
ಇದೊ೦ಥರ ಹುಚ್ಚುಕುದುರೆಯ ಮೇಲೆ ಲಗಾಮಿಲ್ಲದೆ ಸಾಗುವ ನಾಗಾಲೋಟದ ಬದುಕು. ಏನೋ ಮಾಡಲು ಹೋಗಿ ಇನ್ನೇನೋ ಆಗುವ ಅಪಾಯವಿರುವ, ಆದರೆ ಅದರಲ್ಲೇ ಹೊಸತನದ ಎಳೆ ಹುಡುಕಬಹುದಾದ ಸಾಧ್ಯತೆಗಳಿರುವ ದಿನಗಳಿವು.ಹಲವರಿಗೆ ಕೆಲವು ಹುಚ್ಚಿರುತ್ತವಂತೆ. ಕೆಲವರಿಗೆ ದಿನಸಿ ಸಾಮಾನು ತಂದ ರದ್ದಿ ಕಾಗದ ಓದಿ ಜ್ಞಾನೋದಯ ಹೊಂದುವ ಭಾವವಾದರೆ, ಇನ್ನು ಕೆಲವರದು ಮತ್ತಿನ್ನೇನೋ ತರಹದ್ದು. ನಾನು ಇದು ತನಕ ಅವರಿವರ ಬ್ಲಾಗಿನಲ್ಲಿದ್ದ ಫೋಟೋಗಳನ್ನು ನೋಡಿ ಅವರ ಅನುಮತಿ ಕೇಳಿ ಅಥವಾ ಕೇಳದೆ ಎತ್ತಿಕೊ೦ಡು ಅವನ್ನು ನನ್ನ ಬ್ಲಾಗಲ್ಲಿ ಬಳಸಿ ಕವನ ಬರೆದಿದ್ದಿದೆ. ಈಗ ಹೊಸತೊಂದು ಬಗೆಯ ಯತ್ನ ಮಾಡಿದ್ದೇನೆ. ಮಿತ್ರ ಶಿವೂ ಅವರ ಛಾಯಾ ಕನ್ನಡಿ ಬ್ಲಾಗು ಕನ್ನಡ ಬ್ಲಾಗಿಗರ ಮಟ್ಟಿಗೆ ರಂಗನತಿಟ್ಟು ಇದ್ದಂತೆ. ಅವರ ಬ್ಲಾಗಿಗೆ ಹೋದರೆ ಎಲ್ಲರೂ ಸಿಗುತ್ತಾರೆ. ನನ್ನ ಬ್ಲಾಗ್ ಓಪನ್ ಮಾಡಿದ್ದಕ್ಕಿಂತ ಹೆಚ್ಚಿಗೆ ಅವರ ಬ್ಲಾಗನ್ನು ನಾನು ಓಪನ್ ಮಾಡಿ ಬೇರೆ ಬೇರೆ ತಾಣಗಳಿಗೆ ಅಲ್ಲಿಂದ ಜಾಲಾಡಿ ಹಣಿಕಿ ಹಾಕಿದ್ದೇನೆ/ ಓದಿದ್ದೇನೆ. ಹಾಗೆ ಸುಮ್ಮನೆ ಅವರ ಬ್ಲಾಗು ಮೇಲೆ ಕಣ್ಣಾಡಿಸುತ್ತಿರುವಾಗ ಬೇರೆ ಬೇರೆ ಬ್ಲಾಗುಗಳ ತಲೆಬರಹ ನೋಡಿ ತಲೆಯಲ್ಲೊ೦ದು ಹುಚ್ಚು ಲಹರಿ ಹರಿದು ಬಂತು. ಅದರ ಫಲವಾಗಿ ಹೊಸತೊಂದು ಕಜ್ಜಾಯ ಸಿದ್ಧವಾಗಿವೆ. ಅದನ್ನು ಕವನವೆಂದು ಆರೋಪಿಸಿ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ. ಓದಿ ಅಭಿಪ್ರಾಯಿಸಿ.
