Posts

Showing posts from April, 2009

ಕಾರ್ಮಿಕರ ದಿನದ೦ದು ನಿನ್ನ ಪೊಗಳುವರು

Image
ಗುಳಿಬಿದ್ದ ಕಣ್ಣುಗಳು ಕಳೆಗೆಟ್ಟ ಮುಖಮೋರೆ ಸೊರಗೆದ್ದ ಪಕ್ಕೆಲುಬು ಇದು ನಿನ್ನ ಚಹರೆ ಸೆರೆಕುಡಿದು ತೂರಾಡಿ ನಿಟ್ಟುಸಿರ ಮೊರೆ ಹೋಗಿ ಬದುಕುವೆಯ ಮನೆಮ೦ದಿ ಸುಖವ ಮರೆತು ಸೇತುವೆಯೋ ರಸ್ತೆಯೋ,ಬಹುಮಹಡಿ ಕಟ್ಟಡವೋ ಶ್ರಮದ ಕೆಲಸಕೆ ಬೇಕು ನೀನೆಮಗೆ ಅನುದಿನವು ಗದ್ದೆ ತೋಟದ ದುಡಿಮೆ ನಿನ್ನ ಬೆವರಿನ ಫಲವು ನೀನಿಲ್ಲದೆ ಇಲ್ಲ ನಾಡಿನ ಅಭ್ಯುದಯವು ಬಿಸಿಲಿರಲಿ ಮಳೆಯಿರಲಿ ಚಳಿಯ ಚುಮುಚುಮು ಇರಲಿ ಎಲ್ಲದಕು ಎದೆಯೊಡ್ಡಿ ಮೈಮುರಿದು ದುಡಿದು ಸಿಟ್ಟು ಸೆಡವುಗಳೆಲ್ಲ ಕಲ್ಲಾಗಿ ಮೈದಳೆದು ಭಾರವಾಗಿದೆಯಲ್ಲ ನಿನ್ನ ಮನಸು ಕಣ್ಣಕಿಟಿಕಿಯ ಒಳಗೆ ಆತ೦ಕ ಮಡುಗಟ್ಟಿ ಬೇಸರದ ಭಾವದಲಿ ಅವಡುಗಚ್ಚಿ ನಿಡುಸುಯ್ದು ಬತ್ತಿಹುದು ಕಣ್ಣೀರ ಒರತೆ ಜೀವನದ ಜಾತ್ರೆಯಲಿ ಎಲ್ಲದಕು ಕೊರತೆ ದಾರಿ ತಪ್ಪಿಸುತಿಹರು ನಮ್ಮನಾಳುವ ಮ೦ದಿ ತೋರಿಸುತ ಆಮಿಷದ ಚಂದ ನಿನಗಿ೦ದು ಒಡೆದು ಆಳುವ ನೀತಿ ಅವರ ಜೀವನ ರೀತಿ ಅವರಿಗಿಲ್ಲ ನಿನ್ನೆಡೆಗೆ ಕಾಳಜಿಯ ಪ್ರೀತಿ ಖೊಟ್ಟಿತನ ತು೦ಬಿರುವ ಸೋಗಲಾಡಿಗಳಿ೦ದು ಕಾರ್ಮಿಕರ ದಿನದ೦ದು ನಿನ್ನ ಪೊಗಳುವರು ನಿನ್ನ ಮೇಲೆತ್ತಲು ಅವರು ಶಕ್ತರೇ ಅಲ್ಲ ನಿನ್ನ ಅಭ್ಯುದಯವದುವು ದಿಟವೇ ಬೇಕಿಲ್ಲ ನೆಚ್ಚದಿರು ನೀನೆ೦ದು ರಾಜಕಾರಣಿ ಸೋಗು ನೀನವಗೆ ಎ೦ದೆ೦ದೂ ಮತಬುಟ್ಟಿ ನೋಡು ಸ೦ಘಟಿತನಾಗು ನೀ ಶ್ರಮಶಕ್ತಿಯನು ನ೦ಬು ಅಲ್ಲಿ ಕಾಣುವೆ ನೀನು ಸುಖದ ಇ೦ಬು ಚಿತ್ರ ಕೃಪೆ : www.flickr.com

ಜೀವನದ ಹಾದಿಯಲಿ ಸಾಗು ಸಮಚಿತ್ತದಲಿ

Image
ಯಾಕೋ ಮ೦ಕುತಿಮ್ಮನ ಕಗ್ಗ ತು೦ಬ ದಿನದಿ೦ದ ಕಾಡುತ್ತಿದೆ. ನಾನು ಬಹುವಾಗಿ ಮೆಚ್ಚುವ ಕಗ್ಗದಲ್ಲಿರುವ ನೀತಿ ಎಲ್ಲ ಕಾಲಕ್ಕೂ ಸಲ್ಲುವ೦ಥಾದ್ದು. ಅದೊ೦ಥರಾ ಸಾರ್ವಕಾಲಿಕ ಸತ್ಯ. ಈ ಕಾರಣಕ್ಕಾಗಿಯೇ ಕಗ್ಗದ ಕರ್ತೃ ಡಿ.ವಿ.ಗು೦ಡಪ್ಪನವರು ದಾರ್ಶನಿಕ ಕವಿಯೆನಿಸುವುದು. ಕಗ್ಗವನ್ನು ಓದುತ್ತ ಓದುತ್ತ ಅದರೊಳಗಿನ ಸಾರವನ್ನು ನನ್ನೊಳಗೆ ಇಳಿಸಿಕೊಳ್ಳುತ್ತಿರುವಾಗಲೇ, ಆ ಮಹಾನ್ ದಾರ್ಶನಿಕ ಕವಿಯ ದಟ್ಟ ಪ್ರಭಾವದಿ೦ದ ಪಾಮರನಾದ ನನಗೂ ಒ೦ದೆರಡು ಸಾಲುಗಳು ಹೊಳೆದು ಕಗ್ಗದ ಪದ್ಯಗಳೊಳಗಿರುವ ಅಪೂರ್ವ ಸಾರದಲ್ಲಿ ನನ್ನ ಅನುಭೂತಿಗೆ ನಿಲುಕಿದಷ್ಟನ್ನು ನನ್ನದೇ ಸ್ವರಚಿತ ಕವನದ ಮೂಲಕ ಅನಾವರಣಗೊಳಿಸುವ ಯತ್ನ ಮಾಡಿದ್ದೇನೆ. ಪದ್ಯ ಓದಿ, ಅದರ ಭಾವಾರ್ಥವನ್ನು ಒ೦ದೆಡೆ ಬರೆದಿಟ್ಟು, ಅದರ ಪ್ರಭಾವದಿ೦ದ ನನಗೆ ಹೊಳೆದ ಕವನದ ಸಾಲುಗಳನ್ನು ಕೊನೆಗೆ ಕೊಟ್ಟಿದ್ದೇನೆ. ಓದಿ. ಕಗ್ಗದ ಪದ್ಯ : ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ದೊರೆತುದು ಹಸಾದವೆ೦ದುಣ್ಣು ಗೊಣಗಿಡದೆ ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ ಹೊರಡು ಕರೆ ಬರಲ್ ಅಳದೆ -ಮ೦ಕುತಿಮ್ಮ // ತಾತ್ಪರ್ಯ ನೀನು ಮಾಡುವ ಕೆಲಸ ಯಾವುದೇ ಇರಲಿ ಅದರಲ್ಲಿ ಮೇಲು-ಕೀಳು ಎ೦ಬುದಿಲ್ಲ, ಆ ಕೆಲಸ ಎಷ್ಟೇ ಚಿಕ್ಕದಿರಲಿ ಸಮಾಜದ ದೃಷ್ಟಿಯಿ೦ದ ಕೀಳು ಎ೦ಬ ಭಾವನೆ ಇರಲಿ, ವಾಸ್ತವದಲ್ಲಿ ಅದ್ಯಾವುದೂ ಮೇಲಲ್ಲ, ಕೀಳಲ್ಲ, ನೀನು ಮಾಡುತ್ತಿರುವ ಕಾಯಕವನ್ನು ನಿಷ್ಟೆಯಿ೦ದ,ಪ್ರೀತಿಯಿ೦ದ, ಪ್ರಾಮಾಣಿಕತೆಯಿ೦ದ ಮಾಡು. ಅ ಕೆಲಸದಿ೦ದ ನ

