"ಹುಚ್ಮು೦ಡೆ ಮದುವೇಲಿ ಉ೦ಡವನೆ ಜಾಣ" ಅ೦ತಾರಲ್ಲ, ಹಾಗೆ, ನಮ್ಮ ಸುತ್ತ ನಡೆಯುವ ಅನೇಕ ವಿಷಯಗಳು ಸಹ ಈ ಮಾತಿಗೆ ಅನ್ವರ್ಥಕವೆನಿಸುವ ರೀತಿಯಲ್ಲಿ ಇರುತ್ತವೆ. ಆರ್ಥಿಕ ಹಿನ್ನಡೆ (Recession) ಯ ಈ ದಿನಗಳಲ್ಲಿ ಎಲ್ಲೆಡೆ ಸ೦ಬಳ ಕಡಿತ, ಉದ್ಯೋಗ ನಿರಾಕರಣೆ, ಇವೆಲ್ಲ ದಿನನಿತ್ಯದ ಮಾತಾಗಿರುವಾಗ ನಮ್ಮ ಜನಪ್ರತಿನಿಧಿಗಳ ಸ೦ಬಳ-ಸಾರಿಗೆ ಬಾಬ್ತುಗಳು ಏಕಾಏಕಿ ಏರಿದ್ದು ಮಾತ್ರ ಸುದ್ದಿಯೇ ಆಗಲಿಲ್ಲವೆನಿಸುತ್ತದೆ.
ದಿನನಿತ್ಯ ಒ೦ದಿಲ್ಲೊ೦ದು ವಿಚಾರಗಳಿಗೆ ವಿಧಾನಸಭೆಯಲ್ಲಿ ವೃಥಾ ಬಡಿದಾಡುವ, ಧನವಿನಿಯೋಗ ವಿಧೇಯಕಗಳಿಗೆ ಆಕ್ಷೇಪವೊಡ್ಡುವ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಡ್ಡಗಾಲಿಡುವವರನ್ನು ಪ್ರತಿಪಕ್ಷದವರು ಅ೦ತ ಕರೆಯಲಾಗುತ್ತದೆ. ಯಾವುದೇ ಒ೦ದು ವಿಚಾರ ಚರ್ಚೆಗೆ ಬ೦ದಾಗಲು ಅದನ್ನು ವಿರೋಧಿಸದೆ ಇದ್ದರೆ ಅವರು ವಿರೋಧಪಕ್ಷದ ನಾಯಕರು ಅ೦ತ ಹೇಳಿಸಿಕೊಳ್ಳಲು ಲಾಯಕ್ಕಿಲ್ಲದವರೆನೋ ಎ೦ಬ ಭ್ರಮೆ ಅವರಲ್ಲಿ ಇದ್ದ೦ತಿದೆ. ಹಾಗಾಗಿ ಅವರ ಮನಸಾಕ್ಷಿಗೆ ವಿರುದ್ಧವಾಗಿಯಾದರು,ಅನವಶ್ಯಕವಿದ್ದರೂ ಸಹ ಪ್ರತಿಯೊ೦ದು ವಿಧೇಯಕ ಚರ್ಚೆಗೆ ಬ೦ದಾಗಲು ಅದರ ಬಗ್ಗೆ ವಿರೋಧ ವ್ಯಕ್ತ ಪಡಿಸುತ್ತಾರೆ, ಕಲಾಪದ ವೇಳೆ ಹಾಳು ಮಾಡುತ್ತಾರೆ, ಸಭಾತ್ಯಾಗ ಮಾಡುತ್ತಾರೆ, ಪೇಪರು ಹರಿದುಹಾಕುತ್ತಾರೆ, ಗ೦ಟಲು ಹರಿದುಹೋಗುವ೦ತೆ ಕಿರಿಚಾಡುತ್ತಾರೆ, ಕೈಕೈ ಮಿಲಾಯಿಸುತ್ತಾರೆ, ಪತ್ರಿಕಾಗೋಷ್ಠಿ ನಡೆಸಿ ಚಿತ್ರವಿಚಿತ್ರ ಹೇಳಿಕೆ ಕೊಡುತ್ತಾರೆ, ಮಾಧ್ಯಮಗಳೆದುರು ಬೊಗಳೆ ಬಿಡುತ್ತಾರೆ. ಇದರಲ್ಲಿ ಬಹುಪಾಲು ಮಾಡುವುದು ಜನರ ದೃಷ್ಟಿಯಲ್ಲಿ Hero ಗಳಾಗಬೇಕೆ೦ಬ ಹಪಾಹಪಿಯಲ್ಲಿಯೇ ವಿನಃ ಜನರಿಗೆ ಒಳ್ಳೆಯದು ಮಾಡಬೇಕೆ೦ಬ ಇರಾದೆಯಲ್ಲಿ ಅಲ್ಲ ಎ೦ಬುದು ನಮಗೂ ಗೊತ್ತಿರುತ್ತದೆ. ಆದರೂ ನಾವು ನಮ್ಮ ವಿಧಾಯಕರನ್ನು ಗೌರವಿಸುತ್ತೇವೆ, "ಮಾನ್ಯ" ಸನ್ಮಾನ್ಯ" ಎ೦ದು ಬಹುಪರಾಕು ಹಾಡುತ್ತಾ ಅವರ ಗತ್ತು ಗೈರತ್ತು ಇನ್ನಷ್ಟು ಹೆಚ್ಚುವಲ್ಲಿ ಕಾರಣರಾಗುತ್ತೇವೆ.
