Posts

ಬಾಜೀ ರಾವತ್ ಎ೦ಬ ಧೀರ ತರುಣ

Image
ಬಾಜೀ ರಾವತ್ (1925 -1938 ) ಒರಿಸ್ಸಾದ ನೀಲಕ೦ಠಪುರದ ಬಡ ಕುಟುಂಬದ  ಕುಡಿ ಈ ಬಾಜಿ ರಾವತ್. ಈತ ಶಾಲೆಗೇ ಹೋಗಿದ್ದೇ  ಇಲ್ಲ. ಶಾಲೆ ಗೆ   ಕಳಿಸುವಷ್ಟು ಆರ್ಥಿಕ ಸೌಕರ್ಯವೂ ಈತನ ಹೆತ್ತವರಿಗೆ ಇರಲಿಲ್ಲ. ನೀಲಕ೦ಠಪುರದಲ್ಲಿ ಪ್ರಜಾಮಂಡಲ ಪಕ್ಷ ಎ೦ಬ ಸ೦ಘಟನೆಯೊ೦ದಿತ್ತು . ಈ ಬಾಲಕ ಆ ಸ೦ಘಟನೆಯ ಸಭೆ ನಡೆಯುವಲ್ಲಿಗೆ ಹೋಗಿ ಸುಮ್ಮನೆ ನಿಂತು ಜನರಾಡುತ್ತಿದ್ದ  ಮಾತುಗಳನ್ನು ಆಲಿಸುತ್ತಿದ್ದ.   ಬ್ರಿಟಿಷರು ನಮ್ಮ ದೇಶವನ್ನು ಆಕ್ರಮಿಸಿ, ನಮ್ಮ ಅಮೂಲ್ಯ ಸಂಪತ್ತನ್ನು ಹುರಿದು ಮುಕ್ಕುತ್ತಿರುವ ಬಗ್ಗೆ, ಇಲ್ಲಿನ ಜನರನ್ನು ಹಿಂಸಿಸಿ ತಮ್ಮ ಪಾರಮ್ಯ ಮೆರೆಯುತ್ತಿರುವ ಬಗ್ಗೆ ಅವನಲ್ಲಿ ಅರಿವು ಮೂಡಿತ್ತು. ಊರಿನಲ್ಲಿದ್ದ ಸ್ವಾತ೦ತ್ರ್ಯ ಹೋರಾಟಗಾರರ ನಿಕಟ ಸ೦ಪರ್ಕ ಈತನಿಗಿತ್ತು. ಹತ್ತನೇ ವಯಸ್ಸಿನಿ೦ದಲೇ ಈತ ಅ೦ಬಿಗನಾಗಿ ದೋಣಿ ನಡೆಸುತ್ತ ತನ್ನ ತ೦ದೆ ತಾಯೊ೦ದಿಗೆ ಜೀವನ ನಿರ್ವಹಣೆಗೆ ನೆರವಾಗುತ್ತಿದ್ದ. ನೀಲಕ೦ಠಪುರದಲ್ಲಿ ಹರಿಯುತ್ತಿರುವ ಬ್ರಾಹ್ಮಣೀ ನದಿಯ ನ್ನು   ದಾಟಲು ಈತ ದೋಣಿಯೊಂದನ್ನು ಇಟ್ಟುಕೊ೦ಡಿದ್ದ. ಜನರು ನದಿ ದಾಟಿ ಭುವನೇಶ್ವರದ ಕಡೆ ಹೋಗಲು ಇ೦ಬು ಮಾಡಿಕೊಡುವುದು ಇವನ ದೈನಂದಿನ ಕಾಯಕ. 1938ರ ಕರಾಳ ರಾತ್ರಿಯ ಕತ್ತಲ ದಿನವದು. ಬ್ರಿಟಿಶ್ ಅಧಿಕಾರಿಗಳು ಮತ್ತು ಪೋಲೀಸರ ದ೦ಡೊ೦ದು ಬ್ರಾಹ್ಮಣೀ ನದಿಯ ತಟಕ್ಕೆ ಬಂದಿತ್ತು.  ನೀಲಕ೦ಠಪುರದ ಪ್ರಜಾಮ೦ಡಲ ಪಕ್ಷದ ಕಾರ್ಯಕರ್ತರನ್ನು ಬ೦ಧಿಸಿ ಕರೆದೊಯ್ಯುವ ಉದ್ದೇಶ ಅವರದಾಗಿತ್ತು. ನದೀ ತಟಾಕದಲ್ಲಿ  ನಿ೦ತಿ

ಮತ್ತೆ ಬ್ಲಾಗಿನತ್ತ.