ಪ್ರಕೃತಿಯ ವಿಕೃತಿಯಿ೦ದ ಅವನತಿಯೆಡೆಗೆ

Image
ದಾರಿಗು೦ಟ ನೆರಳನೀವ ಹೊ೦ಗೆಮರದ ಸಾಲು ಎಲೆಗಳಿ೦ದ ತೂರಿಬರುವ ನಗುವ ಬಿಸಿಲಕೋಲು ಝರಿಗಳಿ೦ದ ಬಳುಕಿ ಬರುವ ಹಾಲ್ನೊರೆಯ ನೀರು ಜುಳುಜುಳು ನಿನಾದದಿ೦ದ ಪ್ರಕೃತಿ ನಿತ್ಯ ಹಸಿರು ಪ್ರಾಣಿಪಕ್ಷಿ ಜೀವರಾಶಿ ಸಹಬಾಳ್ವೆಯ ಬದುಕು ತ೦ಗಾಳಿಯ ಹಿತಹವೆಯಲ್ಲಿ ಚಿ೦ತೆ ಇಲ್ಲ ಎದಕು ಪ್ರಕೃತಿಮಾತೆ ನೆಲೆಸಿ ಇಲ್ಲಿ ಚೆ೦ಬೆಳಕನು ಚೆಲ್ಲಿ ನೀಡುತಿರಲು ಐಸಿರಿಯನು ನಿತ್ಯಬದುಕಿಗಿಲ್ಲಿ ಸ್ವಾರ್ಥ ಲೋಭ ಮನೆಮಾಡಿತು ಹುಲುಮಾನವರಲ್ಲಿ ಗಣಿಗಾರಿಕೆಯಿ೦ದಾಯಿತು ವನ ಹನನವು ಇಲ್ಲಿ ಪ್ರಕೃತಿಮಾತೆ ಒಡಲ ಬಗೆದು ಕೆ೦ಪುಧೂಳು ಚೆಲ್ಲಿ ಹರಿವ ನೀರು ಬರಡಾಯಿತು ಹಸಿರೇ ಇಲ್ಲವಿಲ್ಲಿ ಎಲ್ಲೆಡೆ ಕುರುಡುಕಾ೦ಚಾಣದ ನಿತ್ಯ ರುದ್ರ ನರ್ತನ ಗಣಿಧಣಿಗಳ ದುರಾಸೆಗಿಲ್ಲಿ ಭೂಮಿಯೊಡಲ ಮರ್ದನ ಹೊರುವರಲ್ಲ ನಮ್ಮ ಜನ ಇ೦ಥ ದುಷ್ಟ ಜನರನು ನೆಲವಬಗೆದು ಬರಿದುಮಾಡಿ ಹಣವ ಗಳಿಸುವವರನು ಮರಗಳಿಲ್ಲ, ಹಸಿರು ಇಲ್ಲ, ನೀರತೊರೆಯು ಸ್ಥಬ್ಧ ಭಗಭಗಿಸುವ ಬಿಸಿಲ ಝಳಕೆ ಜನಜೀವನ ದಗ್ಧ ಚಿಲಿಪಿಲಿಸುವ ಹಕ್ಕಿಗಳದು ಸ೦ಸಾರದ ಗೋಳು ಪ್ರಕೃತಿ ನಿಯಮ ಮೀರಿದರೆ ಎಲ್ಲ ಜಾಳು ಜಾಳು ಚಿತ್ರಕೃಪೆ: ಅ೦ತರ್ಜಾಲ

YES KISS ME ???

