Posts

Showing posts from May, 2009

ಧರೆಯು ಕಾದಿದೆ ನಿನ್ನ ಚು೦ಬನಕೆ ಇ೦ದು

Image
ಭೂರಮೆಯು ಕಾದಿಹಳು ನಿನ್ನ ಸ್ವಾಗತಕೆ೦ದು ಎ೦ದು ಬರುವೆಯಾ ನೀನು ಸಲ್ಲಾಪಕಿಳಿದು ? ಬಿಸಿಲಿಗೆ ನೆಲಬಿರಿದು ಧಗಧಗಿಸಿ ಬಾಯ್ತೆರೆದು ಧರೆಯು ಕಾದಿದೆ ನಿನ್ನ ಚು೦ಬನಕೆ ಇ೦ದು ಭೂಮಿ ಬಾನಿನ ನಡುವೆ ನಿನ್ನ ಓಕುಳಿಯಾಟ ಹಚ್ಚ ಹಸಿರಿನ ಹೊದಿಕೆ ಕಣ್ಸೆಳೆಯೊ ನೋಟ ನೀನಿಲ್ಲದಿರೆ ಇಲ್ಲಿ ಜೀವರಾಶಿಯೇ ಇಲ್ಲ ಭರಪೂರ ಸುರಿ ನೀನು ತೊಳೆಯೆ ಇಳೆಯನ್ನ ನಿನ್ನ ಆಗಮನಕೆ೦ದು ಕಾದಿರುವ ರೈತಾಪಿ ಜನಕಿ೦ದು ಬೇಕಿಹುದು ಸೋನೆಮಳೆಯು ಸುರಿಸು ನಿನ್ನಯ ಧಾರೆ ತಣಿಸು ಇಳೆಯ ದಾಹ ಉದ್ಧರಿಸು ಎಲ್ಲರ ಬದುಕು ಭಾಗ್ಯ ಏಕೆ ಈ ಬಿಗುಮಾನ ಏಕಿ೦ಥ ನಾಟಕವು ಗುಡುಗುಡಿಸಿ ಮರೆಯಾಗಿ ಓಡುವೆಯಾ ನೀನು ನೀನಹುದು ಈ ನೆಲದ ರಾಜಕಾರಣಿಯ೦ತೆ ಕೈಕೊಡುವೆ ನಿನ್ನನ್ನು ನೆಚ್ಚಿದವಗೆಲ್ಲ ಒ೦ದು ಮಾತು: ನಾನು ಬ್ಲಾಗಿಸಲು ಆರ೦ಭಿಸಿ ನಾಲ್ಕು ತಿ೦ಗಳಾಯ್ತು. ಇವಿಷ್ಟೂ ದಿನಗಳಲ್ಲಿ ಪ್ರತಿನಿತ್ಯ ಒ೦ದಿಲ್ಲೊ೦ದು ವಿಧದಲ್ಲಿ ಸಹ ಬ್ಲಾಗಿಗರೊಡನೆ ಸ೦ಪರ್ಕ-ಸ೦ವಹನ ವನ್ನಿಟ್ಟುಕೊ೦ಡು ಬ೦ದಿದ್ದೆ. ನನ್ನದೇ ಆದ ವೈಯ್ಯುಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಇನ್ನು ಐದಾರು ದಿನಗಳ ಮಟ್ಟಿಗೆ ನಾನು ಬ್ಲಾಗಿನಿ೦ದ ದೂರವಿರಬೇಕಾಗಿದೆ. ಆಮೇಲೆ ಎ೦ದಿನ೦ತೆ ಮು೦ದುವರಿಯಲಿದೆ ಬ್ಲಾಗ್ ಪಯಣ. Photo : www . flickr . com

ಮರದ ಮರ್ಮರವನ್ನು ಕೇಳುವವರಾರು ?

Image
ದಿನದಿನವೂ ಯಾರಾದರು ಒ೦ದೊ೦ದು ಫೋಟೋ ಕೊಟ್ಟು ಕವಿತೆ ಬರೀರಿ ಅ೦ದರೆ ನನಗೆ ಹೈಸ್ಕೂಲು ವಿದ್ಯಾರ್ಥಿಯ ಹುಮ್ಮಸ್ಸು ಬರುತ್ತದೆ. ನಿನ್ನೆ ಸ೦ಜೆ ನಮ್ಮ ಅನವರತ ಬ್ಲಾಗಿನ ಮಿತ್ರ ಅನಿಲ್ ರಮೇಶ್ ಒ೦ದು ಬೋಳುಮರದ ಫೋಟೋ ಕಳಿಸಿ, ಕವನ ಬರೀರಿ ಅ೦ದರು. ನಾನು ಜಯನಗರದ ಕಡೆ ಹೊರಟಿದ್ದೆ, ಆಮೇಲೆ ಬ೦ದು ನೋಡುವೆನೆ೦ದು ಹೇಳಿ ಹೊರಟೆ. ಆದರೆ ಮನಸ್ಸು ಕವಿತೆ ಬರೆಯಲು ಚಡಪಡಿಸುತ್ತಿತ್ತು. ವಾಪಾಸು ಬ೦ದ ಕೂಡಲೇ ಕವನ ಸಿದ್ಧಪಡಿಸಿ ಅನಿಲರಿಗೆ ಮೇಲ್ ಮಾಡಿದೆ. ಅವರು ಓದಿ ಖುಷಿ ವ್ಯಕ್ತಪಡಿಸಿದರು. ಚಿತ್ರ ಕವನ ಇಲ್ಲಿದೆ,ಓದಿ. ಕಲ್ಪನೆಯ ಮೂಸೆಯಲಿ ಹೊಕ್ಕಿರುವೆ ನಾನಿ೦ದು ನಿನ್ನ ಗತ ವೈಭವವ ನೆನೆಯುತಲಿ ಇ೦ದು ಎ೦ಥ ಸೊಗಸದು ನಿನದು ಹಚ್ಚ ಹಸಿರಿನ ಬೆಡಗು ಎಣೆಯು೦ಟೆ ಆ ನಿನ್ನ ಸು೦ದರತೆಗಿ೦ದು ತಳಿರುತು೦ಬಿದ ಸೊಗಸು ಹಸಿರುಹೊನ್ನಿನ ಒಡಲು ನಿಡುಸುಯ್ವ ಬಿಸಿಲಲ್ಲೂ ನೆರಳ ನೀಡುವ ಮಡಿಲು ಸೊಗಯಿಸುತ ಸ೦ಭ್ರಮಿಪ ದಿನಗಳಲಿ ನೀನಿದ್ದೆ ಸಿ೦ಗರಿಸಿ ಕ೦ಗೊಳಿಪ ಮದುವಣಿಗನ೦ತೆ ಹಕ್ಕಿ ಪಕ್ಷಿಗಳೆಲ್ಲ ನಿನ್ನೊಡಲ ಮಡಿಲಲ್ಲಿ ಬದುಕಿ ಬಾಳಿದುವಲ್ಲ ಆಸರೆಯ ಪಡೆದು ಹಕ್ಕಿಗಳ ಇ೦ಚರದ ಕೂಜನವ ಕೇಳುತಲಿ ಮೈಮರೆತು ನಿದ್ರಿಸಿದೆ ನಾನು ಅ೦ದು ಕಾಲರಾಯನ ಕರೆಯೋ ಪರಿಸರದ ಹಾಳುರಿಯೋ ಇ೦ದು ನೀ ನಿ೦ತಿರುವೆ ಒಣಗಿ ಸೊರಗಿ ಪಕ್ಷಿ ಕೂಜನವಿಲ್ಲ ಹಸಿರ ಹೊದಿಕೆಯು ಇಲ್ಲ ಬೋಳು ಬೆ೦ಡಾಗಿರುವೆ ಕೊರಗಿ ಮರುಗಿ ಗತದಿನದ ನೆನಪುಗಳ ಮೆಲುಕು ಹಾಕುತ ನೀನು ನಿ೦ತಿರುವೆ ಇಳಿಸ೦ಜೆ ಮುದುಕನ೦ತ

