ನಮ್ಮ ನಾಡು ಅದೆಷ್ಟೋ ಮಹಾಮಹಿಮರ ತವರು ಎ೦ಬುದು ನಮಗೇ ಗೊತ್ತಿಲ್ಲ. ತಮ್ಮ ಬಗ್ಗೆ ತಾವೇ ತುತ್ತೂರಿ ಊದಿಕೊಳ್ಳುವ ಮ೦ದಿ ಕೆಲಕಾಲ ಮಾತ್ರ ಪ್ರಚಾರದಲ್ಲಿ ಉಳಿಯುತ್ತಾರೆ. ಅದು ಅಶಾಶ್ವತ. ಆದರೆ ಇನ್ನು ಕೆಲವು ಮಂದಿ ಯಾವುದೇ ಪ್ರಚಾರ ಇಲ್ಲದೆಯೂ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಗಳಿಸಿಕೊಳ್ಳುತ್ತಾರೆ, ಅದು ಅವರ ಮಹಾನತೆ. ನಮ್ಮ ನಾಡು-ನುಡಿಯನ್ನು ಕಟ್ಟುವಲ್ಲಿ ನಿಸ್ಪ್ರಹತೆಯಿ೦ದ ಕೆಲಸ ಮಾಡಿದ ಅದೆಷ್ಟೋ ಮಂದಿಯನ್ನು ನಾವು ಮರೆತಿದ್ದೇವೆ. ಅವರ ನೆನಪು ನಮಗೆ ಸ್ಪೂರ್ತಿಯಾಗಬೇಕು, ಅವರ ಕೃತಿ ನಮಗೆ ಮಾರ್ಗದರ್ಶಿಯಾಗಬೇಕು. ಆದರೆ ಅದಾಗುತ್ತಿಲ್ಲ, ಏಕೆ೦ದರೆ ನಮ್ಮ ಧಾವಂತದ ಬದುಕಿಗೆ ಅದು ಬೇಕಿಲ್ಲ. ಮಹಾ ಮೇಧಾವಿಗಳು, ಪ್ರಖರ ಪಾ೦ಡಿತ್ಯ ಹೊ೦ದಿದ್ದ ಮಹನೀಯರು ಬಾಳಿ ಬದುಕಿದ ನೆಲವಿದು. ಅಂಥವರಲ್ಲಿ ಒಬ್ಬರು ಈ ಶಾಮಾ ಶಾಸ್ತ್ರಿಗಳು.
ಮೈಸೂರಿನ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಒಮ್ಮೆ ಜರ್ಮನಿ ಪ್ರವಾಸದಲ್ಲಿದ್ದರು. ತಮ್ಮ ಪ್ರವಾಸದ ಭಾಗವಾಗಿ ಜರ್ಮನ್ ವಿಶ್ವವಿದ್ಯಾಲಯದ ಉಪಕುಲಪತಿಯವರನ್ನು ಮಹಾರಾಜರು ಭೇಟಿಯಾಗುವುದಿತ್ತು. ಉಪಕುಲಪತಿಯನ್ನು ಭೇಟಿ ಮಾಡಿ ತಮ್ಮ ಪರಿಚಯ ಅರುಹಿದ ಮಹಾರಾಜರಿಗೆ ಅಚ್ಚರಿ ಕಾದಿತ್ತು. Are you from Shama shastry 's Mysore ? ಎ೦ದು ಆ ಜರ್ಮನ್ ಮಹಾಶಯ ಮಹಾರಾಜರನ್ನು ಪ್ರಶ್ನಿಸಿದರ೦ತೆ. ಮಹಾರಾಜರು ಒಮ್ಮೆ ಅವಾಕ್ಕಾದರು. ಹೌದು ಎನ್ನದೆ ಗತ್ಯ೦ತರವಿರಲಿಲ್ಲ. ಆದರೆ ಯಾರು ಈ ಶಾಮಾ ಶಾಸ್ತ್ರಿ? ಎ೦ಬುದು ಮಹಾರಾಜರಿಗೂ ಸರಿಯಾಗಿ ಗೊತ್ತಿರಲಿಲ್ಲವೆನಿಸುತ್ತದೆ. ವಿದೇಶಿ ನೆಲದಲ್ಲಿ "ಮೈಸೂರು" ಎ೦ದಾಕ್ಷಣ ಅಲ್ಲಿನ ರಾಜನ ಹೆಸರು ಅಥವಾ ಯಾವುದಾದರು ಪ್ರೇಕ್ಷಣೀಯ ಸ್ಥಳದ ಹೆಸರು ಉಲ್ಲೇಖಿಸಲ್ಪಡುವುದು ಸಾಮಾನ್ಯ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ವಿದೇಶಿನೆಲದಲ್ಲಿ ಮೈಸೂರಿಗೆ Landmark ಆಗೊದ೦ದ್ರೇನು ಸಾಮಾನ್ಯದ ಮಾತೇ? ಅದೂ 1915 -1920 ರ ಕಾಲಮಾನದಲ್ಲಿ !!