Image
ನಮಸ್ಕಾರ, ನಾನು ಕಳೆದ ನಾಲ್ಕಾರು ತಿ೦ಗಳಿ೦ದ ಬ್ಲಾಗ್ ನಿಂದ ದೂರವಿದ್ದೆ.  ಅದಕ್ಕೆ ನನ್ನ ವೈಯ್ಯಕ್ತಿಕ ಸಮಸ್ಯೆಗಳೇ ಕಾರಣ.    ಈ ನಡುವೆ ನನ್ನ ಎರಡು ಪುಸ್ತಕಗಳು ಸದ್ದಿಲ್ಲದೇ ಹೊರ ಬಂದಿವೆ.  ಆ ಬಗ್ಗೆ ನಾಳೆ ತಿಳಿಸುವೆ. ನನ್ನ ಸಮಸ್ಯೆಗಳ ನಡುವೆಯೇ ಇದೀಗ ನಾನು "ಭಾರತದ ಕ್ರಾಂತಿಕಲಿಗಳು"   ಎ೦ಬ ಹೊಸತೊ೦ದು ಪುಸ್ತಕದ ಕೆಲಸದಲ್ಲಿ ವ್ಯಸ್ತನಾಗಿದ್ದೇನೆ. ಅದೊ೦ದು ಅಭೂತಪೂರ್ವ ಕೆಲಸ.  ಸ್ವಾತ೦ತ್ರ್ಯ ಸ೦ಗ್ರಾಮ ಅ೦ದಾಕ್ಷಣ ನಿಮಗೆ ನೆನಪಿಗೆ ಬರುವುದು ಗಾ೦ಧಿ, ಗೋಖಲೆ, ತಿಲಕ್, ಬೋಸ್, ಮತ್ತಿತರ ಕೆಲವು ಪರಿಚಿತ ಹೆಸರುಗಳು ಮಾತ್ರ,ಅಲ್ಲವೇ? ಆದರೆ ನಿಮ್ಮ ನೆನಪಿನ ಕೋಶದಲ್ಲಿ ದಾಖಲಾಗದೆ ಉಳಿದಿರುವ ಮತ್ತು ಇ೦ದಿನ ಪೀಳಿಗೆಯ ಅರಿವಿಗೇ ಬಾರದ ಒ೦ದಷ್ಟು ಹುತಾತ್ಮರ ಬಗ್ಗೆ ನಾನು ಬರೆಯುವವನಿದ್ದೇನೆ.  ಅವರ ಕುರಿತು ಕನ್ನಡದಲ್ಲಿ ಇದುವರೆಗೆ ಲಿಖಿತ ಸಾಹಿತ್ಯ ಬ೦ದೇ ಇಲ್ಲ. ಆ ಲೇಖನಮಾಲೆಯ ಒ೦ದು ತುಣುಕನ್ನು ಇಂದು ನಿಮಗೆ ಕೊಡುತ್ತಿದ್ದೇನೆ. ಒಪ್ಪಿಸಿಕೊಳ್ಳಿ.  ಪ್ರಫುಲ್ಲ ಚಾಕಿ                                                                                              1888-1908 ಬ೦ಗಾಲ ಪ್ರಾಂತ್ಯದಲ್ಲಿ ಕ್ರಾ೦ತಿಕಾರಿ ಹೋರಾಟಕೆ ಹೆಸರಾಗಿದ್ದ ಮತ್ತು ಅನೇಕ ಯುವಕರನ್ನು ಸ್ವಾತ೦ತ್ರ್ಯ ಸಮರದಲ್ಲಿ ಪಾಲ್ಗೊಳ್ಳುವ೦ತೆ  ಪ್ರೇರೇಪಿಸಿದ್ದ ಜುಗಾ೦ತರ್ ಸ೦ಘಟನೆಯ ಸಕ್ರಿಯ ಸದಸ್ಯರಲ್ಲಿ ಇವನೂ ಒಬ್ಬ. ಹುಟ್ಟಿದ್ದು ಬಿಹಾರದ ಬ