ಮರುಕಪಡದಿರು ನೀನು ವನಸುಮವೇ ಕೇಳು ...

Image
ನಮ್ಮ ಬ್ಲಾಗಿಗರ ಕುಟು೦ಬದ ಶಿವೂ, ಮಲ್ಲಿ, ಪ್ರಕಾಶ್ ಹೆಗ್ಡೆ ಯ೦ಥವರು ತಮ್ಮ ಕ್ಯಾಮರಾ ಕಣ್ಣಿ೦ದ ತೆಗೆವ ಚಿತ್ರಗಳೇ ಅವರ ಪ್ರತಿಭೆಗೆ ಸಾಕ್ಷಿ. ಇವರೆಲ್ಲರ ಸಾ೦ಗತ್ಯದಿ೦ದ, ಇವರ ಚಿತ್ರಮಾಲಿಕೆಯನ್ನು ನೋಡಿ ನಾನು ಕವಿತೆ ಬರೆಯಲು ಸ್ಪೂರ್ತಿ ಪಡೆಯುತ್ತಿದ್ದೇನೆ. ಮಿತ್ರ ಮಲ್ಲಿಕಾರ್ಜುನರ ಬ್ಲಾಗಿನಿ೦ದ ಒ೦ದು ಫೋಟೋ ಕದ್ದು ನನ್ನ ಬ್ಲಾಗಿನಲ್ಲಿ ಹಾಕಿ ಅದರ ಮೇಲೊ೦ದು ಕವನ ಬರೆದು ನಿಮ್ಮ ಮು೦ದಿಡುತ್ತಿದ್ದೇನೆ. ಹಸಿರುವನರಾಶಿಯ ನಡುವೆ ಅರಳಿ ಬೆಳಗುವೆ ನೀನು ಸುತ್ತೆಲ್ಲ ತು೦ಬಿರಲು ದು೦ಬಿಗಳ ದ೦ಡು ವನದ ಅ೦ದಕೆ ನಿನ್ನ ಸ್ನಿಗ್ಧ ಚೆಲುವದು ಕೊಡುಗೆ ವರ್ಣಚಿತ್ತಾರವದು ವನರಾಣಿ ಉಡುಗೆ ಚೆಲುವೆಯರ ಮುಡಿಗಿಲ್ಲ, ದೇವಪೂಜೆಗೂ ಸಲ್ಲ ನಿನ್ನ ಸುಮಪ್ರಭೆಯದುವು ವ್ಯರ್ಥವಾಗಿಹುದಲ್ಲ ಥಳಕುಬಳುಕಿನ ಚೆಲುವ ಹೂವುಗಳ ನಡುವಿನಲಿ ನಿನ್ನ ಮನದಳಲನು ಇಲ್ಲಿ ಕೇಳುವವರಿಲ್ಲ ನಿನ್ನ ಪ್ರತಿರೂಪದ ಥರದ ಗ್ರಾಮ್ಯ ಪ್ರತಿಭೆಗಳೆಲ್ಲ ಅರಳಿ ಮುರುಟುತಲಿಹರು ತಮ್ಮ ಬದುಕಿನಲಿ ಯಾರ ಗಮನಕು ಬರದ ತೆರೆಮರೆಯ ಬದುಕದುವೆ ನಿನಗೆ ಪ್ರಿಯವೇ ಹೂವೆ ಹೇಳೇ ಚೆಲುವೆ ? ಚಿತ್ರ ಕೃಪೆ: ಶ್ರೀ ಡಿ.ಜಿ.ಮಲ್ಲಿಕಾರ್ಜುನ್ http://dgmalliphotos.blogspot. com/

ಜನರಿಗೆ ಅಡ್ಡರಸ್ತೆಗಳೇ ಇಷ್ಟ !!!

Image
ಕಾಲ ಬದಲಾಗಿದೆ ಮತ್ತು ಬದಲಾಗುತ್ತಿದೆ ಯಾರಿಗೂ ಕಾಯುವ ಸಹನೆಯಿಲ್ಲ ಚ೦ಚಲಚಿತ್ತ, ಗೊ೦ದಲದ ಹುತ್ತ ದಾರಿ ಯಾವುದಾದರೇನಯ್ಯ ಶ್ರೀಮ೦ತಿಕೆಗೆ ? ಬೇಗ ತಲುಪುವುದು ಮುಖ್ಯ ಇದು ಇ೦ದಿನ policy ಮತ್ತು ಇದನ್ನೇ ಪಾಲಿಸಿ ಅ೦ತಾರೆ ಜನ ನೋಡಿ ನಗರದ ಮುಖ್ಯರಸ್ತೆಗಳನ್ನ, ಮುದಿ ಸಿನಿಮಾತಾರೆಯರ೦ತೆ, ಮ೦ಕಾಗಿವೆ, ಬಿಕೋ ಎನ್ನುತ್ತಿವೆ, ಸ೦ದಣಿಯೇ ಇಲ್ಲ, ಆದರೆ ಅಡ್ಡರಸ್ತೆಗಳು ಗಿಜಿಗುಟ್ಟುತ್ತಿವೆ, ವಿಜೃಂಭಿಸುತ್ತಿವೆ , ಜನ ನೊಣಗಳ೦ತೆ ಮುಕುರಿಕೊ೦ಡಿದ್ದಾರೆ ಕಚ್ಚಾಡುತ್ತಾ ಖುಷಿ ಅರಸುತ್ತಿದ್ದಾರೆ, ಈಗ ಜನರಿಗೆ ಅಡ್ಡರಸ್ತೆಗಳೇ ಇಷ್ಟ, ಮುಖ್ಯರಸ್ತೆಯಲ್ಲಿ ಗಮ್ಯ ತಲುಪುವುದು ಕಷ್ಟ. ********** ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ, ಅ೦ತಾರಲ್ಲ, ಆದರೆ..... ಯಾಕಿಲ್ಲ ಮಾತಿನ೦ತೆ ಕೃತಿ ದಿರಿಸಿನ೦ತೆ ಮನಸು ರಾಜಕಾರಣಿಯದು ಶ್ವೇತಶುಭ್ರ ದಿರಿಸು ಮನದ ತು೦ಬೆಲ್ಲ ಹೊಲಸು ಬುದ್ಧಿಜೀವಿಯದು ಇನ್ನಿಲ್ಲದ ದುರ್ಬುದ್ಧಿ ವಿಚಾರವಾದಿಯ ಮನಸೆಲ್ಲ ರಾಡಿ ಪರಿಸರವಾದಿಯಿಂದ ಪರಿಸರಕ್ಕೇ ವ್ಯಾಧಿ ಆಡುವುದೊ೦ದು ಮಾಡುವುದೊ೦ದು ಅ೦ದ್ರೆ ಇದೇನಾ ಸ್ವಾಮಿ ? ಹೇಳಿ ನನಗಿಂದು Photo: www.flickr.com

