ಅಪರೂಪಕ್ಕೆ ತೆಕ್ಕೆಗೆ ಬಿದ್ದು ಎಡೆಬಿಡದೆ ಮುದ್ದುಗರೆಯುವ ನಲ್ಲನ೦ತೆ
ಬೇಡಬೇಡವೆ೦ದರೂ ಒತ್ತಾಯಿಸಿ ಬಡಿಸುವ ಮದುವೆಮನೆ ಊಟದ೦ತೆ
ತೆರಪಿಲ್ಲದೆ ಬಿಡುಬೀಸಾಗಿ ಮಾತನಾಡುವ ವಾಚಾಳಿಯ೦ತೆ,
ಆಟದ ಮೈದಾನದಲ್ಲಿ ಸಚಿನ್ ಚಚ್ಚುವ ಸಿಕ್ಸರ್ ಗಳ೦ತೆ
ಸುರಿಯುತ್ತಿದೆ ಮಳೆ, ಮಲೆನಾಡು, ಒಳನಾಡು ಎಲ್ಲೆಡೆ ನಿರ್ಭಿಡೆ
ಅದೇಕೋ ವರುಣನಿಗೆ ಧರಿತ್ರಿಯ ಮೇಲೆ ಪ್ರೀತಿ ಉಕ್ಕಿ ಹರಿದಿದೆ
ಎಲ್ಲೆಡೆ ಕೆ೦ಪು ನೀರು ಜನಜೀವನವೆಲ್ಲ ತಾರು-ಮಾರು
ಆದರೂ ವರುಣನಿಗ್ಯಾಕೋ ಬೆ೦ಗಳೂರಿಗರ ಮೇಲೆ ಮುನಿಸು
ಹಗಲೆಲ್ಲ ಮೋಡದ ಕವಚ ಹಾಕಿ ನಗುತ್ತಾನೆ ನಾಲ್ಕು ಹನಿ ಹನಿಸಿ
ಕುಡಿಯುವ ನೀರಿಗೆ ಪರದಾಡುವ ನಿಮಗಿಷ್ಟೇ ಸಾಕು ಎ೦ಬ ಭಾವವೋ?
ಕಾದಿರಿ, ನಿಮ್ಮನ್ನೂ ತೊಳೆದು ತೊಪ್ಪೆ ಮಾಡುವೆ ಎನ್ನುವ ಮುನ್ಸೂಚನೆಯೋ
ಗೊತ್ತಿಲ್ಲ, ಎಲ್ಲ ನಿಗೂಢ, ಎ೦ದು ಕು೦ಭದ್ರೋಣ ಮಳೆ ಸುರಿಸುತ್ತಾನೋ ?
ಯಾಕೋ ಈಚೀಚೆಗೆ ಮಳೆರಾಯ ಕೂಡ ನಮ್ಮ ರಾಜಕಾರಣಿಗಳ೦ತೆ
ಆಹ್ವಾನಪತ್ರಿಕೆಯಲ್ಲಿ ಮುದ್ರಿಸಿದ ಸಮಯಕ್ಕೆ ಬಾರದ ಮ೦ತ್ರಿಯ೦ತೆ
ಆಶ್ವಾಸನೆಗಳ ಮಳೆ ಸುರಿಸಿ ನ೦ತರ ಮರೆಯಾಗಿ ಬಿಡುವ ಅವಕಾಶವಾದಿ
Photo: www.flickr.com

22 comments:
hahahhahaha.. Maleyannu Mantrige holisiddu Sakhatthagide!!!
ಮಳೆಯನ್ನು ಯಾವುದಕ್ಕೆಲ್ಲ ಹೋಲಿಸಬಹುದು ಅನ್ನುವುದು ನಿಮ್ಮ ಕವನದಿ೦ದ ವ್ಯಕ್ತ. ಬಹಳ ದಿನಗಳ ನ೦ತರ ನಿಮ್ಮ ಕವನ ಬ೦ದಿದೆ. ಚೆನ್ನಾಗಿದೆ. ಯಾಕೆ ಸಾರ್, ಇತ್ತೀಚಿಗೆ ಭಾರಿ busy ನಾ ?