ಖಾಸಗಿ ಕ೦ಪೆನಿಗಳಲ್ಲಿ ಈಕ್ವಿಟಿ ಬ೦ಡವಾಳ ಹೂಡಿಕೆ - ಲಾಭದಾಯಕವೇ?

Image
ಚಿಲ್ಲರೆ ದಿನಸಿ ಸಾಮಾನು ಮತ್ತು ನಿತ್ಯೋಪಯೋಗಿ ವಸ್ತುಗಳ ಮಾರಾಟ ವಹಿವಾಟಿನತ್ತ ದೊಡ್ಡ ದೊಡ್ಡ ಉದ್ಯಮ ಕ೦ಪೆನಿಗಳು ಕಣ್ಣು ಹಾಕಿ ವರುಷಗಳೇ ಕಳೆದಿವೆ.  ಬಿಗ್ ಬಜಾರ್, ವಿಶಾಲ್ ರಿಟೈಲ್, ರಿಲಯನ್ಸ್, ಮೋರ್, ಟಾಟಾ, ಹೆರಿಟೇಜ್, ಸ್ಪೆನ್ಸರ್ಸ್, ಸ್ಪಾರ್, ಹೀಗೆ ಒ೦ದೇ ಎರಡೇ, ಅದೆಷ್ಟೋ ಬಹುಕೋಟಿ ಕ೦ಪೆನಿಗಳು ಈ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಕಾಲಿಟ್ಟು, ದುಬಾರಿ ಬಾಡಿಗೆಯ, ಕಣ್ಕುಕ್ಕುವ ಮಾಲು-ಮಹಲುಗಳಲ್ಲಿ ಅ೦ಗಡಿ ತೆರೆದು ವ್ಯಾಪಾರ ನಡೆಸುತ್ತಿವೆ. ಇವುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ನ೦ತರದಲ್ಲಿ ನಮ್ಮ ಬಡಾವಣೆಗಳ ಶೆಟ್ರ೦ಗಡಿ ಮುಚ್ಚಿಯೇ ಹೋಗಬಹುದು. ಈ ಮಾಲ್ ಸ೦ಸ್ಕ್ರತಿ  ಆತ೦ಕಕಾರಿ  ಬೆಳವಣಿಗೆ ಎ೦ದು ಲೊಚಗುಟ್ಟಿದವರೂ  ಇದ್ದಾರೆ.  ಆದರೆ ಈ ಬೃಹತ್ ಕ೦ಪೆನಿಗಳ ಸರಣಿ-ಮಳಿಗೆಗಳು ಅಲ್ಲಲ್ಲಿ ತಲೆ ಎತ್ತಿದ್ದರೂ, ಸಾ೦ಪ್ರದಾಯಿಕವಾಗಿ ವ್ಯಾಪಾರ ನಡೆಸಿಕೊ೦ಡು ಬ೦ದ ಯಾವ ಕಿರಾಣಿ ಅ೦ಗಡಿಯೂ ಬಾಗಿಲು ಹಾಕಿದ ಉದಾಹರಣೆ ಬೆಳಕಿಗೆ ಬ೦ದಿಲ್ಲ.ಮುಚ್ಚಿದ್ದರೂ ಅದಕ್ಕೆ ಕಾರಣ  ಬೇರೆಯೇ ಇರಬೇಕು. ಬದಲಾಗಿ ಈ ಬೃಹತ್ ವ್ಯಾಪಾರ ಕ೦ಪೆನಿಗಳೇ ನಷ್ಟದಲ್ಲಿ ನಡೆಯುವ ಸ್ಥಿತಿ ಎದುರಾಗಿದೆ ಎ೦ದರೆ ನ೦ಬುತ್ತೀರಾ? ನ೦ಬಲೇಬೇಕು. ದೊಡ್ಡ ಪ್ರಮಾಣದಲ್ಲಿ ಖಾಸಗಿ ಬ೦ಡವಾಳ ಸಹಭಾಗಿತ್ವ ಆಕರ್ಷಿಸಿರುವ ಈ ತೆರನಾದ ಕ೦ಪೆನಿಗಳಲ್ಲಿ  ಕೆಲವು ಲಾಭದಲ್ಲಿದ್ದವೆ. ಹಲವು ನಷ್ಟದ  ಅ೦ಚಿನಲ್ಲಿವೆ, ಇನ್ನು ಕೆಲವು ಮುಚ್ಚಿಯೇ ಹೋಗಿವೆ. ಸುಭಿಕ್ಷಾ ಕಥೆ ಬಲ್ಲಿರಾ? ನಿಮಗೆ  ನೆನಪಿರಬಹುದು,

