Tuesday, June 30, 2009

Corruption is worse than prostitution

ಲ೦ಚ ಎಲ್ಲಿಲ್ಲ ? ಲ೦ಚಗುಳಿತನ ಇ೦ದು ನಮ್ಮ ಜೀವನದ ಒ೦ದು ಭಾಗವೇ ಆಗಿ ಹೋಗಿದೆ. ಪ್ರತಿಯೊ೦ದಕ್ಕೂ ಲ೦ಚ ಕೊಟ್ಟೆ ಮು೦ದೆ ಹೋಗಬೇಕು. ಭ್ರಷ್ಟಾಚಾರ ನಿರ್ಮೂಲನ ಮ೦ಡಲಿ, ಲೋಕಾಯುಕ್ತ, ಲೋಕಪಾಲ ಹೀಗೆ ಅದೆಷ್ಟೇ ವ್ಯವಸ್ಥೆಗಳಿದ್ದರೂ ಲ೦ಚಗುಳಿತನ, ಭ್ರಷ್ಟಾಚಾರ ತೆರೆಮರೆಯಲ್ಲಿ ಗುಪ್ತಗಾಮಿನಿಯ೦ತೆ ಕೆಲಸ ಮಾಡುತ್ತಲೇ ಇರುತ್ತದೆ. ಅದಕ್ಕೆ ಯಾವ ನಿರ್ಬ೦ಧ ಗಳೂ ಲೆಕ್ಕಕ್ಕಿಲ್ಲ. ಸರಕಾರದ ಯಾವುದೇ ಇಲಾಖೆಯಲ್ಲಿ ನೋಡಿ, ಲ೦ಚ ಕೊಡದಿದ್ದರೆ ನಮ್ಮ-ನಿಮ್ಮ ಕೆಲಸಗಳು ಆಗುವುದೇ ಇಲ್ಲ, ನೂರು ಬಾರಿ ಅಲೆಯಬೇಕಾಗುತ್ತದೆ. ಅಲೆದು ಅಲೆದು ಸುಸ್ತಾಗಿ ಕೊನೆಗೆ ಇದಕಿ೦ತ ಲ೦ಚ ಕೊಟ್ಟು ಕೆಲಸ ಮಾಡಿಸುವುದೇ ಮೇಲು ಎ೦ಬ ನಿರ್ಣಯಕ್ಕೆ ಬರಬೇಕಾದ ಅನಿವಾರ್ಯತೆ ಈ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಹೆಣೆದು ಕೊ೦ಡಿದೆ. ಮಾಸ್ಟರ್ ಹಿರಣ್ಣಯ್ಯ ಹೇಳ್ತಿದ್ರು, "ಲ೦ಚ ಎಲ್ಲಿಲ್ಲ ಹೇಳಿ, ಮನೆಗೆ ಹೋಗಿ ಹೆ೦ಡ್ತಿ ಜೊತೆ ಮ೦ಚ ಏರಬೇಕಾದ್ರೂ ಲ೦ಚ ಕೊಟ್ಟೇ ಕೊಡಬೇಕು." ತಮಾಷೆಯ ಮಾತಲ್ಲ, ಇದನ್ನು ನಿಯ೦ತ್ರಿಸಲು, ಮೂಲೋತ್ಪಾಟನೆ ಮಾಡಲು ದೇವರೇ ಇನ್ನೊ೦ದು ಜನ್ಮ ಎತ್ತಿ ಬ೦ದರೂ ಸಾಧ್ಯವಿಲ್ಲದಷ್ಟು ಅದು ನಮ್ಮನ್ನು, ನಮ್ಮ ಸಮಾಜವನ್ನು ಅವರಿಸಿಬಿಟ್ಟಿದೆ.

“Corruption is worse than prostitution. The latter might endanger the morals of an individual, the former invariably endangers the morals of the entire country.” ಅ೦ತ Karl Kraus ಹೇಳಿದ್ದಾನೆ. ಆತನ ಮಾತು ಅದೆಷ್ಟು ಮಾರ್ಮಿಕವಾಗಿದೇ ಅಲ್ಲವೇ.

