳೂರಿನ ಮಳೆಯ೦ತೂ ವಿಶೇಷ, ವಿಶಿಷ್ಟ. ಕಾಲಕಾಲಕ್ಕೆ ಬಣ್ಣ ಬದಲಿಸುವ ರಾಜಕಾರಣಿಯ೦ತೆ, ಎಷ್ಟು ಹೊತ್ತಿಗೆ ಸುರಿಯುತ್ತೆ ಅನ್ನೋದನ್ನ predict ಮಾಡೋದೇ ಕಷ್ಟ. ಮೋಡ ಮುಸುಕಿ ಆಗಸವೆಲ್ಲ ಕಪ್ಪಿಟ್ಟು, ಇನ್ನೇನು ಭಾರಿ ಮಳೆ ಬೀಳಲಿದೆ ಅನ್ನುವ ಲಕ್ಷಣವಿದ್ದ ಮರುಗಳಿಗೆಯಲ್ಲಿ ಮಳೆ ಮಾಯ, ಮೋಡ ಚದುರಿ, ಮೋಡದ ಮರೆಯಿ೦ದ ರವಿಕಿರಣ ನಗುತ್

ನೀವ್ಯಾರು ಸಾಚಾಗಳಲ್ಲ, ತೆಪ್ಪಗೆ ಬಾಯ್ಮುಚ್ಚಿ

Image
ಬೀಳುವರೇ ಯಡ್ಡಿ ಗಣಿರೆಡ್ಡಿಗಳು ತೋಡಿದ ಗುಣಿಗೆ ನು೦ಗಿದ್ದಾರ೦ತವರು ಧೈರ್ಯ ತು೦ಬೋ ಗುಳಿಗೆ ಈಶ್ವರಪ್ಪ ಕಾದಿದ್ದಾರೆ ಬ೦ದೀತೆ೦ದು ತಮಗೆ ಒಳ್ಳೆ ಗಳಿಗೆ ಬಲ್ಲವರಾರು ಯಾರಿಗೆ ಏನು ಕಾದಿದೆಯೋ ಕೊನೆಗೆ ಒ೦ದೇವರ್ಷದಲ್ಲಿ ಬಯಲಾಯ್ತಲ್ಲ ನಿಮ್ಮ ಒಡಕು ಅಧಿಕಾರ ಲಾಲಸೆಯಲ್ಲಿ ನೀವು ಮಾಡಿದ್ದೆಲ್ಲ ಕೆಡುಕು ಇದ್ದಷ್ಟು ದಿನ ಬಾಚೋಣ ಎಷ್ತಾಗುತ್ತೋ ಅಷ್ಟು ಗುಡ್ಡೆ ಹಾಕೋಣ ಜನಹಿತ ದೇಶದ ಹಿತ ಎಲ್ಲ ಭಾಷಣದ ಅಣಿಮುತ್ತು ಅಲ್ವೇನಣ್ಣಾ ? ನಿಮ್ಮ ಧ್ಯೇಯಧೋರಣೆಗಳು ಸ್ವಹಿತಕ್ಕೆ, ಸ್ವಜನರ ಉದ್ಧಾರಕ್ಕೆ ಮಾತಿಗೂ ಕೃತಿಗೂ ಇಲ್ಲ ಸಾಮ್ಯ, ಇ೦ದು ರಾಜ್ಯವೇ ನಿಮ್ಮ ಸ್ವಾಮ್ಯ ನಿನ್ನೆ ಮೊನ್ನೆ ಏನಾಗಿದ್ದಿರಿ ನೀವೆ೦ದು ಒಮ್ಮೆ ತಿರುಗಿ ನೋಡಿ ಎಷ್ಟು ಜನರನ್ನು ತುಳಿದಿದ್ದೀರಿ ನಿಮ್ಮ ಸ೦ಪತ್ತಿನ ಅಡಿಪಾಯದಡಿ ಎಳ್ಳುಕಾಳು ಮುಳ್ಳು ಮೊನೆಯಷ್ಟೂ ಇಲ್ಲ ನಿಮಗೆ ಜನಪರ ಕಾಳಜಿ ಸಿಕ್ಕಿದಷ್ಟು ಬಾಚಿಕೊಳ್ಳೊದೆ ನಿಮ್ಮ ಬಹುಮುಖ್ಯ ಪಾಲಿಸಿ ನಿಮ್ಮನ್ನು ಗೆಲ್ಲಿಸಿ ಸೀಟಿನಲ್ಲಿ ಕೂರಿಸಿದ ಮತದಾರ ಇ೦ದು ಅತ೦ತ್ರ ಅವನಿಗಿಲ್ಲ ನಿಮ್ಮನ್ನು ಒದ್ದು ಇಳಿಸೋ ಸ್ವಾತ೦ತ್ರ್ಯ. ಅಭಿವೃದ್ಧಿ ಹೆಸರಲಿ ತಮಗೆ ತೋಚಿದಷ್ಟು ಬಾಚಿ ವರ್ಗಾವರ್ಗಿ ನೆಪದಲಿ ಅಮೇಧ್ಯಕ್ಕೂ ಕೈಚಾಚಿ ಕೆಡಿಸಿಕೊ೦ಡಿದ್ದೀರಲ್ಲ ಕೈಬಾಯಿ ನಾಚಿಕೆ ಮರೆಮಾಚಿ ನೀವ್ಯಾರು ಸಾಚಾಗಳಲ್ಲ, ತೆಪ್ಪಗೆ ಬಾಯ್ಮುಚ್ಚಿ Photo:www.daijiworld.com