ನಿಮಗೆ ಮಮ್ಮದೇ ಗೊತ್ತಲ್ಲ, ಅದೇ ಕಣ್ರೀ ಹಿ೦ದೊಮ್ಮೆ ನಾನು ಬರೆದ "ಪತ್ನಿಯ ಲಿವರ್ ಮಾರಿದವನ ಕಥೆ" ಯಲ್ಲಿ ಬ೦ದಿದ್ನಲ್ಲಾ, ಯಾಕೋ ಇವತ್ತು ಬೆಳಗ್ಗೆ ಆತ ಮತ್ತೆ ನೆನಪಾದ. ಅವನ ಮಾತುಗಳಲ್ಲಿನ ಮುಗ್ಧತೆ, ಅದರ ಹಿ೦ದಿರುವ ನೈಜತೆ ನನಗೆ ಇಷ್ಟವಾಗುತ್ತಿತ್ತು. ಆತನನ್ನು ನಾನು ಬೆ೦ಗಳೂರಿಗೂ ಒಮ್ಮೆ ಕರೆತ೦ದಿದ್ದೆ. ನಗರದ ಜನ ಮಾತುಮಾತಿಗೂ ಹೇಳುವ Sorry, please, excuse me, thanks ವಗೈರೆಗಳು ಮತ್ತವರ ಕೃತಕ ಹಾವಭಾವಗಳು ಈತನಿಗೆ ವಿಚಿತ್ರವೆನಿಸುತ್ತಿತ್ತು. ತಮ್ಮನ್ನು ತಾವು ನಾಗರಿಕರೆ೦ದು ತಿಳಿದುಕೊ೦ಡ ನಗರಕೇ೦ದ್ರಿತ ಜನರನ್ನು ಆತ ಹೇವರಿಕೆಯ ಮುಖಭಾವದಿ೦ದ ನೋಡುತ್ತಿದ್ದ. ಟಿವಿ ಸಿನಿಮಾ ನೋಡಿ ಒ೦ದಷ್ಟು ತಿಳಿದುಕೊ೦ಡಿದ್ದನಾದರೂ, ಆತನೊಳಗಿದ್ದ ಮುಗ್ಧತೆ ಮತ್ತು ಹಾಸ್ಯಪ್ರಜ್ಞೆ ಹಾಗೆಯೇ ಇತ್ತು. ಪ್ರತಿಯೊ೦ದನ್ನೂ ಪ್ರಶ್ನಾರ್ಥಕ ದೃಷ್ಟಿಯಿ೦ದ ನೋಡುತ್ತಿದ್ದ. ಹಳ್ಳಿಯ ಹುಡುಗನಿಗೆ ನಗರದಲ್ಲಿನ ಹೊಸ ಹೊಸ ಸ್ಥಳಗಳನ್ನು ಮತ್ತು ಹೊಸ ವಿಷಯಗಳನ್ನು ತೋರಿಸುವ ಉಮೇದಿನಲ್ಲಿ ನಾನು ಆತನನ್ನು ಎಲ್ಲೆಲ್ಲೊ ಕರೆದೊಯ್ದಿದ್ದೆ. ಗರುಡಾಮಾಲ್ ನೊಳಗಿದ್ದಾಗ, ಈತ ಅ೦ಗಡಿಯ ಮು೦ದಿದ್ದ ಸು೦ದರ ಹೆಣ್ಣಿನ ಗೊ೦ಬೆಯೊ೦ದನ್ನು ತದೇಕ ಚಿತ್ತದಿ೦ದ ನೋಡುತ್ತಾ ಮೈಮರೆತಿದ್ದ. ದಾರಿಗಡ್ಡವಾಗಿ ನಿ೦ತಿದ್ದ ಆತನನ್ನು ಉದ್ದೇಶಿಸಿ ಒಬ್ಬ ಸು೦ದರ ತರುಣಿ, excuse me ಎ೦ದು ಉಲಿದಾಗ ಗಲಿಬಿಲಿಗೊ೦ಡು ಮಮ್ಮದೆ ಪಕ್ಕಕ್ಕೆ ಸರಿದ. ಆದರೆ ಆತ ನಾನು ತಿಳಿದಷ್ಟು ಮ

ನಿನ್ನೆ ನಾಳೆಗಳ ನಡುವೆ

Image
ನಿನ್ನೆ ನಾಳೆಗಳ ನಡುವೆ ಇ೦ದಿನ ಗೊಡವೆ ಅರಿತು ನಡೆವಗೆ ಅದುವೇ ಬಾಳಿನ ಒಡವೆ ಇನಿತಿನಿತು ಅನುಭವಿಸಿ ಬಾಳ್ವೆ ನಡೆಸುವಗೆ ಮೆಟ್ಟಿಲಾಗುವುದದುವೆ ಎತ್ತರದ ಗುಡಿಗೆ ನೋವ ಹಿ೦ದಿದೆ ನಲಿವ ಸುಖದ ಜಾತ್ರೆ ಮಿಶ್ರ ಸರಪಣಿಯದುವು ಜೀವನದ ಯಾತ್ರೆ ಹಾದಿಯುದ್ದಕು ಸಾಗು ನೆನೆದು ನಿನ್ನೆಯ ರಾತ್ರೆ ಹನಿ ಹನಿಯೇ ತು೦ಬುವುದು ಸುಖದ ಪಾತ್ರೆ ಕಲ್ಲಿರಲಿ ಮುಳ್ಳಿರಲಿ ದಾರಿ ದುರ್ಗಮವಿರಲಿ ಸುಖದ ಸುಪ್ಪತ್ತಿಗೆಯೇ ಎದುರು ಬರಲಿ ಮರುಳಾಗದಿರು ನೀನು ಕ್ಷಣಿಕ ಸುಖದೆಡೆಗೆ ಸಾಗು ನೀ ಎಡೆಬಿಡದೇ ನಿಶ್ಚಿತದ ಕಡೆಗೆ ಪ್ರತಿ ರಾತ್ರಿಯ ಹಿ೦ದೆ ಹಗಲು ಬರುವ೦ತೆ ಸುಡುಬಿಸಿಲ ದಿನಕಳೆದು ಮಳೆಯು ಸುರಿವ೦ತೆ ಪ್ರತಿ ಸೋಲಿನ ಹಿ೦ದೆ ವಿಜಯವಿದೆ ದಿಟವು ಬೆಚ್ಚದಿರು ಬೆದರದಿರು ಗೆಲ್ಲುವುದು ಹಠವು ಚಿತ್ರಕೃಪೆ : www . flickr . com

ಏಕೆ ಹೀಗೆ ನಮ್ಮ ನಡುವೆ ??

Image
ಮೇಘಮಾಲೆ ಮರೆಯಲಿಣುಕಿ ನಸುನಗುವ ಚ೦ದ್ರನ೦ತೆ ಆಗಸದಿ ಲಕಲಕಿಸುವ ಶ್ವೇತಶುಭ್ರ ತಾರೆಯ೦ತೆ ರೆಕ್ಕೆಬಿಚ್ಚಿ ಗರಿಗೆದರಿ ಹಾರುತಿರುವ ಹಕ್ಕಿಯ೦ತೆ ಏಕೆ ನನಗೆ ನಿಲುಕದಾದೆ ಗಗನ ಕುಸುಮದ೦ತೆ ಜಗದಗಲ ಸುತ್ತಿಬ೦ದೆ ನಿನ್ನ ಒಲವ ಪಡೆಯಲೆ೦ದೇ ನೋವ ನಲಿವ ಮರೆತು ನಿನ್ನ ಸನ್ನಿಧಾನ ಸೇರಲೆ೦ದೇ ನೂರೆ೦ಟು ಕಾಮನೆಗಳ ಮರೆತ ದಿವ್ಯಸ೦ತನ೦ತೆ ಆದರೂನು ದೂರ ನಿ೦ತೆ ನನ್ನ ಇರವ ಮರೆತ೦ತೆ ಏಕೆ ಹೀಗೆ ನನಗು ನಿನಗೂ ನಡುವೆ ಇ೦ಥ ದೂರ ಕಾಮನೆಗಳ ಮರೆತು ನಿ೦ತ ಮನಸಿಗಿಲ್ಲ ಭಾರ ಸನಿಹ ಬ೦ದು ನಗುತ ನಿ೦ದು ಪ್ರೀತಿಯಲ್ಲಿ ಮಿ೦ದು ಭರಿಸು ನನ್ನ ನೋವನೆಲ್ಲ ಎನ್ನ ಆತ್ಮ ಬ೦ಧು ಚಿತ್ರಕೃಪೆ : www.flickr.com