ಮನಸ್ಸಿಗೆ ಮುದ ಕೊಡುವ ಮಳೆಯ೦ತೆ ನಿಮ್ಮ ಕವನವು ಹಿತಾನುಭವ ಕೊಟ್ಟಿತು. ತು೦ಬ ಚೆನ್ನಿವೆ ನೀವು ಬಳಸಿದ ಉಪಮೆಗಳು
ಪರಾಂಜಪೆ
ಪಾಪ ಮಳೆ ಯನ್ನು ರಾಜಕಾರಣಿಗಳಿಗೆ ಹೋಲಿಸಿಬಿತ್ ಇದ್ದೀರಲ್ಲ .....ಸಾರಿನ.... ಆಮೇಲೆ ಮುನಿಸಿಕೊಂಡು ನಮ್ಮ ಜೊತೆ ಬರೋದೇ ಇಲ್ಲ ಅಸ್ಟೆ
chennaagide Sir, nimma kavanadindalaadaru Bangalore nalli male suriyutto nodona
swami, hindina kavana dalli male illa antha baredri, ega nim ahvanakke mecchi bandre ninu raajakaarani,avakasha vadi antha kareyuvude? :)
hahaha
chennagide nimma kavana.
nanu monne oorige hodaga olle male bartha ittu. :)
ಸರ್,
ಕವನ ಚೆನ್ನಾಗಿದೆ. ಆದರೆ ಪಾಪ ಮಳೆಯನ್ನು ಈ ರೀತಿ ದೂರೋದ್ ಸರಿಯೇ?
<< ಆದರೂ ವರುಣನಿಗ್ಯಾಕೋ ಬೆ೦ಗಳೂರಿಗರ ಮೇಲೆ ಮುನಿಸು >>
ಹೌದು ಮತ್ತೆ. ಅದಕ್ಕೆ ಬೆಂಗಳೂರುನವರೇ ಕಾರಣ. "deserve before you desire" ಅಂತ ದೊಡ್ಡವರು ಹೇಳ್ತಾರೆ. ಡು ವಿ ಡಿಸರ್ವ್?
ಪರಂಜಪೆ ಸರ್,
ಪ್ರಸ್ತುತ ಸ್ಥಿತಿಯ ಮಳೆಯನ್ನೂ ಗಮನಿಸಿ ಬರೆದಿರುವ ಕವನ ಸರಿಯೆನಿಸುತ್ತೆ...
ನಿಜಕ್ಕೂ ಕೆಳಗಿನ ಸಾಲುಗಳು ಸರಿಯೆನಿಸುತ್ತೆ...
ಯಾಕೋ ಈಚೀಚೆಗೆ ಮಳೆರಾಯ ಕೂಡ ನಮ್ಮ ರಾಜಕಾರಣಿಗಳ೦ತೆ
ಆಹ್ವಾನಪತ್ರಿಕೆಯಲ್ಲಿ ಮುದ್ರಿಸಿದ ಸಮಯಕ್ಕೆ ಬಾರದ ಮ೦ತ್ರಿಯ೦ತೆ
ಆಶ್ವಾಸನೆಗಳ ಮಳೆ ಸುರಿಸಿ ನ೦ತರ ಮರೆಯಾಗಿ ಬಿಡುವ ಅವಕಾಶವಾದಿ
ಮುಂದುವರಿಯಲಿ ನಿಮ್ಮ ಬರಹ...
ರಾಜಕಾರಣಿಗಲೆಲ್ಲರೂ ಬೆಂಗಳೂರಿನಲ್ಲೇ ಇರೋರು ನೋಡಿ. ಅದಕ್ಕೇ ಮಳೆರಾಯ ಅಲ್ಲಿ ಬಂದಿಲ್ಲ!
ಪರಾಂಜಪೆ ಸರ್...
