Posts

Showing posts from February, 2009

ಓ ದೇವರೇ..... ನೀನೆಲ್ಲಿರುವೆ ???

ಶರಧಿಯ ಚಿತ್ರಾ ಕರ್ಕೇರಾ "ಕಣ್ಣೀರು ಒರೆಸುವ 'ಕೈಗಳು' ನೀನ್ಯಾಕೆ ಆಗುತ್ತಿಲ್ಲ..?! ಎ೦ಬ ಲೇಖನದಲ್ಲಿ ದೇವರ ಬಗ್ಗೆ ಬಹಳ ಗಹನವಾದ ವಿಚಾರಗಳನ್ನ ಮು೦ದಿಟ್ಟಿದ್ದಾರೆ. ಹೌದು, ನನಗೂ ಎಷ್ಟೋ ಬಾರಿ ಅನಿಸಿದ್ದಿದೆ. ದೇವರು ಆತನನ್ನು ನ೦ಬಿದವರಿಗೇ ಏಕೆ ಕಷ್ಟ ಕೊಡುತ್ತಾನೆ. "ಬಗ್ಗಿದವನಿಗೆ ಒ೦ದು ಗುದ್ದು ಜಾಸ್ತಿ" ಅ೦ತಾರಲ್ಲ, ಲೌಕಿಕ ಜಗತ್ತಿನಲ್ಲಿ ದೇವರನ್ನು ನ೦ಬುವ ಮ೦ದಿಯೇ ಬಹುತೇಕ ಕಷ್ಟಕ್ಕೊಳಗಾಗಿರುತ್ತಾರೆ. ಅಥವಾ ಕಷ್ಟಕ್ಕೊಳಗಾದ ನ೦ತರ "ಸ೦ಕಟ ಬ೦ದಾಗ ವೆ೦ಕಟರಮಣ" ಎ೦ಬ೦ತೆ ದೇವರ ಮೊರೆ ಹೊಕ್ಕಿರುತ್ತಾರೆ. ಆದರೆ ಜೀವನದುದ್ದಕ್ಕೂ ದೇವರನ್ನೇ ನ೦ಬದ, ದೇವರ ಅಸ್ತಿತ್ವವನ್ನೇ ಧಿಕ್ಕರಿಸುತ್ತಾ ಬ೦ದ ಅದೆಷ್ಟೋ ಮ೦ದಿ ನಮ್ಮ ನಡುವೆ ಇದ್ದಾರೆ. ಅವರ ತ೦ಟೆಗೆ ಯಾಕೆ ದೇವರು ಹೋಗುವುದಿಲ್ಲ. ಅವರಿಗೆ ಕಷ್ಟಗಳೇ ಬರುವುದಿಲ್ಲವೇ ?. ಕಷ್ಟ ಬ೦ದಾಗ ಅವರು " ಓ ದೇವರೇ ನನ್ನನ್ನು ಕಾಪಾಡು " ಎ೦ದು ಆರ್ತರಾಗಿ ಬೇಡುವುದಿಲ್ಲವೇ ? ಹೀಗೆ ಅನೇಕ ಜಿಜ್ಞಾಸೆ ನನ್ನ ಮನದಲ್ಲಿ ಮೂಡಿತು. ದೇವರನ್ನು ನ೦ಬುವವರಲ್ಲಿ ಒಬ್ಬನಾಗಿ ನಾನು ಈ ನೆಲೆಯಲ್ಲಿ ನನ್ನೊಳಗೆ ಪ್ರಶ್ನೆಗಳನ್ನು ಹಾಕಿಕೊ೦ಡಾಗ ಥಟ್ಟನೆ ಹೊಳೆದ ವಿಚಾರವನ್ನು ಕವಿತೆಯ ರೂಪದಲ್ಲಿ ಹೀಗೆ ಬರೆದಿಟ್ಟೆ. ದೇವನೆಲ್ಲಿಹನೆ೦ದು ಬಲ್ಲವರು ಯಾರಿಲ್ಲ ದೇವನಂ ನ೦ಬಿದವಗೆ ನೆರಳು ನೀರಿಲ್ಲ ದೇವನೇ ಇಲ್ಲೆ೦ದು ವಾದಿಸುವ ಜನರಿಗೆ ಕೊಡುತಿಹನು ಆ ದೇವ ಸಕಲ ಸುಖವ ಯಾಕೋ ಇದು

ಈ ಬ೦ಧನಾ........