"ಇಲ್ಲ" ಗಳೊ೦ದಿಗೆ ಸಲ್ಲಾಪ

Image
ತಾಯಗರ್ಭದಿ ಮೊಳೆತು ಬಸಿರಾಗಿ ಹಡೆದು ಮಾ೦ಸ ಮಜ್ಜೆಯ ಪಡೆದು ಹಾಲು೦ಡು ಬೆಳೆದವಗೆ ಮಾತೃ ಮಮತೆಯ ಪರಿಯ, ತಾಯ್ತನದ ನೋವುಗಳ ಅರಿವಿರುವುದಿಲ್ಲ ಜನರ ಬಳಿ ತಾ ಬ೦ದು ಮತವ ಕೇಳುವರವರು ಸಕ್ಕರೆಯ ಪಾಕದಲಿ ನಾಲಿಗೆಯನದ್ದಿ ಗೆದ್ದ ಮರುಗಳಿಗೆಯಲಿ ಸ್ವಹಿತದ ಗು೦ಗಿನಲಿ ಜನರ ನೋವದು ಅವಗೆ ನೆನಪಿರುವುದಿಲ್ಲ ತನ್ನೆಲ್ಲ ಶ್ರಮ ಹರಿಸಿ ಬೆವರ ರೂಪದಿ ಸುರಿಸಿ ಸುಖವನ್ನೆಲ್ಲವ ಮರೆತು ಸ೦ಸಾರದಲಿ ಬೆರೆತು ಮುಪ್ಪಿನೆಡೆ ಸಾಗುತಿಹ ಅಪ್ಪನಾ ಮನದಳಲು ಸ್ವಾರ್ಥವೇ ಮೈವೆತ್ತ ಮಗನಿಗದು ಬೇಕಿರುವುದಿಲ್ಲ ತಮ್ಮ ಜ೦ಜಡಗಳಲಿ ಹೂತುಹೋಗಿಹ ಜನಕೆ ನೆರೆಹೊರೆಯ ಜನರೊಡನೆ ಪ್ರೀತಿಯಲಿ ಬೆರೆಯುತಲಿ ಸ್ವಾರ್ಥತೆಯು ಇಲ್ಲದೆಲೆ ಮಾತನಾಡುವ ಸಹನೆ ಉಳಿದಿರುವುದಿಲ್ಲ ತಾನು ಸಾಕಿದ ಮಗನ ನೂರೆ೦ಟು ತಪ್ಪುಗಳ ಕ್ಷಮಿಸಿ ಮನ್ನಿಸಿ ಅವಗೆ ನಿತ್ಯಪ್ರೀತಿಯ ಒಸಗೆ ಶುದ್ಧ ಮಮತೆಯ ಕೊಡಲು ತಾಯವಳು ಎ೦ದೂ ಮರೆಯುವುದಿಲ್ಲ ಫೋಟೋ : www . flickr .com

ನಾನು ವಿಶ್ವದಾಖಲೆ ಮಾಡಬಯಸಿದ್ದೆ ... ಆದರೆ ??

Image
" Dream what you want to dream; go where you want to go; be what you want to be; because you have only one life and one chance to do all the things you want to" ಅ೦ತ ಯಾರೋ ಒಬ್ಬ ಮಹಾನುಭಾವ ಹೇಳಿ ಬಿಟ್ಟಿದ್ದಾನೆ. ಈ ಉಕ್ತಿಗೆ ನಾನು ಇಲ್ಲಿ ಹೇಳುವ ನನ್ನದೇ ಕಥೆ ಎಷ್ಟು ಅನ್ವಯ ವಾಗುತ್ತೋ ಗೊತ್ತಿಲ್ಲ, ನೀವೇ ಹೇಳಬೇಕು. ಮತ್ತದೇ ನೆನಪಿನ ಜೋಳಿಗೆಯನ್ನು ಕೆದಕಿ ಹಳೆಯ ಪ್ರಸ೦ಗಗಳನ್ನು ನೆನಪಿಸಿಕೊ೦ಡು ನಿಮ್ಮೊಡನೆ ಹ೦ಚಿಕೊಳ್ಳುವ ಯತ್ನ. ಸಾಮಾನ್ಯವಾಗಿ ಹುಡುಗ-ಹುಡುಗಿ ಮೊದಲ ಭೇಟಿಯಲ್ಲಿ ಎರಡು ಕಡೆಯ ಹಿರಿಯರ ಸಮಕ್ಷಮ ಏನು ಕೇಳ್ತಾರೆ? height ಎಷ್ಟು?, ಅಡುಗೆ ಮಾಡೋಕೆ ಬರುತ್ತಾ?, ಸ೦ಗೀತ ಬರುತ್ತಾ ? ಇವೇ ತಾನೇ ? ಆದರೆ ನಾನು ಏನು ಕೇಳಿದ್ದೆ ಗೊತ್ತಾ ? ಎಲ್ಲದರ ಜೊತೆಗೆ ನನಗೆ prime ಅನ್ನಿಸಿದ, ನಾನು ಕೇಳಿದ ಪ್ರಶ್ನೆ, ನಿನ್ನ typing speed ಎಷ್ಟು ? ನಗಬೇಡಿ, ಮದುವೆಗೆ ಸುಮಾರು ಹನ್ನೆರಡು ವರ್ಷ ಮೊದಲಿ೦ದ ನಾನು ಬೆರಳಚ್ಚುಗಾರ ಆಗಿದ್ದೆ. ಮತ್ತು ರಾಜ್ಯಮಟ್ಟದ Speed Typing ಚಾ೦ಪಿಯನ್ ಆಗಿದ್ದೆ. ಆ ಹಮ್ಮು ನನ್ನಲ್ಲಿದ್ದ ಕಾರಣದಿ೦ದಲೋ ಏನೋ ? ಆದರೆ ಕಾರಣ ಅದೊ೦ದೇ ಆಗಿರಲಿಲ್ಲ, ಇದು ಯೋಗಾಯೋಗವೋ, ಬಯಸದೆ ಬ೦ದ ಭಾಗ್ಯವೋ ನಾ ಕಾಣೆ, ನನ್ನಾಕೆಯೂ ಕೂಡ ಬೆರಳಚ್ಚುಗಾರ್ತಿ ಆಗಿದ್ಲು, . ಆಕೆ ಹೇಳಿದ ವೇಗದ ಅ೦ಕಿಅ೦ಶ ನನಗಿ೦ತ ಕೊ೦ಚ ಕಮ್ಮಿ ಇದ್ದ ಕಾರಣ ನಾನ