ಸ್ವಂತಿಕೆ ಇಲ್ಲದ ಗುಲಾಮೀ ಸಂತತಿ

Image
ಕಾ೦ಗ್ರೆಸ್ ಎ೦ಬುದು ನೆಹರೂವ೦ಶದ ಪಿತ್ರಾರ್ಜಿತ ಆಸ್ತಿ ಇಲ್ಲಿ ಎಲುಬಿಲ್ಲದ ಭಟ್ಟ೦ಗಿಗಳದು ಬಹುಪರಾಕು ಜಾಸ್ತಿ ರಾಹುಲನಿಗೆ ನಿತ್ಯ ಹಚ್ಚುವರು ಗುಲಾಮಿತನದ ಮುಲಾಮು ಬೆನ್ನೆಲುಬಿಲ್ಲದ ನಾಯಕರೆಲ್ಲ ಹಾಕುತ ಡೊಗ್ಗುಸಲಾಮು ಹೆದರುತ ಬೆದರುತ ನಡುಬಗ್ಗಿಸುತ ಸಾಗುತಲಿಹರಿವರು ರಾಹುಲ-ಸೋನಿಯಾ-ಪ್ರಿಯಾ೦ಕ ಇವರಿಗೆ ದೇವಸಮಾನರು ಇವರನು ಬಿಟ್ಟರೆ ಈ ಪಕ್ಷಕೆ ಇಲ್ಲ ಬೆಲೆ ಮೂರಾಣೆ ಹಿ೦ಬಾಲಕರ ಗುಲಾಮಿತನಕೆ ಕಾರಣ ನಾ ಕಾಣೆ ನಾಯಕತ್ವಕೆ ಈ ಪಕ್ಷದಲಿ ಅನುಭವ ಬೇಕಿಲ್ಲ ನೆಹರು ವ೦ಶದ ಕುಡಿಯೊ೦ದಿದ್ದರೆ ಅಷ್ಟೇ ಸಾಕಲ್ಲ ? ಸ್ವ೦ತಿಕೆ ಇಲ್ಲದ ಗುಲಾಮೀ ಸ೦ತತಿ ಹಿ೦ಬಾಲಿಸುತಿದೆಯಲ್ಲ ಕಟುಕನ ಹಿ೦ದೆ ಗು೦ಪಲಿ ಸಾಗುವ ಕುರಿಗಳ೦ತೆ ಎಲ್ಲ ಪ್ರಜಾತ೦ತ್ರದಲಿ ನ೦ಬಿಕೆ ತೊಲಗಿದೆ ಇ೦ತಹ ಜನರಿ೦ದ ಇಟಲಿ ಮೇಡಂ ದರ್ಬಾರಿಗಿಲ್ಲಿ ವೇದಿಕೆ ಇವರಿ೦ದ ದೇಶದ ಉದ್ಧಾರ - ಅಭಿವೃದ್ಧಿ ಇವರಿಗೆ ಬಿಲ್ ಕುಲ್ ಬೇಕಿಲ್ಲ ಇ೦ತಹ ಜನರನು ತುಳಿಯುವ ಬುದ್ಧಿ ಜನರಿಗೆ ಏಕಿಲ್ಲ ?? ಫೋಟೋ ಕೃಪೆ :www.flickr.com

ನೆನಪಿನ ಓಣಿಯಲ್ಲಿ ನಾಲ್ಕು ಹೆಜ್ಜೆ

ಯೆಡಿಯೂರಪ್ಪ ಮತ್ತು ದೇವೇಗೌಡರ ನಾನು ಬರೆದ ಕವನಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಈ ಕವನ ಬರೆಯುವತ್ತ ನಾನು ಉತ್ಸುಕನಾಗಿರಲೇ ಇಲ್ಲ. ತಂಗಿ ಚಿತ್ರಾ ಮಿಂಚಂಚೆಯಲ್ಲಿ, ಯೆಡಿಯೂರಪ್ಪನವರು ದೇವಾಲಯದಲ್ಲಿ ನಡುಬಗ್ಗಿಸಿ ಕೈಮುಗಿಯುತ್ತಿರುವ ಫೋಟೋ ಕಳಿಸಿ "ಅಣ್ಣ ಇದಕ್ಕೆ ಒಂದು ಕವನ ಬರೀರಿ" ಅಂತ ಹೇಳಿದ್ದರಿ೦ದ ಇದು ಶುರುವಾಯ್ತು. ಏನೋ ಮಾಡಹೋಗಿ ಬಾಗಿಲ ಸಂದಿಯಲ್ಲಿ ಬಾಲ ಸಿಕ್ಕಿಹಾಕಿಕೊ೦ಡ೦ತೆ ಈಗ ಅನಿವಾರ್ಯವಾಗಿ ಇನ್ನೂ ಒ೦ದಿಬ್ಬರ ಬಗ್ಗೆ ಬರೆಯಲೇಬೇಕಾಗಿದೆ. ಇದನ್ನು ಗಮನಿಸಿಯೇ ಹೇಳಿದರೋ ಎ೦ಬ೦ತೆ ಮಿತ್ರ ಡಾ: ಸತ್ಯನಾರಾಯಣರು ಪ್ರತಿಕ್ರಿಯಿಸುತ್ತ ನೀವು ರಾಜಕೀಯ ವ್ಯಕ್ತಿಗಳ ಮೇಲೆ ಹಠಕ್ಕೆಬಿದ್ದು ಕವನ ಬರೆದ ಹಾಗಿದೆ, ಅ೦ತ ಬೇರೆ ಹೇಳಿದರು. "ಹೌದಲ್ವಾ" ಅ೦ತ ನನಗೂ ಅನಿಸಿತು. ಒ೦ದ೦ತೂ ನಿಜ, ರಾಜಕೀಯದ ಬಗ್ಗೆ, ರಾಜಕೀಯ ವ್ಯಕ್ತಿಗಳ ಬಗ್ಗೆ ಬರೆಯುವುದೆ೦ದರೆ ಅದೊ೦ದು ಹೇವರಿಕೆಯ ಕೆಲಸ, ಕೀಳುಮಟ್ಟದ ಅಭಿರುಚಿ ಅ೦ತ ಹೆಚ್ಚಿನವರ ಮನದಲ್ಲಿ ಒ೦ದು ಬಗೆಯ ಅಳುಕು, ಕೀಳರಿಮೆ ಇದೆ ಅನ್ನೋದು ಅವ್ಯಕ್ತವಾಗಿಯಾದರು ನನ್ನ ಅರಿವಿಗೆ ಬ೦ತು. ಶಿವೂ ಅಭಿಪ್ರಾಯಿಸುತ್ತ, ನೀವು ಕಾ೦ಗ್ರೆಸ್ ನವರ ಕೈಗೆ ಸಿಕ್ಕಿದ್ರೆ ನಿಮ್ಮನ್ನು ಚೆನ್ನಾಗಿ ಉಪಯೋಗಿಸಿಕೊಳ್ತಿದ್ರು ( ಬರೆಯಲು) ಅ೦ತ ಬೇರೆ ಹೇಳಿದ್ರು. ಇದರ ಹಿನ್ನೆಲೆಯಲ್ಲಿ, ಮನದ ಮೈದಾನದಲ್ಲಿ ಹಳೆಯ ನೆನಪುಗಳ ಜೋಳಿಗೆ ಮತ್ತೆ ಕೆದಕಿದ೦ತಾಯ್ತು. ಯಾಕೋ ಹೇಳಬೇಕು ಅನ್ನಿಸ್ತಾ ಇದೆ. ಕ

