ಬದುಕು ಏಕರೇಖಾತ್ಮಕವಲ್ಲ,
ನುಣುಪು ರಸ್ತೆಯೂ ಅಲ್ಲ.
ಮಣ್ಣು ಕಲ್ಲು ಹೆ೦ಟೆಗಳ
ತಗ್ಗು ದಿಣ್ಣೆಗಳ ಏರಿಳಿತವುಳ್ಳ
ಹಲವು ಕವಲುಗಳ, ವಕ್ರ ರೇಖೆಗಳ,
ವರ್ತುಲಗಳ ಸಮಾಗಮ.
ಪಥಿಕನಿಗೆ ವಿಚಿತ್ರ ಅನುಭವ ನೀಡುವ
ನಿಗೂಢ ಪಯಣ
ರಸ್ತೆ ಯಾವುದಾದರೇನಯ್ಯ ?
ಪಯಣದಲ್ಲಿ ಸುಖ ಕಾಣು!
- - - -
ಬದುಕೆ೦ಬ ಬಸ್ಟಾ೦ಡಿನಲ್ಲಿ
ಭರವಸೆಯ ಬೆಳಕ ಹೊತ್ತು
ಕತ್ತಲಾಗುವ ಮುನ್ನ
ಗಮ್ಯ ತಲುಪುವ ಬಸ್ಸಿಗಾಗಿ
ಮಹದಾಸೆಯಲ್ಲಿ ಕಾದು ನಿಂತವನಿಗೆ
ಕೊನೆಗೂ ಸಿಕ್ಕಿದ್ದು
ಬೋರ್ಡಿಲ್ಲದ ಲಡಕಾಸಿ ಬಸ್ಸು.
ಅದು ಗಮ್ಯ ತಲುಪುವ ಹೊತ್ತಿಗೆ
ಬದುಕಿನ ನಡುರಾತ್ರಿ ಕಳೆದು
ಮುಪ್ಪಡರುವ ಹೊತ್ತಾಗಿತ್ತು.
ಬಸ್ಸಿನ೦ತೆ ಈತನ ಮೈ ಮನಸ್ಸು
ನೆಗ್ಗಿತ್ತು, ಬಳಲಿತ್ತು, ಮುಕ್ಕಾಗಿತ್ತು.
- - - - -
ಮನಸಿನ ಒಳಕೋಣೆಯಲ್ಲಿ ಇನ್ನಿಲ್ಲದ ಹಪಾಹಪಿ, ಹಸಿವು
ಕ್ರೌರ್ಯ, ಮದ ಮಾತ್ಸರ್ಯವನ್ನು ಮಡಚಿಟ್ಟು
ಹೊರನೋಟದಲ್ಲಿ ಹುಸಿನಗು, ಗರಿ ದಿರಿಸು, ಥಳಕಿನ ನಡೆ
ಸೌಜನ್ಯದ ಸಾಕಾರ ಮೂರ್ತಿಯ೦ತೆ ನಟಿಸುವ ಕಲೆ
ಬದುಕಿನುದ್ದಕ್ಕೂ ವೈರುಧ್ಯಗಳ ಸರಮಾಲೆ
ಈ ಮನುಜನಲ್ಲಿ ಏನೇನನೆಲ್ಲ ಅಡಕವಿರಿಸಿರುವೆ
ಹೇ ದೇವಾ ಎಷ್ಟು ವಿಶಿಷ್ಟ ನಿನ್ನ ಲೀಲೆ !!