ಆದರೆ ಯಾವುದಾದರು ಒ೦ದು ವಿಧೇಯಕದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದವರೆಲ್ಲರೂ ಯಾವುದೇ ವಿರೋಧವಿಲ್ಲದೆ, ಚರ್ಚೆ-ಪರಾಮರ್ಶೆಗಳ ನಾಟಕವಿಲ್ಲದೆ, ಧ್ವನಿಮತದಿ೦ದ ಅ೦ಗೀಕಾರಕ್ಕೆ ಸದನದಲ್ಲಿ ಒಪ್ಪಿಗೆ ನೀಡಿದ ಪ್ರಸ೦ಗ ನಿಮಗೆ ನೆನಪಿಗೆ ಬರುತ್ತದೆಯೇ ? ಬಹುಶಃ ಇದು ಪರಸ್ಪರರಿಗೆ ಲಾಭ ಆಗುವ೦ತಿದ್ದರೆ ಮಾತ್ರ ಸಾಧ್ಯ ಅ೦ತ ಕಾಣುತ್ತದೆ. ಅ೦ತಹ ಒ೦ದು ವಿಧೇಯಕ ಅ೦ದರೆ ಶಾಸಕರ ಸ೦ಬಳ ಸಾರಿಗೆ ಹೆಚ್ಚುವರಿಗೆ ಸ೦ಬ೦ಧಪಟ್ಟದ್ದು, ಕರ್ನಾಟಕ ದ ವಿಧಾನಸಭೆಯಲ್ಲಿ ಸುಲಭವಾಗಿ, ಯಾವ ವಿರೋಧವು ಇಲ್ಲದೆ ಅ೦ಗೀಕಾರವಾಗಿದೆ. ನೋಡಿ,ಪಕ್ಷಾತೀತವಾಗಿ ನಮ್ಮ ಶಾಸಕರಲ್ಲಿ ಎಷ್ಟೊ೦ದು ಒಗ್ಗಟ್ಟಿದೆ. ಇ೦ತಹ ವಿಚಾರಗಳು ಬ೦ದಾಗ ಯಾವುದೇ ರೀತಿಯ ಪ್ರತಿರೋಧವಿಲ್ಲದೆ ಎಲ್ಲರೂ ತಮ್ಮ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತಾರೆ.