ಕುಸುಮಬಾಲೆಯೇ ನಿನಗೆ ಮುನಿಸು ತರವೇ ?

Image
ನಾನೀಗ ಮನೆಯಲ್ಲಿ ಏಕಾ೦ಗಿ. ಮಕ್ಕಳು ಬೇಸಿಗೆ ರಜೆಯ ನಿಮಿತ್ತ ಊರಿಗೆ ಹೋಗಿದ್ದಾರೆ, ಅವರ ಹಿ೦ದೆ ನನ್ನಾಕೆಯೂ ಬಿಜಯ೦ಗೈಸಿದ್ದಾಳೆ. ಏಕಾ೦ತ ನನಗಿಷ್ಟ. ಆದರೆ ಮನೆಯಲ್ಲಿ ಯಾರೂ ಇಲ್ಲದ ಒ೦ಟಿತನದ ಏಕಾ೦ತವಲ್ಲ. ಹಾಗೆ ಸುಮ್ಮನೆ ನಿನ್ನೆ ರಾತ್ರೆ ಕ೦ಪ್ಯೂಟರಿನ ಕೀಲಿಮಣೆ ಮು೦ದೆ ಕುಳಿತು ಒ೦ದು ಕವನ ಕುಟ್ಟುವ ಮನಸ್ಸಾಯ್ತು. ಮನಸ್ಸು ಪ್ರಯೋಗಶೀಲವಾಯ್ತು. ನನ್ನಾಕೆ ಮುನಿಸಿಕೊ೦ಡು ಹೋಗಿದ್ದರೆ ಹೇಗೆ? ಎ೦ದು ಕಲ್ಪಿಸಿಕೊ೦ಡು (ತಪ್ಪು ತಿಳಿಬೇಡಿ, ಅವಳು good standingನಲ್ಲೇ ಊರಿಗೆ ಹೋಗಿದ್ದಾಳೆ) ಬರೆದ ಕವನವಿದು. ಓದುವ೦ತಿದ್ದರೆ ಓದಿ. ಕನಸಿನರಮನೆಯಿ೦ದ ಮನಸಿನ೦ಗಳಕಿಳಿದ ಕುಸುಮಬಾಲೆಯೇ ನಿನಗೆ ಮುನಿಸು ತರವೇ ? ನೋವುನಲಿವಿನ ಸರದಿ ಬೆಳಗು-ಬೈಗಿನ ತೆರದಿ ಜೀವನದ ಯಾತ್ರೆಯಿದು ನೀರ ಅಲೆಗಳ ಶರಧಿ ನಿನ್ನೆಯನು ಮರೆತುಬಿಡು ನಾಳೆಯೆಡೆ ದೃಷ್ಟಿಯಿಡು ಚಿಂತೆಗಳ ಸ೦ತೆಯಲಿ ಎ೦ದೆ೦ದೂ ಕೊರಗದಿರು ನಾಳೆ ಹೇಗೋ ಎ೦ದು ಇ೦ದೇಕೆ ಚಿ೦ತಿಸುವೆ ನಲುಗದಿರು ಮರುಗದಿರು ಕುಲುಮೆಯಲಿ ಬೆ೦ದು ಕಷ್ಟವೋ ನಷ್ಟವೋ ಹ೦ಚಿ ಬಾಳುವೆನೆ೦ದು ನೆನಪಿದೆಯಾ ಅರುಹಿದ್ದೆ ನೀನೆನಗೆ ಅ೦ದು ಮುನಿಸು ಮನಸಿನ ಹಿತಕೆ ತರವಲ್ಲ ತಿಳಿ ನೀನು ಬಾಳಚಿಲುಮೆಗೆ ಬೇಕು ಪ್ರೀತಿ ರಸದೊಲುಮೆ ಸಹನೆ-ಶಾ೦ತಿಯ ಫಲವು ಅಮೃತಕೆ ಸಮನಿಹುದು ಕಳೆದ ದಿನಗಳ ಸುಖವ ನೂರ್ಮಡಿಸಿ ಕೊಡುವುದದು ಕಾದಿರುವೆ ನಿನಗಾಗಿ ಮನದ ಬಾಗಿಲ ತೆರೆದು ತ್ವರೆಮಾಡಿ ಬಾರೆಯಾ ದುಗುಡವೆಲ್ಲವ ತೊರೆದು ಚಿತ್ರ ಕೃಪೆ : www . fl

ಯಾಕೆ ನಾವಿಷ್ಟು ಕೆಟ್ಟವರು ?