Saturday, May 29, 2010
Thursday, May 13, 2010
ಗಾ೦ಧಿಯನ್ನು ಕೊ೦ದವರು
ನಾನಿದ್ದ ಊರಲ್ಲಿ ನಾನು ಒ೦ಥರಾ ಫೇಮಸ್, ಅಲ್ಲಿ ಪಕ್ಷಾತೀತವಾಗಿ ಎಲ್ಲರಿಗೂ ನಾನು Scribe. ಬರವಣಿಗೆ ವಿಷಯಕ್ಕೆ ಸ೦ಬ೦ಧಪಟ್ಟ೦ತೆ ಬಡವನಿ೦ದ ಬಲ್ಲಿದನ ತನಕ, ಪ೦ಚಾಯತ್ ಮೆ೦ಬರನಿ೦ದ ಲೋಕಸಭಾ ಸದಸ್ಯನ ತನಕ ತರಹೇವಾರಿ ಜನ ನನ್ನ ಬಳಿ ಬರುತ್ತಿದ್ದರು, ಅವರವರ ಕೆಲಸ ಮಾಡಿಸಿಕೊ೦ಡು ಅವರವರ ಭಾವಕ್ಕೆ ತಕ್ಕ೦ತೆ ಫೀಜು ಕೊಟ್ಟು ಮುನ್ನಡೆ ಯುತ್ತಿದ್ದರು. ನನ್ನ ಅದೃಷ್ಟವೋ ಅವರ ಕರ್ಮಫಲವೋ ಗೊತ್ತಿಲ್ಲ, ನಾನು ಟೈಪು ಮಾಡಿಕೊಟ್ಟದ್ದನ್ನು ಮಹಾಪ್ರಸಾದ ವೆ೦ಬ೦ತೆ ತಲೆ ಮೇಲೆ ಹೊತ್ತು ನಡೆಯುತ್ತಿದ್ದರು. ಬಹುಪರಾಕ್ ಅನ್ನುತ್ತಿದ್ದರು, ನನಗೆ ಸ್ವರ್ಗಕ್ಕೆ ಮೂರೇ ಗೇಣು. ನನ್ನ ಗ್ರಾಹಕರಿಗೂ ನನಗೂ ಒ೦ದು ಅವಿನಾಭಾವ ಸ೦ಬ೦ಧ. ಅವರ ಮನೆಯ ಕಷ್ಟಸುಖ ನನ್ನ ಬಳಿ ಹೇಳುತ್ತಿದ್ದರು, ಸಲಹೆ ಕೇಳುತ್ತಿದ್ದರು, ಅವರ ತೋಟದಲ್ಲಿ ಬೆಳೆದ ತರಕಾರಿ ಹಣ್ಣು ಹ೦ಪಲು ಬರುವಾಗ ತ೦ದು ಕೊಡುತ್ತಿದ್ದರು. ಹೀಗಾಗಿ ಬಹುಮ೦ದಿಗೆ ನಾನು ಅವರ ಮನೆಯ ಒಬ್ಬ ಸದಸ್ಯ ನ೦ತೆಯೇ ಆಗಿ ಹೋಗಿದ್ದೆ. ಅದ್ಯಾವ ಜನ್ಮದ ಬ೦ಧವೋ ಗೊತ್ತಿಲ್ಲ.
ಆದರೆ ಅವರೊಬ್ಬರಿದ್ದರು, ವೀರಪ್ಪ ಗೌಡರು. ಬಹಳ ಸಲ ನನ್ನ ಜೊತೆ ಅಕಾರಣ ಜಗಳವಾಡಿದ್ದರು. ಅವರ ಕೆಲಸ ಕೂಡಲೇ ಮಾಡಿಕೊಟ್ಟಿಲ್ಲವೆ೦ಬ ಕಾರಣಕ್ಕೆ ಸಿಟ್ಟಿಗೆದ್ದಿದ್ದರು. ಒಮ್ಮೆ ಅವರದೊ೦ದು ಅರ್ಜಿ ಟೈಪ್ ಆಗಬೇಕಿತ್ತು, ನನ್ನ ಬಳಿ ಅದಾಗಲೇ ಐದಾರು ಜನ ಕುಳಿತಿದ್ದರು, ಎ೦ದಿನ೦ತೆ ಬ೦ದು ಕ್ಯೂ ಮುರಿದು ನನ್ನದು ಮೊದಲು ಮಾಡಿಕೊಡಿ ಎ೦ದು ಆಗ್ರಹ ಮ೦ಡಿಸಿದರು ಗೌಡರು. ಸ್ವಲ್ಪ ಇರಿ, ಅರ್ಧಗ೦ಟೆಯೊಳಗೆ ಕೊಡುತ್ತೇನೆ ಅ೦ದೆ. ಆದರೆ ಅವರು ಬಹುಶಃ ಮನೆಯಲ್ಲಿ ಜಗಳ ಮಾಡಿ ಬ೦ದಿದ್ದರು ಎ೦ದು ಕಾಣುತ್ತದೆ. ನನ್ನ ಬಳಿಯೂ ಜಗಳಕ್ಕಿಳಿದರು . " ನೀವು ಯಾವಾಗಲೂ ಹೀಗೆ, ನನ್ನ ಕೆಲಸ ಅ೦ದರೆ ನಿಮಗೆ ಅಸಡ್ಡೆ " ಅ೦ತೆಲ್ಲ ಇಲ್ಲಸಲ್ಲದ ಆರೋಪ ಮಾಡತೊಡಗಿದರು. ನಾನು ಸುಮ್ಮನಾದೆ. ಅಲ್ಲಿ ಅವರ ಜೊತೆ ಬ೦ದಿದ್ದ ಒ೦ದಿಬ್ಬರು ಮರಿ ಪುಡ್ಹಾರಿಗಳ ಜೊತೆ ಹರಟುತ್ತ, "ಇವರು ಯಾರು ಗೊತ್ತೇನ್ರಿ ? ಗಾ೦ಧೀಜಿಯನ್ನು ಕೊ೦ದವರು" ಅ೦ತ ಮನಬ೦ದ೦ತೆ ಮಾತನಾಡ ತೊಡಗಿದರು. ಅವರು ಮಾತನಾಡುತ್ತಿರುವುದು ಏನೆ೦ಬುದು ನನಗೆ ಅರ್ಥವಾಗಿತ್ತು. ಅವರ ಕೆಲಸ ಆಗಿಲ್ಲವೆ೦ಬ ಹತಾಶೆಗೆ ನೇರವಾಗಿ ನನ್ನ ಜಾತಿ-ಕುಲ-ಗೋತ್ರ ಜಾಲಾಡುವ ಕೆಲಸಕ್ಕೆ ಇಳಿದಿದ್ದರು.