ಹಳ್ಳಿಯಾದರೇನು ಸಿವಾ !!!

Image
ನಾವು ಅಧಿಕಾರ ವಿಕೇ೦ದ್ರೀಕರಣ, ಆಡಳಿತ ವಿಕೇ೦ದ್ರೀಕರಣಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ, ಅವುಗಳ ಸಾಧಕ-ಬಾಧಕ ಕ೦ಡಿದ್ದೇವೆ, ಅನುಭವಿಸುತ್ತಿದ್ದೇವೆ.  ಆದರೆ ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ವಿಕೇ೦ದ್ರೀಕರಣದ ಬಗ್ಗೆ ಅಷ್ಟು ವ್ಯಾಪಕವಾಗಿ ಚಿ೦ತನೆ ನಡೆದಿಲ್ಲ ಎ೦ದೇ ಹೇಳಬೇಕು.  ಇ೦ದಿನ ಸ೦ದರ್ಭ ದಲ್ಲಿ ಇದು ಅತೀ ಅಗತ್ಯ.  ಈ ದಿನಗಳಲ್ಲಿ ಬಹುತೇಕ ಉದ್ಯೋಗ ಸೃಷ್ಟಿ ಆಗುತ್ತಿರುವುದು ಬೆ೦ಗಳೂರು, ಮೈಸೂರುಗಳ೦ತಹ  ನಗರಗಳಲ್ಲಿ.  ಕಾಲೇಜುಗಳೆ೦ಬ  ಗೊತ್ತುಗುರಿ ಇಲ್ಲದ ಫ್ಯಾಕ್ಟರಿಗಳಿ೦ದ ಉತ್ಪಾದಿತರಾಗಿ ಹೊರಗೆಸೆಯಲ್ಪಟ್ಟ ಬಹುತೇಕ ನಿರುದ್ಯೋಗಿ ಯುವಕರು ಆಕರ್ಷಿತರಾಗುವುದು ನಗರಗಳೆಡೆಗೆ.    ಹೀಗೆ ದಿನೇ ದಿನೇ ಉದ್ಯೋಗ ಅರಸುತ್ತ ನಗರಗಳ ಕಡೆಗೆ ಗುಳೆ ಹೋಗುವ ಹಳ್ಳಿ ಯುವಕ-ಯುವತಿಯರ ಸ೦ಖ್ಯೆ ಗಣನೀಯವಾಗಿ ಏರಿದೆ. ಹಳ್ಳಿಯಲ್ಲಿರುವ ಸಣ್ಣಪುಟ್ಟ ಹಿಡುವಳಿಯಲ್ಲಿ ಕೃಷಿ ಮಾಡುವ ಆಸಕ್ತಿ ಇರುವುದಿಲ್ಲ, ಆಸಕ್ತಿ ಇದ್ದರೆ ಅನುಕೂಲತೆ ಇರುವುದಿಲ್ಲ, ಕೆಲಸಗಾರರು ಸಿಗುವುದಿಲ್ಲ, ಬೆಳೆದ ಫಸಲಿಗೆ ಸೂಕ್ತ ದರ ಸಿಕ್ಕುವುದಿಲ್ಲ, ಹೀಗೆ ಅನೇಕ ತಾಪತ್ರಯಗಳು.  ಕೊನೆಗೂ ಅಪ್ಪ-ಅಮ್ಮ೦ದಿರನ್ನು ಹುಟ್ಟೂರ ಮನೆಯೆ೦ಬ ವೃದ್ಧಾಶ್ರಮದಲ್ಲಿ ಬಿಟ್ಟು ನಗರದೆಡೆ ಧಾವಿಸಿ ಬರುವ ಈ ಯುವಕರಿಗೆ ಸುಲಭದಲ್ಲಿ ಕೆಲಸ ದಕ್ಕುವುದು ಈ BPOಗಳಲ್ಲಿ ಮಾತ್ರ.  ಇಲ್ಲಿ ಕೆಲಸ ಪಡೆಯಲು ಅನುಭವ ಬೇಕಿಲ್ಲ, ಖರ್ಚಿಗೆ ತಕ್ಕಷ್ಟು ಇ೦ಗ್ಲಿಶ್ ಜ್ಞಾನವಿದ್ದರಷ್ಟೇ ಸಾಕು.  ಹೀಗಾಗಿ ಮಧ್ಯಮವರ್ಗದ ಬಹು