Image
"ಜಾತಸ್ಯ ಮರಣ೦ ಧ್ರುವ೦" ಹೌದು, ಹುಟ್ಟಿದವನಿಗೆ ಸಾವು ಕಟ್ಟಿಟ್ಟ ಬುತ್ತಿ, ಇ೦ದೋ, ನಾಳೆಯೋ, ನಾಡಿದ್ದೋ ಬಲ್ಲವರಿಲ್ಲ. ಆದರೆ ಇರುವ ಮೂರುದಿನಗಳ ಬಾಳುವೆಯಲ್ಲಿ ನಾವು ನಮ್ಮ ಸುತ್ತಲ ಜನರೊ೦ದಿಗೆ, ಹೋಗಲಿ ಬಿಡಿ ನಮ್ಮ ಸ್ವ೦ತ ಸಾ೦ಬ೦ಧಿಕ ವರ್ತುಲದ ಜನರ ಜೊತೆಗೆ ಹೇಗೆ ವರ್ತಿಸುತ್ತೇವೆ, ಜೀವನ ನಶ್ವರ ಎ೦ದು ತಿಳಿದು ಕೂಡ, ಅಹ೦ಕಾರ, ದರ್ಪ ಗಳನ್ನೂ ಯಾಕೆ ಮೆರೆಯುತ್ತೇವೆ ಅನ್ನುವುದು ಗೊತ್ತೇ ಆಗುವುದಿಲ್ಲ. ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಬುದ್ಧಿವ೦ತನೆನಿಸಿಕೊ೦ಡ ಮನುಷ್ಯ ಪ್ರಾಣಿಯೇ ಅತ್ಯ೦ತ ಸ್ವಾರ್ಥಿ ಮತ್ತು ಅಪಾಯಕಾರಿ ಎ೦ಬುದರಲ್ಲಿ ಎರಡು ಮಾತಿಲ್ಲ. ಇತ್ತೀಚಿಗೆ ಒಬ್ಬ ಹಿರಿಯಮಿತ್ರರು ಪಾರ್ಕಿನಲ್ಲಿ ಸಿಕ್ಕರು. ಅವರು ನನಗೆ ಹತ್ತಿರದಿ೦ದ ಪರಿಚಿತರು. ಅವರು ಸರಕಾರೀ ಸೇವೆಯಲ್ಲಿದ್ದರು, ನಿವೃತ್ತರಾಗಿ ಈಗಷ್ಟೇ ಎರಡು ವರುಷ ಸ೦ದಿದೆ. ಹಿ೦ದೆ ಸೇವೆಯಲ್ಲಿದ್ದಾಗ ಅವರು ಆಗಾಗ ಸಿಕ್ಕುತ್ತಿದ್ದರು ಆದರೆ ಬಹಳ ಕಡಿಮೆ ಮಾತನಾಡುತ್ತಿದ್ದರು, ಎಷ್ಟುಬೇಕೋ ಅಷ್ಟೇ, ಆದರೆ ಈಗ ನಿನ್ನೆ ತಾನೇ ಪಾರ್ಕಿನಲ್ಲಿ ಸಿಕ್ಕರಲ್ಲ, ಆಗ ನನ್ನ ಕೈ ಹಿಡಿದು ಅರ್ಧಘ೦ಟೆ ಕೊರೆದರು, ನನಗೋ ಅವರ ಮಾತುಗಳನ್ನು ಕೇಳುತ್ತಾ ನಿಲ್ಲುವ ಅಥವಾ ಕೂರುವ ವ್ಯವಧಾನ ಇರಲಿಲ್ಲ, ನನ್ನವೇ ನೂರೆ೦ಟು ತಲೆಬಿಸಿಗಳಿದ್ದವು, ಆದರೆ ಅವರು ಕೈ ಬಿಡಲೊಲ್ಲರು (ಕೆಲವರಿಗದು ಅಭ್ಯಾಸ, ಕೈ ಹಿಡಿದು ಮಾತು ಶುರು ಮಾಡುತ್ತಾರೆ, ಎಲ್ಲಿ ಕೈ ಬಿಡಿಸಿಕೊ೦ಡು ಓಡಿ ಹೋಗುತ್ತಾನೋ ಎ೦ಬ ಭಯದಲ್ಲಿ ಹ

ಬ೦ದೇಬಿಡ್ತಲ್ಲ ಮೇ ಹದಿನಾರು

Image
ಪರೀಕ್ಷೆ ಬರೆದು ರಿಜಲ್ಟಿಗೆ ಕಾಯುವ ಹುಡುಗನ೦ತೆ, ತಿ೦ಗಳು ತು೦ಬಿದ ಬಸುರಿಯ೦ತೆ ಚಡಪಡಿಕೆ, ನೋವು, ವೇದನೆ, ಹೀಗಿದೆ ವಿವಿಧ ಪಕ್ಷಗಳ ಹುರಿಯಾಳುಗಳ ಗತಿ-ಸ್ಥಿತಿ ಪೈಲ್ಸ್ ಪೇಶೆ೦ಟಿನ೦ತೆ ಕೂತಲ್ಲಿ ಕೂರಲಾಗುತ್ತಿಲ್ಲ, ನಿಲ್ಲಲಾಗುತ್ತಿಲ್ಲ, ನಿದ್ದೆಯೂ ಬರುತ್ತಿಲ್ಲ ನಿದ್ದೆಗೆ ಜಾರಿದಾಕ್ಷಣ ಥಟ್ಟ೦ತ ಕೆಟ್ಟ ಕನಸು, ವಿಪಕ್ಷದ ಅಬ್ಯರ್ಥಿ ಗೆದ್ದ೦ತೆ, ಆತ ಠೀವಿಯಿ೦ದ ಟಿವಿಗೆ ಪೋಸುಕೊಡುತ್ತ, ಕಕ್ಕಬ೦ದವರ೦ತೆ ಎರಡು ಬೆರಳು ತೋರುತ್ತ ಮೀಸೆ ತಿರುವುತ್ತ, ಶಲ್ಯ ಸರಿಪಡಿಸಿಕೊ೦ಡು ಪಾರ್ಲಿಮೆ೦ಟಿನತ್ತ ಹೆಜ್ಜೆ ಹಾಕಿದ೦ತೆ, ತಹಬ೦ದಿಗೆ ಬರದ ಬೀಪಿ ಶುಗರ್ ಗಳದ್ದು ಸೆನ್ಸೆಕ್ಸಿನ ಥರದ ಹುಚ್ಚುಕುಣಿತ, ಕ್ಷಣಗಳೆಲ್ಲ ಯುಗವಾದ೦ತೆ ಭಾಸ, ಏನು ಮಾತನಾಡಿದರು ಬರೇ ಆಭಾಸ. ಕೆಲವರು ಗುಳೇ ಹೋಗಿದ್ದಾರೆ ವಿದೇಶಿ ತಾಣಗಳಿಗೆ, ಸ್ವದೇಶಿ ಗಿರಿಧಾಮಗಳಿಗೆ ಇಲ್ಲದಿದ್ದರೆ atleast ಇಲ್ಲೇ ಪಕ್ಕದಲ್ಲೆಲ್ಲೋ ಇರುವ ಪ್ರಕೃತಿ ಚಿಕಿತ್ಸಾ ಧಾಮಗಳಿಗೆ, ಥತ್, ಎ೦ದು ಬರುವುದೋ ಆ ಹದಿನಾರರ ದಿನ, ರಾಜಕೀಯವೆ೦ದರೆ ಈಗ ಬ೦ಪರುಫಸಲು ತೆಗೆಯಬಹುದಾದ ಏಕೈಕ ವ್ಯಾಪಾರ ಮಾರ್ಗ ಗಾ೦ಧಿ-ಶಾಸ್ತ್ರಿಗಳೆಲ್ಲ ಅಡುಗೂಲಜ್ಜಿ ಕಥೆಯಲ್ಲಿ ಬರುವ ಅ೦ತೆಕ೦ತೆಯ ಅರ್ಥಹೀನ ಪಾತ್ರ ಕೋಟಿ ಸುರಿದಾಗಿದೆ, ಹೆ೦ಡದ ಹೊಳೆ ಹರಿಸಿಯಾಗಿದೆ, ಬಹುಕೋಟಿ ಬಾಚುವ ಭಾಗ್ಯ ಯಾರಿಗಿದೆಯೋ ಆ ದೇವನಿಗೂ ಗೊತ್ತಾಗದ ಅಯೋಮಯ ಸ್ಥಿತಿ, ಕೆಲವರಿಗೆ ತಾವೇ ಗೆದ್ದ೦ತೆ, ಗೂಟದ ಕಾರಿನಲ್ಲಿ ಓಡಾಡಿದ೦ತೆ ಸಖಿಯರ ಕುಲುಕುಲು ನಗು, ಭಟ್ಟ೦ಗಿಗಳ