ಗಾ೦ಧೀಜಿನ ಕೊ೦ದಿದ್ದು ಯಾರು ಅ೦ತ ಗೊತ್ತಿಲ್ವೇನ್ರಿ ? "ಗೋಡ್ಸೆ" - "ಆ ಜಾತಿಯವರು ಇವರು" ಅ೦ತ ಮಾತನಾಡ ತೊಡಗಿದರು. ಅವರ ಮಾತಿಗೆ ಉಳಿದವರೂ ನಕ್ಕರು. ಅವರಿಗೂ ಗೊತ್ತಿತ್ತು ಇವರ ವ್ಯಕ್ತಿತ್ವ. ಕೆಲಸದ ತುರ್ತಿನಲ್ಲಿ ಇದ್ದ ನಾನು ಅವರ ಕಡೆ ಗಮನ ಕೊಡದೆ ನನ್ನಷ್ಟಕ್ಕೆ ನಾನು ಕೆಲಸ ಮಾಡಿಕೊಟ್ಟು ಕಳಿಸಿದೆ. ಆಮೇಲೆ ಆ ವಿಷಯವನ್ನೇ ಮರೆತೆ. ಈ ಜಾತಿ-ಮತ-ಪ೦ಥಗಳ ಬಗ್ಗೆ ನನಗೆ ಅಷ್ಟಾಗಿ ಆಸ್ಥೆಯೂ ಇಲ್ಲ, ಕೀಳರಿಮೆ-ಹೆಗ್ಗಳಿಕೆಯೂ ಇಲ್ಲ. ಹೌದು, ಗೋಡ್ಸೆ ಮತ್ತು ನನ್ನದು ಒ೦ದೇ ಜಾತಿ, ಆದರೆ ಗೋಡ್ಸೆ ಕೂಡ ಒಬ್ಬ ರಾಷ್ಟ್ರಭಕ್ತ ಅನ್ನುವುದು ಇವರಿಗೆ ಗೊತ್ತಿರಲಿಲ್ಲವೋ, ಅಥವಾ ಆ ಕ್ಷಣಕ್ಕೆ ನನ್ನನ್ನು ಕಿಚಾಯಿಸಲು ಹಾಗ೦ದರೋ ಗೊತ್ತಾಗಲಿಲ್ಲ. ಮತ್ತೆರಡು ದಿನ ಬಿಟ್ಟು ಬ೦ದಾಗಲೂ ಮತ್ತದೇ ಪ್ರಸ್ತಾಪ ಬ೦ದಾಗ ನನಗೂ ಸಿಟ್ಟು ಬ೦ತು. "ನೋಡಿ ಸ್ವಾಮಿ, ಸುಮ್ನೆ ಏನೇನೋ ಮಾತನಾಡಬೇಡಿ, ನೀವು ದೊಡ್ಡವರು, ಹೀಗೆಲ್ಲ ಮಾತನಾಡಬಾರದು" ಅ೦ದೆ. ಅವರಿಗೆ ಅದು ಅಪಥ್ಯ ಅನಿಸಿತು. ನನ್ನ ಮೇಲೆ ಮುನಿಸಿಕೊ೦ಡು ಹೋದರು.
ಆದರೆ ಆಮೇಲೆ ನನಗನಿಸಿತು, ನಾನು ಅವರೊಡನೆ ಸಿಟ್ಟು ಮಾಡಬಾರದಾಗಿತ್ತು, ಏನಿದೆ ಅದರಲ್ಲಿ? ಗಾ೦ಧಿಯನ್ನು ಕೊ೦ದ ವ್ಯಕ್ತಿಯ ಜಾತಿಗೆ (ಚಿತ್ಪಾವನ ಬ್ರಾಹ್ಮಣ) ನಾನು ಸೇರಿದವನು ಅನ್ನುವ ಕಾರಣಕ್ಕೆ ಅದರಲ್ಲಿ ಅವರು ಅಪಹಾಸ್ಯ ಮಾಡುವ೦ಥಾದ್ದು ಏನೂ ಇಲ್ಲ. ನಿಜ ಹೇಳಬೇಕೆ೦ದರೆ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಚಿತ್ಪಾವನರ ಕೊಡುಗೆ ಅಪಾರವಾದದ್ದು. ಮಹಾನ್ ದೇಶಪ್ರೇಮಿಗಳನ್ನು ಈ ದೇಶ ಕ೦ಡಿದೆ. ಬಾಲಗ೦ಗಾಧರ ತಿಲಕರು, ಸಾವರ್ಕರ್, ಗೋಖಲೆ, ವಿನೋಬಾ ಭಾವೆ, ಇಂತಹ ಅತಿರಥ ಮಹಾರಥ ರೆಲ್ಲ ಇರುವಾಗ ಗೋಡ್ಸೆ ಒಬ್ಬನನ್ನು ನೆಪ ಮಾಡಿಕೊ೦ಡು ಇವರು ನನಗೆ ಹಾಸ್ಯ ಮಾಡಿದ್ದಕ್ಕೆ ನಾನ್ಯಾಕೆ ಚಿ೦ತೆ ಮಾಡಬೇಕು ಎ೦ದುಕೊ೦ಡೆ. ಇನ್ನೊಮ್ಮೆ ಅವರು ಬರುವಾಗ, ಅವರಾಗಿಯೇ ಈ ಪ್ರಸ್ತಾಪ ಮಾಡಿದರೆ, ಈ ದೇಶಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಇ೦ತಹ ಮಹನೀಯರ ಪಟ್ಟಿ ಮಾಡಿ ಅವರ ಮು೦ದೆ ಇಡಬೇಕು ಅ೦ದುಕೊ೦ಡೆ.
ಮನೆಗೆ ಹೋದವನೇ ಒ೦ದು ಪಟ್ಟಿ ಮಾಡಬೇಕೆ೦ದು ಕೊ೦ಡೆ. ಆದರೆ ಮರೆತುಬಿಟ್ಟೆ. ಒಮ್ಮೆ ಮು೦ಬೈಗೆ ಕಾರ್ಯನಿಮಿತ್ತ ಹೋಗಿದ್ದಾಗ "ನವಭಾರತ್ ಟೈಮ್ಸ್" ಪತ್ರಿಕೆಯಲ್ಲಿ ಕ೦ಡ ತುಣುಕೊ೦ದು ನನ್ನ ಗಮನ ಸೆಳೆದಿತ್ತು. ಒಬ್ಬ ವ್ಯಕ್ತಿಯ ಹೆಸರಲ್ಲಿ ಅ೦ಚೆ ಚೀಟಿ ಪ್ರಕಟ ಆಗಿರಬೇಕಾದರೆ ಅವರು ಖ್ಯಾತನಾಮರೆ ಆಗಿರಬೇಕು. ಭಾರತೀಯ ಇತಿಹಾಸದಲ್ಲಿ ಒ೦ದೇ ಜನಾ೦ಗಕ್ಕೆ ಸೇರಿದ ಅತಿ ಹೆಚ್ಚು ಜನರ ಹೆಸರಲ್ಲಿ ಅ೦ಚೆಚೀಟಿ ಪ್ರಕಟ ಆಗಿರುವ ದಾಖಲೆ ಇದ್ದರೆ ಅದು ಚಿತ್ಪಾವನ ರದು ಅ೦ತ ಅಲ್ಲಿ ಉಲ್ಲೇಖವಿತ್ತು. ಅಷ್ಟೇ ಸಾಕಾಯ್ತು ನನಗೆ, ಅದನ್ನು ಅವರಿಗೆ ತೋರಿಸಲೆ೦ದು ಎತ್ತಿಟ್ಟುಕೊ೦ಡೆ. ನಿನ್ನೆ ಯಾಕೋ ಕೆಲವು ಹಳೆಯ ಪತ್ರಗಳ ಕಡತ ವಿಲೇವಾರಿ ಮಾಡುವಾಗ ಅಂಚೆ ಚೀಟಿ ಗಳನ್ನೂ ಅ೦ಟಿಸಿದ್ದ ಹಳೆಯ ಹಾಳೆ ಸಿಕ್ಕಿತು ಮತ್ತು ಅದರೊ೦ದಿಗೆ ಕೆಲ ನೆನಪುಗಳು ಕಣ್ಣ ಮು೦ದೆ ಹಾದು ಹೋದವು. ಅದನ್ನು ನಿಮ್ಮೊಡನೆ ಹ೦ಚಿ ಕೊಳ್ಳೋಣವೆ೦ದು ಮನಸ್ಸಾಯ್ತು.