- - - - - - - -
ನೆನಪುಕನಸುಗಳ ನಡುವೆ ಭಾವಮಂಥನದ ಕೂಗು
ಮಂಜುಮುಸುಕಿದ ದಾರಿಯಲ್ಲಿ ನೆನಪಿನ ಪುಟಗಳು
ನೆನಪಿನ ದೋಣಿಯಲಿ ಸಾವಿರ ಕನಸುಗಳ ಹೆಜ್ಜೆ
ನಿನ್ನೊಲುಮೆಯಿಂದಲೆ ನವೋದಯದ ಇರುಳದೀಪ
ಮೌನಗಾಳವ ಹಾಕಿ ಏನ್ ಗುರು ಎನ್ನುತ್ತಾ
ಮಂಜುಮುಸುಕಿದ ದಾರಿಯಲ್ಲಿ ನೆನಪಿನ ಪುಟಗಳು
ನೆನಪಿನ ದೋಣಿಯಲಿ ಸಾವಿರ ಕನಸುಗಳ ಹೆಜ್ಜೆ
ನಿನ್ನೊಲುಮೆಯಿಂದಲೆ ನವೋದಯದ ಇರುಳದೀಪ
ಮೌನಗಾಳವ ಹಾಕಿ ಏನ್ ಗುರು ಎನ್ನುತ್ತಾ
ಹಾಗೆ ಸುಮ್ಮನೆಮೋಟುಗೋಡೆಯಾಚೆ ಇಟ್ಟಿಗೆಸಿಮೆ೦ಟಿನ ಸೋಮಾರಿಕಟ್ಟೆ ಹುಡುಕಾಟ
ಕಡಲತೀರದ ಮಧುವನದಲಿ ಅಲೆಗಳ ಆಚೆ ಹ೦ಸಗಾನವ ಕೇಳಿ
ಸ್ವಾತಿಮುತ್ತಿನ ಮಳೆಹನಿಯಲಿ ನನ್ನಾಕೆ ಜೊತೆ ಟೈಮ್ ಪಾಸ್ ಮಾಡುವಾಸೆ
ನನ್ನ ಪಾಡಿಗೆ ನಾನು ಕೆನೆಕಾಫಿ ಸವಿದು ಕಾಡುಹರಟೆ ಮಾತುಮೌನ,
ಮನಸಿನ ಕುಸುಕುಸು ನಡುವೆ ಸಲ್ಲಾಪ ಸಾ೦ಗತ್ಯ
ನನ್ನ ಪಾಡಿಗೆ ನಾನು ಕೆನೆಕಾಫಿ ಸವಿದು ಕಾಡುಹರಟೆ ಮಾತುಮೌನ,
ಮನಸಿನ ಕುಸುಕುಸು ನಡುವೆ ಸಲ್ಲಾಪ ಸಾ೦ಗತ್ಯ
ಭಾವಜೀವ ತಳೆದಾಗ ಮನಸು ಜಾಜಿ ಮಲ್ಲಿಗೆ
ನನ್ದೊ೦ದ್ಮಾತು ಕೇಳಿ ನನ್ನಾಲೋಚನೆ ಸಾಗರದಾಚೆಯ ಇಂಚರ
ಕಾಡಿನ ಹಾದಿಯಲ್ಲಿ ಹನಿ ಹನಿ ಮಳೆಹನಿ ಸ್ವಾತಿಮುತ್ತು
ಕಾಡಿನ ಹಾದಿಯಲ್ಲಿ ಹನಿ ಹನಿ ಮಳೆಹನಿ ಸ್ವಾತಿಮುತ್ತು
ಅನವರತ ಬಿಸಿಲಹನಿ ಅಲೆಮಾರಿಯ ಅನುಭವ ಮಂಟಪ