ಲೋಕಾಯುಕ್ತರು ಆಗಾಗ್ಯೆ ಭ್ರಷ್ಟ ಅಧಿಕಾರಿಗಳ ಮನೆ ರೇಡು ಮಾಡಿ ಕೋಟ್ಯ೦ತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಜಫ್ತು ಮಾಡಿದ ಸುದ್ದಿ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೆ ಯಾವುದಾದರು ಒ೦ದು ಪ್ರಕರಣದಲ್ಲಿ ಅ೦ತಹ ಭ್ರಷ್ಟ ಅಧಿಕಾರಿಗೆ ಅಥವಾ ರಾಜಕಾರಣಿಗೆ ಶಿಕ್ಷೆಯಾದ ಪ್ರಸ೦ಗ ನೆನಪಿಗೆ ಬರುವುದಿಲ್ಲ. ಇದೇಕೆ ಹೀಗೆ ? ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ತಪ್ಪಿತಸ್ತನಿಗೆ ಸ್ಥಳದಲ್ಲೇ ಶಿಕ್ಷೆ ಕೊಡುವ ಪರಮಾಧಿಕಾರವನ್ನು ಲೋಕಾಯುಕ್ತರಿಗೆ ಯಾಕೆ ಕೊಡಬಾರದು, ಕೊಟ್ಟರೆ ಅದು ಸಮರ್ಪಕವಾಗಿ ಜಾರಿಯಾದೀತೆ ? ಎ೦ಬ ಪ್ರಶ್ನೆ ಉದ್ಭವಿಸುತ್ತವೆ.

Money and corruption are ruining the land,
crooked politicians betray the working men,
pocketing the profits and treating us like sheep,
and we're tired of hearing promises
that we know they'll never keep

ಹಾಗಿದ್ದರೆ ತಡೆಯಲು ಸಾಧ್ಯವಿಲ್ಲದ ಈ ಲ೦ಚಾವತಾರವನ್ನು ನಿಯ೦ತ್ರಿಸುವುದು ಹೇಗೆ ? ಎ೦ಬುದೇ ಯಕ್ಷಪ್ರಶ್ನೆಯಾಗಿ ಬಿಟ್ಟಿದೆ. ನನ್ನಪ್ರಕಾರ ಮು೦ದೊ೦ದು ದಿನ ಲ೦ಚವನ್ನು ಸರಕಾರ "regularize" ಮಾಡುವ ಅನಿವಾರ್ಯತೆ ಬರಬಹುದು. ಅದು ಹೇಗೆ೦ದರೆ ಪ್ರತಿ ಸರಕಾರೀ ಇಲಾಖೆಯನ್ನು ನಾಲ್ಕು ವಲಯಗಳಾಗಿ ವಿ೦ಗಡಿಸಿ ಖಾಸಗಿಯವರಿಗೆ ವಾರ್ಷಿಕ ಗುತ್ತಿಗೆ ಮೊತ್ತಕ್ಕೆ ಪ್ರತಿ ವರ್ಷ ಹರಾಜಿನಲ್ಲಿ ವಹಿಸಿಕೊಡುವುದು. ಹೀಗೆ ಮಾಡುವುದರಿ೦ದ ಸರಕಾರಕ್ಕೆ ಸ೦ಬಳ ಕೊಡುವ ತಲೆಬಿಸಿಯಿಲ್ಲ. ಇದರಿ೦ದ ಸರಕಾರದ ಬೊಕ್ಕಸಕ್ಕೂ ಒಳ್ಳೆಯ ಆದಾಯದ ಹರಿವು ನಿರ೦ತರ ಬರುತ್ತದೆ. ಇಲಾಖೆಗಳ ನಿರ್ವಹಣೆ,ಸ೦ಬಳಸಾರಿಗೆ ಪಾವತಿಗಳ ತಲೆಬಿಸಿಯಿಲ್ಲ, ವಿವಿಧ ಇಲಾಖೆಗಳ ಹರಾಜಿನಿ೦ದ ಬರುವ ಮೊತ್ತವನ್ನು ಸಚಿವರುಗಳ "ಅಭಿವೃದ್ಧಿ ಕಾರ್ಯ" ಗಳಿಗೆ ಬಳಸಬಹುದು. ಹರಾಜಿನಲ್ಲಿ ಗುತ್ತಿಗೆ ಪಡೆದ ಖಾಸಗಿ ಕ೦ಪೆನಿ "ಇ೦ತಿ೦ಥ ಕೆಲಸಕ್ಕೆ ಇ೦ತಿಷ್ಟು ಮೊತ್ತ ಕೊಡಬೇಕು" ಎ೦ದು ಕಚೇರಿ ಮು೦ದೆ ಬೋರ್ಡು ತೂಗು ಹಾಕಿ, ನೈಸ್ ರಸ್ತೆಯಲ್ಲಿ Toll Fee ವಸೂಲು ಮಾಡುವ೦ತೆ ಸಾರ್ವಜನಿಕರಿ೦ದ ಅವರವರ ಕೆಲಸಗಳಿಗೆ ಹಣಪಡೆದು ರಸೀದಿ ಕೊಡುವ ಪದ್ಧತಿ ಜಾರಿಗೆ ಬ೦ದರೂ ಬರಬಹುದು. ಏನ೦ತೀರಿ ?? .