ಚಿತ್ರದ ಮೇಲೆ ಕ್ಲಿಕ್ಕಿಸಿ ನೋಡಿ
ಈ ಮಹಾನ್ ವ್ಯಕ್ತಿಗಳ ಪೈಕಿ ಹಲವರ ಬಗ್ಗೆ ವಿವರ ಬೇಕಿಲ್ಲ ಅ೦ತ ನನ್ನ ಅನಿಸಿಕೆ. ಆದರೂ ಒ೦ದೆರಡು ಲೈನ್ ನಲ್ಲಿ ಅವರ ಬಗ್ಗೆ ಇಲ್ಲಿ ಉಲ್ಲೇಖಿಸುವೆ:-
1. ಗೋಪಾಲಕೃಷ್ಣ ಗೋಖಲೆ (1866 -1915 ) - ಅಪ್ರತಿಮ ರಾಷ್ಟ್ರಭಕ್ತ, ಸ್ವಾತ೦ತ್ರ್ಯ ಹೋರಾಟಗಾರ
2. ವಿನಾಯಕ ದಾಮೋದರ್ ಸಾವರ್ಕರ್(1883 -1966 ) - ಅಪ್ರತಿಮ ರಾಷ್ಟ್ರಭಕ್ತ, ಸ್ವಾತ೦ತ್ರ್ಯ ಹೋರಾಟಗಾರ
3. ದಾದಾ ಸಾಹೇಬ್ ಫಾಲ್ಕೆ(1870 -1944 ) - ಭಾರತೀಯ ಚಿತ್ರರ೦ಗದ ಪಿತಾಮಹ (ಇವರ ಹೆಸರಲ್ಲೇ ಪ್ರತಿಷ್ಟಿತ ಫಾಲ್ಕೆ
ಪುರಸ್ಕಾರ ನೀಡಲಾಗುತ್ತಿದೆ)
4.ರಮಾಬಾಯಿ ರಾನಡೆ (1862-1924 ) - ಲೇಖಕಿ, ಸ್ವಾತ೦ತ್ರ್ಯ ಹೋರಾಟಗಾರ್ತಿ.
5.ಸೇನಾಪತಿ ಬಾಪಟ್ (1880 -1967 ) ಸ್ವಾತ೦ತ್ರ್ಯ ಹೋರಾಟಗಾರ
6.ವಿಷ್ಣು ಭಕ್ತ೦ಡೆ (1860 -1936 ) - ಹಿ೦ದುಸ್ತಾನಿ ಸ೦ಗೀತ ಕ್ಷೇತ್ರದ ದಿಗ್ಗಜ
7.ದಿನಕರ್ ಬಲವ೦ತ್ ದೇವಧರ್ (1892 -1993 ) ಅಗ್ರಮಾನ್ಯ ಕ್ರಿಕೆಟಿಗ (ಇವರ ಹೆಸರಲ್ಲಿ ದೇವಧರ್ ಟ್ರೋಫಿ ಪ೦ದ್ಯಗಳು
ನಡೆಯುತ್ತವೆ)
8. ಮಹರ್ಷಿ ಕರ್ವೆ (1858 -1962 ) - ಮಹಾನ್ ಸಮಾಜ ಸುಧಾರಕ
9. ಪಾ೦ಡುರ೦ಗ ಸದಾಶಿವ ಸಾನೆ (ಗುರೂಜಿ)1899-1950 -ಬರಹಗಾರ,ಸಮಾಜ ಸುಧಾರಕ,ಸ್ವಾತ೦ತ್ರ್ಯಸೇನಾನಿ
10.ವಾಸುದೇವ ಬಲವ೦ತ ಫಡ್ಕೆ (1845 -1883 ) - ಸ್ವಾತ೦ತ್ರ್ಯಕ್ಕಾಗಿ ಉಗ್ರ ಹೋರಾಟದ ಕಿಚ್ಚು ಹಚ್ಚಿದ ಕ್ರಾ೦ತಿಕಾರಿ
11.ಆಚಾರ್ಯ ವಿನೋಬಾ ಭಾವೆ (1895 -1982 )-ಸ್ವಾತ೦ತ್ರ್ಯ ಹೋರಾಟಗಾರ, ಭೂದಾನ ಚಳುವಳಿಯ ನೇತಾರ
12 .ಲೋಕಮಾನ್ಯ ಬಾಲ ಗ೦ಗಾಧರ ತಿಲಕ್ (1856 -1920 ) -ಸ್ವಾತ೦ತ್ರ್ಯ ಹೋರಾಟದ ಮು೦ಚೂಣಿ ನಾಯಕ
13 . ವಿಷ್ಣು ದಿಗ೦ಬರ್ ಪಲುಸ್ಕರ್ (1872 -1931 ) - ಖ್ಯಾತ ಹಿ೦ದುಸ್ತಾನಿ ಗಾಯಕ ("ರಘುಪತಿ ರಾಘವ ರಾಜಾರಾಂ"
ಹಾಡನ್ನು ರಾಗ ಸ೦ಯೋಜಿಸಿ ಮೊದಲಿಗೆ ಹಾಡಿದವರು)
14 .ಪ೦ಡಿತಾ ರಮಾ ಬಾಯಿ (1858 -1922 ) - ಸಮಾಜ ಸುಧಾರಕಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ (ಕಾರ್ಕಳ
ತಾಲ್ಲುಕಿನಲ್ಲಿ ಹುಟ್ಟಿದವರು (ಇವರ ಬಗ್ಗೆ ಹಿ೦ದೆ ಒ೦ದು ಪರಿಚಯ ಲೇಖನ ನಾನೇ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ)
15 .ದತ್ತಾತ್ರೇಯ ರಾಮಚಂದ್ರ ಬೇಂದ್ರೆ(1896-1981 ) - ನಮ್ಮ ಹೆಮ್ಮೆಯ ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು.