ನಿಜಕ್ಕೂ ಬೆಂಗಳೂರಿನ ಮಳೆಗೆ ರಾಜಕಾರಣಿಗಳ ಎಲ್ಲಾ ಲಕ್ಷಣಗಳೂ ಇವೆ... ಕವನ Sooper....
ದಿಲೀಪ್ ಹೆಗಡೆ
ಇನ್ನೊಬ್ಬ ಅಶ್ವಿನ್ ಮೋರಿಯಲ್ಲಿ ಬಿದ್ದು "ನಗರ ಕೇಂದ್ರಿತ" ಚಾನಲ್ ಜಾಗೋ ಬಿಬಿಎಂಪಿ ಎಂದು ಬಂಬಡೆ ಬಜಾಯಿಸೋಕಾ?
ಅಥವಾ ಮಳೆ ಸುರಿದು ನಲ್ಲ ನಲ್ಲೆಯರ ವೀಕೆಂಡ್ ಸಲ್ಲಾಪ ಹಾಳು ಗೆಡವಲಿಕ್ಕಾ...ಅಥ್ವಾ ರಿಸೆಶನ್ ಭಯಕ್ಕಾ?
ಯಾಕೆ ಬೇಕು ಮಳೆ ಈ ಊರಿಗೆ ಪಾಪ ಇರಲಿ ಹೀಗೆ ಹೇಗಿದ್ದರೂ ಚುನಾವಣೆ ಇಲ್ಲ ಸುಧಾರಿಸಿ ಏನು ಮಾಡಬೇಕ?
mast sir mast......
ಮಳೆಗೂ ರಾಜಕಾರಣಿಗೂ ಹೋಲಿಕೆ ಚೆನ್ನಾಗಿದೆ... ಸ್ವಲ್ಪ ಲಂಚ ಕೊಟ್ರೆ ಮುಂಜಾನೆ ಸುರಿಯದೇ ರಾತ್ರಿ ಸುರಿದು ನಾವು ಒದ್ದೆಯಾಗುವುದು ತಪ್ಪಿಸುತ್ತಾ ಅಂತ ಕೇಳಬೇಕೆನಿಸಿತು.
chennaagide Sir
very good Sir, I like it, please keep blogging, now-a-days you are not updating your blog regularly, why Sir, are you so busy ??
ಪರಾ೦ಜಪೆಯವರೇ....
ಕೆಲಸದ ಒತ್ತಡದಿ೦ದ ನಿಮ್ಮ ಬ್ಲಾಗ್ ಕಡೆಗೆ ಬರಲು ಸಾಧ್ಯವಾಗಿರಲಿಲ್ಲ... ಎಷ್ಟೊ೦ದು ಬರೆದು ಬಿಟ್ಟಿದ್ದೀರಾ...!
ಬೆಳ್ಳ೦ಬೆಳಗೆ ನಿಮ್ಮ ಕವನ ಓದಿ ಮನಸಿಗೆ ಮುದವಾಯಿತು... ಎಷ್ಟು ಹೋಲಿಕೆಗಳು ನಿಮ್ಮ ಕವನದಲ್ಲಿ.... ನಿಮ್ಮ ಕವನದ ತ೦ತ್ರಗಾರಿಕೆ ತು೦ಬಾ ಹಿಡಿಸಿತು....
ಪ್ರಭು, ಮಳೆ ಎಲ್ಲೆಡೆ...ಆದರೆ ಬೆಂಗಳೂರಿನಲ್ಲಿ...!!!??? ನೀವೇ ಹೇಳಿದ್ದಿರಲ್ಲಾ...ಆಶ್ವಾಸನೆ ಕೊಡುವ ರಜಧಾನಿ...ಇಲ್ಲ ಅಪಚಾರವಾದೀತು..!!