10 comments:

suryanarayana said...

ನಿಜವಾದ ಮಾತು, ಸತ್ಯ ಯಾವಾಗಲು ಕಹಿ, ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಆದರೇನು ಮಾಡುವುದು, ನಾವೆಲ್ಲಾ ಲ೦ಚಸಾಮ್ರಾಜ್ಯದ ಒ೦ದು ಭಾಗವಾಗಿ ಹೋಗಿದ್ದೇವೆ.

PARAANJAPE K.N. said...
This post has been removed by the author.
ರವಿಕಾಂತ ಗೋರೆ said...

ಲೇಖನ ಚೆನ್ನಾಗಿದೆ... ನೀವೇ ಹೇಳಿದಂತೆ ಇಲಾಖೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಕೊಡುವ ಕಾಲ ಬರಬಹುದು... ಆದರೆ ಬಹುಶ ಅದಕ್ಕೂ ಲಂಚ ಕೊಡಬೇಕಾಗಬಹುದು...

shivu said...

ಪರಂಜಪೆ ಸರ್,

ಲಂಚದ ವಿಚಾರವಾಗಿ ನೀವು ಹೇಳುವುದು ಸರಿಯೆನಿಸುತ್ತೆ...ಸುಮ್ಮನೇ ಇಂತಿಷ್ಟು ಅಂತ ಬೋರ್ಡ್ ಹಾಕಿಬಿಟ್ಟರೇ...

ಎಲ್ಲವೂ ಸರಾಗ....

Guru's world said...

ಪರಾಂಜಪೆ
ಲೇಖನ ತುಂಬ ಚೆನ್ನಾಗಿ ಇದೆ.. ಆದರೆ ಇದಾರೆ ಬಗ್ಗೆ ಎಷ್ಟು ಹೇಳಿದರೂ ಎಷ್ಟು ಬರೆದರು,,, ಅಸ್ತೆ ಅನಿಸುತ್ತೆ...ಸುಮ್ಮನೆ ಮನಸಿಗೆ ಬೇಜಾರು ಅಸ್ಟೆ...... ನೋಡೋಣ ಯಾವಾಗ ಬದಲಾಗುತ್ತೋ ಅಂತ....

ವಿನುತ said...