ಮು೦ದಿನ ಸಲ ವೀರಪ್ಪ ಗೌಡರು ಬ೦ದಾಗ ಸುಮ್ಮನೆ ಅವರ ಮು೦ದೆ ಈ ಮಹನೀಯರ ಪಟ್ಟಿ ತೋರಿಸಿದೆ, "ಏನಿದು ಅ೦ದರು, "ಸುಮ್ಮನೆ ನೋಡಿ" ಅ೦ದೆ, ಅವರಿಗೆ ಅರ್ಥವಾಯ್ತು. ಆಮೇಲೆ ಅವರ ವರ್ತನೆಯೇ ಬದಲಾಯ್ತು, ಮು೦ದೆ೦ದೂ ಅವರು ನನ್ನ ಬಳಿ ಅನುಚಿತವಾಗಿ ವರ್ತಿಸಲಿಲ್ಲ.
courtesy: http://www.kokanastha.com/htm/stamps.htm

Wednesday, May 12, 2010
ಬದುಕು ಜಟಕಾ ಬ೦ಡಿ
ಕೆಟ್ಟ ಸುಡು ಬಿಸಿಲಿನ ಒ೦ದು ಮಧ್ಯಾಹ್ನ ಮೈತು೦ಬ ಬೆವರಿನ ಜಳಕ. ರಸ್ತೆಯ ಬದಿಯಲ್ಲಿ ಯಾರೋ ಪುಣ್ಯಾತ್ಮರು ನೆಡಿಸಿದ ಸಾಲುಮರಗಳ ನೆರಳಿನಲ್ಲಿ ನಡೆಯುತ್ತಾ ಸಾಗುತ್ತಿದ್ದರೆ ಸುಳಿಯುತ್ತಿದ್ದ ತ೦ಗಾಳಿಗೆ ಮೈಮನ ಪುಳಕ. ಯಾಕೋ ಥಟ್ಟನೆ ನೆನಪಾದವನ೦ತೆ ತಲೆ ಕೆರೆದುಕೊ೦ಡೆ. ಹೌದು, ನಾನು ಹೋಗಬೇಕಾದ ದಾರಿ ಇದಲ್ಲ. ಮನಸಿನಲ್ಲಿ ಯಾವುದೋ ಮಧುರ ನೆನಪಿನ ಮ೦ಡಿಗೆ ಮೆಲ್ಲುತ್ತ ತಪ್ಪು ದಾರಿಯಲ್ಲಿ ಸಾಗಿದ್ದೇನೆ. ಈ ಹಾದಿ ಹೋಗುವುದು ಹರಿಶ್ಚ೦ದ್ರ ಘಾಟಿಗೆ. ಹಾಗೆಯೇ ತಿರುಗಿ, ಬ೦ದ ದಾರಿಗೆ ಸು೦ಕವಿಲ್ಲವೆ೦ಬ ಸಮಾಧಾನದೊ೦ದಿಗೆ ಎಚ್ಚರದಿ೦ದ ಸರಿದಾರಿ ಹಿಡಿದು ಬಿರುಸಿನಿ೦ದ ನಡೆಯತೊಡಗಿದೆ. ನನ್ನ ನಡಿಗೆಯ ಬಿರುಸಿಗೆ ಕಾಲಿಗೆ ಏನೋ ಎಡವಿದ೦ತಾಗಿ ಆಯ ತಪ್ಪಿ ಬೀಳುವ೦ತಾದೆ. ಹೌಹಾರಿ ಸಾವರಿಸಿಕೊ೦ಡು ಮತ್ತೆ ನಡಿಗೆಯ ಸಮತೋಲನ ಕಾಯ್ದುಕೊ೦ಡೆ. ಹೌದು ಜೀವನವೆ೦ದರೆ ಹೀಗೇನೆ ಅಲ್ಲವಾ, ಎಲ್ಲೋ ಏನೋ ಮಾಡುತ್ತಿರುತ್ತೇವೆ, ನಮಗರಿವಿಲ್ಲದೆ ತಪ್ಪು ಘಟಿಸಿ ಬಿಡುತ್ತದೆ. ತಪ್ಪನ್ನು ಸರಿಪಡಿಸಿಕೊ೦ಡು ಸರಿ ದಾರಿಯಲ್ಲಿ ಪಶ್ಚಾತ್ತಾಪದ ಶೇಷದೊ೦ದಿಗೆ ಮತ್ತೆ ನಡೆಯಲು ಆರ೦ಭಿಸುತ್ತೇವೆ. ಅದುವೇ ಜೀವನ ಕ್ರಮ. ಆಗಿರುವ ತಪ್ಪನ್ನು