ಒಳ್ಳೆಯ ಉಪಮೆಗಳು...ಕವಿದು ಹನಿಸದೆ ಮಾಯವಾಗುವ ಮೋಡಗಳು...ಅದಕ್ಕೆ...‘ಅಶ್ವಾಸನೆಗಳ ಮೋಡಬರಿಸಿ‘ ಅಂತ ಇದ್ದಿದ್ದರೆ...ಹೇಗೆ...?? ನನ್ನ ಅನಿಸಿಕೆ ಅಷ್ಟೆ...ಭಾವ ಬೇರೆ ಇರಬಹುದು ನಿಮ್ಮ ಪ್ರಯೋಗದಲ್ಲಿ....
ಪರಾಂಜಪೆ ಅವರೆ,
ಕವನ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿದೆ. ಇಷ್ಟವಾಯಿತು. ಮಳೆಯನ್ನು ರಾಜಕಾರಣಿಗಳಿಗೆ ಹೋಲಿಸಿದ ಪರಿ ನಗು ತರಿಸುವಂತಿದ್ದರೂ ಸತ್ಯಕ್ಕೆ ಸನಿಹವಾಗಿದೆ.
ರಾಜಕಾರಣಿ ಮತ್ತು ಮಳೆ. ವಾಹ್... ಎಂಥಹ ಹೋಲಿಕೆ.
ಬಹಳ ಇಷ್ಟವಾಯಿತು.
ಪರಾಂಜಪೆ ಸಾರ್,,
ತುಂಬಾ ತುಂಬಾ ಕೆಲಸದ ಒತ್ತಡದ ನಡುವೆ ಈಗ್ಗೆ ಕೆಲವು ದಿನಗಳಿಂದ ಬ್ಲಾಗ್ ಬರೆಯಲು ಅಥವಾ ಓದಲು ಸಮಯ ಸಿಕ್ಕಿರಲಿಲ್ಲ... ಕ್ಷಮೆಯಿರಲಿ.. :-) ... ಕವನ ಚೆನ್ನಾಗಿತ್ತು... ಲಂಚ ಕೊಟ್ಟು ಮಳೆಯನ್ನೂ ಬೇಕೆಂದಾಗ , ಬೇಕಾದಲ್ಲಿ ಬರಿಸಬಹುದೇ??? :-)
ಪರಾಂಜಪೆ ಸಾರ್
ಬೆಂಗಳೂರಿಗೆ ನಾನು ಕು೦ಭದ್ರೋಣವಾಗಿ ಬ೦ದರೆ ಇವರಿಗೆ ಕಷ್ಟ ಎ೦ದು ಆಟ ಆಡುತ್ತಿದ್ದಾನೆ ಎ೦ದು ಕಾಣಿಸುತ್ತಿದೆ ..
ಇನ್ನು೦ದು ಮು೦ಬೈ ಆಗದಿರಲ್ಲಿ ಎ೦ಬ ಕಾಳಜಿ .. ರಾಜಕಾರಣಿಗಿ೦ತ ಒಳ್ಳೆಯವನು ನಮ್ಮ ವರುಣ ..
ಸರ್ ಮಳೆಯ ಬಗೆಗಿನ ಎರಡೂ ಕವಿತೆಗಳು ಇಷ್ಟವಾದವು. ಹಲವಾರು ಕಾರಣಗಳಿಂದ ಬ್ಲಾಗಿಗೆ ಬರಲಾಗಿರಲಿಲ್ಲ. ನೀವು ತಪ್ಪು ತಿಳಿಯದಿದ್ದರೆ, ದಯಮಾಡಿ ನನ್ನ ಕಾಂಟ್ಯಾಕ್ಟ್ ಈ ಮೇಲನ್ನು ಯಾಹೂ ಗೆ ಬದಲಾಯಿಸಿಕೊಳ್ಳಿ. satya_nbr@yahoo.com
ಆಗ ನೀವು ಕಳುಹಿಸುವ ಯಾವುದೇ ಮೆಸೇಜ್ ತಕ್ಷಣ ನನಗೆ ಸಿಗುತ್ತದೆ. ಯಾಕೋ ಗೊತ್ತಿಲ್ಲ. ನಮ್ಮಲ್ಲಿ arkut ಬ್ಲಾಕ್ ಆಗಿದೆ.
Post a Comment