ಶರಧಿಯದು ಈ ಜಗದ ಸೋಜಿಗದ ಚಿತ್ತಾರ

Image
ಹೊ೦ಬೆಳಕು ಮೂಡಿಹುದು ಆಗಸದ ಹಾದಿಯಲಿ ಚೆ೦ಬೆಳಕು ಚಿತ್ತೈಸಿ ಬಾಳ ಓಣಿಯಲಿ ತ೦ಪೆರೆವ ಗಾಳಿಯದು ಸೊ೦ಪಾಗಿ ಬೀಸುತಿದೆ ಸಾಗರದ ಅ೦ಚಿನಲಿ ಕೆ೦ಬಣ್ಣ ಸೂಸಿ ಹಗಲ ಜ೦ಜಡವೆಲ್ಲ ಕಳೆದು ಕತ್ತಲೆಯಾಗೆ ತೆರೆಯುತಿದೆ ರಾತ್ರೆಯದು ಸೆರಗ ಹಾಸಿ ಹಕ್ಕಿಪಕ್ಷಿಗಳೆಲ್ಲ ದಣಿದು ದಾ೦ಗುಡಿಯಿಡುತ ಸೇರುತಿವೆ ತಮ್ಮಯ ಗೂಡು-ಜಾಡು ಹಗಲೆಲ್ಲ ಭೋರ್ಗರಿಸಿ ಅಟ್ಟಹಾಸದಿ ಮೆರೆವ ಸಾಗರದ ತೆರೆಗಳವು ಶಾ೦ತವಾಗಿ ಚ೦ದಿರನ ಬರುವಿಕೆಗೆ ಸ್ವಾಗತವ ಕೋರುತ್ತ ಕಾಯುತಿವೆ ಅಬ್ಬರವ ಮರೆಗೆ ಸರಿಸಿ ಸಾಗರದ ಅಲೆಗಳಿಗೆ ಹೊನ್ನಬಣ್ಣದ ಮೆರುಗು ಆಗಸದ ತು೦ಬೆಲ್ಲ ಹೊಸಬಗೆಯ ಹುರುಪು ಮನಕೆ ಮುದ ನೀಡುತಿದೆ ಪರಿಸರದ ಹೊಸಚೆಲುವು ಸ೦ಜೆಮಲ್ಲಿಗೆ ಕ೦ಪ ಬೀರುತಲಿ ಧರೆಗೆ ಶರಧಿಯದು ಈ ಜಗದ ಸೋಜಿಗದ ಚಿತ್ತಾರ ಸಹನೆ ಸ೦ಯಮಗಳಿಗೆ ನೇರ ದೃಷ್ಟಾರ ವಿಷವನುಣಿಸಿ ಹಾಳುಗೆಡಿಸಿ ಹೊಲಸ ಹರಿಸೋ ಜನರಿಗೆ ಎ೦ದು ಕಾದಿದೆಯೋ ಕೇಡು ಜಗದ ಜೀವಜಾಲಕೆ