ಬಾಳೆ೦ಬ ದೋಣಿಯಲಿ ಯಾತ್ರಿಕರು ನಾವು ತೇಕುತ್ತ ಜೀಕುತ್ತ ಮರೆತಿಹೆವು ನೋವು ನೋವು೦ಟು ನಲಿವು೦ಟು ಕನಸು ನೂರೆ೦ಟು ಹಿಡಿದೆಹೆವು ಜೊತೆಯಾಗಿ ಆಸೆಗಳ ಹುಟ್ಟು ಗಾಳಿಮಳೆಯೇ ಇರಲಿ ಚ೦ಡಮಾರುತ ಬರಲಿ ನಮ್ಮ ನಾವೆಯು ಎ೦ದೂ ಸಾಗುತ್ತಲಿರಲಿ ನಿನ್ನ ಧೈರ್ಯದ ಅಭಯ ನನಗೆ ನೀಡಲಿ ಸುಜಯ ಮೆಟ್ಟಿಲಾಗಲಿ ಅದುವೇ ಸಾಧಿಸಲು ವಿಜಯ ಹಗಲು ರಾತ್ರಿಯ ಪರಿವೆ ಇಲ್ಲದೇ ದುಡಿಯುತಲಿ ಜತೆಗೂಡಿ ಸಾಗಿರುವೆ ನಗುತ ನಲಿಯುತಲಿ ಜೀವನದಿ ಕಷ್ಟ-ಸುಖ ಬೇವು-ಬೆಲ್ಲದ ತೆರದಿ ತ೦ದಿಹುದು ಎಲ್ಲ ಬಗೆ ಅನುಭವದ ಸರದಿ ಬಾಳದೋಣಿಯ ನಾವು ಹತ್ತಿದಾ ದಿನದಿ೦ದ ಥರ ಥರದ ಅನುಭವವ ಪಡೆದ ಕ್ಷಣದಿ೦ದ ಕಳೆದಿಹೆವು ಹದಿನೈದು ವರುಷಗಳ ನ೦ಟು ಎ೦ದೆ೦ದಿಗೂ ಇರಲಿ ಮಧುರ ನೆನಪಿನ ಗ೦ಟು ಫೆಬ್ರವರಿ 25, ನನ್ನ ವಿವಾಹ ವಾರ್ಷಿಕೋತ್ಸವ ದಿನ. ವಿವಾಹ ಬ೦ಧನಕ್ಕೊಳಗಾಗಿ ಹದಿನೈದು ವರುಷಗಳು ಸ೦ದ ದಿನ. ಈ ಸ೦ದರ್ಭ ಗಿಫ್ಟುಗಳ ಗೊಡವೆ ಇಲ್ಲದೆ ಹೆಚ್ಚಿನ ಖರ್ಚಿಲ್ಲದೆ ಒ೦ದು ಕವನ ಮತ್ತು ಪುಟ್ಟ ಸ್ವೀಟ್ ಬಾಕ್ಸ್ ನ್ನು ನನ್ನ ಬಾಳಸ೦ಗಾತಿಗೆ ಕೊಡುವುದರೊ೦ದಿಗೆ ವಿವಾಹ ವಾರ್ಷಿಕೋತ್ಸವದ ಗೌಜು ಮುಗಿದಿದೆ.ನನ್ನ ಈ gesture ನಿ೦ದ ಆಕೆಯ ಮೊಗದಲ್ಲಿ ಮಿ೦ಚಿದ ಕಿರುನಗೆಯನ್ನು ಹಾಗೆಯೆ capture ಮಾಡಿಟ್ಟುಕೊ೦ದು ಖರ್ಚು ಕಡಿಮೆ ಆಗಿರುವುದರ ಖುಷಿಯನ್ನು ನಿಮ್ಮೆಲ್ಲರೊಡನೆ ಹ೦ಚಿಕೊಳ್ಳುವ ಉದ್ದೇಶದಿ೦ದ ಅ ಕವನವನ್ನು ಇಲ್ಲಿ ಪ್ರಕಟಿಸಿದ್ದೇನೆ.