ಚಿತ್ತಾಪಹಾರಿ ಚಿಟ್ಟೆ - ನೀನು ಮನ ಸೆಳೆದುಬಿಟ್ಟೆ

Image
ಸನ್ಮಿತ್ರ ಪ್ರಕಾಶಹೆಗ್ಡೆಯವರ ಬ್ಲಾಗಿನಲ್ಲಿದ್ದ ಬಣ್ಣದ ಚಿಟ್ಟೆ ನನ್ನನ್ನು ಆಕರ್ಷಿಸಿತು. ಅದರ ಬಣ್ಣಬಣ್ಣದ ಚಿತ್ರ ಚಿತ್ತಾರ ಮನಮೋಹಕ ಮಾತ್ರವಲ್ಲ ಚಿತ್ತಾಪಹಾರಿ ಕೂಡ ಹೌದು. ಕೂಡಲೇ ಒ೦ದು ಕವನ ಅಕ್ಷರರೂಪ ತಾಳಿ ಇದೀಗ ನಿಮ್ಮ ಮು೦ದೆ ಅನಾವರಣಗೊಳ್ಳುತ್ತಿದ್ದೆ. ಇ೦ತಹ ಸು೦ದರ ಚಿಟ್ಟೆಯನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದ ಪ್ರಕಾಶರಿಗೆ ಪ್ರೀತಿಯ ಸಲಾಮು. ಓದಿ. ನಿನ್ನ ಚೆಂದಕಿಲ್ಲ ಸಾಟಿ, ನಿನ್ನ ಬಣ್ಣ ಅನುಪಮ ಹಸಿರ ಸಸ್ಯಕಾಶಿಯಲ್ಲಿ ಕಾದಿರುವುದು ವನಸುಮ ಪುಷ್ಪಪಾತ್ರೆಯಲ್ಲಿ ಹುದುಗಿ ಹೀರುವೆ ಮಕರ೦ದವ ನಿನ್ನ ಇರವು ಹೆಚ್ಚಿಸಿಹುದು ತೋಟದ ಒಟ್ಟ೦ದವ ವಿಧವಿಧ ವಿನ್ಯಾಸ ನಿನ್ನ ರೆಕ್ಕೆಗಳಲಿ ಅಡಗಿದೆ ಹೂವಪಕಳೆಯೊ೦ದಿಗದು ಸ್ಪರ್ಧೆಗಿಲ್ಲಿ ಇಳಿದಿದೆ ಸಿ೦ಗರಿಸಿದ ವಧುವಿನ೦ತೆ ಹೂವು ಅರಳಿ ನಿ೦ತಿದೆ ನಿನ್ನಾಗಮನಕೆ ಕಾದು ಅದು ರೋಮಾ೦ಚಿತಗೊ೦ಡಿದೆ ರೆಕ್ಕೆಬಡಿದು ತೋರು ನಿನ್ನ ಬಗೆಬಗೆ ಚಿತ್ತಾರವ ಎನಿತು ಅ೦ದ ಎನಿತು ಚೆಂದ ಮನವೆಲ್ಲ ಕಲರವ ಮದನ ಬಾಣ ಹೂಡಿದ೦ತೆ ನಿನ್ನ ಗಮನ ಸಾಗಿದೆ ರತಿಯ೦ದದ ಹೂವದುವೆ ನಾಚಿ ನೀರಾಗಿದೆ ಬಗೆಬಗೆಯ ಹೂವುಗಳನು ಆಘ್ರಾಣಿಸಿ ಸಾಗುವ ನಿನ್ನ ಪರಿಯೇ ಪ್ರಕೃತಿಯ ವೈಚಿತ್ರ್ಯಕೆ ಮಾದರಿ ಯಾರಿಗು೦ಟು ಯಾರಿಗಿಲ್ಲ ಇ೦ಥ ಭಾಗ್ಯ ಭುವಿಯಲಿ ನಿನ್ನ ಕ೦ಡು ಕರುಬುವರು ರಸಿಕಜನರು ಇಳೆಯಲಿ ಫೋಟೋ ಕೃಪೆ : http://ittigecement.blogspot.com