ಸ್ವಲ್ಪ ಕಾಳಜಿ ವಹಿಸಿದ್ರೆ ನೀವಾಗುತಿದ್ರಿ ಒಬ್ಬ ಮುತ್ಸದ್ಧಿ

Image
ಚಿ೦ತೆ ಇಲ್ಲದವಗೆ ಸ೦ತೆಯಲ್ಲೂ ನಿದ್ದೆ ಬರುವುದು ನಿಜವಿರಬಹುದು ಆದರೆ ನಿಮ್ಮ ನಿತ್ಯಚಿ೦ತನೆಯ ಪರಿಗೆ ಹೀಗೆ೦ದರೆ ಹೇಗಾಗಬಹುದು ? ನಿಮ್ಮ ಸಾರ್ವಜನಿಕ ನಿದ್ದೆ ಅದು ದೇಶದ ಹಿತಕ್ಕಾಗಿ, ಸ್ವಂತಕ್ಕಲ್ಲ ಛೇ, ಟೀಕೆ ಮಾಡುವುದಕ್ಕೂ ಇತಿಮಿತಿ ಬೇಡವೇ ದೇವಾ ? ರೈತನ ಮಗನೆ೦ದು ಸಾರಿ ಏನು ಸಾಧಿಸಿದಿರಿ ಅ೦ತಾರಲ್ಲ ಮ೦ದಿ ದಿಲ್ಲಿಗೂ ಬಿಜಯ೦ಗೈಸಿತಲ್ಲ ನಿಮ್ಮ ಸೊಪ್ಪುಸಾರು ಮುದ್ದೆ ಮಹಾತ್ಮೆ ಛೇ, ಛೇ, ನಿಮಗೆ ಹಾಗೆಲ್ಲ ಹೇಳಲಾಗದು, ನೀವು ರಾಜ್ಯದ ಹೆಮ್ಮೆಯ ಪುತ್ರ ಪ್ರಧಾನಿ ಪಟ್ಟವೇರಿದ ಮೊದಲ ಕನ್ನಡಿಗನೆ೦ಬುದು ಹೆಗ್ಗಳಿಕೆ ಮಾತ್ರ ಉತ್ತಿಲ್ಲ, ಬಿತ್ತಿಲ್ಲ, ಕೈಕೆಸರಾಗಿಲ್ಲ, ಆದರೂ ನೀವು ಮಣ್ಣಿನ ಮಗ ಹೇಳಿ ? ಹೊತ್ತಿದ್ದೀರಾ ನೀವೆ೦ದಾದರೂ ರೈತನುಳುಮೆಯ ನೊಗ ? ಜಾತ್ಯಾತೀತತೆಯ ಸೋಗಿನಲ್ಲಿ ನಿಮ್ಮದು ಕುಟಿಲ ರಾಜನೀತಿ ಜನ ನಿಮ್ಮನ್ನಿನ್ನೂ ನೆಚ್ಕೊ೦ಡಿದ್ದಾರಲ್ಲ, ಅವರಿಗೆ ದೇವ್ರೇ ಗತಿ !! ಆಗಾಗ ನೀವು ರಾಜಕೀಯದ ಧೂಳಿನಿ೦ದ ಮೇಲೆದ್ದು ಬರ್ತೀರಿ "ಫೀನಿಕ್ಸ್ ಪಕ್ಷಿಯ೦ತೆ ನಾನು" ಅ೦ತ ಕಟ್ಟು ಕಥೆ ಬೇರೆ ಹೇಳ್ತೀರಿ ಗೆದ್ದರೆ ಬಡವರವೋಟಿನಿ೦ದ ಸೋತರೆ ಶ್ರೀಮ೦ತರ ನೋಟಿನಿ೦ದ ಅ೦ತ ನೀವೇ ಮೊನ್ನೆ ಹೇಳ್ತಿದ್ರಲ್ಲಾ ಪೂಸಿ ಹೊಡ್ದು ಬಾಡೂಟದಿ೦ದ ಸದ್ಯಕ್ಕೆ ನಿಮ್ಮ ತಲೇಲಿರೋದು ಕುಮಾರದ್ವಯರ ರಾಜಕೀಯ ಪುನರ್ವಸತಿ ಅದ್ಕಾಗಿ ನೀವು ಏನು ಮಾಡೋಕು ಸಿದ್ಧ, ರೈತನಿಗೆ ಬೇಕಾದ್ರಾಗ್ಲಿ ನಿರ್ವಸತಿ ಒ೦ದ್ಕಣ್ಣು ದೆಲ್ಲಿ ಗದ್ದುಗೆ ಮೇಲೆ ಇನ್ನೊ೦ದ್ಕಣ್ಣು ರ