ಹೌದು, ಅವರೊಬ್ಬ ಅಪರೂಪದ ವ್ಯಕ್ತಿ. ರುದ್ರಪಟ್ನ ಶಾಮಾ ಶಾಸ್ತ್ರಿಗಳು ಹುಟ್ಟಿದ್ದು ಅರಕಲಗೂಡು ತಾಲೂಕಿನಲ್ಲಿ. ಸ೦ಸ್ಕ್ರತದ ಮಹಾಮೇಧಾವಿ. ಮೈಸೂರಿನ ಮಹಾರಾಜರು ಸ್ಥಾಪಿಸಿದ್ದ "ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್" ನಲ್ಲಿ ವಾಚನಾಲಯ ಮೇಲ್ವಿಚಾರಕರಾಗಿದ್ದರು. ಈ ಸಂದರ್ಭದಲ್ಲಿ ಗ್ರಂಥಾಲಯದಲ್ಲಿದ್ದ ’ಕೌಟಿಲ್ಯ’ನ ಅರ್ಥಶಾಸ್ತ್ರ ಅವರನ್ನು ಸೆಳೆಯಿತು. ಆಸಕ್ತಿಯಿಂದ ಆ ತಾಳೆಗ್ರಂಥವನ್ನು ಪರಿಶೀಲಿಸಿದರು.ಅದನ್ನು ಪ್ರಕಾಶನ ಮಾಡುವ ಮನಸ್ಸು ಮಾಡಿದರು. ತಂಜಾವೂರಿನ ಪಂಡಿತರೊಬ್ಬರು ಈ ಗ್ರಂಥವನ್ನು ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್ ಗೆ ನೀಡಿದ್ದರು. ಈ ಗ್ರಂಥ ಸಂಸ್ಕೃತದಲ್ಲಿದ್ದರೂ ಲಿಪಿ ಮಾತ್ರ ’ದೇವನಾಗರಿ ’ಯಾಗಿರಲಿಲ್ಲ. ಬದಲಿಗೆ ತಮಿಳು ಲಿಪಿಯನ್ನು ಹೋಲುವ ’ಗ್ರಂಥಲಿಪಿ’ ಯಲ್ಲಿತ್ತು. 1905 ರಿಂದ ಸತತ ನಾಲ್ಕು ವರ್ಷಗಳ ಅವಿರತ ಶ್ರಮದ ಬಳಿಕ 1909ರಲ್ಲಿ ಈ ಗ್ರಂಥವನ್ನು ಶಾಮಾಶಾಸ್ತ್ರಿಗಳು ಸಂಸ್ಕೃತದಲ್ಲಿ ಹೊರತಂದರು. ಈ ಗ್ರಂಥಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಇದುವೇ ಆ ಗ್ರಂಥವನ್ನು ಆಂಗ್ಲಭಾಷೆಯಲ್ಲಿ ಹೊರತರಲು ಶಾಮಾಶಾಸ್ತ್ರಿಗಳಿಗೆ ಪ್ರೇರಣೆಯಾಯಿತು. 1915ರಲ್ಲಿ ಇದರ ಇಂಗ್ಲೀಷ್ ರೂಪಾಂತರವನ್ನು ಅವರು ಹೊರತಂದರು. ಅದು ದೇಶ-ವಿದೇಶಗಳಲ್ಲಿ ಪಸರಿಸಿ ಜಗದ್ವಿಖ್ಯಾತವಾಯಿತು.
ಇ೦ತಹ ಪ೦ಡಿತರನ್ನು ತಮ್ಮ ಸ೦ಸ್ಥಾನದಲ್ಲಿ ತಾವೇ ಗುರುತಿಸಿ ಗೌರವಿಸಲಿಲ್ಲವಲ್ಲ ಎ೦ಬ ಭಾವ ಮಹಾರಾಜರನ್ನು ಕಾಡದೆ ಇರಲಿಲ್ಲ. ವಿದೇಶಯಾತ್ರೆಯಿ೦ದ ಮೈಸೂರಿಗೆ ಮರಳಿದ ಕೂಡಲೇ ಶಾಮಾಶಾಸ್ತ್ರಿ ಗಳನ್ನು ಕರೆಯಿಸಿಕೊ೦ಡು ಪುರಸ್ಕರಿಸಿ ಗೌರವ ನೀಡಿದರ೦ತೆ. "ಮೈಸೂರಿಗೆ ನಾನು ರಾಜ, ನೀವು ಪ್ರಜೆ, ಆದರೆ ಮೈಸೂರಿನಿ೦ದಾಚೆ ನಿಮ್ಮ ಹೆಸರಿನಿ೦ದ ನಾನು ನನ್ನನ್ನು ಗುರುತಿಸಿಕೊಳ್ಳಬೇಕಾಗಿ ಬ೦ತು" ಅ೦ತ ಮಹಾರಾಜರು ಹೇಳಿದಾಗ ಅವರು ಭಾವುಕ ರಾಗಿದ್ದರ೦ತೆ.
ಶಾಮಾಶಾಸ್ತ್ರಿಗಳು 1919ರಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದಿದ್ದರು. 1921ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಗೌರವಕ್ಕೊ ಪಾತ್ರರಾಗಿದ್ದರು.

ಚಿತ್ರ: ಅ೦ತರ್ಜಾಲ