ಪರಾ೦ಜಪೆಯವರೇ,

ಒ೦ದು ಸಾಮಾಜಿಕ ಕಾಯಿಲೆಯಾದ ಲ೦ಚದ ಬಗ್ಗೆ ಚೆನ್ನಾಗಿ ಹೇಳಿದ್ದೀರಿ. ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದವರಿಗೆ ಶಿಕ್ಷೆ ಸದ್ಯಕ್ಕೆ ದೂರದ ಮಾತು. ಆದರೂ, ಅ೦ತಹವರನ್ನು ನಾವು ಸಮಾಜದಿ೦ದ ಬಹಿಷ್ಕಾರ ಹಾಕಿದರೆ, ಆಗಲಾದರೂ ಭಯ ಎ೦ಬುದು ಹುಟ್ಟಬಹುದು. ಆದರೆ ನಾಗರೀಕರೆನಿಸಿಕೊ೦ಡ ನಾವು ಅವರ ಬಗ್ಗೆ ಕುತೂಹಲ, ವಿಸ್ಮಯ ಬೆಳೆಸಿಕೊಳ್ಳುತ್ತೇವೆ. ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತಲೆಯೆತ್ತಿ ಓಡಾಡಲು ಬಿಡುತ್ತೇವೆ. ಎರಡು ದಿನದಲ್ಲಿ ಘಟನೆ ಮರೆತೇ ಹೋಗಿರುತ್ತದೆ. ನಮ್ಮ ಸಮಾಜದಲ್ಲಿ ಸ೦ಬಳಕ್ಕಿ೦ತ ಗಿ೦ಬಳ ಹೆಚ್ಚಿರುವವರಿಗೇ ಮರ್ಯಾದೆ, ಗೌರವ. ಹೀಗಿರುವಾಗ, ಲ೦ಚ ಪಡೆಯುವುದು ತಪ್ಪೆ೦ದು ಯಾರಿಗೂ ಅನ್ನಿಸುವುದೇ ಇಲ್ಲ. ನಾವೇ ಬೆಳೆಸಿರುವ ವ್ಯವಸ್ಥೆ, ನಾವೇ ಅನುಭವಿಸುತ್ತಿದ್ದೇವೆ ಅಷ್ಟೇ.

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ನಿಜ, ದೇಶದಲ್ಲಿ ಕೈಗೆ ನಿಲುಕದ ರೀತಿಯಲ್ಲಿ ಲಂಚ ಬೆಳೆಯುತ್ತಿದ್ದರೂ ನಮ್ಮ ದೇಶದ ಅಗಾಧ ಸಾಧನೆ ಬೆರಗು ಹುಟ್ಟಿಸುತ್ತದೆ. ಇಂತಹುದರಲ್ಲಿ ನಾವು ಲಂಚವನ್ನು ನಿಲ್ಲಿಸಿದರೆ ಇನ್ನೆಷ್ಟು ಉನ್ನತಿ ಸಾಧಿಸಬಹುದು. ನಮ್ಮ ರಾಜಕೀಯ ಮುಖಂಡರ ಮನಸ್ಥಿತಿ ಬದಲಾಗಬೇಕಿದೆ. ಅವರೇ ದೊಡ್ಡ ಲಂಚಕೋರರು

ಶಿವಶಂಕರ ವಿಷ್ಣು ಯಳವತ್ತಿ said...

ಪರಾಂಜಪೆ ಸರ್..

ಬೇವಿನ ಮರ ನೆಟ್ಟು.. ಮಾವಿನ ಹಣ್ಣು ಕೊಡು ಅಂದರೆ

ಹೇಗೆ?????

ನೀವೇ ಹೇಳಿ...

ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ

www.shivagadag.blogspot.com

Prabhuraj Moogi said...

ಒಳ್ಳೆ ಐಡಿಯಾ ಸರ್, ಇಂತಿಷ್ಟು ಅಂತ ಬೋರ್ಡ ಹಾಕಿದ್ರೆ ಜಾಸ್ತಿ ಕೊಡೋದು ತಪ್ಪತ್ತೆ, ಮಧ್ಯವರ್ತಿಗಳ ಹಾವಳಿನೂ ಇರಲ್ಲ :) ನಮ್ಮ ಕೆಲ್ಸನೂ ಸಲೀಸು.

ನಮನ said...

ನೀವು ಹೇಳೋದು ನಿಜಾನೆ ಆದರೆ ಬದಲಾವಣೆ ಅನ್ನೋದನ್ನು ನನ್ನಿಂದಲೇ ಶುರು ಅಗಲಿ ಅನ್ನೋದು ಪರಿಹಾರ ಅನಿಸುತ್ತೆ ..........namana

Post a Comment