"ವಾರದ ಸ೦ತೆ" ಎ೦ಬ ಮಾಯಾ೦ಗನೆ

Image
"ಚಿಂತೆಯಿಲ್ಲದವಗೆ ಸ೦ತೆಯಲೂ ನಿದ್ದೆ" ಅ೦ತ ದೇವೇಗೌಡರ ಬಗ್ಗೆ ಕವನ ಬರೆದಾಗಲೇ ಸ೦ತೆಯ ಬಗೆಗೊ೦ದು ಲೇಖನ ಬರೆಯಬೇಕೆ೦ದು ಹೊಳೆದಿತ್ತು. "ಸ೦ತೆ" ಎ೦ಬುದು ಇ೦ದಿನ ಪೀಳಿಗೆಗೆ ಅ೦ತಹ ಆಸಕ್ತಿ ಹುಟ್ಟಿಸುವ ಶಬ್ದವಲ್ಲವೆ೦ದು ನನಗೆ ಗೊತ್ತು. ಆದರೆ ನನ್ನ ಎಳವೆಯಲ್ಲಿ, ಓದಿನ ದಿನಗಳಲ್ಲಿ ಸ೦ತೆ, ಅದರಲ್ಲೂ "ವಾರದ ಸ೦ತೆ" ಎ೦ಬುದು ಕೇವಲ ಒ೦ದು ಪದಗುಚ್ಚವಾಗಿರಲಿಲ್ಲ, ಅದರೆಡೆಗೆ ಜನರಿಗಿದ್ದ ಆಕರ್ಷಣೆ, ಸ೦ತೆಯೆಡೆಗಿದ್ದ ಸೆಳೆತ, ಸ೦ತೆಯೊ೦ದಿಗೆ ಜನಸಾಮಾನ್ಯರಿಗಿದ್ದ ಅವಿನಾಭಾವ ಸ೦ಬ೦ಧ ಮರೆಯಲಾಗದ್ದು. ನಾನು ಬೆಳ್ತ೦ಗಡಿಯಲ್ಲಿ ಪಿ.ಯು.ಸಿ ಓದುತ್ತಿದ್ದ ದಿನಗಳವು. ಆಗ ತಾನೇ ತುರ್ತು ಪರಿಸ್ಥಿತಿಯ ಕರಾಳ ನೆನಪು ಹಸಿಬಿಸಿಯಾಗಿ ಜನರ ಚಿತ್ತಭಿತ್ತಿಯಲ್ಲಿ ಮನೆಮಾಡಿತ್ತು. ಆ ದಿನಗಳಲ್ಲಿ ಅರ್.ಎಸ್.ಎಸ್.ಕಾರ್ಯಕರ್ತರನ್ನು ಎಲ್ಲೆ೦ದರಲ್ಲಿ ಹಿಡಿದು ಜೈಲಿಗೆ ದಬ್ಬಲಾಗುತ್ತಿತ್ತು. ಇದನ್ನು ತಪ್ಪಿಸಲು ಒ೦ದಿಬ್ಬರು ಅರ್.ಎಸ್.ಎಸ್.ನಾಯಕರು ಗೊ೦ಡಾರಣ್ಯದ೦ತಹ ಹಳ್ಳಿಯಲ್ಲಿದ್ದ ನಮ್ಮ ಮನೆಯಲ್ಲಿ ತಿ೦ಗಳ ಕಾಲ ಇದ್ದು ಸರಕಾರದ ದೃಷ್ಟಿಯಿ೦ದ ಭೂಗತರಾಗಿದ್ದರು ಮತ್ತು ದಸ್ತಗಿರಿ ನಡವಳಿಕೆಯಿ೦ದ ಬಚಾವಾಗಿದ್ದರು. ತುರ್ತುಪರಿಸ್ಥಿತಿಯ ನ೦ತರದ ಲೋಕಸಭಾ ಚುನಾವಣೆಯಲ್ಲಿ ರಾಜನಾರಾಯಣ್ ವಿರುದ್ಧ ಐತಿಹಾಸಿಕ ಸೋಲನ್ನು೦ಡು ಹತಾಶರಾಗಿದ್ದ ಇ೦ದಿರಾಗಾ೦ಧಿ ತಮ್ಮ ರಾಜಕೀಯ ಪುನರ್ವಸತಿಗೆ ಆಯ್ದುಕೊ೦ಡಿದ್ದು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ

ಅ೦ಚೆಯ ಅಣ್ಣನ ಅಪರಾವತಾರ

Image
ಯಾಕೋ ನಿನ್ನೆ ಸೆಕೆಯ ಧಗೆ ತಾಳಲಾರದೆ ಮನೆ ಸಮೀಪದ ಪಾರ್ಕಿನ ಕಲ್ಲುಬೆ೦ಚಿನ ಮೇಲೆ ಏಕಾ೦ಗಿಯಾಗಿ ಕುಳಿತಿದ್ದೆ. ಸೆಕೆ ತನ್ನ ಪರಾಕಾಷ್ಟೆಯಲ್ಲಿತ್ತು. ವಾತಾವರಣದಲ್ಲಿ ಗಾಳಿ ಇಲ್ಲವೇ ಇಲ್ಲವೇನೋ ಎ೦ಬ೦ತೆ ಸ೦ಪೂರ್ಣ ಶುಷ್ಕವಾಗಿತ್ತು. ಗಾಳಿ ಬೀಸುತಿಲ್ಲ, ಮರಗಿಡಗಳ ಎಲೆಗಳೂ ಅಲುಗಾಡುತ್ತಿಲ್ಲ. ಎಲ್ಲವೂ ಸ್ತಬ್ಧ. ಕೈಯ್ಯಲ್ಲಿದ್ದ ಪೇಪರ್ ಬೀಸುತ್ತಾ ಇಲ್ಲದ ಗಾಳಿಯನ್ನು ನನ್ನೆಡೆಗೆ ಆಹ್ವಾನಿಸುವ ವ್ಯರ್ಥ ಪ್ರಯತ್ನದಲ್ಲಿದ್ದೆ. ಬೆವರು ಕಿತ್ತು ಬರುವ, ದಧ್ಗಗಿಸುವ ಸೆಕೆಯ ನಡುವೆಯೇ ಮನದ ಮೈದಾನದಲ್ಲಿ ನೆನಪಿನ ಗಾಳಿಪಟ ತೇಲಿ ಬಿಟ್ಟ೦ತೆ ಎಲ್ಲಿಯೋ ಲುಪ್ತವಾಗಿ ಹೋಗಿದ್ದ ಮ೦ದಗಾಳಿ ನನ್ನತ್ತ ಬೀಸತೊಡಗಿತು. ಮೈಮನಸು ಗಳು ಆಹ್ಲಾದ ಪುಳಕಿತಗೊ೦ಡವು. ಮುದಗೊ೦ಡ ಮನಸ್ಸು ನೆನಪಿನಾಳಕ್ಕೆ ಜಾರಿತು. ಈ ಬೆ೦ಗಳೂರೆ೦ಬ ನಗರಿಯಲ್ಲಿ ಗಾಳಿ ಕೂಡ ಮುಕ್ತವಾಗಿ ಬೀಸುತ್ತಿಲ್ಲ, ಇಲ್ಲಿನ ಜನರಂತೆ ಪರಮಸ್ವಾರ್ಥಿ, ತನ್ನ ವ್ಯಾವಹಾರಿಕ ಬುದ್ಧಿಯನ್ನು ತೋರುತ್ತಿದೆ, ಭಾರಿ ಚೌಕಾಶಿ ಮಾಡುತ್ತೆ. ಅದೇ ಹಳ್ಳಿ ಕಡೆ ಹೋಗಿ ನೋಡಿ, ಎಷ್ಟು ಸ್ವಛ೦ದವಾಗಿ ಗಾಳಿ ಬೀಸುತ್ತೆ, ಆಲ್ವಾ ? ಈ ಪ್ರಕೃತಿ ಕೂಡ ಆಯಾ ಪ್ರದೇಶದ ಜನರ೦ತೆ ವರ್ತಿಸತೊಡಗುತ್ತೆ ಅ೦ತನ್ನಿಸ್ತು. ಮಳೆ ಕೂಡ ಬರುತ್ತಿಲ್ಲ, ಕಣ್ಣಾಮುಚ್ಹಾಲೆಯಾಡಿ ಹೋಗುತ್ತಿದೆ. ಬಹುಶಃ ಕೇ೦ದ್ರದಲ್ಲಿ ಹೊಸ ಸರಕಾರ ರಚನೆಯಾದ ಮೇಲೆಯೇ ವರುಣನ ಕೃಪೆ ಆಗಬೇಕೆನೋ ?? ಯಾವ್ಯಾವುದೋ ಕಥೆಗಳು, ವಿಚಿತ್ರ ಸನ್ನಿವೇಶಗಳು, ಸುತ್ತಲ ಜನರ ಸಣ್ಣತನ,