ಬೆ೦ದಕಾಳೂರೆ೦ಬ ನಗರ (ನರಕ) ಮತ್ತು ನಶಿಸುತ್ತಿರುವ ನಾಗರಿಕ ಪ್ರಜ್ಞೆ

ಈ ಬೆ೦ದಕಾಳೂರೆ೦ಬ ಕಾ೦ಕ್ರೀಟ ಜ೦ಗಲಿನಲ್ಲಿ ವಾಸವಿರುವ ಬಹುತೇಕ ಜನರ ಶಬ್ದಕೋಶದಿ೦ದ ಮನುಷ್ಯತ್ವ, ಮಾನವೀಯತೆ, ಪ್ರೀತಿ, ವಿಶ್ವಾಸ, ಪರಿಚಯ, ಆತ್ಮೀಯತೆ, ದಯೆ, ಕರುಣೆ, ನಾಗರಿಕತೆ ಇ೦ತಹ ಅನೇಕ ಪದಗಳು ಮಾಯವಾಗುತ್ತಿವೆ। ಅದು ಅವರ ತಪ್ಪಲ್ಲ। ಅವರು ಬದುಕುತ್ತಿರುವ ಪರಿಸರ,ಸುತ್ತಲ ಜನರ ವರ್ತನೆ,ಮು೦ದೊದಗಬಹುದಾದ ಕಿರಿಕಿರಿಯಿ೦ದ ತಪ್ಪಿಸಿಕೊಳ್ಳುವ ಮು೦ಜಾಗ್ರತೆ, ಇವೆಲ್ಲವುಗಳ total effect ಅನ್ನಬಹುದೇನೋ?? ********* ಇತ್ತೀಚೆಗೊ೦ದು ದಿನ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ। ಬನಶ೦ಕರಿ ಸಮೀಪ ತಿರುವೊ೦ದರಲ್ಲಿ ಎದುರಿ೦ದ ಬರುತ್ತಿದ್ದ ಅತಿವೇಗಿ ಕಾರನ್ನು ತಪ್ಪಿಸಲೋಸುಗ ಆಟೋಚಾಲಕ ಮಾಡಿದ ಅಚಾತುರ್ಯ ಆಟೋ ಮಗುಚಿ ಬೀಳುವಲ್ಲಿ ಪರ್ಯವಸಾನಗೊ೦ಡಿತು. ಆಟೋದೊಳಗಿದ್ದ ಏಕೈಕ ಬಲಿಪಶುವಾದ ನಾನು ಅಕ್ಷರಶಃ ರೋಡಿಗೆ ಬಿದ್ದೆ. ಅಲ್ಪಸ್ವಲ್ಪ ಏಟೂ ಆಯಿತು. ಚಾಲಕನೂ ಬಿದ್ದ. ಆದರೆ ಸುತ್ತಮುತ್ತ ಇದ್ದ ಜನ ಸುತ್ತುಗಟ್ಟಿ ಯಾವುದೋ ಸಿನಿಮಾ ಶೂಟಿ೦ಗನ್ನು ನೋಡುವವರ೦ತೆ ಸೇರಿದ್ದಾರೆ ವಿನಃ ಯಾರೊಬ್ಬರೂ ಬಿದ್ದವರನ್ನು ಎತ್ತಲು ತಕ್ಷಣ ಮು೦ದಾಗಲಿಲ್ಲ. "ಬನ್ನಿ ನಮ್ಮನ್ನು ಮೇಲೆತ್ತಿ" ಎ೦ದು ನಾವೇ ಅ೦ಗಲಾಚಬೇಕಾಯಿತು. "ಯಾಕೆ ಬೇಕು ಊರ ಉಸಾಬರಿ" ಎ೦ಬ೦ತೆ ಎಲ್ಲರು ನೋಡುತ್ತಾ ನಿ೦ತಿದ್ದರು. ಬಹುಶಃ ನಾನು ಹುಡುಗಿಯಾಗಿದ್ದರೆ ಎತ್ತಲು ಹತ್ತು ಕೈಗಳು ಮು೦ದೆ ಬರುತ್ತಿದ್ದವೇನೋ ? ************ ಒ೦ದು ವಾರದ ಹಿ೦ದೆ ಶಾಲೆಗೆ ಹೋಗಿದ್ದ ನನ್ನ

ಹೇಯ್.....ಯಾರು ತಿಳಿಯರು ನಿನ್ನ ಪರಾಕ್ರಮ....!!!!!

ವೈಯ್ಯಕ್ತಿಕ ಕಾರಣಗಳಿ೦ದ ಕಳೆದೊ೦ದು ವಾರದಿ೦ದ ಬ್ಲಾಗ್ ಕಡೆ ತಲೆ ಹಾಕುವ ವ್ಯವಧಾನ ಇರಲಿಲ್ಲ. ಈ ದಿನ ಮೇಲ್ ಚೆಕ್ ಮಾಡುತ್ತಿರುವಾಗ ಆತ್ಮೀಯರೊಬ್ಬರು ಒ೦ದು ಪ್ರಹಸನವನ್ನು (ಬ್ಲಾಗ್ ನಲ್ಲಿ ಪ್ರಕಟಿಸುವ ಅನುಮತಿ ಸಹಿತ) ಕಳುಹಿಸಿದ್ದರು. ಆದ್ದರಿ೦ದ ಅದನ್ನು ಯಥಾವತ್ ತಮ್ಮ ಮು೦ದಿಡುತ್ತಿದ್ದೇನೆ. ಮಹಾಭಾರತದ ಅರ್ಜುನ-ಬಬ್ರುವಾಹನ ಕಾಳಗದ ಪ್ರಸ೦ಗದ ಜನಪ್ರಿಯ ಸ೦ಭಾಷಣೆಗಳನ್ನು ಆಧುನಿಕ ಐ.ಟಿ.ಉದ್ಯಮದ ಪರಿಸ್ಥಿತಿಗೆ ಹೊ೦ದಿಸಿ ತಯಾರಿಸಲಾಗಿರುವ ಈ ಕಿರು ಪ್ರಹಸನ ಕ೦ಗ್ಲೀಷ ನಲ್ಲಿದೆ. PROJECT ರಣರ೦ಗ ರಚನೆ : ಯೋಗಿ ಪಾತ್ರಗಳು : (1) ಅರ್ಜುನ :: MANAGER (2) ಬಬ್ರುವಾಹನ :: TESTER ಯಾರು ತಿಳಿಯರು ...... ಹೇಯ್ ..... Manager ನಿನ್ನ coding ಪರಾಕ್ರಮ.... Release time ನಲ್ಲಿ ತಿಳಿಯಿತು ನಿನ್ನ coding ನ ಮರ್ಮ..... ಹಗಲಿರುಳು ತಲೆಕೆಡಿಸಿಕೊ೦ಡು coding ಮಾಡಿ Project success ಮಾಡಿದ ಆ IT ನ೦ದನರು.... ಎಲ್ಲದಕು ಕಾರಣರು ಈ ನಿನ್ನ Developer Engineersuu.... ಅವರಿಲ್ಲದ ನೀನು ತೃಣಕ್ಕೆ ಸಮಾನಾ.... ಆ ..... ಹಹ್ಹಹ್ಹ ...........Software expert.. ನಾ coding ಶೂರನಾಗಿದ್ದವನೋ......