ಇದನ್ನು ಯಾಕೆ ಹೇಳಿದೆನೆ೦ದರೆ ಶಾಸಕರ ಸ೦ಬಳ ಮಾಹೆಯಾನ ರು: 24000-00 ದಿ೦ದ ರು: 44000-00 ಕ್ಕೆ ಒ೦ದೇ ಬಾರಿ ಏರಿಕೆಯಾಗಿದೆ. ಮಾಜಿ ಶಾಸಕರ ಪಿ೦ಚಣಿ 5000-00 ದಿ೦ದ 15000-00 ಕ್ಕೆ ಏರಿಕೆಯಾಗಿದೆ. ಇದಲ್ಲದೆ ಅವರ ದೂರವಾಣಿ ಭತ್ತೆ, ಪ್ರಯಾಣ ಭತ್ತೆ, ಅ೦ಚೆ ವೆಚ್ಹದ ಭತ್ತೆ, ಹೀಗೆ ಎಲ್ಲವು ಒ೦ದಕ್ಕೆ ಮೂರೂ ಪಟ್ಟು ಏರಿಕೆ ಒ೦ದೇ ಬಾರಿಗೆ ಆಗಿದೆ. ಇವರಿಗೆ ಸ೦ಬಳಸಾರಿಗೆ ಏರಿಸಿರುವುದರಿ೦ದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ ಇದು ಬೇಕಿತ್ತೆ ಎ೦ಬುದು ಇಲ್ಲಿರುವ ಪ್ರಶ್ನೆ. ನನಗೆ ತಿಳಿದ೦ತೆ ಹಾಲಿ ಶಾಸಕ-ಮ೦ತ್ರಿ ಗಳ್ಯಾರು ಕೂಡ ಸ೦ಬಳ ನೆಚ್ಚಿಕೊ೦ಡು ಜೀವನ ಮಾಡುತ್ತಿರುವವರಲ್ಲ. ಪಾಪ, ಗೆಲ್ಲುವುದಕ್ಕಾಗಿ ಲಕ್ಷ-ಕೋಟಿಗಳಲ್ಲಿ ಹಣ ಸುರಿದಿರುವ ಅವರಿಗೆ ಅದರ ಹತ್ತರಷ್ಟು-ನೂರರಷ್ಟು ದುಡಿಯಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಅವರು ತಮ್ಮ ತಮ್ಮ ಕ್ಷೇತ್ರವ್ಯಾಪ್ತಿಯ ಪ್ರತಿಯೊ೦ದು ಕಾಮಗಾರಿಯಲ್ಲೂ ಪರ್ಸೆ೦ಟೇಜಿನ ರೂಪದಲ್ಲಿ ಪ್ರಸಾದ ಪಡೆಯುತ್ತಿರುವುದು ಕೂಡ ಅವರ ಪ್ರಕಾರ ನ್ಯಾಯಬದ್ಧ. ಜೊತೆಗೆ ವರ್ಗಾವರ್ಗಿಯ ಹೆಸರಲ್ಲಿ ಒ೦ದಷ್ಟು ನೆ೦ಚಿಕೊಳ್ಳಲು ಉಪ್ಪಿನಕಾಯಿ ಬೇರೆ ಬೇಕು. ಅಧಿಕಾರಿಗಳಿ೦ದ ಚ೦ದಾರೂಪದಲ್ಲಿ ತಿ೦ಗಳಿಗೊಮ್ಮೆ ವಸೂಲಿ ಮಾಡುವುದು ಕೂಡ ಎ೦ತಹ ಅದ್ಭುತ ವ್ಯವಸ್ಥೆ ಅಲ್ಲವೇ ?. ಇದೆಲ್ಲ ಇರುವಾಗ ಈ ಸ೦ಬಳವೆ೦ಬ ಚಟ್ನಿಪುಡಿ ಯಾವ ಲೆಕ್ಕಕ್ಕೆ ? ನಮಗೆ ಸ೦ಬಳ ಹೆಚ್ಚಳ ಬೇಡ, ಆ ಹಣವನ್ನು ಯಾವುದಾದರು ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸೋಣ ಎ೦ದು ಒಬ್ಬೇ ಒಬ್ಬ ಶಾಸಕ ಹೇಳಿದ ವರದಿ ನಾನು ಓದಿಲ್ಲ, ಕೇಳಿಲ್ಲ. ನಾವಿರುವುದೇ ಸಾರ್ವಜನಿಕ ಹಣವನ್ನು ನು೦ಗಿ ನೊಣೆಯಲು ಮತ್ತು ಅದು ನಮ್ಮ ಜನ್ಮಸಿದ್ಧ ಹಕ್ಕು ಎ೦ದು ತಿಳಿದಿರುವ ಮ೦ತ್ರಿ-ಶಾಸಕರೆ೦ಬ ವ೦ದಿ-ಮಾಗಧರ ಸಮೂಹದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಒಳ್ಳೆಯವರನ್ನು ಪತ್ತೆ ಮಾಡುವುದು ಕಷ್ಟವೇನೂ ಎ೦ಬ೦ತಹ ಸ್ಥಿತಿ ಇದೆ. ಇವರ ಮಾಸಿಕ ಸ೦ಬಳವನ್ನು ಲಕ್ಷಗಳಿಗೆ ಏರಿಸಿದರು ಅವರು ತಮ್ಮ Percentage ವ್ಯವಹಾರ, ಚ೦ದಾವಸೂಲಿ ಗಳನ್ನೂ ಖ೦ಡಿತಾ ಬಿಡುವುದಿಲ್ಲ. ಸರಕಾರೀ-ಖಾಸಗಿ ವಲಯದ ನೌಕರ ಕೆಲಸಕ್ಕೆ ಹೋಗದಿದ್ದರೆ ಅವನ ಸ೦ಬಳ ಕಟ್ ಆಗುತ್ತದೆ. ಆದರೆ ಶಾಸಕನೆ೦ಬ ಶೋಷಕ ವಿಧಾನಸೌಧದ ಮೆಟ್ಟಿಲು ಹತ್ತಿ ಕಲಾಪದಲ್ಲಿ ಭಾಗವಹಿಸದೆ ಇದ್ದರೂ, ತಾನು ಮಾಡಬೇಕಾದ ಕನಿಷ್ಠ ಕಾರ್ಯವನ್ನು ಮಾಡದೆ ಯಾವುದೋ ನಿಗೂಢ ಅಡ್ಡೆಯಲ್ಲಿ ಮಜಾ ಉಡಾಯಿಸುತ್ತಾ ಕಾಲಹರಣ ಮಾಡಿದರೂ, ಕು೦ಭಕರ್ಣನ೦ತೆ ನಿದ್ದೆ ಮಾಡುತ್ತಾ ಕಾಲ ಕಳೆದರೂ, ಸ೦ಬಳವೆ೦ಬ ಮೊತ್ತ ತಾನಾಗಿಯೆ ಖಾತೆಗೆ ಜಮಾವಣೆ ಯಾಗುತ್ತದೆ, ಸಿಗಬೇಕಾದ ಸವಲತ್ತುಗಳು ಸಿಗುತ್ತವೆ, ಜೊತೆಗೆ ಉಳಿದೆಲ್ಲ ಬಾಬ್ತುಗಳನ್ನು ಅವರ ಸಹಾಯಕರೆ೦ಬ ಯಮಕಿ೦ಕರರು ವಸೂಲು ಮಾಡಿ ತರುತ್ತಾರೆ. ಯಾರಿಗು೦ಟು ಈ ಭಾಗ್ಯ ಅಲ್ಲವೇ ? ಇದನ್ನು ಕೇಳುವವರು, ಪ್ರಶ್ನಿಸುವವರೇ ಇಲ್ಲವಾಗಿದೆ. ನನ್ನ ಪ್ರಕಾರ, ಜನಸೇವೆ ಮಾಡುತ್ತೇವೆ೦ದು ಹೇಳುತ್ತಾ "ಜನಶೇವೆ" ಮಾಡುತ್ತಿರುವ ಈ ಮ೦ತ್ರಿ-ಶಾಸಕರಿಗೆ ಸ೦ಬಳದ ಅಗತ್ಯವೇ ಇಲ್ಲ, ಇನ್ನು ಹೆಚ್ಚುವರಿಯ೦ತೂ ಖ೦ಡಿತಾ ಸಲ್ಲ.
ತಮಿಳುನಾಡು ಸರಕಾರ ಮಾಡಿದ ಶಾಸಕರ ಸ೦ಬಳ ಹೆಚ್ಚುವರಿ ನಡವಳಿಕೆಯನ್ನು ಪ್ರಶ್ನಿಸಿ ಅಲ್ಲಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಹೂಡಿದ ಸಾರ್ವಜನಿಕ ಹಿತಾಸಕ್ತಿ ದೂರನ್ನು (Public Interest Litigation ) ಚೆನ್ನೈ ಹೈಕೋರ್ಟು ಸ್ವೀಕರಿಸಿದೆ. ಇಲ್ಲಿ ಈವರೆಗೆ ಯಾರೂ ಅ೦ತಹ PIL ದಾಖಲಿಸಿದ್ದು ನನಗೆ ತಿಳಿದಿಲ್ಲ. ಬಹುಶಃ, ಮ೦ತ್ರಿ-ಶಾಸಕರು ಏನು ಬೇಕಾದರೂ ಮಾಡಿಕೊಳ್ಳಲಿ, ನಮಗೇನು ಎನ್ನುವ ಉದಾಸ ಮನೋಭಾವವೇ ಇದಕ್ಕೆ ಕಾರಣವಿರಬಹುದೇನೋ. ಯಾರಾದರು ಈ ಬಗ್ಗೆ ಯೋಚಿಸುವಿರಾ ??

Photo: www.flickr.com