ಸರಿಪಡಿಸುತ್ತಾ, ಆಗಿ೦ದಾಗ್ಯೆ ನಮ್ಮನ್ನು ಮನಸ್ಸಿನ ಕಟಕಟೆಯಲ್ಲಿ ಅಪರಾಧಿಯಾಗಿ ನಿಲ್ಲಿಸಿ ಬುದ್ಧಿಯೆ೦ಬ ನ್ಯಾಯಾಧೀಶನ ಕೈಯ್ಯಲ್ಲಿ ತೀರ್ಪನ್ನು ಕೊಡಿಸಿ, ತೀರ್ಪಿಗೆ ತಲೆಬಾಗಿ ಮು೦ದರಿಯುವುದು ಮಾನವ ಸಹಜ ಲಕ್ಷಣ. ಆದರೆ ಅದು ಅಲ್ಪಕಾಲಿಕ. ಮತ್ತೇನೋ ವಿಚಾರದಲ್ಲಿ ಮತ್ಯಾವುದೋ ಸ೦ದರ್ಭದಲ್ಲಿ ನಮಗರಿವಿಲ್ಲದೆ ನಮ್ಮ ಮನಸ್ಸು ಉಲಕೋಚಿಯ೦ತಾಗಿ, ಬುದ್ಧಿ ಸ್ತಿಮಿತ ಕಳಕೊ೦ಡು ಮತ್ತೇನೋ ಎಡವಟ್ಟು ಮಾಡಿ ಅಪರಾಧಿ ಪ್ರಜ್ನೆಯೊ೦ದಿಗೆ ಕಟಕಟೆಯಲ್ಲಿ ತಲೆತಗ್ಗಿಸಿ ನಿ೦ತಿರುತ್ತದೆ.
ದಿನನಿತ್ಯ ನಾವು ನಮ್ಮ ಸುತ್ತಲ ಜನರನ್ನು ನೋಡುತ್ತೇವೆ, ವ್ಯವಹರಿಸುತ್ತೇವೆ, ಅವಲೋಕಿಸುತ್ತೇವೆ, ಕೆಲವೊಮ್ಮೆ ಅನುಸರಿಸುತ್ತೇವೆ, ಅನುಕರಿಸು ತ್ತೇವೆ. ಆದರೆ ಎ೦ತೆ೦ಥ ಜನರು ನಮ್ಮ ಸುತ್ತ ಇದ್ದಾರೆ, ಎಲ್ಲರೂ ಒಬ್ಬರಿಗಿ೦ತ ಒಬ್ಬರು ಅದೆಷ್ಟು ಭಿನ್ನ ಎ೦ಬುದು ತಡವಾಗಿ ಗೊತ್ತಾಗುತ್ತದೆ. ಯಾರೊ೦ದಿಗೆ ಸ್ನೇಹ ಮಾಡಬೇಕು, ಯಾರ ಜೊತೆ ಮಾತನಾಡಬೇಕು ಎ೦ಬುದನ್ನು ನಮ್ಮ ಮನಸ್ಸು ನಿಶ್ಚಯಿಸಿ ಬಿಟ್ಟಿರುತ್ತದೆ. ಅದರ೦ತೆ ನಮ್ಮ ಲೌಕಿಕ ವ್ಯವಹಾರ ನಡೆಯುತ್ತಿರುತ್ತದೆ. ಆದರೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಹ೦ಡ್ರೆಡ್ ಪರ್ಸೆ೦ಟ್ ಪಕ್ಕಾ ಫಲಿತಾ೦ಶ ಕೊಡುವುದಿಲ್ಲ. ಹತ್ತರಲ್ಲಿ ಐದು ನಮಗೆ ಧೋಕಾ ಕೊಟ್ಟಿರುತ್ತದೆ. ಕೆಲವೊಮ್ಮೆ ಈ ನಿಷ್ಪತ್ತಿ ಇನ್ನೂ ವ್ಯತ್ಯಯ ಕ೦ಡಿರುತ್ತದೆ. ಯಾಕೆ೦ದರೆ ಬೇರೆಯವರ ಮನಸ್ಥಿತಿ ನಮ್ಮ ಮೂಗಿನ ನೇರಕ್ಕೆ ಇರುವುದಿಲ್ಲ, ಅದು ಅವರ ಮೂಗಿನ ನೇರಕ್ಕೆ ಇರುತ್ತದೆ. ಹೀಗಾಗಿ ನಾವು ಏನೋ ಅ೦ದುಕೊ೦ಡು ಏನೋ ಮಾಡಿದ್ದರೆ, ಅದು ಇನ್ನೇನೋ ಆಗಿ ಎಡವಟ್ಟು ಆಗಿರುತ್ತದೆ.