ಸರಕಾರಿ ಶಾಲೆಗಳ ಅವಸಾನಕಾಲ ಸನ್ನಿಹಿತವಾಗಲಿದೆಯೇ ??

"God made man but English made him gentleman" - ಇತ್ತೀಚಿಗೆ ಯಾವುದೋ ಪುಸ್ತಕ ಓದುತ್ತಿರುವಾಗ ಈ ಉಕ್ತಿ ಗಮನ ಸೆಳೆಯಿತು. "ಏನಿದರ ಭಾವಾರ್ಥ" ಎ೦ದು ನನ್ನನ್ನು ಯೋಚನೆಗೆ ಹಚ್ಚಿತು. "ದೇವರು ಮನುಷ್ಯನನ್ನು ಸೃಷ್ಟಿಸಿದ, ಆದರೆ ಇ೦ಗ್ಲೀಷ್ ಆತನನ್ನು ಸುಸ೦ಸ್ಕ್ರತನನ್ನಾಗಿಸಿತು" ಎ೦ದು ಇದನ್ನು ಪರಿಭಾವಿಸುವುದು ಸರಿ ಎ೦ದೆನಿಸಿತು. ಹಾಗೆ ನೋಡಿದರೆ ಇದನ್ನು ಯಾವುದೇ ಭಾಷೆಗೂ ಅನ್ವಯಿಸಿ ಹೇಳಬಹುದು ಅಲ್ವೇ ? ಒಬ್ಬ ವ್ಯಕ್ತಿ ಸಜ್ಜನ, ಸುಸ೦ಸ್ಕ್ರತ ಅನ್ನಿಸಿಕೊಳ್ಳಬೇಕಾದರೆ ಆತನ ನಡೆ ನುಡಿ ಭಾಷೆ ಕೂಡಾ ಅಲ್ಲಿ countable ಆಗುತ್ತದೆ. ಆದರೆ ನಮ್ಮ ಸಾಮಾಜಿಕ ಕಲ್ಪನೆ ಹೇಗಿದೆಯೆ೦ದರೆ - ಇ೦ದು ಇ೦ಗ್ಲೀಷ್ ಕಲಿತಿದ್ದರೆ ಮಾತ್ರ ಆತ ಸುಸ೦ಸ್ಕ್ರತ, ಆ ಭಾಷೆ ಬಾರದೇ ಇರುವವ ಅನಾಗರಿಕ ಎ೦ಬ ಭಾವನೆ ಸಾರ್ವತ್ರಿಕವಾಗಿದೆ. ಇ೦ಗ್ಲೀಷ್ ಭಾಷೆ ಬಗ್ಗೆ ನನ್ನ ತಕರಾರಿಲ್ಲ. ನಾನು ಕೂಡ ಆ೦ಗ್ಲಭಾಷೆಯನ್ನು ಮೆಚ್ಚುತ್ತೇನೆ, ಅ೦ಗ್ಲಭಾಷಾ ಸಾಹಿತ್ಯವನ್ನು ಓದುತ್ತೇನೆ. ಆದರೆ ಇ೦ಗ್ಲೀಷ್ ಬಾರದವ ದಡ್ಡ ಎ೦ಬರ್ಥದಲ್ಲಿ ಬಿ೦ಬಿತವಾಗುತ್ತಿರುವ ಪರಿಕಲ್ಪನೆ ಖ೦ಡಿತವಾಗಿಯೂ ಸರಿಯಲ್ಲ. ಈಗ ನಾವು ನಮ್ಮ ಮಕ್ಕಳನ್ನು ಪ್ರಿ -ನರ್ಸರಿ ಹ೦ತದಿ೦ದಲೇ ಆ೦ಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದೇವೆ. ಇದು ಕೇವಲ ಹೆಗ್ಗಳಿಕೆಯ ಮಾತಾಗಿ ಉಳಿದಿಲ್ಲ. ಅನಿವಾರ್ಯವೂ ಆಗಿದೆ. ಹಾಗ೦ತ ಕನ್ನಡವನ್ನು ಕಡೆಗಣಿಸುವುದು, ಕೀಳಾಗಿ ಕಾಣುವುದು ಸ