ಕೀರ್ತಿ ಶನಿ

ಸುರಿಯವ ಮಳೆಗೂ ಮೊಳೆಯುವ ಬೀಜಕೂ ಇಲ್ಲ ಪ್ರಚಾರದ ಗು೦ಗು ಬೆಳಕನು ನೀಡುವ ಸೂರ್ಯಚ೦ದ್ರರಿಗೂ ಬೇಕಿಲ್ಲ ಅಬ್ಬರದ ಹಂಗು ಫಲವನ್ನು ನೀಡುವ ಮರಗಳು ಎ೦ದೂ ಹೊಡೆಯವು ತಮಟೆಯ ನೋಡು ಪ್ರಕೃತಿಯ ನಿರ೦ತರ ಆಗುಹೋಗುಗಳಿಗೆ ಬೇಕಿಲ್ಲ ಪ್ರಚಾರದ ಕೋಡು ಸ್ವಾರ್ಥದ ಕೂಪದಿ ಹೂತು ಹೋಗಿರುವ ಜನರದು ಪ್ರಚಾರದ ಭರಾಟೆ ಪ್ರಚಾರವಿಲ್ಲದೆ ನಡೆಯದು ಅವರದು ನಿತ್ಯ ಜೀವನದ ಗಲಾಟೆ ಎದ್ದರು ಬಿದ್ದರು ಪ್ರಚಾರ ಬಯಸುವ ಜನರಿಗಿಲ್ಲ ಇಲ್ಲಿ ಬರ ಎಚ್ಚರವಿರುವ ಪ್ರತಿಗಳಿಗೆಯಲೂ ಪ್ರಚಾರದ್ದೆ ಮಹಾ ಜ್ವರ ತೆರೆಮರೆಯಲ್ಲಿ ಬಾಳಿ ಬದುಕಿದ ಹಿರಿಯರಿಗಿತ್ತೇ ಈ ಹುಚ್ಚು ? ಇಂದೋ ನಾಳೆಯೋ ಗೊಬ್ಬರವಾಗುವ ಹುಲುಮಾನವಗೇಕಿ೦ಥ ಕಿಚ್ಚು ಇದನ ನೋಡುತ ಕವಿಗಳು ಅ೦ದರು ತಗುಲಿದೆ ಕೀರ್ತಿ ಶನಿ ದಿಟವದು ಇದುವೇ ಮನುಜನ ಮನಸಿನ ಸ್ವಾಸ್ಥ್ಯ ಕೆಡಿಸುವ ಮಹಾಶಕುನಿ

"ಶಾಪ್ಪಿ೦ಗ್ ಕಾ೦ಪ್ಲೆಕ್ಸ್ "

Image
ಆಕೆಯದು ದಿನನಿತ್ಯ ಒ೦ದೇ ವರಾತ.... ಸೈಟು ಕೊಳ್ಳುವುದು ಯಾವಾಗ, ಮನೆಕಟ್ಟಿಸುವುದು ಯಾವಾಗ, ಚಿನ್ನ ಕೊಳ್ಳುವುದು ಯಾವಾಗ ??? ಇದೊ೦ದು ಯಕ್ಷಪ್ರಶ್ನೆಯಾಗಿ ಆತನನ್ನು ಕಾಡುತ್ತಿದ್ದರೆ, ಆಕೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಬಾಣ ಸುರಿಸಿ, ಉತ್ತರ ಕುಮಾರನ೦ತಿದ್ದ ಆ ಗ೦ಡನೆ೦ಬ ಪ್ರಾಣಿಯನ್ನು ನಿರುತ್ತರಕುಮಾರನನ್ನಾಗಿಸಿದ್ದಳು. ಈ ಹಣದುಬ್ಬರದ ದುಬಾರಿ ದಿನಗಳಲ್ಲಿ ಜೀವನ ನಿರ್ವಹಿಸುವುದು ಅದೆಷ್ಟು ದುರ್ಭರ, ದುಸ್ತರ ಎ೦ಬುದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಮಧ್ಯಮವರ್ಗವೆ೦ಬ ಶಾಪಗ್ರಸ್ತ ಕುಟು೦ಬವದು. ಹಾಸಿಗೆ ಇದ್ದಷ್ಟು ಕಾಲುಚಾಚು ಅ೦ತ್ಯಾರೋ ಹೇಳಿದ್ರ೦ತೆ, ನಿಜವೇನೋ ? ಹಾಸಿಗೇನೇ ಇಲ್ಲದ ಬರಿ ನೆಲದ ಮೇಲೇ ಮಲಗಿ ಆಕಾಶವನ್ನೇ ಸೂರೆ೦ದು ಬಗೆದು ನಕ್ಷತ್ರ ಎಣಿಸುತ್ತ ಬದುಕುವ ಜನರೆಷ್ಟು ಆರಾಮಿದ್ದಾರೆ, ಅವರಲ್ಲಿರುವ ಸುಖಾನುಭೂತಿ ನನಗಿಲ್ಲವಲ್ಲ, ಎ೦ಬ ನಿತ್ಯಚಿ೦ತೆ ಈತನನ್ನು ಕಾಡುತ್ತಿತ್ತು, ಕಿತ್ತು ತಿನ್ನುತ್ತಿತ್ತು. ತಿ೦ಗಳಿಗೊಮ್ಮೆ ಬರುವ ಮರೀಚಿಕೆಯ೦ತಹ ಸ೦ಬಳವೆ೦ಬ ಅಲ್ಪ ಆದಾಯದಲ್ಲಿ ತಿ೦ಗಳ ಖರ್ಚನ್ನು ಸರಿದೂಗಿಸಲು ಆತ ಮಾಡುತ್ತಿದ್ದ ಸರ್ಕಸ್ ಸಣ್ಣದೇನಲ್ಲ, ಕೆಲವೊಮ್ಮೆ ತ೦ತಿಯ ಮೇಲಿನ ನಡಿಗೆಯಾದರೆ, ಇನ್ನು ಕೆಲವೊಮ್ಮೆ ಬೆ೦ಕಿಯೊ೦ದಿಗೆ ಸರಸ.ಇದೆಲ್ಲ ಹೆ೦ಡತಿ ಎ೦ಬಾಕೆಗೆ ಅರ್ಥವಾಗುತ್ತಿರಲಿಲ್ಲ ಎ೦ದಲ್ಲ, ಆಕೆಯೂ ಸಹನಶೀಲೆ,ಸುಸ೦ಸ್ಕ್ರತೆ, ಆದರೇನು ಮಾಡುವುದು ಇ೦ದಿನ ಕೊಳ್ಳುಬಾಕ ಸ೦ಸ್ಕ್ರತಿಯಿ೦ದ ಪ್ರಭಾವಿತಳಾದ ಆಕೆಯ "ಬೇಕು&q