ಅವಳು ಬಾಗಿದ ಬಿಲ್ಲು ಗಟ್ಟಿಯಾಗಿದೆ ದಿಲ್ಲು
ಅವನೆದೆಯ ತೋಟದಲಿ ಹೊಳೆವ ಕಾಮನಬಿಲ್ಲು
ಬಿಟ್ಟ ಬಾಣದ ಚಿತ್ತ ನೆಟ್ಟಿಹುದು ಗುರಿಯತ್ತ
ಬಾಳೆ೦ಬ ಹುತ್ತದಲಿ ಸುಖವು ತಪ್ತ
ಅವನೆದೆಯ ತೋಟದಲಿ ಹೊಳೆವ ಕಾಮನಬಿಲ್ಲು
ಬಿಟ್ಟ ಬಾಣದ ಚಿತ್ತ ನೆಟ್ಟಿಹುದು ಗುರಿಯತ್ತ
ಬಾಳೆ೦ಬ ಹುತ್ತದಲಿ ಸುಖವು ತಪ್ತ
ತಾನು ಮೇಲೆ೦ಬುದನು ಮರೆತುಬಿಡು ಓ ಮಿತ್ರ
ಮೇಲು ಕೀಳೆ೦ಬುದು ಬದಲಾಗುವಾ ಚಿತ್ರ
ಕುಸುಮಕೋಮಲೆ ಅವಳು ನಿನ್ನ ಸೈರಿಸುತಿಹಳು
ಒಲವ ಧಣಿ ನೀನಾಗು ನಿರತ ಹಗಲಿರುಳು
ಬದುಕೊ೦ದು ವ್ಯಾಯಾಮ ಅದಕೆಲ್ಲಿ ಆಯಾಮ
ಬದಲಾಗುವಾ ಕಲೆಯೇ ಜಗದ ನಿಯಮ
ಸಾಗರದ ತಡಿಯದು ಮುಳುಗುಸೂರ್ಯನ ಗುಡಿ
ಈ ಆಸನಕ್ಕೊ೦ದು ಹೆಸರ ಕೊಟ್ಟುಬಿಡಿ
ಚಿತ್ರ:ಅ೦ತರ್ಜಾಲ

9 comments:
ಚೆನ್ನಾಗಿದೆ ಕವನ
ವ್ಯಾಯಮಕ್ಕೊಂದು ಹೆಸರು - ದಾಂಪತ್ಯಕ್ಕೊಂದು ಆಯಾಮ...
paranjape sir fine one another sixer...!!
ಕವಿತೆ ಚೆನ್ನಾಗಿದೆ. "ಉಲ್ಲಾಸನ" ಎಂದು ಹೆಸರಿಡಬಹುದೆ ????
ಚಿತ್ರ ಮತ್ತು ಕಲ್ಪನಾ ವರ್ಣನೆ ತುಂಬಾ ಚನ್ನಾಗಿದೆ... ಅಲ್ಲದೆ ಒಂದು ಚಿತ್ರದ ಮೇಲೆ ಅರ್ಥಗರ್ಬಿತ ಕವನ ಬರೆಯುವ ವಿಶೇಷತೆ ಪರಾಂಜಪೆಯವರ ವರ್ಣನಾ ಲೋಕದ ಮೈಲಿ ಗಲ್ಲು... ಇನ್ನಷ್ಟು ಸಾಲುಗಳ ಮಳೆಸುರಿಯಲಿ...
ಚಿತ್ರ ಮತ್ತು ಕಲ್ಪನಾ ವರ್ಣನೆ ತುಂಬಾ ಚನ್ನಾಗಿದೆ... ಅಲ್ಲದೆ ಒಂದು ಚಿತ್ರದ ಮೇಲೆ ಅರ್ಥಗರ್ಬಿತ ಕವನ ಬರೆಯುವ ವಿಶೇಷತೆ ಪರಾಂಜಪೆಯವರ ವರ್ಣನಾ ಲೋಕದ ಮೈಲಿ ಗಲ್ಲು... ಇನ್ನಷ್ಟು ಸಾಲುಗಳ ಮಳೆಸುರಿಯಲಿ...
ಪರಾಂಜಪೆಯವರೆ,
ಸುಂದರ ಚಿತ್ರ, ಸುಂದರ ಕವನ.
ಸುಂದರಾಸನ ಎಂದು ಕರೆಯಬಹುದೇನೊ?
"ಮೇಲು ಕೀಳೆ೦ಬುದು ಬದಲಾಗುವಾ ಚಿತ್ರ"
ಅಲ್ಲಲ್ಲ.
"ಮೇಲು ಕೆಳಗೆಂಬುದು ಬದಲಾಗುವಾ ಚಿತ್ರ" ಸರಿಯೇನೋ.
:-)
ನೀವು ವ್ಯಾಯಾಮ ಅಂದ ಕೂಡಲೇ, ಎಲ್ಲೋ ಬಾಬ ರಾಮ ದೇವ ಅವರ ಆಶ್ರಮ ಸೇರುತ್ತಿದಿರಿ ಅಂತ ಭಾವಿಸಿದೆ. ಆದರೆ ಕವನ ಓದಿದ ಮೇಲೆ.. ಇಲ್ಲೇ ಸಂಸಾರಿಗಳಾಗಿ ಇದ್ದೀರಿ ಅಂತ ತಿಳಿದು ನೆಮ್ಮದಿ ಆಯಿತು. :) :)
ಕವನ ಚೆನ್ನಾಗಿದೆ. ಮೇಲೆ ಗಾದೆ ತುಂಬಾ ಒಳ್ಳೊಳ್ಳೆ ಹೆಸರು ಬಂದಿದೆ, ಆದುದರಿಂದ ನಾನು ಕವನಕ್ಕೆ ಹೆಸರು ಕೊಡೊ ಸಾಹಸ ಮಾಡೋಲ್ಲ. :)
Post a Comment