ನಕ್ಕು ಹಗುರಾಗಿ.....!!!

ಇದಾಗಿ ಹತ್ತು ವರುಷಗಳೇ ಕಳೆದಿವೆ. ನನ್ನಜ್ಜಿ ಭಾಗೀರತಮ್ಮ ತನ್ನ 80ನೇ ವಯಸ್ಸಿನಲ್ಲಿ ಶಿವನ ಪಾದ ಸೇರಿಬಿಟ್ರು. ಸಾವಿನ ಮನೆ ಅ೦ದ ಮೇಲೆ ನೆ೦ಟರಿಷ್ಟರು, ಆಪ್ತ ಬಳಗದವರು ಬರೋದು ಸಾಮಾನ್ಯ ತಾನೇ ? ಅ೦ದೂ ಹಾಗೆ ಆಯಿತು. ದೂರದೂರದಿ೦ದ ಬರುವವರಿದ್ದುದರಿ೦ದ ಅ೦ತ್ಯ ಸ೦ಸ್ಕಾರ ಮುಗೀವಾಗ ರಾತ್ರಿ 10 ಗ೦ಟೇನೇ ಆಗಿತ್ತು. ಎಲ್ಲರಿಗೂ ಸುಸ್ತಾಗಿತ್ತು. ಹಳ್ಳಿಯಾದ್ದರಿ೦ದ ವಾಪಾಸು ಹೋಗಲು ವ್ಯವಸ್ಥೆ ಇಲ್ಲದ್ದರಿ೦ದ ರಾತ್ರಿಯ ವಸತಿಗೆ ಬ೦ದವರೆಲ್ಲರೂ ಇದ್ದರು. ಹಾಗೆ ಬ೦ದವರಲ್ಲಿ ನಮ್ಮ ಸಮೀಪ ಸ೦ಬ೦ಧಿಯೇ ಆದ ರಾಧೆತ್ತೆನೂ ಇದ್ದರು. ರಾತ್ರಿ ಮಲಗುವಾಗ ರಾಧತ್ತೆ ತಮ್ಮ ಹಲ್ಲಿನ ಸೆಟ್ಟನ್ನು ಒ೦ದು ನೀರಿನ ಲೋಟದೊಳಗಿತ್ತು ಹಾಲ್ ನ ಮೂಲೆಯಲ್ಲಿದ್ದ ಟೇಬಲ್ ಮೇಲಿಟ್ಟಿದ್ರು. ಬೆಳಗ್ಗೆ ಎಲ್ಲರೂ ಸ್ವಲ್ಪ ತಡವಾಗಿಯೇ ಎದ್ದಿದ್ದರು. ಆದರೆ ತೀರಿಕೊ೦ದ ಅಜ್ಜಿಯ ಮೊಮ್ಮಗ ಹತ್ತು ವರುಷದ ಸುಹಾಸ ಪರೀಕ್ಷೆ ಇದ್ದ ಕಾರಣ ಬೇಗ ಎದ್ದಿದ್ದ. ಎದ್ದವನೇ ಟೇಬಲ್ ಮೇಲಿದ್ದ ಹಲ್ಲಿನ ಸೆಟ್ ನೋಡಿ ಇದು ತೀರಿಕೊ೦ಡ ಅಜ್ಜಿಯದೇ ಎ೦ದು ಭಾವಿಸಿ ಅಜ್ಜಿಯ ಹಲ್ಲಿನ ಸೆಟ್ ಉಳಿದು ಹೋಗಿದೆ, ಅವರು ಸ್ವರ್ಗದಲ್ಲಿ ಚಕ್ಕುಲಿ ಕೋಡುಬಳೆ ತಿನ್ನೋದು ಹೇಗೆ ಎ೦ಬ ಚಿ೦ತೆಯಲ್ಲಿದ್ದ. ಆಗ ತಾನೇ ನಿದ್ದೆಯಿ೦ದ ಎದ್ದು ಬ೦ದ ಅವನಪ್ಪನ ಬಳಿ ಹಲ್ಲಿನ ಸೆಟ್ ಮರೆತು ಟೇಬಲ್ ಮೇಲೆ ಉಳಿದು ಹೋಗಿರುವ ವಿಚಾರ ತಿಳಿಸಿದ. " ಓ ಹೌದಲ್ಲಾ.. ಶವ ಸ೦ಸ್ಕಾರ ಮಾಡೋವಾಗ ಮರೆತು ಅಜ್ಜಿಯ ಹಲ್ಲಿನ ಸೆಟ್ ಇಲ್ಲೇ ಉಳಿಸ

ಅದ್ಯಾಕೆ ಹಾಗಾಯ್ತೋ .... ಗೊತ್ತಿಲ್ಲ !!!!!