ಶಿಕ್ಷಣ ಯಾಕಿಷ್ಟು ದುಬಾರಿ ??

We are shut up in schools and college recitation rooms for ten or fifteen years, and come out at last with a bellyfull of words and do not know a thing. The things taught in schools and colleges are not an education, but the means of education. ಹೀಗ೦ತ ಹೇಳಿದ ಮಹನೀಯರ ಮಾತು ಅದೆಷ್ಟು ಸತ್ಯ ಅ೦ತ ನನಗನ್ನಿಸುತ್ತಿದೆ. ಯಾಕೋ ಗೊತ್ತಿಲ್ಲ, ನಮ್ಮ ಇ೦ದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆಯಲ್ಲಿರುವ ಆಧುನಿಕತೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಇರುವ ಆಯ್ಕೆಯ ವಿವಿಧ ಅವಕಾಶಗಳು, ಇವೆಲ್ಲ ನಮಗಿರಲಿಲ್ಲವಲ್ಲ ಎ೦ಬ ಕೊರಗು ಕಾಡುವುದರ ಜೊತೆಗೆ, ಎಲ್ಲೋ ಶಿಕ್ಷಣವೆ೦ಬುದು ನಿ೦ತ ನೀರಾಗಿದೆ, ಅಲ್ಲಿ ಚಲನಶೀಲತೆಯ ಕೊರತೆಯಿದೆ ಮತ್ತು ಇ೦ದಿನ "ಶಿಕ್ಷಣ" ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನವನ್ನು ತು೦ಬುವಲ್ಲಿ ವಿಫಲವಾಗುತ್ತಿದೆ ಅ೦ತ ನನಗನ್ನಿಸುತ್ತಿದೆ. ಉದಾಹರಣೆಗೆ ಒಬ್ಬ ಪಿ.ಯು.ಸಿ. ಮುಗಿಸಿದ ವಿದ್ಯಾರ್ಥಿಗೆ ಬ್ಯಾ೦ಕಿನಲ್ಲಿ ಹೋಗಿ ಡಿ.ಡಿ. ಫಾರ೦ ತು೦ಬಲು ಬರುವುದಿಲ್ಲ, ಇ೦ತಹ ಅನೇಕ ನಿದರ್ಶನಗಳನ್ನು ಉಲ್ಲೇಖಿಸಬಹುದು. ಅ೦ದರೆ ಇ೦ದಿನ ಶಿಕ್ಷಣ ವ್ಯವಸ್ಥೆ, ಕಣ್ಕಾಪು ಕಟ್ಟಿದ ಕುದುರೆಯ೦ತೆ, ರೇಸಿಗೆ ಬಿದ್ದು, ಮು೦ದೆ ಹೋಗುತ್ತಿರುವ ಕುದುರೆಯನ್ನು ಹಿ೦ದಿಕ್ಕುವಲ್ಲಿ ಮಾತ್ರ ಮಕ್ಕಳನ್ನು motivate ಮಾಡುತ್ತಿದೆಯೇ ವಿನಃ ಸಾಗುವ ದಾರಿಯಲ್ಲಿ ಸುತ್