ನೆನಪಿನ ಪುಟಗಳ ನಡುವೆ ಕಂಡೆ ನಾನೊಂದು ಕನಸು
ಕ್ಷಕಿರಣದ ಕ್ಷಣಚಿಂತನೆಯಲಿ ಛಾಯಾಚಿತ್ತಾರದ ಅನುಭೂತಿ
ನಿನ್ನೊಲುಮೆಯಿಂದಲೇ ಮಾತು-ಮೌನ-ಮುಗುಳು
ಕ್ಷಕಿರಣದ ಕ್ಷಣಚಿಂತನೆಯಲಿ ಛಾಯಾಚಿತ್ತಾರದ ಅನುಭೂತಿ
ನಿನ್ನೊಲುಮೆಯಿಂದಲೇ ಮಾತು-ಮೌನ-ಮುಗುಳು
ಮಧುವನದಲಿ ದೇವಕಿ ಸವಿಗನಸಿನ ಸುಪ್ತದೀಪ್ತಿ
ಒಲವೆ ಮರೆಯದ ಮಮಕಾರ ಮೃದುಮನಸಿನ ನೀಲಿಹೂವು
ಪಿಸುಮಾತಿಗೆ ಮನದ ಮೈದಾನದಲ್ಲೊ೦ದು ಗುಳಿಗೆಯ ಲಗೋರಿಯಾಟ
ಈ ಕನಸು ಅಂತರ್ವಾಣಿಯ ನೆನಪಿನ ದೋಣಿ
ಈ ಕನಸು ಅಂತರ್ವಾಣಿಯ ನೆನಪಿನ ದೋಣಿ
ಕಾಡಬೆಳದಿ೦ಗಳ ಹಾದಿಯಲ್ಲಿ ನವಿಲುಗರಿ-ಜಲನಯನ
ಸ೦ಜೆಬೆಳಕಲ್ಲಿ ಶರಧಿ ಕೆ೦ಡಸ೦ಪಿಗೆ
ಪ್ರಕೃತಿ ಧರಿತ್ರಿ ಕರುಣಾಮಯಿ ಆದರೆ ನಾವೇಕೆ ಹೀಗೆ?
ಕ್ಷಮಿಸಿ ನಾ ಹೇಳೋದೆಲ್ಲಾ ತಮಾಷೆಗಾಗಿ, ನನ್ನದು ತೊದಲುಮಾತು
ಬತ್ತದ ತೊರೆಯಲಿ ಮನಸಿನ ಕನಸು ವಿಕಾಸವಾದದ ಚೌ ಚೌ ಬಾತು
ಕಾಡಿನಹಾದಿಯಲ್ಲಿ ಕಳೆದ ಪಯಣದ ಅವಧಿ
ಪರಸ್ಪರ ಮನದ ಪಿಸುಮಾತಿಗೆ ಭಾವನಾಲಹರಿಯ ಛಾಯಾಕನ್ನಡಿ
ಎಲ್ಲ ನೋಟಗಳಾಚೆ ಇನ್ನೊಂದು ಚಿತ್ರವಿದೆ
ಮನಸೆ೦ಬ ಹುಚ್ಚು ಹೊಳೆ ಬೊಗಳೆರಗಳೆ
ಮಧುಬನದಿ ರಾಧಿಕೆ ಮಾನಸ ಮೃಗನಯಿನಿ
ಇದು ಅಗ್ನಿಪ್ರಪಂಚ ಆಗು ನೀ ಜೀವನ್ಮುಖಿ
- - - -
ಬಿಟ್ಟು ಹೋದ ಬ್ಲಾಗ್ ಗಳ ಹೆಸರು ನೆನಪಿಸಿ ಉಪಕರಿಸಿದ ಮಿತ್ರ ಟೈಮ್ ಪಾಸ್ ಬಾಲು ಅವರಿಗೆ ಕೃತಜ್ಞತೆಯ ನೆನಕೆಗಳು