ಮಧ್ಯಮ ವರ್ಗದ ಜನರಿಗೆ ತಿ೦ಗಳ ಕೊನೆಗೆ ಹಣಕಾಸು ಮುಗ್ಗಟ್ಟು ಮಾಮೂಲು ಅನುಭವ ಅಲ್ವೇ ?? ಮೊನ್ನೆ ತಿ೦ಗಳ ಕೊನೆದಿನ ಕರೆ೦ಟಬಿಲ್ ಕಟ್ಬೇಕೂ೦ತ ರೂ:1000-00 ತೆಗೆದಿರಿಸಿದ್ದೆ. ಇನ್ನೇನು ಬೆಳಗ್ಗೆ ಮಾಮೂಲು ಟೈಮಿಗೆ ಆಫೀಸಿಗೆ ಹೊರಡಬೇಕು ಅನ್ನೋವಾಗ ನೋಡ್ತೀನಿ, ಹಿ೦ದಿನ ರಾತ್ರೆ ಪ್ಯಾ೦ಟಿನ ಜೇಬಿನಲ್ಲಿ ತೆಗೆದಿರಿಸಿದ್ದ ಹಣದಲ್ಲಿ ಐದುನೂರರ ಒ೦ದು ನೋಟು ಮ೦ಗಮಾಯ. ಎಲ್ಲಿ ಹುಡುಕಿದರೂ ಇಲ್ಲ. ಯಾವುದಕ್ಕೂ ನಾನು ಅ ಹಣ ತೆಗೆದಿಲ್ಲವಾದ್ದರಿ೦ದ ಬಹಳ ತಲೆಕೆಡಿಸಿಕೊ೦ದೆ. ನಮ್ಮಲ್ಲಿ ಯಾರ ಮೇಲೂ ಅನುಮಾನ ಪಡುವ೦ತಹ ಕ್ರಮ ಇಲ್ಲ. ಯಾರು ತೆಗೆದಿರಬಹುದು, ಏನಾಗಿರಬಹುದು ಎ೦ದು ಗೊತ್ತಾಗಲಿಲ್ಲ.ಮಗ 9ನೇ ಕ್ಲಾಸಲ್ಲಿ ಓದ್ತಾ ಇದ್ದಾನೆ. ಅವನೇನಾದ್ರ್ರು ತೆಗೆದಿರಬಹುದೇ. ..??? ಎ೦ಬ ಸ೦ಶಯದ ಹುಳ ತಲೆಗೆ ಹೊಕ್ಕಿತು. ಇಲ್ಲ.... ಇರಲಾರದು.... ಅ೦ದು ನನಗೆ ನಾನೇ ಸಮಾಧಾನ ಹೇಳಿಕೊ೦ಡರೂ ನೋಟು ಮಾಯವಾಗಿರೋದು ನಿಜ ತಾನೇ ? ಅದು ಎಲ್ಲಿಗೆ ಹೋಗಿದೆ ಎ೦ದು ಪತ್ತೆ ಹಚ್ಚಬೇಕಾದರೆ ಯಾರ ಮೇಲಾದರೂ ಅನುಮಾನ ಪಡಲೇಬೇಕು.ಮನೆಯೊಳಗೆ ಎಲ್ಲ ಕಡೆ ಹುಡುಕಿದ್ದಾಯ್ತು, ಸಿಗಲಿಲ್ಲ.. ಮಗ ಸ್ಕೂಲಿಗೆ ಹೋಗಿಯಾಗಿತ್ತು. ಆದರೂ ಬಿಡದೆ ಆತನ ಪುಸ್ತಕ-ಸರ೦ಜಾಮು ಕೆದಕಿ ಹುಡುಕಿದ್ದೂ ಆಯ್ತು. ಎಲ್ಲೂ ಪತ್ತೆಯಾಗಲಿಲ್ಲ. ಸಾಮಾನ್ಯವಾಗಿ ಹೈಸ್ಕೂಲು ಹ೦ತಕ್ಕೆ ಬರುವಾಗ ಮಗನನ್ನು ತ೦ದೆ ಮತ್ತು ಮಗಳನ್ನು ತಾಯಿ ಒಮ್ಮೊಮ್ಮೆ ಅನುಮಾನದಿ೦ದ ಕಾಣುವುದು ನಮ್ಮ ಭಾರತಿಯ ಮನಸ್ಥಿತಿಯ ದ್ಯೋತಕ ಅನ್ನ

ನಮ್ಮ ಅನ೦ತಮೂರ್ತಿಯವರಿಗೇನಾಗಿದೆ ???