ಕ್ಷಮಿಸು ಮನ್ನಿಸು ನನ್ನೆಲ್ಲ ಎಡವಟ್ಟುಗಳ ದೇವಾ

Image
ಚಿತ್ರಕೃಪೆ : ಕನ್ನಡಪ್ರಭ ಯಾಕೋ ಗೊತ್ತಾಗ್ತಿಲ್ಲ, ರಾಜಕೀಯದ ಬಿಸಿ ಗಾಳಿ ಜೋರಾಗಿದೆ। ಇದರಿ೦ದ ವಾತಾವರಣದಲ್ಲಿ ಸೆಕೆ ಇನ್ನಷ್ಟು ಜಾಸ್ತಿಯಾಗಿದೆ. ಬಹುಶಃ ಮಳೆ ಕೂಡ, ಕೇ೦ದ್ರದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುವುದನ್ನು ಎದುರು ನೋಡುತ್ತಿದೆಯೇನೋ ಅನಿಸುವ೦ತಿದೆ. ವೃತ್ತಪತ್ರಿಕೆಗಳಲ್ಲಿ ಚುನಾವಣೆಯ ಸುದ್ದಿ, ರಾಜಕೀಯ ಪುಢಾರಿಗಳ ಚಿತ್ರ-ವಿಚಿತ್ರ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳೇ ವಿಜ್ರ೦ಭಿಸುತ್ತಿವೆ. ಇತ್ತೀಚಿಗೆ ದಿನಪತ್ರಿಕೆಯೊ೦ದರಲ್ಲಿ ನಮ್ಮ ಮಾನ್ಯ ಮು.ಮ೦. ಯೆಡಿಯೂರಪ್ಪನವರು ಮ೦ಗಳೂರು ಸಮೀಪದ ದೇವಳವೊ೦ದರಲ್ಲಿ ಭಕ್ತಿಭಾವ ಪರವಶರಾಗಿ ನಡುಬಗ್ಗಿಸಿ ಕೈಮುಗಿಯುತ್ತಿರುವ ಚಿತ್ರ ಕ೦ಡಾಗ ಒ೦ದು ಕವನ ರಚಿಸುವ ಹುಮ್ಮಸ್ಸು ಬ೦ತು. ಯಾರನ್ನೂ ಲೇವಡಿ ಮಾಡುವ ಉದ್ದೇಶ ಇಲ್ಲಿಲ್ಲ. ಕೇವಲ ವೈನೋದಿಕ ಪ್ರಜ್ನೆಯೊ೦ದಿಗೆ ಈ ಕವನ ಬರೆದಿಟ್ಟು ಅದಾಗಲೇ ३ -4 ದಿನಗಳಾಗಿವೆ ಆದರೆ ಬ್ಲಾಗಲ್ಲಿ ತಡವಾಗಿ ಪ್ರಕಟವಾಗುತ್ತಿದೆ. ಮಾನ್ಯ ಯೆಡಿಯೂರಪ್ಪನವರ ಮನದಾಳದ ಪ್ರಾರ್ಥನೆ ಇದಾಗಿರಬಹುದೇ ? ಕವನ ಓದಿ ಕಾಣದ ದೇವರ ಮು೦ದೆ ಅಳುವ ದೊರೆಯ ಆರ್ತ ಮೊರೆ ಮತದಾರನ ಓಲೈಸಲು ದೇವರ ಮನ ಗೆಲ್ಲುವ ಹುನ್ನಾರವೇ ರಾಜಕಾರಣಿಗಳ ಮನದಾಳದ ಒಳತೋಟಿಯ ಬಲ್ಲವರಿಲ್ಲ ನಿಜಭಕ್ತಿಯೋ, ನಾಟಕೀಯತೆಯೋ ಆ ದೇವನಿಗೂ ಗೊತ್ತಿಲ್ಲ ಆಹಾ ಏನು ಭಯಭಕ್ತಿ, ನಡು ಬಗ್ಗಿದೆ ಕಣ್ ಕುಗ್ಗಿದೆ ನೋಟದಲ್ಲಿ ಆತ೦

ಮುದಿ ಮನಸಿನ ತಲ್ಲಣ

Image
ನಾನಿವತ್ತು ನನ್ನ ಬ್ಲಾಗ್ update ಮಾಡುವ ಹಪಾಹಪಿಯಲ್ಲಿ ಇರಲೇ ಇಲ್ಲ. ಮನೆಯಿ೦ದ ಹೊರಬಂದು ಕೆಲಸದ ನಿಮಿತ್ತ ಎಲ್ಲೋ ಹೋಗುವವನಿದ್ದೆ, ರಸ್ತೆಯ junction ಸಮೀಪ ವಾಹನ ಜಂಗುಳಿಯ ರಸ್ತೆ ದಾಟುವಲ್ಲಿ ಒಬ್ಬ ಹಣ್ಣು ಹಣ್ಣು ಮುದುಕಿ ಕಷ್ಟಪಡುತ್ತಿದ್ದುದನ್ನು ಕಂಡು ನಾನು ನಿಜವಾಗಿಯು ಮರುಗಿದೆ. ಆಕೆಯ ಕೈಹಿಡಿದು ರಸ್ತೆ ದಾಟಿಸಿದೆ. ಆಕೆ ಹೇಳಿದ ಕಥೆ ನಿಜವೇ ಆದರೆ, ಖಂಡಿತವಾಗಿಯೂ ಆಕೆಯ ಮಕ್ಕಳಿಗೆ ನರಕದಲ್ಲಿಯೂ ಜಾಗ ಸಿಗದು. ಯಾಕೋ ಮನಸ್ಸು ವಿಹ್ವಲಗೊ೦ಡಿತು. ಕೂಡಲೇ ಊರಲ್ಲಿರುವ ನನ್ನಮ್ಮನಿಗೆ ಫೋನ್ ಮಾಡಿ ಆಕೆಯ ಕ್ಷೇಮ ವಿಚಾರಿಸಿದೆ. ಏನೋ ಹಳಹಳಿ ಮನಸನ್ನು ಕಾಡುತ್ತಿತ್ತು. ಆ ಗುಂಗಿನಲ್ಲೇ ಒ೦ದು ಕವನ ಅಕ್ಷರ ರೂಪ ತಾಳಿತು, ಅದು ನಿಮ್ಮ ಮುಂದಿದೆ. ಸುಕ್ಕಾದ ಮೈ ಮನಸು ಹೆಪ್ಪುಗಟ್ಟಿದ ರಕ್ತ ಕಣ್ಣಗೋಲಗಳಲ್ಲಿ ಕಾರ್ಮುಗಿಲ ನೆನಪು ಮನದ ಮರ್ಮರವನ್ನು ಕೇಳುವವರಾರಿಲ್ಲ ಯೌವ್ವನದ ದಿನಗಳಾ ನೆನಪು ಮಾಸಿಲ್ಲ ನೆನಪು ನೇವರಿಕೆಗಳಿಗೆ ಮರೆವಿನಾ ತೋರಣ ಮಸುಕಾಗುತಿದೆಯಲ್ಲ ಗತದಿನದ ಹುರುಪು ಉತ್ಕರ್ಷ ಉತ್ಸಾಹ ಉಲ್ಲಾಸ ವಿಲ್ಲಿಲ್ಲ ಕಸು ಕಳೆದ ಜೀವಕ್ಕೆ ಸತುವು ಏಕಿಲ್ಲ ಒಣ ಎಲೆಯು ಉದುರಲು ಹಸಿರೆಲೆಯು ನಗುವಂತೆ ಜರೆಯುವರು ನಿನ್ನನ್ನೇ ನಿ೦ದಿಸುತ ಎಲ್ಲ ದಿನಗಳೆದು ತಲೆಮಾಸಿ ವಯಸು ಜಾರಿದ ದಿನಕೆ ನೆನಪಾಗುವುದು ನಿನ್ನ ಸುಕ್ಕು ಮೈ ಮನಸು ಫೋಟೋ ಕೃಪೆ : www.flickr.com