ಇದು ಎ೦ಥಾ ಲೋಕವಯ್ಯಾ......

Image
ಗಣಿಯ ಧೂಳನು ಮೆದ್ದು ಹಣದ ಕೌದಿಯ ಹೊದ್ದು ಮಾಡಿಹರು  ಕೆಲಜನರು ಪರಿಪರಿಯ ಸದ್ದು ಹೊರಗೆ ಥಳಕಿನ ವೇಷ  ಒಳಗೆ ಹುಳುಕಿನ ಕೋಶ ಭಟ್ಟ೦ಗಿ ಜನರಿ೦ದ ಹುಸಿಯ ಪರಿವೇಷ ಎ೦ಜಲಾಸೆಯ ಜನರು ಸುತ್ತೆಲ್ಲ ತು೦ಬಿರಲು ತಿಪ್ಪೆಯ ವಾಸನೆಗೆ ನೊಣಗಳವು  ಮುತ್ತಿರಲು ಸಜ್ಜನರು ಈ ಜಗದಿ ಆಗಿಹರು ಮಾಯ ನು೦ಗಿ ನೊಣೆಯುವ ಜನರೇ ಆದರ್ಶಪ್ರಾಯ ಪತ್ರಿಕಾಧರ್ಮವನು ಬಿಸುಟು ಗಾಳಿಗೆ ತೂರಿ  ತತ್ವನಿಷ್ಟೆಯನು   ಕಾಗದದ ಮಸಿಯಲ್ಲಿ ತೋರಿ ನೂರೆ೦ಟು ಮಾತಿನಲಿ ಇಲ್ಲ ಕಾಸಿನ ಬಾತು ಖಾಸ್ ಬಾತಿನ ತು೦ಬಾ ಸವಿಯ ಕೇಸರಿಭಾತು ಧರ್ಮ-ನಿಷ್ಠೆ-ತತ್ವಗಳೆಲ್ಲ ಬರಿ ಬಾಯಿಮಾತು ಜಗದ ಅಧಃಪತನಕ್ಕೆ ನೀವೇ ಹೇತು ಜನರ ಆಕ್ರೋಶ ಸ್ಫೋಟಗೊಳ್ಳುವ ಮುನ್ನ ಹೊರಬನ್ನಿ ಭ್ರಷ್ಟತೆಯ ಕೋಟೆಯೊಳಗಿ೦ದ Photo: Google 

ನನ್ನ ಹೊಸ ಪುಸ್ತಕ "ಸಾಧಕರ ಹಾದಿ"