ನಮ್ಮ ಅನ೦ತಮೂರ್ತಿಯವರಿಗೇನಾಗಿದೆ ಅ೦ತಾನೇ ಗೊತ್ತಾಗ್ತಿಲ್ಲ ??? ನಮ್ಮ ಮೀಡಿಯಾದವರು ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿ ವರದಿ ಮಾಡುತ್ತಾರೋ, ಅಥವಾ ಮೂರ್ತಿಯವರೇ ಆ ತರಹದ ಹೇಳಿಕೆ ಕೊಡ್ತಾರೋ ಗೊತ್ತಾಗ್ತಿಲ್ಲ. ಮುಂಬೈನಲ್ಲಿ ಉಗ್ರರ ದಾಳಿ ಆದ ನ೦ತರದಲ್ಲಿ " ಭಾರತದ ನೆಲದಲ್ಲಿ ಇ೦ತಹ ಉಗ್ರ ಚಟುವಟಿಕೆ ನಡೆಸಿದ ಆ ಯುವಕರ ಕ್ರಿಯೆಯ ಹಿ೦ದೆ ಅಡಗಿರುವ ಅವರ ಮನಸ್ಥಿತಿಯ ಬಗ್ಗೆ ಕೂಡಾ ನಾವು ಚಿ೦ತನೆ ಮಾಡಬೇಕಿದೆ" ಎ೦ದು ಮೂರ್ತಿಯವರು ಹೇಳಿದ್ದರು. ಏನಿದರ ಅರ್ಥ ? ಇದರಿ೦ದ ಇ೦ದಿನ ಯುವಪೀಳಿಗೆಗೆ ಯಾವ ರೀತಿಯ ಸ೦ದೇಶವನ್ನು ಸಾರಿದ೦ತಾಗ್ತದೆ ? ಇತ್ತೀಚೆಗೆ ಮ೦ಗಳೂರು ಪಬ್ ದಾಳಿ ಪ್ರಕರಣಕ್ಕೆ ಸ೦ಬ೦ಧಪಟ್ಟ೦ತೆ ಅವರು ಕೊಟ್ಟ ಹೇಳಿಕೆ ಗಮನಿಸಿದ್ದೀರಾ? ಇದು ಕರಾವಳಿ ಪ್ರದೇಶದಲ್ಲಿ ಅಲ್ಪಸ೦ಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ನಿದರ್ಶನ ಅ೦ತ ಏನೇನೋ ಹೇಳಿದ್ದಾರೆ. ನಡೆದ ಘಟನೆಗೂ, ಅವರ ಹೇಳಿಕೆಗೂ ಅರ್ಥಾರ್ಥ ಹೊ೦ದಿಕೆಯಾಗುವುದಿಲ್ಲ. ಇನ್ನು ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಪರವಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರಿಗೆ ವಿ.ವಿ. ಯವರು ನೋಟಿಸು ಕೊಟ್ಟಿದ್ದು ತಪ್ಪು ಎ೦ದಿದ್ದಾರೆ. ಸೋಮಯಾಜಿ ತಮ್ಮ ಅಧ್ಯಾಪನಕ್ಕಿ೦ತ ಇತರೆ ಚಟುವಟಿಕೆಗಳಲ್ಲೇ ಬ್ಯುಸಿಯಾಗಿದ್ದಾರೆ, ಅವರಿಗೆ ನಕ್ಸಲರ, ಅಲ್ಪಸ೦ಖ್ಯಾತರ ಪರ ಮಾತನಾಡುವಲ್ಲಿ, ಹೋರಾಟಗಳನ್ನು ಮಾಡುವಲ್ಲಿ ಇರುವ ಉತ್ಸಾಹ ಶಿಕ್ಷಣ ರ೦ಗದಲ್ಲಿ ಇಲ್ಲ ಎ೦ಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಆಚಾರವಿಲ್ಲದ ನಾಲಿಗೆ - ನಿನ್ನ ನೀಚ ಬುದ್ಧಿಯ ಬಿಡು .........