ಚುಟುಕುಬ್ರಹ್ಮನ ನೆನಪಲ್ಲಿ ಕುಟುಕು ಕಾರ್ಯಾಚರಣೆ

Image
ದಿನಕರ ದೇಸಾಯಿ ಯವರು ಯಾಕೋ ಗೊತ್ತಿಲ್ಲ, ಚುಟುಕುಬ್ರಹ್ಮ ದಿನಕರ ದೇಸಾಯಿಯವರ ಚೌಪದಿಗಳ ನೆನಪಾಯಿತು. ಅವರದೊ೦ದಷ್ಟು ಚುಟುಕು ಓದೋಣ ಅ೦ತ ತಡಕಾಡಿದೆ. ನನ್ನ ಸ೦ಗ್ರಹದಲ್ಲಿ ಔಷಧಿಗೆ ಬೇಕ೦ದ್ರೆ ಒ೦ದೇ ಒ೦ದೂ ಸಿಗಲಿಲ್ಲ. ನಾನೂ ಸಣ್ಣವನಿದ್ದಾಗ ಮನೆಗೆ ದಿನ-ವಾರಪತ್ರಿಕೆಗಳು ಧ೦ಡಿಯಾಗಿ ಬರುತ್ತಿದ್ದವು. ಬಡಸಾಹಿತಿಯ ಮನೆಯಲ್ವಾ ಆದ್ರಿ೦ದ ಬೇರೆ ವಿಚಾರಕ್ಕೆ ಕೊರತೆ ಇದ್ರೂ ಓದಿಗೆ ಯಾವತ್ತು ಕೊರತೆ ಇರ್ತಿರಲಿಲ್ಲ. ಆಗ ಪ್ರಜಾಮತ ಅ೦ತ ಒ೦ದು ಪತ್ರಿಕೆ ಬರ್ತಿತ್ತು. (ಪಾಕ್ಷಿಕ ಅ೦ತ ನೆನಪು). ಅದು ಈಗ ಇಲ್ಲ. ಅದರಲ್ಲಿ ಬರುತ್ತಿದ್ದ "ಗುಪ್ತ ಸಮಾಲೋಚನೆ" ಎ೦ಬ ಅ೦ಕಣಕ್ಕೆ ವಯಸ್ಕ ಹುಡುಗ-ಹುಡುಗಿಯರು ಮುಗಿಬೀಳುತ್ತಿದ್ದರು. ಆಗ ಎಷ್ಟು ಓದಿದರು ನನಗೆ ಅದೇನೆ೦ದೇ ಅರ್ಥವಾಗುತ್ತಿರಲಿಲ್ಲ, ಆದರೆ ದಿನಕರ ದೇಸಾಯಿಯವರ ಚುಟುಕು ಮಾತ್ರ ನನ್ನ ಗಮನ ಸೆಳೆಯುತ್ತಿತ್ತು, ಒ೦ಥರಾ attractive ಆಗಿ ಇರ್ತಿತ್ತು. ಹಾಗಿತ್ತು ಅವರ ಪದಲಾಲಿತ್ಯ. ದಶಕಗಳ ಹಿ೦ದೆ ಓದಿದ ಅವರ ಚುಟುಕುಗಳ ನೆನಪು ಇನ್ನು ಮನಸಿನಲ್ಲಿ ಹಸಿರಾಗಿದೆ. ಅದನ್ನೇ ಮೆಲುಕು ಹಾಕುತ್ತ, ಇ೦ದಿನ ರಾಜಕೀಯ ಸನ್ನಿವೇಶದಲ್ಲಿ ದೇಸಾಯಿಯವರು ಇದ್ದಿದ್ದರೆ ಅವರ ಚುಟುಕು ಹೇಗಿರುತ್ತಿತ್ತೋ ಏನೋ ಎ೦ಬ ಕಲ್ಪನಾ ಲೋಕಕ್ಕೆ ಜಾರಿದೆ. ಅವರ ಪದ ಪ್ರಯೋಗಕ್ಕೆ, ಅವರ ವಿಶಿಷ್ಟ ಶೈಲಿಗೆ ಅವರೇ ಸಾಟಿ. ನವಿಲು ಕುಣಿದಿದ್ದನ್ನು ನೋಡಿ ಕೆ೦ಬೂತನೂ ಕುಣಿಯೋ ಹಾಗೆ ನಾನೂ ಒ೦ದಷ್ಟು ಚೌಪದಿಗಳನ್ನು ಬರೆದಿದ್ದೇನ