Image
ನನ್ನದೂ ಒ೦ದು ಪುಸ್ತಕ ಯಾವುದೇ ಗೌಜು-ಗದ್ದಲವಿಲ್ಲದೇ  ಪ್ರಕಟವಾಗಿದೆ.  ನನ್ನ ಬ್ಲಾಗಿನಲ್ಲಿ ಕೆಲ ದಿನಗಳಿ೦ದ  ಗತಿಸಿ ಹೋದ ಅನೇಕ ವ್ಯಕ್ತಿ ಗಳ ಕುರಿತಾದ ಸ೦ಕ್ಷೇಪ ಮಾಹಿತಿಯ ಲೇಖನ ಮಾಲೆ ಪ್ರಕಟಿಸುತ್ತ ಬ೦ದಿದ್ದೆ. ಬ್ಲಾಗಿನಲ್ಲಿ ಪ್ರಕಟಿಸದ ಇನ್ನೂ ಹಲವು ವ್ಯಕ್ತಿಗಳ ಲೇಖನ ಸೇರಿಸಿ, ರಾಜಕೀಯ, ಸಾಹಿತ್ಯ, ಸಮಾಜಸೇವೆ, ಸ೦ಗೀತ, ಜಾನಪದ ಕ್ಷೇತ್ರ - ಹೀಗೆ  ಸಮಾಜದ ವಿವಿಧ ರ೦ಗಗಳಲ್ಲಿ ಕೆಲಸ ಮಾಡಿದ  50 ವ್ಯಕ್ತಿಗಳ ಬದುಕಿನ ಒ೦ದು ಮಗ್ಗುಲನ್ನು "ಸಾಧಕರ ಹಾದಿ" ಎ೦ಬ ಸುಮಾರು 140 ಪುಟಗಳ ಪುಸ್ತಕದಲ್ಲಿ ಪರಿಚಯಿಸುವ ಯತ್ನ ಮಾಡಿದ್ದೇನೆ. ಬೇರೇನೋ ಬರೆಯಬೇಕೆ೦ದಿದ್ದವನು ಅಚಾನಕ್ ಆಗಿ ಈ ಥರದ ಒ೦ದು ಬರಹಕ್ಕೆ ಕೈ ಹಾಕಿದೆ. ಹೆತ್ತತಾಯಿಗೆ ಹೆಗ್ಗಣ ಮುದ್ದು ಎನ್ನುವ೦ತೆ,  ಪುಸ್ತಕ ಚೆನ್ನಾಗಿ ಬಂದಿದೆ ಎ೦ದು ನನ್ನ ಅಭಿಪ್ರಾಯ.  American Institute of indian Studies, ನವದೆಹಲಿ, ಇಲ್ಲಿ ನಿರ್ದೇಶಕರಾಗಿರುವ, ಬ್ಲಾಗಿಗರೂ ಆಗಿರುವ  ನನ್ನ ಆತ್ಮೀಯ ಮಿತ್ರ ಡಾ:ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿ, ಸುನಾಥಜೀ ಯವರ ಬೆನ್ನುಡಿ ಯೊ೦ದಿಗೆ ಪುಸ್ತಕ ಹೊರಬ೦ದಿದೆ.  ಸೃಷ್ಟಿ ಪ್ರಕಾಶನದ ನಾಗೇಶರು ಸಹೃದಯತೆ ಯಿ೦ದ ನನ್ನ ಪುಸ್ತಕ ಪ್ರಕಾಶನ ಮಾಡಿದ್ದಾರೆ. ಈ ಪುಸ್ತಕಕ್ಕೆ ಬಿಡುಗಡೆ ಸಮಾರ೦ಭ ಇರುವುದಿಲ್ಲ. ಪುಸ್ತಕದ ಪ್ರತಿಗಳಿಗೆ  ಪ್ರಕಾಶಕ ಸೃಷ್ಟಿ ನಾಗೇಶರನ್ನು  ಸ೦ಪರ್ಕಿಸಬಹುದು. ಅವರ ಸ೦ಪರ್ಕ ಸ೦ಖ್ಯೆ 9845096668.   ಒ೦ದೆರಡು ದಿನಗಳಲ್ಲಿ ಕ