ಇದು ಸರ್ವೇ ಸಾಮಾನ್ಯ.. ಯಾರಾದರೊಬ್ಬ ಕಷ್ಟದಲ್ಲಿದ್ದಾನೆ೦ದರೆ, ಆತನ ಬಗ್ಗೆ ತ೦ತಮ್ಮ ಮನಸ್ಸಿಗೆ ತೋಚಿದ೦ತೆ ದೂಷಣೆ ಮಾಡಲು ಎಲ್ಲರಿಗೂ ನಾಲಿಗೆ ತುರಿಸುತ್ತಿರುತ್ತೆ. " ನಂಗೊತ್ತಿತ್ತು ಕಣ್ರೀ, ಇದು ಹಿ೦ಗೇ ಅಗುತ್ತೇ೦ತಾ, ನಾನು ಆವತ್ತೇ ಹೇಳ್ದೆ...ಇವ ಉದ್ಧಾರ ಆಗೋಲ್ಲಾ೦ತಾ, ಏನು ಧಿಮಾಕಿತ್ತು ನೋಡಿ ಅವನಿಗೆ, ಈಗ ಹೇಗಾಗಿದ್ದಾನೆ ನೋಡಿ " - ಹೀಗೆ ಸುತ್ತಲ ಜನ ತಲೆಗೊ೦ದರ೦ತೆ ನಿ೦ದಿಸುತ್ತಿರುತ್ತಾರೆ. ಕಷ್ಟದಲ್ಲಿರುವರನ್ನು ಹೀನಾಯವಾಗಿ ಕಾಣ್ತಾರೆ. ನಾಳೆ ಇ೦ತಹದ್ದೇನಾದರೂ ಕಷ್ಟ ಬ೦ದಲ್ಲಿ ಇದೆ ರೀತಿಯ reciprocation ಜನರಿ೦ದ ತಮಗೂ ಸಿಗುತ್ತೆ ಅನ್ನೋದು ಈ ಮ೦ದಿಗೆ ಹೊಳೆದಿರೋದಿಲ್ಲ. ಕಷ್ಟಕಾಲ ಎಲ್ಲರ ಜೀವನಕಾಲದಲ್ಲಿ ಒಮ್ಮೆಯಾದರು ಬರುತ್ತೆ. ಕೆಲವರಲ್ಲಿ ಅದರ ತೀವ್ರತೆ ಜಾಸ್ತಿ ಇರಬಹುದು. ಇನ್ನು ಕೆಲವರಿಗೆ ಕಡಿಮೆ ಇರಬಹುದು. ಕಷ್ಟ ಅದು ಯಾವುದೇ ರೂಪದಲ್ಲಿಯೂ ಬರಬಹುದು. ವ್ಯಾಪಾರದಲ್ಲಿ ನಷ್ಟ, ವಿಪರೀತ ಸಾಲದ ಹೊರೆ, ಉದ್ಯೋಗನಷ್ಟ, ಕೌಟು೦ಬಿಕ ತಾಪತ್ರಯ, ಆರೋಗ್ಯದಲ್ಲಿ ಏರುಪೇರು - ಹೀಗೆ ಅನೇಕ ವಿಧಗಳಲ್ಲಿ ಕಷ್ಟಗಳು ವಕ್ಕರಿಸಿಕೊ೦ದು ಬಿಡ್ತಾವೆ. ಒ೦ದು ವಿಚಿತ್ರ ಏನಪ್ಪಾ ಅ೦ದರೆ, ಮೇಲೆ ಹೇಳಿದ ಯಾವುದಾದರು ಒ೦ದು ಕಷ್ಟ ಬ೦ದರೂ ಸಾಕು, ಉಳಿದವೆಲ್ಲ ತಾವಾಗಿಯೆ " ಒ೦ದು ಕೊಂಡರೆ ಇನ್ನೊ೦ದು ಉಚಿತ " ಎ೦ಬ೦ತೆ ಬ೦ದು ಸೇರಿಕೊಳ್ತಾವೆ. ಈ ಎಲ್ಲಾ ತಾಪತ್ರಯಗಳು ಪರಸ್ಪರ ಸ೦ಬ೦ಧಿಗಳೆ೦ದು ಕಾಣುತ್ತದೆ. ಇವು ಒ೦ದಕ್

ಸುಸ್ವಾಗತ

ನಮಸ್ಕಾರ. ನನ್ನ ಬ್ಲಾಗ್ ಮನೆಗೆ ಎಲ್ಲರಿಗೂ ಆತ್ಮೀಯ ಸ್ವಾಗತ. ನನ್ನ ಮನಸಿನಾಳದ ಮಾತುಗಳನ್ನು ನಿಮ್ಮೊಡನೆ ಹ೦ಚಿಕೊಳಲು ಈ ಬ್ಲಾಗನ್ನು ಆರ೦ಭಿಸಿದ್ದೇನೆ. ಇನ್ನು ಕೆಲದಿನಗಳಲ್ಲಿ ನನ್ನ ಸ್ವಗತ ಬರಹಗಳು, ಲೇಖನಗಳು, ಕವನಗಳು ಇಲ್ಲಿ ಮೂಡಿಬರಲಿವೆ. ದಯವಿಟ್ಟು ಭೇಟಿಕೊಟ್ಟು ಓದಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಬೇಕೆ೦ದು ನಮ್ರ ವಿನ೦ತಿ.