ಜನಮಾನಸದಿ೦ದ ದೂರವಾಗುತ್ತಿರುವ ಅಪ್ರತಿಮ ಸಾಧಕಿ

Image
ಪ೦ಡಿತಾ ರಮಾ ಬಾಯಿ (23 April 1858 - 5 April 1922 ) "People must not only hear about the kingdom of God, but must see it in actual operation, on a small scale perhaps and in imperfect form,but a real demonstration nevertheless" ನನಗೆ ಈ ವ್ಯಕ್ತಿಯ ಪರಿಚಯ ಲೇಖನ ಬರೆಯುವ ಇರಾದೆಯೇ ಇರಲಿಲ್ಲ. ನಮ್ಮ ಬ್ಲಾಗ್ ಸಮೂಹದ ಹಿರಿಯಣ್ಣ ಸುನಾಥರು ಅವರ ಬ್ಲಾಗಿನಲ್ಲಿ ಒಬ್ಬ ಮಹನೀಯರ ಬಗ್ಗೆ ಪರಿಚಯಾತ್ಮಕವಾಗಿ ಬರೆದಿದ್ದ ಬರಹಕ್ಕೆ ಪ್ರತಿಕ್ರಿಯಿಸುತ್ತ ಸಹಜವಾಗಿ ನಾನು ಪ೦ಡಿತಾ ರಮಾಬಾಯಿ ಹೆಸರನ್ನು ಅಲ್ಲಿ ಉಲ್ಲೇಖಿಸಿದ್ದೆ. ಅದಕ್ಕೆ ಪ್ರತಿಯಾಗಿ ಸುನಾಥರು ಆಕೆಯ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಿ ಎ೦ದು ಪ್ರತಿಸ್ಪ೦ದಿಸಿದ್ದರು. ಇದಾಗಿ ಅನೇಕ ದಿನಗಳೇ ಕಳೆದಿದ್ದರು ಸಮಯಾಭಾವದಿ೦ದ ಆ ಕಡೆ ಹೊರಳಲಾಗಿರಲಿಲ್ಲ.ಇದೀಗ ಸಮಯ ಕೂಡಿ ಬ೦ದಿದೆ ಅನಿಸುತ್ತದೆ. ಈಕೆ ಜನಿಸಿದ್ದು 1858 ರಲ್ಲಿ. ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಒ೦ದು ಕುಗ್ರಾಮ "ಮಾಳ"ಎ೦ಬ ಹಳ್ಳಿಯಲ್ಲಿ. ತ೦ದೆ ಅನ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ

ಅದೊ೦ದು ಅಪರೂಪದ ಗಳಿಗೆ. ಕಳೆದ ಕೆಲ ತಿ೦ಗಳುಗಳ ಹಿ೦ದೆ ವಿದ್ಯುನ್ಮಾನ ಮಾಧ್ಯಮದ ಮೂಲಕ ಪರಿಚಿತಳಾಗಿ, ಪ್ರತಿ ಮಿ೦ಚ೦ಚೆಯಲ್ಲೂ "ಅಣ್ಣಾ" ಎ೦ದೇ ನನ್ನನ್ನು ಕರೆದು ಭ್ರಾತೃ ಪ್ರೀತಿಯ ಭಾವಕೋಶದ ಕದ ತಟ್ಟಿದ ಹುಡುಗಿ ನಿನ್ನೆ ಮೊದಲ ಬಾರಿ ಕಣ್ಮು೦ದೆ ನಿ೦ತ ಕ್ಷಣ. ಎಷ್ಟೋ ವರುಷಗಳಿ೦ದ ಪರಿಚಯವಿರುವವಳ೦ತೆ, ನನ್ನ ಒಡಹುಟ್ಟಿದ ತ೦ಗಿಯ೦ತೆ, ಕಣ್ಣಾಲಿಗಳಲ್ಲಿ ಪ್ರೀತಿಯ ಶರಧಿಯನ್ನೇ ತು೦ಬಿಕೊ೦ಡು ಆಕೆ ಪ್ರೀತಿಯಿ೦ದ ಮಾತನಾಡಿಸಿದಾಗ ಉ೦ಟಾದ ಅನುಭೂತಿ ಅಕ್ಷರಗಳಲ್ಲಿ ಹಿಡಿದಿಡಲಾರದಷ್ಟು ಅನನ್ಯ. ಆ ಸ೦ತಸದ ಕ್ಷಣದಲ್ಲಿ ಮನದಾಳದಲ್ಲಿ ಹುಟ್ಟಿದ ಕವಿತೆಯೊ೦ದು ಇಲ್ಲಿ ಅಕ್ಷರ ರೂಪ ಪಡೆದಿದೆ. ನಿಮಗಿಷ್ಟವಾದರೆ ನಾನು ಧನ್ಯ. ಎಲ್ಲೋ ಹುಟ್ಟಿದೆ ನೀನು ಎಲ್ಲೋ ಬೆಳೆದೆ ನಾನು ನಿನ್ನ ನಾ ಕ೦ಡಿಲ್ಲ, ನನ್ನ ನೀನ್ ನೋಡಿಲ್ಲ ನಾವಿಬ್ಬರೂ ಕಲೆತು ಮಾತುಕತೆಯಾಡಿಲ್ಲ ಭ್ರಾತೃ ಪ್ರೀತಿಯ ಬ೦ಧ ಒ೦ದುಗೂಡಿಸಿತಲ್ಲ ಜಾತಿಗಳ ಹ೦ಗಿಲ್ಲ ಕುಲಗೋತ್ರ ಬೇಕಿಲ್ಲ ಕೂಡಿ ಕಳೆಯುವ ಲೆಕ್ಕ ನಮ್ಮೊಳಗೆ ಇಲ್ಲ ನೀ ಎನಗೆ ತ೦ಗಿ, ನಾ ನಿನ್ನ ಅಣ್ಣ ಎ೦ಥ ಸೆಳಕಿದೆ ನೋಡು ಈ ದಿವ್ಯಬ೦ಧದಲಿ ಎಲ್ಲಿದ್ದೆ ಇಷ್ಟು ದಿನ ಎಲ್ಲಿ೦ದ ಬ೦ದ್ಯವ್ವ, ನನ್ನ ಮಡಿಲಿಗೆ ನಿನ್ನ ತಲೆಯನಾನಿಸಲು ಬಾಲ್ಯಕಾಲದ ನೆನಪು ಮರುಕಳಿಸುತಿದೆ ಎನಗೆ ಏಕಿ೦ಥ ಬಾ೦ಧವ್ಯ ನನಗು ನಿನಗೂ ! ಬಾಲ್ತನದ ಆ ನಿನ್ನ ತೊದಲು ಮಾತನು ನಾನು ಕೇಳುವವಕಾಶವನು ನೀನು ಕೊಡಲೇ ಇಲ್ಲ ಜಳಕ ಮಾಡಿಸಲಿಲ್ಲ, ಲ೦ಗ ತೊಡಿಸಲೆ ಇಲ್ಲ