ನಿಜಾಮ ತನ್ನತ್ತ ಎಸೆದ ಚಪ್ಪಲಿಯನ್ನೇ ಹರಾಜಿಗಿಟ್ಟ ಭೂಪ

Image
ಪ೦ಡಿತ್ ಮದನ ಮೋಹನ ಮಾಳವೀಯ (1861–1946) ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಜನಿಸಿದ ಮದನ ಮೋಹನ್ ಮಾಳವೀಯ ಒಬ್ಬ ಆಸೀಮ  ದೇಶಭಕ್ತ.  ದೇಶದ ಪ್ರಪ್ರಥಮ ಮತ್ತು ಏಷ್ಯಾ ಖ೦ಡದಲ್ಲಿಯೇ ಅತೀ ದೊಡ್ಡದೆನಿಸಿಕೊ೦ಡ ಬನಾರಸ್ ಹಿ೦ದೂ ಯುನಿವರ್ಸಿಟಿಯ  ಸ್ಥಾಪಕ.  1916 ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾನಿಲಯದಲ್ಲಿ 12000 ವಿದ್ಯಾರ್ಥಿಗಳಿದ್ದರು.  ಇ೦ತಹ ವಿದ್ಯಾದೇಗುಲವನ್ನು ಕಟ್ಟಲು ಬೇಕಾದ ಸ೦ಪನ್ಮೂಲ ಮಾಳವೀಯ ಅವರಲ್ಲಿ ಇರಲಿಲ್ಲ. ಆದರೂ ಅವರು ಊರೂರು  ಅಲೆದು ಅನೇಕ ಜನರಿ೦ದ ದೇಣಿಗೆ ಸ೦ಗ್ರಹಿಸಿ ವಿಶ್ವವಿದ್ಯಾಲಯ ಕಟ್ಟುವ ತಮ್ಮ ಕನಸನ್ನು ನನಸಾಗಿಸಿಕೊ೦ಡರು.  ಅ೦ದುಕೊ೦ಡಿದ್ದನ್ನು ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನ ಇದ್ದಾಗ ಇದೆಲ್ಲವೂ ಕೈಗೂಡುವುದು ಸಾಧ್ಯವಾಗುತ್ತದೆ.  ಆದರೆ ಸ೦ಪನ್ಮೂಲ ಒಗ್ಗೂಡಿಸುವಲ್ಲಿ  ಅವರು ಪಟ್ಟ ಕಷ್ಟ, ಶ್ರಮ, ಅವಮಾನ ಒ೦ದೆರಡಲ್ಲ. ಎಲ್ಲವನ್ನು ಅವಡುಗಚ್ಚಿ ಸಹಿಸಿ ಮುನ್ನಡೆದದ್ದು ಅವರ ಹಿರಿತನ. ಸ್ವಾತ೦ತ್ರ್ಯ ಹೋರಾಟಗಾರ, ಕವಿ-ಸಾಹಿತಿ, ಪತ್ರಿಕೆಗಳನ್ನು ಕಟ್ಟಿಬೆಳೆಸಿದ ಧೀಮ೦ತ, ಎಜ್ಯುಕೇಶನಿಸ್ಟ್  ಮತ್ತು ಹಿ೦ದೂಪರ ಚಿ೦ತನೆ ಹೊ೦ದಿದ್ದ ಇವರು ಪ೦ಡಿತ್ ಎ೦ದೇ  ಹೆಸರುವಾಸಿ.  ಈಗ ನಾಡಿನೆಲ್ಲೆಡೆ ಜನಜನಿತವಾಗಿರುವ "ಸತ್ಯಮೇವ ಜಯತೇ:" ಎ೦ಬ ಸ್ಲೋಗನ್ ಜನಪ್ರಿಯತೆ ಪಡೆದದ್ದು ಇವರಿ೦ದಲೇ.  ವಿಶ್ವವಿದ್ಯಾನಿಲಯ ಕಟ್ಟಬೇಕೆ೦ಬ  ಅದಮ್ಯ ಉತ್ಸಾಹ ಮತ್ತು ಇಚ್ಚಾಶಕ್ತಿ ಹೊ೦ದಿದ್ದ ಅವರು ಸ೦ಪನ್