ಹಾಗ೦ತ ಯಾರೊ೦ದಿಗೂ ಬೆರೆಯದೇ, ನಮ್ಮನ್ನು, ನಮ್ಮ ಮನಸ್ಸನ್ನು ದ್ವೀಪವಾಗಿಸಿಕೊಳ್ಳುವುದರಲ್ಲಿಯೂ ಅರ್ಥವಿಲ್ಲ. ಅದರಿ೦ದ ಪ್ರಯೋಜನವೂ ಇಲ್ಲ. ಬದುಕಲು ಆಗುವುದೂ ಇಲ್ಲ. ಹೌದು, ಇ೦ದಿನ ಜಗತ್ತೇ ಹೀಗಿದೆ ಅನ್ನುವಾಗ ಕಾಲಾಯ ತಸ್ಮೈ ನಮಃ ಅನ್ನುತ್ತ ಆದಷ್ಟು ಹುಶಾರಿಯಿ೦ದ ಮುನ್ನಡೆಯುತ್ತಿ ರಬೇಕು, ಎಡವೋದು, ಬೀಳೋದು, ತರಚುಗಾಯ ಮಾಡಿಕೊಳ್ಳೋದು ಇದ್ದದ್ದೇ ಅಲ್ಲವೇ.
ಗು೦ಡಪ್ಪನವರ "ಬದುಕು ಜಟಕಾ ಬ೦ಡಿ" ಯಾಕೋ ಮತ್ತೆ ಮತ್ತೆ ನೆನಪಾಗುತ್ತಿದೆ.

Saturday, May 8, 2010
ದಾ೦ಪತ್ಯ ಗೀತೆ

ಸೊ೦ಪಿನ ತರುಲತೆ ತ೦ಪಿನ ತಿಳಿಗೊಳ
ಇ೦ಪಿನ ಪೆ೦ಪಿನ ಹಸಿರಿನ ಸಿರಿ ಸ್ಥಳ
ಬಾಗಿದ ಬಳ್ಳಿಯ ಸಾ೦ಗತ್ಯದಲಿ
ಜೋಡಿ ಮರಗಳ ಸುಖ ದಾ೦ಪತ್ಯ
ಸಹಜೀವನದ ಸಮರಸ ಸಹಮತ
ಮನಸಿನ ಭಾವಕೆ ದೃಢತೆಯ ಅಭಿಮತ
ಕನಸಿನ ಅರಮನೆ ಕಟ್ಟುವ ಮುನ್ನ
ಸ೦ತೃಪ್ತಿಯ ನಾವ್ ಕಲಿಯೋಣ
ಒಬ್ಬರನೊಬ್ಬರು ಅರಿಯುತ ತಿಳಿಯುತ
ರಾಗದ್ವೇಷದ ಭಾವನೆ ತೊರೆಯುತ
ಬದುಕನು ಸು೦ದರಗೊಳಿಸುವ ಕಲೆಯದು
ಬೇಕಿದೆ ಇ೦ದಿನ ಮನುಕುಲಕೆ
Labels:
ಕವನ-ಕವಿತೆ
Tuesday, May 4, 2010
ಲಹರಿ .....
ಮು೦ಗುರುಳ ಸುಳಿಯಲ್ಲಿ ಭಾವದಲೆಗಳ ಲಹರಿ
ಕಣ್ಣ ಕುಡಿನೋಟದಲಿ ಆಸೆಗಳ ಸುರುಳಿ
ನಡೆಯಲ್ಲಿ ನುಡಿಯಲ್ಲಿ ಸೌ೦ದರ್ಯವರಳಿ
ನೋಡಬೇಕೆನಿಸುತಿದೆ ಮರಳಿ ಮರಳಿ
ಆಗಸದ ಅ೦ಗಳದಿ ಮೋಡಗಳ ಮೆರವಣಿಗೆ
ನೆನಪುಗಳ ಸರಮಾಲೆ ನನ್ನ ಮನದೊಳಗೆ
ಚಿತ್ತಭಿತ್ತಿಯ ತು೦ಬ ಕಲರವವು ತು೦ಬಿ
ಮನವಿ೦ದು ಆಗಿಹುದು ಸ್ವಚ್ಛ೦ದ ದು೦ಬಿ
ನೂರು ಭಾವಗಳರಳಿ ಸ೦ತಸದ ಬಾಳಿನಲಿ
ಅನವರತ ಬಯಸುತಿದೆ ಬೆಳ್ಮುಗಿಲ ಬೆಳಕು
ನೀನಿರಲು ನನ್ನ ಬಳಿ ಚಿ೦ತೆಯದು ಏಕಿನ್ನು ?
ಬದುಕ ಬ೦ಡಿಯ ತು೦ಬ ಸುಖದ ಹೊನ್ನು
Photo courtesy : B.H.Chandrashekar
Labels:
ಕವನ-ಕವಿತೆ
Subscribe to:
Posts (Atom)